ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ - ಇಂದಿನ ಪರಿಷ್ಕೃತ ವರದಿ


ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 55.73 ಕೋಟಿಗಿಂತ ಹೆಚ್ಚಿನ ಡೋಸ್ ಲಸಿಕೆ ಪೂರೈಕೆ

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 2.85 ಕೋಟಿಗಿಂತ ಹೆಚ್ಚಿನ ಡೋಸ್ ಲಸಿಕೆ ಲಭ್ಯ

Posted On: 14 AUG 2021 10:48AM by PIB Bengaluru

ದೇಶಾದ್ಯಂತ ನಡೆಯುತ್ತಿರುವ ಕೋವಿಡ್-19 ಬೃಹತ್ ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಖಾತ್ರಿಪಡಿಸಿ, ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಖಚಿತಪಡಿಸಿ ಹಾಗೂ ಲಸಿಕೆ ಪೂರೈಕೆ ಸರಪಳಿ  ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಲಸಿಕಾ ಆಂದೋಲನಕ್ಕೆ ವೇಗ ನೀಡಿದೆ.

ದೇಶವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಪೂರೈಸುತ್ತಾ, ಬೆಂಬಲ ನೀಡುತ್ತಿದೆ. ಅಭಿಯಾನ ಸಾರ್ವತ್ರೀಕರಣದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ದೇಶೀಯ ಲಸಿಕೆ ಉತ್ಪಾದನಾ ಕಂಪನಿಗಳಿಂದ 75%  ಲಸಿಕೆ ಖರೀದಿಸಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ.

ಲಸಿಕೆ ಡೋಸ್ ಗಳಲ್ಲಿ

14 ಆಗಸ್ಟ್ 2021

ಪೂರೈಕೆಯಾದ ಲಸಿಕೆ ಪ್ರಮಾಣ

55,73,55,480

ಸದ್ಯದಲ್ಲೇ ಲಭ್ಯವಾಗಲಿರುವ ಲಸಿಕೆ ಪ್ರಮಾಣ

1,00,37,990

ಬಳಕೆಯಾದ ಲಸಿಕೆ ಪ್ರಮಾಣ

53,26,03,653

ಬಳಕೆಗೆ ಬಾಕಿ ಉಳಿದಿರುವ ಲಸಿಕೆ ಪ್ರಮಾಣ

2,85,43,781

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಲ್ಲಿಯ ತನಕ ಎಲ್ಲಾ ಮೂಲಗಳಿಂದ 55.73 ಕೋಟಿಗಿಂತ ಹೆಚ್ಚಿನ ಅಂದರೆ 55,73,55,480 ಡೋಸ್ ಲಸಿಕೆ ಪೂರೈಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ, 1,00,37,990 ಡೋಸ್ ಲಸಿಕೆ ಸದ್ಯವೇ ಲಭ್ಯವಾಗಲಿದೆ.

55.73 ಕೋಟಿ ಡೋಸ್ ಲಸಿಕೆ ಪೈಕಿ ಸವಕಳಿ ಸೇರಿದಂತೆ 53,26,03,653 ಡೋಸ್ ಲಸಿಕೆ ಬಳಕೆಯಾಗಿದೆ ಎಂಬ ವಿಚಾರ ಇಂದು ಬೆಳಗ್ಗೆ 8 ಗಂಟೆಗೆ ಬಿಡಗಡೆಯಾಗಿರುವ ದತ್ತಾಂಶದಿಂದ ತಿಳಿದುಬಂದಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 2.85 ಕೋಟಿಗಿಂತ ಹೆಚ್ಚಿನ ಅಂದರೆ 2,85,43,781 ಡೋಸ್ ಲಸಿಕೆ ಬಳಕೆಗೆ ಲಭ್ಯವಿದೆ.

***



(Release ID: 1745801) Visitor Counter : 200