ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕಾಕರಣ ಅಪ್ಡೇಟ್


ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 48.03 ಕೋಟಿಗೂ ಅಧಿಕ ಲಸಿಕಾ ಡೋಸ್ ಗಳನ್ನು ಒದಗಿಸಲಾಗಿದೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ  ಉಳಿಕೆಯಾಗಿರುವ ಮತ್ತು ಬಳಕೆಯಾಗದಿರುವ 2.92 ಕೋಟಿಗೂ ಅಧಿಕ ಡೋಸುಗಳು ಲಸಿಕಾಕರಣಕ್ಕೆ ಲಭ್ಯ ಇವೆ

Posted On: 30 JUL 2021 11:00AM by PIB Bengaluru

ದೇಶಾದ್ಯಂತ ಕೋವಿಡ್ -19 ಲಸಿಕಾಕರಣವನ್ನು ತ್ವರಿತಗೊಳಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರಕಾರ ಬದ್ಧವಾಗಿದೆ. ಸಾರ್ವತ್ರಿಕ ಕೋವಿಡ್ -19 ಲಸಿಕಾಕರಣದ ಹೊಸ ಹಂತ 2021 ರ ಜೂನ್ 21 ರಿಂದ ಆರಂಭವಾಗಿದೆ. ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚು ಲಸಿಕೆಗಳು ಲಭ್ಯ ಇರುವುದರಿಂದ, ಮತ್ತು ಲಭ್ಯವಾಗುವ ಲಸಿಕೆಗಳ ಪ್ರಮಾಣವನ್ನು ಮುಂಚಿತವಾಗಿಯೇ ತಿಳಿಯುವ ಅವಕಾಶ ಇರುವುದರಿಂದ ಲಸಿಕಾ ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸಲು ಮತ್ತು ಉತ್ತಮವಾಗಿ ಯೋಜಿಸಲು ಅವುಗಳಿಗೆ ಅವಕಾಶ ಲಭಿಸಿರುವುದರಿಂದ ಲಸಿಕಾಕರಣದ ವೇಗದಲ್ಲಿ  ಹೆಚ್ಚಳವಾಗಿದೆ. 

ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಅಂಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸಿ ಬೆಂಬಲವನ್ನು ನೀಡುತ್ತಿದೆ. ಸಾರ್ವತ್ರಿಕ ಕೋವಿಡ್ -19 ಲಸಿಕಾಕರಣ ಆಂದೋಲನದ ಹೊಸ ಹಂತದಲ್ಲಿ ಕೇಂದ್ರ ಸರಕಾರವು ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುವ ಲಸಿಕೆಗಳಲ್ಲಿ 75% ನಷ್ಟನ್ನು ಖರೀದಿಸಿ ಬಳಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಉಚಿತವಾಗಿ)  ಪೂರೈಸುತ್ತದೆ.  

ಲಸಿಕಾ ಡೋಸ್ ಗಳು

 

(2021ರ ಜುಲೈ 30ರಲ್ಲಿದ್ದಂತೆ   )

 

ಪೂರೈಕೆ

 

48,03,97,080

 

ಪೂರೈಕೆಯಾಗುವ ಹಂತದಲ್ಲಿ

 

71,16,720

ಬಳಕೆ

 

45,27,93,441

 

ಉಳಿಕೆ ಲಭ್ಯತೆ

 

 

2,92,65,015

ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮೂಲಗಳಿಂದ 48.03  ಕೋಟಿಗೂ ಅಧಿಕ (48,03,97,080) ಲಸಿಕಾ ಡೋಸ್ ಗಳನ್ನು ಒದಗಿಸಲಾಗಿದೆ ಮತ್ತು ಇನ್ನೂ 71,16,720 ಡೋಸ್ ಗಳು ಪೂರೈಕೆ ಹಂತದಲ್ಲಿವೆ.

ಇವುಗಳಲ್ಲಿ ಒಟ್ಟು ಬಳಕೆ,  ವ್ಯರ್ಥವಾದ ಡೋಸ್ ಗಳ ಸಹಿತ 45,27,93,441 ಡೋಸ್ ಗಳು (ಇದು ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಾದ ದತ್ತಾಂಶಗಳ ಅನ್ವಯ)

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳ ಬಳಿಯಲ್ಲಿ 2.92 ಕೋಟಿಗೂ ಅಧಿಕ (2,92,65,015) ಕೋವಿಡ್ ಲಸಿಕಾ ಡೋಸ್ ಗಳು ಉಳಿಕೆಯಾಗಿದ್ದು ಅಥವಾ ಬಳಕೆಯಾಗದೇ ಉಳಿದಿದ್ದು, ಅವು ಲಸಿಕಾಕರಣಕ್ಕೆ ಲಭ್ಯ ಇವೆ.

***



(Release ID: 1740640) Visitor Counter : 218