ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ನೀಡಿಕೆಯ ಪರಿಷ್ಕೃತ ವರದಿ


ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 46.23 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ವಿತರಣೆ

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 2.18 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ಲಭ್ಯ

Posted On: 28 JUL 2021 10:18AM by PIB Bengaluru

ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿರುವ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮಕ್ಕೆ ವೇಗ ನೀಡಲು ಬದ್ಧವಾಗಿದೆ. ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ ಖಾತ್ರಿಪಡಿಸುವ ಮೂಲಕ, ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಖಚಿತಪಡಿಸುವ ಮೂಲಕ ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಅಭಿಯಾನಕ್ಕೆ ವೇಗ ನೀಡಿದೆ.

ದೇಶವ್ಯಾಪಿ ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನದ ಭಾಗವಾಗಿ, ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ಒದಗಿಸುತ್ತಿದೆ. ಅಭಿಯಾನ ಸಾರ್ವತ್ರೀಕರಣದ ಹೊಸ ಹಂತದಲ್ಲಿ ಭಾರತ ಸರ್ಕಾರವು ದೇಶೀಯ ಲಸಿಕೆ ಉತ್ಪಾದನಾ ಕಂಪನಿಗಳಿಂದ 75% ಲಸಿಕೆಯನ್ನು ಎಲ್ಲಾ ಮೂಲಗಳಿಂದ ಖರೀದಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸುತ್ತಿದೆ.

 

ಲಸಿಕೆ ಡೋಸ್ ಗಳಲ್ಲಿ

 

28 ಜುಲೈ 2021

 

ಪೂರೈಕೆಯಾದ ಲಸಿಕೆ ಪ್ರಮಾಣ

 

46,23,27,530

 

ಸದ್ಯದಲ್ಲೇ ಲಭ್ಯವಾಗಲಿರುವ ಲಸಿಕೆ ಪ್ರಮಾಣ

 

1,20,70,820

ಬಳಕೆಯಾಗ ಲಸಿಕೆ ಪ್ರಮಾಣ

 

44,29,95,780

 

ಬಳಕೆಯಾಗದೆ ಉಳಿದಿರುವ ಲಸಿಕೆ ಪ್ರಮಾಣ

 

 

2,18,10,422

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 46.23 ಕೋಟಿಗಿಂತ ಅಧಿಕ ಅಂದರೆ 46,23,27,530 ಡೋಸ್ ಲಸಿಕೆಯನ್ನು ಎಲ್ಲಾ ಮೂಲಗಳಿಂದ ಖರೀದಿಸಿ, ಒದಗಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ, 1,20,70,820 ಡೋಸ್ ಲಸಿಕೆ ಅತಿ ಶೀಘ್ರವೇ ಲಭ್ಯವಾಗಲಿದೆ.

46.23 ಕೋಟಿ ಲಸಿಕೆ ಪೈಕಿ ಸವಕಳಿ ಸೇರಿದಂತೆ 44,29,95,780 ಡೋಸ್ ಲಸಿಕೆ ಬಳಕೆಯಾಗಿದೆ ಎಂಬುದು ಇಂದು ಬೆಳಗ್ಗೆ 8 ಗಂಟೆಗೆ ಬಿಡುಗಡೆ ಆಗಿರುವ ದತ್ತಾಂಶದಿಂದ ತಿಳಿದುಬಂದಿದೆ.

ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 2.18 ಕೋಟಿ ಡೋಸ್ ಗಿಂತ ಹೆಚ್ಚಿನ ಅಂದರೆ 2,18,10,422 ಡೋಸ್ ಲಸಿಕೆ ಲಭ್ಯವಿದೆ.

***



(Release ID: 1739887) Visitor Counter : 243