ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ನೀಡಿಕೆಯ ಇಂದಿನ ಪರಿಷ್ಕೃತ ವರದಿ


ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 45.37 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ಪೂರೈಕೆ

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿರುವ 3.09 ಕೋಟಿ ಡೋಸ್ ಗಿಂತ ಹೆಚ್ಚಿನ ಲಸಿಕೆ ಲಭ್ಯ

Posted On: 26 JUL 2021 9:27AM by PIB Bengaluru

ದೇಶಾದ್ಯಂತ ಭರದಿಂದ ಸಾಗಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ಗತಿಯ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಬೃಹತ್ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ ದೇಶಾದ್ಯಂತ 2021 ಜೂನ್ 21ರಿಂದ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ, ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಮತ್ತು ಲಸಿಕೆ ಪೂರೈಕೆ ಸರಪಳಿ ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರವು, ಈ ಬೃಹತ್ ಅಭಿಯಾನವನ್ನು ಹೆಚ್ಚಿಸಿದೆ.ಜನರಿಗೆ ಲಸಿಕೆ ನೀಡಲು ಸಮರ್ಪಕ ಯೋಜನೆ ರೂಪಿಸಿಕೊಳ್ಳಲು ರಾಜ್ಯಗಳಿಗೆ ಕೇಂದ್ರ ನೆರವಾಗುತ್ತಾ ಬಂದಿದೆ.

ದೇಶವ್ಯಾಪಿ ಲಸಿಕೆ ನೀಡಿಕೆ ಆಂದೋಲನದ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ. ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ದೇಶೀಯ ಲಸಿಕಾ ಉತ್ಪಾದನೆ ಕಂಪನಿಗಳಿಂದ 75% ಕೋವಿಡ್-19 ಲಸಿಕೆ ಖರೀದಿಸಿ, ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸುತ್ತಿದೆ.

 

ಲಸಿಕೆ ಡೋಸ್

 

(26 ಜುಲೈ 2021)

 

ಪೂರೈಕೆಯಾದ ಲಸಿಕೆ ಪ್ರಮಾಣ

 

45,37,70,580

 

ಸದ್ಯದಲ್ಲೇ ಲಭ್ಯವಾಗಲಿರುವ ಲಸಿಕೆ ಪ್ರಮಾಣ

 

59,39,010

 

ಬಳಕೆಯಾದ ಲಸಿಕೆ ಪ್ರಮಾಣ

 

42,28,59,270

 

ಬಳಕೆಯಾಗದೆ ಉಳಿದಿರುವ ಲಸಿಕೆ

 

 

3,09,11,310

45.37 ಕೋಟಿ ಡೋಸ್ ಗಿಂತ ಹೆಚ್ಚಿನ ಅಂದರೆ 45,37,70,580 ಡೋಸ್ ಲಸಿಕೆಯನ್ನು ಎಲ್ಲಾ ಖರೀದಿ ಮೂಲಗಳಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ವಿತರಿಸಲಾಗಿದೆ. ಇನ್ನೂ ಹೆಚ್ಚುವರಿಯಾಗಿ ಸದ್ಯದಲ್ಲೇ  59,39,010 ಡೋಸ್ ಲಸಿಕೆ ಲಭ್ಯವಾಗಲಿದೆ. 

ಇಂದು ಬೆಳಗ್ಗೆ 8 ಗಂಟೆಗೆ ಬಿಡುಗಡೆ ಆಗಿರುವ ದತ್ತಾಂಶದ ಪ್ರಕಾರ, 45.37 ಕೋಟಿ ಡೋಸ್ ಲಸಿಕೆಯ ಪೈಕಿ ಸವಕಳಿ ಸೇರಿದಂತೆ 42,28,59,270 ಡೋಸ್ ಲಸಿಕೆ ಬಳಕೆಯಾಗಿದೆ.

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಬಳಕೆಯಾಗದೆ ಉಳಿದಿರುವ 3.09 ಕೋಟಿ ಡೋಸ್ ಗಿಂತ ಹೆಚ್ಚಿನ ಅಂದರೆ 3,09,11,310 ಡೋಸ್ ಲಸಿಕೆಯು ಬಳಕೆಗೆ ಲಭ್ಯವಿದೆ.

***



(Release ID: 1738959) Visitor Counter : 179