ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕಾ ಆಭಿಯಾನದ ತಾಜಾ ಮಾಹಿತಿ


ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 41.99 ಕೋಟಿಗೂ ಅಧಿಕ ಡೋಸ್ ಲಸಿಕೆ ಪೂರೈಕೆ

ಇನ್ನೂ 2.56 ಕೋಟಿ ಲಸಿಕೆ ಬಾಕಿ ಮತ್ತು ಬಳಕೆಯಾಗಿಲ್ಲ, ಅವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬಳಕೆಗೆ ಲಭ್ಯ

Posted On: 18 JUL 2021 10:42AM by PIB Bengaluru

ದೇಶಾದ್ಯಂತ ಕೋವಿಡ್-19 ಲಸಿಕಾಕಾರ್ಯಕ್ರಮದ ವ್ಯಾಪ್ತಿ ಮತ್ತು ವೇಗವನ್ನು ವರ್ಧಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 2021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್ -19 ಲಸಿಕಾ ಕಾರ್ಯಕ್ರಮದ ಹೊಸ ಹಂತ ಆರಂಭವಾಗಿದೆ. ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ ಮತ್ತು ಅವುಗಳಿಗೆ ಎಷ್ಟು ಲಸಿಕೆ ಲಭ್ಯವಾಗಲಿವೆ ಎಂಬ ಕುರಿತು ಮೊದಲೇ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡುವುದರಿಂದ ಅವು ತಮ್ಮ ಯೋಜನೆಗಳನ್ನು ರೂಪಿಸಿಕೊಳ್ಳಲು ಮತ್ತು ಲಸಿಕೆ ಪೂರೈಕೆ ಸರಣಿಯನ್ನು ಬಲವರ್ಧನೆಗೊಳಿಸುವ ಮೂಲಕ ದೇಶಾದ್ಯಂತ ಲಸಿಕಾ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.

ರಾಷ್ಟ್ರವ್ಯಾಪಿ ನಡೆಯುತ್ತಿರುವ ಲಸಿಕಾ ಅಭಿಯಾನದ ಭಾಗವಾಗಿ ಭಾರತ ಸರ್ಕಾರ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಮೂಲಕ ಬೆಂಬಲ ನೀಡುತ್ತಿದೆ. ಸಾರ್ವತ್ರಿಕ ಕೋವಿಡ್-19 ಲಸಿಕಾ ಅಭಿಯಾನದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರ ದೇಶದಲ್ಲಿನ ಲಸಿಕೆ ಉತ್ಪಾದಕರು ಉತ್ಪತ್ತಿ ಮಾಡಿದ ಶೇ.75ರಷ್ಟ ಅನ್ನು ಖರೀದಿಸುತ್ತಿದೆ ಮತ್ತು ಅವುಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ.

ಲಸಿಕೆ ಡೋಸ್

 

(2021ರ ಜು. 18ರವರೆಗೆ)

 

ಪೂರೈಕೆ ಮಾಡಿರುವುದು

 

41,99,68,590

ಪೂರೈಕೆಗೆ ಸಿದ್ಧತೆ ನಡೆದಿರುವುದು

 

15,75,140

ಬಳಕೆ

 

39,42,97,344

ಲಸಿಕೆ ಡೋಸ್

 

2,56,71,246

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 41.99 ಕೋಟಿಗೂ(41,99,68,590) ಅಧಿಕ ಲಸಿಕೆಗಳನ್ನು ಪೂರೈಕೆ ಮಾಡಲಾಗಿದೆ, ಎಲ್ಲ ಮೂಲಗಳಿಂದ ಸದ್ಯ 15,75,140 ಡೋಸ್ ಲಸಿಕೆ ಪೂರೈಕೆ ಕಾರ್ಯ ಪ್ರಗತಿಯಲ್ಲಿದೆ.

ಆ ಪೈಕಿ ಪೋಲಾಗಿರುವುದು ಸೇರಿ ಒಟ್ಟಾರೆ 39,42,97,344 ಡೋಸ್ (ಇಂದು ಬೆಳಿಗ್ಗೆ 8ಗಂಟೆವರೆಗೆ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ) ಬಳಕೆಯಾಗಿದೆ.

ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 2.56 ಕೋಟಿಗೂ ಅಧಿಕ(2,56,71,246) ಡೋಸ್ ಬಾಕಿ ಇದೆ ಮತ್ತು ಆ ಲಸಿಕೆ ಬಳಕೆಗೆ ಲಭ್ಯವಿದೆ.

***



(Release ID: 1736581) Visitor Counter : 215