ಕೃಷಿ ಸಚಿವಾಲಯ

ಕುಮಾರಿ ಶೋಭಾ ಕರಂದ್ಲಾಜೆ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡರು

Posted On: 08 JUL 2021 8:06PM by PIB Bengaluru

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸಂಸದೆ ಶೋಭಾ ಕರಂದ್ಲಾಜೆ ಅಧಿಕಾರ ವಹಿಸಿಕೊಂಡಿದ್ದಾರೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಕುಮಾರಿ ಶೋಭಾ ಅವರನ್ನು ಸ್ವಾಗತಿಸಿದರು ಮತ್ತು ಅವರ ಮುಂದಿನ ಜವಾಬ್ದಾರಿಗಳಿಗಾಗಿ ಶುಭಾಶಯಗಳನ್ನು ತಿಳಿಸಿದರು.

ಶೋಭಾ ಕರಂದ್ಲಾಜೆಯವರು ಹೊಸ ಜವಾಬ್ದಾರಿಗಳನ್ನು ಹಸ್ತಾಂತರಿಸಿದ ಉನ್ನತ ನಾಯಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಸಚಿವಾಲಯದಲ್ಲಿ ಕೆಲಸ ಮಾಡುವ ಬದ್ಧತೆಯ ಭರವಸೆ ನೀಡಿದರು.

ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಕುಮಾರಿ ಶೋಭಾರವರು ಮಾಧ್ಯಮಗಳು ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸಂದರ್ಭದಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

***


(Release ID: 1733988) Visitor Counter : 261


Read this release in: English , Urdu , Hindi