ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯಿಂದ ‘ಅಲ್ಪ ಮತ್ತು ಅಧಿಕ ಹರಿವಿನ ಅಮ್ಲಜನಕ ವಿತರಣಾ ವ್ಯವಸ್ಥೆ’ಯ ತಂತ್ರಜ್ಞಾನ ಅಭಿವೃದ್ಧಿ ಮೇಡ್ ಇನ್ ಇಂಡಿಯಾ ಪರಿಕಲ್ಪನೆಯ ಪ್ರಯತ್ನಗಳಿಗೆ ಒತ್ತು


ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಆಮ್ಲಜನಕ ಪುಷ್ಟೀಕಕರಣ ಘಟಕ (5 ಎಲ್|ಪಿಎಂ)ದಿಂದ ಗಣನೀಯ ಕಾರ್ಯದಕ್ಷತೆ ಅನುಕೂಲ

ಆಮ್ಲಜನಕ ಉತ್ಪಾದನೆಯ ಪರ್ಯಾಯ ತಂತ್ರಜ್ಞಾನ ಕಂಡುಹಿಡಿದ ಸಿಎಸ್ಐಆರ್-ಸಿಎಂಇಆರ್|ಐ ಪ್ರಯತ್ನಗಳಿಗೆ ಕೈಜೋಡಿಸಿದ ವೈದ್ಯರು, ಉದ್ಯಮಶೀಲರು

ಎಂಎಸ್ಎಂಇ ವಲಯಗಳಿಗೆ ವರದಾನವಾದ ಸಿಎಸ್ಐಆರ್-ಸಿಎಂಇಆರ್|ಐ ತಂತ್ರಜ್ಞಾನ

10 ಆಕ್ಸಿಜನೇಟೆಡ್ ಹಾಸಿಗೆಗಳುಳ್ಳ ಆರೋಗ್ಯ ಸೌಲಭ್ಯಗಳಿಗೆ ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯಿಂದ 50 ಎಲ್|ಪಿಎಂ(ಲೀಟರ್ ಪರ್ ಮಿನಿಟ್) ಮತ್ತು 100 ಎಲ್|ಪಿಎಂ ಸಾಮರ್ಥ್ಯದ ಏಕ ಕಂಪ್ರೆಸರ್ ಇರುವ ‘ಆಮ್ಲಜನಕ ವಿತರಣಾ ವ್ಯವಸ್ಥೆ’ಯ ತಂತ್ರಜ್ಞಾನ ಅಭಿವೃದ್ಧಿ

ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯು ಮುಖಕ್ಕೆ ಪರಿಪಕ್ವವಾಗಿ ಹೊಂದುವ ಹೈಬ್ರಿಡ್ ಮಾಸ್ಕ್|ಗಳ ತಯಾರಿಕೆಯಲ್ಲಿ ಕಾರ್ಯೋನ್ಮುಖ

Posted On: 30 JUN 2021 8:27PM by PIB Bengaluru

ಮಂಗಳೂರಿನ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರಗಳ ಉದ್ಯಮ(ಎಂಎಸ್|ಎಂಇ) ಅಭಿವೃದ್ಧ ಸಂಸ್ಥೆಯು ಕರ್ನಾಟಕದ ಭಾರತೀಯ ವೈದ್ಯಕೀಯ ಸಂಘಟನೆ, ಕರ್ನಾಟಕ ಸಣ್ಣ ಗಾತ್ರದ ಕೈಗಾರಿಕೆಗಳ ಸಂಘಟನೆ ಮತ್ತು ಸಿಎಸ್ಐಆರ್-ಸಿಎಂಇಆರ್|ಐ ಸಹಯೋಗದಲ್ಲಿ ಜೂನ್ 29ರಂದು ‘ಅಲ್ಪ ಮತ್ತು ಅಧಿಕ ಹರಿವಿನ ಅಮ್ಲಜನಕ ವಿತರಣಾ ವ್ಯವಸ್ಥೆ’ ಕುರಿತು ವೆಬಿನಾರ್ ಆಯೋಜಿಸಿತ್ತು. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್ಐಆರ್) - ಸೆಂಟ್ರಲ್ ಮೆಕ್ಯಾನಿಕಲ್ ರಿಸರ್ಚ್ ಇನ್|ಸ್ಟಿಟ್ಯೂಟ್(ಸಿಎಂಇಆರ್|ಐ)ನ ನಿರ್ದೇಶಕ ಪ್ರೊಫೆಸರ್ ಹರೀಶ್ ಹಿರಾನಿ ಅವರು ಈ ವರ್ಚುವಲ್ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿದ್ದರು. ಬೆಂಗಳೂರಿನ ಎಂಸ್ಎಂಇ-ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಶ್ರೀ ಜಿ.ಆರ್. ಅಕಾದಾಸ್, ಮಂಗಳೂರಿನ ಎಂಎಸ್ಎಂಇ-ಡಿಐ ಸಂಸ್ಥೆಯ ಜಂಟಿ ನಿರ್ದೇಶಕ ಶ್ರೀ ಕೆ. ದೇವರಾಜ್, ಕರ್ನಾಟಕ ಐಎಂಎ ಸಂಘಟನೆಯ ಉಪಾಧ್ಯಕ್ಷೆ ಶ್ರೀಮತಿ ಅನುರಾಧ ಪರಮೇಶ್, ಕಾಸಿಯಾ ಅಧ್ಯಕ್ಷ ಶ್ರೀ ಎನ್ ಆರ್ ಜಗದೀಶ್, ಕೆನರಾ ಬ್ಯಾಂಕ್|ನ ಶ್ರೀ ಯೋಗೇಶ್ ಆಚಾರ್ಯ, ಡಾ. ಅನಸೂಯ, ಡಾ. ಸತ್ಯವತಿ ಸೇರಿದಂತೆ ಎಂಎಸ್ಎಂಇ, ವೈದ್ಯಕೀಯ ರಂಗ, ಬ್ಯಾಂಕಿಂಗ್ ವಲಯದ ವೃತ್ತಿಪರರು ಮತ್ತು ಕೈಗಾರಿಕಾ ವಲಯದ ಪ್ರತಿನಿಧಿಗಳು ಈ ವೆಬಿನಾರ್|ನಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ಅತಿಸಣ್ಣ ಮತ್ತು ಸಣ್ಣ ಗಾತ್ರಗಳ ಉದ್ಯಮಗಳ ಹಲವಾರು ಉದ್ಯಮಶೀಲರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

ಸಿಎಸ್ಐಆರ್ - ಸಿಎಂಇಆರ್|ಐ ನಿರ್ದೇಶಕ ಪ್ರೊಫೆಸರ್ ಹರೀಶ್ ಹಿರಾನಿ ಮಾತನಾಡಿ, ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಅಲ್ಪ ಮತ್ತು ಅಧಿಕ ಹರಿವಿನ ಅಮ್ಲಜನಕ ವಿತರಣಾ ವ್ಯವಸ್ಥೆ’ಯು ಮಾದರಿ ವಿನ್ಯಾಸ ತತ್ವದ ಭರವಸೆ ಮೂಡಿಸಿದೆ. ಆಮ್ಲಜನಕ ವಿತರಣಾ ವ್ಯವಸ್ಥೆಯ ಇತರೆ ಮಾದರಿಗಳು ಸಹ ಈ ತಂತ್ರಜ್ಞಾನದ ಕಾರ್ಯದಕ್ಷತೆಯ ಮೌಲ್ಯ ಹೆಚ್ಚಿಸಿವೆ. ಇಂತಹ ತಂತ್ರಜ್ಞಾನ ವಿನ್ಯಾಸಗಳು ಬೃಹತ್ ಆರೋಗ್ಯ ಸಂರಕ್ಷಣಾ ಸೌಲಭ್ಯಗಳಲ್ಲಿ ಪುಷ್ಟೀಕರಣ ಘಟಕಗಳ ಮೂಲಕ ಬಹುತೇಕ 2/3ರಷ್ಟು ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಲಿವೆ. ಈ ನಿಟ್ಟಿನಲ್ಲಿ ಆಮ್ಲಜನಕದ ಸಾಕಷ್ಟು ಲಭ್ಯತೆಯನ್ನು ಖಾತ್ರಿಪಡಿಸಲು ಸಿಎಸ್ಐಆರ್ - ಸಿಎಂಇಆರ್|ಐ ಸಂಸ್ಥೆಯು ದೇಶಾದ್ಯಂತ ಕೈಗಾರಿಕಾ ವಲಯದ ಪಾಲುದಾರರ ಜತೆ ಕೆಲಸ ಮಾಡಿದೆ. ಇದಕ್ಕೆ ಎಂಎಸ್ಎಂಇ ವಲಯಗಳು ತಾಂತ್ರಿಕ ಮತ್ತು ಕಚ್ಚಾವಸ್ತುಗಳ ಲಭ್ಯತೆಯ ಮೂಲಗಳ ಬೆಂಬಲ ಮತ್ತು ಮಾರ್ಗದರ್ಶನ ಒದಗಿಸಿವೆ. ಆಮ್ಲಜನಕ ಪೂರೈಕೆಯ ಬೃಹತ್(ಜಂಬೊ) ಸಿಲಿಂಡರ್|ಗಳು ಹಳೆಯದಾದ ತಂತ್ರಜ್ಞಾನವಾಗಿದ್ದು, ಇದರಲ್ಲಿ ಆಮ್ಲಜನಕ ಸವಕಲು ಮತ್ತು ಸಂಗ್ರಹದ ರಿಸ್ಕ್|ಗಳಿವೆ ಎಂದರು.

 

ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಆಮ್ಲಜನಕ ತಂತ್ರಜ್ಞಾನವನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಅನುಸರಣೆಯಂತೆ ಪ್ರಮಾಣೀಕರಿಸಲಾಗಿದೆ. ಹಠಾತ್ತನೇ ಕಾಣಿಸಿಕೊಳ್ಳುವ ಕೊರೊನಾ ಸೇಂಕಿನಂತಹ ಆರೋಗ್ಯ ಸಮಸ್ಯೆಗಳಿಂದ ದೇಶದ ಜನತೆಯನ್ನು ಪಾರು ಮಾಡಲು ಮತ್ತು ಸಂರಕ್ಷಿಸಲು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಇಂತಹ ಆಮ್ಲಜನಕ ಉತ್ಪಾದನೆ ಉತ್ಪನ್ನಗಳನ್ನು ತಯಾರಿಸಲು ದೇಶದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಉತ್ತೇಜಿಸಬಹುದಾಗಿದೆ.

ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯ ಅಲ್ಪ ಹರಿವಿನ ಆಮ್ಲಜನಕ ಪುಷ್ಟೀಕರಣ ಘಟಕ (5 ಎಲ್|ಪಿಎಂ)ವು ಗಣನೀಯ ಕಾರ್ಯದಕ್ಷತೆ ಅನುಕೂಲಗಳನ್ನು ಒದಗಿಸುತ್ತಿದ್ದು, ಮಾರುಕಟ್ಟೆಯಲ್ಲಿ ಲಭ್ಯವಾಗುವ ಆಮ್ಲಜನಕ ಕಾನ್ಸಂಟ್ರೇಟರ್|ಗಳಿಗಿಂತ ಹೆಚ್ಚಿನ ತಾಳಿಕೆ, ಬಾಳಿಕೆ ಮತ್ತು ಸ್ಥಿರ ಕಾರ್ಯದಕ್ಷತೆ ಒದಗಿಸಬಲ್ಲವು.

ಒಂದು ದಿನಕ್ಕೆ ಜಂಬೊ ಸಿಲಿಂಡರ್ ಒದಗಿಸುವ ಆಮ್ಲಜನಕ ಪ್ರಮಾಣಕ್ಕೆ ಸಮಾನವಾದ ಆಮ್ಲಜನಕವನ್ನು 5 ಎಲ್|ಪಿಎಂ ಸಾಮರ್ಥ್ಯದ ಅಲ್ಪ ಹರಿವಿನ ಆಮ್ಲಜನಕ ಪುಷ್ಟೀಕರಣ ಘಟಕ ಪೂರೈಸಲಿದೆ. ರಂಧ್ರಗಳನ್ನು ಹೊಂದಿರುವ ಸರಳ ಮುಖಗವಸು, ವೆಂಚರಿ ಮುಖಗವಸು ಮತ್ತು ಮರುಉಸಿರಾಟದ ಮುಖಗವಸುಗಳು ಆಮ್ಲಜನಕ ಪೂರೈಕೆಯನ್ನು ಸುಗಮಗೊಳಿಸುತ್ತವೆ. ಆದರೆ ಈ ರಂಧ್ರಗಳು ಸೋಂಕುಗಳನ್ನು ಹೆಚ್ಚಾಗಿ ಹರಡುವ ಸಾಧ್ಯತೆಯನ್ನು ಹೊಂದಿರುತ್ತವೆ. ಹರಡಬಹುದಾದ ರೋಗಗಳನ್ನು ಹೊಂದಿರುವ ರೋಗಿಗಳಿಗೆ ಕೆಲವು ವೈದ್ಯಕೀಯ ಸೌಲಭ್ಯಗಳಲ್ಲಿ (ಆಸ್ಪತ್ರೆಗಳು) ನೆಬ್ಯುಲೈಸರ್|ಗಳನ್ನು ಬಳಸುತ್ತಾರೆ, ಆದರೆ ಅದು ಸರಿಯಲ್ಲ. ಹರಡಬಹುದಾದ ಸೋಂಕುಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರ ಮೂಗಿನ ತೂರುನಳಿಗೆಗೆ ಆಮ್ಲಜನಕ ಸಾಂದ್ರಕಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಲ್ಲಿಸಬೇಕು. ಏಕೆಂದರೆ ಅಕ್ಕಪಕ್ಕದಲ್ಲಿರುವ ಇತರೆ ರೋಗಿಗಳು ಮತ್ತು ಜನರಿಗೆ ಸೋಂಕು ಹರಡುವ ಅಪಾಯಗಳಿರುತ್ತವೆ. ಎನ್-195 ಮಾಸ್ಕ್ ನಿರಂತರ ಬಳಕೆಯಿಂದ ವೈರಸ್|ಗಳ ಮರುಉಸಿರಾಟ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂಬ ಗಮನಾರ್ಹ ಸಂಗತಿ ಇತ್ತೀಚಿನ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ. ಮೂಗಿನ ತೂರು ನಳಿಗೆ ಮೂಲಕ ಅಧಿಕ ಹರಿವಿನ ಆಮ್ಲಜನಕ ವಿತರಣೆ ವ್ಯವಸ್ಥೆಯ ಪ್ರಯೋಗ ಯಶಸ್ವಿಯಾಗಿದ್ದು, ರೋಗಗಳನ್ನು ಗುಣಪಡಿಸಲಾಗಿದೆ. ಆದರೆ ಈ ವಿಧಾನವು ಆಮ್ಲಜನಕ ತೀವ್ರತೆಯದ್ದಾಗಿದೆ. ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯ ಹೈಬ್ರಿಡ್ ಆಮ್ಲಜನಕ ಪುಷ್ಟೀಕರಣ ಘಟಕವು ಆಸ್ಪತ್ರೆಗಳಲ್ಲಿರುವ ಆಮ್ಲಜನಕ ಮೂಲಸೌಕರ್ಯದೊಂದಿಗೆ ಕೇಂದ್ರೀಕೃತ ಅಥವಾ ಸಿಲಿಂಡರ್ ಆಧರಿತ ಆಮ್ಲಜನಕ ಸರಬರಾಜಿನೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ, ಸಾಕಷ್ಟು ಆಮ್ಲಜನಕವನ್ನು ಉಳಿಸಲು ಸಹಾಯ ಮಾಡುತ್ತದೆ.

ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯು ಮುಖಕ್ಕೆ ಪರಿಪಕ್ವವಾಗಿ ಹೊಂದುವ ಹೈಬ್ರಿಡ್ ಮಾಸ್ಕ್|ಗಳ ತಯಾರಿಕೆಯಲ್ಲಿ ಕಾರ್ಯೋನ್ಮುಖವಾಗಿದೆ. ಮೂಗಿನ ತೂರುನಳಿಗೆಯಲ್ಲಿ ಸರಾಗವಾಗಿ ಉಸಿರಾಡಲು ಅನುವು ಕಲ್ಪಿಸುವ ಮತ್ತು ಉಸಿರಾಟವನ್ನು ಸುಗಮಗೊಳಿಸುವಂತೆ ಮುಖಗವಸು ಅಭಿವೃದ್ಧಿಪಡಿಸಲಾಗುತ್ತಿದೆ. ಬಿವಿ ಫಿಲ್ಟರ್ ಮತ್ತು ಇಂಗಾಲ ಡೈಆಕ್ಸೈಡ್ ಸ್ಕ್ರಬ್ಬರ್ ಅಳವಡಿಸಲಾಗಿದ್ದು, ಇವು ಸುತ್ತಮುತ್ತ ಸೋಂಕಾಣು ಮತ್ತು ಇಂಗಾಲ ಡೈಆಕ್ಸೈಡ್ ಹರಡದಂತೆ ತಡೆಯುತ್ತವೆ. ಆಸ್ಪತ್ರೆ, ಕಚೇರಿಗಳು ಸೇರಿದಂತೆ ಮುಚ್ಚಿದ ಸರ್ಕಿಟ್ ಸ್ಥಳಗಳಲ್ಲಿ ಇವು ಹೆಚ್ಚಾಗಿ ಬಳಕೆಯಾಗುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಮಾಸ್ಕ್ ಧರಿಸಿದಾಗ ಮೂಗು ಮತ್ತು ಬಾಯಿಯ ಬಳಿ ಒತ್ತಡ ಹೆಚ್ಚಾಗದಂತೆ ಸೂಕ್ತ ಕಚ್ಚಾವಸ್ತುಗಳನ್ನು ಬಳಸಲಾಗುತ್ತಿದೆ. ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯು ಕ್ಲೋಸ್ಡ್ ಲೂಪ್ ಆಕ್ಸಿಜನ್ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ರೋಗಿ ಬಳಸುವ ಬಹುಪಾಲು ಆಮ್ಲಜನಕವನ್ನು ಇದು ಮರುಉತ್ಪಾದಿಸುತ್ತದೆ.

ಭಾರತ ಮತ್ತು ಹೊರರಾಷ್ಟ್ರಗಳಲ್ಲಿ ತಯರಾಗುತ್ತಿರುವ ಆಕ್ಸಿಜನ್ ಕಾನ್ಸಂಟ್ರೇಟರ್|ಗಳಿಂದ ಎದುರಾಗುತ್ತಿರುವ ನಾನಾ ಸಮಸ್ಯೆಗಳನ್ನು ಹತ್ತಿಕ್ಕಲು ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯು, ಸುಧಾರಿತ ಆಕ್ಸಿಜನ್ ಪುಷ್ಟೀಕರಣ ಘಟಕವನ್ನು ಅಭಿವೃದ್ಧಿಪಡಿಸಿದೆ. ಈ ಘಟಕದಲ್ಲಿ ಆಮ್ಲಜನಕ ಹರಿವು ಮತ್ತು ಆಮ್ಲಜನಕ ಶೋಧಕ ನಿಯಂತ್ರಣ ಸಾಧನವನ್ನು ಅಳವಡಿಸಲಾಗಿದೆ. ಆಮ್ಲಜನಕ ಶೋಧಕ(FiO2)ವು ಆಮ್ಲಜನಕವನ್ನು ಶೇಕಡ 99ರಷ್ಟು ಶುದ್ಧೀಕರಿಸುತ್ತದೆ. ಈ ಹೊಸ ಅನ್ವೇಷಣೆಯು ದೇಶದ ವೈದ್ಯಕೀಯ ಸಮುದಾಯಕ್ಕೆ ತುಂಬಾ ಉಪಯುಕ್ತವಾಗಲಿದೆ.

50 ಎಲ್|ಪಿಎಂ(ಲೀಟರ್ ಪರ್ ಮಿನಿಟ್) ಮತ್ತು 100 ಎಲ್|ಪಿಎಂ ಸಾಮರ್ಥ್ಯದ ಒಂದು ಕಂಪ್ರೆಸರ್ ಇರುವ ‘ಅಲ್ಪ ಮತ್ತು ಅಧಿಕ ಹರಿವಿನ ಅಮ್ಲಜನಕ ವಿತರಣಾ ವ್ಯವಸ್ಥೆ’ಯನ್ನು ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ಒದಗಿಸಲು ತಗುಲುವ ವೆಚ್ಚ ಪ್ರಮಾಣ ಎಷ್ಟೆಂಬುದನ್ನು ಲೆಕ್ಕ ಹಾಕಲಾಗುತ್ತಿದೆ. 10 ಆಕ್ಸಿಜನೇಟೆಡ್ ಹಾಸಿಗೆಗಳುಳ್ಳ ಆರೋಗ್ಯ ಸೌಲಭ್ಯಗಳಿಗೆ ಈ ತಂತ್ರಜ್ಞಾನ ಅನುವು ಕಲ್ಪಿಸಲಿದೆ ಎಂದು ಅವರು ವಿವರ ನೀಡಿದರು.

ಮಂಗಳೂರಿನ ಎಂಎಸ್ಎಂಇ ಅಭಿವೃದ್ಧಿ ಕೇಂದ್ರದ ಜಂಟಿ ನಿರ್ದೇಶಕ ಶ್ರೀ ಕೆ ದೇವರಾಜ್ ಅವರು ಗಣ್ಯರನ್ನು ವೆಬಿನಾರ್|ಗೆ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶಗಳ ಕುರಿತು ಸಂಕ್ಷಿಪ್ರ ವಿವರ ನೀಡಿದರು. ಕೊರೊನಾ ಸಾಂಕ್ರಾಮಿಕ ಸೋಂಕು ದೇಶದಲ್ಲಿ ಕಾಣಿಸಿಕೊಂಡ ನಂತರ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಇಡೀ ವೈದ್ಯಕೀಯ ಲೋಕ ನೀಡಿದ ಅತ್ಯಮೂಲ್ಯ ಕೊಡುಗೆಗಳಿಗೆ ಧನ್ಯವಾದ ಸಲ್ಲಿಸಿದರು.

ಐಎಂಎ ಕರ್ನಾಟಕ ವಲಯದ ಉಪಾಧ್ಯಕ್ಷೆ ಡಾ. ಅನುರಾಧ ಪರಮೇಶ್ ಉದ್ಘಾಟನಾ ಭಾಷಣ ಮಾಡಿ, ದೇಶೀಯ ತಂತ್ರಜ್ಞಾನದಲ್ಲಿ ನಿರ್ಮಿಸಿರುವ ‘ಅಲ್ಪ ಮತ್ತು ಅಧಿಕ ಹರಿವಿನ ಅಮ್ಲಜನಕ ವಿತರಣಾ ವ್ಯವಸ್ಥೆ’ಯ ಪ್ರಸ್ತುತಿಗಾಗಿ ಅನನ್ಯ ಮತ್ತು ವಿಶಿಷ್ಟ ವೆಬಿನಾರ್ ಆಯೋಜಿಸಿರುವುದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಐಎಂಎ ಕೇಂದ್ರ ಕಚೇರಿಗಳಲ್ಲಿ ಆಯೋಜಿಸಲು ತಾವು ಉತ್ಸುಕರಾಗಿರುವುದಾಗಿ ತಿಳಿಸಿದರು.

ಕಾಸಿಯಾ ಅಧ್ಯಕ್ಷ ಶ್ರೀ ಎನ್ ಆರ್ ಜಗದೀಶ್ ಮಾತನಾಡಿ, ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಆಕ್ಸಿಜನ್ ಎನ್|ರಿಚ್|ಮೆಂಟ್ ಸಾಧನಗಳ ಬಗ್ಗೆ ಜಾಗೃತಿ ಮೂಡಿಸಲು ಈ ವೆಬಿನಾರ್ ಆಯೋಜಿಸಿರುವುದು ಮೆಚ್ಚುವಂಥದ್ದು. ಸಮಾಜದಲ್ಲಿ ಜನರು ಆಮ್ಲಜನಕವನ್ನು ಸಕಾರಾತ್ಮಕವಾಗಿ ಬಳಸಲು ಮತ್ತು ಅತ್ಯುತ್ತಮ ನಿರ್ವಹಣೆ ಮಾಡಲು ಸಮರ್ಪಕ ಜನಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಅವರು ತಿಳಿಸಿದರು.

ಬೆಂಗಳೂರಿನ ಎಂಎಸ್ಎಂಇ – ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಶ್ರೀ ಜಿ.ಆರ್. ಅಕಾದಾಸ್ ಅವರು ಅಧ್ಯಕ್ಷೀಯ ಭಾಷಣ ಮಾಡಿ, ವೈದ್ಯರು, ತಂತ್ರಜ್ಞರು ಮತ್ತು ಎಂಎಸ್ಎಂಇ ವಲಯದ ಉದ್ಯಮಶೀಲರು ಜತೆಗೂಡಿ ಒಂದೇ ವೇದಿಕೆಯಲ್ಲಿ ದೇಶೀಯ ತಂತ್ರಜ್ಞಾನದಲ್ಲಿ ಅಬಿವೃದ್ಧಿಪಡಿಸಿರುವ ಆಕ್ಸಿಜನ್ ಸಾಧನಗಳ ಪೂರ್ಣ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದು ವಿಶೇಷ ಸಂದರ್ಭವಾಗಿದೆ. ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.

ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಪ್ರಯತ್ನಗಳನ್ನು ಸಾಕಾರಗೊಳಿಸಲು ಎಂಎಸ್ಎಂಇ ವಲಯಕ್ಕೆ ಕೊರೊನಾ ಸಂಕ್ರಾಮಿಕ ಸೋಂಕಿನ ಕಾಲಘಟ್ಟವು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಆಮ್ಲಜನಕ ಪೂರೈಕೆಯ ಸಂಕಷ್ಟಗಳನ್ನು ನಾವು ನೋಡಿದ್ದೇವೆ. ಇದೇ ಕಾಲಘಟ್ಟದಲ್ಲಿ ಸಿಎಸ್ಐಆರ್-ಸಿಎಂಇಆರ್|ಐ ಸಂಸ್ಥೆಯು ಮೇಡ್ ಇನ್ ಇಂಡಿಯಾ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವುದು ಸಂತಸದ ವಿಷಯವಾಗಿದೆ. ಈ ತಂತ್ರಜ್ಞಾನ ವ್ಯಾಪಕಗೊಳಿಸಲು ಎಂಎಸ್ಎಂಇ ವಲಯ ಮುಂದೆ ಬರಬೇಕು. ಈ ತಂತ್ರಜ್ಞಾನದ ಸಾಧಕ ಬಾಧಕಗಳ ಕುರಿತು ವೈದ್ಯ ಸಮುದಾಯ ತಮ್ಮ ಅಭಿಪ್ರಾಯಗಳನ್ನು (ಫೀಡ್|ಬ್ಯಾಕ್) ನೀಡಬೇಕು ಎಂದರು.

ಎಂಎಸ್ಎಂಇ ವಲಯ ಈ ವೆಬಿನಾರ್|ನ ಪೂರ್ಣ ಪ್ರಯೋಜನ ಪಡೆಯಬೇಕು. ದೇಶದ ಪ್ರತಿಯೊಂದು ಆಸ್ಪತ್ರೆಯು ಆಮ್ಲಜನಕ ಸಂಗ್ರಹ ಮತ್ತು ಬಳಕೆಯಲ್ಲಿ ಸ್ವಾವಲಂಬಿಯಾಗಬೇಕು. ಈ ಮೂಲಕ ಭವಿಷ್ಯದಲ್ಲಿ ಆಮ್ಲಜನಕ ಬಿಕ್ಕಟ್ಟು ಎಂದಿಗೂ ಮರುಕಳಿಸಬಾರದು ಎಂದು ಅವರು ತಿಳಿಸಿದರು.

***



(Release ID: 1731733) Visitor Counter : 304


Read this release in: English