ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಮಾರಾಟಕ್ಕಾಗಿ ಕಲ್ಲಿದ್ದಲು ಗಣಿಗಳ ಹರಾಜಿನ 2ನೇ ಕಂತಿನ ಕುರಿತಂತೆ ಎರಡನೇ ಬಾಧ್ಯಸ್ಥರೊಂದಿಗೆ ಸಮಾಲೋಚನೆ
ದೇಶದಲ್ಲೇ ಅತ್ಯಂತ ಬೃಹತ್ ಕಲ್ಲಿದ್ದಲು ಗಣಿ ಹರಾಜು: ಸುಮಾರು 36 ಶತಕೋಟಿ ಟನ್ ಸಂಪನ್ಮೂಲದ 67 ಗಣಿಗಳನ್ನು ಹರಾಜಿಗಿಟ್ಟಿರುವ ಸರ್ಕಾರ
ಸಂಪೂರ್ಣ ಪರಿಶೋಧನೆಯ 2ನೇ ಕಂತಿನ ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ ವಾರ್ಷಿಕ ಸುಮಾರು 150 ದಶಲಕ್ಷ ಟನ್ ಗಳನ್ನು ಗರಿಷ್ಠ ಸಾಮರ್ಥ್ಯ
Posted On:
15 JUN 2021 8:20PM by PIB Bengaluru
ಎಫ್.ಐ.ಸಿ.ಸಿ.ಐ ಆಯೋಜಿಸಿದ್ದ ಕಲ್ಲಿದ್ದಲು ಮಾರಾಟ (ವಾಣಿಜ್ಯ ಗಣಿಗಾರಿಕೆ)ಗೆ ಸಂಬಂಧಿಸಿದಂತೆ ಕಲ್ಲಿದ್ದಲು ಸಚಿವಾಲಯವು ಪ್ರಸಕ್ತ ಚಾಲ್ತಿಯಲ್ಲಿರುವ 2ನೇ ಹಂತದ ಕಲ್ಲಿದ್ದಲು ಗಣಿಗಳ ಹರಾಜಿನ ಕುರಿತಂತೆ ಬಾಧ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿತು.
ಭಾರತ ಸರ್ಕಾರದ ಗಣಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಮಾಂಕಿತ ಪ್ರಾಧಿಕಾರಿ ಶ್ರೀ ಎಂ. ನಾಗರಾಜು, ಐಎಎಸ್, ಅವರಿಂದು: “ನಾವು ಒಟ್ಟು ಸುಮಾರು 36 ಶತಕೋಟಿ ಮತ್ತು ಸುಮಾರು 150 ದಶಲಕ್ಷ ಟನ್ (ಎಂ.ಟಿ.) ಸಂಪನ್ಮೂಲದ 67 ಗಣಿಗಳನ್ನು ಪರಿಶೋಧಿತ ಗಣಿಗಳ ಪಿ.ಆರ್.ಸಿ.ಯನ್ನು ಈ ಎರಡನೇ ಕಂತಿನ ಹರಾಜಿನಲ್ಲಿ ಕಲ್ಲಿದ್ದಲು ಗಣಿಗಳ ವಾಣಿಜ್ಯ ಗಣಿಗಾರಿಕೆ ನೀಡುತ್ತಿದ್ದೇವೆ.” ಎಂದು ತಿಳಿಸಿದರು. ಎಲ್ಲಾ ಅವಕಾಶಗಳು ಕಲ್ಲಿದ್ದಲು ಹೊಂದಿರುವ ರಾಜ್ಯಗಳಲ್ಲಿದ್ದು, ಉದ್ಯಮಗಳಿಗೆ ಅವುಗಳ ಅಗತ್ಯಗಳಿಗೆ ಅನುಗುಣವಾಗಿ ಸಂಬಂಧಿತ ಮತ್ತು ಉಪಯುಕ್ತ ಗಣಿಗಳನ್ನು ಆಯ್ಕೆ ಮಾಡಲು ಉತ್ತಮ ಅವಕಾಶ ಮತ್ತು ಆಯ್ಕೆಯನ್ನು ನೀಡುತ್ತದೆ. ಇದು ದೇಶದಲ್ಲಿಯೇ ಈವರೆಗೆ ನೀಡಲಾದ ಇಷ್ಟು ದೊಡ್ಡ ಅವಕಾಶವಾಗಿದೆ ಮತ್ತು 6 ಕೋಕಿಂಗ್ ಕಲ್ಲಿದ್ದಲು ಗಣಿಗಳನ್ನು ಒಳಗೊಂಡಿದೆ. 37 ಸಂಪೂರ್ಣ ಪರಿಶೋಧಿತ ಗಣಿಗಳು ಮತ್ತು 30 ಭಾಗಶಃ ಪರಿಶೋಧಿತ ಕಲ್ಲಿದ್ದಲು ಗಣಿಗಳು ಇದರಲ್ಲಿವೆ.”ಎಂದು ಅವರು ತಿಳಿಸಿದರು.
ಈ ಗಣಿಗಳ ಹರಾಜು ಕಲ್ಲಿದ್ದಲು ಶ್ರೀಮಂತ ರಾಜ್ಯಗಳಿಗೆ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಶ್ರೀ ನಾಗರಾಜು ತಿಳಿಸಿ, ಪುನರ್ ನವೀಕರಿಸಬಹುದಾದ ಇಂಧನ ಮೂಲಗಳಿಗೆ ದೀರ್ಘಕಾಲದಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿರುವ ಸೂಕ್ತ ಸಮಯದಲ್ಲಿ ನೀಡಲಾಗುತ್ತಿರುವ ಈ ಗಣಿಗಳ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಸಂಭಾವ್ಯ ಹೂಡಿಕೆದಾರರಿಗೆ ಮನವಿ ಮಾಡಿದರು.
ಸಿಎಂಪಿಡಿಐಎಲ್ ಮತ್ತು ಡಬ್ಲ್ಯುಸಿಎಲ್ ಸಿಎಂಡಿ ಶ್ರೀ ಮನೋಜ್ ಕುಮಾರ್ ಈ ಕಂತಿನಲ್ಲಿ 67 ಕಲ್ಲಿದ್ದಲು ನಿಕ್ಷೇಪಗಳಿವೆ, ಈ ಪೈಕಿ 23 ಸಿಎಂಎಸ್ಪಿ ಮತ್ತು 44 ಎಂಎಂಡಿಆರ್ ನಿಕ್ಷೇಪಗಳಾಗಿವೆ ಎಂದು ಬಿಡ್ ದಾರರಿಗೆ ತಿಳಿಸಿದರು; ಇದರ ಬಳಿಕ ಸಿಎಂಪಿಡಿಐಎಲ್ ತಂಡದಿಂದ ಈ ಗಣಿಗಳ ಗುರುತಿಸುವಿಕೆಗಾಗಿ ತಾಂತ್ರಿಕ ಮಾನದಂಡಗಳನ್ನು ಪರಿಗಣಿಸುವ ಕುರಿತ ಸವಿವರವಾದ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ಎಸ್.ಬಿ.ಐ. ಬಂಡವಾಳ ಮಾರುಕಟ್ಟೆಯ ವಹಿವಾಟು ಸಲಹೆಗಾರ, ಉಪಾಧ್ಯಕ್ಷ ಶ್ರೀ ಶುಭಮ್ ಗೋಯಲ್ ಅವರು ಹರಾಜು ಪ್ರಕ್ರಿಯೆಯ ಷರತ್ತುಗಳು ಮತ್ತು ನಿಬಂಧನೆಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು ಮತ್ತು ಕಲ್ಲಿದ್ದಲು ಸಚಿವಾಲಯವು ಭಾರತೀಯ ಕಲ್ಲಿದ್ದಲು ವಲಯದಲ್ಲಿ ಆರ್ಥಿಕ ಪ್ರಯೋಜನಗಳನ್ನು ಮುಕ್ತಗೊಳಿಸಲು ಕೈಗೊಂಡಿರುವ ಉದಾರ ಕ್ರಮಗಳ ಬಗ್ಗೆ ಒತ್ತಿ ಹೇಳಿದರು.
ಕಲ್ಲಿದ್ದಲು ಸಚಿವಾಲಯದ ಡಿಡಿಜಿ ಶ್ರೀ ಸಂತೋಷ್, ಕಲ್ಲಿದ್ದಲು ಕ್ಷೇತ್ರದಲ್ಲಿ ಪಾರದರ್ಶಕತೆಯ ಯುಗಕ್ಕೆ ನಾಂದಿ ಹಾಡಲಿರುವ ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕ ಮತ್ತು ಮಾರುಕಟ್ಟೆ ವ್ಯವಸ್ಥೆ ಆಧಾರಿತ ದರದಲ್ಲಿನ ಬದಲಾವಣೆ ಮತ್ತು ಪಾವತಿಯ ಕುರಿತ ಪ್ರಾತ್ಯಕ್ಷಿಕೆ ನೀಡಿದರು.
ಎಫ್.ಐ.ಸಿ.ಸಿ.ಐ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ದಿಲೀಲ್ ಚೆನೋಯ್, ವಾಣಿಜ್ಯ ಕಲ್ಲಿದ್ದಲು ಗಣಿಗಳ ಎರಡನೇ ಕಂತಿನ ಹರಾಜು ಕಲ್ಲಿದ್ದಲು ಆಮದು ಮೇಲಿನ ಹೊರೆಯನ್ನು ತಗ್ಗಿಸಲು ಮತ್ತು ಕೈಗಾರಿಕೆಗಳ ವಿವಿಧ ವಲಯಗಳಿಗೆ ಕಲ್ಲಿದ್ದಲು ಲಭ್ಯತೆ ಹೆಚ್ಚಿಸುವ ಬದ್ಧತೆಯ ಈಡೇರಿಕೆ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು. ಹರಾಜಿನಲ್ಲಿ ಪಾಲ್ಗೊಳ್ಳುವವರು ಮತ್ತು ಸಂಭಾವ್ಯ ಬಿಡ್ ದಾರರಿಗೆ ಸಕ್ರಿಯವಾಗಿ ಪ್ರಸಕ್ತ ನಡೆದಿರುವ ಹರಾಜಿನಲ್ಲಿ ಭಾಗಿಯಾಗುವಂತೆ ಅವರು ಪ್ರೋತ್ಸಾಹಿಸಿದರು.
ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ವಿನೋದ್ ಕುಮಾರ್ ತಿವಾರಿ, ಅವರು ಎಲ್ಲ ಸಂಭಾವ್ಯ ಹೂಡಿಕೆದಾರರಿಗೆ ಮತ್ತು ಸಭೆಯಲ್ಲಿ ಭಾಗಿಯಾಗಿದ್ದವರಿಗೆ ಅವರ ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ಕೃತಜ್ಞತೆ ಅರ್ಪಿಸಿದರು ಮತ್ತು ಪರಿಸರ ಮತ್ತು ವನ್ಯಜೀವಿಗಳ ಮೇಲೆ ಕಡಿಮೆ ಪರಿಣಾಮ ಬೀರುವ, ಕನಿಷ್ಠ ಸ್ಥಳಾಂತರಿಸುವಿಕೆಯ ನಿರ್ಬಂಧಗಳನ್ನು ಹೊಂದಿರುವ ಮತ್ತು ಶೀಘ್ರ ಕಾರ್ಯಾನುಷ್ಠಾನ ಮಾಡಬಹುದಾದ ಹರಾಜಿಗೆ ಆ ಗಣಿಗಳನ್ನು ಆಯ್ಕೆ ಮಾಡಲು ಸಚಿವಾಲಯವು ಒತ್ತು ನೀಡಿರುವುದನ್ನು ಪುನರುಚ್ಚರಿಸಿದರು.
ಕಲ್ಲಿದ್ದಲು ಸಚಿವಾಲಯ 2021ರ ಜನವರಿಯಲ್ಲಿ ಆರಂಭಿಸಿರುವ ಏಕ ಗವಾಕ್ಷಿ ವಿಲೇವಾರಿ ಕುರಿತಂತೆ ಪಾಲ್ಗೊಂಡಿದ್ದವರಿಗೆ ಶ್ರೀ ತಿವಾರಿ ಮಾಹಿತಿ ನೀಡಿ, ಇದು ಗಣಿ ಮಾಲೀಕರು ಭರ್ತಿ ಮಾಡಿದ ಮಾಹಿತಿಯೊಂದಿಗೆ ಎಂ.ಓ.ಇ.ಎಫ್.ಸಿ.ಸಿ.ಯ ಪರಿವೇಶ್ ಪೋರ್ಟಲ್ ಸೇರಿದಂತೆ ಇತರ ಸಂಸ್ಥೆಗಳಿಗೆ ರವಾನಿಸಿ, ಗಣಿ ಯೋಜನೆಯ ಸಂಪೂರ್ಣ ಆನ್ ಲೈನ್ ಅನುಮೋದನೆಗೆ ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದರು. ಕಲ್ಲಿದ್ದಲು ಅಲ್ಪಾವಧಿಗೆ ಮಧ್ಯಮಾವಧಿಗೆ ದೃಢವಾದ ಬೇಡಿಕೆಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಸಂಭಾವ್ಯ ಬಿಡ್ ದಾರರು ತಮ್ಮ ಬಿಡ್ ಗಳನ್ನು ಸಲ್ಲಿಸುವಂತೆ ಮತ್ತು ನಡೆಯುತ್ತಿರುವ ಹರಾಜಿನಲ್ಲಿ ಗಣಿಗಳನ್ನು ಯಶಸ್ವಿಯಾಗಿ ಪಡೆದುಕೊಳ್ಳುವಂತೆ ಆಗ್ರಹಿಸಿದರು.
ಕಲ್ಲಿದ್ದಲು ವಾಣಿಜ್ಯ ಹರಾಜು ಪ್ರಕ್ರಿಯೆಗೆ ಕಳೆದ ವರ್ಷ 2020ರ ಜೂನ್ 18ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದ ತರುವಾಯ ಎಫ್.ಐ.ಸಿ.ಸಿ.ಐನೊಂದಿಗೆ ಕಲ್ಲಿದ್ದಲು ಸಚಿವಾಲಯ ಈ ಕಾರ್ಯಕ್ರಮ ಆಯೋಜಿಸಿದೆ. 19 ಕಲ್ಲಿದ್ದಲು ಗಣಿಗಳನ್ನು ಯಶಸ್ವಿಯಾಗಿ ಮೊದಲ ಕಂತಿನಲ್ಲಿ ಉತ್ಸಾಹಿ ಬಿಡ್ ದಾರರ ಪಾಲ್ಗೊಳ್ಳುವಿಕೆಯಲ್ಲಿ ಹರಾಜು ಮಾಡಲಾಗಿತ್ತು.
ಎರಡನೇ ಕಂತಿನ ಹರಾಜು ಪ್ರಕ್ರಿಯೆಗೆ ಕೇಂದ್ರ ಕಲ್ಲಿದ್ದಲು ಸಚಿವ ಶ್ರೀ ಪ್ರಹ್ಲಾದ ಜೋಶಿ ಮತ್ತು ನೀತಿ ಆಯೋಗದ ಸಿಇ.ಓ. ಶ್ರೀ ಅಮಿತಾಬ್ ಕಾಂತ್ ಅವರು 2021ರ ಮಾರ್ಚ್ 25ರಂದು ಎಸ್.ಬಿ.ಐ. ಬಂಡವಾಳ ಮಾರುಕಟ್ಟೆ ನಿಯಮಿತ ಆಯೋಜಿಸಿದ್ದ ಮತ್ತೊಂದು ಬೃಹತ್ ಬಾಧ್ಯಸ್ಥರ ಸಭೆಯಲ್ಲಿ ಔಪಚಾರಿಕವಾಗಿ ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳು, ಪ್ರಮುಖ ಗಣ್ಯರು ಮತ್ತು ಗಣಿ ವಲಯದ ಪ್ರವರ್ತಕರು, ಕೈಗಾರಿಕಾ ಸಂಘಟನೆಗಳ ಸಮ್ಮುಖದಲ್ಲಿ ಚಾಲನೆ ನೀಡಿದ್ದರು.
ಕಲ್ಲಿದ್ದಲಿನ ವಾಣಿಜ್ಯ ಗಣಿಗಾರಿಕೆಯು ಆತ್ಮನಿರ್ಭರ ಭಾರತದ ಆಕಾಂಕ್ಷೆಗಳನ್ನು ಜಗತ್ತಿನ ಅತ್ಯುತ್ತಮ ರೂಢಿಗಳೊಂದಿಗೆ ಪೂರೈಸುತ್ತದೆ, ಇದು ಕಲ್ಲಿದ್ದಲು ಮಾರುಕಟ್ಟೆಯ ಅಭಿವೃದ್ಧಿಗೆ ಕಾರಣವಾಗುತ್ತದೆ, ಅದರ ನೈಜ ಸಾಮರ್ಥ್ಯವನ್ನು ಸಾಕಾರಗೊಳಿಸುತ್ತದೆ, ದೇಶೀಯ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿಸುತ್ತದೆ.
2021ರ ಏಪ್ರಿಲ್ 26ರಂದು ನಡೆದ ಬಿಡ್ ಪೂರ್ವ ಸಭೆಯ ನಂತರ, ಸಂಭಾವ್ಯ ಬಿಡ್ ದಾರರನ್ನು ವ್ಯಾಪಕವಾಗಿ ತಲುಪಲು 20201ರ ಜೂನ್ 10 ಮತ್ತು 2021ರ ಜೂನ್ 15ರಂದು ಕಲ್ಲಿದ್ದಲು ಸಚಿವಾಲಯ ಎರಡು ಬಾಧ್ಯಸ್ಥರ ಸಮಾಲೋಚನಾ ಸರಣಿ ಆಯೋಜಿಸಿತ್ತು.
ಎರಡನೇ ಬಾಧ್ಯಸ್ಥರ ಸಮಾಲೋಚನೆ 2021ರ ಜೂನ್ 15ರಂದು ಅಂದರೆ ಇಂದು ವರ್ಚುವಲ್ ಮೂಲಕ ನಡೆಯಿತು, ಇದರಲ್ಲಿ ಕಲ್ಲಿದ್ದಲು, ಗಣಿಗಾರಿಕೆ ಮತ್ತು ಲೋಹ ವ್ಯಾಪಾರ, ಗಣಿ ಸಾಧನ ಸಲಕರಣೆ ತಯಾರಕರು, ಗಣಿ ಅಭಿವೃದ್ಧಿದಾರರು ಮತ್ತು ನಿರ್ವಹಣೆದಾರರು (ಎಂ.ಡಿ.ಓ.ಗಳು), ಬ್ಯಾಂಕ್ಗಳು, ಮತ್ತು ಹಣಕಾಸು ಸಂಸ್ಥೆಗಳು ಪಾಲ್ಗೊಂಡಿದ್ದವು.
2 ಹಂತದ ಹರಾಜು ಪ್ರಕ್ರಿಯೆಯು ಪಾರದರ್ಶಕವಾಗಿ ಆನ್ ಲೈನ್ ಮೂಲಕ ನಡೆಯುತ್ತದೆ. ಈ ಹರಾಜು ಪ್ರಕ್ರಿಯೆಯ ಪ್ರಮುಖ ಮುಖ್ಯಾಂಶಗಳು - ಮಾರುಕಟ್ಟೆ ಸಂಬಂಧಿತ ಕಾರ್ಯವಿಧಾನ, ಇದರಲ್ಲಿ ಬಿಡ್ಡಿಂಗ್ ಶೇಕಡಾವಾರು ಆದಾಯ ಹಂಚಿಕೆ, ರಾಷ್ಟ್ರೀಯ ಕಲ್ಲಿದ್ದಲು ಸೂಚ್ಯಂಕ ಸಂಬಂಧಿತ ಪಾವತಿಗಳು, ಮೊದಲಿನ ಕಲ್ಲಿದ್ದಲು ಗಣಿಗಾರಿಕೆಯ ಅನುಭವಕ್ಕೆ ಯಾವುದೇ ನಿರ್ಬಂಧವಿಲ್ಲದೆ ಸುಗಮ ಭಾಗವಹಿಸುವಿಕೆ, ಉತ್ತಮಗೊಳಿಸಿದ ಪಾವತಿ ಸ್ವರೂಪ, ಆರಂಭಿಕ ಉತ್ಪಾದನೆಗೆ ಪ್ರೋತ್ಸಾಹಕದ ಮೂಲಕ ದಕ್ಷತೆಯ ಉತ್ತೇಜನ ಮತ್ತು ಶುದ್ಧ ತಂತ್ರಜ್ಞಾನ, ಹೊಂದಿಕೊಳ್ಳುವ ಕಾರ್ಯಾಚರಣಾ ವಿಧಾನ ಇತ್ಯಾದಿಗಳ ಬಳಕೆಯಾಗಿದೆ.
ಈ ಹಂತದ ತರುವಾಯ, ಕಲ್ಲಿದ್ದಲು ಸಚಿವಾಲಯವು, ಕಲ್ಲಿದ್ದಲು ಗಣಿಗಳನ್ನು ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು, ಹೆಚ್ಚಿನ ಪಾರದರ್ಶಕತೆ ತರಲು, ಸಂಭಾವ್ಯ ಹೂಡಿಕೆದಾರರಿಗೆ ಉತ್ತಮ ಲಭ್ಯತೆಯ ಖಾತ್ರಿಪಡಿಸಲು ಹರಾಜು ವ್ಯವಸ್ಥೆಯನ್ನು ಜಾರಿ ಮಾಡುತ್ತದೆ ಮತ್ತು ರಾಷ್ಟ್ರದ ಇಂಧನ ಸುರಕ್ಷತೆಗಾಗಿ ಹೊಸ ಕಲ್ಲಿದ್ದಲು ಗಣಿಗಳನ್ನು ವೇಗವಾಗಿ ನಿರ್ವಹಿಸುವ ಕಾರ್ಯತಂತ್ರ ರೂಪಿಸುವ ಭಾರತ ಸರ್ಕಾರದ ಉದ್ದೇಶಕ್ಕೆ ಸಹಕಾರಿಯಾಗುತ್ತದೆ.
ಟೆಂಡರ್ ದಸ್ತಾವೇಜುಗಳ ಮಾರಾಟವು 2021ರ ಮಾರ್ಚ್ 25ರಿಂದ ಆರಂಭಗೊಂಡಿದ್ದು, ಬಿಡ್ ಕೊನೆಯ ದಿನಾಂಕ 2021ರ ಜೂನ್ 24 ಆಗಿರುತ್ತದೆ. ಗಣಿಗಳು, ಹರಾಜು ಷರತ್ತುಗಳು, ಕಾಲಮಿತಿ ಇತ್ಯಾದಿ ವಿವರಗಳನ್ನು ಈ ಕೆಳಗಿನ ಸಂಪರ್ಕದ ಮೂಲಕ ನೋಡಬಹುದು: https://www.mstcecommerce.com/auctionhome/coalblock/index.jsp
ಕೋವಿಡ್-19 ಲಾಕ್ ಡೌನ್ ಹಿಂತೆಗೆದುಕೊಂಡ ನಂತರ, ಕಲ್ಲಿದ್ದಲು ಸಚಿವಾಲಯವು ಕಲ್ಲಿದ್ದಲು ನಿಯಂತ್ರಕಗಳ ಸಂಘಟನೆಯೊಂದಿಗೆ ಸಂಭಾವ್ಯ ಬಿಡ್ದು ದಾರರಿಗೆ ಸ್ಥಳ ಭೇಟಿಯನ್ನು ಈ ವಾರದಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಭಾರತೀಯ ಕಲ್ಲಿದ್ದಲು ವಲಯದ ಸಂಭಾವ್ಯ ಬಿಡ್ಡುದಾರರು / ಹೂಡಿಕೆದಾರರು ಹರಾಜಿನಲ್ಲಿ ಯಶಸ್ವಿಯಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಎಲ್ಲ ರೀತಿಯ ನೆರವು ಖಾತರಿಪಡಿಸುತ್ತಿದೆ, ಬಿಡ್ ಕೊನೆ ದಿನಾಂಕ 2021 ಜೂನ್ 24 ಆಗಿದೆ. ಸಾಂಕ್ರಾಮಿಕದ ಸಮಯದಲ್ಲಿ ಸಹಕರಿಸಿದ ಎಲ್ಲಾ ಭಾದ್ಯಸ್ಥರಿಗೆ ಕಲ್ಲಿದ್ದಲು ಸಚಿವಾಲಯವು ಧನ್ಯವಾದ ಅರ್ಪಿಸಿದೆ ಮತ್ತು ಮುಂದಿನ ದಿನಗಳಲ್ಲಿ ಕಂಪನಿಗಳಿಂದ ಹೆಚ್ಚಿನ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತಿದೆ.
****
(Release ID: 1727459)
Visitor Counter : 185