ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ -19 ಲಸಿಕೆ ಇತ್ತೀಚಿನ ಮಾಹಿತಿ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 2.28 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಪೂರೈಕೆ
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 1.82 ಕೋಟಿಗೂ ಅಧಿಕ ಡೋಸ್ ಲಸಿಕೆ ಲಭ್ಯ
Posted On:
16 JUN 2021 11:34AM by PIB Bengaluru
ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದ ಭಾಗವಾಗಿ ಭಾರತ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ಪೂರೈಸುವ ಮೂಲಕ ಬೆಂಬಲ ನೀಡುತ್ತಿದೆ. ಇದರ ಜೊತೆಗೆ ಭಾರತ ಸರ್ಕಾರ ಲಸಿಕೆಯನ್ನು ನೇರವಾಗಿ ಖರೀದಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ನೀಡಿದೆ. ಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ನಡೆವಳಿಕೆ ಪಾಲನೆಯೊಂದಿಗೆ ಲಸಿಕೆಯು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಸ್ತಂಭವಾಗಿದೆ.
ಉದಾರೀಕೃತ ಮತ್ತು ತ್ವರಿತ ಮೂರನೇ ಹಂತದ ಕೋವಿಡ್ -19 ಲಸಿಕಾ ಅಭಿಯಾನದ ಅನುಷ್ಠಾನ 2021ರ ಮೇ 1ರಿಂದ ಆರಂಭಿಸಲಾಗಿದೆ.
ಈ ಕಾರ್ಯತಂತ್ರದ ಅಡಿಯಲ್ಲಿ ಪ್ರತಿ ತಿಂಗಳೂ ಕೇಂದ್ರೀಯ ಔಷಧ ಪ್ರಯೋಗಾಲಯ (ಸಿಡಿಎಲ್) ಅನುಮೋದಿಸುವ ಯಾವುದೇ ಉತ್ಪಾದಕರ ಒಟ್ಟು ಲಿಸಿಕಾ ಡೋಸ್ ಗಳ ಪೈಕಿ ಶೇ.50ರಷ್ಟನ್ನು ಕೇಂದ್ರ ಸರ್ಕಾರ ಖರೀದಿಸುತ್ತದೆ. ಈ ಡೋಸ್ ಗಳನ್ನು ಈ ಹಿಂದಿನಂತೆಯೇ ರಾಜ್ಯ ಸರ್ಕಾರಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ.
ಭಾರತ ಸರ್ಕಾರ ಈವರೆಗೆ ಉಚಿತ ಪ್ರವರ್ಗ ಮತ್ತು ರಾಜ್ಯಗಳೇ ನೇರವಾಗಿ ಖರೀದಿಸುವ ಪ್ರವರ್ಗದ ಅಡಿಯಲ್ಲಿ 27.28 ಕೋಟಿ ಲಸಿಕಾ ಡೋಸ್ ಗಳನ್ನು (27,28,31,900) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಿದೆ.
ಈ ಪೈಕಿ, ವ್ಯರ್ಥವಾಗಿರುವುದೂ ಸೇರಿದಂತೆ ಲಸಿಕಾ ಡೋಸ್ ಗಳ ಒಟ್ಟು ಬಳಕೆ 25,45,45,692 ಡೋಸ್ ಗಳಾಗಿದೆ (ಇಂದು ಬೆಳಗ್ಗೆ 8 ಗಂಟೆಯವರೆಗೆ ಲಭ್ಯವಿರುವ ಮಾಹಿತಿ ರೀತ್ಯ)
ಇನ್ನೂ 1.82 (1,82,86,208) ಕೋಟಿಗೂ ಅಧಿಕ ಕೋವಿಡ್ ಲಸಿಕೆ ಡೋಸ್ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಬಳಿ ಲಭ್ಯವಿದೆ.
***
(Release ID: 1727457)
Visitor Counter : 219
Read this release in:
Tamil
,
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Telugu
,
Malayalam