ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಲಸಿಕೆ ನೀಡಿಕೆಯ ಇಂದಿನ ಪರಿಷ್ಕೃತ ವರದಿ


ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 26.68 ಕೋಟಿಗಿಂತ ಹೆಚ್ಚಿನ ಕೋವಿಡ್ ಲಸಿಕಾ ಡೋಸ್ ನೀಡಿಕೆ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1.40 ಕೋಟಿಗಿಂತ ಹೆಚ್ಚಿನ ಲಸಿಕೆ ಡೋಸ್ ಲಭ್ಯ

Posted On: 14 JUN 2021 11:41AM by PIB Bengaluru

ದೇಶವ್ಯಾಪಿ ಹಮ್ಮಿಕೊಂಡಿರುವ ಬೃಹತ್ ಕೋವಿಡ್-19 ಲಸಿಕಾ ಆಂದೋಲನದಲ್ಲಿ ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆಯನ್ನು ಒದಗಿಸುತ್ತಾ ಬಂದಿದೆ. ಜತೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕಾ ತಯಾರಿಕಾ ಕಂಪನಿಗಳಿಂದ ನೇರವಾಗಿ ಖರೀದಿಸಲು ಭಾರತ ಸರ್ಕಾರ ಅನುವು ಮಾಡಿಕೊಟ್ಟಿದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ದೇಶದಲ್ಲಿ ನಿಯಂತ್ರಿಸಲು ಮತ್ತು ಸಮರ್ಥವಾಗಿ ನಿರ್ವಹಿಸಲು ಭಾರತ ಸರ್ಕಾರದ ಬೃಹತ್ ಲಸಿಕಾ ಆಂದೋಲನವು ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಆಧಾರ ಸ್ತಂಭವಾಗಿದೆ. ಜತೆಗೆ ಸರ್ಕಾರವು ಗಂಟಲು ದ್ರವ ಪರೀಕ್ಷೆ, ಸೋಂಕು ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ನಡವಳಿಕೆಗಳಿಗೆ ವಿಶೇಷ ಒತ್ತು ನೀಡಲಾಗಿದೆ.

ಉದಾರೀಕೃತ ಮತ್ತು ವೇಗವರ್ಧಿತ ಮೂರನೇ ಹಂತದ ಕಾರ್ಯತಂತ್ರ ಲಸಿಕಾ ಆಂದೋಲನ ಮೇ 1ರಿಂದ ದೇಶಾದ್ಯಂತ ಆರಂಭವಾಗಿದೆ.

ಕಾರ್ಯತಂತ್ರದ ಅಡಿ, ಕೇಂದ್ರೀಯ ಔಷಧ ಪ್ರಯೋಗಾಲಯವು ಪ್ರತಿ ತಿಂಗಳು ಅನುಮೋದಿಸುವ ಯಾವುದೇ ಔಷಧ ತಯಾರಿಕಾ ಕಂಪನಿಗಳ ಲಸಿಕೆಯ ಶೇಕಡ 50ರಷ್ಟು ಪ್ರಮಾಣವನ್ನು ಭಾರತ ಸರ್ಕಾರ ಖರೀದಿಸುತ್ತಿದೆ. ಲಸಿಕಾ ಡೋಸ್|ಗಳು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದಾಕಾಲವೂ ಲಭ್ಯವಾಗುವಂತೆ ವ್ಯವಸ್ಥೆ ರೂಪಿಸಲಾಗಿದೆ.

ದೇಶಾದ್ಯಂತ ಇದುವರೆಗೆ 26.68 ಕೋಟಿ(26,68,36,620)ಗಿಂತ ಹೆಚ್ಚಿನ ಲಸಿಕಾ ಡೋಸ್|ಗಳನ್ನು ನೀಡಲಾಗಿದ್ದು, ಭಾರತ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಮತ್ತು ನೇರ ಖರೀದಿ ಮಾರ್ಗಗಳ ಮೂಲಕ ಒದಗಿಸುತ್ತಿದೆ.

ಇದರಲ್ಲಿ ನಷ್ಟವಾದ ಪ್ರಮಾಣ ಸೇರಿದಂತೆ ಒಟ್ಟು 25,27,66,396 ಡೋಸ್ ಲಸಿಕೆ ಹಾಕಲಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾಗಿರುವ ಅಂಕಿಅಂಶ ಇದಾಗಿದೆ.

1.40 ಕೋಟಿಗಿಂತ(1,40,70,224) ಹೆಚ್ಚಿನ ಕೋವಿಡ್ ಲಸಿಕಾ ಡೋಸ್|ಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿವೆ.

ಎಲ್ಲಕ್ಕಿಂತ ಮುಖ್ಯವಾಗಿ, 96,490ಕ್ಕಿಂತ ಹೆಚ್ಚಿನ ಲಸಿಕೆ ಡೋಸ್|ಗಳು ಸದ್ಯದಲ್ಲೇ ಲಭ್ಯವಾಗಲಿದ್ದು, ಇನ್ನು 3 ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವೀಕರಿಸಲಿವೆ.

***



(Release ID: 1726947) Visitor Counter : 186