ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆಗೆ 700 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ 5 ಮೆಗಾಹರ್ಟ್ಸ್ ತರಂಗಗುಚ್ಛ ಹಂಚಿಕೆ

ರೈಲುಗಳ ಕಾರ್ಯಾಚರಣೆಯ ಸುರಕ್ಷತೆ ಮತ್ತು ಭದ್ರತೆಯ ಹೆಚ್ಚಳಕ್ಕೆ ಕ್ರಮ

ರೈಲ್ವೆ ಕಾರ್ಯಾಚರಣೆ ಮತ್ತು ಸುರಕ್ಷತೆಯಲ್ಲಿ ವ್ಯೂಹಾತ್ಮಕ ಬದಲಾವಣೆಗೆ ಹಾದಿ

ಲೋಕೋ ಪೈಲಟ್‌ಗಳು, ಗಾರ್ಡ್‌ಗಳ ನಡುವೆ ತಡೆರಹಿತ ಸಂವಹನ ಕಾಯ್ದುಕೊಳ್ಳುವ ಮೂಲಕ ಸುರಕ್ಷತೆ ಹೆಚ್ಚಳ

ಕಾರ್ಯಾಚರಣೆ, ಸುರಕ್ಷತೆ ಮತ್ತು ಭದ್ರತೆ ಉದ್ದೇಶಕ್ಕೆ ಬಳಕೆಗಾಗಿ ವಿಶ್ವಾಸಾರ್ಹ ಧ್ವನಿ, ವಿಡಿಯೊ ಮತ್ತು ಡೇಟಾ ಸಂವಹನ ಸೇವೆ ಒದಗಿಸುತ್ತದೆ

ಒಟ್ಟಾರೆ ಯೋಜನೆಗೆ ಅಂದಾಜು 25,000 ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಹೂಡಿಕೆ

5 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು

ಇದರ ಜೊತೆಗೆ, ರೈಲ್ವೆಯು ʻರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆʼಯನ್ನು ಅನುಮೋದಿಸಿದ್ದು, ಇದೊಂದು ದೇಶೀಯವಾಗಿ ತಯಾರಿಸಿದ ವ್ಯವಸ್ಥೆಯಾಗಿದೆ. ರೈಲುಗಳ ನಡುವಿನ ಡಿಕ್ಕಿಯನ್ನು ತಪ್ಪಿಸುವ ಮೂಲಕ ಇದು ಪ್ರಯಾಣಿಕರ ಸುರಕ್ಷತೆಯನ್ನು ಕಾಯ್ದುಕೊಳ್ಳುತ್ತದೆ

Posted On: 09 JUN 2021 3:29PM by PIB Bengaluru

'ಆತ್ಮನಿರ್ಭರ್ ಭಾರತ್' ಅಭಿಯಾನಕ್ಕೆ ಉತ್ತೇಜನ ನೀಡಿರುವ ಸರಕಾರ, ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಸಾರ್ವಜನಿಕ ಸುರಕ್ಷತೆ ಹಾಗೂ ಭದ್ರತಾ ಸೇವೆಗಳಿಗಾಗಿ ಭಾರತೀಯ ರೈಲ್ವೆಗೆ 700 ಮೆಗಾಹರ್ಟ್ಸ್ ತರಂಗಾಂತರ ಬ್ಯಾಂಡ್ನಲ್ಲಿ 5 ಮೆಗಾಹರ್ಟ್ಸ್ ತರಂಗಗುಚ್ಛವನ್ನು ಹಂಚಿಕೆ ಮಾಡಲು ಅನುಮೋದನೆ ನೀಡಿದೆ.

ತರಂಗಗುಚ್ಛದೊಂದಿಗೆ, ಭಾರತೀಯ ರೈಲ್ವೆಯು ತನ್ನ ಮಾರ್ಗದುದ್ದಕ್ಕೂ ʻಎಲ್ಟಿಇʼ (ದೀರ್ಘಕಾಲೀನ ವಿಕಾಸ) ಆಧಾರಿತ ʻಮೊಬೈಲ್ ರೈಲು ರೇಡಿಯೋ ಸಂವಹನʼವನ್ನು ಒದಗಿಸಲು ಉದ್ದೇಶಿಸಿದೆ. ಯೋಜನೆಗೆ ಅಂದಾಜು 25,000 ಕೋಟಿ ರೂ.ಗಿಂತಲೂ ಹೆಚ್ಚು ಹೂಡಿಕೆ ಮಾಡಲಾಗುವುದು. ಮುಂದಿನ 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.

ಇದರ ಜೊತೆಗೆ, ಭಾರತೀಯ ರೈಲ್ವೆಯು ʻಟಿಸಿಎಎಸ್ʼ (ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ) ಅನ್ನು ಅನುಮೋದಿಸಿದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಿದ ʻಎಟಿಪಿʼ (ಸ್ವಯಂಚಾಲಿತ ರೈಲು ರಕ್ಷಣೆ) ವ್ಯವಸ್ಥೆಯಾಗಿದೆ. ಇದು ರೈಲುಗಳ ನಡುವೆ ಡಿಕ್ಕಿ ತಪ್ಪಿಸಲು ಸಹಾಯ ಮಾಡುತ್ತದೆ. ಇದರಿಂದ ಅಪಘಾತಗಳು ಕಡಿಮೆಯಾಗುತ್ತವೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಇದು ಖಾತರಿಪಡಿಸುತ್ತದೆ

ಇದು ರೈಲ್ವೆಯ ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ವ್ಯೂಹಾತ್ಮಕ ಬದಲಾವಣೆಗೆ ಕಾರಣವಾಗಲಿದೆ. ಸುರಕ್ಷತೆಯನ್ನು ಸುಧಾರಿಸಲು ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಬಳಸಿಕೊಂಡು ಹೆಚ್ಚಿನ ರೈಲುಗಳ ಓಡಾಟಕ್ಕೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಮಾರ್ಗ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆಧುನಿಕ ರೈಲ್ವೆ ಜಾಲವು ಸಾರಿಗೆ ವೆಚ್ಚ ಇಳಿಕೆ ಮತ್ತು ಹೆಚ್ಚಿನ ದಕ್ಷತೆಗೆ ಕಾರಣವಾಗುತ್ತದೆ. ಅಲ್ಲದೆ, ಇದು 'ಮೇಕ್ ಇನ್ ಇಂಡಿಯಾ' ಅಭಿಯಾನದ ಅಂಗವಾಗಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಮತ್ತು ಉದ್ಯೋಗ ಸೃಷ್ಟಿಸಲು ಬಹುರಾಷ್ಟ್ರೀಯ ಉದ್ಯಮಗಳನ್ನು ಆಕರ್ಷಿಸುತ್ತದೆ.

ಕಾರ್ಯಾಚರಣೆ, ಸುರಕ್ಷತೆ ಮತ್ತು ಭದ್ರತಾ ಉದ್ದೇಶಕ್ಕೆ ಬಳಸಲು ಸುರಕ್ಷಿತ ಮತ್ತು ವಿಶ್ವಾಸಾರ್ಹ ಧ್ವನಿ, ವೀಡಿಯೊ ಮತ್ತು ಡೇಟಾ ಸಂವಹನ ಸೇವೆಗಳನ್ನು ಒದಗಿಸುವುದು ಭಾರತೀಯ ರೈಲ್ವೆಗೆ ʻಎಲ್ಟಿಇʼ ವ್ಯವಸ್ಥೆಯ ಉದ್ದೇಶವಾಗಿದೆ. ಇದನ್ನು ಆಧುನಿಕ ಸಿಗ್ನಲಿಂಗ್ ಮತ್ತು ರೈಲು ರಕ್ಷಣಾ ವ್ಯವಸ್ಥೆಗಳಿಗೆ ಬಳಸಲಾಗುತ್ತದೆ. ಲೋಕೋ ಪೈಲಟ್ಗಳು ಮತ್ತು ಗಾರ್ಡ್ಗಳ ನಡುವೆ ತಡೆರಹಿತ ಸಂವಹನವನ್ನು ಇದು ಖಚಿತಪಡಿಸುತ್ತದೆ. ಇದು ದಕ್ಷ, ಸುರಕ್ಷಿತ ಮತ್ತು ವೇಗದ ರೈಲು ಕಾರ್ಯಾಚರಣೆಗಳಿಗಾಗಿ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಆಧಾರಿತ ರಿಮೋಟ್ ಅಸೆಟ್ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅದರಲ್ಲೂ ವಿಶೇಷವಾಗಿ ಬೋಗಿಗಳು, ವ್ಯಾಗನ್ಗಳು ಮತ್ತು ಲೋಕೋಗಳು, ರೈಲು ಬೋಗಿಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಲೈವ್ ವೀಡಿಯೊ ಫೀಡ್ಗಳ ಮೇಲ್ವಿಚಾರಣೆಗೆ ಅವಕಾಶ ಒದಗಿಸುತ್ತದೆ.

ರಾಯಧನಕ್ಕೆ ದೂರ ಸಂಪರ್ಕ ಇಲಾಖೆಯು ನಿಗದಿಪಡಿಸಿರುವ ಸೂತ್ರದ ಆಧಾರದ ಮೇಲೆ ತರಂಗಗುಚ್ಛ ಶುಲ್ಕವನ್ನು ವಿಧಿಸಬಹುದು ಮತ್ತು ಬಂಡವಾಳ ಉದ್ದೇಶದ ಬಳಕೆಗಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಶಿಫಾರಸು ಮಾಡಿರುವಂತೆ ಲೈಸೆನ್ಸ್ಶುಲ್ಕವನ್ನು ವಿಧಿಸಬಹುದು.

***(Release ID: 1725653) Visitor Counter : 125