ಭೂವಿಜ್ಞಾನ ಸಚಿವಾಲಯ

ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ ಮತ್ತು ತೆಲಂಗಾಣದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಬೀಸುವ ಸಾಧ್ಯತೆಯಿದೆ

Posted On: 04 JUN 2021 1:11PM by PIB Bengaluru

ಭಾರತ ಹವಾಮಾನ ಇಲಾಖೆಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ (ಐಎಂಡಿ) ಪ್ರಕಾರ:

ಅಖಿಲ ಭಾರತ ಹವಾಮಾನ ಮುನ್ಸೂಚನಾ ಪ್ರಕಟಣೆ

04 ಜೂನ್ (ದಿನ 1):

  •  ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯ ಪ್ರದೇಶ ಮತ್ತು ತೆಲಂಗಾಣದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ (ಗಾಳಿಯ ವೇಗ ಗಂಟೆಗೆ 30-40 ಕಿ.ಮೀ. ವರೆಗೆ) ಸಾಧ್ಯತೆಯಿದೆ; ಜಮ್ಮು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪೂರ್ವ ಮಧ್ಯಪ್ರದೇಶ, ವಿದರ್ಭ, ಛತ್ತೀಸ್ ಗಢ, ಒಡಿಶಾ, ಗುಜರಾತ್ ರಾಜ್ಯಗಳು, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂ, ರಾಯಲಸೀಮ, ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ ಮತ್ತು ಕೇರಳ ಹಾಗೂ ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಅಲ್ಲಲ್ಲಿ ಮಿಂಚು ಕಂಡುಬರುವ ಸಾಧ್ಯತೆಯಿದೆ.
  • ಗುಡುಗು/ಮಿಂಚಿನಿಂದ ಕೂಡಿದ ಧೂಳಿನ ಮಾರುತ ಮತ್ತು ಬಿರುಗಾಳಿ (ಗಾಳಿಯ ವೇಗ ಗಂಟೆಗೆ 30-40 ಕಿ.ಮೀ.ವರೆಗೆ)
  • ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಮಧ್ಯಮಹಾರಾಷ್ಟ್ರ, ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಮ್, ತೆಲಂಗಾಣ, ರಾಯಲಸೀಮ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತಮಿಳುನಾಡು, ಪುದುಚೇರಿ ಮತ್ತು ಕರೈಕಲ್‌, ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ ಸಾಧ್ಯತೆ.
  • ನೈರುತ್ಯ ಮತ್ತು ಪಶ್ಚಿಮ ಮಧ್ಯ ಅರಬ್ಬಿ ಸಮುದ್ರದಲ್ಲಿ ಬಿರುಸಿನ ಗಾಳಿ (ವೇಗ ಗಂಟೆಗೆ 40-50 ಕಿ.ಮೀ.ವರೆಗೆ; ರಭಸ ಗಂಟೆಗೆ 60 ಕಿ.ಮೀ. ವರೆಗೆ) ಬೀಸುವ ಹೆಚ್ಚಿನ ಸಾಧ್ಯತೆ; ಲಕ್ಷದ್ವೀಪಪ್ರದೇಶ, ಕೇರಳ ಕರಾವಳಿಯ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಗಂಟೆಗೆ  40-50 ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಲಾಗಿದೆ.

05 ಜೂನ್ (ದಿನ2):

  •  ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿಗುಡುಗು-ಮಿಂಚು ಸಹಿತ ಮಳೆ ಮತ್ತು ಬಿರುಗಾಳಿ (ವೇಗ ಗಂಟೆಗೆ 30-40 ಕಿ.ಮೀ. ವರೆಗೆ) ಸಾಧ್ಯತೆ; ಮಧ್ಯ ಪ್ರದೇಶ, ವಿದರ್ಭ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಗುಜರಾತ್ ರಾಜ್ಯಗಳು; ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕೊಂಕಣ ಮತ್ತು ಗೋವಾ, ಆಂಧ್ರ ಪ್ರದೇಶ ಕರಾವಳಿ ಮತ್ತು ಯಾನಮ್, ತೆಲಂಗಾಣ, ರಾಯಲಸೀಮ, ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌, ಕೇರಳ ಮತ್ತು ಮಾಹೆಯಲ್ಲಿ  ಮಿಂಚಿನೊಂದಿಗೆ ಮಳೆ ಸಾಧ್ಯತೆ.
  • ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಕೊಂಕಣ ಮತ್ತು ಗೋವಾ, ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌, ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ ಸಾಧ್ಯತೆ.
  • ನೈರುತ್ಯ ಮತ್ತು ಪಶ್ಚಿಮ ಮಧ್ಯ ಅರಬ್ಬಿ ಸಮುದ್ರದ ಮೇಲೆ ಬಿರುಗಾಳಿ (ಗಾಳಿಯ ವೇಗ ಗಂಟೆಗೆ 40-50 ಕಿ.ಮೀ.ವರೆಗೆ; ರಭಸ ಗಂಟೆಗೆ 60 ಕಿ.ಮೀ.ವರೆಗೆ) ಸಾಧ್ಯತೆ ಮತ್ತು ಲಕ್ಷ ದ್ವೀಪ ಪ್ರದೇಶ, ಕೇರಳ ತೀರದ ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಲಾಗಿದೆ.

06 ಜೂನ್ (ದಿನ 3):

  • ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಗುಜರಾತ್ ರಾಜ್ಯ, ತೆಲಂಗಾಣ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌, ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚಿನೊಂದಿಗೆ ಗುಡುಗು ಸಹಿತ ಮಳೆ ಸಾಧ್ಯತೆ.
  • ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಭಾರಿ ಮಳೆ ಸಾಧ್ಯತೆ.
  • ನೈರುತ್ಯ ಮತ್ತು ಪಶ್ಚಿಮ ಮಧ್ಯ ಅರಬ್ಬಿ ಸಮುದ್ರದ ಮೇಲೆ ಬಿರುಸಿನ ಗಾಳಿ (ಗಾಳಿಯ ವೇಗ ಗಂಟೆಗೆ 40-50 ಕಿ.ಮೀ.ವರೆಗೆ; ರಭಸ ಗಂಟೆಗೆ 60 ಕಿ.ಮೀ.ವರೆಗೆ) ಬೀಸುವ ಸಾಧ್ಯತೆಯಿದ್ದು, ಮೀನುಗಾರರು ಈ ಪ್ರದೇಶಗಳಿಗೆ ಹೋಗದಂತೆ ಸಲಹೆ ನೀಡಲಾಗಿದೆ.

07 ಜೂನ್ (ದಿನ 4):

  • ಉತ್ತರಾಖಂಡ, ಮಧ್ಯಪ್ರದೇಶ, ವಿದರ್ಭ, ಛತ್ತೀಸಗಢ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ,  
          ಒಡಿಶಾ, ಅಂಡಮಾನ್
    ಮತ್ತು ನಿಕೋಬಾರ್ ದ್ವೀಪಗಳು, ಗುಜರಾತ್ ರಾಜ್ಯ,  ತೆಲಂಗಾಣ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌, ಕೇರಳ ಮತ್ತು ಮಾಹೆಯಲ್ಲಿ ಗುಡುಗು ಮಿಂಚು ಸಮೇತ ಭಾರಿ ಮಳೆ ಸಾಧ್ಯತೆ.
  • ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರತ್ಯೇಕಸ್ಥಳಗಳಲ್ಲಿ ಭಾರಿ ಮಳೆ ಸಾಧ್ಯತೆ.
  • ನೈಋತ್ಯ ಮತ್ತು ಪಶ್ಚಿಮ ಮಧ್ಯ ಅರಬ್ಬಿ ಸಮುದ್ರದ ಮೇಲೆ ಬಿರುಗಾಳಿ (ವೇಗ ಗಂಟೆಗೆ 40-50 ಕಿ.ಮೀ. ವರೆಗೆ; ರಭಸ ಗಂಟೆಗೆ 60 ಕಿ.ಮೀ. ವರೆಗೆ) ಬೀಸುವ ಸಾಧ್ಯತೆ ಇದೆ. ಮೀನುಗಾರರು ಈ ಪ್ರದೇಶಗಳಿಗೆ ಹೋಗದಂತೆ ಸಲಹೆ ನೀಡಲಾಗಿದೆ.

08 ಜೂನ್ (ದಿನ 5):

  • ಛತ್ತೀಸಗಢ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗುಜರಾತ್ ರಾಜ್ಯ, ತೆಲಂಗಾಣ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ ಮತ್ತು ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು-ಮಿಂಚು ಸಮೇತ ಭಾರಿ ಮಳೆ ಸಾಧ್ಯತೆ.
  • ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅಸ್ಸಾಂ ಮತ್ತು ಮೇಘಾಲಯದ  ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ ಸಾಧ್ಯತೆ.
  • ನೈಋತ್ಯ ಮತ್ತು ಪಶ್ಚಿಮ ಮಧ್ಯ ಅರಬ್ಬಿ ಸಮುದ್ರದ ಮೇಲೆ ಬಿರುಗಾಳಿ (ವೇಗ ಗಂಟೆಗೆ 40-50 ಕಿ.ಮೀ. ವರೆಗೆ; ರಭಸ ಗಂಟೆಗೆ 60 ಕಿ.ಮೀ. ವರೆಗೆ) ಬೀಸುವ ಸಾಧ್ಯತೆ ಇದೆ. ಮೀನುಗಾರರು ಈ ಪ್ರದೇಶಗಳಿಗೆ ಹೋಗದಂತೆ ಸಲಹೆ ನೀಡಲಾಗಿದೆ.

(ಗ್ರಾಫಿಕ್ಸ್‌ನಲ್ಲಿ ವಿವರಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ನಿರ್ದಿಷ್ಟ ಸ್ಥಳ ಕುರಿತಾದ ಮುನ್ಸೂಚನೆ ಮತ್ತು ಎಚ್ಚರಿಕೆಗಾಗಿ ದಯವಿಟ್ಟು MAUSAM ಆ್ಯಪ್ ಡೌನ್‌ಲೋಡ್‌ ಮಾಡಿ. ಕೃಷಿಹವಾಮಾನ ಸಲಹೆಗಾಗಿ MEGHDOOT  ಆ್ಯಪ್ ಮತ್ತು ಮಿಂಚಿನ ಎಚ್ಚರಿಕೆಗಾಗಿ DAMINI  ಆ್ಯಪ್ ಹಾಗೂ ಜಿಲ್ಲಾವಾರು ಎಚ್ಚರಿಕೆಗಾಗಿ ರಾಜ್ಯ ಎಂಸಿ /ಆರ್‌ಎಂಸಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.

***


(Release ID: 1724445) Visitor Counter : 191


Read this release in: English , Urdu , Hindi