ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಔಷಧಗಳ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆಗಾಗಿ ಕಾರ್ಯಾಚರಣೆಯ ಮಾರ್ಗಸೂಚಿ ಹೊರಡಿಸಿದ ಸರ್ಕಾರ


ಕೈಗಾರಿಕೆಗಳಿಗೆ ಅರ್ಜಿಗಳ ಆಹ್ವಾನ

Posted On: 01 JUN 2021 5:19PM by PIB Bengaluru

ಔಷಧ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಭಾರತದ ಔಷಧ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ವಲಯದಲ್ಲಿ ಹೆಚ್ಚಿನ ಮೌಲ್ಯದ ಸರಕುಗಳಿಗೆ ಉತ್ಪನ್ನ ವೈವಿಧ್ಯದ ಕೊಡುಗೆ ನೀಡುವ ಉದ್ದೇಶದಿಂದ, ಔಷಧ ಇಲಾಖೆ ಔಷಧ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ (ಪಿ.ಎಲ್.) ಯೋಜನೆಗೆ'' ಸಂ.31026/60/2020-ನೀತಿ-ಡಿಒಪಿ ಮಾರ್ಚ್ 3, 2021 ರೀತ್ಯ ಗೆಜೆಟ್ ಅಧಿಸೂಚನೆ ಹೊರಡಿಸಿದೆಅನುಮೋದಿತ ಯೋಜನೆಯ ಮೊತ್ತ 15,000 ಕೋಟಿ ರೂ. ಆಗಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗಾತ್ರ ಮತ್ತು ಪ್ರಮಾಣದಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿರುವ ಮತ್ತು ಮೂಲಕ ಜಾಗತಿಕ ಮೌಲ್ಯ ಸರಪಳಿಗಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿರುವ ಭಾರತದಿಂದ ಜಾಗತಿಕ ಚಾಂಪಿಯನ್ಗಳನ್ನು ರೂಪಿಸಲು ಯೋಜನೆಯು ಉದ್ದೇಶಿಸಿದೆ. ಔಷಧ ಉದ್ಯಮ ಮತ್ತು ಸರ್ಕಾರದ ಬಾಧ್ಯಸ್ಥರೊಂದಿಗಿನ ಸರಣಿ ಸಮಾಲೋಚನೆಗಳ ಆಧಾರದ ಮೇಲೆ, ಯೋಜನೆಯ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಜೂನ್ 1ರಂದು ಹೊರಡಿಸಲಾಗಿದೆ. ಯೋಜನೆ ಈಗ ಕೈಗಾರಿಕೆಗಳಿಂದ ಅರ್ಜಿ ಸಲ್ಲಿಕೆಗೆ ಮುಕ್ತವಾಗಿದೆ. ಅರ್ಜಿದಾರರ 2019-20 ಆರ್ಥಿಕ ವರ್ಷದ ಜಾಗತಿಕ ಉತ್ಪಾದನಾ ಆದಾಯದ ಆಧಾರದ ಮೇಲೆ ಮೂರು ಗುಂಪುಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆಎಂ.ಎಸ್‌.ಎಂ..ಗಳಿಗಾಗಿ ವಿಶೇಷ ಸ್ವರೂಪವನ್ನು ಯೋಜನೆಯಡಿ ಮಾಡಲಾಗಿದೆ. ಎಲ್ಲಾ ಅರ್ಜಿಗಳನ್ನು ಯೋಜನಾ ನಿರ್ವಹಣಾ ಸಂಸ್ಥೆ ಎಸ್‌..ಡಿ.ಬಿ. (ಸಿಡ್ಬಿ) ನಿರ್ವಹಿಸುವ ಆನ್ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದು, ಅದರ ವಿಳಾಸ https://pli-pharma.udyamimitra.in. ಅರ್ಜಿಯ ವಿಂಡೋ ಜೂನ್ 2, 2021ರಿಂದ 31 ಜುಲೈ 2021ರವರೆಗೆ ( ಎರಡು ದಿನಗಳೂ ಸೇರಿ) 60 ದಿನಗಳವರೆಗೆ ತೆರೆದಿರುತ್ತದೆ. ಅರ್ಹ ಉತ್ಪನ್ನಗಳನ್ನು ಮೂರು ಪ್ರವರ್ಗಗಳಾಗಿ ವರ್ಗೀಕರಿಸಲಾಗುತ್ತದೆ. ಯೋಜನೆಯ ವ್ಯಾಪ್ತಿಗೆ ಬರುವ ಉತ್ಪನ್ನಗಳು, ಸೂತ್ರೀಕರಣಗಳು, ಜೈವಿಕ ಔಷಧಗಳು, ಸಕ್ರಿಯ ಔಷಧ ಪದಾರ್ಥಗಳು, ಪ್ರಮುಖ ಆರಂಭಿಕ ವಸ್ತುಗಳು, ಔಷಧ ಮಧ್ಯವರ್ತಿಗಳು, ಇನ್-ವಿಟ್ರೊ ರೋಗಪತ್ತೆ ವೈದ್ಯಕೀಯ ಸಾಧನಗಳು, ಇತ್ಯಾದಿ ಸೇರಿವೆಪ್ರವರ್ಗ -1 ಮತ್ತು ಪ್ರವರ್ಗ 2 ಉತ್ಪನ್ನಗಳು ಶೇ.10ರಷ್ಟು ಪ್ರೋತ್ಸಾಹಕ ಮತ್ತು ಪ್ರವರ್ಗ3 ಉತ್ಪನ್ನಗಳು ಶೇ.5 ಪ್ರೋತ್ಸಾಹಕಗಳನ್ನು ಕ್ರಮೇಣ ಹೆಚ್ಚುವ ಮಾರಾಟದ ಮೇಲೆ ಪಡೆಯಲಿವೆ. ಉತ್ಪನ್ನದ ಕ್ರಮೇಣ ಹೆಚ್ಚುವ ಮಾರಾಟ ಅಂದರೆ 2019-2020ನೇ ಸಾಲಿನಲ್ಲಿ ಉತ್ಪನ್ನದ ಮಾರಾಟಕ್ಕಿಂತ ಮತ್ತೊಂದು ವರ್ಷದಲ್ಲಿನ ಉತ್ಪನ್ನದ ಹೆಚ್ಚು ಮತ್ತು ಅದಕ್ಕಂತ ಅಧಿಕ ಮಾರಾಟ ಎಂದಾಗುತ್ತದೆ. ಮಾರ್ಗಸೂಚಿಗಳಲ್ಲಿ ನೀಡಲಾಗಿರುವ ಆಯ್ಕೆ ಮಾನದಂಡಗಳನ್ನು ಆಧರಿಸಿ, ಯೋಜನೆಯಡಿ ಗರಿಷ್ಠ 55 ಅರ್ಜಿದಾರರನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿದಾರರು, ಒಂದೇ ಅರ್ಜಿಯ ಮೂಲಕ, ಒಂದಕ್ಕಿಂತ ಹೆಚ್ಚು ಉತ್ಪನ್ನಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿದಾರರು ಅನ್ವಯಿಸುವ ಉತ್ಪನ್ನಗಳು ಯಾವುದೇ ಮೂರು ವಿಭಾಗಗಳಲ್ಲಿರಬಹುದು. ಅರ್ಜಿದಾರರು ಯೋಜನೆಯ ಪ್ರಕಾರ ನಿಗದಿಪಡಿಸಿದಂತೆ 5 ವರ್ಷಗಳ ಅವಧಿಯಲ್ಲಿ ವರ್ಷಕ್ಕೆ ಕನಿಷ್ಠ ಸಂಚಿತ ಹೂಡಿಕೆಯನ್ನು ಸಾಧಿಸಬೇಕಾಗುತ್ತದೆ. ಹೂಡಿಕೆಯು ಹೊಸ ಸ್ಥಾವರ ಮತ್ತು ಯಂತ್ರೋಪಕರಣಗಳು, ಉಪಕರಣಗಳು ಮತ್ತು ಸಂಬಂಧಿತ ಸೌಲಭ್ಯಗಳು, ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನದ ವರ್ಗಾವಣೆ, ಉತ್ಪನ್ನದ ನೋಂದಣಿ ಮತ್ತು ಸ್ಥಾವರ ಹಾಗೂ ಯಂತ್ರೋಪಕರಣಗಳನ್ನು ಸ್ಥಾಪಿಸಿದ ಕಟ್ಟಡದ ವೆಚ್ಚವಾಗಿರಬಹುದು. 2020 ಏಪ್ರಿಲ್ 01 ರಂದು ಅಥವಾ ನಂತರ ಮಾಡಿದ ಹೂಡಿಕೆಯನ್ನು ಯೋಜನೆಯಡಿ ಅರ್ಹ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ.

ತದನಂತರ, ಆಯ್ದ ಉತ್ಪಾದಕರು 6 ವರ್ಷಗಳ ಅವಧಿಗೆ ಔಷಧ ಉತ್ಪನ್ನಗಳ ಹೆಚ್ಚುತ್ತಿರುವ ಮಾರಾಟದ ಆಧಾರದ ಮೇಲೆ ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಭಾಗಿಯಾಗಿ ಆಯ್ಕೆಯಾದವರು ಯೋಜನೆಯ ಅವಧಿಯಲ್ಲಿ ಅದರ ಗುಂಪಿಗೆ ಅವಲಂಬಿತವಾಗಿ ಅನುಕ್ರಮವಾಗಿ ಗರಿಷ್ಠ 1000 ಕೋಟಿ ರೂ., 250 ಕೋಟಿ ರೂ. ಮತ್ತು 50 ಕೋಟಿ ರೂ. ಪಡೆಯಬಹುದಾಗಿರುತ್ತದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಹೆಚ್ಚುವರಿ ಪ್ರೋತ್ಸಾಹಕವೂ ಲಭ್ಯವಿರುತ್ತದೆ ಆದರೆ ಕೆಲವು ಷರತ್ತುಗಳು ಅನ್ವಯವಾಗುತ್ತದೆ. ಯಾವುದೇ ಸಂದರ್ಭದಲ್ಲಿ, ಹೆಚ್ಚುವರಿ ಆವಿಷ್ಕಾರ ಸೇರಿದಂತೆ ಒಟ್ಟು ಪ್ರೋತ್ಸಾಹಕವು ಯೋಜನೆಯ ಅವಧಿಯಲ್ಲಿ ಮೂರು ಗುಂಪುಗಳಿಗೆ ಕ್ರಮವಾಗಿ 1200 ಕೋಟಿ ರೂ., 300 ಕೋಟಿ ರೂ. ಮತ್ತು ಭಾಗವಹಿಸಿ ಆಯ್ಕೆಯಾದವರಿಗೆ 60 ಕೋಟಿ ರೂ.ಗಿಂತ ಅಧಿಕವಾಗಿರುತ್ತದೆ.

ಕಾರ್ಯದರ್ಶಿಗಳ ಅಧಿಕಾರಯುತ ಗುಂಪು, ಭಾರತ ಸರ್ಕಾರದ ಇತರ ಪಿಎಲ್.. ಯೋಜನೆಗಳೊಂದಿಗೆ ಯೋಜನೆಯ ಸುಗಮ ಅನುಷ್ಠಾನದ ಖಾತ್ರಿಗಾಗಿ ಯೋಜನೆ ಕುರಿತಂತೆ ನಿಗದಿತ ಕಾಲಮಿತಿಯಲ್ಲಿ ಪರಿಶೀಲನೆ ನಡೆಸುತ್ತದೆ. ತಾಂತ್ರಿಕ ಸಮಿತಿಯು ಯೋಜನೆಯ ಅನುಷ್ಠಾನದ ಸಮಯದಲ್ಲಿ ಉದ್ಭವಿಸುವ ಎಲ್ಲ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಇಲಾಖೆಗೆ ನೆರವಾಗುತ್ತದೆ. ಯೋಜನಾ ನಿರ್ವಹಣಾ ಸಂಸ್ಥೆ ಸಿಡ್ಬಿಯನ್ನು ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಇದು ಯೋಜನೆಯ ಅನುಷ್ಠಾನಕ್ಕೆ ಜವಾಬ್ದಾರಿಯಾಗಿದ್ದು, ಆನ್ ಲೈನ್ ಅರ್ಜಿಗಳು, ಅರ್ಜಿದಾರರ ಆಯ್ಕೆ, ಹೂಡಿಕೆಯ ಪರಿಶೀಲನೆ, ಮಾರಾಟ ಮತ್ತು ಪ್ರೋತ್ಸಾಹಕದ ವಿತರಣೆ ಸೇರಿದಂತೆ ಎಲ್ಲ ವಿಚಾರಗಳಲ್ಲಿ ಕೈಗಾರಿಕೆಗಳೊಂದಿಗೆ ಸಂಪರ್ಕ ಹೊಂದಿರುತ್ತದೆ.

ಔಷಧ ಮತ್ತು ಇನ್ ವಿಟ್ರೋ ಡಯಾಗ್ನಾಸ್ಟಿಕ್ ಕೈಗಾರಿಕೆಗಳು ಯೋಜನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು ಮತ್ತು ವಲಯವನ್ನು ಮತ್ತಷ್ಟು ಬಲವರ್ಧಿಸಲು ಕೊಡುಗೆ ನೀಡಬೇಕು ಎಂದು ನಿರೀಕ್ಷಿಸಲಾಗುತ್ತದೆ.

***



(Release ID: 1723523) Visitor Counter : 231