ಭೂವಿಜ್ಞಾನ ಸಚಿವಾಲಯ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಮೇತ ಚಂಡಮಾರುತದ ಬಿರುಮಳೆ; ಮೇ 22 ರಂದು ಪೂರ್ವ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿಯ ಅತೀವ ಸಾಧ್ಯತೆ


ಮೇ 22 ರಂದು ಪಶ್ಚಿಮ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು- ಬಿರುಗಾಳಿ / ಧೂಳಿನ ಚಂಡಮಾರುತದ (ಗಾಳಿಯ ವೇಗ 50-60 ಕಿ.ಮೀ ವರೆಗೆ) ಹೆಚ್ಚಿನ ಸಾಧ್ಯತೆ

ಮೇ 23 ರಂದು ಅಂಡಮಾನ್ ನಿಕೋಬಾರ್ ದ್ವೀಪಗಳು, ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಅತೀವ ಸಾಧ್ಯತೆಯಿದೆ

Posted On: 22 MAY 2021 3:56PM by PIB Bengaluru

22 ಮೇ (ದಿನ 1):

♦ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯೊಂದಿಗೆ ಮಿಂಚು ಮತ್ತು ಬಿರುಗಾಳಿ (ವೇಗ ಗಂಟೆಗೆ 50-60 ಕಿ.ಮೀ.ವರೆಗೆ; ರಭಸ ಗಂಟೆಗೆ 70 ಕಿ.ಮೀವರೆಗೆ) ಬೀಸುವ ಸಾಧ್ಯತೆ ಬಹಳವಾಗಿದೆ; ಪೂರ್ವ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿಯ (ವೇಗ ಗಂಟೆಗೆ 40-50 ಕಿ.ಮೀ ವರೆಗೆ) ಹೆಚ್ಚಿನ ಸಾಧ್ಯತೆಯಿದೆ; ಪಶ್ಚಿಮ ಬಂಗಾಳದ ಗಂಗಾನದಿಯ ಜಲಾನಯನ ಪ್ರದೇಶ, ಆಂಧ್ರ ಪ್ರದೇಶದ ಕರಾವಳಿ ಮತ್ತು ಯಾನಂ, ತೆಲಂಗಾಣ, ರಾಯಲಸೀಮ ಮತ್ತು ಕೇರಳ ಮತ್ತು ಮಾಹೆಯಲ್ಲಿ ಚದುರಿದಂತೆ ಗುಡುಗು-ಮಿಂಚು ಮತ್ತು ಬಿರುಗಾಳಿಯ (ಗಂಟೆಗೆ 30-40 ಕಿ.ಮೀ.ವರೆಗೆ ವೇಗ) ಹೆಚ್ಚಿನ ಸಾಧ್ಯತೆ ಮತ್ತು ವಿದರ್ಭ, ಛತ್ತೀಸ್‌ಗಢ, ಒಡಿಶಾ, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಮತ್ತು ಲಕ್ಷದ್ವೀಪಗಳ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಾಧ್ಯತೆ.

  • ಪಶ್ಚಿಮ ರಾಜಸ್ಥಾನದ ಪ್ರತ್ಯೇಕ ಕಡೆಗಳಲ್ಲಿ ಚದುರಿದಂತೆ ಮಿಂಚು ಗುಡುಗಿನ ಸಮೇತ ಬಿರುಗಾಳಿ / ಧೂಳಿನ ಚಂಡಮಾರುತದ (ಗಾಳಿಯ ವೇಗ ಗಂಟೆಗೆ 50-60 ಕಿ.ಮೀ.ವರೆಗೆ) ಅತೀವ ಸಾಧ್ಯತೆ.
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿಯಿಂದ ಅತ್ಯಂತ ಭಾರಿ ಮಳೆ ಸಾಧ್ಯತೆ ಮತ್ತು ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಆಂಧ್ರ ಪ್ರದೇಶ ಕರಾವಳಿ ಮತ್ತು ಯಾನಂ, ರಾಯಲಸೀಮ, ಕರ್ನಾಟಕ ಕರಾವಳಿ, ಕೇರಳ ಮತ್ತು ಮಾಹೆಯಲ್ಲಿ ಭಾರಿ ಮಳೆಯಾಗುವ ಸಂಭವ ಹೆಚ್ಚಾಗಿದೆ.
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಂಡಮಾನ್ ಸಮುದ್ರ ಮತ್ತು ಅದರ ನೆರೆಯ ಪೂರ್ವ-ಕೇಂದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಗಾಳಿ (ವೇಗ ಗಂಟೆಗೆ 50-60 ಕಿ.ಮೀ ತಲುಪಬಹುದು, ರಭಸ ಗಂಟೆಗೆ 70 ಕಿ.ಮೀ.ವರೆಗೆ) ನೆಲೆಸಿರುವ ಸಾಧ್ಯತೆ ಬಹಳವಾಗಿದೆ. ಅಂಡಮಾನ್ ಸಮುದ್ರ ಮತ್ತು ನೆರೆಯ ಬಂಗಾಳ ಕೊಲ್ಲಿ ಸಮುದ್ರವು  ಪ್ರಕ್ಷುಬ್ಧವಾಗಿರಲಿದ್ದು, ಪ್ರದೇಶಕ್ಕೆ ತೆರಳದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ.
  •  ಎತ್ತರದ ಅಲೆಗಳಿಂದಾಗಿ (1-2 ಮೀ. ಎತ್ತರ ) ಅಂಡಮಾನ್‌ ಮತ್ತು ನಕೋಬಾರ್‌ ದ್ವೀಪಗಳ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಬಹಳ ಸಾಧ್ಯತೆಯಿದೆ.

 

23 ಮೇ (ದಿನ 2):

♦ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯೊಂದಿಗೆ ಮಿಂಚು ಮತ್ತು ಬಿರುಗಾಳಿ (ವೇಗ ಗಂಟೆಗೆ 40-50 ಕಿ.ಮೀ.ವರೆಗೆ; ರಭಸ ಗಂಟೆಗೆ 70 ಕಿ.ಮೀವರೆಗೆ) ಸಾಧ್ಯತೆ ಬಹಳವಾಗಿದೆ.  ಪಶ್ಚಿಮ ರಾಜಸ್ಥಾನ, ಉಪ-ಹಿಮಾಲಯನ್ ಪಶ್ಚಿಮ ಬಂಗಾಳದ ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿ (ವೇಗ ಗಂಟೆಗೆ 30-40 ಕಿ.ಮೀ.ವರೆಗೆ) ಸಾಧ್ಯತೆಯಿದೆ; ಪೂರ್ವ ರಾಜಸ್ಥಾನ, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಆಂಧ್ರದ ಕರಾವಳಿ ಪ್ರದೇಶ ಹಾಗೂ ಯಾನಂ, ತೆಲಂಗಾಣ, ರಾಯಲಸೀಮ, ಕರ್ನಾಟಕ, ತಮಿಳು ನಾಡು, ಪುದುಚೇರಿ ಮತ್ತು ಕಾರೈಕಾಲ್ ಮತ್ತು ಲಕ್ಷದ್ವೀಪದಲ್ಲಿ ಮಿಂಚು-ಗುಡುಗು ಇರುವ ಸಾಧ್ಯತೆಯಿದೆ.

  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರಿಯಿಂದ ಅತ್ಯಂತ ಭಾರಿ ಮಳೆ ಸಂಭವ.
  • ಉತ್ತರ ಅಂಡಮಾನ್ ಸಮುದ್ರದ ನೆರೆಯ ಪೂರ್ವ-ಕೇಂದ್ರ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ (ವೇಗ ಗಂಟೆಗೆ 55--60 ಕಿ.ಮೀ ವರೆಗೆ, ರಭಸ ಗಂಟೆಗೆ 75 ಕಿ.ಮೀ.ವರೆಗೆ) ನೆಲೆಸಿರುವ ಸಾಧ್ಯತೆ ಬಹಳವಾಗಿದೆ.
  • ಅಂಡಮಾನ್ ಸಮುದ್ರ ಮತ್ತು ನೆರೆಯ ಪೂರ್ವ-ಕೇಂದ್ರ ಬಂಗಾಳಕೊಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರಲಿದ್ದು, ಈ ಪ್ರದೇಶಗಳಿಗೆ ಹೋಗದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ.
  • ಎತ್ತರದ ಅಲೆಗಳಿಂದಾಗಿ (1-2 ಮೀ. ಎತ್ತರ ) ಅಂಡಮಾನ್‌ ಮತ್ತು ನಕೋಬಾರ್‌ ದ್ವೀಪಗಳ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಬಹಳ ಸಾಧ್ಯತೆಯಿದೆ.

 

24 ಮೇ (ದಿನ 3):

  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯೊಂದಿಗೆ ಗುಡುಗು-ಮಿಂಚು ಮತ್ತು ಬಿರುಗಾಳಿ (ವೇಗ ಗಂಟೆಗೆ 50-60 ಕಿ.ಮೀ.ವರೆಗೆ) ಸಾಧ್ಯತೆ ಹೆಚ್ಚಾಗಿದೆ. ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಮತ್ತು ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು-ಮಿಂಚಿನ ಸಮೇತ ಬಿರುಗಾಳಿ (ವೇಗ ಗಂಟೆಗೆ 30-40 ಕಿ.ಮೀ.ವೆರಗೆ) ಬೀಸುವ ಸಾಧ್ಯತೆಯಿದೆ. ಬಿಹಾರ, ಒಡಿಶಾ, ಕೊಂಕಣ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಆಂಧ್ರ ಪ್ರದೇಶದ ಕರಾವಳಿ ಮತ್ತು ಯಾನಂ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತಮಿಳು ನಾಡು, ಪುದುಚೇರಿ ಮತ್ತು ಕಾರೈಕಾಲ್ ಹಾಗೂ ಲಕ್ಷದ್ವೀಪದಲ್ಲಿ ಚದುರಿದಂತೆ ಗುಡುಗು-ಮಿಂಚು ಇರುವ ಸಾಧ್ಯತೆಯಿದೆ.
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರಿಯಿಂದ ಅತ್ಯಂತ ಭಾರಿ ಮಳೆ ಸಂಭವ.
  • ಮಧ್ಯ ಬಂಗಾಳ ಕೊಲ್ಲಿಯ ಪ್ರಮುಖ ಭಾಗಗಳಲ್ಲಿಚಂಡಮಾರುತದ (ಗರಿಷ್ಠ ವೇಗ ಗಂಟೆಗೆ 65-75 ಕಿ.ಮೀ, ರಭಸ ಗಂಟೆಗೆ 85 ಕ.ಮೀ. ವರಗೆ) ಪ್ರಾಬಲ್ಯ ಮುಂದುವರಿಯುವ ಸಾಧ್ಯತೆಯಿದೆ; ಉತ್ತರ ಬಂಗಾಳಕೊಲ್ಲಿಯಲ್ಲಿ ಮತ್ತು ಒಡಿಶಾ-ಪಶ್ಚಿಮ ಬಂಗಾಳ-ಬಾಂಗ್ಲಾದೇಶದ ತೀರಗಳಲ್ಲಿ ಚಂಡಮಾರುತದ ಗಾಳಿ (ವೇಗ ಗಂಟೆಗೆ 40-50 ಕಿ.ಮೀ, ರಭಸ ಗಂಟೆಗೆ 60 ಕಿ.ಮೀ.ವರೆಗೆ) ಬೀಸುವ ಸಾಧ್ಯತೆಯಿದೆ. ಕೇಂದ್ರ ಬಂಗಾಳ ಕೊಲ್ಲಿ, ಉತ್ತರ ಬಂಗಾಳಕೊಲ್ಲಿಯ ಜೊತೆಗೆ ಒಡಿಶಾ-ಬಂಗಾಳ-ಬಾಂಗ್ಲಾದೇಶ ಕರಾವಳಿಯ ತೀರಗಳಲ್ಲಿ ಸಮುದ್ರದ ಸ್ಥಿತಿಯು ಅತ್ಯಂತ ಪ್ರಕ್ಷುಬ್ಧವಾಗಿರಲಿದೆ. ಮೀನುಗಾರರು ಈ ಪ್ರದೇಶಗಳಿಗೆ ತೆರಳದಂತೆ ಸೂಚನೆ ನೀಡಲಾಗಿದೆ.

25 ಮೇ (ದಿನ 4):

  • ಜಾರ್ಖಂಡ್‌ನ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆ ಮತ್ತು ಬಿರುಗಾಳಿ (ವೇಗ ಗಂಟೆಗೆ 40-50 ಕಿ.ಮೀ ವರೆಗೆ) ಬೀಸುವ ಸಾಧ್ಯತೆಯಿದೆ ; ಬಿಹಾರದ ಪ್ರತ್ಯೇಕಿಸಿ ಸ್ಥಳಗಳು, ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಕೇರಳ ಮತ್ತು ಮಾಹೆಯಲ್ಲಿ ಗುಡುಗು-ಮಿಂಚಿನ ಜತೆ ಬಿರುಗಾಳಿ (ವೇಗ 30-40 ಕಿ.ಮೀ. ತಲುಪುವ) ಬೀಸುವ ಸಾಧ್ಯತೆಯಿದೆ;  ಜೊತೆಗೆ ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಮಧ್ಯ ಮಹಾರಾಷ್ಟ್ರ, ಕರಾವಳಿ ಮತ್ತು ಕರ್ನಾಟ ದ ದಕ್ಷಿಣ ಒಳನಾಡು ಮತ್ತು ಲಕ್ಷದ್ವೀಪದ ಅಲ್ಲಲ್ಲಿ ಗುಡುಗು-ಮಿಂಚು ಸಾಧ್ಯತೆಯಿದೆ.
  • ಪಶ್ಚಿಮ ಬಂಗಾಳದ ಗಂಗಾ ನದಿ ಜಲಾನಯನ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಭಾರಿಯಿಂದ ಅತ್ಯಂತ ಭಾರಿ ಮಳೆಯಾಗಿದೆ; ಒಡಿಶಾ ಮತ್ತು ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿಭಾರಿಯಿಂದ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಜಾರ್ಖಂಡ್, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಮತ್ತು ತಮಿಳು ನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಭಾರಿ ಮಳೆಯಾಗುವ ಸಂಭವವಿದೆ.
  • ಮಧ್ಯ ಬಂಗಾಳ ಕೊಲ್ಲಿಯ ಪ್ರಮುಖ ಭಾಗಗಳಲ್ಲಿ ಚಂಡಮಾರುತದ ಗಾಳಿ (ವೇಗ ಗಂಟೆಗೆ 65-75 ಕಿ.ಮೀ; ರಭಸ ಗಂಟೆಗೆ 85 ಕಿ.ಮೀ.ವರೆಗೆ) ನೆಲೆಸಿರುವ ಸಾಧ್ಯತೆಯಿದೆ; ಉತ್ತರ ಬಂಗಾಳಕೊಲ್ಲಿಯಲ್ಲಿ ಮತ್ತು ಒಡಿಶಾ-ಪಶ್ಚಿಮ ಬಂಗಾಳ-ಬಾಂಗ್ಲಾದೇಶದ ತೀರಗಳಲ್ಲಿ ಚಂಡಮಾರುತದ ಗಾಳಿ (ವೇಗ ಗಂಟೆಗೆ 50-60 ಕಿ.ಮೀ ವರೆಗೆ; ರಭಸ 70 ಕಿ.ಮೀ. ವರೆಗೆ) ಬೀಸುವ ಸಾಧ್ಯತೆಯಿದೆ; ಬಂಗಾಳ ಕೊಲ್ಲಿಯ ಪ್ರಮುಖ ಭಾಗಗಳು, ಉತ್ತರ ಬಂಗಾಳಕೊಲ್ಲಿ ಮತ್ತು ಒಡಿಶಾ-ಪಶ್ಚಿಮ ಬಂಗಾಳ -ಬಾಂಗ್ಲಾದೇಶ ಕರಾವಳಿಯುದ್ದಕ್ಕೂ ಸಮುದ್ರವು ಅತ್ಯಂತ ಪ್ರಕ್ಷುಬ್ಧವಾಗಿರಲಿದ್ದು, ಮೀನುಗಾರರು ಪ್ರದೇಶಗಳಿಗೆ ತೆರಳದಂತೆ ಸೂಚಿಸಲಾಗಿದೆ.

26 ಮೇ (ದಿನ 5):

  • ಬಿಹಾರ, ಜಾರ್ಖಂಡ್, ಉಪ- ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು-ಬಿರುಗಾಳಿ ಸಮೇತ (ವೇಗ ಗಂಟೆಗೆ 40-50 ಕಿ.ಮೀವರೆಗೆ) ಭಾರಿ ಮಳೆಯಾಗುವ ಸಾಧ್ಯತೆಯಿದೆ; ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚಿನ ಜೊತೆ ಬಿರುಗಾಳಿ (ವೇಗ ಗಂಟೆಗೆ 30-40 ಕಿ.ಮೀ.ವರೆಗೆ) ಬೀಸುವ ಸಾಧ್ಯತೆಯಿದೆ; ಜಾರ್ಖಂಡ್‌, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರ, ಕರ್ನಾಟಕ ಮತ್ತು ಲಕ್ಷದ್ವೀಪದ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
  • ಪಶ್ಚಿಮ ಪಶ್ಚಿಮ ಬಂಗಾಳದ ಗಂಗಾ ಜಲಾನಯನ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಭಾರಿಯಿಂದ ಅತ್ಯಂತ ಭಾರಿ ಮಳೆ ಜೊತೆಗೆ ಹಲವೆಡೆ ತೀರಾ ಹೆಚ್ಚಿನ ವರ್ಷಧಾರೆ ನಿರೀಕ್ಷಿಸಲಾಗಿದೆ; ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲೂ ಭಾರಿಯಿಂದ ಅತ್ಯಂತ ಭಾರಿ ಹಾಗೂ ಹಲವು ಪ್ರದೇಶಗಳಲ್ಲಿ ತೀರಾ ಅಧಿಕ ಮಳೆ ಸುರಿಯುವ ಸಾಧ್ಯತೆಯಿದೆ. ಜಾರ್ಖಂಡ್, ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರಾ ಮತ್ತು ಕೇರಳ ಮತ್ತು ಮಾಹೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರಿಯಿಂದ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ; ಬಿಹಾರ ಹಾಗೂ ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
  • ಉತ್ತರ ಬಂಗಾಳಕೊಲ್ಲಿಯಲ್ಲಿ ಮತ್ತು ಪಶ್ಚಿಮ ಬಂಗಾಳ-ಒಡಿಶಾ- ಬಾಂಗ್ಲಾದೇಶ ತೀರಗಳಲ್ಲಿ ಭಾರಿ ಬಿರುಗಾಳಿ (ವೇಗ ಗಂಟೆಗೆ 60-70 ಕಿ.ಮೀ.ವರೆಗೆ, ರಭಸ 80 ಕಿ.ಮೀ. ವರೆಗೆ) ಬೀಸುವ ಸಂಭವವಿದೆ; ಮಧ್ಯ ಬಂಗಾಳ ಕೊಲ್ಲಿ, ಉತ್ತರ ಬಂಗಾಳಕೊಲ್ಲಿ ಮತ್ತು ಒಡಿಶಾ-ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಕರಾವಳಿಯ ಪ್ರಮುಖ ಭಾಗಗಳಲ್ಲಿ ಸಮುದ್ರವು ಹೆಚ್ಚು ಪ್ರಕ್ಷುಬ್ಧವಾಗಿರಲಿದೆ. ಈ ಪ್ರದೇಶಗಳಿಗೆ ಮೀನುಗಾರರು ತೆರಳದಂತೆ ಸಲಹೆ ನೀಡಲಾಗಿದೆ.

         ಗ್ರಾಫಿಕ್ಸ್‌ನಲ್ಲಿ ವಿವರಗಳಿಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ನಿರ್ದಿಷ್ಟ ಸ್ಥಳ ಕುರಿತಾದ ಮುನ್ಸೂಚನೆ ಮತ್ತು ಎಚ್ಚರಿಕೆಗಾಗಿ ದಯವಿಟ್ಟು MAUSAM ಆ್ಯಪ್ ಡೌನ್‌ಲೋಡ್‌ ಮಾಡಿ. ಕೃಷಿಹವಾಮಾನ ಸಲಹೆಗಾಗಿ MEGHDOOT ಆ್ಯಪ್ ಮತ್ತು ಮಿಂಚಿನ ಎಚ್ಚರಿಕೆಗಾಗಿ DAMINI ಆ್ಯಪ್ ಹಾಗೂ ಜಿಲ್ಲಾವಾರು ಎಚ್ಚರಿಕೆಗಾಗಿ ರಾಜ್ಯ ಎಂಸಿ /ಆರ್‌ಎಂಸಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.

*****



(Release ID: 1721025) Visitor Counter : 215


Read this release in: Hindi , English , Bengali , Tamil