ಭೂವಿಜ್ಞಾನ ಸಚಿವಾಲಯ

2019-20ನೇ ಅವಧಿಯ ಮಾಲಿನ್ಯ ಹೊರಸೂಸುವಿಕೆ ಹೈ ರೆಸಲ್ಯೂಶನ್ ವರದಿ(400 ಮೀಟರ್) ಬಿಡುಗಡೆ


ನೀತಿ ನಿರೂಪಕರಿಗೆ ನೆರವಾಗುವ ನಿಟ್ಟಿನಲ್ಲಿ ಪುಣೆ-ಪಿಂಪ್ರಿ ಮತ್ತು ಚಿಂಚಿವಾಡ್‌ ಪ್ರದೇಶದ ಸ್ಥಳೀಯ ಮಾಲಿನ್ಯ ಮೂಲಗಳ ಪತ್ತೆ

Posted On: 21 MAY 2021 6:46PM by PIB Bengaluru

ಪುಣೆಯ ವಾಯು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿರುವ ವಿವಿಧ ಹೊರಸೂಸುವಿಕೆಯ ಮೂಲಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಬಹುನಿರೀಕ್ಷಿತ ಪುಣೆ ಮಾಲಿನ್ಯ ಹೊರಸೂಸುವಿಕೆ ವರದಿಯನ್ನು ʻಎಸ್ಪಿಪಿಯುʼ ಉಪಕುಲಪತಿ ಪ್ರೊ. ನಿತಿನ್ ಕಲ್ಮರ್ಕರ್ ಬಿಡುಗಡೆ ಮಾಡಿದರು.

ಅಂತಿಮ ವರದಿಯು ʻಪಿಎಂಆರ್ʼ ವ್ಯಾಪ್ತಿಯಲ್ಲಿ ಪ್ರತಿ 400 ಮೀ x 400 ಮೀ ಗ್ರಿಡ್‌ನಲ್ಲಿ ಮಾಲಿನ್ಯ ಮೂಲಗಳನ್ನು ಪತ್ತೆ ಮಾಡಿದೆ. ಪಿಎಂ2.5, ಪಿಎಂ10, ಎನ್ಒಎಕ್ಸ್‌, ಸಿಒ, ಎಸ್ಒ2, ಬಿಸಿ, ಎಚ್‌ಸಿ ಮುಂತಾದ ಪ್ರಮುಖ ಮಾಲಿನ್ಯ ಮೂಲಗಳನ್ನು ವರದಿಯಲ್ಲಿ ಗುರುತಿಸಲಾಗಿದೆ. ಐಐಟಿಎಂ ನಿರ್ದೇಶಕರಾದ ಪ್ರೊ. ರವಿ ನಂಜುಂಡಯ್ಯ, ಪ್ರಧಾನ ಲೇಖಕ ಪ್ರೊ. ಗುಫ್ರಾನ್ ಬೇಗ್‌, ಎಸ್ಎಎಫ್ಎಆರ್ ಸಂಸ್ಥಾಪಕ ಯೋಜನಾ ನಿರ್ದೇಶಕರು ಮತ್ತು ಐಐಟಿಎಂನ ಡಾ. ಬಿ.ಎಸ್. ಮೂರ್ತಿ ಹಾಗೂ ʻಎಸ್‌ಪಿಪಿಯುʼನ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಗೋಸಾವಿ ಅವರ ಸಮ್ಮುಖದಲ್ಲಿ ವರದಿಯನ್ನು ಬಿಡುಗಡೆ ಮಾಡಲಾಯಿತು.

ಹೊರಸೂಸುವಿಕೆ ವರದಿ ಅಭಿಯಾನವನ್ನು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿರೋಲಜಿ (ಐಐಟಿಎಂ) ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಪುಣೆಯ ʻಪಿಪಿಯುʼ ಜೊತೆಯಲ್ಲಿ ಮತ್ತು ಉತ್ಕಲ್ ವಿಶ್ವವಿದ್ಯಾಲಯದ ಪ್ರೊ. ಸರೋಜ್ ಕುಮಾರ್ ಸಾಹು ಅವರ ತಜ್ಞ ಸಲಹೆಯ ಮೇರೆಗೆ ಮುನ್ನಡೆಸಿತು. 400 ಮೀ ಗ್ರಿಡ್ ಉತ್ಪನ್ನಗಳ ಹೈ ರೆಸಲ್ಯೂಶನ್ ಸೃಷ್ಟಿಸಲು ಐಐಟಿಎಂನ ವಿಜ್ಞಾನಿ ಅಭಿವೃದ್ಧಿಪಡಿಸಿರುವ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಅಂಕಿಅಂಶಗಳ ಹೊರಸೂಸುವಿಕೆ ಮಾದರಿಯನ್ನು ಬಳಸಲಾಗಿದೆ.

ಐಐಟಿಎಂ, ಎಸ್‌ಪಿಪಿಯು ಮತ್ತು ಉತ್ಕಲ್ ವಿಶ್ವವಿದ್ಯಾಲಯದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ತಂಡವು, 2019-20ನೇ ಅವಧಿಯಲ್ಲಿ ಪುಣೆ, ಪಿಂಪ್ರಿ ಮತ್ತು ಚಿಂಚಿವಾಡ್ ಪ್ರದೇಶಗಳು ಸೇರಿದಂತೆ ಪುಣೆ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಸುಮಾರು 6 ತಿಂಗಳ ಸುದೀರ್ಘ ಹೊರಸೂಸುವಿಕೆ ವಿವರದ ಅಭಿಯಾನವನ್ನು ಕೈಗೊಂಡಿತು. ಇದಕ್ಕಾಗಿ ತಂಡವು ಸುಮಾರು 2,50,000 ಗಂಟೆಗಳು ಕೆಲಸ ಮಾಡಿದೆ. ವಾಯು ಮಾಲಿನ್ಯದ 26 ವಿವಿಧ ಸ್ಥಳೀಯ ಮೂಲಗಳ ನೈಜ ಸಮಯದ ಪ್ರಾಥಮಿಕ ಚಟುವಟಿಕೆಯ ದತ್ತಾಂಶವನ್ನು ಸಂಗ್ರಹಿಸುವುದು ಈ ಚಟುವಟಿಕೆಯ ಉದ್ದೇಶವಾಗಿತ್ತು.

ಚಟುವಟಿಕೆ ಲೆಕ್ಕವನ್ನು ಪಡೆಯಲು ಕ್ಲಿಕ್ ಕೌಂಟರ್‌ಗಳು, ಕಡಿಮೆ ಗಾತ್ರದ ಮಾದರಿಗಳು ಮತ್ತು ವಿವಿಧ ಸಮೀಕ್ಷೆ ನಮೂನೆಗಳನ್ನು ಬಳಸಲಾಯಿತು. ಇಂತಹ ಅಭಿಯಾನವನ್ನು ಹಿಂದೆ 2012-13ರಲ್ಲಿ ʻಎಸ್ಎಎಫ್ಎಆರ್ʼ ವ್ಯವಸ್ಥೆಯ ಆಗಮನದ ಸಮಯದಲ್ಲಿ 1 ಕಿ.ಮೀ. ರೆಸಲ್ಯೂಸನ್‌ನೊಂದಿಗೆ ಮಾಡಲಾಗಿತ್ತು. ಅಂದಿನಿಂದ ಭೂ ಬಳಕೆ ಮತ್ತು ಜನಸಂಖ್ಯಾ ಶಾಸ್ತ್ರದಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸಿವೆ ಮತ್ತು ಹಿಂದೆ ನಿರ್ಲಕ್ಷಿಸಲಾಗಿದ್ದ ಅನೇಕ ಹೊಸ ಮೂಲಗಳನ್ನು ಈಗ ಅಳೆಯಲಾಗಿದೆ. ಹೊರಸೂಸುವಿಕೆ ವಿವರ ಪಿಎಂಆರ್ ನಂತಹ ಸೀಮಿತ ಗಡಿಯೊಳಗೆ ಒಟ್ಟಾರೆ ಸ್ಥಳೀಯ ಮಾಲಿನ್ಯ ಮೂಲದ ಕೊಡುಗೆಯನ್ನು ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಅದರ ವ್ಯಾಪಿಸುವಿಕೆಯನ್ನು ಗುರುತಿಸಲು ಹೊರಸೂಸುವಿಕೆ ವರದಿಯು ವೈಜ್ಞಾನಿಕ ಮಾರ್ಗವಾಗಿದೆ. ʻಹಾಟ್‌ಸ್ಪಾಟ್ʼಗಳನ್ನು ಗುರುತಿಸಲು ಮತ್ತು ನಿಯಂತ್ರಣ ಕ್ರಮಗಳನ್ನು ಯೋಜಿಸಲು ಇದು ಹೆಚ್ಚು ಪರಿಣಾಮಕಾರಿ ಸಾಧನವಾಗಿದೆ.

ರಸ್ತೆಯ ಸ್ಥಿತಿ, ಸುತ್ತಮುತ್ತಲಿನ ಪ್ರದೇಶಗಳಿಂದ ವಾಹನಗಳ ಹರಿವಿನ ಮಾದರಿ, ವೇಗವಾಗಿ ಚಲಿಸುವ-ನಿಧಾನಗತಿಯಲ್ಲಿ ಚಲಿಸುವ-ನಿಂತ ವಾಹನಗಳ ಸನ್ನಿವೇಶ, ನಿರ್ಮಾಣ ಚಟುವಟಿಕೆ, ವಾಯುಯಾನ, ವಲಸಿಗರ ಕೆಲಸಗಳು, ಆಸ್ಪತ್ರೆಯ ಜನಜಂಗುಳಿ ಮತ್ತು ಹೊರಗಿನ ರಾಜ್ಯದಿಂದ ಬರುವ ವಾಹನಗಳು, ಬದಲಾಗುತ್ತಿರುವ ಜೀವನ ಶೈಲಿಗಳು / ಅಡುಗೆ ಅಭ್ಯಾಸಗಳು ಮುಂತಾದ ವಿವಿಧ ಸಣ್ಣ ವಲಯಗಳು / ಅಂಶಗಳ ಕಡೆಗೆ ಪ್ರಸ್ತುತ ಅಭಿಯಾನದಲ್ಲಿ ಹೆಚ್ಚು ಗಮನ ಹರಿಸಲಾಗಿದೆ. ಇವುಗಳ ಜೊತೆಗೆ ಸಾಂಪ್ರದಾಯಿಕವಾಗಿ ಪ್ರಾಬಲ್ಯ ಹೊಂದಿರುವ ವಲಯಗಳಾದ ಸಾರಿಗೆ, ಕೈಗಾರಿಕೆ, ವಸತಿಗಳಲ್ಲಿನ ಅಡುಗೆ, ವಿದ್ಯುತ್, ಹಾರಾಡುವ ಧೂಳು, ಕಸ ಸುಡುವುದು ಇತ್ಯಾದಿಗಳೂ ಸಹ ಇವೆ.

 

ಹೊರಸೂಸುವಿಕೆ ವರದಿಯ ಮುಖ್ಯಾಂಶಗಳು ಕೆಳಗಿನಂತಿವೆ:

ಪಿಎಂಆರ್ ವ್ಯಾಪ್ತಿಯಲ್ಲಿ ಹಿಂದಿನ 2012-13) ಹೊರಸೂಸುವಿಕೆ ವರದಿಗೆ ಹೋಲಿಸಿದರೆ,

ಪ್ರಸ್ತುತ(2019-20) ಹೊರಸೂಸುವಿಕೆ ವರದಿಯು ಒಟ್ಟಾರೆ ಹೊರಸೂಸುವಿಕೆ ಹೊರೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಸೂಚಿಸುತ್ತದೆ. ಪುಣೆಯ ವಾಯು ಗುಣಮಟ್ಟವನ್ನು ಮುಖ್ಯವಾಗಿ ಕಣಮಾಲಿನ್ಯಕಾರಕಗಳಿಂದ ನಿಯಂತ್ರಿಸಲಾಗುತ್ತದೆ (ಪಿಎಂ2.5 ಮತ್ತು ಪಿಎಂ10). ಕಳೆದ ಏಳು ವರ್ಷಗಳಲ್ಲಿ ಕಣಮಾಲಿನ್ಯಕಾರಕಗಳ ಹೊರಸೂಸುವಿಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ. 2012-13 ರಿಂದ 2019-20 ರವರೆಗೆ ಪಿಎಂ2.5 ಮತ್ತು ಪಿಎಂ10 ಹೊರಸೂಸುವಿಕೆಯಲ್ಲಿ ಕ್ರಮವಾಗಿ 70% ಮತ್ತು 61% ಹೆಚ್ಚಳಕಂಡುಬಂದಿದೆ. ಕಳೆದ ದಶಕದಲ್ಲಿ ಪಿಎಂಆರ್ ವ್ಯಾಪ್ತಿಯಲ್ಲಿ ವಾಹನಗಳ ಸಂಖ್ಯೆಯಲ್ಲಿ ಅಗಾಧ ಹಚ್ಚಳವಾಗಿದೆ. ಉಳಿದ ಮೂಲಗಳಿಗೆ ಹೋಲಿಸಿದರೆ ಪಿಎಂ2.5 ಹೊರಸೂಸುವಿಕೆಗೆ ಸಾರಿಗೆ ವಲಯವು ಪ್ರಮುಖ ಕೊಡುಗೆ ನೀಡುತ್ತದೆ ಎಂದು ತಿಳಿದುಬಂದಿದೆ. ಅನೇಕ ವರ್ಷಗಳಲ್ಲಿ ಕೈಗಾರಿಕಾ ಉತ್ಪಾದನೆ ಹೆಚ್ಚಿದ್ದರೂ, ಇತರ ವಲಯಗಳಿಗೆ ಹೋಲಿಸಿದರೆ ಕೈಗಾರಿಕೆಯಿಂದ ಹೊರಸೂಸುವಿಕೆ ಹೆಚ್ಚಳ ಕನಿಷ್ಠ ಪ್ರಮಾಣದಲ್ಲಿರುವುದು ಕಂಡು ಬಂದಿದೆ. ಕೈಗಾರಿಕಾ ಘಟಕಗಳಲ್ಲಿ ಬಳಸುವ ಸುಧಾರಿತ ಇಂಧನ ಗುಣಮಟ್ಟ, ದಕ್ಷ ತಾಂತ್ರಿಕ ಆವಿಷ್ಕಾರಗಳು ಮತ್ತು ಮಾನದಂಡಗಳ ಕಠಿಣ ಜಾರಿ ಇದಕ್ಕೆ ಕಾರಣವಾಗಿರಬಹುದು. ಅದೇ ರೀತಿ, ಸಾವಯವ ಇಂಗಾಲ (81.3%), ಎನ್ಒಎಕ್ಸ್ (72.8%), ಮತ್ತು ವಿಒಸಿಗಳು (69.8%) ಹೊರಸೂಸುವಿಕೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಗಮನಿಸಲಾಗುತ್ತದೆ. ಗಂಧಕದ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ 30.2% ಹೆಚ್ಚಳ ಕಂಡುಬಂದಿದೆ. ಇದು ಅಧ್ಯಯನದಲ್ಲಿ ಪರಿಗಣಿಸಲಾದ ಎಂಟು ಮಾಲಿನ್ಯಕಾರಕಗಳಲ್ಲಿ ಅತ್ಯಂತ ಕಡಿಮೆ ಎನಿಸಿದೆ.

ಇಂತಹ ಅತ್ಯಧಿಕ ರೆಸೆಲ್ಯೂಷನ್‌ನಲ್ಲಿ ʼಎಸ್‌ಎಎಫ್‌ಎಆರ್‌ʼ ನೀಡುವ ಮಾಲಿನ್ಯ ಹೊರಸೂಸುವಿಕೆ ಅಂದಾಜುಗಳು ವಿಜ್ಞಾನಿಗಳು, ನೀತಿ ನಿರೂಪಕರು ಮತ್ತು ʻಸಿಪಿಸಿಬಿʼಯ ಎನ್‌ಸಿಎಪಿ ಕಾರ್ಯಕ್ರಮಕ್ಕೆ ಅತ್ಯಗತ್ಯ ಮಾಹಿತಿ ನೆಲೆಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಕಳೆದ ಏಳು ವರ್ಷಗಳಲ್ಲಿ ವಾತಾವರಣಕ್ಕೆ ಮಾನವಜನ್ಯ ಹೊರಸೂಸುವಿಕೆಯಲ್ಲಿ ಕಂಡು ಬಂದ ಬದಲಾವಣೆಯ ದರವನ್ನು ಸಹ ವರದಿಯು ಒದಗಿಸುತ್ತದೆ.

ಹಿಂದಿನ 7 ವರ್ಷಗಳ (2012-13 ರಿಂದ 2019-20) ಅವಧಿಯಲ್ಲಿ ಪಿಎಂ10 ಮತ್ತು ಪಿಎಂ2.5 ಹೊರಸೂಸುವಿಕೆ ಮಟ್ಟದಲ್ಲಿ ಶೇಕಡಾವಾರು ಬದಲಾವಣೆ

ವಲಯಗಳು

ಪಿಎಂ10

ಪಿಎಂ2.5

ಸಾರಿಗೆ

87.9%

91.0%

ಕೈಗಾರಿಕೆ

33.8%

32.9%

ವಸತಿ*

107.7%

57.9%

ಡಬ್ಲ್ಯೂಬಿಆರ್ ಧೂಳು

49.5%

38.1%

ಇತರೆ#

ಹೊಸ ಸೇರ್ಪಡೆ$

ಹೊಸ ಸೇರ್ಪಡೆ$

ಒಟ್ಟು

61.3%

70.0%

 

* ವಸತಿ ವಲಯ ವಸತಿಯಲ್ಲಿ ಅಡುಗೆ ಮಾಡುವುದು, ಕೊಳಗೇರಿ, ಕಸಕಡ್ಡಿ ಸುಡುವುದು, ಸಗಣಿ, ಬೀದಿ ಬದಿ ವ್ಯಾಪಾರಿಗಳು, ಮನೆಯಲ್ಲಿ ಸೌದೆ ಉರಿಸುವುದು ಇತ್ಯಾದಿ. # ಇತರೆ ವಲಯ ಎಂಎಸ್‌ಡಬ್ಲ್ಯೂ ಸ್ಥಾವರಗಳು, ಎಂಎಸ್ಡಬ್ಲ್ಯೂ ತೆರೆದ ಸುಡುವಿಕೆ, ಚಿತಾಗಾರ, ವಾಯುಯಾನ, ಧೂಪಕಡ್ಡಿ, ಇಟ್ಟಿಗೆ ಸುಡುವುದು ಇತ್ಯಾದಿ. ಡಬ್ಲ್ಯೂಬಿಆರ್ ಧೂಳು- ಗಾಳಿ ಬೀಸುವಿಕೆಯಿಂದ ಮತ್ತೆ ಹಾರುವ ಧೂಳು. $ ಹೊಸದಾಗಿ ಸೇರಿಸಲಾದ ಅನೇಕ ಮೂಲಗಳು- ಇವುಗಳ ಪ್ರಗತಿಯನ್ನು ತೋರಿಸುವುದು ಸೂಕ್ತವಲ್ಲ.

****

 



(Release ID: 1720858) Visitor Counter : 206


Read this release in: English , Urdu , Hindi