ಭೂವಿಜ್ಞಾನ ಸಚಿವಾಲಯ
ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ಇನ್ನಷ್ಟು ಪ್ರಬಲಗೊಳ್ಳಲಿದೆ ಮತ್ತು ಬಳಿಕದ 24 ಗಂಟೆಗಳಲ್ಲಿ ಬಿರುಸಾಗಲಿದೆ; ಉತ್ತರ-ವಾಯುವ್ಯಾಭಿಮುಖವಾಗಿ ಸಾಗಿ ಮೇ 18ರ ಮುಂಜಾನೆ ಗುಜರಾತ್ ಕರಾವಳಿ ತಲುಪುವ ಸಾಧ್ಯತೆ ಅಧಿಕವಾಗಿದೆ
Posted On:
14 MAY 2021 9:47PM by PIB Bengaluru
ಭಾರತೀಯ ಹವಾಮಾನ ಇಲಾಖೆಯ (ಐ.ಎಂ.ಡಿ.) ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ಪ್ರಕಾರ:
ಬುಲೆಟಿನ್ ಸಂಖ್ಯೆ: : 04(ARB/01/2021)
ಪ್ರಕಟಣೆ ಹೊರಡಿಸಿದ ಸಮಯ: ಭಾರತೀಯ ಕಾಲಮಾನ 2030 ಗಂಟೆ, ದಿನಾಂಕ: 14.05.2021
ಇವರಿಂದ: ಭಾರತೀಯ ಹವಾಮಾನ ಇಲಾಖೆ (ಫ್ಯಾಕ್ಸ್ ಸಂಖ್ಯೆ: 24643965/24699216/24623220)
ಇವರಿಗೆ:ನಿಯಂತ್ರಣ ಕೊಠಡಿ, ಎನ್.ಡಿ.ಎಂ, ಗೃಹ ವ್ಯವಹಾರಗಳ ಸಚಿವಾಲಯ (ಫ್ಯಾಕ್ಸ್ ಸಂಖ್ಯೆ: 23092398/23093750)
ಎನ್.ಡಿ.ಎಂ.ಎ.ನಿಯಂತ್ರಣ ಕೊಠಡಿ (ಫ್ಯಾಕ್ಸ್ ಸಂಖ್ಯೆ 26701729)
ಸಂಪುಟ ಸಚಿವಾಲಯ (ಫ್ಯಾಕ್ಸ್ ಸಂಖ್ಯೆ: 23012284, 23018638)
ಎಸ್ ಮತ್ತು ಟಿ ಹಾಗು ಭೂ ವಿಜ್ಞಾನಗಳ ಗೌರವಾನ್ವಿತ ಸಚಿವರ ಆಪ್ತ ಕಾರ್ಯದರ್ಶಿ (ಫ್ಯಾಕ್ಸ್ ಸಂಖ್ಯೆ 23316745)
ಕಾರ್ಯದರ್ಶಿ, ಎಂ.ಒ.ಇ.ಎಸ್. (ಫ್ಯಾಕ್ಸ್ ಸಂಖ್ಯೆ 24629777)
ಕೇಂದ್ರ ಕಚೇರಿ (ಸಮಗ್ರ ರಕ್ಷಣಾ ಸಿಬ್ಬಂದಿ ಮತ್ತು ಸಿ.ಡಿ.ಎಸ್.) ಫ್ಯಾಕ್ಸ್ ಸಂಖ್ಯೆ 23005137/23005147)
ದೂರದರ್ಶನ ಮಹಾನಿರ್ದೇಶಕರು (23385843) ಆಕಾಶವಾಣಿ ಮಹಾನಿರ್ದೇಶಕರು (23421101, 23421105, 23421219)
ಪಿ.ಐ.ಬಿ.ಎಂ.ಒ.ಇ.ಎಸ್.( ಫ್ಯಾಕ್ಸ್ ಸಂಖ್ಯೆ 23389042)
ಯು.ಎನ್.ಐ. (ಫ್ಯಾಕ್ಸ್ ಸಂಖ್ಯೆ 23355841)
ಮಹಾನಿರ್ದೇಶಕರು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್.ಡಿ.ಆರ್.ಎಫ್) (ಫ್ಯಾಕ್ಸ್ ಸಂಖ್ಯೆ 26105912, 2436 3260)
ನಿರ್ದೇಶಕರು, ಸಮಯ ಕ್ಷಮತೆ, ಭಾರತೀಯ ರೈಲ್ವೇ (ಫ್ಯಾಕ್ಸ್ ಸಂಖ್ಯೆ 23388503)
ಮುಖ್ಯ ಕಾರ್ಯದರ್ಶಿ, ಕೇರಳ (ಫ್ಯಾಕ್ಸ್ ಸಂಖ್ಯೆ-0471-2327176)
ಆಡಳಿತಾಧಿಕಾರಿ, ಲಕ್ಷದ್ವೀಪ ದ್ವೀಪ ಪ್ರದೇಶ (ಫ್ಯಾಕ್ಸ್ ಸಂಖ್ಯೆ-0413-262184)
ಮುಖ್ಯ ಕಾರ್ಯದರ್ಶಿ, ಕರ್ನಾಟಕ(ಫ್ಯಾಕ್ಸ್ ಸಂಖ್ಯೆ-080-22258913)
ಮುಖ್ಯ ಕಾರ್ಯದರ್ಶಿ, ಗೋವಾ (ಫ್ಯಾಕ್ಸ್ ಸಂಖ್ಯೆ-0832-2415201)
ಮುಖ್ಯ ಕಾರ್ಯದರ್ಶಿ, ಮಹಾರಾಷ್ಟ್ರ (ಫ್ಯಾಕ್ಸ್ ಸಂಖ್ಯೆ-022- 22028594)
ಮುಖ್ಯ ಕಾರ್ಯದರ್ಶಿ,ಗುಜರಾತ್ (ಫ್ಯಾಕ್ಸ್ ಸಂಖ್ಯೆ-079-23250305)
ಮುಖ್ಯ ಕಾರ್ಯದರ್ಶಿ,ದಾಮನ್ ಮತ್ತು ದಿಯು (ಫ್ಯಾಕ್ಸ್ ಸಂಖ್ಯೆ-0260-2230775)
ಮುಖ್ಯ ಕಾರ್ಯದರ್ಶಿ, ದಾದ್ರಾ ಮತ್ತು ನಗರ ಹವೇಲಿ (ಫ್ಯಾಕ್ಸ್ ಸಂಖ್ಯೆ-0260-2645466)
ಮುಖ್ಯ ಕಾರ್ಯದರ್ಶಿ, ತಮಿಳುನಾಡು (ಫ್ಯಾಕ್ಸ್ ಸಂಖ್ಯೆ 044-25672304)
ವಿಷಯ: ಲಕ್ಷದ್ವೀಪ ಪ್ರದೇಶದ ಮೇಲೆ ಮತ್ತು ಸುತ್ತಮುತ್ತಲಿನ ಆಗ್ನೇಯ ಮತ್ತು ಪೂರ್ವ ಕೇಂದ್ರೀಯ ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯು ಭಾರ ಕುಸಿತ: ದಕ್ಷಿಣ ಗುಜರಾತ್ ಮತ್ತು ದಿಯು ಕರಾವಳಿಯಲ್ಲಿ ಚಂಡಮಾರುತ ಪೂರ್ವ ನಿಗಾ
ಲಕ್ಷದ್ವೀಪ ಪ್ರದೇಶದ ಮೇಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ತೀವ್ರವಾದ ವಾಯು ಭಾರ ಕುಸಿತವಾಗಿದ್ದು, ಅದು ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಕಳೆದ 6 ಗಂಟೆಗಳಿಂದ ಗಂಟೆಗೆ 11 ಕಿಲೋ ಮೀಟರ್ ವೇಗದಲ್ಲಿ ಸಾಗುತ್ತಿದೆ.ಮತ್ತು ಇಂದು, 2021 ರ ಮೇ 14 ರಂದು ಭಾರತೀಯ ಕಾಲಮಾನ 1730 ಗಂಟೆಗೆ ಲಕ್ಷದ್ವೀಪ ಪ್ರದೇಶ ಮತ್ತು ಸಮೀಪದ ಆಗ್ನೇಯ ಹಾಗು ಪೂರ್ವ ಕೇಂದ್ರೀಯ ಅರಬ್ಬೀ ಸಮುದ್ರದಲ್ಲಿ ಅಕ್ಷಾಂಶ 11.6°N ಮತ್ತು ರೇಖಾಂಶ 72.6°E ಬಳಿಯಲ್ಲಿ ಅಮಿನಿ ದಿವಿಗೆ 55 ಕಿಲೋಮೀಟರ್ ದೂರದಲ್ಲಿ ಉತ್ತರ ಮತ್ತು ವಾಯುವ್ಯ ದಿಕ್ಕಿನಲ್ಲಿ , ಕೇರಳದ ಕಣ್ಣೂರಿಗೆ 290 ಕಿಲೋ ಮೀಟರ್ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನಲ್ಲಿ , ಗುಜರಾತಿನ ವೆರಾವಾಲ್ ನ ದಕ್ಷಿಣ-ವಾಯುವ್ಯಕ್ಕೆ 1060 ಕಿ.ಮೀ ದೂರದಲ್ಲಿ ಕೇಂದ್ರೀಕೃತಗೊಂಡಿದೆ.
ಇದು ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು ಬಳಿಕ ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. ಮತ್ತು ಅದು ಉತ್ತರ-ವಾಯುವ್ಯ ದಿಕ್ಕಿನಲ್ಲಿ ಮುಂದುವರೆದು ಮೇ 18 ರಂದು ಮುಂಜಾನೆ ಗುಜರಾತಿಗೆ ತಲುಪುವ ಸಾಧ್ಯತೆ ಇದೆ.
ಮುನ್ಸೂಚನೆ ಮತ್ತು ತೀವ್ರತೆಯನ್ನು ಈ ಕೆಳಗೆ ಕೋಷ್ಟಕದಲ್ಲಿ ನೀಡಲಾಗಿದೆ
ದಿನಾಂಕ/ಸಮಯ (ಐ.ಎಸ್.ಟಿ.)
|
ಕೇಂದ್ರ
ಅಕ್ಷಾಂಶ/ರೇಖಾಂಶ
(Lat. 0N/ long. 0E)
|
Maximum sustained surface wind speed (Kmph)
ಗಾಳಿಯ ಸುಸ್ಥಿರ ಮೇಲ್ಮೈ ವೇಗ (ಗಂಟೆಗೆ)
|
Category of cyclonic disturbance
ಚಂಡಮಾರುತದ ವರ್ಗ
|
14.05.21/1730
|
11.6/72.6
|
50-60 ರಿಂದ 70ರವರೆಗೆ ಅಬ್ಬರ
|
ತೀವ್ರ ವಾಯು ಭಾರ ಕುಸಿತ
|
15.05.21/0530
|
12.9/72.7
|
70-80ರಿಂದ to 90ರವರೆಗೆ ಅಬ್ಬರ
|
ಚಂಡಮಾರುತ
|
15.05.21/1730
|
14.4/72.4
|
95-105 ರಿಂದ 115 ರವರೆಗೆ ಅಬ್ಬರ
|
ಗಂಭೀರ ಪ್ರಮಾಣದ ಚಂಡಮಾರುತ
|
16.05.21/0530
|
15.8/71.9
|
125-135 ರಿಂದ 150 ರವರೆಗೆ ಅಬ್ಬರ
|
ಭಾರೀ ಪ್ರಮಾಣದ ಚಂಡಮಾರುತ
|
16.05.21/1730
|
17.3/71.3
|
135-145 ರಿಂದ 160 ರವರೆಗೆ ಅಬ್ಬರ
|
ಭಾರೀ ಪ್ರಮಾಣದ ಚಂಡಮಾರುತ
|
17.05.21/0530
|
18.5/70.5
|
145-155 ರಿಂದ 165 ರವರೆಗೆ ಅಬ್ಬರ
|
ಭಾರೀ ಪ್ರಮಾಣದ ಚಂಡಮಾರುತ
|
17.05.21/1730
|
19.8/69.7
|
150-160 ರಿಂದ 175 ರವರೆಗೆ ಅಬ್ಬರ
|
ಭಾರೀ ಪ್ರಮಾಣದ ಚಂಡಮಾರುತ
|
18.05.21/0530
|
21.4/69.0
|
150-160 ರಿಂದ 175 ರವರೆಗೆ ಅಬ್ಬರ
|
ಭಾರೀ ಪ್ರಮಾಣದ ಚಂಡಮಾರುತ
|
18.05.21/1730
|
23.0/69.2
|
125-135 ರಿಂದ 150 ರವರೆಗೆ ಅಬ್ಬರ
|
ಭಾರೀ ಪ್ರಮಾಣದ ಚಂಡಮಾರುತ
|
|
|
|
|
ಎಚ್ಚರಿಕೆಗಳು:
- ಮಳೆ
· ಲಕ್ಷದ್ವೀಪ ದ್ವೀಪಗಳು: ಮೇ 14 ರಂದು ಲಕ್ಷದ್ವೀಪದ ಹೆಚ್ಚಿನ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದಿಂದ ಮಧ್ಯಮ ಪ್ರಮಾಣದ ಮಳೆಯಾಗಲಿದೆ.ಕೆಲವು ಕಡೆಗಳಲ್ಲಿ ಭಾರೀ ಮಳೆ (≥ 20 cm) ಬೀಳಲಿದೆ. ಮೇ 15 ಮತ್ತು 16 ರಂದು ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ.
· ಕೇರಳ: ಮೇ 14 ರಂದು ಹೆಚ್ಚಿನ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದಿಂದ ಮಧ್ಯಮ ಪ್ರಮಾಣದ ಮಳೆಯಾಗಲಿದೆ.ಕೆಲವು ಕಡೆಗಳಲ್ಲಿ ಭಾರೀ ಮಳೆ (≥ 20 cm) ಬೀಳಲಿದೆ.ಮೇ 15 ರಂದು ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ಮೇ 16 ಮತ್ತು 17 ರಂದು ಕೆಲವೆಡೆ ಭಾರೀ ಪ್ರಮಾಣದ ಮಳೆಯಾಗಲಿದೆ.
· ತಮಿಳುನಾಡು: (ಘಾಟ್ ಜಿಲ್ಲೆಗಳು): ಮೇ 14 ರಂದು ಅಲ್ಲಲ್ಲಿ ಚದುರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದಿಂದ ಮಧ್ಯಮ ಪ್ರಮಾಣದ ಮಳೆಯಾಗಲಿದೆ.ಕೆಲವು ಕಡೆಗಳಲ್ಲಿ ಭಾರೀ ಮಳೆ ಬೀಳಲಿದೆ. ಮೇ 15 ರಂದು ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ.
· ಕರ್ನಾಟಕ (ಕರಾವಳಿ ಮತ್ತು ಅದಕ್ಕೆ ಹೊಂದಿಕೊಂಡ ಘಾಟ್ ಜಿಲ್ಲೆಗಳು): ಮೇ 14 ಮತ್ತು 15 ರಂದು ಅಲ್ಲಲ್ಲಿ ಅಲ್ಪ ಪ್ರಮಾಣದ ಹಾಗು ಮಧ್ಯಮ ಪ್ರಮಾಣದಲ್ಲಿ ಮಳೆಯಾಗಲಿದೆ. ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಮೇ 16 ರಂದು ಕೂಡ ಅಲ್ಲಲ್ಲಿ ಭಾರೀ ಮಳೆ ಬೀಳಲಿದೆ.
· ಕೊಂಕಣ ಮತ್ತು ಗೋವಾ: ಮೇ 14 ರಂದು ಗೋವಾದಲ್ಲಿ ಸಾಮಾನ್ಯ ಪ್ರಮಾಣದಿಂದ ಹಿಡಿದು ಕೆಲವೆಡೆಗಳಲ್ಲಿ ಭಾರೀ ಪ್ರಮಾಣದ ಮಳೆ ಬೀಳಲಿದೆ.ಮೇ 15 ರಂದು ದಕ್ಷಿಣ ಕೊಂಕಣ ಮತ್ತು ಗೋವಾ ಹಾಗೂ ಉತ್ತರ ಕೊಂಕಣ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ. ಮೇ 16 ರಂದು ಕೆಲವು ಪ್ರದೇಶಗಳಲ್ಲಿ ಭಾರೀ ಮತ್ತು ಅತಿ ಹೆಚ್ಚು ಪ್ರಮಾಣದ ಮಳೆಯಾಗಲಿದೆ.
· ಗುಜರಾತ್: ಮೇ 16ರಂದು ಸೌರಾಷ್ಟ್ರ ಕರಾವಳಿ ಜಿಲ್ಲೆಗಳಲ್ಲಿ ಲಘು ಪ್ರಮಾಣದಿಂದ ಹಿಡಿದು ಮಧ್ಯಮ ಪ್ರಮಾಣದ ಮಳೆಯಾಗಲಿದೆ. ಕೆಲವು ಪ್ರತ್ಯೇಕಿತ ಪ್ರದೇಶಗಳಲ್ಲಿ ಭಾರೀ ಮಳೆ ಬೀಳಲಿದೆ. ಮೇ 17 ರಂದು ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಹಾಗು ಮೇ 18 ರಂದು ಸೌರಾಷ್ಟ್ರ ಮತ್ತು ಕಚ್ ನಲ್ಲಿಯ ಬಹುತೇಕ ಪ್ರದೇಶಗಳಲ್ಲಿ ಭಾರೀ ಮಳೆ ಬೀಳಲಿದೆ.
· ನೈಋತ್ಯ ರಾಜಸ್ಥಾನ: ಮೇ 17 ಮತ್ತು 18 ರಂದು ಹಲವು ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಬೀಳುವ ಸಂಭವ ಇದೆ.
(ii)ಬಿರುಗಾಳಿಯ ಎಚ್ಚರಿಕೆ
· ಅಬ್ಬರಿಸುವ ಬಿರುಗಾಳಿ ಆಗ್ನೇಯ ಅರಬ್ಬೀ ಸಮುದ್ರದಿಂದ ಸಮೀಪದ ಲಕ್ಷದ್ವೀಪ-ಮಾಲ್ದೀವ್ಸ್ ಪ್ರದೇಶ ಮತ್ತು ಆಗ್ನೇಯ ಭಾರತೀಯ ಸಾಗರ ಪ್ರದೇಶದಲ್ಲಿ ಮತ್ತು ಭಾರತೀಯ ಸಾಗರ ಸಮಭಾಜಕ ಪ್ರದೇಶ ಬಳಿಯಲ್ಲಿ ಮೇ 14 ರಂದು ಗಂಟೆಗೆ 50-60 ಕಿ.ಮೀಯಿಂದ ಹಿಡಿದು 70 ಕಿ.ಮೀ ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ.
· ಇದು ನಿಧಾನವಾಗಿ ಗಂಟೆಗೆ 70-80 ಕಿಲೋ ಮೀಟರ್ ವೇಗವನ್ನು ಪಡೆದುಕೊಂಡು ಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತವಾಗಿ ಕೇಂದ್ರೀಯ ಅರಬ್ಬೀ ಸಮುದ್ರ ಮತ್ತು ಸಮೀಪದ ಆಗ್ನೇಯ ಅರಬ್ಬೀ ಸಮುದ್ರ ಹಾಗು ಲಕ್ಷದ್ವೀಪ ಪ್ರದೇಶಗಳನ್ನು ಮೇ 15 ರ ಮುಂಜಾನೆಯಿಂದ ಅಪ್ಪಳಿಸುವ ಸಾಧ್ಯತೆ ಇದೆ.
· ಕೇರಳ ಕರಾವಳಿಗೆ ಮೇ 14 ರಂದು ಗಂಟೆಗೆ 45-55 ಕಿ.ಮೀ ವೇಗದಲ್ಲಿ ಅಪ್ಪಳಿಸುವ ಬಿರುಗಾಳಿ ಗಂಟೆಗೆ 65 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಮೇ 15 ರಂದು ಕೇರಳ-ಕರ್ನಾಟಕ ಕರಾವಳಿಯನ್ನು ತಲುಪುವ ಗಂಟೆಗೆ 50-60 ಕಿ.ಮೀ ವೇಗದ ಬಿರುಗಾಳಿ ಗಂಟೆಗೆ 70 ಕಿ.ಮೀ. ವೇಗವನ್ನು ಪಡೆದುಕೊಳ್ಳಲಿದೆ.
· ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಕರಾವಳಿಯನ್ನು ಮೇ 15 ರಂದು ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ತಲುಪುವ ಬಿರುಗಾಳಿ ಗಂಟೆಗೆ 60 ಕಿಲೋ ಮೀಟರ್ ವೇಗದ ಚಂಡಮಾರುತವಾಗಿ ಅಪ್ಪಳಿಸುವ ಸಾಧ್ಯತೆ ಇದೆ.ಮತ್ತು ಮೇ 16 ರಂದು ಗಂಟೆಗೆ 60-70 ಕಿಲೋ ಮೀಟರ್ ವೇಗದಲ್ಲಿ ಸಾಗುವ ಬಿರುಗಾಳಿ ಗಂಟೆಗೆ 80 ಕಿಲೋ ಮೀಟರ್ ವೇಗದ ಚಂಡಮಾರುತವಾಗಿ ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಗಳಿವೆ.
· ಈಶಾನ್ಯ ಅರಬ್ಬೀ ಸಮುದ್ರದ ಮೇಲೆ ಮತ್ತು ದಕ್ಷಿಣ ಗುಜರಾತ್ ಹಾಗು ದಾಮನ್ ಮತ್ತು ದಿಯು ಕರಾವಳಿಗಳ ಮೇಲೆ ಮೇ 17 ರಂದು ಬೆಳಿಗ್ಗೆ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಂದೆರಗುವ ಬಿರುಗಾಳಿ ಗಂಟೆಗೆ 60 ಕಿ.ಮೀ ವೇಗದ ಚಂಡಮಾರುತವಾಗಿ ಅಪ್ಪಳಿಸುವ ಸಾಧ್ಯತೆ ಇದೆ. ಬಳಿಕ ಅದರ ವೇಗದಲ್ಲಿ ಹೆಚ್ಚಳವಾಗಿ ಗಂಟೆಗೆ 90-100 ಕಿ.ಮೀ. ವೇಗದ ಬಿರುಗಾಳಿ ಗಂಟೆಗೆ 115 ಕಿ.ಮೀ ವೇಗದ ಚಂಡಮಾರುತವಾಗಿ ಈಶಾನ್ಯ ಅರಬ್ಬೀ ಸಮುದ್ರದಲ್ಲಿ ಸಾಗಿ ಗುಜರಾತ್ ಕರಾವಳಿಯನ್ನು ಮೇ 18 ರಂದು ಬೆಳಗ್ಗಿನ ಜಾವ ತಲುಪುವ ನಿರೀಕ್ಷೆ ಇದ್ದು ಬಳಿಕ ಅದು ದಿನಾಂಕ 18 ರವರೆಗೆ ಪ್ರಬಲಗೊಳ್ಳಲಿದೆ.
(iii)ಸಮುದ್ರದ ಪರಿಸ್ಥಿತಿ
· ಆಗ್ನೇಯ ಅರಬ್ಬೀ ಸಮುದ್ರ ಮತ್ತು ಸಮೀಪದ ಲಕ್ಷದ್ವೀಪ –ಮಾಲ್ದೀವ್ಸ್ ಪ್ರದೇಶ, ಭಾರತೀಯ ಸಮಭಾಜಕ ಸಾಗರ ಪ್ರದೇಶದ ಸಮುದ್ರಲ್ಲಿ ಮೇ 14 ರಂದು ಭಾರೀ ಪ್ರಕ್ಷುಬ್ದತೆ ಉಂಟಾಗಲಿದೆ.
· ಪೂರ್ವ ಕೇಂದ್ರೀಯ ಅರಬ್ಬೀ ಸಮುದ್ರದಲ್ಲಿ ಮೇ15 ಮತ್ತು 16ರಂದು ಸಮುದ್ರ ಪರಿಸ್ಥಿತಿ ಭಾರೀ ಪ್ರಕ್ಷುಬ್ದತೆಯಿಂದ ಕೂಡಿರುತ್ತದೆ. ಈಶಾನ್ಯ ಅರಬ್ಬೀ ಸಮುದ್ರದಲ್ಲಿ ಮೇ 17 ರಿಂದ ಭಾರೀ ಪ್ರಕ್ಷುಬ್ದ ಪರಿಸ್ಥಿತಿ ಇರಲಿದೆ.
· ಕೊಮೊರಿನ್ ಪ್ರದೇಶ, ಕೇರಳ ಕರಾವಳಿ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮೇ 14 ಮತ್ತು 15ರಂದು ಸಮುದ್ರ ಭಾರೀ ಪ್ರಕ್ಷುಬ್ದತೆಯಿಂದ ಕೂಡಿರುತ್ತದೆ. ಪೂರ್ವ ಕೇಂದ್ರೀಯ ಅರಬ್ಬೀ ಸಮುದ್ರ , ಕರ್ನಾಟಕ ಕರಾವಳಿಯಲ್ಲಿ ಮೇ 15 ರಂದು ಸಮುದ್ರದಲ್ಲಿ ಭಾರೀ ಪ್ರಕ್ಷುಬ್ಧ ಸ್ಥಿತಿ ತಲೆದೋರಲಿದೆ. ಮಹಾರಾಷ್ಟ್ರ , ಗೋವಾ ಕರಾವಳಿಯಲ್ಲಿ ಮೇ 15 ಮತ್ತು 16 ರಂದು ಸಮುದ್ರ ಬಿರುಸಾಗಿರುತ್ತದೆ. ಈಶಾನ್ಯ ಅರಬ್ಬೀ ಸಮುದ್ರ ಭಾಗ ಮತ್ತು ಗುಜರಾತ್ ದಕ್ಷಿಣ ಕರಾವಳಿಯಲ್ಲಿ ಮೇ 17 ರಿಂದ ಸಮುದ್ರ ಬಿರುಸಾಗಿರುತ್ತದೆ ಮತ್ತು ಮೇ 18 ರಂದು ಕೂಡಾ ಈ ಪರಿಸ್ಥಿತಿ ಇರುತ್ತದೆ.
- ಸಮುದ್ರದಲೆಗಳ ಎಚ್ಚರಿಕೆ:
· ಸುಮಾರು 1 ಮೀಟರಿಗಿಂತಲೂ ಎತ್ತರದ ಸಮುದ್ರದಲೆಗಳು ಮೇ 15 ಮತ್ತು 16 ರಂದು ಲಕ್ಷದ್ವೀಪ ದ್ವೀಪ ಪ್ರದೇಶದ ತಗ್ಗು ಪ್ರದೇಶಗಳನ್ನು ಜಲಾವ್ರತ ಮಾಡುವ ಸಾಧ್ಯತೆಗಳಿವೆ.
- ಮೀನುಗಾರರಿಗೆ ಎಚ್ಚರಿಕೆ:
· ಆಗ್ನೇಯ ಅರಬ್ಬೀ ಸಮುದ್ರ , ಲಕ್ಷ ದ್ವೀಪ-ಮಾಲ್ದೀವ್ಸ್ ಪ್ರದೇಶಗಳು, ಪೂರ್ವ ಕೇಂದ್ರೀಯ ಅರಬ್ಬೀ ಸಮುದ್ರ , ಕರ್ನಾಟಕ, ಮಹಾರಾಷ್ಟ್ರ ಕರಾವಳಿ ಪ್ರದೇಶಗಳ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸಲಹೆ ಮಾಡಲಾಗಿದೆ.ಗೋವಾ , ಗುಜರಾತ್ ಕರಾವಳಿ ಭಾಗದಲ್ಲಿಯೂ ಅರಬ್ಬೀ ಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ಮೇ 18 ರವರೆಗೆ ಸಮುದ್ರಕ್ಕೆ ಇಳಿಯದಂತೆ ಸಲಹೆ ಮಾಡಲಾಗಿದೆ.
· ಈಗಾಗಲೇ ಸಮುದ್ರಕ್ಕೆ ಇಳಿದಿರುವವರು ಉತ್ತರ ಮತ್ತು ಅದಕ್ಕೆ ಸಮೀಪದ ಪೂರ್ವ ಕೇಂದ್ರೀಯ ಅರಬ್ಬೀ ಸಮುದ್ರಭಾಗದಲ್ಲಿರುವವರು ಮರಳಿ ಬರುವಂತೆ ಸಲಹೆ ನೀಡಲಾಗಿದೆ.
(vi) ಆಗ್ನೇಯ, ಪೂರ್ವ ಕೇಂದ್ರೀಯ , ಈಶಾನ್ಯ ಅರಬ್ಬೀ ಸಮುದ್ರ, ಲಕ್ಷದ್ವೀಪ-ಮಾಲ್ದೀವ್ಸ್ ಪ್ರದೇಶ ಮತ್ತು ಲಕ್ಷದ್ವೀಪ ದ್ವೀಪಗಳು, ಕೇರಳ, ಗೋವಾ, ಮಹಾರಾಷ್ಟ್ರ, ಗುಜರಾತ್ ಕರಾವಳಿ ಮತ್ತು ಈ ಎಲ್ಲಾ ರಾಜ್ಯಗಳ ಕರಾವಳಿ ಮತ್ತು ಅದಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಸಂಭವನೀಯ ಪರಿಣಾಮಗಳು:
· ಭಾರೀ ಪ್ರಕ್ಷುಬ್ದ ಸಮುದ್ರ, ಅಬ್ಬರಿಸುವ ಬಿರುಗಾಳಿ ಮತ್ತು ಭಾರೀ ವೇಗದಿಂದ ಬೀಸುವ ಗಾಳಿಯಿಂದಾಗಿ ಹಡಗುಗಳ ಸಂಚಾರಕ್ಕೆ ಮತ್ತು ಮೀನುಗಾರಿಕೆಗೆ ಅಡೆ ತಡೆ ಉಂಟಾಗಲಿದೆ.
· ಲಕ್ಷದ್ವೀಪ ದ್ವೀಪಗಳ ತಗ್ಗು ಪ್ರದೇಶಗಳು ಮೇ 14 ರಿಂದ ಮೇ 16 ರ ಅವಧಿಯಲ್ಲಿ ಜಲಾವ್ರತಗೊಳ್ಳಲಿವೆ.
· ಭಾರೀ ಮಳೆಯಿಂದಾಗಿ ಮಹಾಪೂರ/ನೆರೆ ಪರಿಸ್ಥಿತಿ ತಲೆ ದೋರಲಿದೆ ಮತ್ತು ಮೇ 14 ರಿಂದ ಮೇ 16 ರ ಅವಧಿಯಲ್ಲಿ ಕೇರಳ, ಕರ್ನಾಟಕ, ಮತ್ತು ಗೋವಾ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಸೌರಾಷ್ಟ್ರ, ಕಚ್ ಗಳಲ್ಲಿ ಮೇ 18 ರಿಂದ 19 ರ ನಡುವಿನ ಅವಧಿಯಲ್ಲಿ ನೆರೆ ಪರಿಸ್ಥಿತಿ ಮತ್ತು ಭೂಕುಸಿತಗಳು ಸಂಭವಿಸುವ ಸಾಧ್ಯತೆಗಳಿವೆ.
· ಭಾರೀ ಬಿರುಗಾಳಿ ಮಳೆ ಮತ್ತು ಮಿಂಚು ಗುಡುಗುಗಳಿಂದಾಗಿ ಮಾನವ ಮತ್ತು ಪಶು ಸಂಕುಲದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಹಾಗು ಕರಾವಳಿ ಭಾಗದಲ್ಲಿಯ ದುರ್ಬಲ ರಚನೆಗಳಿಗೆ ಅಪಾಯ ಒದಗಲಿದೆ.
(vii) ಸಲಹಾಸೂಚಿ:
· ಮೇ 14 ರಿಂದ 18 ರ ಅವಧಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ.
· ಹಡಗುಗಳು ಈ ಪ್ರದೇಶದಲ್ಲಿ ಸಂಚರಿಸದಿರುವಂತೆ ಸಲಹೆ ಮಾಡಲಾಗಿದೆ.
· ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಬಂದರುಗಳು ಅವಶ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಸಲಹೆ
· ನೌಕಾದಳ ಕಾರ್ಯಾಚರಣಾ ನೆಲೆಗಳಲ್ಲಿ ಅವಶ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಸಲಹೆ
· ಪ್ರವಾಸೋದ್ಯಮ ಚಟುವಟಿಕೆಗಳನ್ನು ಪ್ರಕ್ಷುಬ್ದ ಸಮುದ್ರ ಮತ್ತು ವಾತಾವರಣದ ಹಿನ್ನೆಲೆಯಲ್ಲಿ ನಿರ್ಬಂಧಿಸಬಹುದಾಗಿದೆ.
(ಗ್ರಾಫಿಕ್ ವಿವರಣೆಗಾಗಿ ಇಲ್ಲಿ ಕ್ಲಿಕ್ ಮಾಡಿರಿ)
***
(Release ID: 1718899)
Visitor Counter : 241