ಭೂವಿಜ್ಞಾನ ಸಚಿವಾಲಯ

ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿಂದು ಅಲ್ಲಲ್ಲಿ ಬಿರುಗಾಳಿ, ಮಿಂಚು ಗುಡುಗಿನಿಂದ ಕೂಡಿದ ಆಲಿಕಲ್ಲು ಮಳೆ (ಪ್ರತಿ ತಾಸಿಗೆ 50-60 ಕಿ.ಮೀ. ವೇಗ) ಸಾಧ್ಯತೆ


ಉತ್ತರಾಖಂಡ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ, ಕರೈಕಲ್, ಕೇರಳ, ಮಾಹೆ ಮತ್ತು ಲಕ್ಷದ್ವೀಪದ ಅಲ್ಲಲ್ಲಿ ನಾಳೆ ಭಾರಿ ಮಳೆ ಸಾಧ್ಯತೆ

ಮಧ್ಯ ಮಹಾರಾಷ್ಟ್ರ, ಮರಾಠವಾಡ, ರಾಯಲಸೀಮ, ಕರ್ನಾಟಕ, ತಮಿಳುನಾಡು, ಪುದುಚೆರಿ, ಕರೈಕಲ್, ಕೇರಳ, ಮಾಹೆ ಮತ್ತು ಲಕ್ಷದ್ವೀಪದ ಅಲ್ಲಲ್ಲಿ ಮೇ 15ರಂದು ಬಿರುಗಾಳಿ, ಮಿಂಚು ಗುಡುಗಿನಿಂದ ಕೂಡಿದ ಭಾರಿ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ, ಉತ್ತರ ಒಳನಾಡಿನ ಅಲ್ಲಲ್ಲಿ, ತಮಿಳುನಾಡು, ಪುದುಚೆರಿ, ಕರೈಕಲ್, ಕೇರಳ, ಮಾಹೆ, ಲಕ್ಷದ್ವೀಪದ ಅಲ್ಲಲ್ಲಿ ಧಾರಾಕಾರ ಮಳೆ ಸಾಧ್ಯತೆ. ಕೊಂಕಣ್, ಗೋವಾ ಮತ್ತು ತೆಲಂಗಾಣದ ಅಲ್ಲಲ್ಲಿ ಮೇ 16ರಂದು ಬಿರುಗಾಳಿಯಿಂದ ಕೂಡಿದ ಭಾರಿ ಮಳೆ ಸಾಧ್ಯತೆ

Posted On: 12 MAY 2021 3:36PM by PIB Bengaluru

ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಟಣೆ.

ದೇಶಾದ್ಯಂತ ಪರಿಣಾಮ ಬೀರುವ ಹವಾಮಾನ ಮುನ್ಸೂಚನೆ ವರದಿ

ಮೇ 12(ಒಂದನೇ ದಿನ)

ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯ ಅಲ್ಲಲ್ಲಿ ಇಂದು ಬಿರುಗಾಳಿ, ಮಿಂಚು ಗುಡುಗಿನಿಂದ ಕೂಡಿದ ಆಲಿಕಲ್ಲು ಮಳೆ (ಪ್ರತಿ ತಾಸಿಗೆ 50-60 ಕಿ.ಮೀ. ರಭಸ), ಒಡಿಶಾದ ಅಲ್ಲಲ್ಲಿ ಮಿಂಚು, ಗುಡುಗಿನಿಂದ ಕೂಡಿದ ಭಾರಿ ಮಳೆ (ಪ್ರತಿ ತಾಸಿಗೆ 40-50 ಕಿ.ಮೀ. ವೇಗ), ಜಮ್ಮು-ಕಾಶ್ಮೀರ, ಲಡಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ತೆಲಂಗಾಣದ ಅಲ್ಲಲ್ಲಿ ಇಂದು ಬಿರುಗಾಳಿ, ಮಿಂಚು, ಗುಡುಗಿನಿಂದ ಕೂಡಿದ ಜೋರು ಮಳೆ (ಪ್ರತಿ ತಾಸಿಗೆ 30-40 ಕಿ.ಮೀ. ವೇಗ), ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾ ಮತ್ತು ಮೇಘಾಲಯ, ರಾಯಲಸೀಮಾ, ಕೇರಳ, ಮಾಹೆ ಮತ್ತು ಲಕ್ಷದ್ವೀಪದ ಅಲ್ಲಲ್ಲಿ ಇಂದು ಬಿರುಗಾಳಿಯಿಂದ ಕೂಡಿದ ಧಾರಾಕಾರ ಮಳೆ (ಪ್ರತಿ ತಾಸಿಗೆ 30-40 ಕಿ.ಮೀ. ವೇಗ), ಮಧ್ಯಪ್ರದೇಶ, ವಿದರ್ಭ, ಛತ್ತೀಸ್|ಗಢ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಆಂಧ್ರ ಕರಾವಳಿ ಮತ್ತು ಯನಮ್, ಕರ್ನಾಟಕ ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್| ಅಲ್ಲಲ್ಲಿ ಮಿಂಚು ಗುಡುಗಿನಿಂದ ಕೂಡಿದ ಭಾರಿ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ.

ರಾಜಸ್ಥಾನದ ಉತ್ತರ ಭಾಗದಲ್ಲಿ ಬಿರುಗಾಳಿಯಿಂದ ಕೂಡಿದ ಧೂಳು, ಗುಡುಗು ಮಿಂಚಿನ ಆಲಿಕಲ್ಲು ಮಳೆ ಬೀಳುವ ಎಲ್ಲಾ ಸಾಧ್ಯತೆ ಇದೆ.

ಕೇರಳ ಮತ್ತು ಮಾಹೆಯ ಅಲ್ಲಲ್ಲಿ ಇಂದು ಭಾರಿ ಮಳೆ, ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಬಿಹಾರ, ಪಶ್ಚಿಮ ಬಂಗಾಳದಲ್ಲಿ ಹಿಮಾಲಯ ಭಾಗ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್, ಲಕ್ಷದ್ವೀಪದ ಅಲ್ಲಲ್ಲಿ ಇಂದು ಭಾರಿ ಮಳೆ ಬೀಳುವ ಎಲ್ಲಾ ಸಾಧ್ಯತೆಗಳಿವೆ.

ಅರಬ್ಬಿ ಸಮುದ್ರದ ನೈರುತ್ಯ ಮತ್ತು ಆಗ್ನೇಯ ಭಾಗದ ಸುತ್ತಮುತ್ತ ಹಾಗೂ ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶ, ಮಾಲ್ಡೀವ್ಸ್, ಕಮೋರಿಯನ್ ಮತ್ತು ಲಕ್ಷದ್ವೀಪ ಪ್ರದೇಶಗಳಲ್ಲಿ ಇಂದು ಚಂಡಮಾರುತ ಸ್ವರೂಪದ ಹಠಾತ್ ಬಿರುಗಾಳಿಯಿಂದ ಕೂಡಿದ ಭಾರಿ ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಮೇ 13(ಎರಡನೇ ದಿನ)

ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿಯ ಅಲ್ಲಲ್ಲಿ ಬಿರುಗಾಳಿ, ಮಿಂಚು ಗುಡುಗಿನಿಂದ ಕೂಡಿದ ಆಲಿಕಲ್ಲಿ ಮಳೆಯಾಗುವ (ಪ್ರತಿ ತಾಸಿಗೆ 50-60 ಕಿ.ಮೀ. ವೇಗ) ಎಲ್ಲಾ ಸಾಧ್ಯತೆಗಳಿವೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ತೆಲಂಗಾಣದ ಅಲ್ಲಲ್ಲಿ ಬಿರುಗಾಳಿ ಮತ್ತು ಗುಡುಗಿನ ಮಳೆ (ಪ್ರತಿ ತಾಸಿಗೆ 30-40 ಕಿ.ಮೀ. ವೇಗ) ಆಗುವ ನಿರೀಕ್ಷೆ ಇದೆ. ಪಶ್ಚಿಮ ಬಂಗಾಳದ ಗಂಗಾ ನದಿ ಭಾಗದ ಅಲ್ಲಲ್ಲಿ ಗುಡುಗು ಸಿಡಿಲಿನ ಮಳೆ (ಪ್ರತಿ ತಾಸಿಗೆ 40-50 ಕಿ.ಮೀ. ವೇಗ), ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಹಿಮಾಲಯ ಭಾಗ, ಸಿಕ್ಕಿಂ, ಒಡಿಶಾ, ಕೇರಳ, ಮಾಹೆ ಮತ್ತು ಲಕ್ಷದ್ವೀಪದ ಅಲ್ಲಲ್ಲಿ ಮಿಂಚು ಗುಡುಗಿನ ಮಳೆ(ಪ್ರತಿ ತಾಸಿಗೆ 30-40 ಕಿ.ಮೀ. ವೇಗ) ಬೀಳುವ ನಿರೀಕ್ಷೆ ಇದೆ. ಜಮ್ಮು-ಕಾಶ್ಮೀರ, ಲಡಖ್, ಗಿಲ್ಗಿಟ್-ಬಲ್ಟಿಸ್ತಾನ್, ಮುಜಾಫರಬಾದ್, ಛತ್ತೀಸ್|ಗಢ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಆಂಧ್ರ ಕರಾವಳಿ ಮತ್ತು ಯನಮ್, ರಾಯಲಸೀಮಾ, ಕರ್ನಾಟಕ ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್| ಅಲ್ಲಲ್ಲಿ ಮಿಂಚಿನಿಂದ ಕೂಡಿದ ಮಳೆಯಾಗಲಿದೆ.

ರಾಜಸ್ಥಾನದ ಉತ್ತರ ಭಾಗದಲ್ಲಿ ಭಾರಿ ಬಿರುಗಾಳಿ, ಧೂಳು, ಗುಡುಗಿನಿಂದ ಕೂಡಿದ ಆಲಿಕಲ್ಲು ಮಳೆ (ಪ್ರತಿ ತಾಸಿಗೆ 40-50 ಕಿ.ಮೀ. ವೇಗ) ಬೀಳುವ ಎಲ್ಲಾ ಸಂಭವವಿದೆ.

ಉತ್ತರಾಖಂಡ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ, ಕರೈಕಲ್, ಕೇರಳ, ಮಾಹೆ ಮತ್ತು ಲಕ್ಷದ್ವೀಪದ ಅಲ್ಲಲ್ಲಿ ಜೋರಾದ ಮಳೆ ಬೀಳಲಿದೆ.

ಅರಬ್ಬಿ ಸಮುದ್ರದ ಆಗ್ನೇಯ ಭಾಗದ ಸುತ್ತಮುತ್ತ, ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶದ ಸುತ್ತಮುತ್ತ, ಮಾಲ್ಡೀವ್ಸ್, ಕಮೋರಿಯನ್ ಮತ್ತು ಲಕ್ಷದ್ವೀಪದ ಸುತ್ತಮುತ್ತ ಪ್ರತಿ ತಾಸಿಗೆ 40-50 ಕಿ.ಮೀ. ವೇಗದ ಬಿರುಗಾಳಿ ಬೀಸಲಿದ್ದು, ಅದು 60 ಕಿ.ಮೀ. ವೇಗದವರೆಗೆ ರಭಸ ಪಡೆದು ಕೇರಳ ಕರಾವಳಿಯತ್ತ ಮುನ್ನುಗ್ಗಲಿದೆ. ಹಿಂದೂ ಮಹಾಸಾಗರದ ನೈರುತ್ಯ ಭಾಗ ಮತ್ತು ಸಮಭಾಜಕ ಪ್ರದೇಶದ ಸುತ್ತಮುತ್ತ ಅದು ಪ್ರತಿ ತಾಸಿಗೆ 40-50 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಹಾಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೇ 14(ಮೂರನೇ ದಿನ)

ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ, ಪಶ್ಚಿಮ ಬಂಗಾಳದ ಗಂಗಾ ನದಿ ತೀರ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ತೆಲಂಗಾಣ, ತಮಿಳುನಾಡು, ಪುದುಚೆರಿ, ಕರೈಕಲ್, ಕೇರಳ, ಮಾಹೆ ಮತ್ತು ಲಕ್ಷದ್ವೀಪದ ಅಲ್ಲಲ್ಲಿ ಮಿಂಚು ಗುಡುಗಿನಿಂದ ಕೂಡಿದ ಬಿರುಗಾಳಿ ಮಳೆ ಬೀಸಲಿದೆ, ಜಮ್ಮು-ಕಾಶ್ಮೀರ, ಲಡಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಾಫರಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಛತ್ತೀಸ್|ಗಢ, ಪಶ್ಚಿಮ ಬಂಗಾಳದ ಹಿಮಾಲಯ ಭಾಗ, ಸಿಕ್ಕಿಂ, ಅಸ್ಸಾಂ, ಒಡಿಶಾ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಗುಜರಾತ್, ಕೊಂಕಣ್, ಗೋವಾ, ಆಂಧ್ರ ಕರಾವಳಿ ಮತ್ತು ಯನಮ್, ರಾಯಲಸೀಮಾ ಮತ್ತು ಕರ್ನಾಟಕದಲ್ಲಿ ಮಿಂಚಿನಿಂದ ಕೂಡಿದ ಮಳೆ ಬೀಳುವ ಎಲ್ಲಾ ಸಾಧ್ಯತೆಗಳಿವೆ.

ಲಕ್ಷದ್ವೀಪ, ಕೇರಳ, ಮಾಹೆ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ, ಕರೈಕಲ್, ಪಶಅಚಿಮ ಬಂಗಾಳದ ಹಿಮಾಲಯ ಭಾಗ, ಸಿಕ್ಕಿಂ, ಅಸ್ಸಾಂ ಮತ್ತು ಮೇಘಾಲಯದ ಅಲ್ಲಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿವೆ.

ಮೇ 15(4ನೇ ದಿನ)

ಮಧ್ಯ ಮಹಾರಾಷ್ಟ್ರ, ಮರಾಠವಾಡ, ರಾಯಲಸೀಮಾ, ಕರ್ನಾಟಕ, ತಮಿಳುನಾಡು, ಪುದುಚೆರಿ, ಕರೈಕಲ್, ಕೇರಳ, ಮಾಹೆ ಮತ್ತು ಲಕ್ಷದ್ವೀಪದ ಅಲ್ಲಲ್ಲಿ ಮಿಂಚು, ಗುಡುಗಿನಿಂದ ಕೂಡಿದ ಬಿರುಗಾಳಿ ಮಳೆ, ಛತ್ತೀಸ್|ಗಢ, ಪಶ್ಚಿಮ ಬಂಗಾಳದ ಗಂಗಾ ನದಿ ಬಯಲು, ಗುಜರಾತ್, ಕೊಂಕಣ್ ಮತ್ತು ಗೋವಾ, ಆಂಧ್ರ ಕರಾವಳಿ ಮತ್ತು ಯನಮ್ ಹಾಗೂ ತೆಲಂಗಾಣದಲ್ಲಿ ಮಿಂಚಿನಿಂದ ಕೂಡಿದ ವರ್ಷಧಾರೆಯಾಗುವ ಎಲ್ಲ ನಿರೀಕ್ಷೆಗಳಿವೆ.

ಲಕ್ಷದ್ವೀಪದ ಅಲ್ಲಲ್ಲಿ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಕೇರಳ, ಮಾಹೆಯ ಕೆಲವೆಡೆ, ತಮಿಳುನಾಡು, ಪುದುಚೆರಿ, ಕರೈಕಲ್, ಕೊಂಕಣ್ ಮತ್ತು ಗೋವಾ, ರಾಯಲಸೀಮಾ ಮತ್ತು ಕರ್ನಾಟಕದ ಉತ್ತರ ಒಳನಾಡಿನ ಅಲ್ಲಲ್ಲಿ ಭಾರಿ ಮಳೆಯಾಗಲಿದೆ.

ಅರಬ್ಬಿ ಸಮುದ್ರದ ನೈರುತ್ಯ ಭಾಗದಲ್ಲಿ ಪ್ರತಿ ತಾಸಿಗೆ 50-60 ಕಿ.ಮೀ. ವೇಗದಲ್ಲಿ ಚಲಿಸುವ ಬಿರುಗಾಳಿ ಮಾರುತಗಳು 70.ಕಿ.ಮೀ. ರಭಸ ಪಡೆದುಕೊಂಡು ಕೇರಳ ಮತ್ತು ಕರ್ನಾಟಕದ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಹಿಂದೂಮಹಾಸಾಗರದ ಸಮಭಾಜಕ ಪ್ರದೇಶದತ್ತ ಮೇ 15 ಮಧ್ಯಾಹ್ನದ ಹೊತ್ತಿಗೆ ಮುನ್ನುಗ್ಗಲಿವೆ. ಅರಬ್ಬಿ ಸಮುದ್ರದ ಪೂರ್ವ ಮಧ್ಯಭಾಗ ಮತ್ತು ಆಗ್ನೇಯ ಭಾಗದ ಸುತ್ತಮುತ್ತ ಮತ್ತು ಲಕ್ಷದ್ವೀಪದಲ್ಲಿ ಮೇ 15ರಂದು ಮಾರುತಗಳು ಪ್ರತಿ ತಾಸಿಗೆ 80 ಕಿ.ಮೀ. ವೇಗದಲ್ಲಿ ಮುನ್ನುಗ್ಗುವ  ಎಲ್ಲಾ ಸಾಧ್ಯತೆಗಳಿವೆ. ಮಹಾರಾಷ್ಟ್ರ ಕರಾವಳಿ ಮೇಲೆ 60 ಕಿ.ಮೀ. ವೇಗದ ಮಾರುತಗಳು ಬಂದೆರಗುವ ಸಾಧ್ಯತೆಗಳಿವೆ. ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶ ಮತ್ತು ಅಗ್ನೇಯ ಭಾಗದಿಂದ ಮಾರುತಗಳು ಬೀಸುವ ನಿರೀಕ್ಷೆಗಳಿವೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗ ಮತ್ತು ಲಕ್ಷದ್ವೀಪದ ಸುತ್ತಮುತ್ತ ಸಾಗರ ಪರಿಸ್ಥಿತಿ ಅಪಾಯಕಾರಿಯಾಗಿರಲಿದೆ. ಕರ್ನಾಟ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಅಪಾಯವಿದ್ದು, ಜನರು ಎಚ್ಚರಿಕೆಯಿಂದ ಇರಬೇಕು. ಲಕ್ಷದ್ವೀಪದಲ್ಲಿ 1 ಮೀಟರ್ ಎತ್ತರದಲ್ಲಿ ಸಾಗರ ಅಲೆಗಳು ಅಪ್ಪಳಿಸುವ ಎಲ್ಲ ಸಾಧ್ಯಗಳಿವೆ.

ಮೇ 16(ಐದನೇ ದಿನ)

•  ಕರ್ನಾಟಕ, ತೆಲಂಗಾಣ, ತಮಿಳುನಾಡು, ಪುದುಚೆರಿ, ಕರೈಕಲ್, ಕೇರಳ, ಮಾಹೆ ಮತ್ತು ಲಕ್ಷದ್ವೀಪದ ಅಲ್ಲಲ್ಲಿ ಮಿಂಚು, ಗುಡುಗಿನಿಂದ ಕೂಡಿದ ಬಿರುಗಾಳಿ ಮಳೆ ಬೀಳಲಿದೆ. ವಿದರ್ಭ, ಛತ್ತೀಸ್|ಗಢ, ಗುಜರಾತ್, ಕೊಂಕಣ್ ಮತ್ತು ಗೋವಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಆಂಧ್ರ ಕರಾವಳಿ, ಯನಮ್ ಮತ್ತು ರಾಯಲಸೀಮಾದ ಅಲ್ಲಲ್ಲಿ ಮಿಂಚಿನಿಂದ ಕೂಡಿದ ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ.

•  ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ, ಉತ್ತರ ಒಳನಾಡಿನ ಅಲ್ಲಲ್ಲಿ, ತಮಿಳುನಾಡು, ಪುದುಚೆರಿ, ಕರೈಕಲ್, ಕೇರಳ, ಮಾಹೆ, ಲಕ್ಷದ್ವೀಪ, ಕೊಂಕಣ್ ಮತ್ತು ಗೋವಾದ ಅಲ್ಲಲ್ಲಿ ಭಆರಿ ಮಳೆಯಾಗುವ ಸಂಭವವಿದೆ.

ಅರಬ್ಬಿ ಸಮುದ್ರದ ಪೂರ್ವ ಮಧ್ಯ ಭಾಗದಿಂದ 70-80 ಕಿ.ಮೀ. ವೇಗದಲ್ಲಿ ಬೀಸುವ ಮಾರುತಗಳು 90 ಕಿ.ಮೀ. ವೇಗ ಪಡೆದುಕೊಳ್ಳಲಿವೆ. ಅಲ್ಲದೆ, ಅರಬ್ಬಿ ಸಮುದ್ರದ ಆಗ್ನೇಯ ಭಾಗದಿಂದ 60-70 ಕಿ.ಮೀ. ವೇಗದಲ್ಲಿ ಬೀಸುವ ಮಾರುತಗಳು 80 ಕಿ.ಮೀ. ವೇಗ ಪಡೆದು ಕೇರಳ, ಕರ್ನಾಟಕ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶದ ಮೇಲೆ ಎರಗಲಿವೆ. ಮಹಾರಾಷ್ಟ್ರ ಕರಾವಳಿ ಮೇಲೆ 60 ಕಿ.ಮೀ. ವೇಗದಲ್ಲಿ ಮಾರುತಗಳು ಚಲಿಸುವ ಎಲ್ಲ ಸಾಧ್ಯತೆ ಇದೆ.

ಕರ್ನಾಟಕ ಮತ್ತು ಗೋವಾ ಕರಾವಳಿಯಲ್ಲಿ ಸಾಗರ ಅಲೆಗಳು ಅಪಾಯಕಾರಿ ಮಟ್ಟಕ್ಕೆ ತಲುಪುವ ಸಾಧ್ಯತೆಗಳಿದ್ದು, ಸಾಗರ ತೀರದ ಜನರು ಎಚ್ಚರಿಕೆಯಿಂದ ಇರಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

***



(Release ID: 1718442) Visitor Counter : 180


Read this release in: English , Hindi , Punjabi