ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಸಂಬಂಧಿತ ಆಮದು ಸರಕು ವಿಲೇವಾರಿಯಲ್ಲಿ ಯಾವುದೇ ವಿಳಂಬ ಎದುರಿಸುವುದಿಲ್ಲ ಸಿಬಿಐಸಿ

Posted On: 13 MAY 2021 7:02PM by PIB Bengaluru

ದೇಶ ಕೋವಿಡ್ -19 ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಅತ್ಯಾವಶ್ಯಕ ಪೂರೈಕೆಗಳ ತ್ವರಿತ ಆಮದಿಗೆ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್  ಸಂಬಂಧಿತ ಸರಕುಗಳ ವಿಲೇವಾರಿಯಲ್ಲಿ ಯಾವುದೇ ರೀತಿಯ ವಿಳಂಬ ಎದುರಿಸುವುದಿಲ್ಲ ಎಂಬ ಖಾತ್ರಿಯನ್ನು ಅದು ನೀಡಿದೆ. ಆನ್ ಲೈನ್ ವ್ಯವಸ್ಥೆಯನ್ನು ಬಳಸಲಾಗುತ್ತಿದ್ದು, ಅದರಲ್ಲಿ ಶೇ.95 ರಷ್ಟು ಕೋವಿಡ್ ಸಂಬಂಧಿತ ಸರಕುಗಳನ್ನು ಯಾವುದೇ ಅಧಿಕಾರಿಯ ಬದಲು ಸಿಸ್ಟಮ್ ನಿಂದ ನಿರ್ಧರಣೆ ಮಾಡಲಾಗುತ್ತಿದೆ. ಸರಕನ್ನು ಮುಖಾಮುಖಿ ರಹಿತ ವ್ಯವಸ್ಥೆಗೆ ಕಳುಹಿಸಿದರೂ, ನೋಡಲ್ ಅಧಿಕಾರಿಗಳು ತ್ವರಿತ ವಿಲೇವಾರಿಗೆ ಪ್ರಯತ್ನಿಸುತ್ತಾರೆ ಮತ್ತು ಖಾತ್ರಿಪಡಿಸುತ್ತಾರೆ. ತೆರಿಗೆದಾರರ ಸೇವೆಗಳ ಮಹಾ ನಿರ್ದೇಶನಾಲಯ, ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿ ಮತ್ತು ಕಸ್ಟಮ್ಸ್ ಅಡಿಯಲ್ಲಿನ, ಮುಂಬೈ ಸೀಮಾಸುಂಕ ವಿಭಾಗವು ಇಂದು ಆಯೋಜಿಸಿದ್ದ ಕೋವಿಡ್ -19 ಸಂಬಂಧಿತ ಆಮದಿನ ಸೀಮಾಸುಂಕ ವಿಲೇವಾರಿಕುರಿತ ವೆಬಿನಾರ್ ನಲ್ಲಿ ಅಗತ್ಯ ಆಮದನ್ನು ತ್ವರಿತಗೊಳಿಸಲು ಮತ್ತು ಸುವ್ಯವಸ್ಥಿತಗೊಳಿಸಲು ಮೇಲಿನ ಮತ್ತು ಇತರ ನೀತಿ ಕ್ರಮಗಳನ್ನು ವ್ಯಾಪಾರ, ಕೈಗಾರಿಕೆ ಮತ್ತು ಮಾಧ್ಯಮಗಳಿಗೆ ವಿವರಿಸಲಾಯಿತು. 400 ಬಾಧ್ಯಸ್ಥರು ಇದರಲ್ಲಿ ಭಾಗವಹಿಸಿದ್ದರು ಮತ್ತು ಆಮದು ಮತ್ತು ಸೀಮಾಸುಂಕ ಅನುಮೋದನೆ ಪ್ರಕ್ರಿಯೆಯ ಕುರಿತಂತೆ ತಮ್ಮ ಸಂಶಯಗಳನ್ನು ಬಗೆಹರಿಸಿಕೊಂಡರು.

ಆಮದುದಾರರ ರಫ್ತುದಾರರ ಅರ್ಜಿ ಪ್ರಕ್ರಿಯೆಯ ಕೋಡ್ ನಂಬರ್ ಅನ್ನು ಸರಳ ಮತ್ತು ಆನ್ ಲೈನ್ ಮಾಡಲಾಗಿದೆ, ಜೊತೆಗೆ ಸೀಮಾಸುಂಕ ವಿಲೇವಾರಿಯ ಇತರ ಪ್ರಕ್ರಿಯೆಗಳನ್ನೂ ಸುಗಮಗೊಳಿಸಲಾಗಿದೆ ಎಂದು ಸಿಬಿಐಸಿ ಮಾಹಿತಿ ನೀಡಿತು.

ವೆಬಿನಾರ್ ನಲ್ಲಿ ಇತ್ತೀಚಿನ ಅಧಿಸೂಚನೆಗಳು ಮತ್ತು ಕೋವಿಡ್ ಸಂಬಂಧಿತ ಆಮದಿನಲ್ಲಿ ಕಸ್ಟಮ್ಸ್ ವಿಲೇವಾರಿಗೆ ಸಂಬಂಧಿಸಿದ ಸುಂಕ ವಿನಾಯಿತಿ ಕುರಿತಂತೆ ಚರ್ಚಿಸಲಾಯಿತು. ತಾತ್ಕಾಲಿಕ ವಿನಾಯಿತಿ ಆದೇಶವು ಆಮದುದಾರರು ಉಚಿತ ವಿತರಣೆಗಾಗಿ ಸರಕುಗಳನ್ನು ಉಚಿತವಾಗಿ ಪಡೆದಾಗ ಮಾತ್ರ ಅನ್ವಯಿಸುತ್ತದೆ. ಇತರ ಸೂಚನೆಗಳು ವಿನಾಯಿತಿ ಆದೇಶದ ವ್ಯಾಪ್ತಿಗೆ ಬರುವುದಿಲ್ಲ.

ತಾತ್ಕಾಲಿಕ ವಿನಾಯಿತಿ ಆದೇಶಕ್ಕಾಗಿ ಮಹಾರಾಷ್ಟ್ರ ರಾಜ್ಯ ನೋಡಲ್ ಪ್ರಾಧಿಕಾರ

ಸಿಬಿಐಸಿ ಕೋವಿಡ್ ಸಂಬಂಧಿತ ತುರ್ತು ಸರಕುಗಳ ವಿಲೇವಾರಿ, ಪ್ರಕ್ರಿಯೆ ಮತ್ತು ವಿತರಣೆಗೆ ಅವಕಾಶ ಮಾಡಿಕೊಡುತ್ತಿದೆ. ಸಾಗಣೆಯ ವಿಲೇವಾರಿ ಸ್ಥಿತಿಯನ್ನು ಪತ್ತೆಹಚ್ಚಲು ಯಾರೇ ಆದರೂ ತಮ್ಮ ಮೊಬಿಲಿಟಿ ಅಪ್ಲಿಕೇಶನ್ ಅನ್ನು ಬಳಸಿಕೊಳ್ಳಬಹುದು.

https://eccsmobility.cbic.gov.in/eicimobility/import

ರಚನಾತ್ಮಕ ಸ್ವರೂಪದಲ್ಲಿ ವಿವರಗಳನ್ನು ಪಡೆಯಲು ಮತ್ತು ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಆನ್ಲೈನ್ ಕುಂದುಕೊರತೆ ಪರಿಹಾರ ರೂಪ (URL https://t.co/IAOQenWwO2) ವನ್ನು ರಚಿಸಲಾಗಿದೆ. ಸಾಮಾನ್ಯ ವಿಚಾರಣೆಗಳಿಗಾಗಿ ಬಳಕೆದಾರರು icegatehelpdesk@icegate.gov.in ಮೂಲಕ -ಮೇಲ್ ಕಳುಹಿಸಬಹುದು ಅಥವಾ 1800-3010-1000 ಸಂಖ್ಯೆಗೆ ಉಚಿತ ಕರೆ ಮಾಡಬಹುದು. ನೆರವಿನ ಕಟ್ಟೆಯಲ್ಲಿ ಸ್ವೀಕರಿಸುವ ವಿನಂತಿಗಳನ್ನು ತ್ವರಿತ ಪರಿಹಾರಕ್ಕಾಗಿ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

ಕೋವಿಡ್-19 ಸಂಬಂಧಿತ ಸಲಕರಣೆಗಳ ಪ್ರಶ್ನೆಗಳು ಮತ್ತು ಕುಂದುಕೊರತೆಗಳನ್ನು ನಿಭಾಯಿಸಲು ಇಲಾಖೆಗೆ ಮೀಸಲಾದ ಸಹಾಯವಾಣಿ ಸ್ಥಾಪಿಸಲಾಗಿದೆ. ದೇಶಾದ್ಯಂತ ನೋಡಲ್ ಅಧಿಕಾರಿಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೋಡಬಹುದು.

https://www.cbic.gov.in/resources//htdocs-cbec/NodalOfficers&ClientRelationshipMangaersList_2111.pdf

***



(Release ID: 1718432) Visitor Counter : 144


Read this release in: English , Marathi