ಹಣಕಾಸು ಸಚಿವಾಲಯ

ಕಸ್ಟಮ್ಸ್ ಸುಂಕ ವಲಯದಲ್ಲಿ ಸಹಕಾರ ಮತ್ತು ಕಸ್ಟಮ್ಸ್ ಆಡಳಿತದಲ್ಲಿ ಪರಸ್ಪರ ಆಡಳಿತಾತ್ಮಕ ನೆರವು ಕುರಿತು ಭಾರತ ಸರ್ಕಾರ, ಯುನೈಟೆಡ್ ಕಿಂಗ್ ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ರಾಷ್ಟ್ರಗಳ ನಡುವಿನ ಒಪ್ಪಂದಕ್ಕೆ ಸಚಿವ ಸಂಪುಟ ಅನುಮೋದನೆ 

Posted On: 28 APR 2021 11:58AM by PIB Bengaluru

ಭಾರತದ ಗಣರಾಜ್ಯ, ಯುನೈಟೆಡ್ ಕಿಂಗ್ ಡಂ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸರ್ಕಾರದ ನಡುವೆ ಕಸ್ಟಮ್ಸ್ ಸುಂಕ ವಲಯದಲ್ಲಿ ಸಹಕಾರ ಮತ್ತು ಕಸ್ಟಮ್ಸ್ ಆಡಳಿತದಲ್ಲಿ ಪರಸ್ಪರ ಆಡಳಿತಾತ್ಮಕ ನೆರವು ನೀಡುವ ಕುರಿತ ಒಪ್ಪಂದಕ್ಕೆ ಅನುಮೋದನೆ ಮತ್ತು ಸಹಿ ಹಾಕುವ ಪ್ರಸ್ತಾವನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ.

ಪರಿಣಾಮಗಳು:

ಕಸ್ಟಮ್ಸ್ ಅಪರಾಧಗಳಲ್ಲಿ ತನಿಖೆ ಮತ್ತು ನಿಯಂತ್ರಣ ಹೊಂದಲು ಒಪ್ಪಂದದಿಂದ ದೊರೆಯುವ ಸೂಕ್ತ ಮಾಹಿತಿ ಸಹಕಾರಿಯಾಗಲಿದೆ. ಒಪ್ಪಂದ ವ್ಯಾಪಾರವನ್ನು ಸುಗಮಗೊಳಿಸುತ್ತದೆ ಮತ್ತು ವ್ಯಾಪಾರ ಮಾಡುವ ದೇಶಗಳ ನಡುವೆ ಸರಕುಗಳಿಗೆ ಅನುಮತಿ ನೀಡುವಲ್ಲಿಯೂ ಸಹಕಾರಿಯಾಗಲಿದೆ.

ಅನುಷ್ಠಾನದ ಕಾರ್ಯತಂತ್ರ ಮತ್ತು ಗುರಿಗಳು:

ಸಂಬಂಧಪಟ್ಟ ದೇಶಗಳಲ್ಲಿ ಒಡಂಬಡಿಕೆಗಳಿಗೆ ಅನುಮೋದನೆ ನೀಡಿದ ನಂತರ ಎರಡೂ ದೇಶಗಳ ಸರ್ಕಾರಗಳ ಪರವಾಗಿ ಸಹಿ ಹಾಕಲಾಗುವುದು. ಎರಡೂ ದೇಶಗಳ ಅಧಿಕೃತ ಪ್ರತಿನಿಧಿಗಳು ಸಹಿ ಮಾಡಿದ ನಂತರ ತಿಂಗಳ ಮೊದಲ ದಿನದಿಂದ ಒಪ್ಪಂದ ಅನುಷ್ಠಾನಕ್ಕೆ ಬರಲಿದೆ.

ಹಿನ್ನೆಲೆ:

ಉಭಯ ದೇಶಗಳ ಕಸ್ಟಮ್ಸ್ ಅಧಿಕಾರಿಗಳ ನಡುವೆ ವಿವರಗಳು ಮತ್ತು ಗುಪ್ತದಳದ ಮಾಹಿತಿ ಹಂಚಿಕೊಳ್ಳಲು ಕಾನೂನು ಚೌಕಟ್ಟನ್ನು ಒಪ್ಪಂದ ಒದಗಿಸುತ್ತದೆ. ಕಸ್ಟಮ್ಸ್ ಕಾನೂನುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು, ಕಸ್ಟಮ್ಸ್ ಅಪರಾಧಗಳ ತಡೆಗಟ್ಟುವಿಕೆ, ತನಿಖೆ ಮತ್ತು ಕಾನೂನು ಬದ್ಧ ವ್ಯಾಪಾರ ನಡೆಸಲು ಇದರಿಂದ ಸಹಕಾರಿಯಾಗಲಿದೆಎರಡು ಕಸ್ಟಮ್ಸ್ ಆಡಳಿತಗಳ ಒಪ್ಪಿಗೆ ಮೇರೆಗೆ ಪ್ರಸ್ತಾವಿತ ಒಪ್ಪಂದದ ಕರಡು ಪ್ರತಿಯನ್ನು ಅಂತಿಮಗೊಳಿಸಲಾಗಿದೆ.

ಒಪ್ಪಂದ ಭಾರತದ ಕಸ್ಟಮ್ಸ್ ವ್ಯವಸ್ಥೆಯ ಕಳವಳದ ಬಗ್ಗೆ ಕ್ರಮ ತೆಗೆದುಕೊಳ್ಳಲಿದೆ ಮತ್ತು ಅವಶ್ಯಕತೆಗಳು, ನಿರ್ದಿಷ್ಟವಾಗಿ ಕಸ್ಟಮ್ಸ್ ಮೌಲ್ಯದ ನಿಖರತೆ, ಸುಂಕದ ವರ್ಗೀಕರಣ, ಉಭಯ ದೇಶಗಳ ನಡುವೆ ವ್ಯಾಪಾರ ಮಾಡುವ ಸರಕುಗಳ ಮೂಲ ಮಾಹಿತಿಯ ವಿನಿಯಮಕ್ಕೆ ಇದರಿಂದ ಅನುಕೂಲವಾಗಲಿದೆ.

***



(Release ID: 1714586) Visitor Counter : 161