ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಅಲ್ಯುಮಿನಿಯಂ ರದ್ದಿ ಮರು ಸಂಸ್ಕರಣೆಗೆ ಕಡಿಮೆ ವೆಚ್ಚದ ಮತ್ತು ಪರಿಣಾಮಕಾರಿ ತಂತ್ರಜ್ಞಾನ ಅಭಿವೃದ್ಧಿ

Posted On: 24 APR 2021 12:28PM by PIB Bengaluru

ವಿಜ್ಞಾನಿಗಳ ತಂಡ ಕಡಿಮೆ ವೆಚ್ಚದ ತಂತ್ರಜ್ಞಾನದಲ್ಲಿ ಅಲ್ಯುಮಿನಿಯಂ ರದ್ದಿಯನ್ನು ಪರಿಣಾಮಕಾರಿಯಾಗಿ ಸಂಸ್ಕರಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ವಸ್ತು ನಷ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಮತ್ತು ಇದನ್ನು ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳಲ್ಲಿ ಬಳಸಬಹುದಾಗಿದೆ.

ಕೊಯಮತ್ತೂರಿನ ಶ್ರೀ ರಾಮಕೃಷ್ಣ ಇಂಜಿನಿಯರಿಂಗ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಸಿ. ಭಾಗ್ಯನಾಥನ್ ಮತ್ತು ಅದೇ ಕಾಲೇಜಿನ ಪ್ರೊಫೆಸರ್ ಡಾ. ಪಿ. ಕರುಪ್ಪುಸ್ವಾಮಿ ಮತ್ತು ತಿರುವನಂತಪುರದ ಸಿಎಸ್ಐಆರ್-ಎನ್ಐಐಎಸ್ ಟಿಯ ಪ್ರಧಾನ ಹಿರಿಯ ಪ್ರಧಾನ ವಿಜ್ಞಾನಿ ಡಾ. ಎಂ. ರವಿ ಅವರುಗಳು ಈ ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಮೌಲ್ಯವರ್ಧಿತ/ಮೌಲ್ಯವರ್ಧಿತವಲ್ಲದ ಮತ್ತು ಅಪಾಯಕಾರಿ/ಅಪಾಯಕಾರಿಯಲ್ಲದ ನಿರುಪಯುಕ್ತ ಅಲ್ಯುಮಿನಿಯಂ ತುಂಡುಗಳನ್ನು ಸೇರಿಸಿ ಒಟ್ಟಾರೆ ಕೈಗಾರಿಕೆಗಳಲ್ಲಿ ಬಳಸಲಾಗುವ ಅಲ್ಯುಮಿನಿಯಂ ರದ್ದಿಯನ್ನು ಪರಿಣಾಮಕಾರಿಯಾಗಿ ಮರು ಸಂಸ್ಕರಣೆ ಮಾಡಬಹುದಾಗಿದೆ. ಈ ತಂತ್ರಜ್ಞಾನವನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ(ಡಿಎಸ್ ಟಿ) ‘ಮುಂದುವರಿದ ಉತ್ಪಾದನಾ ತಂತ್ರಜ್ಞಾನಗಳು’ ಕಾರ್ಯಕ್ರಮದ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಇದು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಉಪಕ್ರಮವಾಗಿದೆ. ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವನ್ನು ಸಣ್ಣ ಮತ್ತು ಗುಡಿ ಕೈಗಾರಿಕೆಗಳು, ಮಧ್ಯಮ ವರ್ಗದ ಕೈಗಾರಿಕೆಗಳು ಮತ್ತು ಎಂಎಸ್ಎಂಇ ಅಲ್ಯುಮಿನಿಯಂ ಫೌಂಡರ್ ಗಳು ಮತ್ತು ಮರು ಸಂಸ್ಕರಣಾ ಕೈಗಾರಿಕೆಗಳಲ್ಲಿ ಬಳಸಬಹುದಾಗಿದೆ.

ಸಾಂಪ್ರದಾಯಿಕ ಅಲ್ಯುಮಿನಿಯಂ ಮರು ಸಂಸ್ಕರಣಾ ತಂತ್ರಜ್ಞಾನಗಳಿಗೆ ಸಂಸ್ಕರಣೆಗೆ ಹೆಚ್ಚಿನ ಬಂಡವಾಳ ಹೂಡಿಕೆಯ ಅಗತ್ಯವಿದೆ ಮತ್ತು ಅದರಿಂದ ಅಪಾಯಕಾರಿಯಾದ ಫೆರಸ್ (ಎಫ್ಇ), ಟಿನ್(ಎಸ್ಎನ್), ಸೀಸಾ(ಪಿಬಿ) ಮತ್ತು ಎಂಜಿ ಲೋಹವನ್ನು ಸುಡುವುದರಿಂದ ಅಪಾಯಕಾರಿ ವಸ್ತುಗಳು ಉಳಿಯುತ್ತವೆ. ಈ ಪ್ರಕ್ರಿಯೆಯಲ್ಲಿ ಮ್ಯಾಗ್ನೇಶಿಯಂ ಮಿಶ್ರ ಲೋಹಗಳು, ಮತ್ತು ಕಬ್ಬಿಣ ಮಿಶ್ರ ಲೋಹಗಳು ಹಾಗೂ ಹೆಚ್ಚಿನ ಸಿಲಿಕಾನ್ ಮಿಶ್ರ ಲೋಹಗಳು ಇತ್ಯಾದಿಗಳನ್ನು ಸ್ವತಃ ಕೈಯಾರೆ ಪ್ರತ್ಯೇಕಿಸುವ ಮತ್ತು ವಿಂಗಡಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಅಲ್ಲದೆ ಪ್ರತ್ಯೇಕಿಸಲಾದ ಮ್ಯಾಗ್ನೇಶಿಯಂ ಪರಿಸರಕ್ಕೆ ಹಾನಿಕಾರಕವಾಗಿದೆ. ಆ ಅಂಶಗಳನ್ನು ಕರಗಿಸುವುದರಿಂದ ಶ್ರೇಣೀಕೃತ ಅಲ್ಯುಮಿನಿಯಂ ರದ್ದಿಗಳ ರೂಪದಲ್ಲಿರುತ್ತದೆ ಮತ್ತು ಈ ಉದ್ಯಮಗಳು ಕರಗಿಸಲಾದ ರಾಸಾಯನಿಕ ಸಂಯೋಜನೆಯನ್ನ ಆಧರಿಸಿದ ಇನ್ ಘಾಟ್ ಗಳನ್ನು ಮಾರಾಟ ಮಾಡುತ್ತದೆ.

ಹೊಸ ತಂತ್ರಜ್ಞಾನ ಸಂಸ್ಕರಣೆ ಮಾಡಿ ಕರಗಿಸಿದ ಅಲ್ಯುಮಿನಿಯಂನ ಶುದ್ಧತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ತಂತ್ರಜ್ಞಾನದಲ್ಲಿ ಮೂಲ ಒಳಹರಿವುಗಳನ್ನು ತೊಳೆಯುವುದು, ಬಗೆಬಗೆಯ ಅಲ್ಯುಮಿನಿಯಂ ತುಂಡುಗಳ (ಮಿಶ್ರಣ) ಒಣಗಿಸುವುದು ಮತ್ತು ಪೂರ್ವಭಾವಿಯಾಗಿ ಕಾಯಿಸುವುದು ಮತ್ತು ಕುಲುಮೆಯಲ್ಲಿ ಕರಗಿಸುವಾಗ ಮೂಲ ಕಲ್ಮಶಗಳನ್ನು ತೆಗೆದು ಹಾಕುವುದು, ಸಾರಜನಕವನ್ನು ವಾತಾವರಣದಲ್ಲಿ ಕ್ಷೀಣಿಸುವುದು ಮತ್ತು ಕುಲುಮೆಯನ್ನ ಹಿಡಿದಿಟ್ಟುಕೊಳ್ಳಲು ಮಿಶ್ರ ಲೋಹ ಅಂಶಗಳನ್ನು ಸೇರಿಸುವುದು, ಸಂಸ್ಕರಣೆ ಮಾಡುವುದು ಮತ್ತು ಅಚ್ಚಿನಲ್ಲಿ ಲೋಹವನ್ನು ಸುರಿಯುವುದು ಒಳಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಮೂರು ಸಮಸ್ಯೆಗಳನ್ನು ಎದುರಿಸಲಾಗುವುದು. ಕಬ್ಬಿಣ ಮತ್ತು ಸಿಲಿಕಾನ್ ವಸ್ತುಗಳನ್ನು ಪ್ರತ್ಯೇಕಿಸುವುದು, ಮ್ಯಾಗ್ನೇಶಿಯಂ ನಷ್ಟವನ್ನು ತಡೆಯುವುದು ಮತ್ತು ನಿಗದಿತ ಮಿತಿಯಲ್ಲಿ ಯಾಂತ್ರಿಕ ಅಂಶಗಳನ್ನು ಸುಧಾರಿಸಲು ಕ್ರೋಮಿಯಂ, ಸ್ಟ್ರಾಂಷಿಯಂ ಮತ್ತು ಜಿರ್ಕೋನಿಯಂ ಮತ್ತಿತರ ಅಂಶಗಳನ್ನು ಸೇರ್ಪಡೆ ಮಾಡುವುದು. ಹಾಲಿ ಬಳಕೆಯಲ್ಲಿರುವ ತಂತ್ರಜ್ಞಾನದಲ್ಲಿ ಪರಿವರ್ತನಾ ದರ ಶೇ.54ರಷ್ಟಿದೆ. ಆದರೆ ಹೊಸದಾಗಿ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದಲ್ಲಿ ಯಾವ ಬಗ್ಗೆಯ ರದ್ದಿಯನ್ನು ಸಂಸ್ಕರಿಸಲಾಗುತ್ತದೆ ಎಂಬುದನ್ನು ಆಧರಿಸಿ ಪರಿವರ್ತನಾ ದರ ಶೇ.70 ರಿಂದ ಶೇ.80ರಷ್ಟು ಹೆಚ್ಚಾಗಲಿದೆ.

ಈ ತಂತ್ರಜ್ಞಾನ ತಾಂತ್ರಿಕ ಸಿದ್ಧತಾ ಮಟ್ಟ(ಟಿ ಆರ್ ಎಲ್)ನ 7ನೇ ಹಂತದಲ್ಲಿದೆ ಮತ್ತು ಡಾ. ಸಿ. ಭಾಗ್ಯನಾಥನ್ ತಂಡ ಕೊಯಮತ್ತೂರಿನ ರೂಟ್ಸ್ ಕಾಸ್ಟ್, ಲಕ್ಷ್ಮಿ ಬಾಲಾಜಿ ಡೈಕಾಸ್ಟ್, ಎನ್ಕಿ ಇಂಜಿನಿಯರಿಂಗ್ ವರ್ಕ್ಸ್, ಆದರ್ಶ ಲೈನ್ ಆಕ್ಸಸರೀಸ್, ಸೂಪರ್ ಕಾಸ್ಟ್, ಸ್ಟಾರ್ ಫ್ಲೊ ಟೆಕ್ ಇತ್ಯಾದಿ ಹಲವು ಕೈಗಾರಿಕಾ ಪಾಲುದಾರರೊಂದಿಗೆ ಸಹಭಾಗಿತ್ವ ಮಾಡಿಕೊಂಡಿದ್ದು ಅವುಗಳ ಮೂಲಕ ಎಲೆಕ್ಟ್ರಿಕಲ್ ಹೌಸಿಂಗ್ ಬ್ರಾಕೆಟ್, ಆಟೋಮೊಬೈಲ್ ಕೇಸಿಂಗ್ ಮತ್ತು ವಾಲ್ ಕಾಂಪೋನೆಂಟ್, ಮೋಟಾರು ಹೌಸಿಂಗ್ ಬ್ರಾಕೆಟ್, ಮೋಟಾರು ಇಂಪೆಲರ್ ಬಿಡಿ ಭಾಗಗಳು ಇತ್ಯಾದಿಗಳನ್ನು ಉತ್ಪಾದಿಸಿ ಮತ್ತಷ್ಟು ವಿಸ್ತರಣೆ ಮಾಡಿದೆ. ಅಲ್ಲದೆ ತಂಡ ಈ ತಂತ್ರಜ್ಞಾನದ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾಡುತ್ತಿದೆ ಮತ್ತು ಅದನ್ನು ಕೊಯಮತ್ತೂರಿನ ಸ್ವಯಂ ಇಂಡಸ್ಟ್ರೀಸ್ ಹಾಗೂ ಸರ್ವೋ ಸೈಂಟಿಫಿಕ್ ಎಕ್ವಿಪ್ ಮೆಂಟ್ ಗಳಿಗೆ ವರ್ಗಾವಣೆ ಮಾಡಿದೆ.

ಈ ತಂತ್ರಜ್ಞಾನ ಅತ್ಯಾಧುನಿಕ ಅಲ್ಯುಮಿನಿಯಂ ಕರಗಿಸುವ ಕುಲುಮೆಯಿಂದ ಸಜ್ಜಾಗಿದ್ದು ಮತ್ತು ಹೋಲ್ಡಿಂಗ್ , ಡಿ ಗ್ಯಾಸಿಂಗ್ ಘಟಕ, ಫಿಲ್ಟರಿಂಗ್ ಸೆಟ್ ಅಪ್, ಕೈಗಾರಿಕಾ ವಾಷಿಂಗ್ ಮೆಷಿನ್ ಮತ್ತು ಓವನ್ ಗಳಿಂದ ಅಭಿವೃದ್ಧಿ ಮಾಡಲಾಗಿದೆ.

ಡಾ. ಸಿ. ಭಾಗ್ಯನಾಥನ್ ತಂಡ ಅಲ್ಯುಮಿನಿಯಂ ಸಂಸ್ಕರಣೆಯನ್ನು ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ಹೊಂದಿಕೆಯಾಗುವಂತೆ ಮತ್ತಷ್ಟು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. ಸಂಸ್ಕರಿಸಿದ ಅಲ್ಯುಮಿನಿಯಂನ ಶುದ್ಧತೆ ಕುರಿತು ಅಧ್ಯಯನ ನಡೆಸುವ ಮೂಲಕ ಮತ್ತು ಸಣ್ಣ ಪ್ರಮಾಣದ ಕುಲುಮೆಗಳಿಂದ ದೊಡ್ಡ ಪ್ರಮಾಣದ ಕುಲುಮೆಗಳ ವರೆಗೆ ಲಭ್ಯವಿರುವ ಫಲಿತಾಂಶವನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಶಾಖ ಚೇತರಿಕೆಗೆ ಸಮರ್ಥವಾದ ಸುಧಾರಿತ ಅಲ್ಯುಮಿನಿಯಂ ಇಂಡಕ್ಷನ್ ಕುಲುಮೆಯೊಂದಿಗೆ ಈ ತಂತ್ರಜ್ಞಾನವನ್ನು ಮತ್ತಷ್ಟು ಉನ್ನತೀಕರಿಸಲಾಗುವುದು.

ತಂತ್ರಜ್ಞಾನ ಕಾರ್ಯಾಚರಣೆ

​​​​​

ಅಲ್ಯುಮಿನಿಯಂ ರದ್ದಿ ಕರಗಿಸುವುದು ಮತ್ತು ಸಸಂಸ್ಕರಣ

ಹೆಚ್ಚಿನ ವಿವರಗಳಿಗೆ: ಡಾ. ಸಿ. ಭಾಗ್ಯನಾಥನ್ (9047026422,bhagyanathan@srec.ac.in) ಅವರನ್ನು ಸಂಪರ್ಕಿಸಬಹುದು.

***

 

 



(Release ID: 1713803) Visitor Counter : 237


Read this release in: English , Urdu , Hindi , Punjabi