ಭೂವಿಜ್ಞಾನ ಸಚಿವಾಲಯ

ದೆಹಲಿ ಸುತ್ತ ಮುತ್ತ ಭೂಕಂಪನ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲು ಹೆಚ್ಚುವರಿ ಭೂಕಂಪ ದಾಖಲು ಸಾಧನಗಳ ನಿಯೋಜನೆ


ಭೂಭೌತ ತಂತ್ರಗಳನ್ನು ಬಳಸಿ ಭೂಮಿಯ ಮೇಲ್ಮೈ ರಚನೆ ನಿರೂಪಿಸಲು  ಕ್ಷೇತ್ರಾಧ್ಯಯನ

Posted On: 07 APR 2021 6:13PM by PIB Bengaluru

ರಾಷ್ಟ್ರೀಯ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ 2020ರ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಸಣ್ಣ ಮತ್ತು ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದ್ದವು. ಈ ಕಂಪನದ ಕೇಂದ್ರ ಬಿಂದುಗಳು ಈಶಾನ್ಯ ದೆಹಲಿ, ರೋಹ್ಟಕ್, ಸೋನಿಪತ್, ಬಾಗ್ ಪತ್, ಫರೀದಾಬಾದ್ ಮತ್ತು ಅಲ್ವಾರ್ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದ್ದವು. ನವದೆಹಲಿಯ ಭೂವಿಜ್ಞಾನ ಸಚಿವಾಲಯದ ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರ(ಎನ್ ಸಿಎಸ್) ಕೆಲವು ತಜ್ಞರ ಜೊತೆ ಸಮಾಲೋಚನೆ ನಡೆಸಿತು ಮತ್ತು ದೆಹಲಿ ಸುತ್ತಮುತ್ತ ಭೂಕಂಪನ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲು ಹೆಚ್ಚುವರಿ ಭೂಕಂಪನ ದಾಖಲು ಸಾಧನಗಳನ್ನು ನಿಯೋಜಿಸಬೇಕೆಂದು ಭಾವಿಸಿತು. ಮ್ಯಾಗ್ನೆಟೋ ಟೆಲುರಿಕ್ಸ್ ಮತ್ತಿತರ ಖಭೌತ ತಂತ್ರಗಳನ್ನು ಬಳಸಿ ಭೂಮಿಯ ಮೇಲ್ಮೈ ವ್ಯವಸ್ಥೆಯಲ್ಲಿ ಅಧ್ಯಯನವನ್ನು ಕೈಗೊಳ್ಳಲು ನಿರ್ಧರಿಸಿತು, ಅದರಂತೆ ಎನ್ ಸಿಎಸ್ ಕೆಳಗಿನ ಅಧ್ಯಯನಗಳನ್ನು ಕೈಗೊಂಡಿತು.

  1. 2020ರ ಮೇ ಮತ್ತು ಜೂನ್ ನಡುವೆ 11 ಹೆಚ್ಚುವರಿ ತಾತ್ಕಾಲಿಕ ಕ್ಷೇತ್ರ ಕೇಂದ್ರಗಳನ್ನು ಭೂಕಂಪನದ ಮೇಲೆ ನಿಗಾವಹಿಸಲು ಸ್ಥಾಪಿಸಲಾಯಿತು. ಅವು ಕಾರಣವಾಗುವ ಮೂಲಗಳ ಉತ್ತಮವಾಗಿ ಅರಿತು ಭೂಕಂಪಗಳನ್ನು ನಿಖರವಾಗಿ ಪತ್ತೆಹಚ್ಚಲು ಇಲ್ಲಿಯವರೆಗೆ ಕಾರ್ಯನಿರ್ವಹಿಸಲಿವೆ. ಈ ಕೇಂದ್ರಗಳು ಕಾರ್ಯಾರಂಭ ಮಾಡಿದ್ದು, ಅವು ಕಂಪನಗಳನ್ನು ಸಕಾಲದಲ್ಲಿ ಗುರುತಿಸಲು ದತ್ತಾಂಶವನ್ನು ಒದಗಿಸಲಿದೆ. ಕಳೆದ ಮೂರು ತಿಂಗಳಲ್ಲಿ ದೆಹಲಿ ಪ್ರದೇಶದಲ್ಲಿ 1.8 ಮತ್ತು 2.9ರ ನಡುವಿನ ತೀವ್ರತೆಯ ಒಟ್ಟು 9 ಭೂಕಂಪಗಳು ಸಂಭವಿಸಿವೆ ಮತ್ತು ಅವೆಲ್ಲಾ ಬಹುತೇಕ ಪಶ್ಚಿಮ ದೆಹಲಿ, ನೈಋತ್ಯ ದೆಹಲಿ, ರೋಹ್ಟಕ್, ಸೋನಿಪತ್, ಬಾಗ್ ಪತ್, ಬಹದುರ್ ಗರ್ ಮತ್ತು ಗಾಜಿಯಾಬಾದ್ ಪ್ರದೇಶಗಳಲ್ಲಿವೆ.
  2. ಮ್ಯಾಗ್ನೆಟೋ-ಟೆಲುರಿಕ್(ಎಂಟಿ) ಭೂಭೌತ ಸಮೀಕ್ಷೆಯು ಉಪ-ಮೇಲ್ಮೈನಲ್ಲಿ ವಿದ್ಯುತ್ ವಾಹಕತೆಯ ವಿತರಣೆಯನ್ನು ನಿರ್ಧರಿಸಲು ಮತ್ತು ಸಮಯ ಬದಲಾಗುವ ಕಾಲದ ವಿದ್ಯುತ್  ಮತ್ತು ಕಾಂತೀಯ ಕ್ಷೇತ್ರಗಳ ಅಳತೆಯನ್ನು  ಒಳಗೊಂಡಿರುತ್ತದೆ, ಡೆಹ್ರಾಡೂನ್ ವಾಡಿಯಾ ಹಿಮಾಲಯ ಭೂಗರ್ಭಶಾಸ್ತ್ರ ಕೇಂದ್ರ (ಡಬ್ಲ್ಯೂಐಎಚ್ ಜಿ) ಸಹಭಾಗಿತ್ವದಲ್ಲಿ ಮೊರದಾಬಾದ್ ನಾದ್ಯಂತ (ಮೊರದಾಬಾದ್ ಮತ್ತು ಅದರ ಸುತ್ತಮುತ್ತಲ ಪ್ರದೇಶ) ಮತ್ತು ಗ್ರೇಟ್ ಬೌಂಡರಿ ಫಾಲ್ಟ್(ಬರೇಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶ)ದಲ್ಲಿ ಕೈಗೊಳ್ಳಲಾಗಿದೆ.  ಮಹೇಂದ್ರಗಢ್, ಡೆಹ್ರಾಡೂನ್ ಫಾಲ್ಟ್, ಸೊಹ್ನಾ ಫಾಲ್ಟ್ , ಮಥುರಾ ಫಾಲ್ಟ್, ಮೊರದಾಬಾದ್ ಫೌಲ್ಟ್ ಮತ್ತು ಗ್ರೇಟ್ ಬೌಂಡರಿ ಫಾಲ್ಟ್ ಸುತ್ತಮುತ್ತ ಎಂಟಿ ಸರ್ವೆ ಕಾರ್ಯ ಪೂರ್ಣಗೊಂಡಿದೆ. ದತ್ತಾಂಶ ವಿಶ್ಲೇಷಣೆ ಕಾರ್ಯ ಪ್ರಗತಿಯಲ್ಲಿದೆ.
  3. ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಜೊತೆ ಸೇರಿ ಜಂಟಿಯಾಗಿ ಕೈಗೊಂಡಿರುವ ಮತ್ತೊಂದು ಅಧ್ಯಯನವೆಂದರೆ ಆಕ್ಟಿವ್ ಫಾಲ್ಟ್ ಮ್ಯಾಪಿಂಗ್. ಉಪಗ್ರಹ ಚಿತ್ರಗಳ ವಿಶ್ಲೇಷಣೆ ಆಧರಿಸಿ ವಜಿರಾಬಾದ್, ತಿಮಾರ್ ಪುರ್, ದೆಹಲಿಯ ಕಮಲಾ ನೆಹರು ರಿಡ್ಜ್, ರಾಜಸ್ಥಾನದ ಆಳ್ವಾರ್ ಮತ್ತು ಜುನುಜುನು ಜಿಲ್ಲೆ, ಹರಿಯಾಣದ ಸೋನಿಪತ್ ಸೋಹ್ನಾ ಗುರುಗ್ರಾಮ, ರೋಹ್ಟಕ್ ರೆವಾರಿ ಮತ್ತು ನೂಹ್ ಜಿಲ್ಲೆಗಳಲ್ಲಿ ಹಾಗೂ ಉತ್ತರ ಪ್ರದೇಶದ ಭಾಗ್ ಪತ್ ಜಿಲ್ಲೆಗಳಲ್ಲಿ ಸಕ್ರಿಯ ಫಾಲ್ಟ್ (ಭೂಮಿಯಲ್ಲಿನ ಬಿರುಕು)ಗಳನ್ನು ಗುರುತಿಸಲಾಗಿದೆ. ಉಪಗ್ರಹ ದತ್ತಾಂಶದಿಂದ ಗುರುತಿಸಲಾದ ವೈಶಿಷ್ಟ್ಯಗಳನ್ನು ಮೌಲ್ಯೀಕರಿಸಲು ಎಲ್ಲ ಸ್ಥಳಗಳಲ್ಲಿನ ಭೂ ವೈಜ್ಞಾನಿಕ ಕ್ಷೇತ್ರ ಅಧ್ಯಯನ/ಗ್ರೌಂಡ್ ಟ್ರೂತಿಂಗ್ ಕೈಗೊಂಡಿದ್ದು, ದತ್ತಾಂಶ ವಿಶ್ಲೇಷಣೆ ಮತ್ತು ಕ್ಷೇತ್ರ ಸಾಕ್ಷ್ಯಗಳನ್ನು ಆಧರಿಸಿದ ಉಪಗ್ರಹ ದತ್ತಾಂಶ ವಿಶ್ಲೇಷಣೆ ಕಾರ್ಯ ಪ್ರಗತಿಯಲ್ಲಿದೆ. ಎಂಟಿ ಸರ್ವೆ ಮೂಲಕ ಲಭ್ಯವಾಗುವ ಫಲಿತಾಂಶದೊಂದಿಗೆ (ದೃಷ್ಟಿಕೋನ, ವ್ಯಾಪ್ತಿ ಮತ್ತು ಭೂಮಿಯ ಬಿರುಕಿನ ಆಳ)ದ ಮಾಹಿತಿಯನ್ನು ಪಡೆಯಬಹುದಾಗಿದೆ ಮತ್ತು ಮಾಹಿತಿಯನ್ನು ಬಳಸಿ ಭವಿಷ್ಯದಲ್ಲಿ ಆಸ್ಪತ್ರೆ ಮತ್ತು ಶಾಲೆಗಳು, ಕೈಗಾರಿಕಾ ಘಟಕಗಳು ಮತ್ತು ಕಟ್ಟಡಗಳ ಭೂಕಂಪ ನಿರೋಧಕ ವಿನ್ಯಾಸಗೊಳಿಸಲು ಸಹಕಾರಿಯಾಗಲಿದೆ.

***


(Release ID: 1710372) Visitor Counter : 174


Read this release in: English , Urdu , Hindi