ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ನಾಲ್ಕು ದಿನಗಳ ಜಾಗತಿಕ ಹೂಡಿಕೆ ಮೇಳ: ಭಾರತೀಯ ಔಷಧ 2021ಮತ್ತು ಭಾರತೀಯ ವೈದ್ಯಕೀಯ ಸಾಧನ 2021 ಉದ್ಘಾಟಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು


ಆತ್ಮನಿರ್ಭರ ಭಾರತದ ದೃಷ್ಟಿಕೋನದ ಈಡೇರಿಕೆಗಾಗಿ ಸರ್ಕಾರದಿಂದ ಸಗಟು ಔಷಧ ಮತ್ತು ವೈದ್ಯಕೀಯ ಸಾಧನಗಳ ಕುರಿತಾದ ಪಿ.ಎಲ್.ಐ. ಯೋಜನೆಗೆ 10,000 ಕೋಟಿ ರೂ.ಗೆ ಅಧಿಕ ಹಂಚಿಕೆ: ಶ್ರೀ ಡಿ.ವಿ. ಸದಾನಂದಗೌಡ

ಕೋವಿಡ್ -19 ಲಸಿಕೆಗೆ ಬೌದ್ಧಿಕ ಆಸ್ತಿಯ ಹಕ್ಕಿನ ಮನ್ನಾ ಬೇಡಿಕೆ ಕುರಿತ ಭಾರತದ ನಾಯಕತ್ವಕ್ಕೆ 57 ರಾಷ್ಟ್ರಗಳ ಸೇರ್ಪಡೆ: ಶ್ರೀ ಪೀಯೂಷ್ ಗೋಯೆಲ್

Posted On: 25 FEB 2021 5:05PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದ ಅವರು ಎಫ್.ಐ.ಸಿ.ಸಿ.ಐ ಭಾರತ ಸರ್ಕಾರದ ರಾಸಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆ ಮತ್ತು ಇನ್ವೆಸ್ಟ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಜಾಗತಿಕ ಹೂಡಿಕೆದಾರರ ಮೇಳ: ಭಾರತೀಯ ಔಷಧ 2021 ಮತ್ತು ಭಾರತೀಯ ವೈದ್ಯಕೀಯ ಸಾಧನಗಳು 2021ನ್ನು ಉದ್ಘಾಟಿಸಿದರು. ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರ ಮತ್ತು ಆಹಾರ ಹಾಗೂ ನಾಗರಿಕ ಪೂರೈಕೆ ಖಾತೆ ಸಚಿವ ಶ್ರೀ ಪೀಯೂಷ್ ಗೋಯೆಲ್ ಸಂದರ್ಭದಲ್ಲಿ ವರ್ಚುವಲ್ ಮೂಲಕ ಭಾಗಿಯಾಗಿದ್ದರು. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಎಲ್. ಮಾಂಡವೀಯ ಸಹ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇ.ವೈ.ಎಫ್.ಐ.ಸಿ.ಸಿ.ಐ ನ ‘ಭಾರತೀಯ ಔಷಧಉದ್ದಿಮೆ 2021: ಭವಿಷ್ಯ ಈಗ’ ಎಂಬ ಹೆಸರಿನ ವರದಿಗೂ ಸಹ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಡಿ.ವಿ. ಸದಾನಂದಗೌಡ ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಔಷಧ ಮತ್ತು ವೈದ್ಯಕೀಯ ಸಾಧನಗಳ ಜಾಗತಿಕ ಮತ್ತು ವಿಶ್ವಾಸಾರ್ಹ ಪೂರೈಕೆದಾರನಾಗಿದ್ದ ಭಾರತದ ಸಾಮರ್ಥ್ಯವನ್ನು ಶ್ಲಾಘಿಸಿದರು. ಇತ್ತೀಚಿನ ಯು.ಎನ್‌.ಸಿ.ಟಿ.ಎ.ಡಿ. ವರದಿಯನ್ನು ಉಲ್ಲೇಖಿಸಿದ ಅವರು, ಜಾಗತಿಕವಾಗಿ ವಿದೇಶೀ ನೇರ ಬಂಡವಾಳ ಶೇ.42ರಷ್ಟು ಕುಸಿತ ಕಂಡರೂ ಭಾರತದ ಸಕಾರಾತ್ಮಕ ಎಫ್‌.ಡಿ.ಐ ವೃದ್ಧಿಯನ್ನು ಅವರು ಉಲ್ಲೇಖಿಸಿದರು. “ಸಾಂಕ್ರಾಮಿಕವು ಔಷಧೀಯ ವಲಯದಲ್ಲಿನ ಪೂರೈಕೆ ಸರಪಳಿಗಳ ಜಾಗತಿಕ ದೌರ್ಬಲ್ಯಗಳನ್ನು ಬಹಿರಂಗಪಡಿಸಿತು, ಔಷಧ ಇಲಾಖೆ 6 ವರ್ಷಗಳಲ್ಲಿ 53 ಎಪಿಐಗಳಲ್ಲಿ 6,940 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಔಷಧಗಳಿಗಾಗಿ ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ ಯೋಜನೆಯನ್ನು ಪ್ರಾರಂಭಿಸಿತು. ವೈದ್ಯಕೀಯ ಸಾಧನಗಳಿಗಾಗಿ ಮತ್ತೊಂದು ಪಿಎಲ್ಐ ಯೋಜನೆಯನ್ನು 3,420 ಕೋಟಿ ರೂ. ಹಂಚಿಕೆಯೊಂದಿಗೆ ಪ್ರಕಟಿಸಲಾಗಿದೆ. ಇಂತಹ ಮಧ್ಯಸ್ಥಿಕೆಗಳು ಮತ್ತು ಪ್ರತ್ಸಾಹಕಗಳು ಪ್ರಧಾನಮಂತ್ರಿಯವರ ಆತ್ಮನಿರ್ಭರ ಭಾರತ ಅಥವಾ ವಿಶ್ವಕ್ಕಾಗಿ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಮಹತ್ವದ ಪಾತ್ರ ವಹಿಸುತ್ತದೆ.” ಎಂದು ಶ್ರೀ ಗೌಡ ಹೇಳಿದರು.

“ನಾವು ಹಲವಾರು ಕೋವಿಡ್-19 ಸಂಬಂಧಿತ ವೈದ್ಯಕೀಯ ಸಾಧನಗಳಾದ ವೆಂಟಿಲೇಟರ್‌ಗಳು, ಆರ್‌ಟಿ-ಪಿಸಿಆರ್ ಕಿಟ್‌ ಗಳು, ಪಿಪಿಇ ಕಿಟ್‌ ಗಳು ಮತ್ತು ಮಾಸ್ಕ್ಗಳನ್ನು ಜಾಗತಿಕ ಮಟ್ಟದಲ್ಲಿ ಸರಬರಾಜು ಮಾಡಿದ್ದೇವೆ ಮತ್ತು ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ವೇಗವಾಗಿ ಶೂನ್ಯದಿಂದ 0.5 ಎಂಎನ್ ಗೆ ಹೆಚ್ಚಿಸಿದ್ದೇವೆ. ನಾವು 100ಕ್ಕೂ ಹೆಚ್ಚು ದೇಶಗಳಿಗೆ ಎಚ್‌.ಸಿ.ಕ್ಯು. ಸರಬರಾಜು ಮಾಡಿದ್ದೇವೆ ಮತ್ತು ಈಗ ನಮ್ಮ ನೆರೆಹೊರೆಯವರಿಗೆ ಲಸಿಕೆ ಉತ್ಪಾದನೆಯಲ್ಲೂ ಮುಂಚೂಣಿಯಲ್ಲಿದ್ದೇವೆ. ಭಾರತದಲ್ಲಿನ ವೈದ್ಯಕೀಯ ಸಾಧನಗಳ ಉದ್ಯಮವು ವಾರ್ಷಿಕ ಶೇ.28ನಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. 2025ರ ವೇಳೆಗೆ 50 ಶತಕೋಟಿಯನ್ನು ತಲುಪಲಿದೆ. ಇದಲ್ಲದೆ, ಎಫ್‌.ಡಿ.ಐ. ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ ಶೇ.100 ವರ್ಷಕ್ಕೆ ಹತ್ತಿರದಲ್ಲಿದೆ, ಇದು ಅನೂಹ್ಯ ಮಟ್ಟದ ಅವಕಾಶವನ್ನು ಪ್ರತಿಬಿಂಬಿಸುತ್ತದೆ.” ಎಂದು ಶ್ರೀ ಗೌಡ ಹೇಳಿದರು.

"ಭಾರತೀಯ ಔಷಧ ವೈದ್ಯಕೀಯ ಸಾಧನ 2021ರ ಆವೃತ್ತಿಯಲ್ಲಿ, ಉದ್ಯಮದ ಸಾಮರ್ಥ್ಯವನ್ನು ಅರಿತುಕೊಳ್ಳುವ ಮಾರ್ಗಗಳನ್ನು ಗುರುತಿಸುವುದು ಗುರಿಯಾಗಿದೆ, ಉದಾಹರಣೆಗೆ ನಾವು ಸವಾಲುಗಳನ್ನು ಪರಿಹರಿಸುವ ಮೂಲಕ ಮತ್ತು ಮುಂದುವರಿದ ಬೆಳವಣಿಗೆಗೆ ಯೋಜನೆ ನೀಡುವ ಮೂಲಕ ಗುಣಮಟ್ಟದ ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ಇನ್ನೂ ಬಲವಾದ ಸರಬರಾಜುದಾರರಾಗಿ ಹೊರಹೊಮ್ಮಬಹುದು." ಎಂದೂ ಹೇಳಿದರು.

ವಲಯದಲ್ಲಿನ ಸುಗಮ ವಾಣಿಜ್ಯದ ಬಗ್ಗೆ ಒತ್ತಿ ಹೇಳಿದ ಅವರು, “ಔಷಧ ಇಲಾಖೆಯಲ್ಲಿ ಸ್ಥಾಪಿಸಲಾಗಿರುವ ಔಷಧ ಶಾಖೆಯು ಕೈಗಾರಿಕೆಯೊಂದಿಗೆ ಸಕ್ರಿಯವಾಗಿ ತೊಡಗಿಕೊಂಡಿದ್ದು, ಹೂಡಿಕೆದಾರ ಕೈಹಿಡಿಯುತ್ತಿದೆ ಮತ್ತು ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಹೂಡಿಕೆದಾರರ ಬಾಕಿ ಇರುವ ಸಮಸ್ಯೆಯನ್ನು ನಿರ್ವಹಿಸುತ್ತಿದೆ.” ಎಂದರು.

ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಶ್ರೀ ಪಿಯೂಷ್ ಗೋಯಲ್, “ಕೋವಿಡ್-19 ಲಸಿಕೆಗಾಗಿ ಬೌದ್ಧಿಕ ಆಸ್ತಿ ಮನ್ನಾ ಬೇಡಿಕೆ ಕುರಿತ ಭಾರತದ ನಾಯಕತ್ವಕ್ಕೆ 57 ದೇಶಗಳು ಈಗಾಗಲೇ ಸೇರಿಕೊಂಡಿವೆ. ಎಲ್ಲೆಡೆ ನಾಯಕರು ಸವಾಲಿನ ವಿರುದ್ಧ ನಿಲ್ಲುತ್ತಿದ್ದಾರೆ ಮತ್ತು ಪ್ರಧಾನಮಂತ್ರಿ ಮೋದಿ ಅವರ ಇಡೀ ಜಗತ್ತಿಗೆ ಕೈಗೆಟುಕುವಂತೆ ಆರೋಗ್ಯ ಸೇವೆ ಸಿಗಬೇಕೆಂಬ ಕರೆಗೆ ಸೇರುತ್ತಿದ್ದಾರೆ. ಜಾಗತಿಕವಾಗಿ, ಇಡೀ ಆರೋಗ್ಯ ಪರಿಸರ ವ್ಯವಸ್ಥೆಗೆ ಒಂದೇ ಕಡೆ ಎಲ್ಲ ಪರಿಹಾರ ಒದಗಿಸುವ ತಾಣ ಭಾರತವಾಗಿದೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಏನನ್ನಾದರೂ ನಿರ್ವಹಿಸುವ ಸಾಕಷ್ಟು ವಿಶ್ವಾಸ ನಮಗಿದೆ. ನಿಯಂತ್ರಕ ಮತ್ತು ಉತ್ತಮ ಉತ್ಪಾದನಾ ರೂಢಿಗಳು, ವ್ಯವಸ್ಥೆಗಳು ಮತ್ತು ಪ್ರಮಾಣೀಕರಣಗಳು, ಅನುಮೋದನೆಗಳು ಸದಾ ಪ್ರಮಾಣದಲ್ಲಿ ಬೆಳೆಯಲು ಮತ್ತು ಬೆಲೆಯನ್ನು ತಗ್ಗಿಸಲು ನಮಗೆ ಸಹಾಯ ಮಾಡುತ್ತದೆ.” ಎಂದರು.

ಶ್ರೀ ಮನ್ಸುಖ್ ಮಾಂಡವೀಯಾ ಆವರು, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಚತುರ ನಾಯಕತ್ವದಲ್ಲಿ ಭಾರತವು ಕೋವಿಡ್-19 ವಿರುದ್ಧ ಯಶಸ್ವಿ ಹೋರಾಟ ನಡೆಸಿತು. 1.3 ಶತಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತವು ತನ್ನ ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಗಮನಿಸಿದಾಗ ಸಾಂಕ್ರಾಮಿಕ ರೋಗಕ್ಕೆ ಹೆಚ್ಚು ಒಳಗಾಗಬೇಕಿತ್ತು. ಆದಾಗ್ಯೂ, ಸರ್ಕಾರದ ಸಮರ್ಥ ಮಧ್ಯಪ್ರವೇಶ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದಿಂದಾಗಿ, ಯೋಜಿತ ಮತ್ತು ಸಕಾಲಿಕ ಲಾಕ್ ಡೌನ್ ಹೇರಿಕೆ ಮತ್ತು ದೇಶೀಯ ಲಸಿಕೆಯ ಅಭಿವೃದ್ಧಿ, ಭಾರತವು ನಿಸ್ಸಂದೇಶವಾಗಿ ಕೋವಿಡ್ -19ರ ವಿರುದ್ಧದ ಹೋರಾಟದಲ್ಲಿ ವಿಜಯಿಯಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ಬಲವಾದ ನಿಶ್ಚಯ ಮತ್ತು ಹೋರಾಟದ ಮನೋಭಾವದಿಂದ, ಭಾರತವು ಪಿಪಿಇ ಕಿಟ್‌ ಗಳು, ಮಾಸ್ಕ್ ಗಳು, ವೆಂಟಿಲೇಟರ್‌ ಗಳು ಮತ್ತು ಪರೀಕ್ಷಾ ಕಿಟ್‌ ಗಳ ಅತಿದೊಡ್ಡ ತಯಾರಕರಲ್ಲಿ ಒಂದಾಗಿದೆ. ಕಳೆದ ದಶಕಗಳಲ್ಲಿ ಭಾರತವು ಹೊರಗಿನ ಪ್ರಪಂಚದಿಂದ ಪರೀಕ್ಷಾ ಕಿಟ್‌ ಗಳನ್ನು ಸಹ ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಈಗ ಸ್ವಾವಲಂಬಿ ಅಥವಾ “ಆತ್ಮನಿರ್ಭರ” ಆಗಿದೆ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.” ಎಂದರು.

"ಭಾರತವು ಸುಗಮ ವಾಣಿಜ್ಯವನ್ನು ಉತ್ತಮಪಡಿಸುವ ಮೂಲಕ ಪ್ರಮುಖ ಹೂಡಿಕೆ ತಾಣವಾಗಿ ತನ್ನ ಸ್ಥಾನವನ್ನು ಬಲಪಡಿಸುವುದನ್ನು ಮುಂದುವರಿಸಿದೆ, ಇದಕ್ಕಾಗಿ ಹಲವಾರು ನೀತಿ ಕ್ರಮಗಳನ್ನು ಅದರಲ್ಲೂ ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು, ಈ ವೇದಿಕೆಯು ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಖಾತ್ರಿಯಿದೆ, ಇದು ಭಾರತದ ಬೆಳವಣಿಗೆಯ ಗಾಥೆ ಮತ್ತು ಉದ್ಯಮ ಹಾಗು ದೇಶದ ಪ್ರಗತಿಯ ಹಾದಿಯನ್ನು ರೂಪಿಸಲಿದೆ.” ಎಂದು ಶ್ರೀ ಮಾಲ್ಡವೀಯ ಅವರು ಹೇಳಿದರು.

ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ, ಔಷಧ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಎಸ್. ಅಪರ್ಣಾ ಮಾತನಾಡಿ, "ಔಷಧೀಯ ಇಲಾಖೆಯೊಂದಿಗೆ ಬಹುಶಿಸ್ತೀಯ ವೈದ್ಯಕೀಯ ಸಾಧನ ಉದ್ಯಮವು ರೋಗಿಯ ಹಿತಾಸಕ್ತಿ, ಕ್ಷೇತ್ರದ ಸುಸ್ಥಿರ ಬೆಳವಣಿಗೆ ಹಾಗು ಕೈಗೆಟುಕುವ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಯತ್ತ ಶ್ರಮಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಡಿಪಿಐಐಟಿಯೊಂದಿಗೆ ನಿಕಟ ಸಹಭಾಗಿತ್ವದಲ್ಲಿ ನಾವು 15,000 ಕೋಟಿ ರೂ.ಗಳಷ್ಟು ಅಭೂತಪೂರ್ವ ವಿನಿಯೋಗದೊಂದಿಗೆ ಔಷಧಗಳ ಪಿಎಲ್.ಐ ಯೋಜನೆಯನ್ನು ಅಂಗೀಕರಿಸಿರುವುದು ಸಂತೋಷದ ವಿಷಯವಾಗಿದೆ. ನಮ್ಮ ಉದ್ಯಮವನ್ನು ಪರಿವರ್ತಿಸುವಲ್ಲಿ ಇದು ದಿಕ್ಕು ಬದಲಿಸುವಂಥದ್ದು ಎಂದು ನಾವು ನಂಬುತ್ತೇವೆ.” ಎಂದರು. "ನಾವು ಎಂತಹ ಸ್ಥಿತಿಯಲ್ಲಿದ್ದೇವೆ ಎಂದರೆ, ಅಲ್ಲಿ ಕೈಗಾರಿಕೆ ಮತ್ತು ನೀತಿ ನಿರೂಪಕರ ನಡುವಿನ ವರ್ಧಿತ ಸಹಕಾರವು ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಭಾರತದಲ್ಲಿ ಉತ್ಪಾದಿಸುವ ಮತ್ತು ಜಗತ್ತಿಗೆ ಉತ್ಪಾದಿಸುವ ನಿಜವಾದ ಅರ್ಥದಲ್ಲಿ ಸಾಧಿಸಲು ಸಹಾಯ ಮಾಡುತ್ತದೆ" ಎಂದು ಶ್ರೀಮತಿ ಅಪರ್ಣಾ ಹೇಳಿದರು.

ಭಾರತೀಯ ಔಷಧ ಕೈಗಾರಿಕೆ 2021: ಈಗಿದೆ ಭವಿಷ್ಯಎಂಬ ಹೆಸರಿನ ಇವೈ-ಎಫ್..ಸಿ.ಸಿ. ವರದಿಯ ಮುಖ್ಯಾಂಶಗಳು:

ಭಾರತೀಯ ಔಷಧೀಯ ಮತ್ತು ಆರೋಗ್ಯ ಉದ್ಯಮದ ಬೆಳವಣಿಗೆಯನ್ನು ವೇಗಗೊಳಿಸಲು ಹೊರಹೊಮ್ಮಿದ ಅವಕಾಶಗಳೆಂದರೆ –ಸಂಶೋಧನೆ ಮತ್ತು ಅಭಿವೃದ್ಧಿಯೊಂದಿಗಿನ ಅನುಶೋಧನೆ, ಆರೋಗ್ಯ ವಿತರಣೆ (ಸಂಶೋಧನೆ ಮತ್ತು ಅಭಿವೃದ್ಧಿ), ಉತ್ಪಾದನೆ ಮತ್ತು ಪೂರೈಕೆ ಸರಪಳಿ ಮತ್ತು ಮಾರುಕಟ್ಟೆ ಪ್ರವೇಶ.

  1. ಸಂಶೋಧನೆ ಮತ್ತು ಅನುಶೋಧನೆಗೆ ವೇಗ:

· ಮೌಲ್ಯದ ವ್ಯಾಪಾರದ ಭಾರತದ ಪಾಲನ್ನು ಹೆಚ್ಚಿಸುವ ಅಗತ್ಯವಿದೆ

· ಈ ಉದ್ದೇಶದ ಈಡೇರಿಕೆಗಾಗಿ ಉದ್ಯಮವು, ನಿಯಂತ್ರಣ ಘಟಕವನ್ನು ಸ್ಥಾಪಿಸಲು ಮತ್ತು ಸಂಶೋಧನಾ ಮೂಲಸೌಕರ್ಯವನ್ನು ಸುವ್ಯವಸ್ಥಿತಗೊಳಿಸಲು ಮತ್ತು ಎಲ್ಲ ಸರ್ಕಾರಿ ಕಾಯಗಳಿಂದ ಆರ್ಥಿಕ ನೆರವಿನಿಂದ ಸಂಶೋಧನೆ ಮತ್ತು ಅಭಿವೃದ್ಧಿಗೆ ಆರ್ಥಿಕ ನೆರವಿನ ಹೊಸ ವಿಧಾನಗಳ ಅನ್ವೇಷಣೆಗೆ ಖಾಸಗಿ ಹೂಡಕೆ ಹೆಚ್ಚಿಸಲು ಮತ್ತು ಅತ್ಯಂತ ಹೆಚ್ಚಿನ ಅಪಾಯದ ಮತ್ತು ದೀರ್ಘಕಾಲೀನ ಯೋಜನೆಗಳಿಗೆ ನಿಧಿ ಲಭ್ಯವಾಗುವಂತೆ ಮಾಡಲು, ಕೈಗಾರಿಕಾ – ಶೈಕ್ಷಣಿಕ ಸಹಯೋಗ ಸುಧಾರಿಸಲು ಮತ್ತು ಬಲವಾದ ನಾವಿನ್ಯಪೂರ್ಣ ಪರಿಸರ ವ್ಯವಸ್ಥೆ ರೂಪಿಸಲು ಪರಿಗಣಿಸಬೇಕಿದೆ.

  1. ಸಮಾನ ಮತ್ತು ಸುಸ್ಥಿರ ಆರೋಗ್ಯ ಆರೈಕೆಯ ಸಾಧನೆ:

· ಡಿಜಿಟಲ್ ತಂತ್ರಜ್ಞಾನಗಳ ಹೆಚ್ಚಿದ ಸ್ವೀಕಾರಾರ್ಹತೆಯು ಆರೋಗ್ಯ ವಿತರಣೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಸಾರ್ವತ್ರಿಕ ಆರೋಗ್ಯ ಪ್ರವೇಶದ ಸಾಧನೆಯತ್ತ ಪ್ರಗತಿಯನ್ನು ಪರಿಶೋಧಿಸುತ್ತದೆ, ಆರೋಗ್ಯ ಆರೈಕೆ ವ್ಯಾಪ್ತಿಯ ಆಧಾರದ ಮೇಲೆ ವಿತರಣೆಯನ್ನು ಗುರುತಿಸಲು ಮತ್ತು ಸರಳೀಕರಿಸಲು ಆಧಾರ್ ಕಾರ್ಡ್‌ ನಂತಹ ಇಎಫ್-ಸೆಂಟ್ ಪ್ರಕ್ರಿಯೆಗಳನ್ನು ಸ್ಥಾಪಿಸುತ್ತದೆ.

· ಟೆಲಿಕನ್ಸೆಲ್ಟಿಂಗ್ ಅನ್ನು ಸಕ್ರಿಯಗೊಳಿಸುವುದು ಮತ್ತು ರೋಗ ತಡೆ ಆರೋಗ್ಯ ಆರೈಕೆಯ ಮೇಲೆ ಕೇಂದ್ರೀಕರಿಸುವುದು ಉದ್ಯಮ, ಸರ್ಕಾರ, ಆರೋಗ್ಯ ಕ್ಷೇತ್ರ ಮತ್ತು ವಿಮೆದಾರರ ಪಾತ್ರವನ್ನು ಪರಿಗಣಿಸಲು ಇತರ ಕೆಲವು ಕ್ಷೇತ್ರಗಳಾಗಿವೆ.

  1. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪಾದನೆ ಮತ್ತು ಪೂರೈಕೆ ನೆಲೆಯನ್ನು ಬಲಪಡಿಸುವುದು:

· ಉತ್ಪಾದನಾ ಮತ್ತು ಪೂರೈಕೆ ಸರಪಳಿ ಉಪಕ್ರಮಗಳ ಕೇಂದ್ರ ಬಿಂದು ಎಪಿಐಗಳಲ್ಲಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಕೀರ್ಣ ಜನೌಷಧ ತಯಾರಿಕೆಯನ್ನು ಶಕ್ತಗೊಳಿಸುವುದು. ಸುಗಮ ವಾಣಿಜ್ಯ, ವಿಶ್ವ ದರ್ಜೆಯ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ನಿರ್ಣಾಯಕವಾಗಿದೆ.

· ಭಾರತ ಮತ್ತು ವಿದೇಶಗಳಲ್ಲಿ ಉತ್ತಮ ಪ್ರತಿಭೆಗಳನ್ನು ಆಕರ್ಷಿಸಲು ಉತ್ಪಾದನಾ ಕ್ಷೇತ್ರದ ಆಕರ್ಷಣೆಯನ್ನು ಹೆಚ್ಚಿಸಬೇಕಾಗಿದೆ

· ಬೆಳವಣಿಗೆಯ ಮಹತ್ವಾಕಾಂಕ್ಷೆಗಳನ್ನು ಗಮನಿಸಿದರೆ, ನಿಶ್ಚಿತ ವೆಚ್ಚವನ್ನು ತಗ್ಗಿಸಲು, ವಿದೇಶೀ ವಿನಿಮಯದಲ್ಲಿ ಉಳಿತಾಯವನ್ನು ಶಕ್ತಗೊಳಿಸಲು ಮತ್ತು ಹೆಚ್ಚುವರಿ ಸೌಲಭ್ಯಗಳನ್ನು ಸ್ಥಾಪಿಸುವ ಸಮಯವನ್ನು ಕಡಿಮೆ ಮಾಡಲು, ಭಾರತದಲ್ಲಿ ಔಷಧ ಯಂತ್ರ ಉತ್ಪಾದನಾ ಸೌಲಭ್ಯಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಮಹತ್ವದ್ದಾಗಿದೆ,

· ಶೀತಲ ಸರಪಳಿ ಸೌಲಭ್ಯಗಳು ಸೇರಿದಂತೆ ಸರಕುಗಳ ತ್ವರಿತ ಮತ್ತು ವೆಚ್ಚ ದಕ್ಷತೆಯ ಸಾಗಣೆಗೆ ಅನುಕೂಲವಾಗುವಂತೆ ದೇಶದ ಪ್ರಮುಖ ಔಷಧ ತಾಣಗಳನ್ನು ಸಂಪರ್ಕಿಸಲು ಸಾಗಣೆ ಮೂಲಸೌಕರ್ಯವನ್ನು ಹೆಚ್ಚಿಸುವ ಅವಶ್ಯಕತೆಯಿದೆ.

  1. ಔಷಧಗಳ ಲಭ್ಯತೆಯ ಸುಧಾರಣೆ:

· ವೈದ್ಯರು ಬರೆದುಕೊಡುವ ಔಷಧಗಳ ಮಾರುಕಟ್ಟೆ ಲಭ್ಯತೆಯನ್ನು ದೇಶದಲ್ಲಿ ಸುಧಾರಿಸಬೇಕಾಗಿದೆ

· ಭೌಗೋಳಿಕತೆಯನ್ನು ಅಭಿವೃದ್ಧಿಪಡಿಸಲು ಔಷಧ ಬೆಲೆ ಮತ್ತು ಖರೀದಿ ಮಾದರಿಗಳಲ್ಲಿನ ವಿವಿಧ ಜಾಗತಿಕ ಉತ್ತಮ ಅಭ್ಯಾಸಗಳನ್ನು ಸಂದರ್ಭೋಚಿತಗೊಳಿಸಬಹುದು ಔಷಧ ಉತ್ಪನ್ನಗಳ ಡಿಜಿಟಲ್ ಮಾರುಕಟ್ಟೆಯನ್ನು ಸಹ ಪರಿಗಣಿಸಬಹುದು.

ಕೇಂದ್ರ ಸಚಿವರು, ರಾಜ್ಯ ಸಚಿವರೊಂದಿಗೆ 6ನೇ ಔಷಧ ಮತ್ತು ವೈದ್ಯಕೀಯ ಸಾಧನ ಪ್ರಶಸ್ತಿಗಳನ್ನು ಕೆಳಕಂಡ ಪ್ರವರ್ಗಗಳಲ್ಲಿ ಪ್ರದಾನ ಮಾಡಿದರು.:

ಪ್ರವರ್ಗದ ಸಂಖ್ಯೆ

ಪ್ರವರ್ಗದ ಹೆಸರು

ಪ್ರಶಸ್ತಿ ವಿಜೇತರ ಹೆಸರು

1

ಭಾರತದ ಔಷಧ ವಲಯದ ಮುಂದಾಳು ಪ್ರಶಸ್ತಿ

ಮೆ. ಲ್ಯೂರಸ್ ಲ್ಯಾಬ್ಸ್ ಲಿಮಿಟೆಡ್

2

ಭಾರತದ ವರ್ಷದ ಸಗಟು ಔಷಧ ಕಂಪನಿ ಪ್ರಶಸ್ತಿ

ಮೆ. ಮೆಟ್ರೋಕೆಮ್ ಎ.ಪಿ.ಐ. ಪ್ರೈವೇಟ್ ಲಿಮಿಟೆಡ್

3

ವರ್ಷದ ಭಾರತೀಯ ಔಷಧ ನಾವಿನ್ಯತೆ ಪ್ರಶಸ್ತಿ

ಮೆ. ಗ್ಲೆನ್ ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್

4

ವರ್ಷದ ಭಾರತದ ಔಷಧ ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿ (ಸಿ.ಎಸ್.ಆರ್.) ಕಾರ್ಯಕ್ರಮ ಪ್ರಶಸ್ತಿ

ಮೆ. ಲ್ಯೂಪಿನ್ ಲಿಮಿಟೆಡ್

5

ವರ್ಷದ ಭಾರತದ ವೈದ್ಯಕೀಯ ಸಲಕರಣೆ ಕಂಪನಿ ಪ್ರಶಸ್ತಿ

ಮೆ. ರಿಂಗ್ ನ್ಯಾನೋ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್

6

2020 ರಲ್ಲಿ ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಅಗತ್ಯ ಔಷಧ ಮತ್ತು ವೈದ್ಯಕೀಯ ಉತ್ಪನ್ನಗಳ ಪೂರೈಕೆಯನ್ನು ನಿರ್ವಹಿಸುವಲ್ಲಿ ಅಸಾಧಾರಣ ನಾಯಕತ್ವ ಮತ್ತು ಕೊಡುಗೆಯನ್ನು ಗುರುತಿಸಿ ನೀಡುವ ವಿಶೇಷ ಪ್ರಶಸ್ತಿ

ಡಾ. ಪಿ.ಡಿ. ವಘೇಲಾ, ಮಾಜಿ ಕಾರ್ಯದರ್ಶಿ, ಔಷಧ ಇಲಾಖೆ.

 

***


(Release ID: 1701057) Visitor Counter : 211


Read this release in: English , Marathi , Hindi