ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ಕ್ರಿಕೆಟ್ ತಂಡದ ಸಾಧನೆ ಯುವ ಸಮುದಾಯಕ್ಕೆ ಸ್ಫೂರ್ತಿದಾಯಕ ಸಂದೇಶ: ಪ್ರಧಾನಿ ನರೇಂದ್ರ ಮೋದಿ

Posted On: 22 JAN 2021 1:24PM by PIB Bengaluru

ಯುವ ಸಮುದಾಯದ ಇಂದಿನ ಕ್ರಿಯೆ, ಪ್ರತಿಕ್ರಿಯೆಯಂತಹ ಸಹಜ ಮನೋಪ್ರವೃತ್ತಿ ಆತ್ಮನಿರ್ಭರ್ ಭಾರತ್ ಬಹುದೊಡ್ಡ ರೂಪಾಂತರವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಅಸ್ಸಾಂನ ತೇಜ್‌ಪುರ್  ವಿಶ್ವವಿದ್ಯಾಲಯದ 18 ನೇ ಘಟಿಕೋತ್ಸವವನ್ನು ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಅವರು ಮಾತನಾಡಿದರು.

ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಕುರಿತು ಪ್ರಧಾನಮಂತ್ರಿಯವರು ಸವಿಸ್ತಾರವಾಗಿ ಬೆಳಕು ಚೆಲ್ಲಿದರು. ಸಂಪನ್ಮೂಲ, ಭೌತಿಕ ಮೂಲ ಸೌಕರ್ಯ, ತಂತ್ರಜ್ಞಾನ, ಆರ್ಥಿಕ ಮತ್ತು ಕಾರ್ಯತಂತ್ರದಲ್ಲಿ ಇಂದಿನ ಯುವ ಸಮುದಾಯದ ಕ್ರಿಯೆ, ಪ್ರತಿಕ್ರಿಯೆಯಂತಹ ಸಹಜ ಮನೋಧೋರಣೆಯೊಂದಿಗೆ ಇದು ಬಹುದೊಡ್ಡ ಬದಲಾವಣೆಯ ಆಂದೋಲನವಾಗಿದೆ ಎಂದು ಪ್ರತಿಪಾದಿಸಿದರು.

ಇಂದಿನ ಯುವ ಭಾರತ ಸವಾಲುಗಳನ್ನು ತೆಗೆದುಕೊಳ್ಳುವ ವಿಶಿಷ್ಟ ಮಾರ್ಗವನ್ನು ಹೊಂದಿದೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಭಾರತೀಯ ಕ್ರಿಕೆಟ್ ಯುವ ತಂಡದ ಪ್ರದರ್ಶವನ್ನು ಉಲ್ಲೇಖಿಸಿ ಯುವ ಸಮುದಾಯದ ಮನೋಸ್ಥಿತಿಯನ್ನು ಅವರು ವಿವರಿಸಿದರು. ಭಾರತೀಯ ಕ್ರಿಕೆಟ್ ತಂಡ ಹಲವಾರು ಸವಾಲುಗಳನ್ನು ಎದುರಿಸಿತು. ಯುವ ಕ್ರಿಕೆಟಿಗರು ಸೋಲಿನಿಂದ ಬಳಲಿದರು, ಅಷ್ಟೇ ವೇಗವಾಗಿ ಚೇತರಿಸಿಕೊಂಡರು ಮತ್ತು ಮುಂದಿನ ಪಂದ್ಯವನ್ನು ಗೆದ್ದರು. ಗಾಯದ ನಡುವೆಯೂ ಆಟಗಾರರು ತಮ್ಮ ದೃಢ ನಿಶ್ಚಯವನ್ನು ಪ್ರದರ್ಶಿಸಿದರು. ಅವರು ಸವಾಲನ್ನು ತಲೆಯ ಮೇಲೆ ಹೊತ್ತುಕೊಂಡರು, ಕಷ್ಟಕರ ಪರಿಸ್ಥಿತಿಯಲ್ಲಿ ನಿರಾಶೆಗೊಳ್ಳುವ ಬದಲು ಹೊಸ ಪರಿಹಾರಗಳನ್ನು ಹುಡುಕಿದರು. ಅವರು ಅನನುಭವಿಗಳು ಆದರೆ ಅವರ ನೈತಿಕತೆ ಉನ್ನತಮಟ್ಟದಲ್ಲಿತ್ತು ಮತ್ತು ತಮಗೆ ನೀಡಿದ ಅವಕಾಶವನ್ನು ಬಳಸಿಕೊಂಡರು. ಅವರು  ತಮ್ಮ ಪ್ರತಿಭೆ ಮತ್ತು ಮನೋಧರ್ಮದಿಂದ ಉತ್ತಮ ತಂಡವನ್ನು ಹಿಂದಿಕ್ಕಿದರು ಎಂದು ಶ್ರೀ ನರೇಂದ್ರ ಮೋದಿ ಅವರು ಸ್ಪೂರ್ತಿದಾಯವಾಗಿ ಹೇಳಿದರು.

ನಮ್ಮ ಆಟಗಾರರ ತಾರಾ ಪ್ರದರ್ಶನ ಕ್ರೀಡಾ ಕ್ಷೇತ್ರದ ದೃಷ್ಟಿಯಿಂದ ಮಾತ್ರವಲ್ಲ ಇತರ ವಿಚಾರದಲ್ಲೂ ಮುಖ್ಯವಾಗಿದೆ. ಜೀವನದ ಪಾಠ ಕಲಿಯಲು ಪ್ರದರ್ಶನ ಮಹತ್ವದ್ದಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಪಟ್ಟಿ ಮಾಡಿದರು.

ಮೊದಲಿಗೆ ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ನಂಬಿಕೆ ಮತ್ತು ವಿಶ್ವಾಸವಿರಬೇಕು. ಎರಡನೆಯದಾಗಿ ಸಾಕಾರಾತ್ಮಕ ಮನೋಧೋರಣೆ ಅತಿ ದೊಡ್ಡ ಸಕಾರಾತ್ಮಕ ಫಲಿತಾಂಶವನ್ನು ದೊರೆಕಿಸಿಕೊಡುತ್ತದೆ ಎಂದರು.

ಪ್ರಧಾನಮಂತ್ರಿಯವರು ಹೇಳಿದ ಮೂರನೆಯ ಮತ್ತು ಅತ್ಯಂತ ಪ್ರಮುಖ ಪಾಠ ಎಂದರೆ ಒಬ್ಬರು ಎರಡು ಆಯ್ಕೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲಿ ಒಂದು ಸುರಕ್ಷಿತ ಮತ್ತು ಇನ್ನೊಂದು ತ್ರಾಸದಾಯಕ ಗೆಲುವಿನತ್ತ ಲಕ್ಷ್ಯ ವಹಿಸಬೇಕು. ಅದರಲ್ಲಿ ಒಬ್ಬರು ಖಂಡಿತವಾಗಿಯೂ ವಿಜಯದ ಆಯ್ಕೆಯನ್ನು ಅನ್ವೇಷಣೆ ಮಾಡಬೇಕು. ಸಾಂದರ್ಭಿಕವಾಗಿ ಎದುರಾಗುವ ವೈಫಲ್ಯದಲ್ಲಿ ಯಾವುದೇ ಹಾನಿಯಿಲ್ಲ ಮತ್ತು ಒಬ್ಬರು ಅಪಾಯವನ್ನು ತೆಗೆದುಕೊಳ್ಳುವುದನ್ನು ತಡೆಯಬಾರದು. ನಾವು ಪೂರ್ವಭಾವಿಯಾಗಿ ನಿರ್ಭಯರಾಗಿಬೇಕು. ವೈಫಲ್ಯ ಮತ್ತು ಅನಗತ್ಯ ಒತ್ತಡದ ಭಯವನ್ನು ಜಯಿಸಿದರೆ ನಾವು ನಿರ್ಭಯರಾಗಿ ಹೊರ ಹೊಮ್ಮುತ್ತೇವೆ. ಯುವ ಭಾರತ ತನ್ನ ವಿಶ್ವಾಸ ಮತ್ತು ಅರ್ಪಣಾ ಮನೋಭಾವನೆ ಹೊಂದಿದ್ದು ಇದು  ಕ್ರಿಕೆಟ್ ಅಂಗಳದಲ್ಲಿ  ಮಾತ್ರವಲ್ಲ. ನೀವೆಲ್ಲರೂ ಚಿತ್ರಣದ ಭಾಗವಾಗಿದ್ದೀರಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಹೇಳಿದರು.

***



(Release ID: 1691235) Visitor Counter : 182