ರಕ್ಷಣಾ ಸಚಿವಾಲಯ

ಏರೋ ಇಂಡಿಯಾ-21 ರ ಸಿದ್ದತೆಗಳನ್ನು ಪರಿಶೀಲಿಸಿದ ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್


ಬೆಂಗಳೂರಿನ ಆಗಸದಲ್ಲಿ ವಿಶ್ವದ ಮೊದಲ ಹೈಬ್ರಿಡ್ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನ

ಏರೋ ಇಂಡಿಯಾ -21 ಮೊಬೈಲ್ ಆ್ಯಪ್ ಬಿಡುಗಡೆ

Posted On: 15 JAN 2021 7:01PM by PIB Bengaluru

ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು, 2021 ಜನವರಿ 15 ರಂದು ಬೆಂಗಳೂರಿನಲ್ಲಿ ನಡೆದ ಉನ್ನತ ಸಮಿತಿ ಸಭೆಯಲ್ಲಿ ಏರೋ ಇಂಡಿಯಾ - 21 ಸಿದ್ಧತೆಗಳನ್ನು ಪರಿಶೀಲಿಸಿದರು. ಏರೋ ಇಂಡಿಯಾ 2021 ಬಹು ನಿರೀಕ್ಷಿತ ವಾಯು ಪ್ರದರ್ಶನವಾಗಿದ್ದು, ಇದನ್ನು 2021 ಫೆಬ್ರವರಿ 03 ರಿಂದ 05 ರವರೆಗೆ ಆಯೋಜಿಸಲಾಗಿದೆ. ಇದು ವಿಶ್ವದ ಮೊದಲ ಹೈಬ್ರಿಡ್ ಪ್ರದರ್ಶನವಾಗಿದ್ದು ಕಾರ್ಯಕ್ರಮದ ವ್ಯಾವಹಾರಿಕ ಭಾಗಗಳು ಭೌತಿಕ ಹಾಗೂ ವರ್ಚುವಲ್ ಮಾದರಿಯಲ್ಲಿ ನಡೆಯುತ್ತವೆ.

ಕಾರ್ಯಕ್ರಮವನ್ನು ಸುರಕ್ಷಿತವಾಗಿ ಆಯೋಜಿಸುವ ಬಗ್ಗೆ ಸಭೆಯಲ್ಲಿ ರಕ್ಷಣಾ ಸಚಿವರು ಒತ್ತಿಹೇಳಿದರು. ಇದನ್ನು ವಿಶ್ವ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಕ್ಕೆ ಸೇರಿಸಿಕೊಳ್ಳುವಂತೆ ಮಾಡಬೇಕು ಎಂದರು.  ಏರೋ ಇಂಡಿಯಾ - 21 ಹೈಬ್ರಿಡ್ ಮಾದರಿಯು ಸಾಂಕ್ರಾಮಿಕ ರೋಗದ ಆತಂಕ ನಿವಾರಣೆಯಾಗುವವರೆಗೆ ನವ ವಾಸ್ತವದ ವ್ಯವಹಾರಗಳನ್ನು ನಡೆಸಲು ಜಗತ್ತು ಅನುಕರಿಸುವ ಮಾದರಿಯಾಗಬೇಕು ಎಂದು ಅವರು ಹೇಳಿದರು. ಏರೋ ಇಂಡಿಯಾ -21 ಏಕಕಾಲದಲ್ಲಿ ಭೌತಿಕ ಮತ್ತು ವರ್ಚುವಲ್ ಪ್ರದರ್ಶನವಾಗಿದೆ. ಪ್ರದರ್ಶನ ಮಳಿಗೆಗಳನ್ನು ಭೌತಿಕ ಮತ್ತು ವರ್ಚುವಲ್ ಎರಡರಲ್ಲಿಯೂ ಒದಗಿಸಲಾಗುತ್ತಿದ್ದು, ಇದು ಹೆಚ್ಚು ಮಂದಿ ಪ್ರದರ್ಶನದಲ್ಲಿ ತೊಡಗಿಸಿಕೊಳ್ಳಲು ಕಾರಣವಾಗುತ್ತದೆ ಮತ್ತು ಭೌತಿಕವಾಗಿ ಸೇರಲು ಸಾಧ್ಯವಾಗದ ಪ್ರದರ್ಶಕರಿಗೆ ಹೆಚ್ಚಿನ ಸಂಪರ್ಕ ದೊರೆಯುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ವರ್ಚುವಲ್ ಸೆಮಿನಾರ್ಗಳಲ್ಲಿ ಭಾಗವಹಿಸಿ ಪ್ರದರ್ಶಕರು ಮತ್ತು ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಬಹುದು, ಬಿ 2 ಬಿ (ವ್ಯವಹಾರ) ಸಭೆಗಳನ್ನು ನಡೆಸಬಹುದು ಮತ್ತು ಉತ್ಪನ್ನದ ವಿವರಗಳು ಮತ್ತು ಪೂರಕ ವೀಡಿಯೊಗಳನ್ನು ಸಹ ವೀಕ್ಷಿಸಬಹುದು ಎಂದು ರಕ್ಷಣಾ ಸಚಿವರು ಹೇಳಿದರು.

ಏರೋ ಇಂಡಿಯಾ ಪ್ರಮುಖ ಅಂತರರಾಷ್ಟ್ರೀಯ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನಗಳಲ್ಲೊಂದಾಗಿದೆ. ಇದರ ಆಯೋಜನೆಗೆ ಸಕ್ರಿಯ ಭಾಗವಹಿಸುವಿಕೆ, ಹಂಚಿಕೆಯ ಜವಾಬ್ದಾರಿ ಮತ್ತು ಎಲ್ಲಾ ಹಂತಗಳಲ್ಲಿ ಸಮನ್ವಯ ಪ್ರಯತ್ನಗಳ ಅಗತ್ಯವಿದೆ. ನಿರ್ವಹಿದಬೇಕಾದ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಕುರಿತು ಸಭೆಯಲ್ಲಿ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿರನ್ವೇಯಿಂದ ಬಿಲಿಯನ್ ಅವಕಾಶಗಳು ಕಾರ್ಯಕ್ರಮದ ವಿಷಯವಾಗಿದೆ. ಮೊದಲಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವ ಪ್ರದರ್ಶನವು, ಮೊದಲನೆಯವರಲ್ಲಿ ಮೊದಲಿಗರಾಗುವ ಭಾರತದ ಸಂಕಲ್ಪವನ್ನು ತೋರಿಸುತ್ತದೆ. ದೇಶೀಯ ತಾಂತ್ರಿಕ ಮತ್ತು ಲಾಜಿಸ್ಟಿಕ್ ಬಲವು ಮುಂಚೂಣಿಯಲ್ಲಿರುತ್ತೆ ಮತ್ತು ಕಾರ್ಯಕ್ರಮವು ನಮ್ಮ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮ, ಸ್ಟಾರ್ಟ್-ಅಪ್, ಎಂಎಸ್ಎಂಇಗಳು ಭಾಗವಹಿಸುವ ವಿದೇಶಿ ಒಇಎಂಗಳೊಂದಿಗೆ ಸಹಭಾಗಿತ್ವವನ್ನು ಹೊಂದಲು ಹುರಿದುಂಬಿಸುತ್ತದೆ.

ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಪಿ. ರವಿ ಕುಮಾರ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ರಕ್ಷಣಾ ಉತ್ಪಾದನಾ ಇಲಾಖೆಯ ಕಾರ್ಯದರ್ಶಿ ಶ್ರೀ ರಾಜ್ ಕುಮಾರ್, ಎಒಸಿ ಸದರ್ನ್ ಕಮಾಂಡ್ ಏರ್ ಮಾರ್ಷಲ್ ಆರ್.ಕೆ. ಮಾಥುರ್, ಜಿಒಸಿ ಸದರ್ನ್ ಕಮಾಂಡ್ಲೆಫ್ಟಿನೆಂಟ್ ಜನರಲ್ ಸಿಪಿ ಮೊಹಂತಿ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಏರೋ ಇಂಡಿಯಾ -21 ಅಂತರರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುತ್ತದೆ. ಸಾಮಾಜಿಕ ಅಂತರ, ಜನಸಂದಣಿಯ ನಿಯಂತ್ರಣಕ್ಕಾಗಿ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತದೆ. ಇದರಲ್ಲಿ ಒಟ್ಟು ಪ್ರದರ್ಶನ ಪ್ರದೇಶದ ಸಂಖ್ಯೆಯನ್ನು 15000 ಜನರಿಗೆ ಮತ್ತು ವಾಯು ಪ್ರದರ್ಶನ ವೀಕ್ಷಣೆ ಸ್ಥಳವನ್ನು 3000 ಮಂದಿಗೆ ಕಡಿತಗೊಳಿಸಲಾಗಿದೆ. ಮುಖಗವಸು ಧರಿಸುವಂತಹ ಸುರಕ್ಷಿತ ಸಾಮಾಜಿಕ ನಡವಳಿಕೆ ಕಡ್ಡಾಯವಾಗಿದೆ. ಸಂಪರ್ಕರಹಿತ ಸಂವಹನಕ್ಕಾಗಿ. ಕರಪತ್ರಗಳು ಮತ್ತು ಮಾಹಿತಿಯು ಡಿಜಿಟಲ್ ಸ್ವರೂಪದಲ್ಲಿರುತ್ತದೆ, ನೋಂದಣಿ ಮತ್ತು ಬೂತ್ ಭೇಟಿಗಳಿಗಾಗಿ ಸಂಪರ್ಕ ರಹಿತ ಅನುಭವ, 03 ಫೆಬ್ರವರಿ 2021ಕ್ಕೆ 72 ಗಂಟೆಗಳ ಮೊದಲು ಮಾಡಿಸಿರುವ ಆರ್ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ, ಪ್ರವೇಶ ದ್ವಾರದಲ್ಲಿದಲ್ಲಿ ತಪಾಸಣೆ ನಡೆಸಲಾಗುವುದು. ಪ್ರದರ್ಶನದಲ್ಲಿ ಪಾಲ್ಗೊಳ್ಳುವವರ ಸುರಕ್ಷತೆಗಾಗಿ ರೋಗಲಕ್ಷಣಗಳಿರುವ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ರಕ್ಷಣಾ ಸಚಿವರು ಇಂದು ಏರೋ ಇಂಡಿಯಾ -21 ಮೊಬೈಲ್ ಆ್ಯಪ್ ಅನ್ನು ಸಹ ಬಿಡುಗಡೆ ಮಾಡಿದರು. ಇದು ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಸಂವಾದಾತ್ಮಕ ಇಂಟರ್ಫೇಸ್ ಆಗಿರುತ್ತದೆ ಮತ್ತು ಪ್ರದರ್ಶನ ಸ್ಥಳಕ್ಕೆ ಅಡಚಣೆ ಮುಕ್ತ ಪ್ರವೇಶವನ್ನು ಒದಗಿಸುತ್ತದೆ. ಅಪ್ಲಿಕೇಶನ್ ಆಪಲ್ ಆಪ್ ಸ್ಟೋರ್ / ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಕಾರ್ಯಕ್ರಮಕ್ಕೂ ಮೊದಲು ಮತ್ತು ನಂತರ  ಪ್ರದರ್ಶಕರು, ಪಾಲ್ಗೊಳ್ಳುವವರು ಮತ್ತು ಮಾಧ್ಯಮಗಳಿಗೆ ನೆರವಾಗುವ ವೈಶಿಷ್ಟ್ಯಗಳಿರುವ ಸಮಗ್ರ ಅಪ್ಲಿಕೇಶನ್ ಆಗಿದೆ.

ಬೃಹತ್ ಏರೋ ಪ್ರದರ್ಶನಕ್ಕೆ ಕ್ಷಣಗಣನೆ ಆರಂಬವಾಗಿದ್ದು, 576 ಪ್ರದರ್ಶಕರು ಮತ್ತು 35ಕ್ಕೂ ಹೆಚ್ಚು ವಿದೇಶಿ ನಿಯೋಗಗಳು ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದು, ತಮ್ಮ & ಡಿ ವ್ಯವಹಾರಗಳ ವೃದ್ಧಿಗೆ ರಕ್ಷಣಾ ಸಚಿವಾಲಯದ ಮೇಲೆ ಇಟ್ಟಿರುವ ನಂಬಿಕೆಯನ್ನು ಪುನರಾವರ್ತಿಸಿವೆ. ಏರೋ ಇಂಡಿಯಾ 2021 ತನ್ನ ವ್ಯವಹಾರ ಹಿತಾಸಕ್ತಿಗಳನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾಗತಿಕ ಕ್ರಮಗಳನ್ನು ಕೈಗೊಳ್ಳುವ ಭಾರತದ ಸಂಕಲ್ಪದ ಸಂಕೇತವಾಗಿದೆ.

ಆತಿಥೇಯ ರಾಜ್ಯವು ಏರೋ ಇಂಡಿಯಾ ಕುರಿತು ಕೈಗೊಂಡಿರುವ ಸನ್ನದ್ಧತೆ ಮತ್ತು ಪ್ರಯತ್ನಗಳನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿಯೂ ಸುರಕ್ಷಿತವಾಗಿ ಏರೋ ಇಂಡಿಯಾ -21 ನಡೆಸುವ ಬಗ್ಗೆ ಅವರು ವಿಶ್ವಾಸ ವ್ಯಕ್ತಪಡಿಸಿದರು ಎಚ್ಎಎಲ್ಗೆ 48,000 ಕೋಟಿ ರೂ.ಗಳ ಮೌಲ್ಯದ 83 ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಖರೀದಿ ಆದೇಶ ನೀಡುವ ಮೂಲಕ ಸ್ವಾವಲಂಬನೆಯತ್ತ ದಾಪುಗಾಲು ಇಡಲಾಗಿದೆ ಎಂದು . ಶ್ರೀ ರಾಜನಾಥ್ ಸಿಂಗ್ ಹೇಳಿದರು. ಇದರಿಂದ ಎಂಎಸ್ಎಂಇ ಮತ್ತು ಖಾಸಗಿ ವಲಯದ ವ್ಯಾಪಕ ಭಾಗವಹಿಸುವಿಕೆಯೊಂದಿಗೆ 50,000 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇದು ಕರ್ನಾಟಕ ಮತ್ತು ನಿರ್ದಿಷ್ಟವಾಗಿ ಬೆಂಗಳೂರಿಗೆ ವರದಾನವಾಗಲಿದೆ ಎಂದು ಅವರು ತಿಳಿಸಿದರು.

***


(Release ID: 1688962) Visitor Counter : 218