ನಾಗರೀಕ ವಿಮಾನಯಾನ ಸಚಿವಾಲಯ
ಉಡಾನ್ ಅಡಿಯಲ್ಲಿ ಬೆಳಗಾವಿ - ಸೂರತ್ - ಕಿಶನ್ ಗಢ ಮಾರ್ಗದ ಮೊದಲ ವಿಮಾನ ಸಂಚಾರಕ್ಕೆ ಹಸಿರು ನಿಶಾನೆ
प्रविष्टि तिथि:
21 DEC 2020 7:40PM by PIB Bengaluru
ಭಾರತ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ ದೇಶದ ಸಾಮಾನ್ಯ ನಾಗರಿಕರೆ ವಾಯು ಯಾನ ಮಾಡಿ – ಆರ್.ಸಿ.ಎಸ್.- ಉಡಾನ್ ಅಡಿಯಲ್ಲಿ ಕರ್ನಾಟಕದ ಬೆಳಗಾವಿಯಿಂದ ಗುಜರಾತ್ ನ ಸೂರತ್ ಹಾಗೂ ಅಜ್ಮೇರ್ ನ ಕಿಶನ್ ಗಢ ನಡುವೆ ಪ್ರಥಮ ವಿಮಾನ ಸಂಚಾರಕ್ಕೆ ಇಂದು ಹಸಿರು ನಿಶಾನೆ ತೋರಲಾಯಿತು. ನಾಗರಿಕ ವಿಮಾನಯಾನ ಸಚಿವಾಲಯ (ಎಂ.ಓ.ಸಿ.ಎ.) ಅಧಿಕಾರಿಗಳು ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎ.ಎ.ಐ.)ದ ಅಧಿಕಾರಿಗಳು ಈ ಉದ್ಘಾಟನಾ ಹಾರಾಟದ ವೇಳೆ ಹಾಜರಿದ್ದರು. ಸೂರತ್ – ಕಿಶನ್ ಗಢ – ಬೆಳಗಾವಿ ಮಾರ್ಗದಲ್ಲಿ ವಿಮಾನ ಸಂಚಾರದ ಕಾರ್ಯಚರಣೆಯ ಆರಂಭ, ಉಡಾನ್ ಅಡಿಯಲ್ಲಿ ದೇಶದ ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಿಗೆ ಮಹಾನಗರಗಳೊಂದಿಗೆ ವಾಯು ಸಂಪರ್ಕವನ್ನು ಒದಗಿಸುವ ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿದೆ. 300ಕ್ಕೂ ಹೆಚ್ಚು ಮಾರ್ಗಗಳಲ್ಲಿ ಉಡಾನ್ ಯೋಜನೆ ಅಡಿಯಲ್ಲಿ ವಿಮಾನಗಳ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ಯೋಜನೆಯ ವ್ಯಾಪ್ತಿಯಲ್ಲಿ ಇದು 303ನೇ ಮಾರ್ಗದ ಉದ್ಘಾಟನೆಯಾಗಿದೆ.
ವಾಯು ಸಂಪರ್ಕವಿಲ್ಲದ ವಲಯಗಳನ್ನು ಸಂಪರ್ಕಿಸುವ ನಿರಂತರ ಪ್ರಯತ್ನದಲ್ಲಿ, ಕಳೆದ ವರ್ಷ ಉಡಾನ್ -3 ಹರಾಜಿನಲ್ಲಿ ಸ್ಟಾರ್ ಏರ್ ಗೆ ಬೆಳಗಾವಿ ಸೂರತ್ – ಕಿಶನ್ ಗಢ ಮಾರ್ಗದ ಕಾರ್ಯಾಚರಣೆಯನ್ನು ನೀಡಲಾಗಿತ್ತು. ವಿಮಾನ ಯಾನ ದರಗಳು ಕೈಗೆಟುಕುವ ಮತ್ತು ಸಾಮಾನ್ಯ ಜನರಿಗೆ ಅನುವಾಗುವಂತೆ ಉಡಾನ್ ಯೋಜನೆಯಡಿ ವಿಮಾನಯಾನ ಸಂಸ್ಥೆಗಳಿಗೆ ಕಾರ್ಯಸಾಧ್ಯತೆ ಅಂತರದ ನಿಧಿ (ವಿಜಿಎಫ್) ನೀಡಲಾಗುತ್ತಿದೆ. ಈ ವಿಮಾನಯಾನ ಸಂಸ್ಥೆ ವಾರದಲ್ಲಿ ಮೂರು ದಿನ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿದ್ದು, ತನ್ನ 50 ಆಸನಗಳ ಎಂಬ್ರೇರ್ -145 ವಿಮಾನವನ್ನು ನಿಯೋಜಿಸಿದೆ. ಈ ಮಾರ್ಗವು ವಿಮಾನಯಾನ ಸಂಸ್ಥೆಯಿಂದ 20ನೇ ಉಡಾನ್ ಮಾರ್ಗದ ಪ್ರಾರಂಭವನ್ನು ಸೂಚಿಸುತ್ತದೆ.
ಈ ಮಾರ್ಗದ ವೈಮಾನಿಕ ಸಂಪರ್ಕವು ಸ್ಥಳೀಯರ ಬಹುನಿರೀಕ್ಷಿತ ಬೇಡಿಕೆಗಳಲ್ಲಿ ಒಂದಾಗಿತ್ತು. ಕಿಶನ್‌ಗಢದ ಪ್ರಸಿದ್ಧ ನವಗ್ರಹ ದೇವಸ್ಥಾನ, ಅಜ್ಮೀರ್ ಷರೀಫ್ ದರ್ಗಾ, ಪುಷ್ಕರ್ ಸರೋವರ, ಪುಷ್ಪ ಮಹಲ್ ಅರಮನೆ, ರೂಪಂಗಢ್ ಕೋಟೆ ಇತ್ಯಾದಿಗಳಿಗೆ ಜನರು ಆಗಾಗ್ಗೆ ಭೇಟಿ ನೀಡುತ್ತಾರೆ. ಇದಲ್ಲದೆ, ಕಿಶನ್ ಗಢವನ್ನು ಭಾರತದ ಅಮೃತ ಶಿಲೆಯ ನಗರ ಎಂದೂ ಕರೆಯಲಾಗುತ್ತದೆ ಮತ್ತು ಇದು ಕೆಂಪು ಮೆಣಸಿನಕಾಯಿಯ ದೊಡ್ಡ ಮಾರುಕಟ್ಟೆಯೂ ಆಗಿದೆ. ಇದುವರೆಗೂ ಬೆಳಗಾವಿಯಿಂದ ಕಿಶನ್ ಗಢಕ್ಕೆ ನೇರ ಸಾರಿಗೆ ಸಂಪರ್ಕ ಲಭ್ಯವಿರಲಿಲ್ಲ. ಪ್ರಯಾಣಿಕರು ಆಗ್ರಾ ತನಕ ರೈಲಿನಲ್ಲಿ ಪ್ರಯಾಣಿಸಬೇಕಾಗಿತ್ತು ಮತ್ತು ಅಲ್ಲಿಂದ ಅವರು ಕಿಶನ್ ಗಢ ತಲುಪಲು ಬಸ್ ನಲ್ಲಿ ತೆರಳ ಬೇಕಾಗುತ್ತಿತ್ತು. ಅದೇ ರೀತಿ ರಸ್ತೆ ಮೂಲಕ ಇಡೀ ಪ್ರಯಾಣ 25 ಗಂಟೆ ಆಗುತ್ತಿತ್ತು. ಈಗ ಜನರು ಆರಾಮವಾಗಿ 3 ಗಂಟೆ 10 ನಿಮಿಷದಲ್ಲಿ ವಿಮಾನದ ಮೂಲಕ ಪ್ರಯಾಣಿಸಬಹುದಾಗಿದೆ. ಇದು ಬೆಳಗಾವಿ ಮತ್ತು ಕಿಶನ್ ಗಢ ನಡುವೆ ಆಗಾಗ್ಗೆ ಪ್ರಯಾಣಿಸುವ ಜನರ ಹಣ, ಸಮಯ, ಶ್ರಮ ಉಳಿಸುವುದರ ಜೊತೆಗೆ ಈ ಮಾರ್ಗದಲ್ಲಿ ನಿಯಮಿತ ವಿಮಾನ ಹಾರಾಟದ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರಿಂದ ಈ ಪ್ರದೇಶದ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ವೇಗ ದೊರೆಯುತ್ತದೆ. ಅಂತೆಯೇ, ರೇಷ್ಮೆ ನಗರಿ ಮತ್ತು ವಜ್ರಗಳ ನಗರಿ ಸೂರತ್ ನ ಸ್ಥಳೀಯರು ಅಮೃತಶಿಲೆ ನಗರವನ್ನು ತಲುಪಲು ದೀರ್ಘ ರೈಲು ಮತ್ತು ರಸ್ತೆ ಪ್ರಯಾಣವನ್ನು ಮಾಡಬೇಕಾಗುತ್ತಿತ್ತು. ಇಡೀ ಪ್ರಯಾಣವು 50 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈಗ, ಸ್ಥಳೀಯರು ಕೇವಲ 80 ನಿಮಿಷಗಳ ಹಾರಾಟದ ಆಯ್ಕೆಯೊಂದಿಗೆ ಕಿಶನ್ ಗಢ ತಲುಪುತ್ತಾರೆ.
ವಿಮಾನದ ವೇಳಾಪಟ್ಟಿ ಈ ಕೆಳಕಂಡಂತಿದೆ:
|
ವಿಮಾನದ ಸಂಖ್ಯೆ
|
ವಲಯ
|
|
ನಿರ್ಗಮನ.
|
ಆಗಮನ
|
ಆವರ್ತನ
|
ಕಾರ್ಯಾಚಣೆಯಾಗುವ ದಿನಾಂಕ
|
|
ಓಜಿ-141
|
ಬೆಳಗಾವಿ-ಸೂರತ್
|
|
12:00
|
13:20
|
ಸೋಮ, ಬುಧ, ಶುಕ್ರ
|
ಡಿ.21 ನಿಂದ
|
|
ಓಜಿ -143
|
ಸೂರತ್ –ಕಿಶನ್ ಗಢ
|
|
13:50
|
15:10
|
ಸೋಮ, ಬುಧ, ಶುಕ್ರ
|
ಡಿ.21 ನಿಂದ
|
|
ಓಜಿ -144
|
ಕಿಶನ್ ಗಢ –ಸೂರತ್
|
|
15:40
|
17:00
|
ಸೋಮ, ಬುಧ, ಶುಕ್ರ
|
ಡಿ.21 ನಿಂದ
|
|
ಓಜಿ -142
|
ಸೂರತ್ -ಬೆಳಗಾವಿ
|
|
17:30
|
18:50
|
ಸೋಮ, ಬುಧ, ಶುಕ್ರ
|
ಡಿ.21 ನಿಂದ
|
****
(रिलीज़ आईडी: 1682507)
आगंतुक पटल : 198