PIB Headquarters

ಸಿಎಸ್ಐಆರ್- ಎನ್.ಎ.ಎಲ್. ತಿಳಿವಳಿಕೆ ಒಪ್ಪಂದಕ್ಕೆ ಸಹಿ

Posted On: 24 NOV 2020 5:36PM by PIB Bengaluru

ಸಿಎಸ್ಐಆರ್ ರಾಷ್ಟ್ರೀಯ ವಾಯು ಪ್ರದೇಶ ಪ್ರಯೋಗಾಲಯ (ಎನ್..ಎಲ್.) ಬೆಂಗಳೂರು, ಕೇಂದ್ರ ಸ್ಥಾನ ನಿರ್ವಹಣೆ ಕಮಾಂಡ್ ಮತ್ತು ಡಿಪೋಗಳು (ಎಚ್.ಕ್ಯು.ಎಂಸಿ), ..ಎಫ್. ನಾಗ್ಪುರದೊಂದಿಗೆ, ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಮತ್ತು ಜಂಟಿ ಸಂಶೋಧನಾ ಕಾರ್ಯಕ್ರಮ ಕೈಗೊಳ್ಳಲು ಸಂಶೋಧನೆ ಮತ್ತು ಅಭಿವೃದ್ಧಿಯ ಸಹಕಾರ ಮತ್ತು ಉತ್ತೇಜನಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

ಎಂಜಿನಿಯರಿಂಗ್ ವಿವಿಧ ಕ್ಷೇತ್ರಗಳಲ್ಲಿ ಸಹಯೋಗಕ್ಕಾಗಿ ಉದ್ದೇಶಿತ ಕ್ಷೇತ್ರಗಳಲ್ಲಿ ವಾಯು ಪ್ರದೇಶ, ಮೆಕ್ಯಾನಿಕಲ್, ಮೆಟಲರ್ಜಿಕಲ್ ಸೈನ್ಸಸ್ ಮತ್ತು ಸಂಯುಕ್ತ ತಂತ್ರಜ್ಞಾನ ಸೇರಿವೆ. ಸಂಚಾಲನೆ ಮತ್ತು ಸಂಚಾಲನೆ ವ್ಯವಸ್ಥೆ, ಉಕ್ಕು ತಂತ್ರಜ್ಞಾನ, ಮೆಟಲರ್ಜಿ ಮತ್ತು ಲೋಹವಿಜ್ಞಾನ ಮತ್ತು ಸಂಯುಕ್ತ ತಂತ್ರಜ್ಞಾನ ಮತ್ತು ತುಕ್ಕು ವಿಜ್ಞಾನದಲ್ಲಿ ನಿರ್ದಿಷ್ಟ ಸಂಶೋಧನಾ ಕಾರ್ಯಕ್ರಮಗಳು ವಿಕಸನಗೊಳ್ಳಲಿದ್ದು, ಇದು ಎರಡೂ ಸಂಸ್ಥೆಗಳಿಗೆ ಪ್ರಯೋಜನವನ್ನು ನೀಡುತ್ತವೆ.

ತಿಳಿವಳಿಕೆ ಒಪ್ಪಂದಕ್ಕೆ ಎಚ್.ಕ್ಯು.ಎಂ.ಸಿ. ಎಂಜಿನಿಯರಿಂಗ್ ಸೇವೆಗಳ ಉಸ್ತುವಾರಿಯ ಏರ್ ಆಫೀಸರ್ ಏರ್ ವೈಸ್ ಮಾರ್ಷಲ್ ವಿ.ಸಿ. ವಾಂಖಡೆ ಮತ್ತು ಸಿ.ಎಸ್..ಆರ್ ಎನ್..ಎಲ್. ನಿರ್ದೇಶಕ ಶ್ರೀ ಜಿತೇಂದ್ರ ಜೆ ಜಾದವ್ ಅವರು ಪ್ರಮುಖ ಅಧಿಕಾರಿಗಳಾದ ಗ್ರೂಪ್ ಕ್ಯಾಪ್ಟನ್ ಭೂಷಣ್ ಪಿ ಮಹಾಜನ್, ಗ್ರೂಪ್ ಕ್ಯಾಪ್ಟನ್ ಎಚ್.ಜೆ.ಸಿಂಗ್, ಕೆಟಿಎಂಡಿ ಮುಖ್ಯಸ್ಥ ಡಾ.ಜೆ.ಎಸ್ ಮಾಥುರ್, ಎಸಿಡಿ ಮತ್ತು ಸಿಎಸ್.ಎಂ.ಎಸ್.ಟಿ ಮುಖ್ಯಸ್ಥ ಡಾ.ರಮೇಶ್ ಸುಂದರಂ, ಹಿರಿಯ ಪ್ರಧಾನ ವಿಜ್ಞಾನಿ ಡಾ. ಡಿ. ಸಾಜಿ ಮತ್ತಿತರರ ಸಮ್ಮುಖದಲ್ಲಿ ಅಂಕಿತ ಹಾಕಿದರು.

ಸಿಎಸ್..ಆರ್.-ಎನ್..ಎಲ್ ಬಗ್ಗೆ

ರಾಷ್ಟ್ರೀಯ ವಾಯು ಪ್ರದೇಶ ಪ್ರಯೋಗಾಲಯ (ಎನ್..ಎಲ್), 1959ರಲ್ಲಿ ಸ್ಥಾಪನೆಯಾದ ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್..ಆರ್) ಒಂದು ಘಟಕವಾಗಿದ್ದು ದೇಶದ ನಾಗರಿಕ ವಲಯದ ಏಕೈಕ ಸರ್ಕಾರಿ ವಾಯು ಪ್ರದೇಶ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವಾಗಿದೆ. ಉನ್ನತ ತಂತ್ರಜ್ಞಾನ ಆಧಾರಿತ ಸಂಸ್ಥೆಯಾಗಿದ್ದು, ವಾಯುಪ್ರದೇಶ ಸುಧಾರಿತ ವಿಭಾಗಗಳತ್ತ ಕೇಂದ್ರೀಕರಿಸಿದೆ. ಸಿಎಸ್.ಐಆರ್-ಎನ್.ಎಎಲ್ ಬಲಿಷ್ಠ ವಿಜ್ಞಾನ ವಿಷಯದೊಂದಿಗೆ ವಾಯು ಪ್ರದೇಶ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು, ಸಣ್ಣ ಮತ್ತು ಮಧ್ಯಮ ಗಾತ್ರದ ನಾಗರಿಕ ವಿಮಾನಗಳನ್ನು ವಿನ್ಯಾಸಗೊಳಿಸುವುದು ಮತ್ತು ನಿರ್ಮಿಸುವುದು ಹಾಗೂ ಎಲ್ಲಾ ರಾಷ್ಟ್ರೀಯ ವಾಯು ಪ್ರದೇಶ ಕಾರ್ಯಕ್ರಮಗಳನ್ನು ಬೆಂಬಲಿಸುವುದು ಸಿಎಸ್.ಐಆರ್-ಎನ್.ಎಎಲ್ ಗೆ ಅನುಜ್ಞೆಯಾಗಿರುತ್ತದೆ.

ಎಚ್.ಕ್ಯು.ಎಂ.ಸಿ. ಬಗ್ಗೆ

ನಿರ್ವಹಣಾ ಕಮಾಂಡ್ ಭಾರತೀಯ ವಾಯುಪಡೆಯ ಒಂದು ಕಮಾಂಡ್ ಆಗಿದೆ. ಇದನ್ನು 1950ರಲ್ಲಿ ಕಾನ್ಪುರದ ಚಾಕೆರಿಯಲ್ಲಿ ನಿರ್ವಹಣಾ ಸಮೂಹವಾಗಿ ಆರಂಭಿಸಲಾಯಿತು. 1955ರಲ್ಲಿ ಇದನ್ನು ನಿರ್ವಹಣೆ ಕಮಾಂಡ್ ಆಗಿ ಮಾಡಲಾಯಿತು. ಇದರ ಪ್ರಸ್ತುತ ಕೇಂದ್ರ ಕಚೇರಿ ನಾಗ್ಪುರದ (ಮಹಾರಾಷ್ಟ್ರ) ವಾಯುಸೇನ ನಗರದಲ್ಲಿದೆ; ಇದು ಎಲ್ಲಾ ವಿಮಾನಗಳು, ಹೆಲಿಕಾಪ್ಟರ್ಗಳು ಮತ್ತು ಇತರ ಸಲಕರಣೆಗಳ ದುರಸ್ತಿ, ಸಂಪೂರ್ಣ ದುರಸ್ತಿ ಮತ್ತು ನಿರ್ವಹಣೆಯನ್ನು ಮಾಡುತ್ತದೆ. ಎಂಸಿ ಸುಮಾರು ಒಂಬತ್ತು ಮೂಲ ದುರಸ್ತಿ ಡಿಪೋಗಳನ್ನು ಹೊಂದಿದ್ದು, ವಿವಿಧ ರೀತಿಯ ವಿಮಾನಗಳ ಕೂಲಂಕಷ ನಿರ್ವಹಣೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.

***



(Release ID: 1675491) Visitor Counter : 122


Read this release in: English