ಭೂವಿಜ್ಞಾನ ಸಚಿವಾಲಯ

2020ರ ಸೆಪ್ಟೆಂಬರ್ 19 ರಿಂದ 23ರ ನಡುವೆ ಭಾರತದ ಪರ್ಯಾಯ ದ್ವೀಪ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಹೆಚ್ಚಿದ ಮಳೆ


ನಾಳೆ ಅಂದರೆ 2020ರ ಸೆಪ್ಟೆಂಬರ್ 20ರ ಹೊತ್ತಿಗೆ ಈಶಾನ್ಯ ಬಂಗಾಳಕೊಲ್ಲಿಯಲ್ಲಿ ನಿಮ್ನ ಒತ್ತಡ ಪ್ರದೇಶ ಸೃಷ್ಟಿ ಸಾಧ್ಯತೆ

ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಹಾಗೂ ಮೇಘಾಲಯದಲ್ಲಿ 22ರಂದು ಹಾಗೂ ಪಶ್ಚಿಮ ಬಂಗಾಳದ ಉಪ ಹಿಮಾಲಯ ಮತ್ತು ಸಿಕ್ಕಿಂನಲ್ಲಿ 2020ರ ಸೆಪ್ಟೆಂಬರ್ 22 ಮತ್ತು 23ರಂದು ಚದುರಿದಂತೆ ಭಾರಿ ಮಳೆ ಸಾಧ್ಯತೆ

ಕರಾವಳಿ ಕರ್ನಾಟಕದಲ್ಲಿ 19ರಿಂದ 21ರವೆಗೆ; ಉತ್ತರ ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಘಟ್ಟ ಪ್ರದೇಶದಲ್ಲಿ 19 ಮತ್ತು 20ರಂದು; ಸೆಪ್ಟೆಂಬರ್ 21 ಮತ್ತು 22 ರಂದು ದಕ್ಷಿಣ ಕೊಂಕಣ ಮತ್ತು ಗೋವಾದಲ್ಲಿ ಚದುರಿದಂತೆ ಭಾರೀ ಅಂದರೆ ಭಾರೀ ಮಳೆ ಸಾಧ್ಯತೆ

Posted On: 19 SEP 2020 6:38PM by PIB Bengaluru

ಭಾರತೀಯ ಹವಾಮಾನ ಇಲಾಖೆ (.ಎಂ.ಡಿ.) ನವದೆಹಲಿಯ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ/ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ :

) ಹವಾಮಾನ ವ್ಯವಸ್ಥೆ:

2020 ಸೆಪ್ಟೆಂಬರ್ 20, ನಾಳೆಯೊಳಗೆ ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ನಿಮ್ನ ಒತ್ತಡ ಪ್ರದೇಶ ಸೃಷ್ಟಿಯಾಗುವ ಸಾಧ್ಯತೆ ಇದೆ. ನಂತರದ 24 ಗಂಟೆಗಳ ಅವಧಿಯಲ್ಲಿ ಇದು ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಹೆಚ್ಚು ತೀವ್ರವಾಗುವ ಸಾಧ್ಯತೆಯಿದೆ.

ಕೆಳ ಮಟ್ಟದ ಗಾಳಿ ಬಲಗೊಳ್ಳಲಿದ್ದು, ಪಶ್ಚಿಮ ಕರಾವಳಿಯಲ್ಲಿ ಅದರ ಪ್ರಭಾವ ಮುಂದಿನ 3-4 ದಿನಗಳಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಸೆಪ್ಟೆಂಬರ್ 21 ರಿಂದ ಈಶಾನ್ಯ ಮತ್ತು ಪೂರ್ವ ಭಾರತದ ಸುತ್ತಲ ಭಾಗಗಳ ಬಂಗಾಳ ಕೊಲ್ಲಿಯಿಂದ ಕಡಿಮೆ ಉಷ್ಣವಲಯದ ಮಟ್ಟದಲ್ಲಿ ಬಲವಾದ ತೇವಾಂಶದ ಗಾಳಿಯ ಪ್ರಭಾವ ಇರಲಿದೆ.

ಬಿ) ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ:

(i) ಸೆಪ್ಟೆಂಬರ್ 19 ರಿಂದ 22 ರವರೆಗೆ ಕೇರಳ, ಕರ್ನಾಟಕ, ಕೊಂಕಣ ಮತ್ತು ಗೋವಾಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಭಾರೀ ಅಂದರೆ ಭಾರೀ ಮಳೆ ಮಳೆಯಾಗಲಿದೆ. 19 ರಿಂದ -21ರವರೆಗೆ ಕರಾವಳಿ ಕರ್ನಾಟಕದಲ್ಲಿ ಚದುರಿದಂತೆ ಭಾರೀ ಮಳೆ ಸಂಭವ; ಉತ್ತರ ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳಲ್ಲಿ 19 ಮತ್ತು 20 ರಂದು; ಸೆಪ್ಟೆಂಬರ್ 21 ಮತ್ತು 22 ರಂದು ದಕ್ಷಿಣ ಕೊಂಕಣ ಮತ್ತು ಗೋವಾದಲ್ಲಿ ಚದುರಿದಂತೆ ಭಾರೀ ಮಳೆ ಸಂಭವ.

(ii) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 19 ಮತ್ತು 20ರಂದು; ಒಡಿಶಾ, ಆಂಧ್ರ ಪ್ರದೇಶದ ಕರಾವಳಿ ಮತ್ತು ಯಾನಮ್ ಹಾಗೂ ತೆಲಂಗಾಣದಲ್ಲಿ 19ರಿಂದ 21ರವರೆಗೆ ಹಾಗೂ ಗಂಗಾ ನದಿಯ ಪಶ್ಚಿಮ ಬಂಗಾಳದಲ್ಲಿ ಸೆಪ್ಟೆಂಬರ್ 20ರಿಂದ 22ರವರೆಗೆ ಸಾಮಾನ್ಯವಾಗಿ ಚದುರಿದಂತೆ ಭಾರಿ ಅಂದರೆ ಭಾರೀ ವ್ಯಾಪಕ ಮಳೆ ಸಂಭವ.

(iii) ಸಾಮಾನ್ಯವಾಗಿ ವ್ಯಾಪಕ ಅಂದರೆ ವ್ಯಾಪಕವಾಗಿ, ಚದುರಿದಂತೆ ಭಾರೀ ಅಂದರೆ ಭಾರೀ ಮಳೆ ಉಪ ಹಿಮಾಲಯದ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೆಪ್ಟೆಂಬರ್ 21ರಿಂದ 23ರವರೆಗೆ ಸಾಧ್ಯತೆ ಇದೆ. ಚದುರಿದಂತೆ ಭಾರೀ ಮಳೆ ಅರುಣಾಚಲ ಪ್ರದೇಸ ಮತ್ತು ಅಸ್ಸಾಂ ಮತ್ತು ಮೇಘಾಲಯದಲ್ಲಿ 22ರಂದು ಹಾಗೂ ಉಪ ಹಿಮಾಲಯದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ 2020 ಸೆಪ್ಟೆಂಬರ್ 22 ಮತ್ತು 23ರಂದು ಸಾಧ್ಯತೆ.

ಸಿ) ಕರಾವಳಿ ಕರ್ನಾಟಕದಲ್ಲಿ 29ರಿಂದ 21ರವರೆಗೆ; ಉತ್ತರ ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳಲ್ಲಿ ಮತ್ತು 19 ಮತ್ತು 20ರಂದು; ದಕ್ಷಿಣ ಕೊಂಕಣ ಮತ್ತು ಗೋವಾದಲ್ಲಿ 2020 ಸೆಪ್ಟೆಂಬರ್ 21 ಮತ್ತು 22ರಂದು ಚದುರಿದಂತೆ ಭಾರೀ ಮಳೆ ಸಂಭವ:

· ಮೇಲೆ ತಿಳಿಸಲಾದ ವಲಯಗಳಲ್ಲಿ ಸ್ಥಳೀಯವಾಗಿ ರಸ್ತೆಗಳಲ್ಲಿ ಪ್ರವಾಹ, ತಗ್ಗು ಪ್ರದೇಶದಲ್ಲಿ ನೀರು ನಿಲ್ಲುವುದು ಮತ್ತು ನಗರ ಪ್ರದೇಶಗಳಲ್ಲಿನ ಕೆಳ ಸೇತುವೆಗಳು ಸಾಮಾನ್ಯವಾಗಿ ಮುಚ್ಚಿಹೋಗುವ ಸಾಧ್ಯತೆ ಇದೆ.

· ಭಾರೀ ಮಳೆಯ ಕಾರಣ ಕೆಲವೊಮ್ಮೆ ಗೋಚರತೆ ಕ್ಷೀಣಿಸಬಹುದು.

· ಪ್ರಮುಖ ನಗರಗಳಲ್ಲಿ ರಸ್ತೆಗಳಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ ಆಗಿ ಸಂಚಾರದ ವೇಳೆ ಅಧಿಕವಾಗುವ ಸಾಧ್ಯತೆ.

· ಕಚ್ಚಾ ರಸ್ತೆಗಳಿಗೆ ಸಣ್ಣಪುಟ್ಟ ಹಾನಿ.

· ಸೂಕ್ಷ್ಮ ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ.

· ಸ್ಥಳೀಯವಾಗಿ ಮಣ್ಣುಗುಡ್ಡೆ ಕುಸಿತ

· ಮುಳುಗಡೆಯಿಂದ ತೋಟಗಾರಿಕೆ ಮತ್ತು ಬೆಳೆದು ನಿಂತ ಬೆಳೆಗೆ ಹಾನಿ ಸಂಭವ.

· ಕೆಲವು ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಸಾಧ್ಯತೆ. (ನದಿಯ ಪ್ರವಾಹ ಪ್ರದೇಶಗಳ ಬಗ್ಗೆ ತಿಳಿಯಲು ಕೇಂದ್ರೀಯ ಜಲ ಆಯೋಗದ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ (http://www.cwc.gov.in/))

· ಜಿಲ್ಲಾ ನಿರ್ದಿಷ್ಟ ಪರಿಣಾಮಗಳ ಮಾಹಿತಿಗೆ ಐಎಂಡಿಯ ರಾಜ್ಯ ಮಟ್ಟದ ಹವಾಮಾನ ಇಲಾಖೆಯ ಅಂತರ್ಜಾಲ ತಾಣ (https://mausam.imd.gov.in/imd_latest/contents/departmentalweb.php) ಮತ್ತು ರಾಷ್ಟ್ರೀಯ ಅಂತರ್ಜಾಲ ತಾಣ (https://mausam.imd.gov.in/) ಕ್ಕೆ ಭೇಟಿ ನೀಡಿ

 

ಡಿ) ಕ್ರಮಕ್ಕೆ ಸಲಹೆ:

· ನಿಮ್ಮ ನಿರ್ದಿಷ್ಟ ಸ್ಥಳಕ್ಕೆ ತೆರಳುವ ಮೊದಲ ನಿಮ್ಮ ಮಾರ್ಗದ ಸಂಚಾರದ ಒತ್ತಡ ಖಚಿತಪಡಿಸಿಕೊಳ್ಳಿ.

· ನಿಟ್ಟಿನಲ್ಲಿ ನೀಡಲಾಗಿರುವ ಸಂಚಾರದ ಸೂಚನೆಗಳನ್ನು ಪಾಲಿಸಿ

· ಪದೇ ಪದೇ ನೀರು ನಿಂತು ಸಮಸ್ಯೆ ಆಗುವ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಿ.

· ಅಪಾಯವಿರುವ ಕಟ್ಟಡದಲ್ಲಿ ಉಳಿಯುವುದನ್ನು ತಪ್ಪಿಸಿ.

ಬಹು ಅಪಾಯದ ಹವಾಮಾನ ಮುನ್ಸೂಚನೆ ಮುಂದಿನ 5 ದಿನಗಳಿಗೆ

***



(Release ID: 1661696) Visitor Counter : 133


Read this release in: Telugu , English