ಭೂವಿಜ್ಞಾನ ಸಚಿವಾಲಯ

ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ 4-5 ದಿನಗಳು ಭಾರೀ ಮಳೆ

Posted On: 09 SEP 2020 9:06PM by PIB Bengaluru

ಕರ್ನಾಟಕದ ಕರಾವಳಿಯಲ್ಲಿ ಸೆಪ್ಟೆಂಬರ್ 10 ರಿಂದ 13 ನಡುವೆ ಭಾರೀ ಮಳೆಯಾಗುತ್ತದೆ ಎಂದು ಭಾರತ ಹವಾಮಾನ ಇಲಾಖೆಯ (ಐಎಂಡಿ) ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರ/ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 09 ರಿಂದ 12 ರವರೆಗೆ ಭಾರೀ ಮಳೆ ಬೀಳಲಿದೆ. ಸೆಪ್ಟೆಂಬರ್ 09 ರಿಂದ 11 ರವರೆಗೆ ಕೇರಳ ಮತ್ತು ಮಾಹೆ ಮತ್ತು ಸೆಪ್ಟೆಂಬರ್ 09 ರಂದು ತಮಿಳುನಾಡು. ಪುದುಚೇರಿಯಲ್ಲಿ ಭಾರೀ ಮಳೆಯಾಗಲಿದೆ.

ಭಾರತ ಹವಾಮಾನ ಇಲಾಖೆಯ (ಐಎಂಡಿ) ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರ/ ಪ್ರಾದೇಶಿಕ ಹವಾಮಾನ ಕೇಂದ್ರದ ಪ್ರಕಾರ, ಮಹಾರಾಷ್ಟ್ರದ ದಕ್ಷಿಣ ಕರಾವಳಿಯಿಂದ ಕೇರಳದ ಉತ್ತರ ಕರಾವಳಿಯವರೆಗೆ ಕುಳಿರ್ಗಾಳಿ ಬೀಸಲಿದೆ. ಕುಳಿರ್ಗಾಳಿಯು ಕರ್ನಾಟಕದ ಕರಾವಳಿಯ ಅರಬ್ಬಿ ಸಮುದ್ರದ ಮೇಲೆ ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ನಿಂದ 5.8 ಕಿ.ಮೀ. ಎತ್ತರದಲ್ಲಿ ಬೀಸಲಿದೆ. ಇದರಿಂದಾಗಿ ಮುಂದಿನ 4-5 ದಿನಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದೆ.

***


(Release ID: 1652892)
Read this release in: Urdu , Hindi , English