ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ಭಾರತದಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಸುಸ್ಥಿರ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ನೀಲಿ ಕ್ರಾಂತಿಯನ್ನು ತರುವ ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ‘ ಗೆ ಸಂಪುಟದ ಅನುಮೋದನೆ

Posted On: 20 MAY 2020 2:26PM by PIB Bengaluru

ಭಾರತದಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಸುಸ್ಥಿರ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ನೀಲಿ ಕ್ರಾಂತಿಯನ್ನು ತರುವ

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಸಂಪುಟದ ಅನುಮೋದನೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದಲ್ಲಿ ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ನೀಲಿ ಕ್ರಾಂತಿಯನ್ನು ತರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಅನುಷ್ಠಾನಕ್ಕೆ ಅನುಮೋದನೆ ನೀಡಿದೆ. ಕೇಂದ್ರ ವಲಯ ಯೋಜನೆ (ಸಿಎಸ್) ಮತ್ತು ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಎಂದು  ಎರಡು ಘಟಕಗಳ ಅಡಿಯಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಯ ಅಂದಾಜು ವೆಚ್ಚ 20,050 ಕೋಟಿ.ರೂ.ಗಳು. ಇದರಲ್ಲಿ (I) ಕೇಂದ್ರ ಪಾಲು. 9,407 ಕೋಟಿ.ರೂ (ii) ರಾಜ್ಯ ಪಾಲು ರೂ. 4,880 ಕೋಟಿ.ರೂ ಮತ್ತು (iii) ಫಲಾನುಭವಿಗಳ ಪಾಲು ರೂ. 5,763 ಕೋಟಿ. ರೂ.ಆಗಿರುತ್ತದೆ.

2020-21ನೇ ಸಾಲಿನಿಂದ 2024-25ರವರೆಗೆ 5 ವರ್ಷಗಳ ಅವಧಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು.

ಪಿಎಂಎಂಎಸ್ವೈ ಯೋಜನೆಯು () ಕೇಂದ್ರ ವಲಯ ಯೋಜನೆ (ಸಿಎಸ್) ಮತ್ತು (ಬಿ) ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಎಂಬ ಎರಡು ಪ್ರತ್ಯೇಕ ಘಟಕಗಳಡಿ ಜಾರಿಗೆ ಬರಲಿದೆ. ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್) ಘಟಕವನ್ನು ಫಲಾನುಭವಿಯೇತರ ಆಧಾರಿತ, ಫಲಾನುಭವಿ-ಆಧಾರಿತ ಮತ್ತು ಫಲಾನುಭವಿ ಆಧಾರಿತ ಉಪ-ಘಟಕಗಳು / ಚಟುವಟಿಕೆಗಳು- ಎಂದು ವಿಂಗಡಿಸಲಾಗಿದೆ. ಇವು ಕೆಳಗಿನ ಮೂರು ಘಟಕಗಳ ಅಡಿಯಲ್ಲಿ ಬರುತ್ತವೆ:

) ಉತ್ಪಾದನೆ ಮತ್ತು ಉತ್ಪಾದಕತೆಯ ಹೆಚ್ಚಳ

ಬಿ) ಮೂಲಸೌಕರ್ಯ ಮತ್ತು ನಂತರದ ಕೊಯ್ಲು ನಿರ್ವಹಣೆ

ಸಿ) ಮೀನುಗಾರಿಕೆ ನಿರ್ವಹಣೆ ಮತ್ತು ನಿಯಂತ್ರಣ ಚೌಕಟ್ಟು

ಧನಸಹಾಯ ಮಾದರಿ:

ಪಿಎಂಎಂಎಸ್ವೈ ಅನ್ನು ಕೆಳಗಿನ ಹಣಕಾಸಿನ ಮಾದರಿಯೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ:

ಕೇಂದ್ರ ವಲಯ ಯೋಜನೆ (ಸಿಎಸ್):

)        ಸಂಪೂರ್ಣ ಯೋಜನೆ / ಘಟಕ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸುತ್ತದೆ (ಅಂದರೆ ಶೇ.100 ಕೇಂದ್ರದ ಧನಸಹಾಯ).

ಬಿ)        ನೇರ ಫಲಾನುಭವಿ ಆಧಾರಿತ ಇರುವ ಕಡೆ ಅಂದರೆ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ (ಎನ್ಎಫ್ಡಿಬಿ) ಸೇರಿದಂತೆ ಕೇಂದ್ರ ಸರ್ಕಾರದ ಘಟಕಗಳು ವೈಯಕ್ತಿಕ / ಗುಂಪು ಚಟುವಟಿಕೆಗಳನ್ನು ಕೈಗೆತ್ತಿಕೊಂಡರೆ, ಕೇಂದ್ರ ನೆರವು ಸಾಮಾನ್ಯ ವರ್ಗಕ್ಕೆ ಯುನಿಟ್ / ಪ್ರಾಜೆಕ್ಟ್ ವೆಚ್ಚದ ಶೇ.40 ಮತ್ತು ಎಸ್ಸಿ / ಎಸ್ಟಿ / ಮಹಿಳೆಯರಿಗೆ ಶೇ.60 ಇರುತ್ತದೆ.

ಕೇಂದ್ರ ಪ್ರಾಯೋಜಿತ ಯೋಜನೆ (ಸಿಎಸ್ಎಸ್):

ಸಿಎಸ್ಎಸ್ ಘಟಕದ ಅಡಿಯಲ್ಲಿ ಫಲಾನುಭವಿಯೇತರ ಆಧಾರಿತ ಉಪ-ಘಟಕಗಳು / ಚಟುವಟಿಕೆಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಜಾರಿಗೆ ತರಲು, ಸಂಪೂರ್ಣ ಯೋಜನೆ / ಘಟಕ ವೆಚ್ಚವನ್ನು ಕೆಳಗಿನಂತೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳಲಾಗುತ್ತದೆ:

)        ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳು: ಶೇ.90 ಕೇಂದ್ರ ಪಾಲು ಮತ್ತು ಶೇ.10 ರಾಜ್ಯದ ಪಾಲು.

ಬಿ)        ಇತರ ರಾಜ್ಯಗಳು: ಶೇ.60 ಕೇಂದ್ರ ಪಾಲು ಮತ್ತು ಶೇ.40 ರಾಜ್ಯ ಪಾಲು.

ಸಿ)        ಕೇಂದ್ರಾಡಳಿತ ಪ್ರದೇಶಗಳು (ಶಾಸಕಾಂಗದೊಂದಿಗೆ ಮತ್ತು ಶಾಸಕಾಂಗವಿಲ್ಲದೆ): ಶೇ.100 ಕೇಂದ್ರ ಪಾಲು.

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಜಾರಿಗೆ ತರಬೇಕಾದ ಫಲಾನುಭವಿ ಆಧಾರಿತ ಅಂದರೆ ವೈಯಕ್ತಿಕ / ಗುಂಪು ಚಟುವಟಿಕೆಗಳ ಉಪ-ಘಟಕಗಳು / ಚಟುವಟಿಕೆಗಳಿಗೆ, ಕೇಂದ್ರ ಮತ್ತು ರಾಜ್ಯ /ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಹಣಕಾಸಿನ ನೆರವು ಸಾಮಾನ್ಯ ವರ್ಗಕ್ಕೆ ಯೋಜನೆ / ಘಟಕ ವೆಚ್ಚದ ಶೇ.40 ಮತ್ತು ಎಸ್ಸಿ / ಎಸ್ಟಿ / ಮಹಿಳೆಯರಿಗೆ ಯೋಜನೆ / ಘಟಕ ವೆಚ್ಚದ ಶೇ.60 ಆಗಿರುತ್ತದೆ. ಸರ್ಕಾರದ ಹಣಕಾಸಿನ ನೆರವು ಕೇಂದ್ರ ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ನಡುವೆ ಕೆಳಗಿನ ಅನುಪಾತದಲ್ಲಿ ಹಂಚಿಕೊಳ್ಳಲ್ಪಡುತ್ತದೆ:

)        ಈಶಾನ್ಯ ಮತ್ತು ಹಿಮಾಲಯನದ ರಾಜ್ಯಗಳು: ಶೇ.90 ಕೇಂದ್ರ ಪಾಲು ಮತ್ತು ಶೇ.10 ರಾಜ್ಯ ಪಾಲು.

ಬಿ)        ಇತರ ರಾಜ್ಯಗಳು: ಶೇ.60 ಕೇಂದ್ರ ಪಾಲು ಮತ್ತು ಶೇ.40 ರಾಜ್ಯ ಪಾಲು.

ಸಿ)        ಕೇಂದ್ರಾಡಳಿತ ಪ್ರದೇಶಗಳು (ಶಾಸಕಾಂಗದೊಂದಿಗೆ ಮತ್ತು ಶಾಸಕಾಂಗವಿಲ್ಲದೆ): ಶೇ.100 ಕೇಂದ್ರ ಪಾಲು (ಕೇಂದ್ರಾಡಳಿತ ಪ್ರದೇಶದ ಪಾಲು ಇರುವುದಿಲ್ಲ).

ಪ್ರಯೋಜನಗಳು:

i.          ಮೀನುಗಾರಿಕೆ ಕ್ಷೇತ್ರದಲ್ಲಿರುವ ನಿರ್ಣಾಯಕ ಅಂತರವನ್ನು ಬಗೆಹರಿಸುವುದು ಮತ್ತು ಅದರ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುವುದು.

ii.         ಸುಸ್ಥಿರ ಮತ್ತು ಜವಾಬ್ದಾರಿಯುತ ಮೀನುಗಾರಿಕೆ ಅಭ್ಯಾಸಗಳ ಮೂಲಕ 2024-25 ವೇಳೆಗೆ 22 ದಶಲಕ್ಷ ಮೆಟ್ರಿಕ್ ಟನ್ ಗುರಿಯನ್ನು ಸಾಧಿಸಲು ಮೀನು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಸುಮಾರು ಶೇ.9 ರಷ್ಟು ನಿರಂತರ ವಾರ್ಷಿಕ ಬೆಳವಣಿಗೆಯ ದರದಲ್ಲಿ ಹೆಚ್ಚಿಸುವುದು.

iii.        ಪ್ರಮಾಣೀಕೃತ ಗುಣಮಟ್ಟದ ಮೀನು ಮರಿ ಮತ್ತು ಆಹಾರದ ಲಭ್ಯತೆಯನ್ನು ಸುಧಾರಿಸುವುದು, ಮೀನುಗಳನ್ನು ಪತ್ತೆಹಚ್ಚುವಿಕೆ ಮತ್ತು ಪರಿಣಾಮಕಾರಿ ಜಲಚರ ಆರೋಗ್ಯ ನಿರ್ವಹಣೆ.

iv.        ಮೌಲ್ಯೀಕರಣ ಸರಪಳಿಯ ಆಧುನೀಕರಣ ಮತ್ತು ಬಲಪಡಿಸುವುದು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ರಚನೆ.

v.         ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಸುಮಾರು 15 ಲಕ್ಷ ಮೀನುಗಾರರು, ಮೀನು ರೈತರು, ಮೀನು ಕಾರ್ಮಿಕರು, ಮೀನು ಮಾರಾಟಗಾರರು ಮತ್ತು ಇತರ ಗ್ರಾಮೀಣ / ನಗರ ಜನಸಂಖ್ಯೆಗೆ ನೇರ ಲಾಭದಾಯಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಅವರ ಆದಾಯವನ್ನು ವೃದ್ಧಿಸುವುದು ಮತ್ತು ಸಂಖ್ಯೆಯ ಮೂರು ಪಟ್ಟು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.

vi.        ಮೀನುಗಾರಿಕೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಉತ್ತೇಜನ ನೀಡುವುದು ಮತ್ತು ಮೀನು ಮತ್ತು ಮೀನುಗಾರಿಕೆ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು.

vii.       2024 ವೇಳೆಗೆ ಮೀನುಗಾರರು, ಮೀನು ರೈತರು ಮತ್ತು ಮೀನು ಕಾರ್ಮಿಕರ ಆದಾಯವನ್ನು ದ್ವಿಗುಣಗೊಳಿಸುವುದು.

viii.      ಮೀನುಗಾರರು ಮತ್ತು ಮೀನು ಕಾರ್ಮಿಕರಿಗೆ ಸಾಮಾಜಿಕ, ದೈಹಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವುದು.

***



(Release ID: 1625491) Visitor Counter : 105