ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಿಗೆ ಕೇಂದ್ರ ತಂಡಗಳ ನಿಯೋಜನೆ

Posted On: 03 MAY 2020 8:46PM by PIB Bengaluru

ಕೋವಿಡ್-19 ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಿಗೆ ಕೇಂದ್ರ ತಂಡಗಳ ನಿಯೋಜನೆ

 

ದೇಶದಲ್ಲಿ ಅತ್ಯಧಿಕ ಸಂಖ್ಯೆಯ ಕೋವಿಡ್-19 ಪ್ರಕರಣಗಳು ವರದಿಯಾಗಿರುವ 20 ಜಿಲ್ಲೆಗಳಿಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ 20 ಕೇಂದ್ರೀಯ ಸಾರ್ವಜನಿಕ ಆರೋಗ್ಯ ತಂಡಗಳನ್ನು ರಚಿಸಿ, ಕಳುಹಿಸಿ ಕೊಡಲಾಗಿದೆ. ಜಿಲ್ಲೆಗಳೆಂದರೆ:

  1. ಮುಂಬೈ, ಮಹಾರಾಷ್ಟ್ರ
  2. ಅಹಮದಾಬಾದ್, ಗುಜರಾತ್
  3. ದೆಹಲಿ(ಆಗ್ನೇಯ)
  4. ಇಂದೋರ್, ಮಧ್ಯಪ್ರದೇಶ
  5. ಪುಣೆ, ಮಹಾರಾಷ್ಟ್ರ
  6. ಜೈಪುರ, ರಾಜಸ್ಥಾನ
  7. ಥಾಣೆ, ಮಹಾರಾಷ್ಟ್ರ
  8. ಸೂರತ್, ಗುಜರಾತ್
  9. ಚೆನ್ನೈ, ತಮಿಳುನಾಡು
  10. ಹೈದರಾಬಾದ್, ತೆಲಂಗಾಣ
  11. ಭೂಪಾಲ್, ಮಧ್ಯಪ್ರದೇಶ
  12. ಜೋಧ್ ಪುರ, ರಾಜಸ್ಥಾನ
  13. ದೆಹಲಿ(ಕೇಂದ್ರ)
  14. ಆಗ್ರಾ, ಉತ್ತರ ಪ್ರದೇಶ
  15. ಕೋಲ್ಕತ್ತಾ, ಪಶ್ಚಿಮಬಂಗಾಳ
  16. ಕರ್ನೂಲ್, ಆಂಧ್ರಪ್ರದೇಶ
  17. ವಡೋದರಾ, ಗುಜರಾತ್
  18. ಗುಂಟೂರು, ಆಂಧ್ರಪ್ರದೇಶ
  19. ಕೃಷ್ಣ, ಆಂಧ್ರಪ್ರದೇಶ
  20. ಲಖನೌ, ಉತ್ತರ ಪ್ರದೇಶ

ತಂಡಗಳು ಕೋವಿಡ್-19 ಹರಡಿರುವ ಜಿಲ್ಲೆಗಳು/ನಗರಗಳಲ್ಲಿ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲು ರಾಜ್ಯಗಳಿಗೆ ನೆರವು ನೀಡುತ್ತವೆ. ತಂಡಗಳು ರಾಜ್ಯ ಸರ್ಕಾರಗಳಿಗೆ ಅಗತ್ಯ ಸಹಾಯವನ್ನು ಮಾಡುತ್ತವೆ.

***


(Release ID: 1620840) Visitor Counter : 236


Read this release in: English