ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಎನ್ಐಎಫ್ ನಿಂದ ಜಾನುವಾರುಗಳಿಗೆ ದೇಶೀಯ ಗಿಡಮೂಲಿಕೆ ಜಂತುನಾಶಕ

Posted On: 11 APR 2020 12:16PM by PIB Bengaluru

ಎನ್ಐಎಫ್ ನಿಂದ ಜಾನುವಾರುಗಳಿಗೆ ದೇಶೀಯ ಗಿಡಮೂಲಿಕೆ ಜಂತುನಾಶಕ

 

ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಇಂಡಿಯಾ (ಎನ್ಐಎಫ್) ಜಾನುವಾರುಗಳ ಜಂತುಗಳ ಚಿಕಿತ್ಸೆಯ ರಾಸಾಯನಿಕ ವಿಧಾನಕ್ಕೆ ಪರ್ಯಾಯವಾಗಿ ಜಾನುವಾರು ಮಾಲೀಕರಿಗೆ ವಾಣಿಜ್ಯ ಉತ್ಪನ್ನದ ರೂಪದಲ್ಲಿ ದೇಶೀಯ ಗಿಡಮೂಲಿಕೆ ಔಷಧಿ ಹೊರತಂದಿದೆ.

ಜಾನುವಾರು ಮಾಲೀಕರಿಗೆ ದೇಶೀಯ ಗಿಡಮೂಲಿಕೆ ಜಂತುನಾಶಕ  ‘ವರ್ಮಿವೆಟ್ಲಭ್ಯವಾಗುವಂತೆ ಮಾಡಲು, ಗುಜರಾತ್ ಹರ್ಷದ್ಭಾಯ್ ಪಟೇಲ್ ಕಳುಹಿಸಿದ, ಜಾನುವಾರುಗಳಲ್ಲಿ ಎಂಡೋಪ್ಯಾರಸೈಟ್ (ಜಂತು) ಚಿಕಿತ್ಸೆಗಾಗಿ ಎನ್ಐಎಫ್ ಔಷಧಿ ತಯಾರಿಸಿದೆ. ಸ್ವಾಭಾವಿಕವಾಗಿ ಮುತ್ತಿಕೊಂಡಿರುವ ಹೆಲ್ಮಿಂಥಿಯಾಸಿಸ್ನಲ್ಲಿ ಔಷಧಿಗಳ ಆಂಥೆಲ್ಮಿಂಟಿಕ್ ಚಟುವಟಿಕೆಯನ್ನು ನಿರ್ಣಯಿಸಲಾಗುತ್ತದೆ. ಫಲಿತಾಂಶಗಳು ಔಷಧಿಯ ಯಶಸ್ವಿ ಪರಿಣಾಮವನ್ನು ತೋರಿಸಿವೆ.

ದೇಶೀಯ ಔಷಧಿಗಾಗಿ 2007 ರಲ್ಲಿ ಪೇಟೆಂಟ್ ಗೆ ಸಲ್ಲಿಸಲಾಯಿತು ಮತ್ತು ತಳಮಟ್ಟದ ಜ್ಞಾನ ಹೊಂದಿರುವ ಶ್ರೀ ಹರ್ಷದ್ ಭಾಯ್ ಪಟೇಲ್ ಅವರ ಹೆಸರಿನಲ್ಲಿ ಪೇಟೆಂಟ್ ಅನ್ನು ನವೆಂಬರ್ 29, 2016 ರಂದು ನೀಡಲಾಯಿತು. ಜಾನುವಾರುಗಳಲ್ಲಿ ಎಂಡೋಪ್ಯಾರಸೈಟ್ ಮುತ್ತಿಕೊಳ್ಳುವಿಕೆಯನ್ನು ನಿಯಂತ್ರಿಸುವ ತಂತ್ರಜ್ಞಾನವನ್ನು ಪಸರಿಸಲು, ಎನ್ಐಎಫ್ ಇದಕ್ಕೆ ಮತ್ತಷ್ಟು ಮೌಲ್ಯಗಳನ್ನು ಸೇರಿಸಿ ಗುಜರಾತ್ ಗಾಂಧಿನಗರದ ರಾಕೇಶ್ ಫಾರ್ಮಾಸ್ಯುಟಿಕಲ್ಸ್ ಮೂಲಕ ವಾಣಿಜ್ಯ ಉತ್ಪನ್ನ 'ವರ್ಮಿವೆಟ್' ಉತ್ಪಾದನೆಗೆ ಉತ್ತೇಜನ ನೀಡಿತು. ಔಪಚಾರಿಕ ಸಂಸ್ಥೆಯ ಸುಧಾರಿತ ಚಟುವಟಿಕೆ ಮತ್ತು ಅಭಿವೃದ್ಧಿಯಲ್ಲಿ ಸಂಶೋಧನೆಯ ದೃಷ್ಟಿಕೋನ, ಅಗತ್ಯವಿರುವ ಸ್ಥಳಗಳಿಗೆ ಉತ್ಪನ್ನಗಳನ್ನು ಅನುಷ್ಠಾನಗೊಳಿಸುವುದು, ಕೃಷಿ ಸಮುದಾಯಗಳಿಗೆ ವಿಶ್ವಾಸದ ಭರವಸೆಯನ್ನು ಮಾದರಿಯು ಪ್ರದರ್ಶಿಸಿದೆ,

ಜಾನುವಾರು ಸಂಪನ್ಮೂಲಗಳು ಆಹಾರ ಬೇಡಿಕೆ ಮತ್ತು ಸ್ಥಳೀಯ ಉದ್ಯೋಗವನ್ನು ಉಳಿಸಿಕೊಳ್ಳಲು ಒಂದು ಪ್ರಮುಖ ಸಾಧನವೆಂದು ಗುರುತಿಸಲಾಗಿದೆ. ದೇಶೀಯ ಜ್ಞಾನ ವ್ಯವಸ್ಥೆಯನ್ನು ಆಧರಿಸಿ ತನ್ನ ಸುತ್ತಮುತ್ತಲಿನ ಅನನ್ಯ ಸಂಪನ್ಮೂಲಗಳ ಮೂಲಕ ಸಮಾಜಗಳು ಪ್ರಾಣಿಗಳ ಆರೋಗ್ಯವನ್ನು ರಕ್ಷಿಸುತ್ತವೆ.

https://ci6.googleusercontent.com/proxy/WqxPxgy7v0ara60Rm-slp1lIO-2aTxH7R4r74bX9HRZQyodGQ2aYVvdMjYEbOUyEL51UGHi4aF4v44zOQ-X02ENF-VgfhDykDP1GhT2k_tfiWTcXiWav=s0-d-e1-ft#https://static.pib.gov.in/WriteReadData/userfiles/image/image001M342.jpg

ಆಂತರಿಕ ಪರಾವಲಂಬಿಯು ಗಮನಾರ್ಹ ಆರೋಗ್ಯ ಸಮಸ್ಯೆಯಾಗಿದ್ದು, ಇದು ಅತಿಸಾರ, ದೇಹದ ತೂಕದಲ್ಲಿ ನಷ್ಟ, ರಕ್ತಹೀನತೆ, ಸಂತಾನೋತ್ಪತ್ತಿ ಸಂಬಂಧಿ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಉತ್ಪಾದಕತೆ ಮತ್ತು ಬೆಳವಣಿಗೆಯು ಕುಂಠಿತವಾಗುತ್ತದೆ. ರಾಸಾಯನಿಕ ಜಂತು ನಾಶಕಗಳ ಅಸಮರ್ಪಕ ಬಳಕೆಯು ಪ್ರತಿರೋಧವನ್ನು ಉಂಟುಮಾಡುತ್ತದೆ. ರಾಸಾಯನಿಕ ಆಧಾರಿತ ಚಿಕಿತ್ಸೆಯಿಂದ ರೋಗನಿರ್ಣಯ ಮತ್ತು ಮಣ್ಣಿನ ಆರೋಗ್ಯವು ಕಲುಷಿತಗೊಳ್ಳುತ್ತಿರುವಾಗ ಆಂತರಿಕ ಪರಾವಲಂಬಿಗೆ ಪರ್ಯಾಯ ಸುಸ್ಥಿರ ಚಿಕಿತ್ಸೆಗಳ ಅಗತ್ಯವಿರುತ್ತದೆ.

ಇಂತಹ ಸನ್ನಿವೇಶಗಳಲ್ಲಿ ಜ್ಞಾನ, ದೃಢವಾದ ನಂಬಿಕೆ ಮತ್ತು ತಲೆಮಾರುಗಳಿಂದ ನಿರ್ವಹಿಸಲ್ಪಟ್ಟ ಅಭ್ಯಾಸಗಳನ್ನು ಗುರುತಿಸುವುದು, ಗೌರವಿಸುವುದು ಮತ್ತು ಅದಕ್ಕೆ ಪ್ರತಿಫಲ ನೀಡುವುದು ಅತ್ಯಗತ್ಯವಾಗಿರುತ್ತದೆ. ಜಾನುವಾರುಗಳ ಆರೋಗ್ಯ ವ್ಯವಸ್ಥೆಯ ಚಿಕಿತ್ಸೆಯಲ್ಲಿ ಸಾಂಪ್ರದಾಯಿಕ ಔಷಧ ವ್ಯವಸ್ಥೆಯನ್ನು ಸಂಯೋಜಿಸಬೇಕಾಗಿದೆ. ಅಂತಹ ಮೌಲ್ಯೀಕರಿಸಿದ, ಸಾಮಾಜಿಕವಾಗಿ ಅಪೇಕ್ಷಣೀಯ ತಂತ್ರಜ್ಞಾನಗಳನ್ನು ಕಾರ್ಯಗತಗೊಳಿಸುವುದು, ದೊಡ್ಡ ಸಮುದಾಯದ ಅಂತರ್ಗತ ಅಭಿವೃದ್ಧಿ ಮತ್ತು ಪ್ರಯೋಜನಕ್ಕಾಗಿ ವೈಜ್ಞಾನಿಕವಾಗಿ ಮೌಲ್ಯೀಕರಿಸುವುದು ಸೂಕ್ತವಾಗಿದೆ - ಇದನ್ನು ಎನ್ಐಎಫ್ ಮಾಡುತ್ತಿದೆ.

ಸಾಮಾಜಿಕ ಅಥವಾ ವಾಣಿಜ್ಯ ಮಾರ್ಗದ ಮೂಲಕ ಅಂತಹ ಕಾರ್ಯಸಾಧ್ಯವಾದ, ಕಡಿಮೆ ವೆಚ್ಚದ ಚಿಕಿತ್ಸೆಗಳ ರಕ್ಷಣೆ ಮತ್ತು ಅವುಗಳ ದೊಡ್ಡ ಪ್ರಮಾಣದ ಪ್ರಸರಣವನ್ನು ಶಕ್ತಗೊಳಿಸುವ ಎನ್ಐಎಫ್, ಎಂಡೋಪ್ಯಾರಸೈಟ್ ಮುತ್ತಿಕೊಳ್ಳುವಿಕೆ ಮತ್ತು ಅದರ ಸ್ಥಿರೀಕರಣವನ್ನು ನಿಯಂತ್ರಿಸಲು ಜ್ಞಾನ ಸಂಘಟನೆಗೆ ಸಹಾಯ ಮಾಡಿತು, ಇದು ಸಮುದಾಯದಿಂದ ಬಂದ ಜ್ಞಾನವು ಮುಖ್ಯವಾಹಿನಿಯ ತಂತ್ರಜ್ಞಾನಕ್ಕೆ ಕಾರಣವಾಯಿತು.

(ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಶ್ರೀ ತುಷಾರ್ ಗರ್ಗ್, ವಿಜ್ಞಾನಿ, ಎನ್ಐಎಫ್, tusharg@nifindia.org, ಮೊಬೈಲ್: 9632776780)

***

 



(Release ID: 1613242) Visitor Counter : 164


Read this release in: English