ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ

ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು  ಮನೆಯಲ್ಲಿ ತಯಾರಿಸಿದ ಮುಖಗವಸುಗಳ ಬಗ್ಗೆ ಕೈಪಿಡಿಯನ್ನು ನೀಡಿದೆ : ಎಸ್ ಎ ಆರ್ ಎಸ್ – ಸಿಒವಿ-2  ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಮುಖಗವಸುಗಳು

Posted On: 31 MAR 2020 2:21PM by PIB Bengaluru

 

ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು  ಮನೆಯಲ್ಲಿ ತಯಾರಿಸಿದ ಮುಖಗವಸುಗಳ ಬಗ್ಗೆ ಕೈಪಿಡಿಯನ್ನು ನೀಡಿದೆ : ಎಸ್ ಎ ಆರ್ ಎಸ್ – ಸಿಒವಿ-2  ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಮುಖಗವಸುಗಳು

 

ಡಿಎಸ್ ಟಿ, ಡಿಬಿಟಿ, ಸಿಎಸ್ಐಆರ್, ಡಿಎಇ, ಡಿಆರ್ ಡಿಒ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್  (ಐಐಎಸ್ಸಿ) ನ ಅಡಿಯಲ್ಲಿರುವ ಸಂಸ್ಥೆಗಳಿಗೆ ಸ್ವಯಂ ಮೌಲ್ಯಮಾಪನ ಮಾಡಲು ಮತ್ತು ಕಠಿಣ  ಶಿಷ್ಟಾಚಾರ ನಿಯಮಾವಳಿ (ಪ್ರೋಟೋಕಾಲ್)ಯ ಮೂಲಕ ಗುಣಮಟ್ಟದ ಸಂಶೋಧನೆ ಮತ್ತು ಪರೀಕ್ಷೆಗಾಗಿ ಪ್ರಯೋಗಾಲಯಗಳನ್ನು ಸಿದ್ಧಪಡಿಸಲು ಅವಕಾಶ ನೀಡುವ ಕಚೇರಿ ಜ್ಞಾಪಕ ಪತ್ರ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಮತ್ತು ಐಸಿಎಂಆರ್ ನಿಗದಿಪಡಿಸಿದ ಆದ್ಯತೆಗಳಿಗೆ ಅನುಗುಣವಾಗಿ ಪರೀಕ್ಷೆಯನ್ನು ಶ್ರೇಣೀಕರಿಸಲಾಗುತ್ತದೆ

ಸಂಶೋಧನೆಯನ್ನು ಸಣ್ಣ ಮತ್ತು ಮಧ್ಯಂತರವಾಗಿಯೂ ಸಹ ವರ್ಗೀಕರಿಸಲಾಗುತ್ತದೆ

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು  ಮನೆಯಲ್ಲಿ ತಯಾರಿಸಿದ ಮುಖಗವಸುಗಳ ಬಗ್ಗೆ  ವಿವರವಾದ ಕೈಪಿಡಿಯನ್ನು ನೀಡಿದೆ : “ಎಸ್ ಎ ಆರ್ ಎಸ್ – ಸಿಒವಿ-2   ಕೊರೊನಾ ವೈರಸ್ ಹರಡುವುದನ್ನು ತಡೆಯುವ ಮುಖಗವಸುಗಳು”.

ವಿಶ್ವ ಆರೋಗ್ಯ ಸಂಸ್ಥೆಯನ್ನು ಉಲ್ಲೇಖಿಸಿ, ಕೈಪಿಡಿ ಹೀಗೆ ತಿಳಿಸುತ್ತದೆ  “ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್ ಅಥವಾ ಸೋಪ್ ಮತ್ತು ನೀರಿನೊಂದಿಗೆ ಆಗಾಗ್ಗೆ ಕೈ ಸ್ವಚ್ಛ ಗೊಳಿಸಿ  ಬಳಸಿದಾಗ ಮಾತ್ರ  ಮುಖಗವಸುಗಳು ಪರಿಣಾಮಕಾರಿಯಾಗಿರುತ್ತವೆ. ನೀವು ಮುಖಗವಸುಗಳನ್ನು ಧರಿಸಿದರೆ, ಅದನ್ನು ಹೇಗೆ ಬಳಸುವುದು ಮತ್ತು ನಂತರ ಉಪಯೋಗಿಸಿದ್ದನ್ನು ಹೇಗೆ ಸರಿಯಾಗಿ ವಿಲೇವಾರಿ ಮಾಡುವುದು ಎನ್ನುವುದು ನಿಮಗೆ ತಿಳಿದಿರಬೇಕು. ”

ವಿಶ್ಲೇಷಣೆಗಳ ಪ್ರಕಾರ,  ಜನಸಂಖ್ಯೆಯ 50%ರಷ್ಟು ಜನರು ಮುಖಗವಸುಗಳನ್ನು  ಧರಿಸಿದರೆ  ಉಳಿದ 50% ಮಾತ್ರ
ವೈರಸ್ ಸೋಂಕಿಗೆ ಒಳಗಾಗುತ್ತಾರೆ.  ಜನಸಂಖ್ಯೆಯ 80% ರಷ್ಟು ಜನರು ಮುಖಗವಸುಗಳನ್ನು ಧರಿಸಿದರೆ ವೈರಸ್ ಹರಡುವಿಕೆಯನ್ನು ತಕ್ಷಣ ನಿಲ್ಲಿಸಬಹುದಾಗಿದೆ.

ಏಕೆ ಮುಖಗವಸುಗಳನ್ನು ಧರಿಸಬೇಕು?   ಎನ್ನುವುದರ ಬಗ್ಗೆ,  “ಕೋವಿಡ್-19 ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಸಂಪರ್ಕದಿಂದಾಗಿ ಸುಲಭವಾಗಿ ಹರಡುತ್ತದೆ.  ವೈರಸ್ಸನ್ನು ಹೊತ್ತ ಹನಿಗಳು ಬೇಗನೆ ಒಣಗಿ ಅತಿ ಸೂಕ್ಷ್ಮಾಣುಗಳಾಗಿ ಗಾಳಿಯಲ್ಲಿ ಸೇರಿಕೊಳ್ಳುತ್ತವೆ ಮತ್ತು ಬೇರೆ ಬೇರೆ  ಕಡೆಗಳಲ್ಲಿ  ತಳವೂರುತ್ತವೆ.  ಕೋವಿಡ್-19 ಕ್ಕೆ ಕಾರಣವಾಗುವ ಎಸ್ ಎ ಆರ್ ಎಸ್ – ಸಿಒವಿ-2  ವೈರಸ್  ಗಳು ಗಾಳಿಯಲ್ಲಿ  ಮೂರು ಗಂಟೆಗಳವರೆಗೆ ಮತ್ತು ಪ್ಲಾಸ್ಟಿಕ್ ಮತ್ತು ಸ್ಟೇನ್‌ಲೆಸ್ ಸ್ಟೀಲ್  ಗಳ ಮೇಲೆ ಮೂರು ಗಂಟೆಗಳವರೆಗೆ ಸಕ್ರಿಯವಾಗಿರುವುದು ಪತ್ತೆಯಾಗಿದೆ (N.Engl J.Med. 2020) ”.

ಮುಖಗವಸುಗಳನ್ನು ಧರಿಸುವುದರಿಂದ, ಸೋಂಕಿತ ವ್ಯಕ್ತಿಯಿಂದ ಹರಡಿದ ಇನ್ನೂ ಗಾಳಿಯಲ್ಲಿ ಇರುವ  ಕರೊನಾ ವೈರಸ್ ಗಳು  ಉಸಿರಾಟದ ವ್ಯವಸ್ಥೆಯಲ್ಲಿ ಪ್ರವೇಶಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಕೈಪಿಡಿಯು ತಿಳಿಸುತ್ತದೆ. ಶಾಖ, ಯುವಿ ಬೆಳಕು, ನೀರು, ಸೋಪ್ ಮತ್ತು ಆಲ್ಕೋಹಾಲ್ ಅನ್ನು ಬಳಸಿ ಶುಚಿಕೊಳಿಸಿರುವ ಮುಖಗವಸುಗಳನ್ನು ಧರಿಸುವುದರಿಂದ  ಉಸಿರಾಡುವಾಗ ವೈರಸ್ ಅನ್ನು ಒಳಗೆಳೆದುಕೊಳ್ಳುವ ಅವಕಾಶಗಳು ಸಾಕಷ್ಟು  ಕಡಿಮೆಯಾಗುವವು, ಇವು ಸೋಂಕಿನ  ಹರಡುವಿಕೆಯನ್ನು ನಿಲ್ಲಿಸುವಲ್ಲಿ  ಪ್ರಮುಖವಾಗಿರುತ್ತವೆ.

ಪ್ರಸ್ತಾವಿತ ಮಾರ್ಗದರ್ಶಿಯ ಉದ್ದೇಶವೇನೆಂದರೆ  ಮುಖಗವಸುಗಳನ್ನು ಒದಗಿಸಲು, ಬಳಸಲು ಮತ್ತು ಮರುಬಳಕೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳು ಮತ್ತು ವ್ಯಕ್ತಿಗಳು ತಾವೇ ತಯಾರಿಸುವುದು ಮತ್ತು ಎಲ್ಲರೂ ವ್ಯಾಪಕವಾಗಿ ಉಪಯೋಗಿಸಲು ಪ್ರಚಾರ ಮಾಡುವುದಕ್ಕಾಗಿ ಉತ್ತಮ ಅಭ್ಯಾಸಗಳ ರೂಪರೇಖೆಯನ್ನು ಒದಗಿಸುವುದಾಗಿದೆ.  ಪ್ರಸ್ತಾವಿತ ವಿನ್ಯಾಸಗಳ ಪ್ರಮುಖ ಮಾನದಂಡವೆಂದರೆ ವಸ್ತುಗಳು ಸುಲಭವಾಗಿ ಸಿಗಬೇಕು, ಮನೆಯಲ್ಲಿಯೇ ಸುಲಭವಾಗಿ ತಯಾರಿಸುವುದು, ಬಳಕೆಯ ಸುಲಭವಾಗಿರುವುದು ಮತ್ತು ಮರುಬಳಕೆ ಮಾಡುವುದು.  ಭಾರತದಾದ್ಯಂತ ವಿಶೇಷವಾಗಿ ಜನನಿಬಿಡ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ  ಮುಖಗವಸುಗಳನ್ನು ಧರಿಸುವುದನ್ನು ಶಿಫಾರಸು ಮಾಡಲಾಗಿದೆ.

ಈ ಮೊದಲು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು ನೀಡಿದ ಕೋವಿಡ್-19ರ ಬಗ್ಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸಶೋಧದ ಹೊಸ ಮಾಹಿತಿಯಲ್ಲಿ ಕೋವಿಡ್-19ಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಅಧಿಕಾರಯುಕ್ತ ಸಮಿತಿ (ಎಸ್ ಟಿ ಇ ಸಿ) ಯು  ವೇಗವಾಗಿ ಕೆಲಸ ಮಾಡಿದೆ ಎಂದು ತಿಳಿಸಿದೆ.


ಕೊರೊನಾ-19ಕ್ಕಾಗಿ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವ ಮಹತ್ವದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೆಳಗಿನ ಕ್ರಮಗಳನ್ನು ಜಾರಿಯಲ್ಲಿವೆ : 
ಡಿಎಸ್ ಟಿ, ಡಿಬಿಟಿ, ಸಿಎಸ್ಐಆರ್, ಡಿಎಇ, ಡಿಆರ್ ಡಿಒ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್  (ಐಐಎಸ್ಸಿ) ನ ಅಡಿಯಲ್ಲಿರುವ ಸಂಸ್ಥೆಗಳಿಗೆ ಸ್ವಯಂ ಮೌಲ್ಯಮಾಪನ ಮಾಡಲು ಮತ್ತು ಕಠಿಣ  ಶಿಷ್ಟಾಚಾರ ನಿಯಮಾವಳಿ (ಪ್ರೋಟೋಕಾಲ್)ಯ ಮೂಲಕ ಗುಣಮಟ್ಟದ ಸಂಶೋಧನೆ ಮತ್ತು ಪರೀಕ್ಷೆಗಾಗಿ ಪ್ರಯೋಗಾಲಯಗಳನ್ನು ಸಿದ್ಧಪಡಿಸಲು ಅವಕಾಶ ನೀಡುವ ಕಚೇರಿ ಜ್ಞಾಪಕ ಪತ್ರ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಮತ್ತು ಐಸಿಎಂಆರ್ ನಿಗದಿಪಡಿಸಿದ ಆದ್ಯತೆಗಳಿಗೆ ಅನುಗುಣವಾಗಿ ಪರೀಕ್ಷೆಯನ್ನು ಶ್ರೇಣೀಕರಿಸಲಾಗುತ್ತದೆ  ಸಂಶೋಧನೆಯನ್ನೂ ಸಹ ಅಲ್ಪ ಮತ್ತು ಮಧ್ಯಕಾಲೀನ ಫಲಿತಾಂಶಗಳೆಂದು ವರ್ಗೀಕರಿಸಲಾಗುತ್ತದೆ.

 ವಿಜ್ಞಾನ ಮತ್ತು ತಂತ್ರಜ್ಞಾನ ಅಧಿಕಾರಯುಕ್ತ ಸಮಿತಿ (ಎಸ್ ಟಿ ಇ ಸಿ) ಯನ್ನು ಮಾರ್ಚ್ 19, 2020 ರಂದು ರಚಿಸಲಾಯಿತು. ಸಮಿತಿಯ ಅಧ್ಯಕ್ಷತೆಯನ್ನು ಎನ್ಐಟಿಐ (ನೀತಿ) ಆಯೋಗದ ಸದಸ್ಯರಾದ  ಪ್ರೊ.ವಿನೋದ್ ಪಾಲ್ ಮತ್ತು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ.ಕೆ.ವಿಜಯ್ ರಾಘವನ್ ವಹಿಸಿದ್ದು, ಎಸ್ ಎ ಎಸ್ ಆರ್ ಎಸ್ – ಸಿ ಒ ವಿ - -2 ವೈರಸ್ ಮತ್ತು ಕೋವಿಡ್-19ರ ಕಾಯಿಲೆಗೆ ಸಂಬಂಧಿಸಿದಂತೆ  ಏಜೆನ್ಸಿಗಳು, ವಿಜ್ಞಾನಿಗಳು, ಕೈಗಾರಿಕೆಗಳು ಮತ್ತು ನಿಯಂತ್ರಕ ಸಂಸ್ಥೆಗಳೊಡನೆ ಸಮನ್ವಯ , ಸಂಶೋಧನೆ  ಮತ್ತು ಅಭಿವೃದ್ಧಿಗಾಗಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಇವರ ಜವಾಬ್ದಾರಿಯಾಗಿರುತ್ತದೆ.

 



(Release ID: 1609742) Visitor Counter : 190