ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕಾರ್ಯನಿರ್ವಹಣೆ ಮುಂದುವರಿಕೆ ಖಾತ್ರಿಪಡಿಸಲು ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದಿಂದ ಪತ್ರ

Posted On: 24 MAR 2020 6:25PM by PIB Bengaluru

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕಾರ್ಯನಿರ್ವಹಣೆ ಮುಂದುವರಿಕೆ ಖಾತ್ರಿಪಡಿಸಲು ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದಿಂದ ಪತ್ರ

 

ದೇಶಾದ್ಯಂತ ಕೋವಿಡ್-19 ನಿಂದಾಗಿ ಉಂಟಾಗಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಕಾರ್ಯನಿರ್ವಹಣೆ ಮುಂದುವರಿಕೆ ಖಾತ್ರಿಪಡಿಸುವಂತೆ ಕೇಂದ್ರ ಸರ್ಕಾರ, ಎಲ್ಲ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು, ಮನವಿ ಮಾಡಿದೆ. ಎಲ್ಲ ಮುಖ್ಯ ಕಾರ್ಯದರ್ಶಿಗಳನ್ನುದ್ದೇಶಿಸಿ ಬರೆದಿರುವ ಪತ್ರದಲ್ಲಿ ಟಿವಿ ಚಾನಲ್ ಗಳು, ಸುದ್ದಿ ಸಂಸ್ಥೆಗಳು, ಟಲಿಪೋರ್ಟ್ ಆಪರೇಟರ್ ಗಳು, ಡಿಜಿಟಲ್ ಸ್ಯಾಟಲೈಟ್ ನ್ಯೂಸ್ ಗ್ಯಾದರಿಂಗ್(ಡಿಎಸ್ಎನ್ ಜಿ) ಡೈರೆಕ್ಟ್ ಟು ಹೋಮ್(ಡಿಟಿಎಚ್) ಮತ್ತು ಹೈಎಂಡ್ ಇನ್ ದಿ ಸ್ಕೈ(ಹೆಚ್ ಐ ಟಿಎಸ್), ಮಲ್ಟಿ ಸಿಸ್ಟಮ್ ಆಪರೇಟರ್ ಗಳು(ಎಂಎಸ್ ಒ), ಕೇಬಲ್ ಆಪರೇಟರ್ ಗಳು, ಫ್ರೀಕ್ವೆನ್ಸಿ ಮಾಡ್ಯುಲೇಷನ್(ಎಫ್ಎಂ) ರೇಡಿಯೊ ಮತ್ತು ಸಮುದಾಯ ರೇಡಿಯೋ ಕೇಂದ್ರಗಳೂ ಸೇರಿದಂತೆ ಅಗತ್ಯ ಮಾಹಿತಿ ಪ್ರಸರಣ ಜಾಲದ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ರಾಷ್ಟ್ರದಲ್ಲಿನ ವಾಸ್ತವ ಸ್ಥಿತಿಗತಿಗಳ ಬಗ್ಗೆ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತ, ಅವರಲ್ಲಿ ಜಾಗೃತಿ ಮೂಡಿಸಲು ಈ ಸಂಪರ್ಕ ಜಾಲಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ ಪತ್ರದಲ್ಲಿ ಸುಳ್ಳು ಸುದ್ದಿಗಳನ್ನು ತಪ್ಪಿಸುವುದು ಮತ್ತು ಉತ್ತಮ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸಂಪರ್ಕ ಜಾಲಗಳು ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಹೇಳಲಾಗಿದೆ.
ಈ ಮಾಹಿತಿ ಸಂಪರ್ಕ ಜಾಲಗಳು ನಿರಂತರವಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುವಂತೆ ಸಲಹೆ ನೀಡಿರುವ ಸರ್ಕಾರ, ಅವುಗಳು ಜನ ಸಂಪರ್ಕದಲ್ಲಿ ಮಹತ್ವದ ಪ್ರಾಮುಖ್ಯತೆ ಹೊಂದಿವೆ ಎಂದು ಹೇಳಿದೆ. ಪತ್ರದಲ್ಲಿ ಈ ಕೆಳಗಿನ ಮಹತ್ವದ ಮೂಲಸೌಕರ್ಯವನ್ನು ಪಟ್ಟಿ ಮಾಡಲಾಗಿದೆ.
ಮುದ್ರಣಾಲಯಗಳು ಮತ್ತು ದಿನ ಪತ್ರಿಕೆ ವಿತರಣೆ ಮೂಲಸೌಕರ್ಯ ಹಾಗೂ ವಾರಪತ್ರಿಕೆಗಳು
ಎಲ್ಲ ಟಿವಿ ಚಾನಲ್ ಗಳು ಮತ್ತು ಅದಕ್ಕೆ ಪೂರಕ ಸೇವೆ ಒದಗಿಸುವ ಟೆಲಿಪೋರ್ಟ್ಸ್ ಮತ್ತು       ಡಿಎಸ್ ಎನ್ ಜಿಗಳು
ಡಿಟಿಎಚ್/ಹೆಚ್ ಐಟಿಎಸ್ ಕಾರ್ಯಾಚರಣೆ ಸಂಪರ್ಕಿಸುವ ಉಪಕರಣಗಳು/ಸೌಕರ್ಯಗಳು ನಿರ್ವಹಣೆ ಸೇರಿ ಇತ್ಯಾದಿ.
ಎಫ್ಎಂ/ಸಿಆರ್ ಎಸ್ ಸಂಪರ್ಕ ಜಾಲ
ಎಂಎಸ್ಒಗಳ ಸಂಪರ್ಕಜಾಲ ಮತ್ತು ಕೇಬಲ್ ಆಪರೇಟರ್ ಗಳು ಹಾಗೂ ಸುದ್ದಿ ಸಂಸ್ಥೆಗಳು
 
ಕೋವಿಡ್ -19 ನಿಯಂತ್ರಣಕ್ಕೆ ಯಾವುದೇ ನಿರ್ಬಂಧಗಳನ್ನು ವಿಧಿಸುವಾಗ ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದೆ.
 
ಈ ಎಲ್ಲಾ ಆಪರೇಟರ್ ಗಳು ಬಳಸುವಂತಹ ಸೌಕರ್ಯಗಳು/ ಮಧ್ಯವರ್ತಿಗಳು ಸರಣಿ ನಿರಂತರವಾಗಿ ಸುಗಮ ರೀತಿಯಲ್ಲಿ ಕಾರ್ಯಾಚರಣೆ ಮಾಡುತ್ತಾ, ಪೂರೈಕೆ ಮತ್ತು ಬೇಡಿಕೆ ಸರಣಿಯನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದೆ.
ಸೇವಾ ಪೂರೈಕೆದಾರರ ಸಿಬ್ಬಂದಿಯ ಮೂಲಕ ಅಗತ್ಯ ಸೇವೆಗಳನ್ನು ಕಲ್ಪಿಸಿ ಕೊಡಬೇಕು.
ಸೇವೆ ಒದಗಿಸುವ ಮಾನ್ಯತೆ ಹೊಂದಿದ ಸಿಬ್ಬಂದಿಯ ಚಲನವಲನಕ್ಕೆ ಅವಕಾಶ ಮಾಡಿಕೊಡಬೇಕು. ಮಾಧ್ಯಮ ವ್ಯಕ್ತಿಗಳನ್ನು, ಡಿಎಸ್ ಎನ್ ಜಿಗಳು ಮತ್ತು ಇಂಧನ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯುವ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಕೊಡುವುದು ಮತ್ತು ಅವುಗಳ ಕಾರ್ಯನಿರ್ವಹಣೆಗೆ ಯಾವುದೇ ಅಡೆತಡೆ ಇಲ್ಲದೆ ವಿದ್ಯುತ್ ಪೂರೈಕೆ ಲಭ್ಯವಾಗುವಂತೆ ಮಾಡಬೇಕು ಹಾಗೂ ಅಂತಹ ಸಂಸ್ಥೆಗಳಿಗೆ ಅಗತ್ಯ ಸಾರಿಗೆ ಸೌಕರ್ಯವನ್ನು ಒದಗಿಸಿ ಕೊಡಬೇಕು, ಅಲ್ಲದೆ ಕೇಂದ್ರ ಸರ್ಕಾರ ಅನಿರ್ಬಂಧಿತ ಸೇವೆಗಳನ್ನು ಒದಗಿಸುವಲ್ಲಿ ಯಾವುದೇ ರೀತಿಯ ತೊಂದರೆ ಎದುರಾದಲ್ಲಿ ಸ್ಥಳೀಯ ಆಡಳಿತದೊಂದಿಗೆ ಸಮನ್ವಯದಿಂದ ಸೇವಾ ಪೂರೈಕೆದಾರರು ಕಾರ್ಯನಿರ್ವಹಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸಲಹೆ ನಿಡಿದೆ.
 


******



(Release ID: 1608011) Visitor Counter : 712


Read this release in: English , Hindi , Gujarati