ಹಣಕಾಸು ಸಚಿವಾಲಯ

ದಿವಾಳಿ ಮತ್ತು ದಿವಾಳಿತನ ಸಂಹಿತೆ (ಎರಡನೇ ತಿದ್ದುಪಡಿ) ಮಸೂದೆ, 2019 ಕ್ಕೆ ಸಂಪುಟದ ಅನುಮೋದನೆ

प्रविष्टि तिथि: 11 DEC 2019 6:19PM by PIB Bengaluru

ದಿವಾಳಿ ಮತ್ತು ದಿವಾಳಿತನ ಸಂಹಿತೆ (ಎರಡನೇ ತಿದ್ದುಪಡಿ) ಮಸೂದೆ, 2019 ಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂದು ದಿವಾಳಿ ಮತ್ತು ದಿವಾಳಿತನ ಸಂಹಿತೆ, 2016 ಕ್ಕೆ 2019 ರ ದಿವಾಳಿ ಮತ್ತು ದಿವಾಳಿತನ ಸಂಹಿತೆ (ಎರಡನೇ ತಿದ್ದುಪಡಿ) ಮಸೂದೆ ಮೂಲಕ ತಿದ್ದುಪಡಿ ಮಾಡುವ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಿದೆ. ತಿದ್ದುಪಡಿಗಳು ದಿವಾಳಿ ಪರಿಹಾರ ಪ್ರಕ್ರಿಯೆಯಲ್ಲಿ ಎದುರಾಗುವ ಕೆಲವು ತೊಂದರೆಗಳನ್ನು ಕೈಬಿಡುವ ಗುರಿಯನ್ನು ಹೊಂದಿವೆ ಮತ್ತು ಸುಲಲಿತ ವ್ಯವಹಾರವನ್ನು ಇನ್ನಷ್ಟು ಸುಲಭಗೊಳಿಸಲು ಇದು ನೆರವಾಗುತ್ತವೆ.

ಪ್ರಸ್ತಾವನೆಯ ವಿವರಗಳು

ತಿದ್ದುಪಡಿ ಮಸೂದೆಯು ದಿವಾಳಿಮತ್ತು ದಿವಾಳಿತನ ಸಂಹಿತೆ, 2016 (ಕೋಡ್) ನಲ್ಲಿನ 5 (12), 5 (15), 7, 11, 14, 16 (1), 21 (2), 23 (1), 29 ಎ, 227, 239, 240 ವಿಭಾಗಗಳನ್ನು ತಿದ್ದುಪಡಿ ಮಾಡುತ್ತದೆ ಮತ್ತು ಹೊಸ ವಿಭಾಗ 32 ಎ ಅನ್ನು ಸೇರಿಸುತ್ತದೆ.

ಪರಿಣಾಮ

1. ಸಂಹಿತೆಯಲ್ಲಿನ ತಿದ್ದುಪಡಿಗಳು ಅಡಚಣೆಗಳನ್ನು ತೆಗೆದುಹಾಕಿ, ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ    (ಸಿ ಐ ಆರ್ ಪಿ) ಯನ್ನು ಸುಗಮಗೊಳಿಸಿ ಮತ್ತು ಕೊನೆಯ ಹಂತದ ನಿಧಿಯನ್ನು ರಕ್ಷಿಸಿ ಆರ್ಥಿಕವಾಗಿ ತೊಂದರೆಗೀಡಾದ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತದೆ.

2. ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯ (ಸಿ ಐ ಆರ್ ಪಿ) ಕ್ಷುಲ್ಲಕ ಪ್ರಚೋದನೆಯನ್ನು ತಡೆಗಟ್ಟುವ ಸಲುವಾಗಿ ಅಧಿಕೃತ ಪ್ರತಿನಿಧಿಯಿಂದ ಪ್ರತಿನಿಧಿಸಲ್ಪಟ್ಟ ಹಣಕಾಸು ಸಾಲಗಾರರಿಗಾಗಿ ಹೆಚ್ಚುವರಿ ಮಿತಿಗಳನ್ನು ಪರಿಚಯಿಸಲಾಗಿದೆ.

3. ಕಾರ್ಪೊರೇಟ್ ಸಾಲಗಾರನ ವ್ಯವಹಾರದ ಅಸ್ತಿತ್ವವೇ ಕಳೆದುಹೋಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು, ಪರವಾನಗಿ, ಅನುಮತಿ, ರಿಯಾಯಿತಿಗಳು, ಕ್ಲಿಯರೆನ್ಸ್ ಇತ್ಯಾದಿಗಳನ್ನು ಮುಕ್ತಾಯಗೊಳಿಸಲಾಗುವುದಿಲ್ಲ ಅಥವಾ ಸ್ಥಗಿತಗೊಳಿಸಲಾಗುವುದಿಲ್ಲ ಅಥವಾ ನಿಷೇಧದ ಅವಧಿಯಲ್ಲಿ ನವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸುವುದು.

4. ಹಿಂದಿನ ಆಡಳಿತ/ ಪ್ರವರ್ತಕರು ಮಾಡಿದ ಅಪರಾಧಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿಂದ ಯಶಸ್ವಿ ರೆಸಲ್ಯೂಶನ್ ಅರ್ಜಿದಾರರ ಪರವಾಗಿ ರಿಂಗ್-ಫೆನ್ಸಿಂಗ್ ಕಾರ್ಪೊರೇಟ್ ಸಾಲಗಾರನನ್ನು ಐಬಿಸಿ ಅಡಿಯಲ್ಲಿ ಪರಿಹರಿಸುವುದು.


(रिलीज़ आईडी: 1596175) आगंतुक पटल : 134
इस विज्ञप्ति को इन भाषाओं में पढ़ें: English , Urdu , हिन्दी , Tamil