ಪ್ರಧಾನ ಮಂತ್ರಿಯವರ ಕಛೇರಿ

ಯೂರೋಪಿಯನ್ ಕಮಿಷನ್ ನ ಗೌರವಾನ್ವಿತ ಅಧ್ಯಕ್ಷೆ ಮಿಸ್ ಉರ್ಸುಲ ವಾನ್ ದೆರ್ ಲೆಯೆನ ಅವರೊಂದಿಗೆ ಪ್ರಧಾನ ಮಣತ್ರಿಯವರ ದೂರವಾಣಿ ಸಂಭಾಷಣೆ

Posted On: 02 DEC 2019 10:35PM by PIB Bengaluru

ಯೂರೋಪಿಯನ್ ಕಮಿಷನ್ ನ ಗೌರವಾನ್ವಿತ ಅಧ್ಯಕ್ಷೆ ಮಿಸ್ ಉರ್ಸುಲ ವಾನ್ ದೆರ್ ಲೆಯೆನ ಅವರೊಂದಿಗೆ ಪ್ರಧಾನ ಮಣತ್ರಿಯವರ ದೂರವಾಣಿ ಸಂಭಾಷಣೆ

 

ಪ್ರಧಾನ ಮಂತ್ರಿ ಶ್ರೀ ನರೆಂದ್ರ ಮೋದಿ ಅವರು ಯೂರೋಪಿಯನ್ ಕಮಿಷನ್ನ ಗೌರವಾನ್ವಿತ ಅಧ್ಯಕ್ಷೆ, ಮಿಸ್ ಉರ್ಸುಲ ವಾನ್ ದೆರ್ ಲೆಯೆನ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು

ಯೂರೋಪಿಯನ್ ಕಮಿಷನ್ನ ಗೌರವಾನ್ವಿತ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮಿಸ್ ಉರ್ಸುಲ ವಾನ್ ದೆರ್ ಲೆಯೆನ ಅವರನ್ನು  ಅಭಿನಂದಿಸಿ, ಆಡಳಿತಾ ಅವಧಿಯ ಆರಂಭದಲ್ಲೇ ನೆಡೆಸಿದ ದೂರವಾಣಿ ಸಂಭಾಷಣೆಗೆ ಪ್ರಧಾನ ಮಂತ್ರಿ ಹರ್ಷ ವ್ಯಕ್ತಪಡಿಸಿದರು. ಉರ್ಸುಲ ಅವರು ಪ್ರಥಮ ಮಹಿಳಾ ಅಧ್ಯಕ್ಷೆಯಾದುದರಿಂದ, ಅವರ ನಾಯಕತ್ವಕ್ಕೆ ಕಮಿಷನ್ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದು ಪ್ರಧಾನ ಮಂತ್ರಿಗಳು ಅಭಿನಂದಿಸಿದರು.

ಪ್ರಜಾ ಪ್ರಭುತ್ವ, ಕಾನೂನಿಗೆ ಗೌರವ, ಬಹುಪಕ್ಷೀಯತೆ, ನಿಯಮಾಧಾರಿತ ವ್ಯಾಪಾರ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ಕ್ರಮಗಳಂತಹ ಮೌಲ್ಯಗಳನ್ನು ಹಂಚಿಕೊಳ್ಳುವುದನ್ನು ಭಾರತ ಮತ್ತು ಯೂರೋಪಿಯನ್ ಸಹ ಭಾಗಿತ್ವ ಆಧರಿಸಿದೆ ಎಂದು ಪ್ರಧಾನ ಮಂತ್ರಿ ಅವರು ಒತ್ತಿ ಹೇಳಿದರು. ಹವಾಮಾನ ಬದಲಾವಣೆ, ಸಂಪರ್ಕ, ನವೀಕರಿಸಬಹುದಾದ ಇಂಧನ, ಕಡಲ ಭದ್ರತೆ, ತೀವ್ರವಾದ ಮತ್ತು ಭಯೋತ್ಪಾದನೆಯನ್ನು ತೊಡೆದುಹಾಕುವಂತಹ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಆದ್ಯತೆ ನೀಡಿರುವುದನ್ನು ಪ್ರಧಾನ ಮಂತ್ರಿಗಳು ಶ್ಲಾಘಿಸಿದರು. ಭಾರತ ಮತ್ತು ಯೂರೋಪಿಯನ್ ಸಹ ಭಾಗಿತ್ವವನ್ನು ಬಲಪಡಿಸಲು ಜಂಟಿಯಾಗಿ ಕಾರ್ಯ ನಿರ್ವಹಿಸುವ ಆಶಯವನ್ನು ಪ್ರಧಾನ ಮಂತ್ರಿ ಅವರು ವ್ಯಕ್ತಪಡಿಸಿದರು.

 ಮುಂದಿನ ಭಾರತ ಯೂರೋಪಿಯನ್ ಸಮಾವೇಶಕ್ಕೆ ಬ್ರಸ್ಸೆಲ್ಸ್ ಗೆ ಭೇಟಿ ನೀಡುವಂತೆ, ಪ್ರಧಾನ ಮಂತ್ರಿಗಳನ್ನು  ಮಿಸ್ ಉರ್ಸುಲ ವಾನ್ ದೆರ್ ಲೆಯೆನ ಆಹ್ವಾನಿಸಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ  ಆಹ್ವಾನವನ್ನು ಕೃತಜ್ಞಾಪೂರ್ವಕವಾಗಿ ಸ್ವೀಕರಿಸಿದರು.

*****



(Release ID: 1594622) Visitor Counter : 73