ಪ್ರಧಾನ ಮಂತ್ರಿಯವರ ಕಛೇರಿ
ನಾಯಕತ್ವದ ಮಹತ್ವ: “ಸಮಕಾಲೀನ ಜಗತ್ತಿನಲ್ಲಿ ಮಹಾತ್ಮ ಗಾಂಧಿಯವರ ಪ್ರಸ್ತುತತೆ” ಇಕೋಸಾಕ್ ಚೇಂಬರ್
प्रविष्टि तिथि:
25 SEP 2019 6:00AM by PIB Bengaluru
ನಾಯಕತ್ವದ ಮಹತ್ವ: “ಸಮಕಾಲೀನ ಜಗತ್ತಿನಲ್ಲಿ ಮಹಾತ್ಮ ಗಾಂಧಿಯವರ ಪ್ರಸ್ತುತತೆ” ಇಕೋಸಾಕ್ ಚೇಂಬರ್
ಶಾಂತಿ ಮತ್ತು ಅಹಿಂಸೆಯ ಜಾಗತಿಕ ಹೆಗ್ಗುರುತೆನಿಸಿರುವ ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯ ಸ್ಮರಣಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ವಿಶ್ವಸಂಸ್ಥೆಯ 74ನೇ ಮಹಾಧಿವೇಶನದ ವೇಳೆ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿಯ ಇಕೋಸೋಕೋ ಚೇಂಬರ್ ನಲ್ಲಿ ಇಂದು ಸಂಜೆ 6:30ರಲ್ಲಿ ಉನ್ನತ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿಶ್ವ ಸಂಸ್ಥೆಯ ಘನತೆವೆತ್ತ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಆಂಟೋನಿಯೋ ಗುತೆರೆಸ್, ಕೊರಿಯಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಮೂನ್ ಜೆ ಇನ್, ಸಿಂಗಾಪುರ್ ಗಣರಾಜ್ಯದ ಪ್ರಧಾನ ಮಂತ್ರಿ ಘನತೆವೆತ್ತ ಶ್ರೀ ಲೀ ಹ್ಸೀನ್ ಲೂಂಗ್, ಬಾಂಗ್ಲಾದೇಶ ಪ್ರಜಾ ಗಣರಾಜ್ಯದ ಪ್ರಧಾನಿ ಘನತೆವೆತ್ತ ಶ್ರೀಮತಿ ಶೇಖ್ ಹಸೀನಾ, ಜಮೈಕಾದ ಪ್ರಧಾನಿ ಘನತೆವೆತ್ತ ಶ್ರೀ ಆಂಡ್ರ್ಯೂ ಹೋಲ್ನೆಸ್, ಮತ್ತು ನ್ಯೂಜಿಲೆಂಡ್ ಪ್ರಧಾನಿ ಘನತೆವೆತ್ತ ಶ್ರೀಮತಿ ಜಸಿಂಡಾ ಅರ್ಡೆರ್ನ್ ಭಾಗಿಯಾಗಿದ್ದರು.
ಭೂತಾನ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಲೋಟೆ ಶೇರಿಂಗ್, ಕೊರಿಯಾ ಗಣರಾಜ್ಯದ ಪ್ರಥಮ ಮಹಿಳೆ ಘನತೆವೆತ್ತ ಶ್ರೀಮತಿ ಕಿಮ್ ಜುನ್ ಸೂಕ್, ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಸದಸ್ಯ ದೇಶಗಳ ರಾಜತಾಂತ್ರಿಕರೂ ಸಹ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್, ಸ್ವಾಗತ ಕೋರಿದರು. ಭಾಗಿಯಾಗಿದ್ದ ಎಲ್ಲ ಗಣ್ಯರೂ ಒಟ್ಟಾಗಿ ವಿಶ್ವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ (ವಿಶ್ವ ಸಂಸ್ಥೆಗೆ ಭಾರತ ಕೊಡುಗೆಯಾಗಿ ನೀಡಿರುವ) ಗಾಂಧಿ ಸೌರ ಉದ್ಯಾನ, ಓಲ್ಡ್ ವೆಸ್ಟ್ಬರಿಯ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ಕಾಲೇಜಿನ ಗಾಂಧಿ ಶಾಂತಿ ಉದ್ಯಾನ ಮತ್ತು ವಿಶ್ವ ಸಂಸ್ಥೆಯ ಅಂಚೆ ಆಡಳಿತವು ಹೊರತಂದಿರುವ ಗಾಂಧಿ @ 150 ವಿಶೇಷ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಅನಾವರಣಗೊಳಿಸಿದರು.
ಪ್ರಧಾನಮಂತ್ರಿಯವರು ತಮ್ಮ ಪ್ರಧಾನ ಭಾಷಣದಲ್ಲಿ, 20ನೇ ಶತಮಾನದಲ್ಲಿ ಮಹತ್ವದ ಮಾನವನ ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧೀ ಅವರು ನೀಡಿದ ಕೊಡುಗೆ; ಎಲ್ಲರ ಕಲ್ಯಾಣ (ಸರ್ವೋದಯ) ; ದೀನದುರ್ಬಲರ ಸಬಲೀಕರಣಕ್ಕಾಗಿ (ಅಂತ್ಯೋದಯ) ; ಮತ್ತು ಪರಿಸರ ಸುಸ್ಥಿರತೆಯ ಕಾಳಜಿಯ ಕುರಿತು ಮಾತನಾಡಿದರು. ಸಂಘಟಿತ ಇಚ್ಛಾಶಕ್ತಿ, ಹಂಚಿಕೆಯ ಗುರಿ, ನೈತಿಕ ಉದ್ದೇಶಗಳು, ಜನಾಂದೋಲನ ಮತ್ತು ವೈಯಕ್ತಿಕ ಹೊಣೆಗಾರಿಕೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಹಿಂಸಾತ್ಮಕ ಸಂಘರ್ಷ, ಭಯೋತ್ಪಾದನೆ, ಆರ್ಥಿಕ ಅಸಮಾನತೆ, ಸಾಮಾಜಿಕ – ಆರ್ಥಿಕ ಅಭಾವ, ಸಾಂಕ್ರಾಮಿಕ ಮತ್ತು ಹವಾಮಾನ ಬದಲಾವಣೆಯ ಅಸ್ತಿತ್ವದ ಬೆದರಿಕೆಗಳು ಜನರು, ರಾಜ್ಯಗಳು ಮತ್ತು ಸಮಾಜಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಈ ಎಲ್ಲ ಸಮಸ್ಯೆಗಳನ್ನು ಎದುರಿಸಲು ನಾಯಕತ್ವ ಅತ್ಯಂತ ಮಹತ್ವದ್ದಾಗಿದ್ದು, ಗಾಂಧಿ ಅವರು ಉತ್ತೇಜಿಸಿದ ಮೌಲ್ಯಗಳು ಉಜ್ವಲ ನಾಯಕತ್ವಕ್ಕೆ ನೈತಿಕ ಬಲ ತುಂಬುತ್ತವೆ ಎಂದು ಹೇಳಿದರು.
ಮಹಾ ಪ್ರಧಾನ ಕಾರ್ಯದರ್ಶಿ ಗುತೇರಸ್ ಮಾತನಾಡಿ, ನಾವು ಭೇಟಿಯಾಗುವ ಬಡ ವ್ಯಕ್ತಿಯ ಜೀವನ, ಘನತೆ ಮತ್ತು ಹಣೆಬರಹವನ್ನು ಹೆಚ್ಚಿಸುವ ಕುರಿತು ನಿರ್ಣಯಿಸುವ ಯಾವುದೇ ನೀತಿಯನ್ನು ನಿರ್ಧರಿಸಲು ಮತ್ತು ಯಾವುದೇ ಕ್ರಮವನ್ನು ನಿರ್ಣಯಿಸಲು ಗಾಂಧಿ ನಮಗೆ ಅತೀಂದ್ರಿಯ ಚೈತನ್ಯ ನೀಡಿದ್ದಾರೆ ಎಂದರು. ನೈರ್ಮಲ್ಯ, ತಾಯಿಯ ಆರೋಗ್ಯ, ಪ್ರಾಥಮಿಕ ಶಿಕ್ಷಣ, ಲಿಂಗ ಸಮಾನತೆ, ಮಹಿಳಾ ಸಬಲೀಕರಣ, ಹಸಿವಿನ ನಿಯಂತ್ರಣ ಮತ್ತು ಅಭಿವೃದ್ಧಿಗೆ ಸಹಭಾಗಿತ್ವವನ್ನು ಖಾತರಿಪಡಿಸಲು ಎಂಡಿಜಿಗಳು ಅಥವಾ ಎಸ್‌ಡಿಜಿಗಳನ್ನು ವಿನ್ಯಾಸಗೊಳಿಸುವ ಬಹಳ ಹಿಂದೆಯೇ ಗಾಂಧಿಯವರು ಅನುಸರಿಸುತ್ತಿದ್ದ ಜೀವನ ಮತ್ತು ರೂಢಿಗಳು ಅದಕ್ಕೆ ಆಧಾರವಾಗಿವೆ ಎಂದರು. ಸುಸ್ಥಿರ ಅಭಿವೃದ್ದಿಯ ಗುರಿಗಳು ಗಾಂಧೀಜಿ ಅವರ ತತ್ವವನ್ನು ಕಾರ್ಯರೂಪಕ್ಕೆ ತರುವುದಾಗಿದೆ ಎಂದರು.
ಗಾಂಧಿಜಿ ಅವರ ಚಿಂತನೆಗಳಿಗೆ ಗೌರವ ನಮನ ಸಲ್ಲಿಸಲು ಈ ಸಂದರ್ಭವನ್ನು ಬಳಸಿಕೊಂಡ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರು, ಮಹಾತ್ಮಾ ಗಾಂಧಿ ಅವರು ಹಾಕಿಕೊಟ್ಟ ಪರಂಪರೆ, ಮುಂದಿನ ಪೀಳಿಗೆಗೂ ದಾರಿದೀಪ ಎಂದರು. ಮಹಾತ್ಮಾ ಗಾಂಧಿಯವರ ಹೆಸರೇ ಜನಾಂಗ, ಧರ್ಮ ಮತ್ತು ರಾಷ್ಟ್ರ-ರಾಜ್ಯಗಳ ಗಡಿಯನ್ನು ಮೀರಿದ್ದಾಗಿದೆ ಮತ್ತು ಇಪ್ಪತ್ತೊಂದನೇ ಶತಮಾನದ ಪ್ರವಾದಿಯ ಧ್ವನಿಯಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು. ಮಹಾತ್ಮಾ ಗಾಂಧಿ ಅವರದು ಬಹುಮುಖಿ ವ್ಯಕ್ತಿತ್ವ. ಅವರು ರಾಷ್ಟ್ರೀಯವಾದಿ ಮತ್ತು ಅಂತಾರಾಷ್ಟ್ರೀಯವಾದಿ, ಸಂಪ್ರದಾಯವಾದಿ ಮತ್ತು ಸುಧಾರಕ, ರಾಜಕೀಯ ನಾಯಕ ಮತ್ತು ಧಾರ್ಮಿಕ ಗುರು, ಲೇಖಕ ಮತ್ತು ಚಿಂತಕ, ಸಮಾಜ ಸುಧಾರಣೆ ಮತ್ತು ಬದಲಾವಣೆಗೆ ಶಾಂತಿಪ್ರಿಯ ಮತ್ತು ಕಾರ್ಯಕರ್ತ ಎಂದರು. ಅಹಿಂಸೆ ಮತ್ತು ಸರ್ವೋಚ್ಚ ಮಾನವತಾವಾದದ ರೂಢಿಯನ್ನು ಅವರು ಭಾವೋದ್ರಿಕ್ತವಾಗಿ ಅನುಸರಿಸಿದ್ದಕ್ಕಾಗಿ ಮಾತ್ರವೇ ಜಗತ್ತು ಮಹಾತ್ಮಾ ಗಾಂಧಿ ಅವರನ್ನು ಸ್ಮರಿಸುವುದಿಲ್ಲ, ಜೊತೆಗೆ ಹಂಚಿಕೆಯ ಭೂಗ್ರಹದಲ್ಲಿ ಮಹಿಳೆಯರು ಮತ್ತು ಪುರುಷರ ಸಾರ್ವಜನಿಕ ಜೀವನ ಪರೀಕ್ಷಿಸುವ ಮಾನದಂಡವಾಗಿ, ರಾಜಕೀಯ ಕಲ್ಪನೆಗಳು ಮತ್ತು ಸರ್ಕಾರದ ನೀತಿಗಳು ಮತ್ತು ನಮ್ಮ ವಿಶ್ವಾಸ ಮತ್ತು ಆಶಯಗಳ ವಿಚಾರದಲ್ಲಿ ಜಗತ್ತು ಅವರನ್ನು ಸ್ಮರಿಸುತ್ತದೆ.
***
(रिलीज़ आईडी: 1586859)
आगंतुक पटल : 705