ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ, 2019ರಲ್ಲಿ ತಿದ್ದುಪಡಿಗಳು/ಬದಲಾವಣೆಗಳಿಗೆ ಸಂಪುಟ ಅನುಮೋದನೆ 

Posted On: 28 AUG 2019 7:42PM by PIB Bengaluru

ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ, 2019ರಲ್ಲಿ ತಿದ್ದುಪಡಿಗಳು/ಬದಲಾವಣೆಗಳಿಗೆ ಸಂಪುಟ ಅನುಮೋದನೆ 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು, ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ, 2019 ರಲ್ಲಿ ತಿದ್ದುಪಡಿಗಳು/ಬದಲಾವಣೆಗಳ ಕುರಿತು ಪರಾಮರ್ಶೆ ನಡೆಸಿತು. ವಿಧೇಯಕದ ಮೂಲ ಆವೃತ್ತಿಯನ್ನು 2019 ರ ಜುಲೈ 17 ರಂದು ಸಂಪುಟ ಅನುಮೋದಿಸಿತ್ತು. ಮತ್ತು ಅದಕ್ಕೆ ಅಧಿಕೃತ ತಿದ್ದುಪಡಿಗಳೊಂದಿಗೆ ಸಂಸತ್ತಿನ ಉಭಯ ಸದನಗಳು ಅನುಕ್ರಮವಾಗಿ 2019 ರ ಜುಲೈ 29 ಮತ್ತು 2019 ರ ಆಗಸ್ಟ್ 1 ರಂದು ಅಂಗೀಕಾರ ನೀಡಿದ್ದವು. 2019 ರ ಜುಲೈ 17 ರಂದು ಸಂಪುಟ ಅನುಮೋದಿಸಿದ ಆವೃತ್ತಿಯಿಂದ , ಸಂಸತ್ತು ಅಂಗೀಕರಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ, 2019 ರಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಅವುಗಳನ್ನು ಸಂಪುಟವು ಪರಾಮರ್ಶೆ ನಡೆಸಿತು. i ನಿಬಂಧನೆ 4(1) (c) –ಹದಿನಾಲ್ಕು ಸದಸ್ಯರಿಗೆ ಬದಲಾಗಿ ಇಪ್ಪತ್ತೆರಡು ಅರೆ ಕಾಲಿಕ ಸದಸ್ಯರು. ii ನಿಬಂಧನೆ 4(4) (b) - ಆರು ಸದಸ್ಯರಿಗೆ ಬದಲಾಗಿ ಹತ್ತು ಸದಸ್ಯರು. Iii ನಿಬಂಧನೆ 4(4) (c) -ಐದು ಸದಸ್ಯರಿಗೆ ಬದಲಾಗಿ ಒಂಭತ್ತು ಸದಸ್ಯರು. Iv ನಿಬಂಧನೆ 37 (2) - ಕೊನೆಯಲ್ಲಿ “ ಬೋಧನೆಯ ಉದ್ದೇಶಗಳಿಗೆ ಕೂಡಾ” ಎಂದು ಸೇರಿಸಲಾಯಿತು.


(Release ID: 1583394) Visitor Counter : 75


Read this release in: English , Urdu , Hindi , Tamil