ಬಾಹ್ಯಾಕಾಶ ವಿಭಾಗ

ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶ ಬಳಕೆ ಮತ್ತು ಅನ್ವೇಷಣೆಗಾಗಿ ಸಹಕಾರ ಕುರಿತ ಭಾರತ ಮತ್ತು ಟ್ಯುನಿಶಿಯಾ ನಡುವಣ ತಿಳುವಳಿಕಾ ಒಡಂಬಡಿಕೆಗೆ (ಎಮ್.ಒ.ಯು.) ಸಂಪುಟದ ಅನುಮೋದನೆ

Posted On: 05 AUG 2019 12:15PM by PIB Bengaluru

ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶ ಬಳಕೆ ಮತ್ತು ಅನ್ವೇಷಣೆಗಾಗಿ ಸಹಕಾರ ಕುರಿತ ಭಾರತ ಮತ್ತು ಟ್ಯುನಿಶಿಯಾ ನಡುವಣ ತಿಳುವಳಿಕಾ ಒಡಂಬಡಿಕೆಗೆ (ಎಮ್.ಒ.ಯು.) ಸಂಪುಟದ ಅನುಮೋದನೆ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಬಳಕೆ ಮತ್ತು ಅನ್ವೇಷಣೆಗೆ ಸಂಬಂಧಿಸಿದ ಭಾರತ ಮತ್ತು ಟ್ಯುನಿಶಿಯಾ ನಡುವಣ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ (ಎಂ.ಒ.ಯು.) ಪೂರ್ವಾನ್ವಯಗೊಂಡಂತೆ ತನ್ನ ಅನುಮೋದನೆ ನೀಡಿತು. ಈ ಒಡಂಬಡಿಕೆಗೆ ಭಾರತದ ಬೆಂಗಳೂರಿನಲ್ಲಿ 2019ರ ಜೂನ್ 11 ರಂದು ಅಂಕಿತ ಹಾಕಲಾಗಿತ್ತು.

 

ಪರಿಣಾಮ:

·       ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ದೂರ ಸಂವೇದಿ ಕ್ಷೇತ್ರ; ಉಪಗ್ರಹ ಸಂಪರ್ಕ.ಮತ್ತು ಉಪಗ್ರಹ ಆಧಾರಿತ ಚಾಲನೆ, ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಅನ್ವೇಷಣೆ ಕ್ಷೇತ್ರದಲ್ಲಿ ಆನ್ವಯಿಕತೆಯ ಸಹಕಾರಕ್ಕೆ ಈ ಒಡಂಬಡಿಕೆ ಅನುಕೂಲ ಮಾಡಿಕೊಡಲಿದೆ. ಉಪಗ್ರಹ ಬಳಕೆ ಮತ್ತು ಬಾಹ್ಯಾಕಾಶ ವ್ಯವಸ್ಥೆಗಳು ಹಾಗು ಭೂಸ್ತರದಲ್ಲಿರುವ ವ್ಯವಸ್ಥೆಗಳು ಜೊತೆಗೆ ಬಾಹ್ಯಾಕಾಶ ತಂತ್ರಜ್ಞಾನದ ಆನ್ವಯಿಕತೆಗೆ ಇದರಲ್ಲಿ ಅವಕಾಶವಿದೆ.

·       ಭಾರತದ ಇಸ್ರೊ/ಬಾಹ್ಯಾಕಾಶ ಇಲಾಖೆಯಿಂದ ಮತ್ತು ಟ್ಯುನಿಶಿಯಾದ ಕಾರ್ಟೊಗ್ರಾಫಿ ಮತ್ತು ದೂರ ಸಂವೇದಿಗಾಗಿರುವ ರಾಷ್ಟ್ರೀಯ ಕೇಂದ್ರದ ಸದಸ್ಯರನ್ನು ಒಳಗೊಂಡ ಜಂಟಿ ಕಾರ್ಯ ಪಡೆಯನ್ನು ರಚಿಸಲು ಈ ಒಪ್ಪಂದ ಅವಕಾಶವೀಯುತ್ತದೆ.ಜೊತೆಗೆ ಒಡಂಬಡಿಕೆಯನ್ನು ಅನುಷ್ಟಾನಿಸಲು ಸಮಯಾವಕಾಶ ನಿಗದಿಯೂ ಸೇರಿದಂತೆ ಇತರ ಆವಶ್ಯಕತೆಗಳನ್ನು ಪೂರೈಸಲು ಕ್ರಿಯಾ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಇದು ಕಾರ್ಯಪ್ರವೃತ್ತವಾಗಲಿದೆ.

 

ಹಿನ್ನೆಲೆ:

ಟ್ಯುನಿಶಿಯಾದ ಸಂಪರ್ಕ ತಂತ್ರಜ್ಞಾನ ಮತ್ತು ಡಿಜಿಟಲ್ ಅರ್ಥಿಕತೆ ಖಾತೆ ಸಚಿವರು 2015 ರ ಜುಲೈ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ಭಾರತದೊಂದಿಗೆ ಬಾಹ್ಯಾಕಾಶ ಸಹಕಾರವನ್ನು ಹೊಂದುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು. ಟ್ಯುನಿಶಿಯಾವು ಬಾಹ್ಯಾಕಾಶ ಕಾರ್ಯಕ್ರಮವನ್ನು ರೂಪಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದು, ಅದಕ್ಕಾಗಿ ಇಸ್ರೊದ ಅನುಭವದಿಂದ ಕಲಿಯುವ ಆಶಯವನ್ನು ವ್ಯಕ್ತಪಡಿಸಿತ್ತು.

 

ಇದರ ಮುಂದುವರಿಕೆಯಾಗಿ ಭಾರತ ಮತ್ತು ಟ್ಯುನಿಶಿಯಾಗಳು ಭಾರತದ ಬೆಂಗಳೂರಿನಲ್ಲಿ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಿದ್ದವು.(Release ID: 1581408) Visitor Counter : 120


Read this release in: English , Hindi , Tamil