ಸಂಪುಟ

ಭಾರತೀಯ ರೈಲ್ವೆ ಸಂರಕ್ಷಣಾ ಪಡೆ (ಆರ್.ಪಿ.ಎಫ್.) ಸೇವೆಗೆ ಸಂಘಟಿತ ಗ್ರೂಪ್ ‘ಎ’ ಸ್ಥಾನಮಾನ ಮಂಜೂರಾತಿಗೆ ಸಂಪುಟದ ಅನುಮೋದನೆ 

Posted On: 10 JUL 2019 5:47PM by PIB Bengaluru

ಭಾರತೀಯ ರೈಲ್ವೆ ಸಂರಕ್ಷಣಾ ಪಡೆ (ಆರ್.ಪಿ.ಎಫ್.) ಸೇವೆಗೆ ಸಂಘಟಿತ ಗ್ರೂಪ್ ‘ಎ’ ಸ್ಥಾನಮಾನ ಮಂಜೂರಾತಿಗೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ರೈಲ್ವೆ ಸಂರಕ್ಷಣಾ ಪಡೆ (ಆರ್.ಪಿ.ಎಫ್.) ಸೇವೆಗೆ ಸಂಘಟಿತ ಗ್ರೂಪ್ ‘ಎ’ ಸ್ಥಾನಮಾನ ಮಂಜೂರಾತಿಗೆ ಮತ್ತು ದಿನಾಂಕ 24.04.2009 ಮತ್ತು 06.06.2000ನೇ ದಿನಾಂಕದ ಸಿಬ್ಬಂದಿ ಮತ್ತು ತರಬೇತಿ ಮಾರ್ಗಸೂಚಿಗಳ ಪ್ರಕಾರ ಮತ್ತು ಅದರ ನಂತರದ ಸೂಚನೆಗಳ ಅನ್ವಯ 01-01-2006 ರಿಂದ ಜಾರಿಗೆ ಬರುವಂತೆ ಕಾರ್ಯನಿರ್ವಹಣೇತರ ಹಣಕಾಸು ಉನ್ನತೀಕರಣ (ಎನ್‌ಎಫ್‌ಎಫ್‌ಯು)ದ ಸೌಲಭ್ಯಗಳೊಂದಿಗೆ ಮತ್ತು ಹಿರಿಯ ಡ್ಯೂಟಿ ಹುದ್ದೆಯ (ಎಸ್.ಡಿ.ಪಿ.) ಶೇ. 30ರ ದರದೊಂದಿಗೆ ಕಾರ್ಯ ನಿರ್ವಹಣೇತರ ಆಯ್ಕೆ ಶ್ರೇಣಿ (ಎನ್.ಎಫ್.ಎಸ್.ಜಿ.)ಯನ್ನು 06.06.2000ದಿಂದ ಜಾರಿಗೊಳಿಸಲು ತನ್ನ ಅನುಮೋದನೆ ನೀಡಿದೆ.

ಪ್ರಮುಖ ಪರಿಣಾಮಗಳು

ಆರ್.ಪಿ.ಎಫ್.ನ ಸಂಘಟಿತ ಗ್ರೂಪ್ ‘ಎ’ ಸೇವೆಯ ಸ್ಥಾನಮಾನ ಮಂಜೂರಾತಿಯು ನಿಶ್ಚಲತೆಯನ್ನು ಕೊನೆಗಾಣಿಸಿ, ಅಧಿಕಾರಿಗಳ ವೃತ್ತಿ ಪ್ರಗತಿಯನ್ನು ಸುಧಾರಿಸುತ್ತದೆ ಮತ್ತು ಅವರ ಪ್ರೇರಣೆಯ ಮಟ್ಟವನ್ನು ಹೆಚ್ಚಿಸುತ್ತದೆ. ಆರ್.ಪಿ.ಎಫ್.ನ ಅರ್ಹ ಅಧಿಕಾರಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಹಿನ್ನೆಲೆ

ದೆಹಲಿಯ ಹೈಕೋರ್ಟ್ 4.12.2012ರ ತನ್ನ ಆದೇಶದಲ್ಲಿ, ರೈಲ್ವೆ ಇಲಾಖೆಗೆ ಆರ್.ಪಿ.ಎಫ್.ಗೆ ಗ್ರೂಪ್ ಎ ಸೇವೆಯ ಸ್ಥಾನಮಾನ ಮಂಜೂರು ಮಾಡುವಂತೆ ನಿರ್ದೇಶಿಸಿತ್ತು. ಈ ತೀರ್ಪನ್ನು ಭಾರತದ ಘನತೆವೆತ್ತ ಸುಪ್ರೀಂ ಕೋರ್ಟ್ 5-2-2019ರಂದು ಎತ್ತಿ ಹಿಡಿದಿತ್ತು. ಆ ಪ್ರಕಾರವಾಗಿ ರೈಲ್ವೆ ಮಂಡಳಿ ಆರ್.ಪಿ.ಎಫ್.ಗೆ ಸಂಘಟಿತ ಗ್ರೂಪ್ ಎ ಸೇವೆ ಮಂಜೂರು ಮಾಡಲು ಪ್ರಸ್ತಾಪಿಸಿತ್ತು. 

 

*****



(Release ID: 1578298) Visitor Counter : 97