ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕ ವೃಂದದಲ್ಲಿ ಮೀಸಲಾತಿ) ಮಸೂದೆ, 2019ಕ್ಕೆ ಸಂಪುಟದ ಅನುಮೋದನೆ

Posted On: 12 JUN 2019 7:50PM by PIB Bengaluru

ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕ ವೃಂದದಲ್ಲಿ ಮೀಸಲಾತಿ) ಮಸೂದೆ, 2019ಕ್ಕೆ ಸಂಪುಟದ ಅನುಮೋದನೆ

ವಿಶ್ವವಿದ್ಯಾಲಯ/ಕಾಲೇಜನ್ನು 200 ಅಂಶಗಳ ರೋಸ್ಟರ್ ಆಧಾರದಲ್ಲಿ ಒಂದು ಘಟಕವೆಂದು ಪರಿಗಣಿಸಲಾಗುವುದು. ಖಾಲಿಯಿರುವ 7,000 ಹುದ್ದೆಗಳನ್ನು ಶಿಕ್ಷಕ ವೃಂದದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ನೂತನ ಮಸೂದೆಯನ್ನು ಮುಂಬರುವ ಸಂಸತ್ ಅಧಿವೆಶನದಲ್ಲಿ ಮಂಡಿಸಲಾಗುವುದು.

 

ಶಿಕ್ಷಣ ಕ್ಷೇತ್ರದ ಸುಧಾರಣೆಗಳಿಗೆ ಮಹತ್ವದ ಉತ್ತೇಜನ ನೀಡಲು ಹಾಗೂ  ವಿವಿಧ ಸ್ತರಗಳ ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು “ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕ ವೃಂದದಲ್ಲಿ ಮೀಸಲಾತಿ) ಮಸೂದೆ, 2019” ಕ್ಕೆ  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಸಂಪುಟದ ಈ ನಿರ್ಣಯದಿಂದಾಗಿ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (SC/ST/SEBC) ಬಹು ಕಾಲದ ಬೇಡಿಕೆ ಈಡೇರಿದಂತಾಗುತ್ತದೆ ಹಾಗೂ ಅವರ ಸಾಂವಿಧಾನಿಕ ಹಕ್ಕುಗಳು ರಕ್ಷಿಸಲ್ಪಡುತ್ತವೆ. ಆರ್ಥಿಕವಾಗಿ ಹಿಂದುಳಿದ (EWS)ವರಿಗೆ ಶೇಕಡಾ 10 ಮೀಸಲಾತಿಯನ್ನೂ ಇದು ಖಾತ್ರಿಪಡಿಸುತ್ತದೆ.

 

ಪರಿಣಾಮ:

ಈ ತೀರ್ಮಾನದಿಂದಾಗಿ

·        200 ಅಂಶಗಳ ರೋಸ್ಟರ್ ಆಧಾರದಲ್ಲಿ ಶಿಕ್ಷಕ ವೃಂದದಲ್ಲಿ ಖಾಲಿಯಿರುವ 7,000ಕ್ಕೂ ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡುತ್ತದೆ.

·        ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಕ ವೃಂದದ ನೇರ ನೇಮಾಕಾತಿಯಲ್ಲಿ ಸಂಪೂರ್ಣ ಪ್ರಾತಿನಿಧ್ಯದ ಖಾತ್ರಿ

·        ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅರ್ಹ ಪ್ರತಿಭಾನ್ವಿತರಿಗೆ ಅವಕಾಶ ದೊರೆಯುವುದರಿಂದ ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ಮಟ್ಟದ ಸುಧಾರಣೆ.

 

ಪರಿಣಾಮಗಳು:

ಈ ಮಸೂದೆಯು “ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕ ವೃಂದದ ಮೀಸಲಾತಿ) ಸುಗ್ರೀವಾಜ್ಞೆ, 2019ನ್ನು ಬದಲಿಸಲಿದೆ. ಮುಂಬರುವ ಸಂಸತ್ ಅಧಿವೆಶನದಲ್ಲಿ ಮಂಡನೆಯಾಗಲಿದೆ.

 

ಅನುಷ್ಠಾನ:

ಈ ಮಸೂದೆಯು ವಿಶ್ವವಿದ್ಯಾಲಯ/ಕಾಲೇಜನ್ನು ಒಂದು ಘಟಕವೆಂದು ಪರಿಗಣಿಸುತ್ತದೆ.200 ಅಂಶಗಳ ರೋಸ್ಟರ್ ಆಧಾರದಲ್ಲಿ ಹಿಂದಿನ ಮೀಸಲಾತಿ ವ್ಯವಸ್ಥೆಯನ್ನು ಮರುಸ್ಥಾಪಿಸುತ್ತದೆ. ಇನ್ನು ಮುಂದೆ ಡಿಪಾರ್ಟ್ಮೆಂಟ್/ಸಬ್ಜೆಕ್ಟ್ ಗಳನ್ನು ಒಂದು ಘಟಕವಾಗಿ ಪರಿಗಣಿಸುವುದಿಲ್ಲ.

ಶಿಕ್ಷಕ ವೃಂದದ ನೇರ ನೇಮಕಾತಿಯಲ್ಲಿ ವಿಶ್ವವಿದ್ಯಾಲಯ/ಶೈಕ್ಷಣಿಕ ಸಂಸ್ಥೆಗಳು ಘಟಕಗಳೇ ಹೊರತು ಡಿಪಾರ್ಟ್ಮೆಂಟ್ ಗಳಲ್ಲ.

ಸಂಪುಟದ ಈ ನಿರ್ಣಯದಿಂದಾಗಿ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು (SC/ST/SEBC) ಬಹು ಕಾಲದ ಬೇಡಿಕೆ ಈಡೇರಿಸುತ್ತದೆ ಹಾಗೂ ಅವರ ಸಾಂವಿಧಾನಿಕ ಹಕ್ಕುಗಳು ರಕ್ಷಿಸಲ್ಪಡುತ್ತವೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ಮೀಸಲಾತಿಯನ್ನೂ ಇದು ಖಾತ್ರಿಪಡಿಸುತ್ತದೆ.



(Release ID: 1574387) Visitor Counter : 106


Read this release in: English , Tamil