ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಸಾರ್ವಜನಿಕ ಆವರಣಗಳನ್ನು ಅನಧಿಕೃತವಾಗಿ ಅತಿಕ್ರಮಿಸಿದವರ ವಿರುದ್ದ ಕ್ರಮ
Posted On:
12 JUN 2019 7:58PM by PIB Bengaluru
ಸಾರ್ವಜನಿಕ ಆವರಣಗಳನ್ನು ಅನಧಿಕೃತವಾಗಿ ಅತಿಕ್ರಮಿಸಿದವರ ವಿರುದ್ದ ಕ್ರಮ
ನಿವಾಸಗಳಲ್ಲಿ ಅನಧಿಕೃತವಾಗಿ ವಾಸವಾಗಿರುವವರನ್ನು ಸಾರಾಸಗಟಾಗಿ ಒಕ್ಕಲೆಬ್ಬಿಸುವ ಪ್ರಕ್ರಿಗೆ ಸಂಪುಟ ಅನುಮೋದನೆ. “ಸಾರ್ವಜನಿಕ ಆವರಣಗಳ (ಅನಧಿಕೃತ ವಾಸ್ತವ್ಯ ತೆರವು ) ತಿದ್ದುಪಡಿ ವಿಧೇಯಕ 2019 ರ ಹೊಸ ವಿಧೇಯಕ ಬರಲಿರುವ ಸಂಸತ್ ಅಧಿವೇಶನದಲ್ಲಿ ಮಂಡನೆ.
ಸಾರ್ವಜನಿಕ, ಸರಕಾರಿ ವಾಸ್ತವ್ಯದ ಮನೆಗಳಲ್ಲಿ ಅನಧಿಕೃತವಾಗಿ ವಾಸ್ತವ್ಯ ಹೂಡಿರುವವರ ವಿರುದ್ದ ಕ್ರಮ ಕೈಗೊಳ್ಳುವ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು “ಸಾರ್ವಜನಿಕ ಆವರಣಗಳ (ಅನಧಿಕೃತ ವಾಸ್ತವ್ಯ ತೆರವು) ತಿದ್ದುಪಡಿ ವಿಧೇಯಕ , 2019 ರ ಮಂಡನೆಗೆ ತನ್ನ ಅನುಮೋದನೆ ನೀಡಿತು.
ಪರಿಣಾಮ:
ಈ ತಿದ್ದುಪಡಿಗಳು ಸರಕಾರಿ ನಿವಾಸಗಳನ್ನು ಅನಧಿಕೃತವಾಗಿ ಆಕ್ರಮಿಸಿಕೊಂಡು ವಾಸವಾಗಿರುವವರನ್ನು ಸುಲಲಿತವಾಗಿ ಮತ್ತು ತ್ವರಿತವಾಗಿ ತೆರವು ಮಾಡಿ , ಆ ಖಾಲಿ ನಿವಾಸಗಳನ್ನು ಕಾಯುವವರ ಪಟ್ಟಿಯಲ್ಲಿರುವವರಿಗೆ ಹಿರಿತನ ಆಧಾರದಲ್ಲಿ ಅರ್ಹರಿಗೆ ಲಭ್ಯವಾಗುವಂತೆ ಮಾಡಲಿವೆ.
ಇದು ನಿವಾಸಗಳ ಸೌಲಭ್ಯಗಳನ್ನು ಪಡೆಯುವಲ್ಲಿ ಇರುವ ಕಾಯುವಿಕೆಯ ಅವಧಿಯನ್ನು ಕಡಿಮೆ ಮಾಡಲಿದೆ.
ಪ್ರಭಾವ- ಪರಿಣಾಮಗಳು:
ಹೊಸ ವಿಧೇಯಕವು “ ಸಾರ್ವಜನಿಕ ಆವರಣಗಳ (ಅನಧಿಕೃತ ವಾಸ್ತವ್ಯ ಯಾ ಅತಿಕ್ರಮಣ ತೆರವು ) ತಿದ್ದುಪಡಿ ವಿಧೇಯಕ , ೨೦೧೭ರ ಬದಲಿಗೆ ಜಾರಿಗೆ ಬರಲಿದೆ.
ಇದು ಬರಲಿರುವ ಸಂಸತ್ತಿನ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಅನುಷ್ಟಾನ:
ಈ ವಿಧೇಯಕವು ಸಾರ್ವಜನಿಕ ಆವರಣಗಳ (ಅನಧಿಕೃತ ವಾಸ್ತವ್ಯ ತೆರವು ) ಕಾಯ್ದೆ , 1971 ರ ಸೆಕ್ಷನ್ 2, ಸೆಕ್ಷನ್ 3, ಮತ್ತು ಸೆಕ್ಷನ್ 7 ಗಳಿಗೆ ತಿದ್ದುಪಡಿಯನ್ನು ಅಪೇಕ್ಷಿಸುತ್ತದೆ. ಸೆಕ್ಷನ್ 2 ರ ನಿಬಂಧನೆ (fb) ಗೆ ಮುಂಚಿತವಾಗಿ ನಿಬಂಧನೆ (fa ) ಯನ್ನು ಸೇರ್ಪಡೆ ಮಾಡುವ ಮತ್ತು ಸೆಕ್ಷನ್ 3 ರಲ್ಲಿ ಸೆಕ್ಷನ್ 3 A ಬಳಿಕ ಹೊಸ ಸೆಕ್ಷನ್ 3 B ಯನ್ನು ಸೇರಿಸುವ ಹಾಗು ಸೆಕ್ಷನ್ 7 ರಲ್ಲಿ ಉಪಸೆಕ್ಷನ್ 3 ರ ಬಳಿಕ ಹೊಸ ಉಪಸೆಕ್ಷನ್ 3 A ಯನ್ನು ಸಾರ್ವಜನಿಕ ಆವರಣಗಳ (ಅನಧಿಕೃತ ವಾಸ್ತವ್ಯ ತೆರವು ) ಕಾಯ್ದೆ, 1971 ಕ್ಕೆ ಸೇರಿಸುತ್ತದೆ.
ಉದ್ದೇಶಿತ ತಿದ್ದುಪಡಿಗಳು ಎಸ್ಟೇಟ್ ಅಧಿಕಾರಿಗೆ ನಿವಾಸಗಳಿಂದ ಅನಧಿಕೃತ ವಾಸ್ತವ್ಯವನ್ನು ಸಾರಾಸಗಟಾಗಿ ತೆರವು ಮಾಡಿಸುವ ಪ್ರಕ್ರಿಯೆಗಳನ್ನು ಜಾರಿ ಮಾಡಲು ಅವಕಾಶ ಮಾಡಿಕೊಡುತ್ತವೆ. ಮತ್ತು ಕಾನೂನು ಜಾರಿ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಶುಲ್ಕವನ್ನು ವಿಧಿಸಲು ಅನುವು ಮಾಡಿಕೊಡುತ್ತವೆ.
ಈ ವಿಧೇಯಕವು ಸರಕಾರಿ ನಿವಾಸಗಳಲ್ಲಿ ಅನಧಿಕೃತವಾಗಿ ವಾಸವಾಗಿರುವವರನ್ನು ತ್ವರಿತವಾಗಿ ತೆರವು ಮಾಡಿಸಲು ಮತ್ತು ಅರ್ಹರಿಗೆ ನಿವಾಸಗಳ ಲಭ್ಯತೆಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ.
ಹಿನ್ನೆಲೆ:
ಭಾರತ ಸರಕಾರವು ಪಿ.ಪಿ.ಇ. ಕಾಯ್ದೆ 1971 ರ ಪ್ರಸ್ತಾವನೆಗಳ ಅನ್ವಯ ಸರಕಾರಿ ನಿವಾಸಗಳಲ್ಲಿ ಅನಧಿಕೃತವಾಗಿ ವಾಸವಾಗಿರುವವರನ್ನು ತೆರವು ಮಾಡಬೇಕಾಗಿರುತ್ತದೆ. ಆದರೆ ಈ ಒಕ್ಕಲೆಬ್ಬಿಸುವಿಕೆ ಯಾ ತೆರವು ಪ್ರಕ್ರಿಯೆ ಅಸಹಜವಾಗಿ ಧೀರ್ಘಾವಧಿಯನ್ನು ತೆಗೆದುಕೊಳ್ಳುತ್ತಿದೆ ಮತ್ತು ಆ ಮೂಲಕ ಹೊಸಬರಿಗೆ ಸರಕಾರಿ ನಿವಾಸಗಳ ಲಭ್ಯತೆಯನ್ನು ಕಡಿಮೆ ಮಾಡುತ್ತಿದೆ.
ಪಿ.ಪಿ.ಇ. ಕಾಯ್ದೆ 1971 ನ್ನು ನ್ನು ಪಿ.ಪಿ.ಇ. ತಿದ್ದುಪಡಿ ವಿಧೇಯಕ 2015 ಎಂದು ತಿದ್ದುಪಡಿ ಮಾಡಲಾಗಿದ್ದು, ತೆರವು ಪ್ರಕ್ರಿಯೆ 5 ರಿಂದ 7 ವಾರಗಳ ಕಾಲ ತೆಗೆದುಕೊಳ್ಳುತ್ತದೆ .ಆದರೆ ಈ ಪ್ರಕ್ರಿಯೆ ಇನ್ನೂ ಹೆಚ್ಚಿನ ಕಾಲಾವಧಿ ತೆಗೆದುಕೊಳ್ಳುತ್ತಿರುವುದರಿಂದ , ಅನಧಿಕೃತ ತೆರವು ವರ್ಷದವರೆಗೂ ಮುಂದೆ ಹೋಗುತ್ತಿದೆ. ಪ್ರಸ್ತಾವಿತ ವಿಧೇಯಕದಡಿಯಲ್ಲಿ ಸರಕಾರಿ ಅಧಿಕಾರಿ ನೋಟೀಸು ಜಾರಿ, ಕಾರಣ ಕೇಳಿ ನೋಟೀಸು, ತನಿಖೆಗಳಂತಹ ಪ್ರಕ್ರಿಯೆಗಳನ್ನು ನಡೆಸಬೇಕಾಗಿಲ್ಲ. ಅಧಿಕಾರಿಗಳು ಸಾರಾಸಗಟಾಗಿ ತೆರವು ಪ್ರಕ್ರಿಯೆಯನ್ನು ಆರಂಭಿಸಬಹುದು.
ಈ ನಿರ್ಧಾರವು ಸರಕಾರದ ಪಾರದರ್ಶಕತೆ ಮತ್ತು ದೇಶದ ನಾಗರಿಕರಿಗೆ ಅಡೆ –ತಡೆ ರಹಿತ ಆಡಳಿತ ನೀಡುವ ಬದ್ಧತೆಯ ಪ್ರತೀಕವಾಗಿದೆ.
(Release ID: 1574344)