ಚುನಾವಣಾ ಆಯೋಗ
ತಮಿಳುನಾಡು, ಗೋವಾ ಮತ್ತು ಕರ್ನಾಟಕ ವಿಧಾನಸಭೆಗಳ ಖಾಲಿ ಇರುವ ಸ್ಥಾನಗಳನ್ನು ತುಂಬಲು ಉಪ ಚುನಾವಣಾ ವೇಳಾಪಟ್ಟಿ - ಮತದಾನ 2019 ರ ಮೇ 19 ರಂದು ನಡೆಯಲಿದೆ.
प्रविष्टि तिथि:
09 APR 2019 4:51PM by PIB Bengaluru
ತಮಿಳುನಾಡು, ಗೋವಾ ಮತ್ತು ಕರ್ನಾಟಕ ವಿಧಾನಸಭೆಗಳ ಖಾಲಿ ಇರುವ ಸ್ಥಾನಗಳನ್ನು ತುಂಬಲು ಉಪ ಚುನಾವಣಾ ವೇಳಾಪಟ್ಟಿ
ಮತದಾನ 2019 ರ ಮೇ 19 ರಂದು ನಡೆಯಲಿದೆ.
ತಮಿಳುನಾಡು, ಗೋವಾ ಮತ್ತು ಕರ್ನಾಟಕ ವಿಧಾನ ಸಭೆಗಳಲ್ಲಿ ಆರು ಸ್ಥಾನಗಳು ಖಾಲಿ ಇದ್ದು , ಅವುಗಳನ್ನು ಭರ್ತಿ ಮಾಡಬೇಕಾಗಿದೆ. ಅವುಗಳೆಂದರೆ :
|
ಕ್ರಮ ಸಂಖ್ಯೆ
|
ರಾಜ್ಯ
|
ವಿಧಾನ ಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು.
|
|
1
|
ಗೋವಾ
|
11 – ಪಣಜಿ
|
|
2
|
ತಮಿಳುನಾಡು
|
116 – ಸೂಲೂರು
|
|
3
|
ತಮಿಳುನಾಡು
|
134 – ಅರವಕುರಿಚ್ಚಿ ಎ.ಸಿ.
|
|
4
|
ತಮಿಳುನಾಡು
|
195 – ತಿರುಪರಂಕುಂದ್ರಾಮ್
|
|
5
|
ತಮಿಳುನಾಡು
|
217 – ಒಟ್ಟಪಿದರಂ (ಎಸ್.ಸಿ.)
|
|
6
|
ಕರ್ನಾಟಕ
|
70 – ಕುಂದಗೋಳ
|
ಸ್ಥಳಿಯ ಹಬ್ಬಗಳು, ಮತದಾರರ ಪಟ್ಟಿ, ಹವಾಮಾನ ಪರಿಸ್ಥಿತಿ ,ಇತ್ಯಾದಿ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಆಯೋಗವು ಈ ಖಾಲಿ ಸ್ಥಾನಗಳನ್ನು ತುಂಬಲು ಈ ಕೆಳಗೆ ಕಾಣಿಸಿದ ಕಾರ್ಯಕ್ರಮದನ್ವಯ ಉಪ-ಚುನಾವಣೆ ನಡೆಸಲು ನಿರ್ಧರಿಸಿದೆ.
|
ಚುನಾವಣಾ ಪ್ರಕ್ರಿಯೆಗಳು
|
ವೇಳಾಪಟ್ಟಿ
|
|
ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸುವ ದಿನಾಂಕ
|
22.04.2019 (ಸೋಮವಾರ )
|
|
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ
|
29.04.2019 (ಸೋಮವಾರ)
|
|
ನಾಮಪತ್ರಗಳ ಪರಿಶೀಲನೆ ನಡೆಯುವ ದಿನಾಂಕ
|
30.04.2019 (ಮಂಗಳವಾರ )
|
|
ಅಭ್ಯರ್ಥಿತನ ಹಿಂಪಡೆಯಲು ಕೊನೆಯ ದಿನಾಂಕ
|
02.05.2019 (ಗುರುವಾರ )
|
|
ಮತದಾನದ ದಿನಾಂಕ
|
19.05.2019 (ಆದಿತ್ಯವಾರ )
|
|
ಮತ ಎಣಿಕೆ ದಿನಾಂಕ
|
23.05.2019 (ಗುರುವಾರ )
|
|
ಈ ದಿನಾಂಕದೊಳಗೆ ಚುನಾವಣೆ ಪೂರ್ಣಗೊಳಿಸಬೇಕು
|
27.05.2019 (ಸೋಮವಾರ )
|
ಮತದಾರರ ಪಟ್ಟಿ
ಮೇಲ್ಕಾಣಿಸಿದ ವಿಧಾನ ಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ 1-1-2019 ನ್ನು ಅರ್ಹತಾ ದಿನಾಂಕವನ್ನಾಗಿಸಿಕೊಂಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಇಲೆಕ್ಟ್ರಾನಿಕ್ ಮತ ಯಂತ್ರಗಳು (ಇ.ವಿ.ಎಂ.ಗಳು ) ಮತ್ತು ವಿ.ವಿ.ಪ್ಯಾಟ್ ಗಳು.
ಉಪಚುನಾವಣೆಯು ನಡೆಯುವ ಎಲ್ಲಾ ಕ್ಷೇತ್ರಗಳಲ್ಲು ಇ.ವಿ.ಎಂ.ಗಳು ಮತ್ತು ವಿ.ವಿ. ಪ್ಯಾಟ್ ಗಳನ್ನು ಬಳಸಲು ಚುನಾವಣಾ ಆಯೋಗವು ತೀರ್ಮಾನಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ಇ.ವಿ.ಎಂ. ಗಳು ಮತ್ತು ವಿ.ವಿ. ಪ್ಯಾಟ್ ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ, ಮತ್ತು ಈ ಯಂತ್ರಗಳ ಸಹಾಯದಿಂದ ಸುರಳೀತವಾಗಿ ಚುನಾವಣೆ ನಡೆಯುವುದನ್ನು ಖಾತ್ರಿಪಡಿಸಲು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮತದಾರರ ಗುರುತಿಸುವಿಕೆ
ಈ ಹಿಂದಿನ ಪದ್ದತಿಯಂತೆ , ಆಯೋಗವು ಈ ಮೇಲ್ಕಾಣಿಸಿದ ಉಪಚುನಾವಣೆ ಸಂದರ್ಭದಲ್ಲಿ ಮತದಾನದ ವೇಳೆ ಮತದಾರರ ಗುರುತಿಸುವಿಕೆ ಕಡ್ದಾಯ ಎಂದು ನಿರ್ಧರಿಸಿದೆ. ಚುನಾವಣಾ ಗುರುತಿನ ಚೀಟಿಗಳು (ಎಪಿಕ್) ಮತದಾರರನ್ನು ಗುರುತಿಸುವ ಪ್ರಮುಖ ದಾಖಲೆ. ಈ ನಿಟ್ಟಿನಲ್ಲಿ , 2019 ರ ಸಾರ್ವತ್ರಿಕ ಚುನಾವಣೆಗಳು ಮತ್ತು ರಾಜ್ಯ ವಿಧಾನ ಸಭಾ ಚುನಾವಣೆಗಳಿಗೆ ಅನ್ವಯಿಸಿ ಆಯೋಗ ಹೊರಡಿಸಿದ ಆದೇಶವು ಮೇಲ್ಕಾಣಿಸಿದ ಉಪ –ಚುನಾವಣೆಗಳ ಸಂದರ್ಭದಲ್ಲಿಯೂ ಮತದಾರರ ಗುರುತಿಸುವಿಕೆಗೆ ಅನ್ವಯವಾಗುತ್ತದೆ.
ಮಾದರಿ ನೀತಿ ಸಂಹಿತೆ
ಲೋಕ ಸಭೆಗೆ 2019 ರ ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿ 2019 ರ ಮಾರ್ಚ್ 10 ರಂದು ಘೋಷಣೆಯಾದಂದಿನಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿದೆ. ಈ ಮಾದರಿ ನೀತಿ ಸಂಹಿತೆಯು ಎಲ್ಲಾ ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ, ಮತ್ತು ಸಂಬಂಧಿತ ರಾಜ್ಯ ಸರಕಾರಗಳಿಗೆ ಅನ್ವಯಿಸುತ್ತದೆ. ಆಯಾ ರಾಜ್ಯಗಳಿಗೆ ಸಂಬಂಧಿಸಿದ ಜಿಲ್ಲೆಗಳ ಮಟ್ಟದಲ್ಲಿ ಕೇಂದ್ರ ಸರಕಾರಕ್ಕೂ ಈ ನೀತಿ ಸಂಹಿತೆ ಅನ್ವಯಿಸುತ್ತದೆ.
(रिलीज़ आईडी: 1570335)
आगंतुक पटल : 159