ಚುನಾವಣಾ ಆಯೋಗ

ಭಾರತೀಯ ಚುನಾವಣಾ ಆಯೋಗಕ್ಕೆ ಭಾರತೀಯ ಸಾಂಖ್ಯಿಕ ಸಂಸ್ಥೆ (ಐ.ಎಸ್.ಐ.)ಯಿಂದ ವಿವಿಪ್ಯಾಟ್ ಸ್ಯಾಂಪಲ್ ಸೈಜ್ ಎಣಿಕೆಯ ವರದಿ ಸಲ್ಲಿಕೆ

Posted On: 22 MAR 2019 12:42PM by PIB Bengaluru

ಭಾರತೀಯ ಚುನಾವಣಾ ಆಯೋಗಕ್ಕೆ ಭಾರತೀಯ ಸಾಂಖ್ಯಿಕ ಸಂಸ್ಥೆ (ಐ.ಎಸ್.ಐ.)ಯಿಂದ ವಿವಿಪ್ಯಾಟ್ ಸ್ಯಾಂಪಲ್ ಸೈಜ್ ಎಣಿಕೆಯ ವರದಿ ಸಲ್ಲಿಕೆ

22-ಮಾರ್ಚ್-2019 

 

ಭಾರತೀಯ ಸಾಂಖ್ಯಿಕ ಸಂಸ್ಥೆ (ಐ.ಎಸ್.ಐ.) ಇಂದು ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿ ಪ್ಯಾಟ್)ನ ನಿರ್ದಿಷ್ಟ ಪ್ರಮಾಣದ ಚೀಟಿಗಳ ಎಣಿಕೆಯ ತನ್ನ ವರದಿಯನ್ನು ಮುಖ್ಯ ಚುನಾವಣಾ ಆಯುಕ್ತ ಶ್ರೀ ಸುನೀಲ್ ಅರೋರಾ ಮತ್ತು ಚುನಾವಣಾ ಆಯುಕ್ತರಾದ ಶ್ರೀ ಅಶೋಕ್ ಲಾವಾಸಾ ಮತ್ತು ಶ್ರೀ ಸುಶೀಲ್ ಚಂದ್ರ ಅವರಿಗೆ ಸಲ್ಲಿಸಿದರು. ಈ ಈ ವರದಿಯನ್ನು ಐಎಸ್ಐನ ದೆಹಲಿ ಕೇಂದ್ರದ ಮುಖ್ಯಸ್ಥ ಪ್ರೊ. ಅಭಯ್ ಜಿ ಭಟ್ ಸಿದ್ಧಪಡಿಸಿದ್ದಾರೆ. ರಾಷ್ಟ್ರದ ಚುನಾವಣೆಗಳ ಸಂದರ್ಭದಲ್ಲಿ ವಿ.ವಿ.ಪ್ಯಾಟ್ ಚೀಟಿಗಳ ಎಣಿಕೆಯ ಕುರಿತಂತೆ ಹೆಚ್ಚಿದ ಬೇಡಿಕೆ ಹಿನ್ನೆಲೆಯಲ್ಲಿ     ಆಯೋಗವು ವಿ.ವಿ.ಪ್ಯಾಟ್ ಸ್ಲಿಪ್ ಗಳ ಎಣಿಕೆ ವಿಷಯವನ್ನು ವಿದ್ಯುನ್ಮಾನ ಮತ ಯಂತ್ರಗಳ (ಇ.ವಿ.ಎಂ.)  ವಿದ್ಯುನ್ಮಾನ  ಎಣಿಕೆಯೊಂದಿಗೆ ವಿಧಿವತ್ತಾಗಿ ವಿಶ್ಲೇಷಿಸಲು ಮತ್ತು ವೈಜ್ಞಾನಿಕವಾಗಿ ಪರಿಶೀಲಿಸಲು ಭಾರತೀಯ ಸಾಂಖ್ಯಿಕ ಸಂಸ್ಥೆಯನ್ನು ನಿಯುಕ್ತಿಗೊಳಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಐಎಸ್.ಐ. ಸಂಶೋಧನೆ, ಬೋಧನೆ ಮತ್ತು ಸಾಂಖ್ಯಿಕ ಆನ್ವಯಿಕಗಳಿಗೆ ಮತ್ತು ಮಾದರಿ ವಿಧಾನದಲ್ಲಿ ಸಮರ್ಪಿತವಾದ ದೇಶದ ಪ್ರಮುಖ ಮತ್ತು ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದೆ. ಈ ಕ್ಷೇತ್ರದಲ್ಲಿನ ನೈಪುಣ್ಯತೆ ಮತ್ತು ವಿಷಯ ತಜ್ಞತೆಯನ್ನು ಗಮನದಲ್ಲಿಟ್ಟುಕೊಂಡು ಆಯೋಗವು, ಚುನಾವಣೆಯ ಸಂದರ್ಭದಲ್ಲಿ ವಿವಿಪ್ಯಾಟ್ ಸ್ಲಿಪ್ ಸಂಖ್ಯೆ/ಪ್ರತಿಶತದ ಎಣಿಕೆಯ ಪರಿಹಾರಕ್ಕಾಗಿ ಲೆಕ್ಕಾಚಾರದಲ್ಲಿ ಬಲಿಷ್ಠವಾದ, ಸಾಂಖ್ಯಿಕವಾಗಿ ಚೈತನ್ಯದಿಂದ ಕೂಡಿದ ಮತ್ತು ದೃಢ ಪರಿಹಾರ ನೀಡಬಲ್ಲ ಸಂಸ್ಥೆಯನ್ನು ಈ ಕಾರ್ಯಕ್ಕೆ ನಿಯೋಜಿಸಲು ನಿರ್ಧರಿಸಿದೆ.

ಐ.ಎಸ್.ಐ. ದೆಹಲಿ ಕೇಂದ್ರದ ಮುಖ್ಯಸ್ಥ ಪ್ರೊ. ಅಭಯ್ ಜಿ ಭಟ್ ಅವರಲ್ಲದೆ, ತಜ್ಞರ ಸಮಿತಿಯು ಚೆನ್ನೈ ಗಣಿತ ಸಂಸ್ಥೆ (ಸಿಎಂ.ಐ.) ನಿರ್ದೇಶಕ ಪ್ರೊ. ರಾಜೀವ್ ಎಲ್. ಕರಂಡೀಕರ್ ಮತ್ತು ರಾಷ್ಟ್ರೀಯ ಸ್ಯಾಂಪಲ್ ಸರ್ವೇ ಕಚೇರಿ (ಎನ್.ಎಸ್.ಎಸ್.ಓ.)ಮಹಾ ನಿರ್ದೇಶಕರು ನಾಮಾಂಕ ಮಾಡಿದ ಎಂ.ಓ.ಎಸ್.ಪಿ.ಐ.ನ ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಾಮಾಜಿಕ ಸಾಂಖ್ಯಿಕ ವಿಭಾಗ)ದ ಉಪ ಮಹಾ ನಿರ್ದೇಶಕ ಶ್ರೀ ಓಂಕಾರ್ ಪ್ರೊಸಾದ್ ಘೋಷ್ ಅವರನ್ನೊಳಗೊಂಡಿದೆ. ತನ್ನ ವರದಿಯನ್ನು ಆಖೈರುಗೊಳಿಸುವ ಮುನ್ನ ತಜ್ಞರ ಸಮಿತಿ ಸಾಂಖ್ಯಿಕ ರಂಗದ ಇತರ ತಜ್ಞರೊಂದಿಗೆ ವ್ಯಾಪಕವಾದ ಸಮಾಲೋಚನೆ ನಡೆಸಿ, ಇತರ ಗುಂಪುಗಳಿಂದ ಬಂದ ಸಲಹೆಗಳನ್ನು ಪರಿಶೀಲಿಸಿದೆ. ಈ ತಜ್ಞರ ಸಮಿತಿಯು “ರಾಂಡಮ್ ಸ್ಯಾಂಪಲಿಂಗ್ ಫಾರ್ ಟೆಸ್ಟಿಂಗ್ ಆಫ್ ಇವಿಎಂ ವಯಾ ವಿವಿಪ್ಯಾಟ್ ಸ್ಲಿಪ್ ವೆರಿಫಿಕೇಷನ್’’ ಎಂಬ ಶೀರ್ಷಿಕೆಯನ್ನೊಳಗೊಂಡ ತನ್ನ ವರದಿಯನ್ನು ಇಂದು ಅಂದೆ 2019ರ ಮಾರ್ಚ್ 22ರಂದು ಆಯೋಗಕ್ಕೆ ಸಲ್ಲಿಸಿದೆ.

ತಜ್ಞರ ಸಮಿತಿಯಿಂದ ಸಲ್ಲಿಸಲಾಗಿರುವ ವರದಿಯನ್ನು ಈಗ ಆಯೋಗ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ.

...



(Release ID: 1569280) Visitor Counter : 175