ಕಾನೂನು ಮತ್ತು ನ್ಯಾಯ ಸಚಿವಾಲಯ

ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ಕುರಿತ ಎರಡನೇ ಸುಗ್ರೀವಾಜ್ಞೆ 2019 ಹೊರಡಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ

ಪ್ರಕಟಣಾ ದಿನಾಂಕ: 19 FEB 2019 8:43PM by PIB Bengaluru

ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ಕುರಿತ ಎರಡನೇ ಸುಗ್ರೀವಾಜ್ಞೆ 2019 ಹೊರಡಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಅನುಮೋದನೆ

 

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಈ ಕೆಳಗಿನ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ. ಸಂವಿಧಾನದ ಕಲಂ 123 ಅಧಿನಿಯಮ ಒಂದರಡಿ ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ಕುರಿತ ಎರಡನೇ ಸುಗ್ರೀವಾಜ್ಞೆ 2019ಅನ್ನು ಅಪೆಂಡಿಕ್ಸ್–3(ಪುಟಗಳು 9 ರಿಂದ 12) ಹೊರಡಿಸುವ ಪ್ರಸ್ತಾವಕ್ಕೆ ಅನುಮೋದನೆ ಮತ್ತು

 

      ರಾಜ್ಯಸಭೆಯಲ್ಲಿ ಬಾಕಿಯಿರುವ ಮುಸ್ಲಿಂ ಮಹಿಳೆಯರ(ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ 2018ಕ್ಕೆ ಅಗತ್ಯ ಅಧಿಕೃತ ತಿದ್ದುಪಡಿಗಳನ್ನು ಮಾಡಲು ಹಾಗೂ ಹಿಂದಿನ ಸುಗ್ರೀವಾಜ್ಞೆಯ ಕರಡಿನಲ್ಲಿ ಬದಲಾಯಿಸಲು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒಪ್ಪಿಗೆ.

 

ಪ್ರಯೋಜನ:-

 

        ಉದ್ದೇಶಿತ ಸುಗ್ರೀವಾಜ್ಞೆಯಿಂದ ವಿವಾಹಿತ ಮುಸ್ಲಿಂ ಮಹಿಳೆಯರ ಹಕ್ಕುಗಳು ರಕ್ಷಣೆಯಾಗುವುದಲ್ಲದೆ, ಅವರ ಪತಿಯಂದಿರಿಂದ ದಿಢೀರ್ “ತಲಾಖ್-ಎ-ಬಿದ್ದತ್” ಪದ್ಧತಿಯನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ ಇದು ತ್ರಿವಳಿ ತಲಾಖ್ ಪದ್ಧತಿಯನ್ನು ಪ್ರೋತ್ಸಾಹಿಸುವುದಿಲ್ಲ, ಉದ್ದೇಶಿತ ಸುಗ್ರೀವಾಜ್ಞೆಯಿಂದ ಮಹಿಳೆಯರಿಗೆ ಜೀವನಾಂಶದ ಹಕ್ಕು ಸಿಗವುದಲ್ಲದೆ, ತ್ರಿವಳಿ ತಲಾಖ್ ಸಂತ್ರಸ್ತರ ಅಪ್ರಾಪ್ತ ಮಕ್ಕಳನ್ನು ಸುಪರ್ದಿಗೆ ವಹಿಸುವುದು ಹಾಗೂ ಅವರಿಗೆ ಭತ್ಯೆ ನೀಡುವ ಅಂಶಗಳನ್ನು ಇದು ಒಳಗೊಂಡಿದೆ.


(ಪ್ರಕಟಣೆ ಐ.ಡಿ.: 1565689) ವಿಸಿಟರ್ ಕೌಂಟರ್ : 90
ಪ್ರಕಟಣೆಯನ್ನು ಇದರಲ್ಲಿ ಓದಿ: English , Tamil