ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವರ್ಷಾಂತ್ಯದ ಅವಲೋಕನ 2018 : ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ)
Posted On:
18 DEC 2018 5:02PM by PIB Bengaluru
ವರ್ಷಾಂತ್ಯದ ಅವಲೋಕನ 2018 : ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ
(ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ)
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು [ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ] (ಸಿ.ಎಸ್.ಐ.ಆರ್) ವ್ಯಾಪಕವಾದ ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳನ್ನು ಒಳಗೊಂಡ ಇಂದು ವಿಶ್ವದ ಅತಿ ದೊಡ್ಡ ಸಾರ್ವಜನಿಕ ಹೂಡಿಕೆಯ ಸಂಶೋಧನಾ (ಆರ್ & ಡಿ) ಸಂಸ್ಥೆಗಳಲ್ಲಿ ಒಂದಾಗಿದೆ. ಇದು 38 ರಾಷ್ಟ್ರೀಯ ಪ್ರಯೋಗಾಲಯಗಳು, 39 ಸಂಪರ್ಕ ಬೆಳೆಸುವ ಕೇಂದ್ರಗಳು ಮತ್ತು ಐದು ಘಟಕಗಳ ಕ್ರಿಯಾತ್ಮಕ ಜಾಲವನ್ನು ಹೊಂದಿದೆ. ಸುಮಾರು 7000 ಕ್ಕಿಂತಲೂ ಹೆಚ್ಚು ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಗಳ ಬೆಂಬಲವಿರುವ ಸುಮಾರು 4000 ಕ್ರಿಯಾಶೀಲ ವಿಜ್ಞಾನಿಗಳಲ್ಲಿ ಸಿಎಸ್ಐಆರ್ನ ಸಂಶೋಧನಾ ಪರಿಣತಿ ಮತ್ತು ಅನುಭವವನ್ನು ಕೊಡಲಾಗಿದೆ. ಸಿಎಸ್ಐಆರ್, ಭಾರತದ ಪ್ರಧಾನಿಯವರನ್ನು ಮಂಡಳಿಯ ಮುಖ್ಯಸ್ಥರನ್ನಾಗಿ ಹೊಂದಿದೆ
2018 ಸಿಎಸ್ಐಆರ್ ಗೆ ಮಹತ್ವವಾದ ವರ್ಷವಾಗಿದೆ. ವರ್ಷದ ಕೆಲವು ಪ್ರಮುಖ ಸಾಧನೆಗಳು ಹೀಗಿವೆ:
ಸಿಎಸ್ಐಆರ್ ಇನ್ಕ್ಯುಬೇಷನ್ ಸೆಂಟರ್ ಗಳು
ಸಿಎಸ್ಐಆರ್ ವಿಶ್ವ ದರ್ಜೆಯ ಹೊಸ ಸಂಶೋಧನೆಯ ಮೂಲಕ ಉದ್ಯಮಶೀಲತೆಯನ್ನು ರಚಿಸುತ್ತಿದೆ ಮತ್ತು ಗುರುತಿಸಲಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವ "ಇನ್ಕ್ಯುಬೇಷನ್ ಸೆಂಟರ್ಸ್ " ಅನ್ನು ಸ್ಥಾಪಿಸಲಾಗುತ್ತಿದೆ . ಸಿಎಸ್ಐಆರ್ ಇನ್ಕ್ಯುಬೇಷನ್ ಸೆಂಟರ್ ಗಳು ಒಂದು ವಿವಿಧೋದ್ದೇಶ ಸೌಲಭ್ಯ ಹೊಂದಿರುವ ಕೇಂದ್ರಗಳು.
· ಆಹಾರ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ಮಾರ್ಗದರ್ಶಿಯಾಗಿರುವ ಸಿಎಸ್ಐಆರ್ –ಸಿಎಫ್ ಟಿ ಆರ್ ಐ, ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ, ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಉದ್ದಿಮೆಗಳೊಂದಿಗೆ ಕೆಲಸ ಮಾಡಲು ಮತ್ತು ಅವುಗಳನ್ನು ಯಶಸ್ವಿಯಾಗಿ ವಾಣಿಜ್ಯ ಉದ್ಯಮಗಳನ್ನಾಗಿ ಮುಂದಕ್ಕೆಸಾಗಿಸಲು ಒಂದು ತಂತ್ರಜ್ಞಾನದ ಇನ್ಕ್ಯುಬೇಟರ್ " ನ್ಯೂಟ್ರಾ-ಪೈಟೊ ಇನ್ಕ್ಯುಬೇಷನ್ ಸೆಂಟರ್" ಅನ್ನು ಸ್ಥಾಪಿಸಿದೆ. .
· ಸಿಎಸ್ಐಆರ್ ನ ಮುಖ್ಯ ಪ್ರಯೋಗಾಲಯವಾದ ಹೈದರಾಬಾದ್ ನಲ್ಲಿರುವ ಸೆಲ್ಯುಲರ್ ಮತ್ತು ಮೊಲ್ಯಾಕುಲರ್ ಬಯೋಲಾಜಿ (CCMB) ಕೇಂದ್ರವು ಒಂದು ಅಟಲ್ ಇನ್ಕ್ಯೂಬೇಶನ್ ಸೆಂಟರ್ ಅನ್ನು ಪ್ರಾರಂಭಿಸಿದೆ, ಇದು ನವೋದ್ಯಮ ಗಳಿಗೆ (ಸ್ಟಾರ್ಟ್ ಅಪ್ ) ವೈಜ್ಞಾನಿಕ ಪರಿಣತಿ, ಮೂಲಭೂತ ಸೌಕರ್ಯ ಮತ್ತು ವ್ಯವಹಾರ ನಿರ್ವಹಣಾ ಸೇವೆಯನ್ನು ಒದಗಿಸುತ್ತಿದೆ. ಪ್ರಸ್ತುತ 15 ಕಂಪನಿಗಳಿಗೆ ಆರಂಭ ಪೂರ್ವದ ಸಹಾಯ ಮಾಡಲಾಗುತ್ತಿದೆ.
ಭಾರತದ ಮೊದಲ ಜೈವಿಕ ಇಂಧನ- ಚಾಲಿತ ವಿಮಾನ: ವಾಯುಯಾನ ಗ್ರೇಡ್ ಜೈವಿಕ ಇಂಧನಕ್ಕಾಗಿ ಸಿಎಸ್ಐಆರ್ ತಂತ್ರಜ್ಞಾನ
ಸಿಎಸ್ಐಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (ಐಐಪಿ) ನ ಪೇಟೆಂಟ್ ತಂತ್ರಜ್ಞಾನದ ಆಧಾರದ ಮೇಲೆ ದೇಶೀಯವಾಗಿ ಉತ್ಪಾದಿಸಲ್ಪಟ್ಟ ವಾಯುಯಾನ ಜೈವಿಕ ಇಂಧನದಿಂದ ಚಾಲಿತ ಐತಿಹಾಸಿಕ ವಿಮಾನವು , ಆಗಸ್ಟ್ 27, 2018 ರಂದು ಡೆಹ್ರಾಡೂನಿನಿಂದ ದೆಹಲಿಗೆ ಪ್ರಯಾಣವನ್ನು ಮಾಡಿದು. ಈ ಮೊದಲ ಹಾರಾಟದೊಂದಿಗೆ ಭಾರತವು ಜೈವಿಕ ಇಂಧನ ವಾಯುಯಾನದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಸುಮಾರು ಶೇಕಡ 15 ಪ್ರತಿಶತದಷ್ಟು ಮತ್ತು ಸಲ್ಫರ್ ಆಕ್ಸೈಡ್ ( SOx ) ಹೊರಸೂಸುವಿಕೆಯನ್ನು ಶೇಕಡ 99 ರಷ್ಟು ಕಡಿಮೆಗೊಳಿಸುವುದಲ್ಲದೆ, ಜೈವಿಕ ಜೆಟ್ ಇಂಧನವನ್ನು ಬಳಸುವುದರಿಂದ ಸ್ಥಳೀಯ ಜೆಟ್ ಇಂಧನ ಪೂರೈಕೆಯ ಭದ್ರತೆಯನ್ನು ಒದಗಿಸುವುದು , ಕೃಷಿಮಟ್ಟದಲ್ಲಿ ಕಚ್ಚಾವಸ್ತುವಿನ ಲಭ್ಯತೆಯ ಸಂಭವ ಹೆಚ್ಚಾಗಿ ಉಳಿತಾಯವು ಆಗುವುದು, ಉತ್ತಮ ಎಂಜಿನ್ ಕಾರ್ಯಕ್ಷಮತೆ ಮತ್ತು ವಿಮಾನಯಾನ ನಿರ್ವಾಹಕರಗೆ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
.
ಸರಸ್ ಪಿ ಟಿ1 ಎನ್ ನ ಯಶಸ್ವಿ ಉದ್ಘಾಟನಾ ಹಾರಾಟ
ಸರಸ್ ಪಿ ಟಿ1 ಎನ್ (14 ಆಸನದ) ವಿಮಾನವನ್ನು ಸಿಎಸ್ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (ಸಿಎಸ್ಐಆರ್-ಎನ್ಎಎಲ್), ಸಿಎಸ್ಐಆರ್ ನ ಮುಂಚೂಣಿಯಲ್ಲಿರುವ ವೈಮಾನಿಕ ಸಂಶೋಧನೆಯ ಪ್ರಯೋಗಾಲಯದಲ್ಲಿ ರೂಪಿಸಿ ಅಭಿವೃದ್ಧಿಪಡಿಸಲಾಗಿದ್ದು , ಇದು 21.02.2018 ರಂದು ಯಶಸ್ವಿ ಹಾರಾಟ ನಡೆಸಿತು. ಪಿಟಿ1 ಎನ್ ನ ಮೂಲ ಉದ್ದೇಶವು ಸುಮಾರು 20 ವಿಮಾನಗಳ ಸಿಸ್ಟಮ್ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವುದು ಮತ್ತು ಅದರ ಮೂಲಕ ಸಂಗ್ರಹಿಸಲಾದ ದತ್ತಾಂಶವನ್ನು ಮುಂದೆ ತಯಾರಿಸಲಾಗುವ 19 ಸೀಟರ್ ವಿಮಾನ ಸರಸ್ ಎಮ್ ಕೆ II ರ ವಿನ್ಯಾಸದಲ್ಲಿ ಬಳಸಲಾಗುತ್ತದೆ .
ಸಿಎಸ್ಐಆರ್-ಎನ್ಎಎಲ್ 100 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಖರೀದಿ ಆದೇಶವನ್ನು ಎಲ್ ಸಿ ಎ- ತೇಜಸ್ ನ ಸಂಯುಕ್ತ ಭಾಗಗಳ ತಯಾರಿಕೆಗಾಗಿ ಎಚ್ಎಎಲ್ ನಿಂದ ಪಡೆಯಿತು:
ಸಂಯೋಜಿತ ತಂತ್ರಜ್ಞಾನ ವು ಎಲ್ ಸಿ ಎ ವಿಮಾನದ ಒಂದು ಅತ್ಯಮೂಲ್ಯವಾದ ತಂತ್ರಜ್ಞಾನವಾಗಿದೆ. ಇದರಿಂದಾಗಿ ಎಲ್ ಸಿ ಎ ವಿಮಾನವು 4ನೇ ಜೆನರೇಷನ್ ಯುದ್ಧ ವಿಮಾನವಾಗಿದೆ. ಸಿಎಸ್ಐಆರ್-ಎನ್ಎಎಲ್ ನ ಸಹಯೋಗದೊಂದಿಗೆ ಎಲ್ ಸಿ ಎ ಕಾರ್ಯಕ್ರಮವು ತಂತ್ರಜ್ಞಾನ ಪ್ರದರ್ಶಕ ದಿಂದ (2 ವಿಮಾನಗಳು) ಪ್ರೊಟೊಟೈಪ್ ಡೆವಲಪ್ಮೆಂಟ್ (5 ವಿಮಾನಗಳು), ಸೀಮಿತ ಸರಣಿಯ ಉತ್ಪಾದನೆ (8 ವಿಮಾನಗಳು) ಮತ್ತು ಐಒಸಿ ಸ್ಟ್ಯಾಂಡರ್ಡ್ ಪ್ರೊಡಕ್ಷನ್ ವಿಮಾನಗಳಿಗಾಗಿ (ಎಸ್.ಪಿ.1 ನಿಂದ ಎಸ್.ಪಿ.20) ಪ್ರಾರಂಭವಾಯಿತು. 20 ಜೊತೆ ಆರಂಭಿಕ ಐಓಸಿ ಆದೇಶವು ಪೂರ್ಣವುಳ್ಳ ಹಂತದಲ್ಲಿದೆ. ಸಿಎಸ್ಆರ್-ಎನ್ಎಎಲ್ ಅಭಿವೃದ್ಧಿಪಡಿಸಿದ ಈ ಸ್ಥಳೀಯ ತಂತ್ರಜ್ಞಾನವನ್ನು ಫಿನ್, ರುಡ್ಡರ್, ವಿಂಗ್ ಸ್ಪಾರ್ಸ್ ಮತ್ತು ಫೇರಿಂಗ್ಸ್, ಸೆಂಟರ್ ಫ್ಯುಸ್ಲೇಜ್ ಮತ್ತು ಮೇನ್ ಲ್ಯಾಂಡಿಂಗ್ ಗೇರ್ ಘಟಕಗಳಂತಹ ಪ್ರಾಥಮಿಕ ಏರ್ ಫ್ರೇಮ್ ಘಟಕಗಳನ್ನು ಉತ್ಪಾದಿಸುವಲ್ಲಿ ಬಳಸಲಾಯಿತು.
ಸಿಎಸ್ಐಆರ್-ಎನ್ಎಎಲ್ ಮತ್ತು ಬಿ ಇ ಎಲ್ ಎಲೆಕ್ಟ್ರಾನಿಕ್ ಟಾರ್ಗೆಟ್ ಸಿಸ್ಟಮ್ (ETS) ನ ತಾಂತ್ರಿಕ ಸಹಯೋಗದ ಒಪ್ಪಂದಕ್ಕೆ ಸಹಿ ಹಾಕಿದವು, ಇದೊಂದು ನೇರ ಫೈರಿಂಗ್ ತರಬೇತಿಯ ಸಮಯದಲ್ಲಿ ರಕ್ಷಣಾ ಮತ್ತು ಅರೆಸೈನಿಕ ಪಡೆಗಳ ಮಾರ್ಕ್ಸ್ ಮನ್ ಶಿಪ್ ಅನ್ನು (ಗುರಿ ಇಡುವಿಕೆ )ಅನ್ನು ಹೆಚ್ಚಿಸಲು ಆಧುನಿಕ ತರಬೇತಿಯಲ್ಲಿ ನೆರವಾಗುತ್ತದೆ .
ದೃಷ್ಟಿ ಟ್ರಾನ್ಸ್ ಮಿಸೋಮೀಟರ್ : ಭಾರತಾದ್ಯಂತ ಇರುವ ವಿಮಾನ ನಿಲ್ದಾಣಗಳಲ್ಲಿ ನಿಯೋಜನೆ
ದೃಷ್ಟಿ ಒಂದು ಸ್ಥಳೀಯ - ನವೀನ – ಮೌಲ್ಯಯುತವಾದ ಗೋಚರತೆy ಅಳತೆ ವ್ಯವಸ್ಥೆ - ಈ ಶ್ರೇಣಿಯಲ್ಲಿ ಇದೇ ಮೊದಲು ಮತ್ತು ಸಿಎಸ್ಐಆರ್-ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಸಿಎಸ್ಐಆರ್-ಎನ್ಎಎಲ್) ದೇಶದಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಏಕೈಕ ಸಂಸ್ಥೆಯಾಗಿದೆ. ಇದು ವಿಮಾನ ನಿಲ್ದಾಣಗಳ ಕಾರ್ಯಾಚರಣೆಗಳಿಗೆ ಉಪಯುಕ್ತವಾಗಿದೆ ಮತ್ತು ರನ್ ವೇ ಗೋಚರತೆಯಲ್ಲಿ ಪೈಲಟ್ಗಳಿಗೆ ಮಾಹಿತಿಯನ್ನು ನೀಡುತ್ತದೆ. ದೃಷ್ಟಿ ದೇಶದಾದ್ಯಂತ ಹಲವಾರು ವಿಮಾನ ನಿಲ್ದಾಣಗಳಲ್ಲಿ ಟ್ರಾನ್ಸ್ ಮಿಸೋಮೀಟರ್ ಗಳನ್ನು ಸ್ಥಾಪಿಸಲಾಗಿದೆ.
ಸಿಕ್ಲ್ ಸೆಲ್ ಅನೀಮಿಯ (ರಕ್ತಹೀನತೆಯ ರೋಗ) ದ ಬಗ್ಗೆ ಸಿಎಸ್ಐಆರ್ ಮಿಷನ್
ಸಿಎಸ್ಐ ಆರ್ ಸಿಕಲ್ ಸೆಲ್ ಅನೀಮಿಯ ಮೇಲೆ ಮಿಷನ್ ಅನ್ನು ಜಾರಿಗೆ ತರುತ್ತಿದೆ . ಯೋಜನೆಯು ಸಿಕ್ಲ್ ಸೆಲ್ ರಕ್ತಹೀನತೆಯ ಅನುವಂಶಿಕ ಹೊರೆಯನ್ನು ನಿರ್ವಹಿಸುತ್ತದೆ ಮತ್ತು ಹೈಡ್ರಾಕ್ಸಿಯೆರಾ ಥೆರಪಿ, ಡ್ರಗ್ ಆವಿಷ್ಕಾರ ಮತ್ತು ಎಸ್ ಸಿ ಎ ಗಾಗಿ ಔಷಧಿಯ ಅವಿಷ್ಕಾರ ಮತ್ತು ಅದರ ನಿರ್ವಹಣೆ, ಜೆನೊಮ್ ಎಡಿಟಿಂಗ್ ಮತ್ತು ಸ್ಟೆಮ್ ಸೆಲ್ ಸಂಶೋಧನಾ ವಿಧಾನವನ್ನು ಎಸ್ ಸಿ ಎ ಮತ್ತು ಕೈಗೆಟುಕುವ, ನಿಖರ ಮತ್ತು ವೇಗವರ್ಧಿತ ರೋಗನಿರ್ಣಯದ ಕಿಟ್ ಅನ್ನು ಅಭಿವೃದ್ಧಿ ಪಡಿಸುವುದು.
ಸಿಎಸ್ಐಆರ್ ನ ಹೊಸ ಪೇಟೆಂಟೆಡ್ ಕ್ಲಾಟ್ ಬಸ್ಟರ್, ಪೆಗೈಲೇಟೆಡ್ ಸ್ಟ್ರೆಪ್ಟೊಕಿನೇಸ್ ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಹೊಸ ಮಾರ್ಪಾಡು ಮಾಡಲಿದೆ.
ಇಸ್ಕೆಮಿಕ್ (ರಕ್ತಕೊರತೆಯ) ಪಾರ್ಶ್ವವಾಯುವು ಎಂಬೋಲಿ, ಥ್ರಂಬಸ್ (ಹೆಪ್ಪುಗಟ್ಟುವಿಕೆ) ಕಾರಣದಿಂದಾಗಿ ಮೆದುಳಿಗೆ ರಕ್ತದ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಉಂಟಾಗುವ ಸ್ಥಿತಿಯಾಗಿದೆ. ಆಶ್ಚರ್ಯವೇನೆಂದರೆ, ಪಾಶ್ಚಿಮಾತ್ಯ ದೇಶಗಳಿಗಿಂತ ಹೆಚ್ಚಾಗಿ ಭಾರತದಲ್ಲಿ ಹೆಚ್ಚು ಮತ್ತು 87% ಪಾರ್ಶ್ವವಾಯುಗಳು ರಕ್ತಜಹೀನತೆಯ ಪಾರ್ಶ್ವವಾಯುಗಳಾಗಿವೆ. ಸಿಎಸ್ ಐಆರ್ –ಐ ಎಮ್ ಮ್ಟೆಚ್ ಮತ್ತು ಎಪಿಜೆನ್ ಸಂಸ್ಥೆಗಳು ಇಸ್ಕೆಮಿಕ್ (ರಕ್ತಕೊರತೆಯ) ಪಾರ್ಶ್ವವಾಯುವಿನ ಚಿಕಿತ್ಸೆಗಾಗಿ ಪಿಜಿಲೈಟೆಡ್ ಸ್ಟ್ರೆಪ್ಟೊಕಿನೇಸ್ ಅನ್ನು ಎಪಿಜೆನ್ ಸಂಸ್ಥೆ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಂಡಿವೆ.
ಪ್ರಚಲಿತ ಆನುವಂಶಿಕ ಕಾಯಿಲೆಗಳ ರೋಗನಿರ್ಣಯ ಕಾರ್ಯವನ್ನು ಶಕ್ತಗೊಳಿಸಲು ಸಿಎಸ್ ಐಆರ್ - ಐಜಿಐಬಿ ಮತ್ತು ಡಾ. ಲಾಲ್ ಪಾತ್ ಲ್ಯಾಬ್ಸ್ ಸಹಭಾಗಿತ್ವದಲ್ಲಿ ತೊಡಗುವುದು
ಆನುವಂಶಿಕ ಕಾಯಿಲೆಗಳು ಅಪರೂಪವಾಗಿದ್ದರೂ, ಒಟ್ಟಾರೆಯಾಗಿ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತವೆ, ಇದು 70 ದಶಲಕ್ಷ ಭಾರತೀಯರ ಮೇಲೆ ಪರಿಣಾಮ ಬೀರುತ್ತದೆಂದು ಅಂದಾಜು ಮಾಡಲಾಗಿದೆ. ಸಿಎಸ್ಐಆರ್-ಐಜಿಐಬಿ ಯು ಡಾ. ಲಾಲ್ ಪಾತ್ ಲಾಬ್ಸ್ ನೊಂದಿಗೆ ವಾಣಿಜ್ಯ ಉದ್ದೇಶಕ್ಕಾಗಿ 27 ಆನುವಂಶಿಕ ಕಾಯಿಲೆಗಳ ಪರೀಕ್ಷೆಗಳ ಪರವಾನಗಿಗಾಗಿ ಒಪ್ಪಂದ ಮಾಡಿಕೊಂಡಿದೆ. ಈ ಪರೀಕ್ಷೆಗಳನ್ನು ಈ ವರ್ಷದಲ್ಲಿ ಪ್ರಾರಂಭಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ನಾನ್ ವಾಸ್ಕುಲರ್ (ರಕ್ತನಾಳ) ಸ್ವಯಂ-ಹಿಗ್ಗುವ ಸ್ಟೆಂಟ್ ಗಳು
ಸ್ಟೆಂಟ್ ಗಳನ್ನು ಹಲವಾರು ಪಿತ್ತರಸದ ವಿಸರ್ಜನಾ ಮಾರ್ಗದ ಬಿಲಿಯರಿ ಟ್ಟಾಕ್ಟ್ ಕಾಯಿಲೆಗಳು, ಅಂದರೆ ಬಿನೈನ್ ಬಿಲಿಯರಿ ಕಾಯಿಲೆಗಳಿಂದ ಹಿಡಿದು ಮಾರಕವಾದ ನಾಳಗಳ ಸಂಕುಚತತೆಯ ಕಾಯಿಲೆಗಳವರೆವಿಗೂ ಬಳಸುತ್ತಾರೆ. ಎರಡು ರೀತಿಯ ಬಿಲಿಯರಿ ಸ್ಟೆಂಟ್ ಗಳು ಹೆಚ್ಚಾಗಿ ಉಪಯೋಗಿಸಲ್ಪಡುತ್ತವೆ. ಪ್ಲಾಸ್ಟಿಕ್ ಸ್ಟೆಂಟ್ ಗಳು ಮತ್ತು ಸ್ವಯಂ ಹಿಗ್ಗುವ ಲೋಹದ ಸ್ಟೆಂಟ್ ಗಳು. ಇವುಗಳಲ್ಲಿ ಸ್ವಯಂ ಹಿಗ್ಗುವ ಲೋಹದ ಸ್ಟೆಂಟ್ ಗಳು ಹೆಚ್ಚುಕಾಲ ತೆರೆದಿರುವಂತಹ ಬಾಳಿಕೆ ಬರುವುದಿದ್ದರೂ ಅವುಗಳ ದುಬಾರಿ ಬೆಲೆಯು ಖರೀದಿಸಲಾಗದಂತೆ ಮಾಡಿವೆ. ಸಿಎಸ್ ಐಆರ್- ಎನ್ ಸಿ ಎಲ್ ಸಂಸ್ಥೆಯು ಒಂದು ನವೊದ್ಯೋಗ (ಸ್ಟಾರ್ಟ್ ಅಪ್) ದೊಂದಿಗೆ ಹೊಸ ಸುರುಳಿಯ ವಿನ್ಯಾಸವನ್ನು ಹೊಂದಿದ ಹೊಸ ಶ್ರೇಣಿಯ ಸ್ಟೆಂಟ್ ಗಳನ್ನು ಅಭಿವೃದ್ಧಿ ಪಡಿಸಿದೆ. ಈ ಸ್ಟೆಂಟ್ ಗಳನ್ನು ಶೇಪ್ ಮೆಮೊರಿ ಮಿಶ್ರಲೋಹ ಆಧಾರಿತ ಸ್ಟೆಂಟ್ ಗಳಂತಲ್ಲದೆ ಸರಳವಾದ ಪಾಲಿಮರ್-ಮೆಟಲ್ ಸಂಯುಕ್ತಗಳೊಂದಿಗೆ ಈ ಸ್ಟೆಂಟ್ಗಳನ್ನು ಮಾಡಲಾಗಿದೆ. ಈ ಸ್ಟೆಂಟ್ಗಳನ್ನು ಪ್ರಸ್ತುತ ಲಭ್ಯವಿರುವವುಗಳಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾಗಿದೆ. ಎರಡು ಕಂಪನಿಗಳಿಗೆ ತಂತ್ರಜ್ಞಾನವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಿದೆ.
ದೃಷ್ಟಿ ವಿಕಲಚೇತನರಿಗಾಗಿ ಸಿಎಸ್ಐಆರ್ ನ ದಿವ್ಯ ನಯನ್
ಸಿಎಸ್ಐಆರ್-ಸೆಂಟ್ರಲ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ಆರ್ಗನೈಸೇಷನ್ ದೃಷ್ಟಿ ವಿಕಲಚೇತನರಿಗಾಗಿ ‘ದಿವ್ಯ ನಯನ್' ‘ ಎನ್ನುವ ವೈಯಕ್ತಿಕ ಓದುವ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ, ಇದು ಹಿಂದಿ ಮತ್ತು ಇಂಗ್ಲೀಷಿನಲ್ಲಿ ಲಭ್ಯವಿರುವ ಯಾವುದೇ ಮುದ್ರಿತ ಮತ್ತು ಡಿಜಿಟಲ್ ಪುಸ್ತಕಗಳನ್ನು ಓದುತ್ತದೆ. ದಿವ್ಯ ನಯನ್ ಅನ್ನು ವಿವಿಧ ವಯಸ್ಸಿನ ಹಲವಾರು ದೃಷ್ಟಿ ವಿಕಲಚೇತನರೊಂದಿಗೆ ಪರೀಕ್ಷಿಸಲಾಗಿದೆ ಮತ್ತು ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ.
ಸ್ಮಾರ್ಟ್ ಇಂಡಿಯಾ ಹ್ಯಾಕತಾನ್ 2018: ಇಂಜಿನಿಯರಿಂಗ್ / ಟೆಕ್ನಾಲಜಿ ವಿದ್ಯಾರ್ಥಿಗಳಿಗೆ ನಿರಂತರ 36 ಗಂಟೆಗಳ ಡಿಜಿಟಲ್ ಉತ್ಪನ್ನ ಅಭಿವೃದ್ಧಿ ಸ್ಪರ್ಧೆ
ಸಿಎಸ್ಐಆರ್ ಸ್ಮಾರ್ಟ್ ಇಂಡಿಯಾ ಹ್ಯಾಕಾತಾನ್-2018-ಸಾಫ್ಟ್ವೇರ್ ಎಡಿಶನ್ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು ಮತ್ತು ಪುಣೆಯ ಸಿಎಸ್ಐಆರ್ – ಎನ್ ಸಿ ಎಲ್ ನಲ್ಲಿ 36-ಗಂಟೆಗಳ ಗ್ರ್ಯಾಂಡ್ ಫಿನಾಲೆಯನ್ನು ಯಶಸ್ವಿಯಾಗಿ ಆಯೋಜಿಸಿತು . ಈ ಉಪಕ್ರಮದಲ್ಲಿ ಸಿಎಸ್ಐಆರ್ ‘ಪ್ರಧಾನ ಪಾಲುದಾರ’ವಾಗಿತ್ತು ಹಲವಾರು ಸುತ್ತುಗಳ ನಂತರ, ಅಂತಿಮವಾಗಿ , ದೇಶದಾತ್ಯಂತ ಬಂದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 318 ವಿದ್ಯಾರ್ಥಿಗಳು ಮತ್ತು 75 ಮಾರ್ಗದರ್ಶಕರು, ಸವಾಲುಗಳ ಮೇಲೆ ಕಾರ್ಯ ಮಾಡುವಾಗ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಆಯ್ಕೆಯಾದ ಎಲ್ಲಾ ತಂಡಗಳೊಂದಿಗಿನ ಕಠಿಣ ಸಂವಾದಗಳ ನಂತರ, ಅಂತಿಮವಾಗಿ ಮೂರು ತಂಡಗಳು ಪ್ರಶಸ್ತಿಗಳನ್ನು ಸ್ವೀಕರಿಸಿದವು. ರೂ. 1,00,000/- (ವಿಜೇತರು), ರೂ.75,000/- (1 ನೇ ರನ್ನರ್ ಅಪ್) ಮತ್ತು ರೂ.50,000/- (2ನೇ ರನ್ನರ್ ಅಪ್). ಹೆಚ್ಚುವರಿಯಾಗಿ, "ಪರ್ಸಿಸ್ಟೆಂಟ್ ಇನ್ಸ್ಪಿರೇಷನ್ ಅವಾರ್ಡ್", "ಕೆಪಿಐಟಿ ಅವಾರ್ಡ್" ಮತ್ತು "ಡೆಲೋಯ್ಟ್ ಇನ್ನೋವೇಶನ್ ಅವಾರ್ಡ್" ಗಾಗಿ ಇನ್ನೂ ಮೂರು ತಂಡಗಳನ್ನು ಆಯ್ಕೆ ಮಾಡಲಾಯಿತು.
ದೆಹಲಿಯಲ್ಲಿ ಎ1 ಆವಿಷ್ಕಾರ ಕೇಂದ್ರವನ್ನು ಸ್ಥಾಪಿಸಲು ಎನ್ ವಿ ಐ ಡಿ ಐ ಎ ನೊಂದಿಗೆ ಸಿಎಸ್ಐಆರ್ ಜತೆಗೂಡಿತು
ಸಿಎಸ್ಐಆರ್-ಸಿಇಇಆರ್ ಐ – ಎನ್ ವಿಡಿಯಾ ಸೆಂಟರ್ ಆಫ್ ಎಕ್ಸಲೆನ್ಸ್ (ಸಿ ಎನ್ ಸಿ ಒ ಇ) ಭಾರತದ ಮೊದಲ ಕೈಗಾರಿಕಾ ಎಐ ಸೂಪರ್ ಕಂಪ್ಯೂಟರ್ ಆದ ಒಂದು ಫೈವ್-ಪೆಟಾಫ್ಲಾಪ್ ಎಐ ಸೂಪರ್ ಕಂಪ್ಯೂಟರನ್ನು ಸಿಎಸ್ಐಆರ್-ಸಿಇಇಆರ್ ಐ ನ ದೆಹಲಿ ಕ್ಯಾಂಪಸ್ನಲ್ಲಿ ಹೊಂದುತ್ತದೆ. ಈ ಸಿಎನ್ ಸಿಒಇ ಗಮನಾರ್ಹವಾಗಿದೆ ಏಕೆಂದರೆ ಇದು ಒಟ್ಟಾಗಿ ಎನ್ ವಿಡಿಯಾದ ಅತ್ಯಾಧುನಿಕ ಎ ಐ ಪ್ಲಾಟ್ ಫಾರ್ಮ್ ಜೊತೆಗೆ ಸಿಎಸ್ಐಆರ್-ಸಿಇಇಆರ್ ಐನ ವ್ಯಾಪಕವಾದ ಕೈಗಾರಿಕಾ ವೈಜ್ಞಾನಿಕ ಸಂಶೋಧನಾ ಪರಿಣತಿಯ ಸಾಮರ್ಥ್ಯ ಹೊಂದಿದೆ. ಈ ಸಂಯೋಜನೆಯು ದೇಶಾದ್ಯಂತ ಸಂಶೋಧಕರು ಮತ್ತು ಉದ್ಯಮವನ್ನು ತಮ್ಮ ಎಐ ವ್ಯವಸ್ಥೆಗಳ ಅಭಿವೃದ್ಧಿಯನ್ನು ಮುನ್ನಡೆಸಲು ಸಕ್ರಿಯಗೊಳಿಸುತ್ತದೆ. ವೈವಿಧ್ಯಮಯವಾದ ಅಪ್ಲಿಕೇಶನ್ ಡೊಮೇನ್ಗಳಲ್ಲಿ ಎಐ ಆಧಾರಿತ ಸಂಶೋದನೆಯ ಸಂಸ್ಕೃತಿಯಲ್ಲಿ/ ವಾತಾವರಣದಲ್ಲಿ ಈ ಸಿಎನ್ ಸಿಒಇಗೆ ಮೊದಲ ಹೆಜ್ಜೆಯಿಡುವ ಸಾಮರ್ಥ್ಯವಿದೆ.
ಗಡಿ ಭದ್ರತೆಯನ್ನು ಹೆಚ್ಚಿ ಸಲು ಎಐ ಆಧಾರಿತ ಮೂವ್ ಮೆಂಟ್ ಡಿಟೆಕ್ಷನ್ ಸಿಸ್ಟಮ್
ಸಿಎಸ್ಐಆರ್- ಸಿಎಸ್ ಐ ಒ, ಚಂಡೀಗಢವು ಗಡಿ ಭದ್ರತೆಗಾಗಿ ಒಂದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಮಾನವ ಚಲನವಲನವನಕ್ಕೂ ಮತ್ತು ಇತರ ಜಾನುವಾರು ,ವಾಹನ ಚಲನವಲನಕ್ಕೂ ವ್ಯತ್ಯಾಸ ತಿಳಿಯಲು, ಭಯೋತ್ಪಾದನೆ ಮತ್ತು ಮಾದಕವಸ್ತುಗಳ ಒಳಹರಿವಿನ ನಿಗ್ರಹ ಮತ್ತು ಗಡಿ ಭದ್ರತೆಯನ್ನು ಮತ್ತಷ್ಟು ಬಿಗಿಪಡಿಸುತ್ತದ. ಈ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಡ್ರಿವನ್ – ಎ ಐ) – ಚಾಲಿತ ಎಚ್ಚರಿಕೆ ವ್ಯವಸ್ಥೆಯನ್ನು ಆಧರಿಸಿದೆ. ಇದು ಎಚ್ಚರಿಕೆಯ ಸಂದೇಶವನ್ನು ಇಮೇಲ್ ಮತ್ತು ಪಠ್ಯ ಸಂದೇಶಗಳ ಮೂಲಕ ನೋಂದಾಯಿತ ಬಳಕೆದಾರರಿಗೆ ಮಾಹಿತಿಯನ್ನು ಕಳುಹಿಸುತ್ತದೆ.
ಕೈಗೆಟುಕುವ ಬೆಲೆಯ ಸೋಂಕುನಿವಾರಕ ನೀರಿನ ವ್ಯವಸ್ಥೆಯ ಸಾಧನ “ಒನೀರ್” (Oneer) ನ ಅಭಿವೃದ್ಧಿ ಮತ್ತು ಸನ್ನದುಗೊಳಿಸುವಿಕೆ (ಲೈಸೆನ್ಸಿಂಗ್)
ಲಕ್ನೋ ದಲ್ಲಿರುವ ಸಿಎಸ್ ಐ ಆರ್- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್ (ಸಿಎಸ್ಐಆರ್ - ಐಐಟಿಆರ್), " ಒನೀರ್" ಎಂಬ ವಾಣಿಜ್ಯ ಹೆಸರಿನೊಂದಿಗೆ " ಸೋಂಕುನಿವಾರಕ ನೀರಿನ ವ್ಯವಸ್ಥೆಯ’ ಉಪಕರಣವನ್ನು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ನೀರಿನ ನಿರಂತರ ಶುದ್ಧಮಾಡುವಿಕೆಯಲ್ಲಿ ಇದು ಉಪಯುಕ್ತವಾಗಿದೆ. "ಸೋಂಕುನಿವಾರಕ ನೀರಿನ ವ್ಯವಸ್ಥೆಯ" ತಂತ್ರಜ್ಞಾನವನ್ನು ನವದೆಹಲಿಯ ಮೆ. ಬ್ಲೂಬರ್ಡ್ ವಾಟರ್ ಪ್ಯೂರಿಫೈಯರ್ಗಳಿಗೆ ವರ್ಗಾಯಿಸಲಾಯಿತು. (ಸಿಎಸ್ಐಆರ್-ಐಐಟಿಆರ್) ಅಭಿವೃದ್ಧಿಪಡಿಸಿದ “ಒನೀರ್" ಕೇವಲ ಲೀಟರ್ ಗೆ 2 ಪೈಸೆ ವೆಚ್ಚದಲ್ಲಿ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸುತ್ತದೆ . ಸಮುದಾಯ ಮಟ್ಟದ ಮಾದರಿ 450 LPH (ಲೀಟರ್ ಪ್ರತಿ ಗಂಟೆಗೆ) ಸಾಮರ್ಥ್ಯ ಹೊಂದಿದೆ. ಇದನ್ನು ದಿನಕ್ಕೆ 5000 ರಿಂದ 1 ಲಕ್ಷ ಲೀಟರ್ ನಷ್ಟು ಏರಿಸಬಹುದು.
ಟೈಮ್ ಸ್ಟಾಂಪಿಂಗ್ ಮತ್ತು ಟೈಮ್ ಸಿಂಕ್ರೊನೈಸೇಶನ್ ನೆಟ್ ವರ್ಕ್ ಮತ್ತು ಟೈಮ್ ಸಿಗ್ನಲ್ ನ ಪತ್ತೆಹಚ್ಚುವಿಕೆಯನ್ನು ರಾಷ್ಟ್ರವ್ಯಾಪಿ ಸ್ಥಾಪಿಸಲು ಸಿಎಸ್ಐಆರ್ ಮತ್ತು ದೂರ ಸಂಪರ್ಕ ಇಲಾಖೆಯ ಪಾಲುದಾರಿಕೆ . ಇದರ ಮುಖ್ಯ ಉದ್ದೇಶವೇನೆಂದರೆ ದೂರಸಂಪರ್ಕದ ಜಾಲವನ್ನು ಭಾರತೀಯ ಕಾಲಮಾನದ ಮುದ್ರೆಯೊಂದಿಗೆ ಹೊಂದಿಸುವುದು, ಇದರಿಂದಾಗಿ ತೀವ್ರವಾಗಿ ಹೆಚ್ಚುತ್ತಿರುವ ನೆಟ್ ವರ್ಕ್ ವೇಗಕ್ಕೆ (2ಜಿ ನಿಂದ 3ಜಿ ಗೆ 4ಜಿ ಗೆ 5ಜಿ ಗೆ ಇತ್ಯಾದಿ) ಅನುಗುಣವಾಗಿ ನಡೆಯುತ್ತಿರುವ ಸೈಬರ್ ಚಟುವಟಿಕೆಗಳನ್ನು ಭಧ್ರತಾ ಸಂಸ್ಥೆಗಳು ವಿಶ್ಲೇಷಿಸುವ ತೊಂದರೆಗಳಿಂದ ಮುಕ್ತಗೊಳಿಸುತ್ತವೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅಳವಡಿಸಲಾಗುತ್ತದೆ.
ಹಾಲು ಪರೀಕ್ಷೆಯ ತಂತ್ರಜ್ಞಾನಗಳನ್ನು ಆರ್ ಇ ಐ ಎಲ್, ಜೈಪುರಕ್ಕೆ ಪರವಾನಗಿ ನೀಡಲಾಗಿದೆ - ಮೇಕ್ ಇನ್ ಇಂಡಿಯಾ ಮಿಷನ್ ನ್ನೆಡೆಗೆ ಒಂದು ಪ್ರಯತ್ನ. ಹಾಲಿನ ಕಲಬೆರಕೆಗಳ ಪತ್ತೆ ಹಚ್ಚುವಿಕೆಯು ಡೈರಿ ಉದ್ಯಮದ ಅಗತ್ಯವಾಗಿದೆ, ಇದನ್ನು ತಂತ್ರಜ್ಞಾನದ ಮೂಲಕ ಬಗೆಹರಿಸಬಹುದು. ಈ ತಂತ್ರಜ್ಞಾನಗಳನ್ನು ಎಫ್.ಎಸ್.ಎಸ್.ಎ.ಐನಿಂದ ಬಳಕೆಗೆ ಅನುಮೋದಿಸಲಾಗಿದೆ ಮತ್ತು ಹಾಲಿನಲ್ಲಿರುವ ಕಲಬೆರಕೆಯನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಎಲ್ಲರ ಬಳಕೆಗಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಶುದ್ಧತೆಯನ್ನು ಖಚಿತಪಡಿಸುತ್ತದೆ
.
ಸಿಡಿಐಆರ್-ಸಿಐಎಮ್ಎಪಿ ಯನ್ನು ಔಷಧೀಯ ಸಸ್ಯಗಳ ಸಂಘಟಿತ ಕೇಂದ್ರವಾಗಿ ಇಂಡಿಯನ್ ಓಶನ್ ರಿಮ್ ಅಸೋಸಿಯೇಷನ್ (ಐಒಆರ್ ಎ) ಮೂಲಕ ಗೊತ್ತುಪಡಿಸಲಾಗಿದೆ. ಐಒಆರ್ ಎ ಸಂಘವು 21 ದೇಶಗಳು ಮತ್ತು 7 ಸಮಾಲೋಚನಾ ಪಾಲುದಾರರು ಒಳಗೊಂಡಿರುವ ಸಂಸ್ಥೆಯಾಗಿದ್ದು ಇದು ಔಷಧೀಯ ಸಸ್ಯಗಳು ಸೇರಿದಂತೆ 6 ಸಹಕಾರ ಕ್ಷೇತ್ರಗಳನ್ನು ಗುರುತಿಸಿವೆ.
ಸಿಎಸ್ಐಆರ್ ಅರೋಮಾ ಮಿಷನ್
ಸಿಆರ್ಐಆರ್ ಅರೋಮಾ ಮಿಷನ್ ಅನ್ನು ಸುಗಂಧದ ವಲಯದಲ್ಲಿ ಬಯಸಿದ ಮಧ್ಯಸ್ಥಿಕೆಗಳ ಮೂಲಕ ಪರಿವರ್ತಿಸುವ ಬದಲಾವಣೆಯನ್ನು ತರಲು ಯೋಜಿಸಲಾಗಿದೆ. ಇದು ಉನ್ನತ ಪರಿಮಳ ಬೆಳೆ ಪ್ರಭೇದಗಳ ಬೆಳವಣಿಗೆ ಮತ್ತು ಅವುಗಳ ಕೃಷಿ ತಂತ್ರಜ್ಞಾನಗಳು ಮತ್ತು ನಿರ್ದಿಷ್ಟ ಕೃಷಿ-ಹವಾಮಾನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿಗಾಗಿ ಅವುಗಳ ಹೊಂದಾಣಿಕೆಯ ಮೌಲ್ಯಮಾಪನದ ಗುರಿ ಹೊಂದಿದೆ.
ಯೋಜನೆಯನ್ನು ಪ್ರಾರಂಭಿಸಿದ 15 ತಿಂಗಳ ನಂತರ, ರಾಷ್ಟ್ರದಾದ್ಯಂತ ಸುಗಂಧ ಸಸ್ಯಗಳನ್ನು ಬೆಳೆಸಲು ಸುಮಾರು 2119 ಹೆಕ್ಟೇರ್ ಪ್ರದೇಶವನ್ನು ಈ ಯೋಜನೆಯಡಿ ತರಲಾಗಿದೆ.
ಸಿಎಸ್ಐಆರ್ ಫೈಟೊಫಾರ್ಮಾಸ್ಯುಟಿಕಲ್ಸ್ ಮಿಷನ್
ಸಿಎಸ್ಐಆರ್ ಫೈಟೊಫಾರ್ಮಾಸ್ಯುಟಿಕಲ್ ಮಿಷನ್ ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯಕ್ಕೊಳಗಾದ ಜಾತಿಗಳ ಬೆಳೆಗಳ, ಗುಣಮಟ್ಟದ ಬೇಸಾಯದ ವಸ್ತುಗಳ ಉತ್ಪಾದನೆ ಮತ್ತು ಆಯಾ ಪ್ರದೇಶದ ನಿರ್ದಿಷ್ಟ ಕೃಷಿ ತಂತ್ರಜ್ಞಾನಗಳ ಅಭಿವೃದ್ಧಿ ಸೇರಿದಂತೆ ಔಷಧೀಯ ಸಸ್ಯಗಳ ವಲಯದ ವಸ್ತುವನ್ನು ಬೆಳೆಸುವ, ಔಷಧೀಯ ಸಸ್ಯಗಳ ಮೂಲಕ ಪರಿವರ್ತಿಸುವ ಬದಲಾವಣೆಯನ್ನು ತರಲು ಯೋಜಿಸಲಾಗಿದೆ; ಜಿಎಂಪಿ ದರ್ಜೆಯ ಔಷಧೀಯ ಸಸ್ಯದ ಸಾರತೆಗೆಯುವ ತಂತ್ರಜ್ಞಾನದ ಪ್ಯಾಕೇಜ್ಗಳು; ಮತ್ತು ಪ್ರಮುಖ ಔಷಧೀಯ ಸಸ್ಯಗಳಿಂದ ಫೈಟೊಫಾರ್ಮಾಸ್ಯುಟಿಕಲ್ ಬೆಳವಣಿಗೆ ಇದರ ಉದ್ದೇಶವಾಗಿದೆ.
ಯೋಜನೆಯ ಅನುಷ್ಠಾನದ ಮೊದಲ ವರ್ಷದಲ್ಲಿ, ವಿವಿಧ ರಾಜ್ಯಗಳಲ್ಲಿ / ಜಿಲ್ಲೆಗಳಲ್ಲಿ 120 ಹೆಕ್ಟೇರ್ ಪ್ರದೇಶದವರೆಗೂ ಗುಣಮಟ್ಟದ ಬೇಸಾಯದ ವಸ್ತುಗಳು ಮತ್ತು ಗುರುತಿಸಿದ ಸಸ್ಯ ಜಾತಿಗಳ ನಿರ್ಬಂದಿತ ಕೃಷಿಯನ್ನು ಸಾಧಿಸಲಾಗಿದೆ. ಇದಲ್ಲದೆ, 25 ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಅಪಾಯಕ್ಕೊಳಗಾದ (RET) ಜಾತಿಗಳ ಸಸ್ಯಗಳನ್ನು ಜಿನಿ ಬ್ಯಾಂಕಿಗಾಗಿ ಸಂಗ್ರಹಿಸಲಾಗಿದೆ .
ಕೆಟಲಿಸಿಸ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್ (ಸಿಎಸ್ ಡಿ) ಮಿಷನ್
ಭಾರತೀಯ ರಾಸಾಯನಿಕ ಉದ್ಯಮವು ಏಷ್ಯಾದಲ್ಲಿ 3ನೇ ಸ್ಥಾನದಲ್ಲಿದ್ದು ಪ್ರಪಂಚದಲ್ಲಿ 8ನೇ ಸ್ಥಾನದಲ್ಲಿದೆ. ಇದರ ಉತ್ಪಾದನೆಯ ಪ್ರಮಾಣ ಸುಮಾರು 100 ಶತಕೋಟಿ ಡಾಲರ್ನಷ್ಟಿದ್ದು ಭಾರತೀಯ ಒಟ್ಟು ದೇಶೀಯ ಉತ್ಪನ್ನಕ್ಕೆ 6.7% ರಷ್ಟು ಕೊಡುಗೆ ನೀಡುತ್ತದೆ. ರಾಸಾಯನಿಕ ಉದ್ಯಮವು ವಿಶ್ವದಾದ್ಯಂತ ಪಳೆಯುಳಿಕೆ ಪೂರಕ ವಸ್ತುಗಳ ಮೇಲೆ ಅವಲಂಬಿತವಾಗಿದೆ. ಭೌಗೋಳಿಕ ಕಾರಣಗಳಿಂದಾಗಿ, ಸೀಮಿತ ಲಭ್ಯತೆ ಮತ್ತು ಈ ಪೂರಕ ಬೆಲೆಗಳ ಏರಿಳಿತಗಳ ಕಾರಣದಿಂದಾಗಿ ನಮ್ಮ ಭವಿಷ್ಯದ ಅಗತ್ಯಗಳಿಗಾಗಿ ಅವುಗಳ ಮೇಲೆ ಅವಲಂಬಿತವಾಗಿರುವುದು ಅಪಾಯಕಾರಿಯಾಗಿರುತ್ತದೆ. ಹೀಗಾಗಿ, ರಾಸಾಯನಿಕಗಳು ಸಂಶ್ಲೇಷಣೆಗೆ ಪರ್ಯಾಯ ಮತ್ತು ನವೀಕರಿಸಬಹುದಾದ ಆಹಾರ ಸಾಮಗ್ರಿಗಳ ಮೇಲೆ ಗಮನ ಕೇಂದ್ರೀಕರಿಸುವುದು ಅವಶ್ಯ ವಾಗಿದೆ. ಈ ರೀತಿಯ ಕಾರ್ಯಕ್ರಮವು ಇಂತಹ ಪ್ರಮುಖ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಸಾಂಪ್ರದಾಯಿಕ ಪಳೆಯುಳಿಕೆ ಇಂಧನಗಳ ಬದಲಿಗೆ ನವೀಕರಿಸಬಹುದಾದ ಕಚ್ಚಾ ವಸ್ತುಗಳನ್ನು (ತಿನ್ನಲು ಯೋಗ್ಯವಲ್ಲದ ಬಯೋಮಾಸ್ ಜೀವರಾಶಿ, ಇಂಗಾಲದ ಡೈಆಕ್ಸೈಡ್ (CO2), ನೀರು ಮತ್ತು ಜೇಡಿಪದರಗಲ್ಲು (ನೈಸರ್ಗಿಕ) ಅನಿಲವನ್ನು ಬಳಸಿಕೊಂಡು ರಾಸಾಯನಿಕ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಸಿಎಸ್ ಐ ಆರ್ ಮಿಷನ್ ಮೋಡ್ ಯೋಜನೆಗೆ "ಕ್ಯಾಟಲಿಸಿಸ್ ಫಾರ್ ಸಸ್ಟೈನಬಲ್ ಡೆವಲಪ್ ಮೆಂಟ್ (ಸಿಎಸ್ ಡಿ)" ಎಂದು ಹೆಸರಿಸಿ 3 ವರ್ಷಗಳ ಅವಧಿಗಾಗಿ ಪ್ರಾರಂಭಿಸಲಾಗಿದೆ.
ನವೀನ ಪ್ರಕ್ರಿಯೆಗಳು ಮತ್ತು ತಂತ್ರಜ್ಞಾನಕ್ಕಾಗಿ ಇಂಡಿಯನ್ ಫಾರ್ಮಾಸ್ಯುಟಿಕಲ್ಸ್ ಅಂಡ್ ಆಗ್ರೋಕೆಮಿಕಲ್ ಇಂಡಸ್ಟ್ರೀಸ್ (ಐಎನ್ ಪಿ ಆರ್ ಒ ಟಿ ಐ ಸಿ ಎಸ್)
ಸಿ ಎಸ್ ಐ ಆರ್ ಸಂಸ್ಥೆಯು "ಭಾರತೀಯ ಔಷಧೀಯ ಮತ್ತು ಕೃಷಿ ರಾಸಾಯನಿಕ ಕೈಗಾರಿಕೆಗಳಿಗಾಗಿ ನವೀನ ಪ್ರಕ್ರಿಯೆಗಳು ಮತ್ತು ತಂತ್ರಜ್ಞಾನ (ಐಎನ್ ಪಿ ಆರ್ ಒ ಟಿ ಐ ಸಿ ಎಸ್ – ಔಷಧಿ ಮತ್ತು ಕೃಷಿ)" ದ ಮಿಷನ್ ಮೋಡ್ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಮುಖ ಔಷಧಿಗಳು ಮತ್ತು ಕೃಷಿರಾಸಾಯನಿಕಗಳಿಗೆ ಲಾಭದಾಯಕ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯು ಉದ್ದೇಶವಾಗಿದೆ. ಔಷಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಮುಕ್ತವಾಗಿರುವ ಹೊಸ ಅಥವಾ ಉಲ್ಲಂಘಿಸಲಾಗದ ಪ್ರಕ್ರಿಯೆಗಳು ಅಭಿವೃದ್ಧಿಗೊಳ್ಳುತ್ತವೆ. ಆದುದರಿಂದ, ಈ ಪ್ರಸ್ತಾಪವು 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಕೊಡಗ ನೀಡಲು ಮತ್ತು ದೇಶದ ಎಲ್ಲಾ ಭಾರತೀಯರಿಗೆ ಉತ್ತಮ ಆರೋಗ್ಯ ಮತ್ತು ಆಹಾರ ಭದ್ರತೆಗೆ ಸೇವೆ ಸಲ್ಲಿಸಲು ಬಯಸುತ್ತದೆ.
'ಮುಖ್ಯ ಸ್ಥಾವರಗಳ ಸುರಕ್ಷತೆ ಮತ್ತು ಭದ್ರತೆ” ಗಾಗಿ ' ಸಿಎಸ್ಐಆರ್ ನ ಮಿಷನ್
ಸಿಎಸ್ಐಆರ್ ಇತ್ತೀಚೆಗೆ 'ಮುಖ್ಯ ಸ್ಥಾವರಗಳ ಸುರಕ್ಷತೆ ಮತ್ತು ಭದ್ರತೆ” ಗಾಗಿ ಈ ಕೆಳಗಿನ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಒಂದು ಮಿಷನ್ (ಕಾರ್ಯಾಚರಣೆ) ಅನ್ನು ಪ್ರಾರಂಭಿಸಿದೆ. ಉತ್ತರಾಖಂಡ್ ನಲ್ಲಿ ಭೂಕಂಪನ ಅಪಾಯದ ಪರಿಮಾಣ ಅಧ್ಯಯನ, ವಾಯವ್ಯ ಹಿಮಾಲಯ ಪ್ರದೇಶಗಳಲ್ಲಿ ಬೆಟ್ಟ ಪ್ರದೇಶಗಳಲ್ಲಿನ ಪ್ರಮುಖ ಸ್ಥಾಪನೆಗಳ ಸುರಕ್ಷತೆಗಾಗಿ ಭೂಕುಸಿತದ ಅಪಾಯಗಳನ್ನು ತಗ್ಗಿಸುವ ದಟ್ಟ ಇಳಿಜಾರಿನ ಸ್ಥಿರೀಕರಣ ಕ್ರಮಗಳ ವಿನ್ಯಾಸ ಮತ್ತು ಅಭಿವೃದ್ಧಿ; ವಿಶೇಷವಾಗಿ ಭೂಕಂಪನ ಪೀಡಿತ ವಲಯಗಳಲ್ಲಿ ಆಸ್ಪತ್ರೆಗಳ ಸುರಕ್ಷತೆ; ನಿರ್ದಿಷ್ಟ ಅಪಾಯದಿಂದ ರಕ್ಷಿಸಿಕೊಳ್ಳಲು, ಸ್ಪೋಟ ಮತ್ತು ದಾಳಿ ನಿರೋಧಕ ಲೇಯರ್ಡ್ ಸಂರಚನೆಯೊಂದಿಗೆ ಹಾರ್ಡನ್ಡ್ ಏರ್ ಕ್ರಾಫ್ಟ್ ಶೆಲ್ಟರ್ (ವಿಮಾನಗಳ ಸುರಕ್ಷಾ ಆಶ್ರಯತಾಣ), ಸ್ಟ್ರಕ್ಚರಲ್ ಹೆಲ್ತ ಮಾನಿಟರಿಂಗ್ (ಎಸ್ ಎನ್ ಹೆಚ್) ಅಂದರೆ ನಿರ್ಮಾಣಗಳ/ ಕಟ್ಟಡಗಳ ಆರೋಗ್ಯ ನಿಗಾ ವಹಿಸುವಿಕೆಯ ವಿನ್ಯಾಸವನ್ನು ವಿಕಸಿಸಲು; ಸ್ಮಾರ್ಟ್ ವೀಡಿಯೊ ಕ್ಯಾಮೆರಾ ಸಿಸ್ಟಮ್, ಸ್ಮಾರ್ಟ್ ವೀಡಿಯೊ ಕಣ್ಗಾವಲು ವ್ಯವಸ್ಥೆ, ಹೊರಗಿನವರನ್ನು ಗುರುತಿಸಲು ರಿಯಲ್-ಟೈಮ್ ಸಿಸ್ಟಮ್ ಒಳಗೊಂಡಿರುವ ನವೀನ ಪರಿಹಾರಗಳನ್ನು ಒಳಗೊಂಡಿವೆ. ಇಂಟೆಲಿಜೆಂಟ್ ಸೆನ್ಸರ್ ವಿಧಾನವನ್ನು ಆಧರಿಸಿ ಬಾರ್ಡರ್ ಭದ್ರತಾ ನಿರ್ವಹಣಾ ವ್ಯವಸ್ಥೆ; ಮತ್ತು ಪರಿಸ್ಥಿತಿಗನುಗುಣವಾಗಿ ಬೇಕಾಗಿರುವ ಅಗ್ನಿ ಸುರಕ್ಷತೆ ಮತ್ತು ಆಸ್ಪತ್ರೆಗಳಿಗೆ ಭದ್ರತಾ ಪರಿಹಾರಗಳ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಸಕ್ರಿಯ ‘ಫೈರ್ ಪ್ರೊಟೆಕ್ಷನ್ ಸಿಸ್ಟಮ್ ‘ ಅನ್ನು ಸ್ಥಾಪಿಸಲಾಗಿದೆ.
ಸಿಎಸ್ಐಆರ್ ಈಗಾಗಲೇ ಡೆಹ್ರಾಡೂನ್ ನಗರದ ಭೂಕಂಪದ ಅಪಾಯ ಸೂಚ್ಯಂಕ ನಕ್ಷೆ ಸಿದ್ಧಪಡಿಸಿದೆ ಅದರ ಪರಿಣಾಮವಾಗಿ ನಿರೀಕ್ಷಿತ ಭೂಕಂಪದ ಘಟನೆಯ ಪರಿಣಾಮಗಳನ್ನು ಎದುರಿಸಲು ಬಳಸಬಹುದಾಗಿದೆ.
ತ್ವರಿತ, ಬಾಳಿಕೆ ಬರುವ ಮತ್ತು ಶಕ್ತಿಯ ಉಳಿತಾಯದ ಸಾಮೂಹಿಕ ಗೃಹ ನಿರ್ಮಾಣ ಯೋಜನೆಯ ಅಭಿವೃದ್ಧಿಗಾಗಿ ಸಿಎಸ್ಐಆರ್ ಮಿಷನ್
ಸಾಮೂಹಿಕ ಗೃಹ ನಿರ್ಮಾಣ ಯೋಜನೆಗಾಗಿ ತ್ವರಿತ, ಬಾಳಿಕೆ ಬರುವ, ಕೈಗೆಟುಕುವ ಬೆಲೆಯ, ಶಕ್ತಿಯ ಉಳಿತಾಯದ ಕಟ್ಟಲು ಪೂರ್ವತಯಾರಾದ ತಂತ್ರಜ್ಞಾನ ವನ್ನು ಹೊಂದಿರುವವರ ಪಾಲುದಾರಿಕೆಯಲ್ಲಿ ಅಭಿವೃದ್ಧಿ ಪಡಿಸುವುದು ಮತ್ತು ಅಳವಡಿಸುವುದು ಈ ಮಿಷನ್ ನ ಗುರಿಯಾಗಿದೆ. ಪೂರ್ವರಚಿತ ಫಲಕಗಳ ಸಮರ್ಥ ವಿನ್ಯಾಸವನ್ನು ಅಭಿವೃದ್ಧಿಪಡಿಸಿ, ತ್ವರಿತ, ಬಾಳಿಕೆ ಬರುವ, ಶಕ್ತಿಯ ಪರಿಣಾಮಕಾರಿ ಮತ್ತು ಸಾಮೂಹಿಕ ವಸತಿಗ ನಿರ್ಮಾಣಕ್ಕಾಗಿ ಆದ್ಯತಾ ತಂತ್ರಜ್ಞಾನಗಳು, ಲಘು ತೂಕ (50% ಕಡಿತ), ಸುಧಾರಿತ ಅಗ್ನಿಯ ಮಾಪನ (ಕನಿಷ್ಟ 2 ಗಂಟೆಗಳು), ಬಾಳಿಕೆ (70-80 ವರ್ಷಗಳು), ವೆಚ್ಚವನ್ನು ಕಡಿಮೆಗೊಳಿಸುತ್ತದೆ (25% ಕಡಿಮೆ ಕನಿಷ್ಟ ಬೆಲೆಗೆ ಹೋಲಿಸಿದರೆ) 16-19 ದಿನಗಳಿಗೆ ಹೋಲಿಸಿದರೆ 5-7 ದಿನಗಳ ಕಡಿಮೆ ಸಮಯದೊಂದಿಗೆ ಲಭ್ಯವಿದೆ. ದೇಶಾದ್ಯಂತದ ವಿವಿಧ ಭೂ-ಹವಾಮಾನ ಪ್ರದೇಶಗಳಲ್ಲಿ ಸಾಮಾಜಿಕ-ಸಾಂಸ್ಕೃತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಮೂಹಿಕ ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ತರಬೇತಿ ಮತ್ತು ಅಗತ್ಯವಾದ ನಿಯೋಜನೆಗಳ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನ ( ತಂತ್ರಜ್ಞಾನಗಳು) / ಜ್ಞಾನ ವನ್ನು 3ಡಿ ವರ್ಚುವಲ್ ಪ್ರದರ್ಶನಗಳು ಮತ್ತು ಪ್ರೊಟೊಟೈಪ್ ಡೆಮೊ ಘಟಕಗಳಿಂದ ಪ್ರದರ್ಶಿಸಲಾಗುತ್ತದೆ.
ಸಿಎಸ್ಐಆರ್ ಮಿಷನ್ ವತಿಯಿಂದ ಸೂಕ್ಷ್ಮ ಮೂಲಸೌಕರ್ಯಗಳ ಸಧೃಡ ಗಮನಹರಿಸುವಿಕೆ ಮತ್ತು ಪಾರಂಪರಿಕ ಕಟ್ಟಡ ಸ್ಥಾವರಗಳ ಸಂರಕ್ಷಣೆ ಮತ್ತು ಮರುಸ್ಥಾಪನೆಗಾಗಿ ತಂತ್ರಜ್ಞಾನ (ರೋಬಸ್ಟ್ ಸ್ಟ್ರಕ್ಚರಲ್ ಹೆಲ್ತ್ ಮಾನಿಟರಿಂಗ್)
ಈ ಮಿಷನ್ ಎರಡು ವಿಭಾಗಗಳನ್ನು (ವರ್ಟಿಕಲ್ಸ್) ಒಳಗೊಂಡಿದೆ, ಅವುಗಳು ಯಾವುವೆಂದರೆ ರೋಬಸ್ಟ್ ಸ್ಟ್ರಕ್ಚರಲ್ ಹೆಲ್ತ್ ಮಾನಿಟರಿಂಗ್ ಫಾರ್ ಕ್ರಿಟಿಕಲ್ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್ ಮೆಂಟ್ (ವರ್ಟಿಕಲ್ 1) ಮತ್ತು ಪಾರಂಪರಿಕ ಕಟ್ಟಡ ಸ್ಥಾವರಗಳ ಸಂರಕ್ಷಣೆ ಮತ್ತು ಮರುಸ್ಥಾಪನೆ (ವರ್ಟಿಕಲ್ 2). ಮಿಷನ್ ವರ್ಟಿಕಲ್ 1 , ಸೂಕ್ಷ್ಮ ಮೂಲಸೌಕರ್ಯಗಳ ಸಧೃಡ ಗಮನಹರಿಸುವಿಕೆಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ. ಇದು ಅಡ್ವಾನ್ಸ್ಡ್ ಸಿಗ್ನಲ್ ಪ್ರಕ್ರಿಯೆ, ಐಒಟಿ ಮತ್ತು ಕ್ಲೌಡ್ ಹೊಂದಿರುವ ತಂತ್ರಜ್ಞಾನವನ್ನು ಹೊಂದಿ ಕಟ್ಟಡಗಳ ಹಾನಿಯ ಬಗ್ಗೆ ಮೊದಲೇ ಪತ್ತೆ ಹಚ್ಚುತ್ತದೆ. ಮಿಷನ್ ನ ವರ್ಟಿಕಲ್ 2 ಸಂರಕ್ಷಣೆ ಮತ್ತು ಪರಂಪರಾಗತ ರಚನೆಗಳ / ಕಟ್ಟಡಗಳ ಪುನಃಸ್ಥಾಪನೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಭಾರತದಲ್ಲಿ ಪರಂಪರಾಗತ ರಚನೆಗಳ ಸಂರಕ್ಷಣೆ ಮತ್ತು ಮರುಸ್ಥಾಪನೆಗಾಗಿ ಗೊತ್ತುವಳಿಯನ್ನು ಸಹ ಸಿದ್ಧಪಡಿಸಲಾಗುವುದು.
ಜಲರ ಹಿತ ಕ್ರೋಮ್ ಚರ್ಮ ಹದಮಾಢುವ ತಂತ್ರಜ್ಞಾನ - ತಂತ್ರಜ್ಞಾನದಲ್ಲಿಯೇ ಒಂದು ಮಹತ್ತರ ತಿರುವು
ಸುಮಾರು 2 ಶತಕೋಟಿ ಚದರ ಅಡಿ ಚರ್ಮವನ್ನು ತಯಾರಿಸುವ ಭಾರತದಲ್ಲಿ ಕ್ರೋಮಿಯಂ ಒಂದು ಹೆಚ್ಚು ಬೇಡಿಕೆಯಲ್ಲಿರುವ ವಸ್ತುವಾಗಿದೆ. ಸುಮಾರು 20 ಸಾವಿರ ಟನ್ ಕ್ರೋಮ್ ಟ್ಯಾನಿಂಗ್ ವಸ್ತುವು ತ್ಯಾಜ್ಯನೀರಿನಲ್ಲಿ ಬಿಡಲಾಗುತ್ತಿದೆ. ಈ ಸಮಸ್ಯೆಯನ್ನು ನಿಭಾಯಿಸಲು, ಸಿಎಸ್ಐಆರ್-ಸಿಎಲ್ಆರ್ಐ ಜಲರಹಿತ ಕ್ರೋಮ್ ಟ್ಯಾನಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
ಜಲರಹಿತ ಚರ್ಮದ ತಂತ್ರಜ್ಞಾನವು ಈಗ ಸಂಪೂರ್ಣ ಭಾರತದಲ್ಲಿ ಮೆಚ್ಚುಗೆಯನ್ನು ಪಡೆದಿದೆ. ಇದರ ಅಳವಡಿಕೆಗಾಗಿ ಎಲ್ಲಾ ಸಮೂಹಗಳಲ್ಲಿರುವ ಟ್ಯಾನರ್ಗಳೂ ಸೇರ್ಪಡೆಯಾಗುತ್ತಿವೆ. ದೇಶದಲ್ಲಿ ಸುಮಾರು 50 ಟ್ಯಾನರಿಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಸಿಎಲ್ಆರ್ಐ ನ ಮೂಲಕ ಸಿಎಸ್ಐಆರ್ ನಿಂದ ಬಂದ ನಿಜವಾಗಿಯೂ ಇದೊಂದು ಮಹತ್ತರವಾದ ಬದಲಾವಣೆಯ ತಂತ್ರಜ್ಞಾನ,
ಶೂನ್ಯ ದ್ರವ ಬಿಡುಗಡೆಯ ಚರ್ಮದ ತಂತ್ರಜ್ಞಾನ
ಎಲೆಕ್ಟ್ರೋ-ಆಕ್ಸಿಡೀಕರಣ (ಇ ಒ) ಆಧಾರದ ಮೇಲೆ ಶೂನ್ಯ ತ್ಯಾಜ್ಯನೀರಿನ ಬಿಡುಗಡೆ ಪ್ರಕ್ರಿಯೆಯ ತಂತ್ರಜ್ಞಾನವನ್ನು ಚರ್ಮದ ಉತ್ಪಾದನಾ ಪ್ರಕ್ರಿಯೆಯ ಮೊದಲ ಭಾಗಕ್ಕೆ ಪೂರ್ವ-ಟ್ಯಾನಿಂಗ್ ಪ್ರಕ್ರಿಯೆಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಸಂಭಾವ್ಯ ಪರಿಸರದ ಲಾಭಗಳು ಮತ್ತು ಸಂಭಾವ್ಯ ಸಾಮಾಜಿಕ ಪರಿಣಾಮಗಳು ಭಾರತಕ್ಕೆ ಸೇರಿರುವವದಾವುದೆಂದರೆ: ಚರ್ಮ ಕೈಗಾರಿಕೆಗಳಿಂದ (ಟ್ಯಾನಿರಿಗಳಿಂದ) ತ್ಯಾಜ್ಯನೀರಿನ ವಿಸರ್ಜನೆ ಇರುವುದಿಲ್ಲ; ತ್ಯಾಜ್ಯ ಜಲ ಸಂಸ್ಕರಣೆಯ ವೆಚ್ಚದಲ್ಲಿನ ಕಡಿತದಿಂದ ಸಂಭವನೀಯ ಕಡಿತ ವೆಚ್ಚ ವರ್ಷಕ್ಕೆ 96 ದಶಲಕ್ಷ ರೂಪಾಯಿಗಳು; ಈ ವ್ಯವಸ್ಥೆಯಿಂದ ಕೆಸರು ಉತ್ಪಾದನೆಯಾಗುವುದಿಲ್ಲ (ವರ್ಷಕ್ಕೆ ಸುಮಾರು 160 ಟನ್ ಗಳಷ್ಟು ಕೆಸರು ಉತ್ಪಾದನೆಯಾಗುತ್ತದೆ) ಮತ್ತು ಹೈಡ್ರೋಜನ್ ಸಲ್ಫೈಡ್ ಬಿಡುಗಡೆಯಿಂದಾಗುವ ಸಾವು ಸರಾಸರಿ ವಾರ್ಷಿಕವಾಗಿ ಕಡಿಮೆಯಾಗುತ್ತದೆ. ಈ ತಂತ್ರಜ್ಞಾನವನ್ನು ಲಿಯಾನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್, ಕಾನ್ಪುರ; ರಾಯಲ್ ಟ್ಯಾನರ್ಸ್, ಕಾನ್ಪುರ್ ಮತ್ತು ಎಎನ್ ಲೆದರ್ಸ್ ಪ್ರೈವೇಟ್ ಲಿಮಿಟೆಡ್, ಆಗ್ರಾ. ಈ ಕಂಪನಿಗಳಿಗೆ ವರ್ಗಾಯಿಸಲಾಗಿದೆ.
ಹಸಿ ಚರ್ಮ ಮತ್ತು ಕತ್ತರಿಸಿದ ಚರ್ಮಗಳ ತ್ಯಾಜ್ಯಗಳಿಂದ ಉತ್ತಮ ದರ್ಜೆಯ ಹೈ ಗ್ರೇಡ್ ಜೆಲಟಿನ್ ಮತ್ತು ಪ್ರೋಟೀನ್ ಹೈಡ್ರೊಲೈಸೇಟ್
ಜೆಲಟಿನ್ ಅನ್ನು ವ್ಯಾಪಕವಾಗಿ ಔಷಧೀಯ ಉದ್ಯಮದಲ್ಲಿ ಔಷಧಿಗಳಿಗೆ ಕ್ಯಾಪ್ಸುಲ್ ಗಳನ್ನು ಮತ್ತು ಆಹಾರ ಉದ್ಯಮದಲ್ಲಿ ಜೆಲ್ಲಿ ಕ್ಯಾಂಡೀಸ್, ಐಸ್ ಕ್ರೀಮ್ ಮತ್ತು ಕೇಕ್ ಮತ್ತು ಸೂಪ್ ನಲ್ಲಿ ದಪ್ಪವಾಗಿಸುವ ವಸ್ತುವಾಗಿ ಬಳಸಲಾಗುತ್ತದೆ. ಚರ್ಮ ಸಂಸ್ಕರಣೆಯು ದೊಡ್ಡ ಪ್ರಮಾಣದ ಕಚ್ಚಾ ಚರ್ಮದ ಚೂರುಗಳ ತ್ಯಾಜ್ಯಗಳನ್ನು ಉತ್ಪಾದಿಸುತ್ತದೆ. ಸಿಎಸ್ಐಆರ್-ಸಿಎಲ್ಆರ್ಐ ಉನ್ನತ ದರ್ಜೆಯ ಜೆಲಟಿನ್ ಅನ್ನು ಕಚ್ಚಾಚರ್ಮದಿಂದ ಕತ್ತರಿಸಿ ಉಳಿದ ಚರ್ಮಗಳಿಂದ ತಯಾರಿಸಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಸಿಎಸ್ಐಆರ್-ಸಿಎಲ್ಆರ್ಐ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಕತ್ತರಿಸಿ ಉಳಿದ ಚರ್ಮಗಳಲ್ಲಿ ಇರುವ ಪ್ರೋಟೀನ್ ಘಟಕಗಳ ಸಂಪೂರ್ಣ ಬಳಕೆಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಜ್ಞಾನವನ್ನು ಪ್ರತ್ಯೇಕವಾಗಿ ಭಾರತದಲ್ಲಿ ಜೆಲಟಿನ್ ಮತ್ತು ಪ್ರೋಟೀನ್ ಹೈಡ್ರೊಲೈಸೆಟ್ ತಯಾರಿಸಲು ಒಂದು ಕೋಟಿ ರೂಪಾಯಿಗಳಿಗೆ ಅನಿಪ್ರೋ ಮ್ಯಾನುಫ್ಯಾಕ್ಚರಿಂಗ್ ಕಂಪನಿಯವರಿಗೆ ಪರವಾನಗಿ ನೀಡಲಾಗಿದೆ.
ಕಲ್ಲಿದ್ದಲು ಧೂಳು ಸಂಗ್ರಹಿಸುವುದು ಮತ್ತು ಕಲ್ಲಿದ್ದಲಿನ ಇಟ್ಟಿಗೆ ತಯಾರಿಸುವ ವ್ಯವಸ್ಥೆ
ಗಣಿ ರಸ್ತೆಗಳಿಂದ ಧೂಳನ್ನು ಸಂಗ್ರಹಿಸಲು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಮಾತ್ರವಲ್ಲದೇ ಸ್ಥಳೀಯ ಜನಸಂಖ್ಯೆಯ ಆರೋಗ್ಯವನ್ನು ಸುಧಾರಿಸಲು ಪರ್ಯಾಯ ಬಳಕೆಗೆ ಇದು ಸೂಕ್ತವಾದದ್ದು. ರಸ್ತೆ ಧೂಳು ಸಂಗ್ರಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸಿಎಸ್ಐಆರ್-ಸ ಐಎಮ್ಎಫ್ಆರ್ ಪೇಟೆಂಟ್ ತಂತ್ರಜ್ಞಾನವನ್ನು ಟಾಟಾ ಮೋಟರ್ಸ್ ಲಿಮಿಟೆಡ್, ಮುಂಬೈಗೆ ವರ್ಗಾಯಿಸಲಾಗಿದೆ.
ಸ್ಮಾರ್ಟ್ ವಿದ್ಯುತ್ ಮೀಟರ್
ಸಿಎಸ್ಐಆರ್-ಸಿಎಸ್ಐಒ, ಚಂಡೀಗಢ ಸ್ಮಾರ್ಟ್ ವಿದ್ಯುತ್ ಮೀಟರ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಇಂತಹ ಮೀಟರ್ ಶ‍್ರೇಣಿಯಲ್ಲಿಯೇ ಮೊದಲನೆಯದಾಗಿದೆ, ಸ್ಥಳೀಯವಾಗಿ ತಯಾರಿಸಲ್ಪಟ್ಟಿದೆ ಮತ್ತು ಸ್ವಯಂ-ನಿರ್ವಹಣೆ ಹೊಂದಿದೆ. ಹೊಸ ಮೀಟರ್ ಬೆಲೆ ಈಗಿರುವ ಮೀಟರ್ ಗಿಂತ ಐದು ಪಟ್ಟು ಕಡಿಮೆಯಿದೆ ಮತ್ತು ಭಾರತೀಯ ಹವಾಮಾನಕ್ಕೆ ಸೂಕ್ತವಾಗಿದೆ. ಈ ಮೀಟರ್ ಪ್ರತಿ ಗಂಟೆಗೆ ಒಂದು ನೈಜವಾದ ಸಮಯದ ದತ್ತಾಂಶವನ್ನು ನೀಡುತ್ತದೆ. ಈ ತಂತ್ರಜ್ಞಾನವನ್ನು ಮುಂಬೈನಲ್ಲಿ ರುವ ಅತ್ಸುಯ ಟೆಕ್ನಾಲಜೀಸ್ ಗೆ ವರ್ಗಾಯಿಸಲಾಗಿದೆ
ರಕ್ಷಣಾ ಸಿಬ್ಬಂದಿಗಾಗಿ ಶಾರ್ಪ್ ಶೂಟಿಂಗ್ ಕೌಶಲ್ಯಕ್ಕಾಗಿ ಹೆಚ್ಚಿನ ತರಬೇತಿ
ಸಿಎಸ್ಐಆರ್-ಎನ್ಎಎಲ್, ಬೆಂಗಳೂರು ಎಲೆಕ್ಟ್ರಾನಿಕ್ ಟಾರ್ಗೆಟ್ ಸಿಸ್ಟಮ್ (ಇಟಿಎಸ್) ಅನ್ನು ಬೆಂಗಳೂರಿನ ಬಿಇಎಲ್ ಜೊತೆ ಸೇರಿ ವಿನ್ಯಾಸಗೊಳಿಸಿದೆ,. ಇದು ಪೊಲೀಸ್, ಅರೆಸೈನಿಕ ಮತ್ತು ರಕ್ಷಣಾ ಸಿಬ್ಬಂದಿಗಳಿಗೆ ಚಿಕ್ಕ ಬಂದೂಕುಗಳನ್ನು ಚಲಾಯಿಸಲು ಮತ್ತು ಯುದ್ಧ ತಂತ್ರದಲ್ಲಿ ಕೌಶಲ್ಯವನ್ನು ಹುರಿಗೊಳಿಸಲು ಬಳಸಬಹುದಾಗಿದೆ
ಫೈಟೊಫಾರ್ಮಾಸ್ಯುಟಿಕಲ್ ಗ್ಲೂಕೊಕಾರ್ತೆಕಾಯ್ಡ್ ಇಂಡ್ಯೂಸ್ಡ್ ಆಸ್ಟಿಯೊಪೊರೋಸಿಸ್
ಜಾಗತಿಕವಾಗಿ ಗ್ಲುಕೊಕಾರ್ಟಿಕೋಯ್ಡ್ ಆಸ್ಟಿಯೊಪೊರೋಸಿಸ್ಗೆ (ಅಸ್ಥಿರಂಧ್ರತೆ , ಮೂಳೆಯ ಕಾಯಲೆ) ರೋಗಕ್ಕೆ ಮೂರನೇ ದೊಡ್ಡ ಕಾರಣವಾಗಿದೆ. ಸಿಎಸ್ಐಆರ್-ಸಿಡಿಆರ್ಐ ಯು ಗ್ಲೂಕೊಕಾರ್ತೆಕಾಯ್ಡ್ ಇಂಡ್ಯೂಸ್ಡ್ ಆಸ್ಟಿಯೊಪೊರೋಸಿಸ್ನ ಮತ್ತು ಸ್ನಾಯುವಿನ ಕೃಶತೆಯ ಚಿಕಿತ್ಸೆಗಾಗಿ ಕ್ಯಾಸಿಯ ಆಕ್ಸಿಡೆಂಟಲಿಸ್ ಲಿನ್ ನ ಪ್ರಮಾಣೀಕೃತ ಭಾಗವನ್ನು ಅಭಿವೃದ್ಧಿಪಡಿಸಿದೆ. ಪೈತೋಫಾರ್ಮಾಸ್ಯೂಟಿಕಲ್ ಔಷಧಿಯಾಗಿ ಮತ್ತಷ್ಟು ಅಭಿವೃದ್ಧಿಗಾಗಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ತಂತ್ರಜ್ಞಾನವನ್ನು ಗುಜರಾತಿನ ಫಾರ್ಮಾಂಜಾ ಹರ್ಬಲ್ಸ್ ಪ್ರೈವೇಟ್ ಲಿಮಿಟೆಡ್ ಗೆ ಪರವಾನಗಿ ನೀಡಲಾಗಿದೆ. ಈ ಉತ್ಪನ್ನವು ಫೈಟೋ-ಫಾರ್ಮಾಸ್ಯೂಟಿಕಲ್ ಮೋಡ್ ನಲ್ಲಿ ಅಭಿವೃದ್ಧಿಯಾಗುತ್ತಿದೆ ಮತ್ತು ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರ ಅಗತ್ಯ ಅಧ್ಯಯನಗಳು ಮುಗಿದ ನಂತರ ಭಾರತೀಯ ಮತ್ತು ಅಮೇರಿಕಾದ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ
ಹೆಚ್ಚಿನ ತಾಪಮಾನದ ಪ್ಲಾಸ್ಮಾವನ್ನು ಬಳಸಿಕೊಂಡು ಮುನಿಸಿಪಲ್ ಘನ ತ್ಯಾಜ್ಯದ ಸುರಕ್ಷಿತ ವಿಲೇವಾರಿ
ಪರಿಣಾಮಕಾರಿ ಮತ್ತು ಪರಿಸರ-ಸ್ನೇಹಿ ವಿಲೇವಾರಿಗಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಧಾನವಾಗಿ CO (ಕಾರ್ಬನ್ ಮೋನಾಕ್ಸೈಡ್ ) ಮತ್ತು H2( ಹೈಡ್ರೋಜನ್2) ಒಳಗೊಂಡಿರುವ ಇಂಧನ ಅನಿಲದ ಉತ್ಪಾದನೆಯನ್ನು ಪ್ರತಿದಿನವೂ ಪಡೆಯುವ ಪುರಸಭೆಯ ಘನ ತ್ಯಾಜ್ಯ ವಸ್ತು ಪ್ಲಾಸ್ಮಾ ಆರ್ಕ್ ನ ಹೆಚ್ಚಿನ ತಾಪಮಾನವನ್ನು (>30000 C) ಬಳಸಿ ಮಾಡಲಾಗುತ್ತದೆ . ಈ ತಂತ್ರಜ್ಞಾನದ ಪರವಾನಗಿಯನ್ನು 5 ವರ್ಷಗಳ ಅವಧಿಯವರೆಗೆ ವಾಣಿಜ್ಯೋದ್ಯಮಕ್ಕಾಗಿ ವಿಶೇಷವಾದ ಆಧಾರದ ಮೇಲೆ ಪೋಸಿಟ್ರಾನಿಕ್ಸ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್, ಕೊಲ್ಕತ್ತಾ , ಪಶ್ಚಿಮ ಬಂಗಾಳದವರಿಗೆ ನೀಡಲಾಗಿದೆ.
ಕಡಿಮೆ ಭೂಭಾಗವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಗೆ ಸೌರ ಮರ / ಕಲಾಕೃತಿಗಳ ಅಭಿವೃದ್ಧಿ
ಸೌರ ಶಕ್ತಿ ಮರವು ಸೌರ ಶಕ್ತಿಯನ್ನು ಉತ್ಪಾದಿಸುವುದಕ್ಕಾಗಿ ಭವಿಷ್ಯದಲ್ಲಿ ನೆಲದ ಲಭ್ಯತೆಯ ಪ್ರಶ್ನೆಗೆ ಇರುವ ಪರಿಪೂರ್ಣ ಪರಿಹಾರವಾಗಿದೆ - ಇದು ಸಾಂಪ್ರದಾಯಿಕ ವ್ಯವಸ್ಥೆಗಳಿಂದ ತೆಗೆದುಕೊಳ್ಳುವ ಒಂದು ಸಣ್ಣ ಭಾಗವನ್ನು ಮಾತ್ರ ತೆಗೆದುಕೊಳ್ಳುತ್ತದೆ. ಸೌರ ತಂತ್ರಜ್ಞಾನವನ್ನು ಬೆಳಕಿಗೆ ತರಲು ಮತ್ತು ಸ್ಥಳದ ಸೌಂದರ್ಯವನ್ನು ಹೆಚ್ಚಿಸಲು ಸಿಎಸ್ಐಆರ್-ಸಿಎಮ್ ಇಆರ್ಐ ಸೌರ ಕಲಾಕೃತಿಗಳನ್ನು ಅಭಿವೃದ್ಧಿಪಡಿಸಿದೆ.
ಆಟಪತ್ರಮ್ 1 k.Wp. ಸಾಮರ್ಥ್ಯವನ್ನು ಹೊಂದಿದೆ ಮತ್ತು 3 ಗಂಟೆಗಳವರೆಗೆ 0.5 k.Wp ವಿದ್ಯುತ್ ಒದಗಿಸಬಹುದು. ಕಡಲ ತೀರಗಳಲ್ಲಿ, ನದಿ ತೀರಗಳಲ್ಲಿ, ಉದ್ಯಾನವನಗಳಲ್ಲಿ ಮತ್ತು ಬಂಗಲೆಗಳ ಹುಲ್ಲುಹಾಸುಗಳ ಮೇಲೆ ಇದನ್ನು ಅಳವಡಿಸಬಹುದಾಗಿದೆ.
ಸೋಲಾರ್ ಫ್ಲೋರಾ 3 k.Wp. ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದನ್ನು ರಸ್ತೆ ಬದಿಯಲ್ಲಿ, ಉದ್ಯಾನವನಗಳಲ್ಲಿ ಮತ್ತು ಇತರ ದೂರದ ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿಯನ್ನು ಒದಗಿಸಲು ಅಳವಡಿಸಬಹುದಾಗಿದೆ.
ಸೂರ್ಯ ಬನಸ್ಪತಿ 5 k.Wp. ಸಾಮರ್ಥ್ಯವನ್ನು ಹೊಂದಿದೆ ಮತ್ತು ರಸ್ತೆ ಬದಿಯಲ್ಲಿ, ಉದ್ಯಾನವನಗಳಲ್ಲಿ ಮತ್ತು ಇತರ ದೂರದ ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿಯನ್ನು ಒದಗಿಸಲು ಅಳವಡಿಸಬಹುದಾಗಿದೆ.
ಈ ತಂತ್ರಜ್ಞಾನವನ್ನು ವಾಣಿಜ್ಯೀಕರಣಕ್ಕಾಗಿ 9 ಕಂಪನಿಗಳಿಗೆ 5 ವರ್ಷಗಳ ಅವಧಿಗೆ ವರ್ಗಾಯಿಸಲಾಗಿದೆ.
ಬುದ್ದಿವಂತ ಮತ್ತು ವಿದ್ಯುತ್ ಚಾಲಿತ ಗಾಲಿಕುರ್ಚಿ
ಸಿಎಸ್ಐಆರ್-ಸಿಎಮ್ಇಆರ್ಐ ಅಭಿವೃದ್ಧಿ ಪಡಿಸಿದ ಈ ವ್ಯವಸ್ಥೆಯು ವಿಕಲಚೇತನರಿಗೆ, ಓಡಾಡುವುದಕ್ಕಾಗಿ ಮತ್ತು ಪುನರ್ವಸತಿ ಉದ್ದೇಶಕ್ಕಾಗಿ ವೃದ್ಧರಿಗೆ ಅಪಾರ ಸಾಮಾಜಿಕ ಮೌಲ್ಯವನ್ನು ಹೊಂದಿದೆ. ಬುದ್ದಿವಂತ ಮತ್ತು ವಿದ್ಯುತ್ ಚಾಲಿತ ಗಾಲಿಕುರ್ಚಿಯ ವಿನ್ಯಾಸವು ಯಾವುದೇ ಕಿರಿದಾರಿಯಲ್ಲಿ 360 ಡಿಗ್ರಿಗಳಷ್ಟು ತಿರುಗಳು ಸುಧಾರಿತ ಚಲನಶೀಲತೆ ಮತ್ತು ಸ್ಥಿರತೆ ಮತ್ತು ಸಾಮರ್ಥ್ಯವನ್ನು ಒದಗಿಸುತ್ತದೆ. ಈ ತಂತ್ರಜ್ಞಾನವನ್ನು ಭಾರತೀಯ ಉದ್ಯಮವೊಂದಕ್ಕೆ 5 ವರ್ಷಗಳ ಕಾಲ ವಾಣಿಜ್ಯೀಕರಣಕ್ಕಾಗಿ ವರ್ಗಾಯಿಸಲಾಗಿದೆ.
ಗ್ರ್ಯಾಫೀನ್ ಆಕ್ಸೈಡ್ನ ನದೊಡ್ಡ ಪ್ರಮಾಣದ ಉತ್ಪಾದನೆ
ಗ್ರ್ಯಾಫೀನ್ ಆಕ್ಸೈಡ್ ಅನ್ನು ಶಕ್ತಿಯ ಶೇಖರಣಾ ಸಾಧನಗಳು, ಪಾಲಿಮರ್ ಸಂಯುಕ್ತಗಳು, ನೀರಿನ ಶುದ್ಧೀಕರಣ, ಶಾಯಿ, ನೀರಿನ ಮೂಲದ ಲ್ಯೂಬ್ರಿಕೆಂಟ್, ನ್ಯಾನೊ- ಕೂಲಂಟ್, ಆಡಿಟಿವ್ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ . ಗ್ರ್ಯಾಫೀನ್ ಆಕ್ಸೈಡ್ ಪರಿಸರಕ್ಕೆ ವಿಷಕಾರಿ ಮತ್ತು ಅಪಾಯಕಾರಿಯಲ್ಲ. ವಾಣಿಜ್ಯಿಕವಾಗಿ ಲಭ್ಯವಿರುವ ಗ್ರ್ಯಾಫೀನ್ ಆಕ್ಸೈಡ್ ನ ಬೆಲೆ ಬಹಳ ಹೆಚ್ಚಾಗಿದೆ ಮತ್ತು ಗುಣಮಟ್ಟವನ್ನು ರಾಜಿ ಮಾಡದೆ ಸಮಂಜಸವಾದ ಬೆಲೆಗೆ ಗ್ರ್ಯಾಫೀನ್ ಆಕ್ಸೈಡ್ನ ಉತ್ಪಾದನೆಯು ಸವಾಲಿನ ವಿಷಯವಾಗಿದೆ. ಸಿಎಸ್ಐಆರ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ಗ್ರ್ಯಾಫೀನ್ ಆಕ್ಸೈಡ್ನ ನೈಸರ್ಗಿಕ ಫ್ಲೇಕ್ ಗ್ರಾಫೈಟ್ ನಿಂದ ಉತ್ಪಾದಿಸುವುದನ್ನು ಪ್ರದರ್ಶಿಸುತ್ತದೆ. ಈ ತಂತ್ರಜ್ಞಾನವನ್ನು 5 ವರ್ಷಗಳ ಅವಧಿಗೆ ವಾಣಿಜ್ಯೀಕರಣಕ್ಕಾಗಿ ಭಾರತೀಯ ಉದ್ಯಮವೊಂದಕ್ಕೆ ವರ್ಗಾಯಿಸಲಾಗಿದೆ.
ಸಲೈವರಿ (ಎಂಜಲು) ಫ್ಲೋರೈಡ್ ಡಿಟೆಕ್ಷನ್ ಕಿಟ್
ಸ್ಥಳೀಯ ಸಲೈವರಿ ಫ್ಲೋರೈಡ್ ಮಟ್ಟ ಪತ್ತೆ ಮಾಡುವ ಕಿಟ್ ಮತ್ತು ಸಂವೇದಕ ಸಾಧನವು ಸಮಾಜದ ಕಲ್ಯಾಣ ಮತ್ತು ಉತ್ತಮತೆಗಾಗಿ ಸಲೈವರಿ ಫ್ಲೋರೈಡ್ ಮಟ್ಟವನ್ನು ಪತ್ತೆಹಚ್ಚಲು ಅಭೂತಪೂರ್ವವಾಗಿದೆ. ಇದು ಡೆಂಟಲ್ ಕ್ಯಾರೀಸ್ನಿಂದ ರಕ್ಷಿಸುತ್ತದೆ; ರೀ-ಮಿನರಲೈಸೇಷನ್ ಮಾಡುತ್ತದೆ; ದಂತಕ್ಷಯದ ವಿರುದ್ಧ ರಕ್ಷಿಸುತ್ತದೆ; ಮತ್ತು ಅಕಾಲಿಕ ಹಲ್ಲಿನ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ. ಈ ತಂತ್ರಜ್ಞಾನವನ್ನು ಎರಡು ಭಾರತೀಯ ಉದ್ಯಮಗಳಿಗೆ ವಾಣಿಜ್ಯೀಕರಣಕ್ಕಾಗಿ 5 ವರ್ಷಗಳ ಕಾಲ ವರ್ಗಾವಣೆ ಮಾಡಲಾಗಿದೆ.
ಕಂದಕರಹಿತ ತಂತ್ರಜ್ಞಾನವನ್ನು ಆಧರಿಸಿದ ಬೋರಿಂಗ್ ಯಂತ್ರ
ಕಂದಕರಹಿತ ನಿರ್ಮಾಣವು ಅಗೆಯುವ ನಂತರ ಬೇಕಾದ ಉತ್ಖನನ ಮತ್ತು ಮೇಲ್ಮೈ ರಿಪೇರಿಗಳನ್ನು ಮಿತಿಗೊಳಿಸುತ್ತದೆ. ಲಭ್ಯವಿರುವ ಆಮದು ಯಂತ್ರಗಳು ದೊಡ್ಡ ಯೋಜನೆಗಳಿಗೆ ದೊಡ್ಡ ಸಾಮರ್ಥ್ಯ ಮತ್ತು ಬಹಳ ದುಬಾರಿಯಾಗಿವೆ. ಅಂತಹ ಯಂತ್ರವನ್ನು ಸ್ಥಳೀಯವಾಗಿ ತಯಾರಿಸಲಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, ಕಂದಕವಿಲ್ಲದ ತಂತ್ರಜ್ಞಾನವನ್ನು ಆಧರಿಸಿ ಬೋರಿಂಗ್ ಯಂತ್ರವನ್ನು ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿ ಮಾಡಲಾಗಿದೆ.
ಅಭಿವೃದ್ಧಿ ಹೊಂದಿದ ಯಂತ್ರವು ಒಳಚರಂಡಿ / ಪೈಪ್ ಸಾಲುಗಳು ಮತ್ತು ಕೇಬಲ್ಗಳನ್ನು ಹಾಕಲು ರಸ್ತೆಗಳು ಮತ್ತು ಕಟ್ಟಡಗಳ ಅಡಿಯಲ್ಲಿ ರಂಧ್ರಗಳನ್ ಕೊರೆಯಲು 14 ಮೀ. ಉದ್ದ ಮತ್ತು 160 ಮಿಮೀ ಡಯಾದವರೆಗೆ ಬೋರ್ ಮಾಡಬಹುದು. ಅಭಿವೃದ್ಧಿಪಡಿಸಿದ ಯಂತ್ರವು ಕೈಗೆಟುಕುವ ಬೆಲೆಯಲ್ಲಿದ್ದು ಚಿಕ್ಕ / ಮಧ್ಯಮ ವರ್ಗದ ಗುತ್ತಿಗೆದಾರರಿಂದ ಬಳಸಬಹುದು. ಇದು ತೂಕ ಬಹಳ ಕಡಿಮೆ, ಪೋರ್ಟಬಲ್ ಮತ್ತು ಕಡಿಮೆ ನಿರ್ವಹಣೆ ಮತ್ತು ತೇವ ಮತ್ತು ಒಣ ಎರಡೂ ಪ್ರದೇಶಗಳಿಗೆ ಕೊರೆಯಲು ಸೂಕ್ತವಾಗಿದೆ. ಈ ತಂತ್ರಜ್ಞಾನವನ್ನು ಉತ್ತರಾಖಂಡದ ಟೆಕ್ನೋ ಇಂಡಸ್ಟ್ರಿಯಲ್ ಮಾರ್ಕೆಟಿಂಗ್ ಗೆ ವರ್ಗಾಯಿಸಲಾಗಿದೆ.
ಗ್ಲಾಸ್ ಟೆಕ್ಸ್ ಟೈಲ್ ರಿಇನ್ ಫೋರ್ಸ್ಡ್ ಕಾಂಕ್ರೀಟ್ ಕ್ರ್ಯಾಶ್ ಬ್ಯಾರಿಯರ್ ಸಿಸ್ಟಮ್
ಇದುವೆರೆವಿಗೂ, ಅತ್ಯಂತ ಜನಪ್ರಿಯವಾಗಿ ಬಳಸಲಾಗುವ ಕ್ರ್ಯಾಶ್ ಬ್ಯಾರಿಯರ್ (ತಡೆಗೋಡೆ) ಯನ್ನು ರಿಇನ್ ಫೋರ್ಸ್ಡ್ ಕಾಂಕ್ರೀಟ್ ನಿಂದ ಮಾಡಲ್ಪಟ್ಟಿದೆ, ಇದು ಹೆಚ್ಚು ಕಠಿಣವಾಗಿದೆ ಆದರೆ ಕಳಪೆ ಶಕ್ತಿ ಹೀರಿಕೊಳ್ಳುವಿಕೆಯನ್ನು ಹೊಂದಿದೆ. ಅಂತಹ ಕ್ರ್ಯಾಶ್ ಬ್ಯಾರಿಯರಿಗೆ ವಾಹನವು ಡಿಕ್ಕಿ ಹೊಡೆದಾಗ, ವಾಹನವು ಗಂಭೀರವಾಗಿ ಹಾನಿಗೊಳಗಾಗುತ್ತದೆ ಮತ್ತು ಘರ್ಷಣೆಯ ಪರಿಣಾಮದಿಂದಾಗಿ ಪ್ರಯಾಣಿಕರು ಮಾರಕವಾಗಿ ಗಾಯಗೊಳ್ಳುವರು. ರಸ್ತೆಯ ಬಳಕೆದಾರರ ಸುರಕ್ಷತೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಪ್ರಿ-ಫ್ಯಾಬ್ರಿಕೇಟೆಡ್ ಗ್ಲಾಸ್ ಟೆಕ್ಸಟೈಲ್ ರಿಇನ್-ಫೋರ್ಸ್ಡ್ ಕಾಂಕ್ರೀಟ್ ಕ್ರ್ಯಾಶ್ ಬ್ಯಾರಿಯರ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಲಾಗಿದೆ. ವಾಹನದ ಡಿಕ್ಕಿಯ ಹೊಡೆತದ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯದೊಂದಿಗೆ ಅಭಿವೃದ್ಧಿ ಪಡಿಸಿದ ತಡೆಗೋಡೆಗಳು ಹಗುರವಾಗಿವೆ, ಸ್ಥಿತಿಸ್ಥಾಪಕತ್ವ ಗುಣಗಳನ್ನು ಹೊಂದಿವೆ. ಇದು ವಾಹನ ಪ್ರಯಾಣಿಕರಿಗೆ ಸುಧಾರಿತ ಸುರಕ್ಷತೆಯನ್ನು ಒದಗಿಸುತ್ತದೆ ಮತ್ತು ಡಿಕ್ಕಿ ಹೊಡೆವ ವಾಹನಗಳಿಗೆ ಕಡಿಮೆ ಹಾನಿ ಉಂಟಾಗುತ್ತದೆ. ಈ ತಂತ್ರಜ್ಞಾನವನ್ನು ಪ್ರದರ್ಶಿಸಲಾಗಿದೆ, ವರ್ಗಾವಣೆಗಾಗಿ ಸಮಾಲೋಚನೆಯು ನಡೆಯುತ್ತಿದೆ.
ಬಹು-ಪ್ರಕ್ರಿಯೆಯ ಸೂಕ್ಷ್ಮ ಯಂತ್ರಕ್ಕಾಗಿ ಸ್ಥಳೀಯ 4-ಅಕ್ಷ ನಿಯಂತ್ರಕ (Indigenous 4-axis controller for multi-process micro machine)
ಸಿಎಸ್ಐಆರ್ ಕಡಿಮೆ ಬೆಲೆಯ ಒಂದು ಮೈಕ್ರೊ ಮೆಶೀನ್ ಟೆಸ್ಟ್ ಬೆಡ್ ಯಂತ್ರವನ್ನು ಅಭಿವೃದ್ಧಿ ಪಡಿಸಿದೆ. ಇದು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಂಟ್ರೋಲರ್, ಸಾಫ್ಟ್ವೇರ್ ಮತ್ತು ಗ್ರಾಫಿಕಲ್ ಯೂಸರ್ ಇಂಟರ್ಫೇಸ್ ಅನ್ನು ಹೊಂದಿರುವ ಮೈಕ್ರೊ ಟರ್ನಿಂಗ್ ಮೈಕ್ರೋ ಯಂತ್ರ. ಇದು ಒಂದೇ ಡೆಸ್ಕ್ ಟಾಪ್ ಕಂಪ್ಯೂಟರ್ ನಲ್ಲಿ (60 ಸೆ.ಮೀ X 60 ಸೆ.ಮೀ) ಮೈಕ್ರೊ ಟರ್ನಿಂಗ್ / ಮೈಕ್ರೋ ಮಿಲಿಂಗ್ / ಮೈಕ್ರೋ ಡ್ರಿಲ್ಲಿಂಗ್ / ಮೈಕ್ರೊ ಡ್ರಿಲ್ಲಿಂಗ್ / ಮೈಕ್ರೊ ಡ್ರಿಲ್ಲಿಂಗ್ / ಮೈಕ್ರೊ ಡ್ರಿಲ್ಲಿಂಗ್ / ಮೈಕ್ರೊ ಡ್ರಿಲ್ಲಿಂಗ್ (ಮೈಕ್ರೊ ಟರ್ನಿಂಗ್ / ಮೈಕ್ರೋ ಡ್ರಿಲ್ಲಿಂಗ್ / ಸೂಕ್ಷ್ಮ ಪ್ಯಾಟರ್ಲಿಂಗ್ ಅನ್ನು ಮಾಡಬಹುದು. ಅಭಿವೃದ್ಧಿಪಡಿಸಿದ ವ್ಯವಸ್ಥೆಯನ್ನು ಸಣ್ಣ ಮತ್ತು ಮಧ್ಯಮ ಪ್ರಮಾಣದ ಮೈಕ್ರೋ-ಮೆಶಿನಿಂಗ್ ಕೈಗಾರಿಕೆಗಳು, ಸರ್ಜಿಕಲ್ ಟೂಲ್ ಉದ್ಯಮಗಳು, ಜ್ಯೂವೆಲ್ಲರಿ ತಯಾರಿಕಾ ಕೈಗಾರಿಕೆಗಳು ಇತ್ಯಾದಿಗಳು ಬಳಸಬಹುದು. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯ ಅಭಿವೃದ್ಧಿ ಜೊತೆಗೆ ಸಿ ಎನ್ ಸಿ ಯಂತ್ರ ಕಾರ್ಯಾಚರಣೆಗಳ ತರಬೇತಿಯನ್ನು ನೀಡುತ್ತದೆ. ತಂತ್ರಜ್ಞಾನವನ್ನು ಎರಡು ಉದ್ಯಮಗಳಿಗೆ ವರ್ಗಾವಣೆ ಮಾಡಲಾಗಿದೆ.
ಗ್ರ್ಯಾಫೀನ್ ಆಧಾರಿತ ಏಕ್ವಿಯಸ್ ಲ್ಯುಬ್ರಿಕೆಂಟ್
ಗ್ರ್ಯಾಫೀನ್ ಮೂಲದ ಏಕ್ವಿಯಸ್ ಲೂಬ್ರಿಕಂಟ್ ಉತ್ಪಾದನೆಗೆ ತಂತ್ರಜ್ಞಾನವನ್ನು ಗ್ರ್ಯಾಫೈಟ್ ಆಧಾರಿತ ಆಮದು ಲೂಬ್ರಿಕಂಟನ್ನು ಕುಲುಮೆ ಉಪಯೋಗಿಸುವ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸುವುದಕ್ಕೆ ಬದಲಾಗಿ ಅಭಿವೃದ್ಧಿಪಡಿಸಲಾಗಿದೆ. ಗ್ರ್ಯಾಫೀನ್ ಆಕ್ಸೈಡ್ ಅನ್ನು ಶಕ್ತಿ ಸಂಗ್ರಹಣೆ (ಬ್ಯಾಟರಿ) ಮತ್ತು ಪರಿವರ್ತನೆ, ವಾಹನ ಮತ್ತು ಏರೋಸ್ಪೇಸ್ ಸಂಯುಕ್ತ ಸಾಮಗ್ರಿಗಳು, ಲೇಪನಗಳು ಮತ್ತು ತುಕ್ಕು, ಬಯೋಮೆಡಿಕಲ್ ಮತ್ತು ಸ್ಟ್ರಕ್ಚರಲ್ ಇಂಜಿನಿಯರಿಂಗ್, ರಕ್ಷಣಾ, ಸಂವೇದಕಗಳು, ಎಲೆಕ್ಟ್ರಾನಿಕ್ಸ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಅಭಿವೃದ್ಧಿಪಡಿಸಿದ ಗ್ರ್ಯಾಫೀನ್ ಉತ್ಪಾದನಾ ತಂತ್ರಜ್ಞಾನ (200 ಗ್ರಾಂ / ಬ್ಯಾಚ್) ಅನ್ನು ವಿಶೇಷ ರಾಸಾಯನಿಕ ಕಂಪನಿಯಾದ ಅರೋಪೋಲ್ ಪ್ರೈವೇಟ್ ಲಿಮಿಟೆಡ್ , ಕೊಲ್ಕತ್ತಾ, ಪಶ್ಚಿಮ ಬಂಗಾಳಕ್ಕೆ ವರ್ಗಾಯಿಸಲಾಗಿದೆ. .
ಮೈಕ್ರೋ ಫ್ಯೂಯಲ್ ಸೆಲ್ (ಮೈಕ್ರೋ ಇಂಧನ ಕೋಶ)
ಮೈಕ್ರೋ ಇಂಧನ ಕೋಶವು ವಿದ್ಯುತ್ ಶಕ್ತಿಯಾಗಿ ರಾಸಾಯನಿಕ ಶಕ್ತಿಯನ್ನು ಪರಿವರ್ತಿಸುವ ಎಲೆಕ್ಟ್ರಾನಿಕ್ ಸಾಧನಗಳಿಗೆ ವಿದ್ಯುತ್ ಮೂಲವಾಗಿದೆ. ಡಿಜಿಟಲ್ ಕ್ಯಾಮೆರಾಗಳು, ರೇಡಿಯೋಗಳು, ಆಟಿಕೆಗಳು ಮತ್ತು ಇತರ ಕಡಿಮೆ ವಿದ್ಯುತ್ ಅನ್ವಯಿಕೆಗಳಂತಹ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಈ ಇಂಧನ ಕೋಶಗಳನ್ನು ಬಳಸಬಹುದು. ಕಡಿಮೆ ಶಕ್ತಿಯನ್ನು ಬಳಸುವ ಉಪಕರಣಗಳಲ್ಲಿ ಉಪಯೋಗಿಸಲು ಸಿಎಸ್ಐಆರ್ ಅಗ್ಗ, ಸರಳ ಮತ್ತು ಮಿತವ್ಯಯದ ಮೈಕ್ರೋ ಇಂಧನ ಕೋಶವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನವನ್ನು ವಿಕ್ಟರ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ , ಸಾಂಗ್ಲಿ , ಮಹಾರಾಷ್ಟ್ರ ಕ್ಕೆ ವರ್ಗಾಯಿಸಲಾಗಿದೆ.
ಸಿಎಸ್ ಐಆರ್-ಎನ್ ಪಿ ಎಲ್ ಮತ್ತು ಎಚ್ ಪಿಸಿಎಲ್ ನಡುವೆ ಪ್ರಮಾಣದ ವಿದೇಶಿ ವಿನಿಮಯವನ್ನು ಉಳಿಸಲು ಪೆಟ್ರೊಲಿಯಂ (ಸಿಆರ್ ಎಂಗಳು) ಅಭಿವೃದ್ಧಿಗಾಗಿ , ಪ್ರಮಾಣಿತ ಉಲ್ಲೇಖಿತ ಸಾಮಗ್ರಿಗಳನ್ನು (ಸಿಆರ್ ಎಂ) ಸ್ಥಳೀಯವಾಗಿ ಅಭಿವೃದ್ಧಿ ಮಾಡಲು ತಿಳುವಳಿಕೆಯ ಒಪ್ಪಂದಕ್ಕಾಗಿ ಸಹಿ ಹಾಕಲಾಗಿದೆ.
ಸಾಮಾನ್ಯ ವ್ಯಕ್ತಿ ಸೇರಿದಂತೆ ಎಲ್ಲಾ ಬಳಕೆದಾರರಲ್ಲಿ ಬಳಸುವ ಪೆಟ್ರೋಲಿಯಂ ಉತ್ಪನ್ನಗಳ ಉನ್ನತ ಗುಣಮಟ್ಟದ ವ್ಯವಸ್ಥೆಯನ್ನು ಕಾಪಾಡುವುದು ಮಾತ್ರವಲ್ಲದೆ, ಪ್ರಮಾಣಿತ ಉಲ್ಲೇಖಿತ ಸಾಮಗ್ರಿಗಳನ್ನು (ಸಿಆರ್ ಎಂಗಳು) ಆಮದು ವಸ್ತುಗಳ ಬದಲಿಗೆ ಬಳಸುವುದರ ಮೂಲಕ ಪ್ರಮುಖ ವಿದೇಶಿ ವಿನಿಮಯವನ್ನು ಉಳಿಸುತ್ತದೆ ಮತ್ತು ಇದು ಪ್ರಯೋಗಾಲಯದ ಪರೀಕ್ಷಾ ಸಲಕರಣೆಗಳ ಮಾಪನಾಂಕ ನಿರ್ಣಯಕ್ಕೆ ಪ್ರಮುಖ ಪಾತ್ರವಹಿಸುತ್ತದೆ.
ಸಿಎಸ್ ಐಆರ್-ಎನ್ ಪಿ ಎಲ್ ಅಭಿವೃದ್ಧಿಪಡಿಸಿದ ಉಪಯುಕ್ತ ಟೈಲ್ ಗಳಾಗಿ ತ್ಯಾಜ್ಯ ಪ್ಲ್ಯಾಸ್ಟಿಕ್ ಅನ್ನು ಮರುಬಳಕೆ ಮಾಡುವ ತಂತ್ರಜ್ಞಾನವನ್ನು ಎನ್ ಆರ್ ಡಿ ಸಿ ಗೆ ಪರವಾನಗಿ ನೀಡಿದೆ
ಪ್ರತಿದಿನ ಸುಮಾರು 15,000 ಟನ್ಗಳಷ್ಟು ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಭಾರತವು ಉತ್ಪಾದಿಸುತ್ತದೆ. ಅದರ ಸುರಕ್ಷಿತ ವಿಲೇವಾರಿ ಪರಿಸರಕ್ಕೆ ದೊಡ್ಡ ಸವಾಲು ಮತ್ತು ದೊಡ್ಡ ಆಪತ್ತಾಗಿದೆ, ಈ ತಂತ್ರಜ್ಞಾನವು ಸಾಮಾಜಿಕ ಸಮಸ್ಯೆಗಳನ್ನು ಮಿತವ್ಯಯದಲ್ಲಿ ಪರಿಹಾರ ಒದಗಿಸುತ್ತದೆ ಮತ್ತು ತ್ಯಾಜ್ಯದಿಂದ ಸಂಪತ್ತನ್ನು ಉತ್ಪಾದಿಸುತ್ತದೆ.
ಸಿಎಸ್ ಐಆರ್ – ಐ ಎಮ್ ಟೆಕ್ ಹೈ-ಎಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಸ್ಥಾಪಿಸಲು ಮೆರ್ಕ್ ನ ಜೊತೆ ಸಹಭಾಗಿತ್ವವನ್ನು ಹೊಂದಿತು. ಚಂಡೀಘಡದಲ್ಲಿರುವ ಅಕಾಡೆಮಿ-ಇಂಡಸ್ಟ್ರಿ ನೇತೃತ್ವದ 'ಹೈ ಎಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್' ಈ ರೀತಿಯಲ್ಲಿಯೇ ಮೊದಲನೆಯದು, ಇದು ಜೀವ ವಿಜ್ಞಾನ ಕ್ಷೇತ್ರದಲ್ಲಿ ಪರಿಣತಿಗಾಗಿ ಭಾರತ ಸರ್ಕಾರದ ಉಪಕ್ರಮಗಳನ್ನು ಹೆಚ್ಚಿಸಲು ಸ್ಥಾಪಿಸಲಾಗಿದೆ.
ಸಿಎಸ್ಐಆರ್ ನ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು
· ನಿರ್ದಿಷ್ಟ ಉದ್ಯಮ-ಆಧಾರಿತ ಪರಿಣತಿ ಕಾರ್ಯಕ್ರಮಗಳ ಮೂಲಕ ಅದರ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳ ಲಾಭದಾಯಕ ಬಳಕೆಗಾಗಿ ಸಿಎಸ್ಐಆರ್ ಇಂಟಿಗ್ರೇಟೆಡ್ ಸ್ಕಿಲ್ ಡೆವಲಪ್ಮೆಂಟ್ ಇನಿಶಿಯೇಟಿವ್ ಅನ್ನು ಪ್ರಾರಂಭಿಸಿದೆ . 2018 ರ ವರ್ಷದಲ್ಲಿ ಸಿಎಸ್ಐಆರ್ ಇಂಟಿಗ್ರೇಟೆಡ್ ಸ್ಕಿಲ್ ಇನಿಶಿಯೇಟಿವ್ ನ ಕೆಲವು ಪ್ರಮುಖ ಮುಖ್ಯಾಂಶಗಳು ಹೀಗಿವೆ:
· ಸಿಎಸ್ಐಇ ಇಂಟಿಗ್ರೇಟೆಡ್ ಸ್ಕಿಲ್ ಇನಿಶಿಯೇಟಿವ್ ನಲ್ಲಿ ಸುಮಾರು 19,000 ಅಭ್ಯರ್ಥಿಗಳು ವಿವಿಧ ಎಸ್ & ಟಿ ಕ್ಷೇತ್ರಗಳಲ್ಲಿ ಸಿಎಸ್ಐಆರ್ ಪ್ರಯೋಗಾಲಯಗಳಲ್ಲಿ 2018 ನೇ ವರ್ಷದಲ್ಲಿ ತರಬೇತಿ ಪಡೆದಿದ್ದಾರೆ;
· ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್ಎಸ್ಎಫ್ ಡಿಸಿ) ಯಂತಹ ಸಂಸ್ಥೆಗಳಿಂದ ಹಣಕಾಸಿನ ನೆರವು ಹೊಂದಿರುವ ಸಿಎಸ್ಐಆರ್-ಸಿಎಲ್ಆರ್ ಐ ವಿವಿಧ ಚರ್ಮದ ವ್ಯಾಪಾರಗಳಲ್ಲಿ ಸುಮಾರು 3000 ಕುಶಲಕರ್ಮಿಗಳನ್ನು ಹೊಂದಿದೆ.
· ಆಂಧ್ರಪ್ರದೇಶದ ಒಂಬತ್ತು ಜಿಲ್ಲೆಗಳ 12500 ಮೀನುಗಾರರಿಗೆ ತರಬೇತಿ ನೀಡಲು ಸಿಎಸ್ಐಆರ್-ಸಿ.ಎಸ್.ಎಂ.ಎಂ.ಆರ್.ಐ ಆಂಧ್ರಪ್ರದೇಶದ ಕೌಶಲ್ಯ ಅಭಿವೃದ್ಧಿ ನಿಗಮ (ಎಪಿಎಸ್ಎಸ್ಡಿಸಿ) ಜೊತೆ ಒಪ್ಪಂದ ಮಾಡಿಕೊಂಡಿದೆ.
· ನಬಾರ್ಡ್ ನ ಜಂಟಿ ಹೊಣೆಗಾರಿಕೆ ಗುಂಪು (ಜೆಎಲ್ ಜಿ) ಬ್ಯಾಂಕ್ ಸಾಲಕ್ಕಾಗಿ ಪ್ರಚಾರ ಯೋಜನೆಯಡಿಯಲ್ಲಿ – ಎನ್ ಇ ಐ ಎಸ್ ಟಿ ಇಂಟಿಗ್ರೇಟೆಡ್ ಸ್ಕಿಲ್ ಇನಿಶಿಯೇಟಿವ್ ಪ್ರೋಗ್ರಾಂ ಅನ್ನು ಆಯ್ಕೆ ಮಾಡಲಾಗಿದೆ.
· ಸಿಎಸ್ಐಆರ್-ಸಿಎಸ್ಐಓ ನ ಇಂಡೋ-ಸ್ವಿಸ್ ಟ್ರೈನಿಂಗ್ ಸೆಂಟರ್, ಚಂಡೀಗಢ 2018 ರ ಭಾರತದ ಕೌಶಲಗಳ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ಪಾದನೆ & ಇಂಜಿನಿಯರಿಂಗ್ ವಲಯದಲ್ಲಿ ಮೊದಲ ಬಹುಮಾನವನ್ನು ಪಡೆದುಕೊಂಡಿದೆ.
· ಸಿಎಸ್ಐಆರ್ ಮತ್ತು ಆಂಧ್ರಪ್ರದೇಶ ಪರಿಶಿಷ್ಟ ಜಾತಿ ಸಹಕಾರ ಹಣಕಾಸು ನಿಗಮ ಲಿಮಿಟೆಡ್ (ಎಪಿಎಸ್ಸಿಎಫ್ಸಿ) ಲೆದರ್ ಸೆಕ್ಟರ್ ನಲ್ಲಿ (ಚರ್ಮ ಕೈಗಾರಿಕಾ ವಲಯ) ಕೌಶಲ್ಯ ತರಬೇತಿ ಮತ್ತು ಉದ್ಯಮಶೀಲತೆಗಾಗಿ ಒಪ್ಪಂದಕ್ಕೆ ಸಹಿ ಹಾಕಿವೆ. ಆಂಧ್ರಪ್ರದೇಶದಿಂದ 10,000 ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪ್ರಯೋಜನಕಾರಿಯಾಗಲು ಈ ಉಪಕ್ರಮವು ಸಿದ್ಧವಾಗಿದೆ, ಆದಾಯದ ಸ್ವತ್ತುಗಳನ್ನು ಕುಟುಂಬಗಳಿಗೆ ಸೃಷ್ಟಿಸುತ್ತದೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಮುಂದಿನ 2-3 ವರ್ಷಗಳಲ್ಲಿ ಎಪಿಎಸ್ ಸಿ ಸಿ ಎಫ್ ಸಿಯಿಂದ 30 ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಲಾಗುತ್ತದೆ.
ಸಿಎಸ್ಐಆರ್ ವಿಜ್ಞಾನಿಗಳು ಶಾಲಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ
ಸಿಎಸ್ಐಆರ್ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಜಿಗ್ಯಾಸಾ ಎನ್ನುವ ಹೆಸರಿನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಕಾರ್ಯಕ್ರಮದಲ್ಲಿ 1151 ಕೇಂದ್ರೀಯ ವಿದ್ಯಾಲಯಗಳನ್ನು ಸಿಎಸ್ಐಆರ್ ನ 38 ರಾಷ್ಟ್ರೀಯ ಪ್ರಯೋಗಾಲಯಗಳ ಜೊತೆ ಜೋಡಿಸಬಹುದೆನ್ನುವ ಅಂದಾಜು ಇದೆ. 2018 ರಲ್ಲಿ ಸಿಎಸ್ಐಆರ್ ಈಗಾಗಲೇ ಸುಮಾರು ಕೇಂದ್ರೀಯ ವಿದ್ಯಾಲಯದ 27,000 ವಿದ್ಯಾರ್ಥಿಗಳು ಮತ್ತು 2,500 ಶಿಕ್ಷಕರುಗಳನ್ನು 200 ಕಾರ್ಯಕ್ರಮಗಳ ಮೂಲಕ ಜಾರಿಗೆ ಮುಟ್ಟಿದ್ದಾರೆ,
ಸಿಎಸ್ಐಆರ್ ಈಶಾನ್ಯ ಪ್ರದೇಶವನ್ನು ತಲುಪುತ್ತಿದೆ
ಸಿಎಸ್ಐಆರ್ - ಇಂಡಸ್ಟ್ರಿ ಮೀಟ್ ಫಾರ್ ನಾರ್ತ್ ಈಸ್ಟ್ ರೀಜನ್ ಕಾರ್ಯಕ್ರಮ: ಸಿಎಸ್ಐಆರ್, ಈಶಾನ್ಯ ವಲಯದಲ್ಲಿ ಎಮ್ ಎಸ್ ಎಮ್ ಇ ಗಳು ಮತ್ತು ನವೋದಯ (ಸ್ಟಾರ್ಟ್-ಅಪ್)ಗಳನ್ನು ರಚಿಸಲು ತಾಂತ್ರಿಕತೆ ಮತ್ತು ಜ್ಞಾನ ತಾಣವು ಗುವಾಹಾಟಿಯಲ್ಲಿ ನಡೆಯಿತು. ಸುಮಾರು 100 ಉದ್ಯಮಗಳು ಮತ್ತು ಸಿಎಸ್ಐಆರ್ನ 50 ವಿಜ್ಞಾನಿಗಳು ಭಾಗವಹಿಸಿದ್ದರು. ಮುಂದಿನ ಸಹಭಾಗಿತ್ವಕ್ಕೆ ಸುಮಾರು 8 ಉದ್ಯಮಗಳು ಮತ್ತು ಸಿಎಸ್ಐಆರ್ ಜೊತೆಗೆ ಕೈ ಜೋಡಿಸಿದವು.
ಸಿಎಸ್ಐಆರ್ – ಎನ್ ಇ ಐ ಎಸ್ ಟಿ ಅಣಬೆ ಕೃಷಿ ತರಬೇತಿಯನ್ನು 30,000 ಫಲಾನುಭವಿಗಳಿಗೆ ಮತ್ತು ಉತ್ಪಾದನಾ ತಂತ್ರಜ್ಞಾನವನ್ನು 20 ಅಭ್ಯರ್ಥಿಗಳಿಗೆ / ಎನ್ ಜಿ ಓ ಗಳಿಗೆ ವರ್ಗಾಯಿಸಿದೆ ಮತ್ತು 5000 ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗಾವಕಾಶವನ್ನು ಮಾಡಿದೆ. ಫಲಾನುಭವಿಯ ಆದಾಯವು ಒಂದು ವರ್ಷದಲ್ಲಿ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ತಿಂಗಳಿಗೆ 10,000 ರೂಪಾಯಿಗಳಿಂದ ಹಿಡಿದು ತಿಂಗಳು 1,50,000 ರೂಪಾಯಿಗಳವರೆಗೆ ಅಣಬೆ ಬೆಳೆಯುವಿಕೆಯಿಂದ ಬರುತ್ತದೆ.
ಅಂತರಾಷ್ಟ್ರೀಯ ವ್ಯವಹಾರಗಳು
ದ್ವಿಪಕ್ಷೀಯ ಸಹಕಾರ
ಸಿಎಸ್ಐಆರ್ ನ ಅಂತರರಾಷ್ಟ್ರೀಯ ಎಸ್ & ಟಿ ಸಂಪರ್ಕಗಳನ್ನು ಮತ್ತಷ್ಟು ಪ್ರೋತ್ಸಾಹಿಸಲಾಯಿತು ಮತ್ತು ಹೊಸ ಸಹಕಾರ ವ್ಯವಸ್ಥೆಗಳ ಪ್ರಾರಂಭ ಮತ್ತು ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ವಿದೇಶದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ವಿಸ್ತರಿಸಲಾಯಿತು. ಸಿಎಸ್ಐಆರ್ ನ ಹಿರಿಯ ಅಧಿಕಾರಿಗಳು ಮತ್ತು ವಿಜ್ಞಾನಿಗಳ ನಡುವೆ ಮತ್ತು ಕೊರಿಯಾ, ಜರ್ಮನಿ, ಚೀನೀ ತೈಪೆಯ್, ಜಪಾನ್, ಬಾಂಗ್ಲಾದೇಶ, ಇಥಿಯೋಪಿಯಾ ಸೇರಿದಂತೆ ಸಹಭಾಗಿತ್ವ ದೇಶಗಳ ನಡುವಿನ ಹಲವಾರು ಉನ್ನತ ಮಟ್ಟದ ಪರಸ್ಪರ ಸಹಕಾರ ಆದ್ಯತೆಗಳನ್ನು ಗುರುತಿಸಲು ಮತ್ತು ಅವುಗಳನ್ನು ಇನ್ನಷ್ಟು ಮುಂದುವರಿಸಲು ನಡೆಸಲಾಯಿತು. ತರಬೇತಿ ಮತ್ತು ಮುಂದುವರಿದ ಮಾನ್ಯತೆಗಾಗಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ಬಾಂಗ್ಲಾದೇಶ (ಸಾಗರಶಾಸ್ತ್ರ) ಯಿಂದ ಸಂಶೋಧಕರು ಮತ್ತು ಅಧಿಕಾರಿಗಳಿಗೆ ನೀಡಲಾಯಿತು. "ಸಸ್ಟೈನಬಲ್ ವಾಟರ್ ಸಪ್ಲೈ ಮತ್ತು ವೇಸ್ಟ್ ವಾಟರ್ ಮ್ಯಾನೇಜ್ ಮೆಂಟ್ (ವಿಲೇವಾರಿ ಮತ್ತು ಪುನಃ ಬಳಕೆ) - ಸಮರ್ಥನೀಯ, ಕೈಗೆಟುಕುವ ಪರಿಹಾರಕ್ಕಾಗಿ ಸಂಶೋಧನೆ" ಯನ್ನು ಜರ್ಮನಿಯೊಂದಿಗೆ ಜಂಟಿ ಕಾರ್ಯಾಗಾರದಲ್ಲಿ ಆಯೋಜಿಸಲಾಗಿತ್ತು. ದೆಹಲಿಯಲ್ಲಿ ಸಹಕಾರದ ತಿಳುವಳಿಕೆಯ ಒಪ್ಪಂದವನ್ನು ಪೂರ್ಣಗೊಳಿಸುವ ಮೂಲಕ ಅನೇಕ ಶೈಕ್ಷಣಿಕ ಸಂಸ್ಥೆಗಳ ಮಟ್ಟದ ಸಹಕಾರ ವ್ಯವಸ್ಥೆಗಳೊಂದಿಗೆ ಆರು (6) ಹೊಸ ಸಹಕಾರ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಯಿತು,
ಸಿಎಸ್ಐಆರ್ ಲ್ಯಾಬ್ ಮಟ್ಟ ಪಾಲುದಾರಿಕೆಯ ಉಪಕ್ರಮಗಳು
ಸಿಎಸ್ಐಆರ್ ಮತ್ತು ಮೆಟಲ್ಸ್ ಇಂಡಸ್ಟ್ರಿ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ (MIDI) ನಡುವಿನ ಟ್ವಿನಿಂಗ್ ಪ್ರಾಜೆಕ್ಟ್, ಮಾರ್ಚ್ 2018 ರಲ್ಲಿ ಇಥಿಯೋಪಿಯಾದಲ್ಲಿ ಪ್ರಾರಂಭವಾಯಿತು. ಇಥಿಯೋಪಿಯಾ ದೇಶವು ಕೆಪಾಸಿಟಿ ಬಿಲ್ಡಿಂಗ್ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವುದು, ಇದರಿಂದ ಇಥಿಯೋಪಿಯಾದ ಮಿಡಿ (MIDI) ಸಂಸ್ಥೆಯಲ್ಲಿ ಬದಲಾವಣೆ ತರಲು ಮಿಡಿ ಸಂಸ್ಥೆಯ ಸಂಶೋಧಕರಿಗೆ ಮೂರು ವರ್ಷಗಳ ಕಾಲ 6,806,000 ಡಾಲರ್ ವೆಚ್ಚದಲ್ಲಿ ಸಿಎಸ್ಐಆರ್ ನ ಸಂಶೋದಕರು ಕಾರ್ಯ ನಿರ್ವಹಿಸುವರು. ಲೋಹದ ಮತ್ತು ಎಂಜಿನಿಯರಿಂಗ್ ಉದ್ಯಮದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಈ ರೂಪಾಂತರ ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ.
ಸಿಎಸ್ಐಆರ್ ನ ಅಂತರರಾಷ್ಟ್ರೀಯ ಸಹಕಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ತಮ್ಮ ಪಾಲುದಾರಿಕೆ
ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ , ಸಿಎಸ್ಐಆರ್ ಸಂಸ್ಥೆಗಳು ದ್ವಿಪಕ್ಷೀಯ ಮತ್ತು ಬಹುಪಕ್ಷೀಯಗಳನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತವೆ , ಇವುಗಳನ್ನು ಡಿಎಸ್ಟಿ / ಡಿಬಿಟಿ / ಐಸಿಎಂಆರ್ ನಿರ್ವಹಿಸುತ್ತದೆ. ಜರ್ಮನಿ (6), ರಷ್ಯಾ (6), ಯುಕೆ (5), ಫ್ರಾನ್ಸ್ (4), ಜಪಾನ್ (4), ರಿಪಬ್ಲಿಕ್ ಆಫ್ ಕೊರಿಯಾ, ಆಸ್ಟ್ರಿಯಾ, ಹಂಗೇರಿ, ವಿಯೆಟ್ನಾಂ, ಸ್ವಿಟ್ಜರ್ಲ್ಯಾಂಡ್, ನಾರ್ವೆ ಮತ್ತು ಮಲೇಷಿಯಾ.ಪಾಲುದಾರರ ಜೊತೆ ಕಾರ್ಯಗತಗೊಳಿಸಲು ಮೂವತ್ತೆರಡು (32) ಸಹಯೋಗ ಸಂಶೋಧನಾ ಯೋಜನೆಗಳಿಗೆ ಸಿಎಸ್ಐಆರ್ ಇನ್ಸ್ಟಿಟ್ಯೂಟ್ ಗಳಿಗೆ ಹಣ ಒದಗಿಸಲಾಯಿತು ,
ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳು
· 2018 ರ ಏಪ್ರಿಲ್ 20 ರಂದು ಲಂಡನ್ ನಲ್ಲಿ ನಡೆದ ಕಾಮನ್ವೆಲ್ತ್ ಸಭೆಯ ಕಾರ್ಯನಿರ್ವಾಹಕ ಅಧಿವೇಶನದಲ್ಲಿ (ಸಿಎಚ್ಒಜಿಎಂ) ಭಾರತದ ಪ್ರಧಾನ ಮಂತ್ರಿಯವರು "ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳಿಗೆ (ಎಸ್ಐಡಿಎಸ್) ಸಹಾಯ ಮಾಡಲು ಕಾಮನ್ವೆಲ್ತ್ ಮೂಲಕ ಭಾರತವು ಸಾಮರ್ಥ್ಯ ನಿರ್ಮಾಣ ಯೋಜನೆಗಳಲ್ಲಿ ಮುಂಚೂಣಿಯನ್ನು ಸಾಧಿಸುತ್ತದೆ” ಎಂದು ಪ್ರಕಟಿಸಿದರು. ತಮ್ಮ ಸಾಗರ ಆಧಾರಿತ ರಾಷ್ಟ್ರೀಯ ಸಂಪತ್ತನ್ನು ಉತ್ತಮವಾಗಿ ನಿರ್ವಹಿಸಲು ದೂರ ಸಂವೇದನೆ ಅಥವಾ ಬಹು ಕಿರಣದ ಹೈಡ್ರೋಗ್ರಾಫಿಗಳಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಳ್ಳಲು ಸಿಎಸ್ಐಆರ್-ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಓಷನಾಲಜಿಗಾಗಿ (CSIR-NIO) MEA ಯಿಂದ (ITEC ಅಡಿಯಲ್ಲಿ) ನಾಲ್ಕು (4) ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.
· ಏಳು (7) ಯುವ ಮತ್ತು ಉತ್ತಮ ಸಿಎಸ್ಐಆರ್ ವಿಜ್ಞಾನಿಗಳಿಗೆ ವಿದೇಶದಲ್ಲಿ ಶ್ರೇಷ್ಠ ಕೇಂದ್ರಗಳಲ್ಲಿ ಸಂಶೋಧನೆ ನಡೆಸಲು ರಾಮನ್ ರಿಸರ್ಚ್ ಫೆಲೋಷಿಪ್ಗಳನ್ನು ನೀಡಲಾಯಿತು
· ಸಿಎಸ್ಐಆರ್ ಅಡಿಯಲ್ಲಿ - ವಿಶ್ವ ಅಕಾಡೆಮಿ ಆಫ್ ಸೈನ್ಸಸ್ (ಟಿಡಬ್ಲ್ಯುಎಎಸ್) ಅಡಿಯಲ್ಲಿ ಸಿಎಸ್ಐಆರ್ ಇನ್ಸ್ಟಿಟ್ಯೂಟ್ಗಳಲ್ಲಿ ಸಂಶೋಧನೆ ನಡೆಸಲು ಅಭಿವೃದ್ಧಿಶೀಲ ದೇಶಗಳ ಸಂಶೋಧಕರಿಗೆ ಸಿಎಸ್ಐಆರ್ ಹನ್ನೆರೆಡು (12) ಡಾಕ್ಟರಲ್ ಫೆಲೋಷಿಪ್ ಮತ್ತು ಏಳು (7) ಪೋಸ್ಟ್-ಡಾಕ್ಟರಲ್ ಫೆಲೋಶಿಪ್ಗಳನ್ನು ನೀಡಿತು.
ಶಕ್ತಿ ಮತ್ತು ಎಂಜಿನಿಯರಿಂಗ್, ಗಣಿಗಾರಿಕೆ ಮತ್ತು ಖನಿಜಗಳು, ಜೆನೆರಿಕ್ ಡ್ರಗ್ಸ್ ಮತ್ತು ಕೆಮಿಕಲ್ಸ್, ವೈಮಾನಿಕ ಮತ್ತು ಆಯಕಟ್ಟಿನ ಇತರ ಪ್ರದೇಶಗಳಂತಹ ಸೈನ್ಯದ ಗಡಿ ಪ್ರದೇಶಗಳಲ್ಲಿ ಸಿಎಸ್ಐಆರ್ ಸಂಶೋಧನೆ ನಡೆಸುತ್ತಿದೆ. ಔಷಧಿ ಮತ್ತು ಔಷಧ ವಿಭಾಗಗಳಿಗೆ ಸಿಎಸ್ಐಆರ್ ಕೊಡುಗೆಗಳು ಅತ್ಯಮೂಲ್ಯವಾದದ್ದು - ಸ್ವತಂತ್ರ ಭಾರತದಲ್ಲಿ ಅಭಿವೃದ್ಧಿಪಡಿಸಿದ 14 ಹೊಸ ಔಷಧಿಗಳಲ್ಲಿ 11 ಸಿ.ಎಸ್.ಐ.ಆರ್ ನಿಂದ ಆಗಿಹುದು.
ಭಾರತದ ಬೌದ್ಧಿಕ ಆಸ್ತಿ ಚಳವಳಿಯಲ್ಲಿ (ಇಂಟಲೆಕ್ಚುಯಲ್ ಪ್ರಾಪರ್ಟಿ ಮೂವ್ ಮೆಂಟ್) ಮೊದಲಿಗರಾಗಿರುವ ಸಿ.ಎಸ್.ಐ.ಆರ್ ನ ಪೇಟೆಂಟ್ ಕ್ಷೇತ್ರದಲ್ಲಿ ಅಗತ್ಯವಿರುವ S & T ಮೂಲಕ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಇತರರಿಗೆ ಆಯ್ದ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ದೇಶಕ್ಕಾಗಿ ಜಾಗತಿಕ ಗುರುತನ್ನು ಮೂಡಿಸುವುದರಲ್ಲಿ ಕೇಂದ್ರೀಕೃತವಾಗಿದೆ. 2017-18ರಲ್ಲಿ ಸಿಎಸ್ಐಆರ್ ಗೆ 171 ಭಾರತೀಯ ಮತ್ತು 376 ವಿದೇಶಿ ಪೇಟೆಂಟ್ ಗಳನ್ನು ನೀಡಲಾಯಿತು.
###
(Release ID: 1559009)
Visitor Counter : 320