ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಯುಟಿ, ರೆರಾ, ಡಿಡಿ & ಸಿಪಿಡಬ್ಲ್ಯುಡಿ : 2018 ರ ವರ್ಷಾಂತ್ಯದ ಅವಲೋಕನ
Posted On:
28 DEC 2018 11:39AM by PIB Bengaluru
ಯುಟಿ, ರೆರಾ, ಡಿಡಿ & ಸಿಪಿಡಬ್ಲ್ಯುಡಿ : 2018 ರ ವರ್ಷಾಂತ್ಯದ ಅವಲೋಕನ
34,893 ರಿಯಲ್ ಎಸ್ಟೇಟ್ ಯೋಜನೆಗಳು ಜಾರಿಗೆ ತರಲಾಗಿದೆ &27,073 ರಿಯಲ್ ಎಸ್ಟೇಟ್ ಏಜೆಂಟ್ಗಳು ರೇರಾ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 28 ರಾಜ್ಯಹಾಗೂ ಕೇಂದ್ರಾಡಳಿ ಪ್ರದೇಶಗಳಲ್ಲಿ ರೇರಾ ಅಡಿಯಲ್ಲಿ ಅಥಾರಿಟಿಗಳನ್ನು ಸ್ಥಾಪಿಸಲಾಗಿದೆ. 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಂಬಂಧಿತ ಟ್ರಿಬ್ಯುನಲ್ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಅರುಣಾಚಲ, ಮಿಜೋರಾಮ್,ಮೇಘಾಲಯ, ಮಣಿಪುರ್, ಸಿಕ್ಕಿಂ & ನಾಗಾಲ್ಯಾಂಡ್ ಸದ್ಯದಲ್ಲಿ ರೇರಾ ಅಧ್ಯಾದೇಶವನ್ನು ಹೊರಡಿಸಲಿದೆ. ಜಮ್ಮು ಮತ್ತು ಕಾಶ್ಮೀರವೂ ರೇರಾವನ್ನು ನೋಟಿಫೈ ಮಾಡುತ್ತಿದೆ. ಇನ್ನೂ 536 ಕಿಲೋ ಮೀಟರ್ ಮೆಟ್ರೋ ಲೈನ್ ಕಾರ್ಯಾಚರಣೆಯು 10 ನಗರಗಳಲ್ಲಿ ನಡೆಯುತ್ತಿದೆ. 248 ಕಿಲೋಮೀಟರ್ ಊದ್ದದ 13 ಹೊಸ ಮೆಟ್ರೋ ಯೋಜನೆಗಳನ್ನು 68,021 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಾಗುತ್ತಿದೆ. 66 ಕಿಲೋಮೀಟರ್ ಊದ್ದದ 3 ಹೊಸ ಯೋಜನೆಗಳಿಗೆ 16408 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಮೋಧನೆ 2018 ನೇ ಸಾಲಿನಲ್ಲಿ ನೀಡಲಾಗಿದೆ. ಸರಿಸುಮಾರು 650 ಕಿಲೋಮೀಟರ್ ಉದ್ದದ ಮೆಟ್ರೋ ರೈಲು ಯೋಜನೆಗಳು ಅನುಷ್ಠಾನದ ಹಂತದಲ್ಲಿವ,. 750 ಕಿಲೋಮೀಟರ್ ಉದ್ದದ ಮೆಟ್ರೋ ರೈಲ್ ಸಿಸ್ಟಮ್ಸ್& 373 ಕಿಲೋ ಮೀಟರ್ ಉದ್ದದ ಆರ್ಆರ್ಟಿಎಸ್ ಐ ಮೆಟ್ರೋಸ್ನ ಯೋಜನೆಯ ಹಂತದಲ್ಲಿದೆ.
ಐ ಮೆಟ್ರೋಸ್ ಎನ್ನುವುದು ಯೋಜನೆಗಳನ್ನು ಹಂಚಿಕೊಳ್ಳುವ, ಜ್ಞಾನವನ್ನು ಒಂದೂಗೂಡಿಸುವ ಮತ್ತು ಅನುನಭವವನ್ನು ಹಂಚಿಕೊಳ್ಳುವ ,ಅತ್ಯುತ್ತಮ ಪ್ರಯೋಗಳನ್ನು ಅನುಷ್ಠಾನಗೊಳಿಸುವ ವೇದಿಕೆಯಾಗಿದ್ದು 2018 ರ ಮಾರ್ಚ್ನಲ್ಲಿ ಅನುಷ್ಠಾನಕ್ಕೆ ತರಲಾಯಿತು. ಮೆಟ್ರೋ ರೈಲ್ ಸಿಸ್ಟಮ್ನ್ನು ಮೇಕ್ ಇನ್ ಇಂಡಿಯಾ ಸ್ಥಳೀಯಕರಣಗೊಳಿಸುವ ಉದ್ದೇಶದೊಂದಿಗೆ ಅಗತ್ಯ ಅನುಮೋಧನೆಯನ್ನು ನೀಡಲಾಗಿದೆ.
ನಗರಗಳ ಪುನರುಜ್ಜೀವನ
ಭಾರತೀಯ ನಗರಗಳ ಪುನರುಜ್ಜೀವನ ಹಾಗೂ ಅದರ ರೂಪಾಂತರ ಕಾರ್ಯವನ್ನು ರೂ. 6,85,758 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.
ನಾಗರಿಕ ಸ್ನೇಹಿತ ನಗರಗಳ ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಹಾಗೂ ವಸತಿ ಸಚಿವಾಲಯವೂ ಭಾರತೀಯ ನಗರಗಳ ಪುನರುಜ್ಜೀವನ ಹಾಗೂ ಅದರ ರೂಪಾಂತರ ಕಾರ್ಯವನ್ನು ರೂ. 6,85,758 ಕೋಟಿ ವೆಚ್ಚದಲ್ಲಿ ಕೈಗೊಂಡಿದೆ. ವಿವಿಧ ಸಧಾರಣೆಗಳನ್ನು ಪ್ರಮುಖವಾಗಿ ಹೊಂದಿರುವ ಈ ಯೋಜನೆಯಡಿಯಲ್ಲಿ ಹೊಸ ಮೆಟ್ರೋ ಲೈನ್ಗಳ ಮೂಲಕ ನಗರ ಸಾರಿಗೆಗಳನ್ನು ಹೆಚ್ಚಿಸುವ ಯೋಜನೆಯನ್ನು ಹೊಂದಲಾಗಿದೆ. ಅಲ್ಲದೆ ದೇಶದ ಎಲ್ಲಾ ಭಾಗಗಳಲ್ಲಿ ರೇರಾವನ್ನು ಅನುಷ್ಠಾನಗೊಳಿಸುವ ಮೂಲಕ ಮನೆ ಖರೀದಿದಾರಿಗೆ ಸಹಾಯವಾಗುವಂತೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿಸುಧಾರಣೆ ತರಲಾಗುತ್ತಿದೆ.
ರೇರಾ( ರಿಯಲ್ ಎಸ್ಟೇಟ್ ರೆಗ್ಯೂಲೇಷನ್ & ಡೆವಲೆಪ್ಮೆಂಟ್) ಆಕ್ಟ್, 2016
ರೇರಾ( ರಿಯಲ್ ಎಸ್ಟೇಟ್ ರೆಗ್ಯೂಲೇಷನ್ & ಡೆವಲೆಪ್ಮೆಂಟ್) ಆಕ್ಟ್, 2016 ಕಾಯಿದೆಯನ್ನು 2016 ನೇ ಮಾರ್ಚ್ನಲ್ಲಿ ಜಾರಿಗೆ ತರಲಾಯಿತು. ರಿಯಲ್ ಎಸ್ಟೇಟ್ನನ್ನು ಕ್ಷೇತ್ರವನ್ನು ಮತ್ತಷ್ಟು ಪ್ರಚುರ ಪಡಿಸುವುದು ಹಾಗೂ ಕ್ರಮ ಬದ್ಧಗೊಳಿಸುವ ಭರವಸೆ ನೀಡುವ ನಿಟ್ಟಿನಲ್ಲಿ ಹಾಗೂ ಮನೆ ಖರೀದಿದಾರರ ಆಸಕ್ಗಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪಾರದರ್ಶಕ ಕಾನೂನನ್ನು ಜಾರಿಗೆ ತರಲಾಗಿದೆ.ಈ ಸಂಬಂಧಿತ ಇತರೇ ವಿಷಯಗಳು ಈ ಕೆಳಗಿನಂತಿವೆ.
ರೇರಾ ಅಡಿಯಲ್ಲಿ 28 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧ್ಯಾದೇಶಗಳನ್ನು ಹೊರಡಿಸಲಾಗಿದೆ. (ಅರುಣಾಚಲ, ಮಿಜೋರಾಮ್,ಮೇಘಾಲಯ, ಮಣಿಪುರ್, ಸಿಕ್ಕಿಂ &ನಾಗಾಲ್ಯಾಂಡ್ ಹಾಗೂ ಜಮ್ಮು& ಕಾಶ್ಮೀರವನ್ನು ಹೊರತುಪಡಿಸಿ) ಇದರ ನಡುವೆ ಪಶ್ಚಿಮಬಂಗಾಳ ಈ ಸಂಬಂಧ ಹೀರಾ (ಕೈಗಾರಿಕೆ ಹಾಗೂ ವಸತಿ ರೆಗ್ಯಲ್ಯೂಷನ್ ಆಕ್ಟ್ ) ಎನ್ನುವ ತನ್ನದೆ ನಿಯಮಾವಳಿಗಳನ್ನು ಹೊಂದಿದೆ. ಹೀಗಿದ್ದರೂ ಈ ರಾಜ್ಯದಲ್ಲಿ ರೇರಾ ಕಾಯಿದೆಯನ್ನು ಅಧ್ಯಾದೇಶ ಹೊರಡಿಸಲು ಸಲಹೆ ನೀಡಲಾಗಿದೆ.
28 ರಾಜ್ಯಗಳಲ್ಲಿ ರೆರಾ ಪ್ರಾಧಿಕಾರಗಳನ್ನು ರಚಿಸಲಾಗಿದೆ( 15 ನಿಯಮಿತ , 13 ಮಧ್ಯಂತರ) ಇನ್ನು 21ರಾಜ್ಯಗಳಲ್ಲಿ ರಿಯಲ್ ಎಸ್ಟೇಟ್ ವ್ಯಾಜ್ಯಗಳ ನ್ಯಾಯಾಧೀಕರಣವನ್ನು ಸ್ಥಾಪಿಸಲಾಗಿದೆ( ನಿಯಮಿತ 09, ಮಧ್ಯಂತರ 12 ) 23 ರಾಜ್ಯಗಳ ಪ್ರಾಧಿಕಾರಗಳು ರೇರಾ ಅಡಿಯಲ್ಲಿ ತಮ್ಮ ವೆಬ್ಸೈಟ್ಗಗಳನ್ನು ರಚಿಸಿಕೊಂಡಿವೆ.ಒಟ್ಟು 34893 ರಿಯಲ್ ಎಸ್ಟೇಟ್ ಯೋಜನೆಗಳು, 27073 ರಿಯಲ್ ಎಸ್ಟೇಟ್ ಏಜೆಂಟ್ಗಳು ದೇಶಾದ್ಯಂತ ರೇರಾ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಪುಣೆ, ಚೆನ್ನೈ, ದೆಹಲಿ ಮತ್ತು ರಾಂಚಿಯಲ್ಲಿ ರೇರಾ ಕಾಯಿದೆಯ ಅಡಿಯಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು. ಖರೀದಿದಾರರು , ರಿಯಲ್ ಎಸ್ಟೇಟ್ ಡೆವಲೆಪರ್ಸ್, ಹಣಕಾಸು ಸಂಸ್ಥೆಗಳು ರೇರಾ ಪ್ರಾಧಿಕಾರಗಳು ಮತ್ತು ನ್ಯಾಯಾಧಿಕರಣಗಳನ್ನು ಇದು ಒಳಗೊಂಡಿತ್ತು. ಮತ್ತು ಮುಂದಿನ ಹಂತಗಳ ಅತ್ಯುತ್ತಮ ಅನುಭವಕ್ಕೆ ಈ ಕಾರ್ಯಾಗಾರವೂ ಆರಂಭಿಕ ವೇದಿಕೆಯಾಯಿತು.
ಹೈದ್ರಾಬಾದ್, (ರೂ 200 ಕೋಟಿ ಹಾಗೂ ರೂ 195 ಕೋಟಿ ) ಇಂದೋರ್,( ರೂ 139.90 ಕೋಟಿ) ಅಮರಾವತಿ (ರೂ 2,000 ಕೋಟಿ) ಮತ್ತು (ರೂ 175 ಕೋಟಿ) ಸೇರಿದಂತೆ ಒಟ್ಟು ರೂ. 2,709.90 ಕೋಟಿಯ ಮುನ್ಸಿಪಲ್ ಬಾಂಡ್ನ್ನು 2018 ರಲ್ಲಿ ಬಿಡುಗಡೆಗೊಳಿಸಲಾಯಿತು. ಇದರ ಮೂಲಕ ನಗರಗಳು ತಮ್ಮ ಹಣಕಾಸಿನ ಕೊರತೆಯನ್ನು ದಾಟಿ ನಿಲ್ಲಲು ಹಾಗೂ ಅಗತ್ಯ ಹಣಕಾಸಿನ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ.
ನಗರ ಸಾರಿಗೆ
ಮೆಟ್ರೋ ಲೈನ್ ನಿಯೋಜನೆ/ಕಾರ್ಯಾಚರಣೆ
ಪ್ರಸ್ತುತ 10 ನಗರಗಳಲ್ಲಿ 536 ಕಿಲೋಮೀಟರ್ ಮೆಟ್ರೋ ಲೈನ್ಗಳ ಕಾರ್ಯಾಚರಣೆಯಲ್ಲಿವೆ. ಉದಾಹರಣೆಗೆ ದೆಹಲಿ & ಎನ್ಸಿಆರ್, ಬೆಂಗಳೂರು , ಹೈದ್ರಾಬಾದ್, ಕೋಲ್ಕತ್ತಾ, ಚೆನ್ನೈ, ಕೊಚ್ಚಿ, ಲಖನೌ, ಮುಂಬೈ, ಗುರುಗ್ರಾಮ.2014 ಮೇ ನಿಂದ ಇಲ್ಲಿವರೆಗೂ 287 ಕಿಲೋಮೀಟರ್ ಮೆಟ್ರೋ ಲೈನ್ಗಳನ್ನು ನಿಯೋಜಿಸಲಾಗಿದೆ. ಇನ್ನು 2018 ನೇ ಸಾಲಿನಲ್ಲಿ( ಜನವರಿಯಿಂದ ಇಲ್ಲಿಯವರೆಗೂ) ಸರಿಸಮಾರು 110 ಕಿಲೋಮೀಟರ್ ಮೆಟ್ರೋ ಲೈನ್ಗಳನ್ನು ದೆಹಲಿ ಮತ್ತು ಎನ್ಸಿಆರ್ ಹೈದ್ರಾಬಾದ್ ಹಾಗೂ ಚನ್ನೈನಲ್ಲಿ ನಿಯೋಜಿಸಲಾಗಿದೆ.
ಅನುಮೋಧನೆಗೊಂಡ ಮೆಟ್ರೋ ಯೋಜನೆಗಳು
ಮೇ 2014 ರಿಂದ 248 ಕಿಲೋಮೀಟರ್ ಉದ್ದದ ಒಟ್ಟು ರೂ 68,408 ಕೋಟಿ ವೆಚ್ಚದ 13 ಹೊಸ ಮೆಟ್ರೋ ಯೋಜನೆಗಳಿಗೆ ಅನುಮೋಧನೆ ನೀಡಲಾಗಿದೆ. ನಾಗ್ಪುರ, ಅಹಮದಾಬಾದ್ , ಗುರುಗ್ರಾಮ, ಲಖನೌ, ಚೆನ್ನೈ ಎಕ್ಸ್ಟೆನ್ಶನ್, ಪುಣೆ, ದೆಹಲಿ ಮೆಟ್ರೋ ಎಕ್ಸ್ಟೆನ್ಶನ್ , ನೋಯಿಡಾ , ಗ್ರೇಟರ್ ನೋಯ್ಡಾ, ಬೋಪಾಲ್, ಮತ್ತು ಇಂದೋರ್ಗೆ ಸಂಬಂಧಿಸಿದ ಯೋಜನೆಗಳಿಗೆ ಅನುಮೋಧನೆ ನೀಡಲಾಗಿದೆ. 2018 ನೇ ಸಾಲಿನಲ್ಲಿ ಭೋಪಾಲ್, ಇಂದೋರ್ , ದೆಹಲಿ ಮೆಟ್ರೋ ಎಕ್ಸ್ಟೆನ್ಸನ್ ಗಾಗಿ ಒಟ್ಟು ರೂ 16,408 ಕೋಟಿ ವೆಚ್ಚದಲ್ಲಿ ಒಟ್ಟು 66 ಕಿಲೋಮೀಟರ್ ಉದ್ದ ಇರುವ ಒಟ್ಟು ಮೂರು ಯೋಜನೆಗಳನ್ನು ಅನುಮೋಧಿಸಲಾಗಿದೆ.
ಮೆಟ್ರೋ ಉದ್ಘಾಟನೆ
2014 ರಿಂದ ನಾಗ್ಪುರ, ಪುಣೆ ಹಾಗೂ ಮುಂಬೈನಲ್ಲಿ ನಾಲ್ಕು ಮೆಟ್ರೋ ಲೈನ್ಗಳನ್ನು ಅಳವಡಿಸುವ ಯೋಜನೆಗೆ ಸಂಬಂಧಿಸಿದಂತೆ ಒಟ್ಟು ಆರು ಯೋಜನೆಗಳಿಗೆ ಶಿಲನ್ಯಾಸ ಮಾಡಲಾಗಿದೆ. ಅಲ್ಲದೆ ದೆಹಲಿ, ಹೈದ್ರಾಬಾದ್, ಕೊಚ್ಚಿಯಲ್ಲಿ ಹಲವು ನೂತನ ಮೆಟ್ರೋ ಯೋಜನೆಗಳು ಈ ಅವಧಿಯಲ್ಲಿ ಉದ್ಘಾಟನೆ ಕಂಡಿವೆ. ದೆಹಲಿ ಮೆಟ್ರೋ ಎಕ್ಸ್ಟೆನ್ಸನ್ (ಮಂಡ್ಕಾ ಟು ಬ್ರಿಗೇಡಿಯಲ್ ಹೋಶಿಯಾರ್ ಸಿಂಗ್ ವರೆಗೂ 11.18 ಕಿಲೋಮೀಟರ್ವರೆಗಿನ) ಮತ್ತು ಮುಜೇಸರ್ ಟು ರಾಜಾ ನಹರ್ ಸಿಂಗ್ ಬಲ್ಬಾಗರಗ್ ) 3.205 ಕಿಲೋಮೀಟರ್ ಉದ್ದದ ಮೆಟ್ರೋ ಎಕ್ಸ್ಟೆನ್ಶನ್ ಕಾಮಗಾರಿಯನ್ನು 2018 ರಲ್ಲಿ ಉದ್ಘಾಟಿಸಲಾಗಿದೆ.
ಇನ್ನು ಮೇಡ್ ಇನ್ ಇಂಡಿಯಾ ಹಾಗೂ ಸ್ಥಳೀಯೀಕರಣವನ್ನು ಮೆಟ್ರೋ ರೈಲಿನಲ್ಲಿ ತರುವ ನಿಟ್ಟಿನಲ್ಲಿ ರೋಲಿಂಗ್ ಸ್ಟಾಕ್ಗಳ ಸ್ಟಾಂಡರ್ಸ್ ಸ್ಪೆಪಿಕೇಶನ್ನ್ನು, ಸಿಗ್ನಲಿಂಗ್ ಸಿಸ್ಟಮ್ನನ್ನು ಮತ್ತು ಎಲೆಕ್ಟ್ರಿಕಲ್ & ಎಲೆಕ್ಟ್ರೋ ಮೆಕಾನಿಕಲ್ ಸಾಮಗ್ರಿಗಳನ್ನು ಇಂಜಿನೀಯರಿಂಗ್ ಸ್ಟ್ರೆಚ್ಚರ್ಗಳನ್ನು ಅಗತ್ಯಕ್ಕೆ ಅನುಗುಣವಾಗಿ ವಿತರಿಸಲಾಗಿದೆ. ಇನ್ನು ಇಂಡಿಯನ್ ಮೆಟ್ರೋ ರೈಲು ಕಂಪನಿಗಳ ಅತ್ಯುತ್ತನ್ನ ಕಾರ್ಯದಕ್ಷತೆಗೆ ಪೂರಕವಾಗಿ ಐ ಮೆಟ್ರೋಸ್ನ್ನು 2018 ರ ಮಾರ್ಚ್ನಲ್ಲಿ ಅನುಷ್ಠಾನಗೊಳಿಸಲಾಗಿದೆ.
ದೆಹಲಿ ವಿಭಾಗ
21.06.2018 ರಂದು ದೆಹಲಿ-2021 ಎನ್ನುವ ಮಾಸ್ಟರ್ ಪ್ಲಾನ್ನನ್ನು ದೆಹಲಿ ನಾಗರಿಕರ ಪ್ರಯಾಣ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಧ್ಯಾದೇಶ ಆದೇಶ ಹೊರಡಿಸಲಾಯಿತು. ಈ ತಿದ್ದುಪಡಿಯು ಭೂಮಿಯ ದುರ್ಬಳಕೆಗೆ ತಡೆಯೊಡ್ಡಿದ್ದಷ್ಟೆ ಅಲ್ಲದೇ, ಎಫ್ಆರ್ ಗಳನ್ನು ಎಲಿಜಬಲ್ ಪ್ರಕರಗಣಗಳಲ್ಲಿ ಅನಧಿಕೃತ ನಿರ್ಮಾಣಗಳಿಗೆ ಹೆಚ್ಚುವರಿಯಾಗಿ ವಿತರಿಸುವ ಕೆಲಸ ನಿರ್ವಹಿಸುತು. ಅಲ್ಲದೆ, ಈ ವೇಳೆ ಹಸಿರು, ಪಾರ್ಕಿಂಗ್ ಸ್ಥಳ, ಸೌಲಭ್ಯತೆ, ಅಗ್ನಿ ಶಾಮಕ ಸೇವೆ, ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳ ಬಗ್ಗೆ ಗಮನಕೊಡುತ್ತದೆ.
31.12.2020 ವರೆಗೂ ನ್ಯಾಶನಲ್ ಕ್ಯಾಪಿಟಲ್ ಟೆರಿಟೋರಿ ಆಫ್ ದೆಹಲಿ ಲಾ ಕಾಯಿದೆ ( ವಿಶೇಷ ಪ್ರಾತಿನಿಧ್ಯತೆಯ ಎರಡನೇ ಕಾಯಿದೆ) 2011 ರನ್ನು ವಿಸ್ತರಿಸಲಾಗಿದೆ. ಇದು ಅನಧಿಕೃತ ಕಟ್ಟಡಗಳಿಗೆ ಸಂಬಂಧಿಸಿದಂತೆ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಸ್ಥಳೀಯ ನಗರಾಭಿವೃದ್ಧಿ ಸಂಸ್ಥೆಗಳು, ಹಾಗೂ ಇತರೇ ಸಂಸ್ಥೆಗಳಿಗೆ ಅನಧಿಕೃತ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಗತ್ಯ ನೀತಿ, ನಿಯಮ ಕಾನೂನುಗಳನ್ನು ರೂಪಿಸಲು ಅನುಷ್ಠಾನಗೊಳಿಸಲು ಸೂಕ್ತ ಸಮಯವಾಕಾಶವನ್ನು ಒದಗಿಸುತ್ತದೆ.
25.04.2018 ರಂದು ಡಿಡಿಎ ಉಪಾಧ್ಯಕ್ಷರ ಅಧ್ಯಕ್ಷೆಯತೆಯಲ್ಲಿ ಸ್ಪೆಷಲ್ ಟಾಸ್ಕ್ ಪೋರ್ಸ್ನ್ನು ರಚಿಸಲಾಗಿದೆ. ಇದು ಎಸಿಡಿ, ಎನ್ಡಿಎಂಸಿ, ದೆಹಲಿ ಪೊಲೀಸ್, ಜಿಎನ್ಸಿಟಿ, ಎಎಸ್ಐ, ಡಿಜೆಬಿ ಹಾಗೂ ಇತರೇ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಒಳಗೊಂಡಿದೆ. ಸರ್ಕಾರಿ ಭೂಮಿ, ಪಾರ್ಕಿಂಗ್ ಪ್ಲೇಸ್ ಇತ್ಯಾಧಿಗಳ ಕಡೆಗಳಲ್ಲಿ ಅನಧಿಕೃತ ನಿರ್ಮಾಣ ಹಾಗೂ ಒತ್ತುವರಿಗಳ ಬಗ್ಗೆ ಇದು ವಿಶೇಷವಾಗಿ ಗಮನವನ್ನು ಹರಿಸುತ್ತದೆ.
04.07.2018 ರಂದು ಖಾಸಗಿ ಭೂ ನಿಯಮವನ್ನು ದೆಹಲಿಯಲ್ಲಿನ ಖಾಸಗಿ ಭೂಮಿಗಳ ನಿಯಮಾವಳಿಗಳನ್ನು ಕ್ರಮಬದ್ಧಗೊಳಿಸುವ ನಿಟ್ಟಿನಲ್ಲಿ ಜಾರಿಗೆ ತರಲಾಯಿತು. ಅಲ್ಲದೆ 11 ಅಕ್ಟೋಬರ್ 2018 ರಂದು ದೀರ್ಘಾವಧಿಯಿಂದ ಪೆಂಡಿಂಗ್ನಲ್ಲಿಯೇ ಇದ್ದ ದೆಹಲಿ ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಅಗತ್ಯ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದ ಯೋಜನೆಯನ್ನ ಸಚಿವಾಲಯವು ಅಧ್ಯಾಧೇಶಗೊಳಿಸಿದೆ. ಹಾಗೂ ಈ ಯೋಜನೆಯ ಅನುಷ್ಠಾನಗೊಳಿಸುವಿಕೆಯನ್ನು ಡಿಡಿಎ 24 ಅಕ್ಟೋಬರ್ 2018 ರಂದು ಖಾತರಿಗೊಳಿಸಿದೆ.
ಸಾರ್ವಜನಿಕ ಹಾಗೂ ಖಾಸಗಿ ಸಹಬಾಗಿತ್ವದಲ್ಲಿ ಕಥ್ಪಟ್ಲಿ ಕಾಲೋನಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು 2019 ರಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಳ್ಳುವ ನಿರೀಕ್ಷೆಯು ಇದೆ. ಈ ಯೋಜನೆಯ ಅಡ್ಡಿಯಲ್ಲಿ 2800 ಇಡಬ್ಲ್ಯುಎಸ್ ಪ್ಲಾಟ್ಗಳನ್ನು ನಿರ್ಮಿಸಲಾಗಿದೆ.
2018 ನೇ ಸಾಲಿನಲ್ಲಿ ಯುಡಿಎಫ್ ಅನುಧಾನವನ್ನು ಒಳಗೊಂಡ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.( ಶೇಕಡಾ 80 ರಷ್ಟು ಸಚಿವಾಲಯದ ವೆಚ್ಚ ಒಳಗೊಂಡಿರುವ ಯೋಜನೆ) ಜಿಲ್ಲಾ ಕೇಂದ್ರ ನೆಹರು ಪ್ಲೇಸ್ನ್ನು 162.79 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದು. ಜಿಲ್ಲಾ ಕೇಂದ್ರ ಬೈಕಾಜಿ ಕಾಮ ರೂ 72.54 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದು. ರೂ 236.44 ಕೋಟಿ ವೆಚ್ಚದ ದೆಹಲಿ (ಉತ್ತರ , ದಕ್ಷಿಣ, ಪೂರ್ವ) ಮುನ್ಸಿಪಲ್ ಕಾರ್ಪೋರೇಶನ್ಗಳಲ್ಲಿ ತ್ಯಾಜ್ಯ ನಿರ್ವಹಣಾ ಯೋಜನೆ. ರೂ 88.56 ಕೋಟಿ ವೆಚ್ಚದಲ್ಲಿ ಏರ್ಪೋರ್ಟ್ನ ತ್ಯಾಜ್ಯ ನಿರ್ವಹಣೆಗಾಗಿ ಸೆಕ್ಟರ್ 8 ರಲ್ಲಿ ಎಸ್ ಡಬ್ಲ್ಯು ಡ್ರೈನ್ ನಿರ್ಮಾಣ ಯೋಜನೆಗಳನ್ನು ಈ ಅನುಧಾನದ ಅಡಿಯಲ್ಲಿ ಕೈಗೊಳ್ಳಲಾಗಿದೆ. ಇದಲ್ಲದೆ, ಉತ್ತರ ಮಹಾಬಲಿ ಪುರ ಬೈಪಾಸ್ ರೋಡ್ನಲ್ಲಿ ಫ್ಲೈಓವರ್ ಪಾಸ್, ಹನುಮಾನ್ ಮಂದಿರದ ಬಳಿಯಲ್ಲಿ ಪ್ಲೈಓವರ್ ಪಾಸ್ಗೆ ಶಿಲನ್ಯಾಸ ಮತ್ತು ಐಟಿಒ ಕ್ರಾಸಿಂಗ್ ಹಾಗೂ ರಾಣಿ ಜಾನ್ಸಿ ರೋಡ್ನಲ್ಲಿ ಸೈವಾಕ್ಗಳನ್ನು ಈ ಆರ್ಥಿಕ ಸಾಲಿನಲ್ಲಿ ಉದ್ಘಾಟಿಸಲಾಗಿದೆ
ರಿಯಲ್ ಎಸ್ಟೇಟ್ಸ್
ಇನ್ನು ಸಂಪದ 21 ನ್ನು ಅನುಷ್ಠಾನಗೊಳಿಸಲಾಗಿದ್ದು, ಎಲ್ಲಾ 21 ಸೇವೆಗಳನ್ನು ಆನ್ಲೈನ್ನಲ್ಲಿ ಸಿಗುವಂತೆ ವೆಬ್ಸೈಟನ್ನು ಅಭಿವೃದ್ಧಿ ಪಡಿಸಲಾಗಿದೆ ಅಲ್ಲದೆ ಈ ನಿಟ್ಟಿನಲ್ಲಿ ಡಿಮ್ಯಾಂಡ್ ಸರ್ಟಿಫಿಕೆಟ್ ವಿತರಣೆ ಹಾಗೂ ಅನ್ಲೈನ್ ಫೀಸ್ ಕಟ್ಟುವ ಸಂಬಂಧ ಆಗುತ್ತಿದ್ದ ತೊಂದರೆಗಳನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ.
ಜಿಪಿಆರ್ಎಗಾಗಿ ಎಲ್ಲಾ ಕೇಂದ್ರ ಸಚಿವಾಲಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಆನ್ಲೈನ್ನಲ್ಲಿಯೇ ಲಭ್ಯಗೊಳಿಸುವ ಮಾದರಿಯನ್ನು 02.07.2018 ರಂದು ಜಾರಿಗೆ ತರಲಾಗಿದೆ. ಅಲ್ಲದೆ, ಎಪ್ರಿಲ್ 2018 ರಲ್ಲಿ ಜಿಪಿಆರ್ಎ ನ ಮಾದರಿ ಅರ್ಜಿಗಳನ್ನು ಅನುಷ್ಠಾನಗೊಳಿಸಲಾಯಿತು. ಹೊಸ ಜಿಎಪಿಒಎ ಕಟ್ಟಡವೂ ಅಲಹಾಬಾದ್ನಲ್ಲಿ ನಿರ್ಮಾಣವಾಗುತ್ತಿದೆ. ಸುಮಾರು 37636 ಚದರ ಅಡಿ ವೀಸ್ತೀರ್ಣದ ಜಾಗವನ್ನು 8 ಕಚೇರಿಗಳಿಗೆ ನೀಡಲಾಗಿದೆ. ಅಲ್ಲದೆ ಹೊಸ ಹಾಲಿಡೆ ಹೋಮ್ಗಳ ನಿರ್ಮಾಣ ಭುವನೇಶ್ವರ ಮತ್ತು ಜೈಸ್ಮಿಲ್ಲರ್ನಲ್ಲಿ ಮುಗಿದಿದ್ದು ಆನ್ಲೈನ್ ಬುಕ್ಕಿಂಗ್ಗಾಗಿ ಮುಕ್ತಗೊಳಿಸಲಾಗಿದೆ.
ಸಾರ್ವಜನಿಕ ಪ್ರದೇಶ ಕಾಯಿದೆ 1971 ರ ತಿದ್ದುಪಡಿಯಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿನ ಒತ್ತುವರಿ ತೆರುವು ಕಾರ್ಯಾಚರಣೆಗಳು 2015 ರಿಂದ ವೇಗ ಪಡೆದುಕೊಂಡವು.
ಎಲ್&ಡಿಒ ಜಿಐಎಸ್ ಡೆಟಾಗಳನ್ನು ಇ ಭರ್ತಿ ಪೋರ್ಟಲ್ನಲ್ಲಿ ಅಳವಡಿಸು ಕಾರ್ಯದಲ್ಲಿ ನಿರತವಾಗಿದೆ ಮತ್ತು ದೆಹಲಿಯ ಒಟ್ಟು 65, 000 ಆಸ್ತಿಗಳ ಪೈಕಿ 25,736 ಆಸ್ತಿಗಳ ದಾಖಲೆಗಳನ್ನು ಡಿಜಿಟಲೈಸ್ ಮಾಡಲಾಗಿದೆ.
ಡಿಜಿಸಲೈಜೇಷನ್ ಆಫ್ ಪಿಸಿಕಲ್ ಪ್ರೋಗ್ರೆಸ್ ಆಫ್ ವರ್ಕ್ಸ್( ಇ-ಎಂಬಿ) ಮಾಡಲ್ ಆಫ್ ಪಿಎಫ್ಎಂಸ್
ರೂ 20,000 ಸಾವಿರ ಕೋಟಿಯಷ್ಟು ಹಣವನ್ನು ವಾರ್ಷಿಕ ಆನ್ಲೈನ್ ಮೂಲಕ ನೀಡಲು ಸಾಧ್ಯವಾಗುವಂತಹ ಡಿಜಿಟಲೈಜೇಷನ್ ರೂಪಾಂತರಕ್ಕೆ ಕೇಂಧ್ರ ಸಿಪಿಡಬ್ಲ್ಯುಡಿ ಇಲಾಖೆಯು ಒಳಗಾಗಿದೆ. ದೇಶದ ನಾನೂರು ಕ್ಷೇತ್ರಾಧಿಕಾರಗಳ ಸಹಾಯದಿಂಧ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಪರಿಣಾಮವಾಗಿ ಇದು ಡಿಜಿಟಲ್ ಕ್ಷೇತ್ರದಲ್ಲಿ ಮೊದಲ ಸಾರ್ವಜನಿಕ ಸಚಿವಾಲಯದ ಡಿಜಟಿಲೀಕರಣಗೊಂಡ ಸಚಿವಾಲಯ ಎನಿಸಿಕೊಂಡಿದೆ. ಸಿಪಿಡಬ್ಲ್ಯುಡಿ ವಿಭಾಗದಲ್ಲಿ ಕೈಗೊಂಡ ದೇಶದ ಯಾವುದೇ ಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯ ರಿಯಲ್ ಟೈಂ ಮಾನಿಟಿರಿಂಗ್ನ ಮಾಹಿತಿ ನೀಡುವ ಆನ್ಲೈನ್ ವೇದಿಕೆ ಇ-ಎಂಬಿ ಮಾಡಲ್ನ್ನ 2018 ರಲ್ಲಿ ವಿಶೇಷವಾಗಿ ಕಾರ್ಯಚರಣೆ ಮೂಲಕ ಅನುಷ್ಟಾನಗೊಳಿಸಲಾಯಿತು.
2018 ನೇ ಏಪ್ರಿಲ್ನಲ್ಲಿ ಎ-ಎಂಬಿ ಮಾಡಲನ್ನು ಜಾರಿಗೊಳಿಸಲಾಗಿದೆ. ಹಣಕಾಸು ಹಾಗೂ ಬೌತಿಕ ಪ್ರಗತಿ ಎರಡನ್ನೂ ಪರಿಶಿಲಿಸಬಹುದಾದ ನಾಗಿಕರ ಸಚಿವಾಲಯದ ಮೊದಲ ಸಂಘಟಿತ ವೆಬ್ ಸೈಟ್ ಇದಾಗಿದೆ. ಈ ವೆಬ್ನಲ್ಲಿ ದೇಶದ ಎಲ್ಲಾ ಸಿಪಿಡಬ್ಲ್ಯುಡಿ ವಿಭಾಗಗಳನ್ನು ಸಂಪರ್ಕಿಸಬಹುದಾಗಿದೆ. ಕಗ್ಗತ್ತಲ ಪ್ರದೇಶಗಳನ್ನು ಒಳಗೊಂಡಂತೆ ದೇಶದ ನಾನೂರು ಕಚೇರಿಗಳು ಕೈಗೊಂಡಿರುವ 8000 ಯೋಜನೆಗಳ ಹಣಕಾಸು ಹಾಗೂ ಬೌತಿಕ ವಿವರಗಳು ಈ ಆನ್ಲೈನ್ ಪೋರ್ಟಲ್ನಲ್ಲಿ ಲಭ್ಯವಾಗಿದೆ.
2018 ಏಪ್ರಿಲ್ 13 ರಂದು ಸಚಿವಲಾಯದಲ್ಲಿ ಕ್ಯಾಶ್ಲೆಸ್ ವಹಿವಾಟವನ್ನು ನಡೆಸುವ ಉದ್ದೇಶದಿಂದಾಗಿ ಆನ್ ಲೈನ್ ಸ್ಮಾರ್ಟ್ ಕಾರ್ಡ್ ಪೇಮೆಂಟ್ಗೆ ಅವಕಾಶವನ್ನು ಕಲ್ಪಿಸಲಾಯಿತು. ಈ ಸಂಬಂಧ ಸಚಿವಾಲಯದಿಂದ ವಿವಿಧ ವಿಭಾಗಗಳಿಗೆ 1364 ಕಾರ್ಡ್ಗಳನ್ನು ವಿತರಿಸಲಾಯಿತು. 2018 ನೇ ಸಾಲಿನಲ್ಲಿ ಒಟ್ಟು 69 ಪಿಒಎಸ್ ಮಿಷನ್ಗಳನ್ನ ಹಾಲಿಡೇ ಹೋಮ್ಗಳಲ್ಲಿ, ಪ್ರವಾಸೋಧ್ಯಮ ಅಧಿಕಾರಿಗಳ ಬಳಿಯಲ್ಲಿ, ಹಾಸ್ಟೆಲ್ ಹಾಗೂ ಸಿಪಿಡಬ್ಲ್ಯುಡಿ ಗೆಸ್ಟ್ ಹೌಸ್ಗಳಲ್ಲಿ ಹಾಗೂ ಎಲ್ ಮತ್ತು ಡಿಎಂ ಕಚೇರಿಗಳಲ್ಲಿ ವಿತರಿಸಲಾಗಿದೆ. ಶೇಕಡಾ ನೂರರಷ್ಟು ಡಿಜಟಲೀಕರಣದ ಉದ್ದೇಶದೊಂದಿಗೆ ಈ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಐಐಡಿ, ಐಐಐಟಿ, ಐಐಎಂ ಹಾಗೂ ಐಐಎಸ್ಇಆರ್ಗಳ ನಿರ್ಮಾಣಕ್ಕೆ ಮಾನವ ಸಂಪನ್ಮೂಲ ಇಲಾಖೆಯು ಕೈಗೊಂಡಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ರೂ 5749 ಕೋಟಿ ಮೊತ್ತದ ನಿರ್ಮಾಣ ಕಾಮಗಾರಿಯನ್ನು ಸಿಪಿಡಬ್ಲ್ಯುಡಿ ಸಚಿವಾಲಯ ಕೈಗೆತ್ತಿಕೊಂಡಿದೆ. ಅಲ್ಲದೆ ಪಿಎಂಎಸ್ಎಸ್ವೈ ನ 1472 ಕೋಟಿ ರೂಪಾಯಿ ಮೌಲ್ಯದ ನಿರ್ಮಾಣ ಕಾಮಗಾರಿ ಮತ್ತು ರೂ 3069 ಕೋಟಿ ವೆಚ್ಚದ ಇಂಡೋ ಚೈನಾ ಗಡಿಯಲ್ಲಿ ಗಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಿಪಿಡಬ್ಲ್ಯುಡಿ ಕೈಗೆತ್ತಿಕೊಂಢಿದೆ. ಹೆಚ್ಆರ್ಐಡಿಎವೈ ಗೆ ಸಂಬಂಧಿಸಿದ ಬದಾಮಿ, ಅಮೃತಸರ್, ಮತ್ತು ವಾರಾಣಾಸಿಯಲ್ಲಿನ ಕಾಮಗಾರಿಗಳನ್ನ ಸಿಪಿಡಬ್ಲ್ಯುಡಿ ನಿರ್ವಹಿಸುತ್ತಿದೆ.
ಹೊಸ ತಂತ್ರಜ್ಞಾನದ ಅಳವಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿಪಿಡಬ್ಲ್ಯಡಿಯು ಒಟ್ಟು 10 ಹೊಸ ಕಟ್ಟಡ ಕಾಮಗಾರಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಹಾಗೂ ಈ ಸಂಬಂಧ ಹೊಸ ಪರಿಷ್ಕೃತ ದರವನ್ನು ನಿಗದಿಪಡಿಸಿದೆ. ಅಲ್ಲದೆ ಸಿಪಿಡಬ್ಲ್ಯುಡಿಯು ಕಟ್ಟಡ ನಿರ್ಮಾಣ ಹಾಗೂ ಡೆಮಾಲಿಷನ್ ತ್ಯಾಜ್ಯಗಳ ಸದ್ಭಳಕೆಗೂ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಸಂಬಂಧ ಪಾವರ್ ಬ್ಲಾಕ್ಸ್ ಹಾಗೂ ಕಾಂಕ್ರಿಟ್ ಬ್ಲಾಕ್ಗಳಲ್ಲಿ ಕಟ್ಟಡ ತ್ಯಾಜ್ಯಗಳ ಬಳಕೆಗೆ ಸೂಚನೆ ನೀಡಲಾಗಿದ್ದು, ಈ ಮೂಲಕ ಅವುಗಳ ದರಗಳಲ್ಲಿ ಕಡಿತಗೊಳಿಸಲು ಸಹಕಾರಿಯಾಗಿ ನಿಂತಿದೆ.
ರಾಷ್ಟ್ರಪತಿ ಭವನ ಹಾಗೂ ವಾರಣಾಸಿಯಲ್ಲಿ ಗಂಗಾ ತೀರದಲ್ಲಿ ಕಟ್ಟಡಗಳಲ್ಲಿ ಬೆಳಕಿನ ವ್ಯವಸ್ಥೇ ಕಲ್ಪಸಿರುವುದು ಸಿಪಿಡಬ್ಲ್ಯುಡಿಯ ಮಹತ್ತರ ಸಾಧನೆಗಳಲ್ಲಿ ಒಂದು. ಉಳಿದಂತೆ ಜಿಪಿಒಎ ಮೂಲಕ ಸಚಿವಾಲಯವೂ ಮಂತ್ರ ಯೋಜನೆ ಮೂಲಕ ರೂಫ್ಟಾಪ್ ಸೋಲಾರ್ ಪ್ಲಾಂಟ್ ಗಳನ್ನು ಒದಗಿಸುತ್ತಿದೆ.
*******
(Release ID: 1558597)
Visitor Counter : 146