ಗೃಹ ವ್ಯವಹಾರಗಳ ಸಚಿವಾಲಯ
2018 ವರ್ಷಾಂತ್ಯದ ಪರಾಮರ್ಶೆ – ಗೃಹ ವ್ಯವಹಾರಗಳ ಸಚಿವಾಲಯ
Posted On:
14 DEC 2018 5:44PM by PIB Bengaluru
ಸುಗಮವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದ್ದು, ಈಶಾನ್ಯ ಭಾಗದಿಂದ ಎ.ಎಫ್.ಪಿ.ಎಸ್.ಎ. ತೆರವು, ಅಸ್ಸಾಂನಲ್ಲಿ ಶಾಂತಿಯುತವಾಗಿ ಎನ್.ಆರ್.ಸಿ. ಜಾರಿ, ಎಲ್.ಡಬ್ಲ್ಯು.ಇ. ಸನ್ನಿವೇಶದಲ್ಲಿ ಸುಧಾರಣೆ, ಪಶ್ಚಿಮ ಗಡಿಯಲ್ಲಿ ಸ್ಮಾರ್ಟ್ ಬೇಲಿ, ಭಾರತದಾದ್ಯಂತ ಒಂದೇ ಸಂಖ್ಯೆಯ ತುರ್ತು ದೂರವಾಣಿ ಸಂಖ್ಯೆ “112’’ಕ್ಕೆ ಚಾಲನೆ, ದ್ವಿಪಕ್ಷೀಯ ಭದ್ರತಾ ಸಹಕಾರ ಕುರಿತಂತೆ ಭಾರತ – ಚೈನಾ ಪ್ರಥಮ ಒಪ್ಪಂದ ಮತ್ತು ರಾಷ್ಟ್ರೀಯ ಪೊಲೀಸ್ ಸ್ಮಾರಕದ ಅನಾವರಣ.
ಮುಖ್ಯಾಂಶಗಳು
2018ರಲ್ಲಿ ಆಂತರಿಕ ಭದ್ರತೆಯ ಸನ್ನಿವೇಶ ಬಹುತೇಕ ಶಾಂತಿಯುತವಾಗಿತ್ತು, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಚೈನಾ ಗಡಿಯಲ್ಲಿ ಪರಿಸ್ಥಿತಿ ಗಣನೀಯ ಸುಧಾರಣೆ ಕಂಡಿದೆ. ಪಶ್ಚಿಮದ ಗಡಿಯಲ್ಲಿ ಭದ್ರತಾ ಪಡೆಗಳು ಕದನ ವಿರಾಮ ಉಲ್ಲಂಘನೆ ಮತ್ತು ತಟಸ್ಥ ಒಳನುಸುಳುವಿಕೆ ಪ್ರಯತ್ನಗಳಿಗೆ ತಕ್ಕದಾದ ಉತ್ತರ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧದ ಸಂಘಟಿತ ಕಾರ್ಯಾಚರಣೆಗಳು ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರ ನಿರ್ಮೂಲನೆಗೆ ಕಾರಣವಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸರಾಗವಾಗಿ ನಡೆದಿವೆ. ಈಶಾನ್ಯದಲ್ಲಿ ಭದ್ರತಾ ಪರಿಸ್ಥಿತಿ ಕಳೆದ ನಾಲ್ಕು ವರ್ಷಗಳಲ್ಲಿ ವಿಸ್ತೃತ ಸುಧಾರಣೆಯಾಗಿದ್ದು, ಇದರ ಫಲವಾಗಿ ಮೇಘಾಲಯ ಮತ್ತು ಅರುಣಾಚಲ ಪ್ರದೇಶದ ಭಾಗದಿಂದ ಈ ವರ್ಷ ಎ.ಎಫ್.ಪಿ.ಎಸ್.ಎ.ಯನ್ನು ತೆರವು ಮಾಡಲಾಗಿದೆ; ಯಾವುದೇ ಹಿಂಸಾಚಾರದ ಘಟನೆಗಳಿಲ್ಲದೆ ಅಸ್ಸಾನಲ್ಲಿ ಎನ್.ಆರ್.ಸಿ. ಕರಡನ್ನು ಪ್ರಕಟಿಸಲಾಗಿದೆ ಮತ್ತು ಅಂತಿಮ ಎನ್.ಆರ್.ಸಿ. ಸೂಕ್ತ ಹಾದಿಯಲ್ಲಿದೆ. ಒಳನಾಡ ಪ್ರದೇಶದಲ್ಲಿ ಎಲ್.ಡಬ್ಲ್ಯು.ಇ. ಬಾಧಿತ ಜಿಲ್ಲೆಗಳ ಸಂಖ್ಯೆ 2013ರಲ್ಲಿದ್ದ 76ರಿಂದ ಕೇವಲ 58ಕ್ಕೆ ಇಳಿದಿದೆ.
ಪೊಲೀಸ್ ಪಡೆಗಳ ಆಧುನೀಕರಣ (ಎಂ.ಪಿ.ಎಫ್.) ಕಾರ್ಯಕ್ರಮದ ಅಡಿಯಲ್ಲಿ, ಜಮ್ಮುವಿನ ಭಾರತ –ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಸ್ಮಾರ್ಟ್ ಬೇಲಿಯ ಎರಡು ಪ್ರಾಯೋಗಿಕ ಯೋಜನೆಗಳನ್ನು ಅನಾವರಣಗೊಳಿಸಲಾಯಿತು. ಭಾರತದಾದ್ಯಂತ ಒಂದೇ ಸಂಖ್ಯೆಯ ತುರ್ತು ದೂರವಾಣಿ ಸಂಖ್ಯೆ “112’ನ್ನು ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ (ಇ.ಆರ್.ಎಸ್.ಎಸ್.) ಅಡಿಯಲ್ಲಿ ಹಿಮಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ನಲ್ಲಿ ಘೋಷಿಸಲಾಗಿದೆ. ಎಂ.ಎಚ್.ಎ. ಮಹಿಳೆಯರ ಸುರಕ್ಷತೆ ಸಮಸ್ಯೆಗಳನ್ನು ಪರಿಹರಿಸಲು ಹೊಸ ವಿಭಾಗವನ್ನೇ ಸ್ಥಾಪಿಸಿದೆ. ಈ ಮಧ್ಯೆ ಎರಡು ಪ್ರತ್ಯೇಕ ಪೋರ್ಟಲ್ ಗಳಾದ – ಮಹಿಳೆಯರು ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧ ತಡೆ (ಸಿಸಿಪಿಡಬ್ಲ್ಯುಸಿ) ಮತ್ತು ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ದತ್ತಾಂಶ (ಎನ್.ಡಿ.ಎಸ್.ಓ.), ಮಹಿಳೆಯರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಿದೆ.
ರಾಜ್ಯ ವಿಪತ್ತು ಸ್ಪಂದನೆ ನಿಧಿಯಲ್ಲಿ ಕೇಂದ್ರದ ಪಾಲನ್ನು ಶೇ.75 ರಿಂದ ಶೇ.90ಕ್ಕೆ ಹೆಚ್ಚಿಸಲಾಗಿದೆ, ಇ-ವೀಸಾದ ಅದ್ಭುತ ಯಶಸ್ಸು, ದ್ವಿಪಕ್ಷೀಯ ಭದ್ರತಾ ಸಹಕಾರ ಕುರಿತು ಮೊದಲ ಭಾರತ-ಚೀನಾ ದ್ವಿಪಕ್ಷೀಯ ಸಭೆ, ನಿಯಮಿತ ವಲಯ ಮಂಡಳಿಗಳ ಸಾಮಾನ್ಯ ಸಭೆ ನಡೆಸುವಿಕೆ, ಪ್ರಧಾನಮಂತ್ರಿಯವರ ಕರಕಮಲದಿಂದ ದೇಶಕ್ಕೆ ರಾಷ್ಟ್ರೀಯ ಪೊಲೀಸ್ ಸ್ಮಾರಕ ಸಮರ್ಪಣೆ ಮತ್ತು ಹೊಸ ಪೋಲಿಸ್ ಪದಕಗಳ ಸ್ಥಾಪನೆ,ಗತಿಸಿದ ವರ್ಷದಲ್ಲಿ ಗೃಹ ವ್ಯವಹಾರಗಳ ಸಚಿವಾಲಯದ ಇತರ ಕೆಲವು ಮುಖ್ಯಾಂಶಗಳಾಗಿವೆ.
ಜಮ್ಮು ಮತ್ತು ಕಾಶ್ಮೀರ: ಭದ್ರತಾ ಪಡೆಗಳು ಭಯೋತ್ಪಾದನೆ ತಡೆ ಕಾರ್ಯಾಚರಣೆ ಆರಂಭಿಸಿವೆ; ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕಾಶ್ಮೀರ ಕಣಿವೆಯಲ್ಲಿ ಮರುಕಳಿಸುತ್ತಿದ್ದ ಕಲ್ಲು ತೂರಾಟದ ಘಟನೆಗಳ ನಡುವೆಯೂ, ಪವಿತ್ರ ರಂಜಾನ್ ಮಾಸವನ್ನು ಪರಿಗಣಿಸಿ ಸಮಾಧಾನಕರ ಉಪಕ್ರಮದ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಮೇ 2018ರಲ್ಲಿ ಕೈಗೊಂಡು ರಾಜ್ಯದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಘೋಷಣೆ ಮಾಡಿತು; ಆದಾಗ್ಯೂ, ಪರಾಮರ್ಶೆಯ ಬಳಿಕ ರಂಜಾನ್ ಅವಧಿ ಮೀರಿ ಇದನ್ನು ವಿಸ್ತರಿಸಲಿಲ್ಲ,ನಂತರ ಭದ್ರತಾ ಪಡೆಗಳು ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದು, ಗಮನಾರ್ಹವಾದ ಫಲಿತಾಂಶ ಬಂದಿದೆ. 2018ರ ಡಿಸೆಂಬರ್ 2ರವರೆಗೆ 587 ಪ್ರಕರಣಗಳಲ್ಲಿ 238 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, 86 ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು 37 ನಾಗರಿಕರು ಈ ವರ್ಷ ಮೃತಪಟ್ಟಿದ್ದಾರೆ. ಜೂನ್ ತಿಂಗಳಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಜಮ್ಮ ಮತ್ತು ಕಾಶ್ಮೀರ ಪೊಲೀಸ್ ನಲ್ಲಿ ಎರಡು ಮಹಿಳಾ ತುಕಡಿಗಳನ್ನು ಹೆಚ್ಚಿಸಲು ತನ್ನ ಅನುಮೋದನೆ ನೀಡಿದೆ.
ಕೇಂದ್ರ ಗೃಹ ಸಚಿವ ಶ್ರೀ ರಾಜನಾಥ್ ಸಿಂಗ್ 2018ರ ಜೂನ್ 7-8ರಂದು ಎರಡು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು,ಕೇಂದ್ರ ಕ್ರೀಡಾ ಸಚಿವಾಲಯದ 'ಖೇಲೋ ಇಂಡಿಯಾ'ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಬ್ಲಾಕ್ ಮಟ್ಟದ ಕ್ರೀಡಾಕೂಟಕ್ಕೆ 14.30 ಕೋಟಿ ರೂ. ಅನುದಾನ ಮಂಜೂರು ಮಾಡುವ ಘೋಷಣೆ ಮಾಡಿದರು. ಕೇಂದ್ರ ಗೃಹ ಸಚಿವರು, ಮತ್ತೆ ಮುಂದಿನ ತಿಂಗಳು 2018ರ ಜುಲೈ 4-5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಿದ್ದರು, ಈ ಭೇಟಿಯ ವೇಳೆ, ರಾಜ್ಯದ ಅಭಿವೃದ್ಧಿ ವಿಚಾರಗಳು ಮತ್ತು ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಕೇಂದ್ರ ಗೃಹ ಸಚಿವರು ಜಮ್ಮು ಮತ್ತು ಕಾಶ್ಮೀರಕ್ಕೆ 2018 ರ ಜುಲೈ 4-5 ರಂದು ಭೇಟಿ ನೀಡಿದ್ದ ಸಮಯದಲ್ಲಿ ನಡೆಸಿದ ಪರಿಶೀಲನಾ ಸಭೆಗೆ ಅನುಗುಣವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಹೊಸ ಉಪಕ್ರಮಗಳನ್ನು ಸೆಪ್ಟೆಂಬರ್ 28ರಂದು ಎಂ.ಎಚ್.ಎ. ಪ್ರಕಟಿಸಿತು. ಇವುಗಳಲ್ಲಿ ಪ್ರಮುಖವಾದ್ದೆಂದರೆ ಐತಿಹಾಸಿಕ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವುದು. ರಾಜ್ಯದಲ್ಲಿ ಮೈಲಿಗಲ್ಲಿನ ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನ ಕೇಂದ್ರ ಗೃಹ ಸಚಿವರು ಮತ್ತೊಮ್ಮೆ ಅಕ್ಟೋಬರ್ 23ರಂದು ಶ್ರೀನಗರಕ್ಕೆ ಭೇಟಿ ನೀಡಿ, ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘಕಾಲದಿಂದ ಬಾಕಿ ಇದ್ದ ಬೇರು ಮಟ್ಟದ ಪ್ರಜಾಪ್ರಭುತ್ವದ ಪುನರ್ ಸ್ಥಾಪನೆಗೆ ನೆರವಾಯಿತು. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ 2005ರ ಬಳಿಕ ಮತ್ತು ಪಂಚಾಯತ್ ಚುನಾವಣೆಗಳು 2011ರ ಬಳಿಕ ನಡೆದವು.
ಈ ಚುನಾವಣೆಗಳು ಕ್ರಮಬದ್ಧವಾಗಿ ಸ್ಥಾಪನೆಯಾದ ಸ್ಥಳೀಯ ಸಂಸ್ಥೆಗಳಿಗೆ ದೊರಕುವ 14ನೇ ಹಣಕಾಸು ಆಯೋಗದ ಕೇಂದ್ರೀಯ ಅನುದಾನವಾದ ಸುಮಾರು 4,335 ಕೋಟಿ ರೂಪಾಯಿಗಳ ಲಭ್ಯತೆಗೆ ದಾರಿ ಮಾಡಿಕೊಟ್ಟಿವೆ. ಕೇಂದ್ರ ಸರ್ಕಾರ ಈ ಚುನಾವಣೆಗಳು ಸುಗಮವಾಗಿ ನಡೆಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ಸಂಖ್ಯೆಯಲ್ಲಿ ಕೇಂದ್ರೀಯ ಪಡೆಗಳ ನಿಯೋಜನೆಯೂ ಸೇರಿದಂತೆ ಎಲ್ಲ ಸಾಧ್ಯ ಬೆಂಬಲವನ್ನೂ ಒದಗಿಸಿತ್ತು.
ಲೆಹ್ ಮತ್ತು ಕಾರ್ಗಿಲ್ ಸ್ವಾಯತ್ತ ಗಿರಿ ಅಭಿವೃದ್ಧಿ ಮಂಡಳಿಗಳನ್ನು ಲಡಾಕ್ ವಲಯದ ದೂರದ ಪ್ರದೇಶಗಳಲ್ಲಿ ಜೀವಿನಸುವ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಎದುರಿಸಲು ದೇಶದಲ್ಲಿಯೇ ಅತ್ಯಂತ ಸ್ವಾಯತ್ತ ಮಂಡಳಿಗಳನ್ನಾಗಿ ಮಾಡಲು ಬಲಪಡಿಸಲಾಗಿದ್ದು, ಸಬಲೀಕರಿಸಲಾಗಿದೆ. ಎಲ್.ಎ.ಎಚ್.ಡಿಸಿ. ಮತ್ತು ಕೆ.ಎ.ಎಚ್.ಡಿ.ಸಿ.ಗಳಿಗೆ ಸ್ಥಳೀಯವಾಗಿ ತೆರಿಗೆ ವಿಧಿಸಿ ಸಂಗ್ರಹ ಮಾಡಲು ಹೆಚ್ಚಿನ ಅಧಿಕಾರ ನೀಡಲಾಗಿದೆ. ವಿವಿಧ ಇಲಾಖೆಗಳ ಕಾರ್ಯಚಟುವಟಿಕೆಗಳ ಮೇಲೆ ಅದರ ಜೊತೆಗೆ ತಮಗೆ ವರ್ಗಾವಣೆಯಾಗಿರುವ ವಿಷಯಗಳ ಮೇಲೆ ಕೆಲಸ ಮಾಡುವ ಸರ್ಕಾರಿ ನೌಕರರ ಮೇಲಿನ ನಿಯಂತ್ರಣವನ್ನೂ ನೀಡಲಾಗಿದೆ.
ಜೆ ಮತ್ತು ಕೆಯಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗಳಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳು ನಿರ್ವಹಿಸುವ ನಿರ್ಣಾಯಕ ಪಾತ್ರವನ್ನು ಪರಿಗಣಿಸಿ, ಎಂ.ಎಚ್.ಎ. ಅವರ ಸಂಭಾವನೆಯನ್ನು ಮಾಸಿಕ 6,000 ರೂಪಾಯಿಗಳಿಂದ 5 ವರ್ಷ ಪೂರ್ಣಗೊಂಡವರಿಗೆ 9,000 ಮತ್ತು 15 ವರ್ಷ ಪೂರ್ಣಗೊಂಡವರಿಗೆ 12,000 ರೂ.ಗೆ ಹೆಚ್ಚಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಸುಮಾರು 5,764 ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ 5.5 ಲಕ್ಷ ಆರ್ಥಿಕ ನೆರವಿನ ಯೋಜನೆಗೂ ಎಂ.ಎಚ್.ಎ. ಅನುಮೋದನೆ ನೀಡಿದೆ.
ಶಾಂತಿಯುತ ಈಶಾನ್ಯ: ಮೇಘಾಲಯ ಮತ್ತು ಅರುಣಾಚಲದ ಭಾಗದಿಂದ ಎ.ಎಫ್.ಪಿ.ಎಸ್.ಎ. ತೆರವು ; ಎನ್.ಆರ್.ಸಿ. ಕರಡು ಶಾಂತಿಯುತವಾಗಿ ಜಾರಿ; ಹೆಚ್ಚಿನ ಬಂಡುಕೋರ ಗುಂಪುಗಳೊಂದಿಗೆ ಒಪ್ಪಂದ
ಈಶಾನ್ಯದಲ್ಲಿ ಭದ್ರತೆಯ ಪರಿಸ್ಥಿತಿ ನಿರಂತರವಾಗಿ ಸುಧಾರಿಸುತ್ತಿದೆ. 1997ರಿಂದ ಎರಡು ದಶಕಗಳ ಬಳಿಕ ಕಳೆದ ವರ್ಷ ಅತಿ ಕಡಿಮೆ ವಿಧ್ವಂಸಕ ಕೃತ್ಯಗಳು ಮತ್ತು ನಾಗರಿಕರ ಹಾಗೂ ಭದ್ರತಾ ಪಡೆಗಳಲ್ಲಿನ ಸಾವಿನ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ತ್ರಿಪುರ ಮತ್ತು ಮಿಜೋರಾಂಗಳಲ್ಲಿ ಯಾವುದೇ ಬಹುತೇಕ ಯಾವುದೇ ಬಂಡುಕೋರತನ ಉಳಿದಿಲ್ಲ. ಈ ವಲಯದ ಇತರ ರಾಜ್ಯಗಳಲ್ಲಿ ಕೂಡ ಭದ್ರತಾ ಪರಿಸ್ಥಿತಿ ಗಣನೀಯವಾಗಿ ಸುಧಾರಣೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ 2014ರಿಂದೀಚೆಗೆ ವಲಯದಲ್ಲಿ ಬಂಡುಕೋರ ಘಟನೆಗಳಲ್ಲಿ ಶೇ.63ರಷ್ಟು ಇಳಿಮುಖವಾಗಿದೆ. ಅದೇ ರೀತಿ 2014ಕ್ಕೆ ಹೋಲಿಸಿದರೆ 2017ರಲ್ಲಿ ನಾಗರಿಕರ ಸಾವಿನ ಸಂಖ್ಯೆಯಲ್ಲಿ ಕೂಡ ದೊಡ್ಡ ಪ್ರಮಾಣದ ಅಂದರೆ ಶೇ.83ರಷ್ಟು ಮತ್ತು ಭದ್ರತಾ ಪಡೆಗಳ ಹುತಾತ್ಮರ ಸಂಖ್ಯೆಯಲ್ಲಿ ಶೇ.40ರಷ್ಟು ಇಳಿಕೆಯಾಗಿದೆ.
ಇದಲ್ಲದೆ, ಮಾರ್ಚ್ 31 ರಂದು ಮೇಘಾಲಯದ ಎಲ್ಲಾ ಪ್ರದೇಶಗಳಿಂದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳ) ಕಾಯಿದೆ (ಎಎಫ್ಎಸ್ಪಿಎ) ಅನ್ನು ತೆರವು ಮಾಡಿರುವುದು ಈಶಾನ್ಯ ವಲಯದಲ್ಲಿ ಭದ್ರತಾ ಪರಿಸ್ಥಿತಿಯ ವಿಸ್ತೃತ ಸುಧಾರಣೆಯ ಸಂಕೇತವಾಗಿದೆ. ಅರುಣಾಚಲ ಪ್ರದೇಶದಲ್ಲಿ ಸಹ, ಎ.ಎಫ್.ಎಸ್.ಪಿ.ಎ. ಅಡಿಯಲ್ಲಿದ್ದ ಪ್ರದೇಶಗಳನ್ನು ಕಡಿಮೆ ಮಾಡಲಾಗಿದ್ದು, ತಿರಾಪ್, ಚಾಂಗ್ಲಾಂಗ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳನ್ನು ಹೊರತುಪಡಿಸಿ, ಅಸ್ಸಾಂ ಗಡಿಯ 16 ಪಿ.ಎಸ್./ಹೊರಠಾಣೆ ಪ್ರದೇಶಗಳನ್ನು 8 ಪೊಲೀಸ್ ಠಾಣೆಗೆ ಇಳಿಸಲಾಗಿದೆ.
28 ಏಪ್ರಿಲ್ ನಿಂದ ಜಾರಿಗೆ ಬರುವಂತೆ ಎನ್.ಎಸ್.ಸಿ.ಎನ್/ಎನ್.ಕೆ. ಮತ್ತು ಎನ್.ಎಸ್.ಸಿ.ಎನ್/ಆರ್ ಜೊತೆಗೆ ಮತ್ತೊಂದು ವರ್ಷಕ್ಕೆ ಕದನ ವಿರಾಮವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.
1997 ರಿಂದೀಚೆಗೆ ಮಿಜೋರಾಂನಿಂದ ಸ್ಥಳಾಂತರಗೊಂಡ ಬ್ರೂ ವ್ಯಕ್ತಿಗಳ ವಾಪಸಾತಿಗೆ ಈಶಾನ್ಯದೊಂದಿಗೆ ಮಾತುಕತೆ ಮುಂದುವರೆದು, ಕೇಂದ್ರ ಗೃಹ ಸಚಿವ ಶ್ರೀ ರಾಜನಾಥ್ ಸಿಂಗ್, ಮಿಜೋರಾಂ ಮುಖ್ಯಮಂತ್ರಿ ಶ್ರೀ ಲಲ್ತಾನ್ಹಾಲಾ ಮತ್ತು ತ್ರಿಪುರ ಮುಖ್ಯಮಂತ್ರಿ ಶ್ರೀ ಬಿಪ್ಲಾಬ್ ಕುಮಾರ್ ದೇಬ್ ಉಪಸ್ಥಿತಿಯಲ್ಲಿ ಭಾರತ ಸರ್ಕಾರ, ಮಿಜೋರಾಂ ಮತ್ತು ತ್ರಿಪುರ ಮತ್ತು ಮಿಜೋರಾಂನಿಂದ ಸ್ಥಳಾಂತರಗೊಂಡ ಬ್ರೂ ಪೀಪಲ್ಸ್ ಫೋರಮ್ (ಎಂ.ಬಿ.ಡಿಪಿಎಫ್) ನಡುವೆ ಜುಲೈ 3ರಂದು ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.
ರಾಷ್ಟ್ರೀಯ ಪೌರತ್ವ ದಾಖಲಾತಿ (ಎನ್.ಆರ್.ಸಿ.) ಕರಡು ಘಟನೆ-ಮುಕ್ತವಾಗಿ ಜಾರಿಯಾಗಿರುವುದು ಒಂದು ಗಮನಾರ್ಹ ಸಾಧನೆಯಾಗಿದೆ. 2018ರ ಜುಲೈ 30ರಂದು ಎನ್.ಆರ್.ಸಿ. ಕರಡು ಪ್ರಕಟಣೆಗೆ ಮುನ್ನ ಜುಲೈ 25ರಂದು ಎಂ.ಎಚ್.ಎ. ಅಸ್ಸಾಂ ರಾಜ್ಯ ಸರ್ಕಾರ ಮತ್ತು ನೆರೆಯ ರಾಜ್ಯಗಳಿಗೆ ಮಾರ್ಗಸೂಚಿ ನೀಡಿ, ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ನಿರ್ದೇಶಿಸಿತ್ತು. ಅಸ್ಸಾಂನಲ್ಲಿ ಎನ್.ಆರ್.ಸಿ. ಕರಡು ಪ್ರಕಟಣೆ ಮಾಡುವ ಸಿದ್ಧತೆಯಿಂದ ಪ್ರಕಟಣೆಯವರೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 22 ಮತ್ತು 30 ಜುಲೈ ರಂದು ಪ್ರತ್ಯೇಕವಾದ ಹೇಳಿಕೆಗಳನ್ನು ನೀಡಿ, ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ದೊರೆಯುತ್ತದೆ ಮತ್ತು ಮಾನವೀಯ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದರು.
ಕೇಂದ್ರ ಗೃಹ ಸಚಿವರು 2018ರ ಜುಲೈ 9-10ರಂದು ಶಿಲ್ಲಾಂಗ್ ನಲ್ಲಿ ಈಶಾನ್ಯ ಮಂಡಳಿ (ಎನ್.ಇ.ಸಿ.) 67ನೇ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿದ್ದರು,ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅನುಮೋದಿಸಿರುವ 4,500 ಕೋಟಿ ರೂಪಾಯಿಗಳ ಹಣಕಾಸು ಪ್ಯಾಕೇಜ್ ನ ಸಮರ್ಥ ಅನುಷ್ಠಾನಕ್ಕೆ 8 ಸದಸ್ಯ ರಾಜ್ಯಗಳಿಗೆ ಗೃಹ ಸಚಿವರು ಮನವಿ ಮಾಡಿದರು ಮತ್ತು ಸರ್ಕಾರಿ ಪ್ರಾಯೋಜಿತ ಯೋಜನೆಗಳ ಉತ್ತಮ ಒಗ್ಗೂಡಿಸುವಿಕೆ ಮತ್ತು ನಿರ್ದಿಷ್ಟ ಪ್ರದೇಶಗಳ ಗನಮಕ್ಕೆ ನಿರ್ದೇಶಿಸಿದರು.
ಎಡ ಪಂಥೀಯ ವಿಧ್ವಂಸಕತೆ (ಎಲ್.ಡಬ್ಲ್ಯು.ಇ.)ಯಿಂದ ಬಾಧಿತವಾದ ಪ್ರದೇಶಗಳ ಇಳಿಕೆ, ಅಭಿವೃದ್ಧಿಯ ಬೆಳಕು
ಕಳೆದ ನಾಲ್ಕು ವರ್ಷಗಳಲ್ಲಿ, ಎಲ್.ಡಬ್ಲ್ಯು.ಇ. ಸನ್ನಿವೇಶದಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಹಿಂಸಾತ್ಮಕ ಘಟನೆಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಆಗದ್ದು,ಎಲ್.ಡಬ್ಲ್ಯು.ಇ. ಹಿಂಸಾಚಾರದ ಭೌಗೋಳಿಕ ವ್ಯಾಪ್ತಿ ಸಹ 2013ರಲ್ಲಿದ್ದ 76 ಜಿಲ್ಲೆಗಳಿಂದ ಕೇವಲ 58ಕ್ಕೆ ಇಳಿದಿದೆ. ಜೊತೆಗೆ, ದೇಶದಲ್ಲಿ ಈ ಜಿಲ್ಲೆಗಳ ಪೈಕಿ ಕೇವಲ 30ರಲ್ಲಿ ಶೇ.90ರಷ್ಟು ಎಲ್.ಡಬ್ಲ್ಯು.ಇ. ಹಿಂಸಾಚಾರದ ಪಾಲನ್ನು ಹೊಂದಿವೆ. ಅದೇ ವೇಳೆ, ಕೆಲವು ಹೊಸ ಜಿಲ್ಲೆಗಳು ಎಡಪಂಥೀಯ ವಿಧ್ವಂಸಕರ ವಿಸ್ತರಣೆಯ ಗಮನಾರ್ಹ ಕೇಂದ್ರವಾಗಿ ಹೊರಹೊಮ್ಮಿವೆ.
ಸಂಪನ್ಮೂಲಗಳ ನಿಯೋಜನೆಯು ಬದಲಾದ ವಾಸ್ತವತೆಯೊಂದಿಗೆ ಸಮೀಕರಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಾಧಿತ ಜಿಲ್ಲೆಗಳ ಪರಿಶೀಲನೆಗೆ ರಾಜ್ಯಗಳೊಂದಿಗೆ ಎಂ.ಎಚ್.ಎ. ಸಮಗ್ರ ಕಸರತ್ತು ನಡೆಸಿದೆ. ಆ ಪ್ರಕಾರವಾಗಿ, ಭದ್ರತೆ ಸಂಬಂಧಿತ ವೆಚ್ಚ ಯೋಜನೆ (ಎಸ್.ಆರ್.ಇ.) ಜಿಲ್ಲೆಗಳ ಪಟ್ಟಿಯಿಂದ 44 ಜಿಲ್ಲೆಗಳನ್ನು ಕೈಬಿಡಲಾಗಿದ್ದು, 8 ಹೊಸ ಜಿಲ್ಲೆಗಳನ್ನು ಸೇರಿಸಲಾಗಿದೆ.
ಕೇಂದ್ರ ಗೃಹ ಸಚಿವರು ಛತ್ತೀಸಗಡದ ಅಂಬಿಕಾಪುರದಲ್ಲಿ ಮೇ 21ರಂದು ಸಿ.ಆರ್.ಪಿ.ಎಫ್.ನ 241 ಬಸ್ತಾರಿಯಾ ತುಕಡಿಯ ನಿರ್ಗಮನ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು. ಬಸ್ತಾರ್ ಪ್ರದೇಶದಲ್ಲಿ ಸಿಆರ್.ಪಿ.ಎಫ್.ನ ಪ್ರತಿರೋಧ ವಿನ್ಯಾಸದಲ್ಲಿ ಸ್ಥಳೀಯ ಪ್ರಾತಿನಿಧ್ಯವನ್ನು ಹೆಚ್ಚಿಸಲು 2017ರ ಏಪ್ರಿಲ್ 1ರಂದು ಬಸ್ತಾರಿಯಾ ಬೆಟಾಲಿಯನ್ ಅಸ್ತಿತ್ವಕ್ಕೆ ಬಂದಿದೆ.
ಆಂತರಿಕ ಭದ್ರತೆ: ಸಮೂಹ ದಾಳಿ ಪ್ರಕರಣಗಳು, ವಿಧ್ವಂಸಕತೆ ಮತ್ತು ಅಂತರ್ಜಾಲದಲ್ಲಿ ವದಂತಿ ಹರಡುವ ಪ್ರಕರಣಗಳನ್ನು ದೃಢವಾಗಿ ನಿಭಾಯಿಸಿದ ಎಂ.ಎಚ್.ಎ.
ಆಂತರಿಕ ಭದ್ರತೆ ರಂಗದಲ್ಲಿ, ಮಾರ್ಚ್ 7ರಂದು ಎಂ.ಎಚ್.ಎ. ರಾಜ್ಯಗಳಿಗೆ ಎರಡು ಸೂಚನೆಗಳನ್ನು ನೀಡಿದ್ದು, ದೇಶದ ಕೆಲವು ಭಾಗಗಳಲ್ಲಿ ಪ್ರತಿಮೆಗಳ ವಿಧ್ವಂಸಕತೆ ವಿಚಾರದಲ್ಲಿ ದೃಢ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿತ್ತು. ಸಮೂಹ ದಾಳಿ ಪ್ರಕರಣಗಳನ್ನೂ ಸಮರ್ಥವಾಗಿ ನಿರ್ವಹಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿತ್ತು. ಜುಲೈ 23ರಂದು ಸರ್ಕಾರ ಸಮೂಹ ದಾಳಿ ಪ್ರಕರಣಗಳ ಕುರಿತಂತೆ ಚರ್ಚಿಸಲು ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ (ಎಚ್.ಎಲ್.ಸಿ.) ರಚಿಸಿತು; ತರುವಾಯ ಎಚ್.ಎಲ್.ಸಿ.ಯ ಶಿಫಾರಸುಗಳನ್ನು ಪರಿಗಣಿಸಲು ಕೇಂದ್ರ ಗೃಹ ಸಚಿವರ ನೇತೃತ್ವದ ಸಚಿವರ ಗುಂಪನ್ನು ರಚಿಸಲು ಸರ್ಕಾರ ನಿರ್ಧರಿಸಿತು. ಅಕ್ಟೋಬರ್ 25ರಂದು, ಕೇಂದ್ರ ಗೃಹ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಂತರ್ಜಾಲದಲ್ಲಿ ನಿಂದನಾತ್ಮಕ ಲೈಂಗಿಕ ವಿಷಯಗಳು ಮತ್ತು ವದಂತಿ ಹಬ್ಬಿಸುವುದನ್ನು ತಡೆಯಲು ಕೈಗಳ್ಳಬೇಕಾದ ಕ್ರಮಗಳ ಕುರಿತಂತೆ ಸಾಮಾಜಿಕ ತಾಣಗಳ ಪ್ರತಿನಿಧಿಗಳೊಂದಿಗೆ ಪರಿಶೀಲನೆ ಸಭೆ ನಡೆಸಲಾಯಿತು. ಇದನ್ನು ಹಲವು ಸಭೆಗಳಲ್ಲಿ ಅನುಸರಣೆ ಮಾಡಲಾಯಿತು.
ಗಡಿ ನಿರ್ವಹಣೆ:ಸ್ಮಾರ್ಟ್ ಗಡಿ ಬೇಲಿ ಅನಾವರಣ
ಸೆಪ್ಟೆಂಬರ್ 17ರಂದು ಕೇಂದ್ರ ಗೃಹ ಸಚಿವ ಶ್ರೀ ರಾಜನಾಥ ಸಿಂಗ್, ಜಮ್ಮುವಿನ ಭಾರತ – ಪಾಕ್ ಅಂತಾರಾಷ್ಟ್ರೀಯ ಗಡಿಗುಂಟಾ ಎರಡು ಪ್ರಾಯೋಗಿಕ ಸ್ಮಾರ್ಟ್ ಬೇಲಿ ಯೋಜನೆಗಳನ್ನು ಉದ್ಘಾಟಿಸಿದರು. ಈ ಸ್ಮಾರ್ಟ್ ಗಡಿ ಬೇಲಿ ಯೋಜನೆಯನ್ನು ಸಮಗ್ರ ಗಡಿ ನಿರ್ವಹಣೆ ವ್ಯವಸ್ಥೆ (ಸಿಐಬಿಎಂ.ಎಸ್.) ಕಾರ್ಯಕ್ರಮದ ಅಡಿಯಲ್ಲಿ ನಿರ್ಮಿಸಲಾಗಿದ್ದು, ದೇಶದಲ್ಲೇ ಮೊಟ್ಟಮೊದಲನೆಯದಾಗಿದೆ. ಅಂತಾರಾಷ್ಟ್ರೀಯ ಗಡಿಯಲ್ಲಿ ತಲಾ 5.5 ಕಿ.ಮೀ ಗಡಿ ಉದ್ದಕ್ಕೂ ಉನ್ನತ ತಂತ್ರಜ್ಞಾನದ ಕಣ್ಣಾವಲು ವ್ಯವಸ್ಥೆ ಅಳವಡಿಸಲಾಗಿದ್ದು, ಇದು ನೆಲ, ಜಲ ಮತ್ತು ಗಾಳಿ ಮತ್ತು ಭೂಮಿಯ ಕೆಳಗೂ ಸಹ ಅಗೋಚರ ವಿಧ್ಯುನ್ಮಾನ ತಡೆಗೋಡೆಯನ್ನು ಸೃಷ್ಟಿಸುತ್ತದೆ ಮತ್ತು ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ಒಳನುಸುಳುವಿಕೆಯ ಪ್ರಯತ್ನಗಳನ್ನು ಪತ್ತೆ ಮಾಡಿ ವಿಫಲಗೊಳಿಸಲು ಬಿ.ಎಸ್.ಎಫ್.ಗೆ ನೆರವಾಗುತ್ತದೆ. ದುರ್ಗಮ ಪ್ರದೇಶ ಅಥವಾ ನದಿಗಡಿಯ ಕಾರಣದಿಂದ ಎಲ್ಲಿ ಭೌತಿಕ ಕಣ್ಣಾವಲು ಸಾಧ್ಯವಿಲ್ಲವೋ ಅಂತಹ ಪ್ರದೇಶಗಳಿಗಾಗಿ ಸಿಐಬಿಎಂಎಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಸರ್ಕಾರ ಜನವರಿ 19ರಂದು ಒಟ್ಟು 2090.94 ಕೋಟಿ ರೂಪಾಯಿಗಳ ವೆಚ್ಚ ತಗಲುವ 6 ಹೆಚ್ಚುವರಿ ಬಿ.ಎಸ್.ಎಫ್. ತುಕಡಿಗಳ ಹೆಚ್ಚಳಕ್ಕೆ ಮಂಜೂರಾತಿ ನೀಡಿತು. ಈ ಎಲ್ಲ ತುಕಡಿಗಳೂ ನಿಯೋಜನೆಗೆ ಸಜ್ಜಾಗಿವೆ. ಐಟಿಬಿಪಿಯಲ್ಲಿ ಹೆಚ್ಚುವರಿ ತುಕಡಿಗಳ ಹೆಚ್ಚಳದ ಪ್ರಸ್ತಾವನೆಯೂ ಪರಿಗಣನೆಯಲ್ಲಿದೆ.
ಹೊಸದಾಗಿ ಬಿಹಾರ್ ನ ಛಪ್ರಾ ಜಿಲ್ಲೆಯ ಜಲಾಲ್ ಪುರದ ಐಟಿಬಿಪಿ ಕೇಂದ್ರ ಕಚೇರಿಯಲ್ಲಿ ರಚಿಸಲಾದ 6ನೇ ತುಕಡಿಯನ್ನು ಕೇಂದ್ರ ಗೃಹ ಸಚಿವರು ಮತ್ತು ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಏಪ್ರಿಲ್ 22ರಂದು ಉದ್ಘಾಟಿಸಿದರು.
2018ರ ಜುಲೈ 12ರಂದು ಕೇಂದ್ರ ಗೃಹ ಸಚಿವರು ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ (ಬಿಎಡಿಪಿ) ಅನುಷ್ಠಾನಗೊಳಿಸುತ್ತಿರುವ ಕ್ಷೇತ್ರ ಮತ್ತು ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಪೊಲೀಸ್ ಪಡೆಗಳ ಆಧುನೀಕರಣ: ಇ.ಆರ್.ಎಸ್.ಎಸ್.ಗೆ ಚಾಲನೆ
ಪೊಲೀಸ್ ಪಡೆಗಳ ಆಧುನೀಕರಣ (ಎಂ.ಪಿ.ಎಫ್.) ಸರ್ಕಾರದ ಮುಂದಿರುವ ಅಗ್ರ ಆದ್ಯತೆಯಾಗಿದೆ ಮತ್ತು ಕೇಂದ್ರ ಗೃಹ ಸಚಿವರು ನವೆಂಬರ್ 28ರಂದು ಹಿಮಾಚಲ ಪ್ರದೇಶದಲ್ಲಿ ಮತ್ತು ಡಿಸೆಂಬರ್ 1ರಂದು ನಾಗಾಲ್ಯಾಂಡ್ ನಲ್ಲಿ ತುರ್ತು ಸ್ಪಂದನ ನೆರವು ವ್ಯವಸ್ಥೆ (ಇಆರ್.ಎಸ್.ಎಸ್.) ಅಡಿಯಲ್ಲಿ ಚಾಲನೆ ನೀಡಿದ ಭಾರತದಾದ್ಯಂತ ಒಂದೇ ಸಂಖ್ಯೆಯ 112 ತುರ್ತು ದೂರವಾಣಿ ಸಂಖ್ಯೆ ಮಹತ್ವದ ಮೈಲಿಗಲ್ಲಾಗಿದೆ.
ಎನ್.ಸಿ.ಆರ್.ಬಿ. ಮಾರ್ಚ್ 14ರಂದು ಮೊಬೈಲ್ ಆಪ್ ಟೆಂಪ್ಲೇಟ್ ಅನ್ನು ಅನಾವರಣಗೊಳಿಸಿದ್ದು, ಇದು ನಾಗರಿಕರಿಗೆ ನೀಡಲಾದ 9 ಪೊಲೀಸ್ ಸಂಬಂಧಿ ಸೇವೆಗಳ ಕೊಡುಗೆಯಾಗಿದೆ. ಈ ಸೇವೆಗಳು ಪೊಲೀಸರು ಮತ್ತು ನಾಗರಿಕರ ನಡುವಿನ ಸುಗಮ ಸಂಪರ್ಕ ಕೊಂಡಿಯಾಗಿವೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕಸ್ಟಮೈಸೇಷನ್ ಮೂಲಕ ತಮ್ಮ ಸಿಸಿಟಿಎನ್.ಎಸ್. ವೇದಿಕೆಗಳಲ್ಲಿ ಈ ಆಪ್ ಅನ್ನು ಬಿಡುಗಡೆ ಮಾಡಬಹುದಾಗಿದ್ದು, ಆ ಮೂಲಕ ನಾಗರಿಕರು ಪೊಲೀಸರಲ್ಲಿ ದೂರು ದಾಖಲಿಸಬಹುದು, ಮತ್ತು ಅವರ ದೂರುಗಳ ಸ್ಥಿತಿ ಪರಿಶೀಲಿಸಬಹುದು. ಈ ಆಪ್ ನ ಮತ್ತೊಂದು ವಿಶೇಷವೆಂದರೆ,ಇದು“ಸೂಕ್ಷ್ಮ’’ ಎಂದು ವರ್ಗೀಕರಣ ಮಾಡಿರುವುದನ್ನು ಹೊರತುಪಡಿಸಿ ಉಳಿದೆಲ್ಲಾ ದೂರುಗಳ ಎಫ್.ಐ.ಆರ್.ಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಮಹಿಳೆಯರ ಸುರಕ್ಷತೆ: ಎಂ.ಎಚ್.ಎ.ನಲ್ಲಿ ಹೊಸ ವಿಭಾಗ; ಸೈಬರ್ ಅಪರಾಧ ವರದಿ ಪೋರ್ಟಲ್ ಮತ್ತು ಪದೇ ಪದೇ ಲೈಂಗಿಕ ಅಪಾರಧ ಎಸಗುವವರ ದತ್ತಾಂಶ
ಮಹಿಳೆಯರ ಸುರಕ್ಷತೆ ಎಲ್ಲರಿಗೂ ಕಾಳಜಿಯ ವಿಚಾರವಾಗಿದ್ದು, ಸರ್ಕಾರದ ಪ್ರಯತ್ನಗಳನ್ನು ಕ್ರಮಬದ್ಧಗೊಳಿಸಲು ಮಹಿಳೆಯರ ಸುರಕ್ಷತೆಯ ಸಮಸ್ಯೆಗಳನ್ನು ಸಮಗ್ರವಾಗಿ ನಿರ್ವಹಿಸಲು ಎಂ.ಎಚ್.ಎ. ಕಳೆದ ಮೇನಲ್ಲಿ ಹೊಸ ವಿಭಾಗವನ್ನೇ ರಚಿಸಿದೆ. ಈ ವಿಭಾಗವು ಮಹಿಳಾ ಸುರಕ್ಷತೆಯ ಎಲ್ಲ ಆಯಾಮಗಳ ಕುರಿತಂತೆ ಸೂಕ್ತ ಸಚಿವಾಲಯ/ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ವ್ಯವಹರಿಸಲಿದೆ.
ಕಾಲಮಿತಿಯ ಆಧಾರದಲ್ಲಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬಹುದಾದ ಸಚಿವಾಲಯಗಳು/ ಇಲಾಖೆಗಳು, ಬಾಧ್ಯಸ್ಥರ ಪಾಲ್ಗೊಳ್ಳುವಿಕೆಯೊಂದಿಗೆ ಮಹಿಳಾ ಸುರಕ್ಷತೆಗಾಗಿ ರಾಷ್ಟ್ರೀಯ ಮಿಷನ್ ರಚನೆ ಕುರಿತು ಪರಿಗಣಿಸಲಾಗಿದೆ. ಇದರಲ್ಲಿ ವಿಶೇಷ ತ್ವರಿತ ನ್ಯಾಯಾಲಯಗಳ (ಎಫ್.ಟಿ.ಸಿ.ಗಳು) ಸ್ಥಾಪನೆ,ವಿಧಿವಿಜ್ಞಾನ ವ್ಯವಸ್ಥೆಯ ಬಲವರ್ಧನೆ ಮತ್ತು ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ರಿಜಿಸ್ಟ್ರಿ ನಿರ್ಮಾಣ, ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರ ನೇಮಕ ಮತ್ತು ಸಂತ್ರಸ್ತರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಪುನರ್ವಸತಿ ಕಲ್ಪಿಸುವುದೂ ಇದರಲ್ಲಿ ಸೇರಿದೆ.
ಅಕ್ಟೋಬರ್ 24ರಂದು ಸರ್ಕಾರ, ಕಾರ್ಯಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಯಲು ಮತ್ತು ಸಮರ್ಥವಾಗಿ ನಿರ್ವಹಿಸಿಲು ಕಾನೂನಾತ್ಮಕ ಮತ್ತು ಸಾಂಸ್ಥಿಕ ಚೌಕಟ್ಟು ಬಲಪಡಿಸಲು ಕೇಂದ್ರ ಗೃಹ ಸಚಿವರ ನೇತೃತ್ವದ ಸಚಿವರ ಗುಂಪನ್ನು ಸ್ಥಾಪಿಸಿದೆ.
ಸೆಪ್ಟೆಂಬರ್ 20ರಂದು, ಗೃಹ ಸಚಿವರು, ಮಹಿಳಾ ಸುರಕ್ಷತೆಯನ್ನು ಬಲಪಡಿಸಲು ಎರಡು ಪ್ರತ್ಯೇಕ ಪೋರ್ಟಲ್ ಗಳಿಗೆ ಚಾಲನೆ ನೀಡಿದ್ದಾರೆ. ಅವುಗಳೆಂದರೆ,ಆಕ್ಷೇಪಾರ್ಹ ಆನ್ ಲೈನ್ ಸಂಗತಿ ತಡೆಗಾಗಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಸೈಬರ್ ಅಪರಾಧ ತಡೆ (ಸಿಸಿಪಿಡಬ್ಲ್ಯುಸಿ) ಮತ್ತು ಲೈಂಗಿಕ ಅಪರಾಧಗಳ ತನಿಖೆ ಮತ್ತು ನಿಗಾಕ್ಕೆ ನೆರವು ನೀಡಲು ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ದತ್ತಾಂಶ (ಎನ್.ಡಿ.ಎಸ್.ಓ.). ಪೋರ್ಟಲ್ “cybercrime.gov.in” ಮಕ್ಕಳ ಅಶ್ಲೀಲತೆ, ಮಕ್ಕಳ ಲೈಂಗಿಕ ದುರುಪಯೋಗ, ಅತ್ಯಾಚಾರ ಮತ್ತು ಸಮೂಹ ಅತ್ಯಾಚಾರ ಮುಂತಾದ ಲೈಂಗಿಕವಾಗಿ ವ್ಯಕ್ತವಾಗುವ ವಿಷಯಗಳಿಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಆನ್ ಲೈನ್ ವಿಷಯದ ಬಗ್ಗೆ ನಾಗರಿಕರಿಂದ ದೂರುಗಳನ್ನು ಸ್ವೀಕರಿಸುತ್ತದೆ. ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ದತ್ತಾಂಶ (ಎನ್.ಡಿ.ಎಸ್.ಓ.) ಕೇವಲ ಕಾನೂನು ಜಾರಿ ಸಂಸ್ಥೆಗಳಿಗೆ ಮಾತ್ರ ಲಭ್ಯವಾಗಲಿದ್ದು, ಲೈಂಗಿಕ ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆ ಮತ್ತು ಜಾಡು ಹಿಡಿಯಲು ನೆರವಾಗಲಿದೆ.
" ಪೊಲೀಸರಿಗಾಗಿ ಮಕ್ಕಳ ವಿರುದ್ಧದ ಅಪರಾಧಗಳ ಕುರಿತಾದ ಕಾನೂನು ಪ್ರಕ್ರಿಯೆಗಳ ಕೈಪಿಡಿ"ಯನ್ನು ಜೂನ್ 19ರಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಯ್ಲು.ಸಿ.ಡಿ), ಸಚಿವೆ ಶ್ರೀಮತಿ. ಮನೇಕಾ ಸಂಜಯ್ ಗಾಂಧಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು. ಆಗಸ್ಟ್ 10ರಂದು ಕೇಂದ್ರ ಗೃಹ ಸಚಿವರು ದೆಹಲಿ ಪೊಲೀಸ್ ನ ಎಸ್.ಡಬ್ಲ್ಯು.ಎ.ಟಿ. ತಂಡದ ಸೇರ್ಪಡೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು.
ವೀಸಾ ಪ್ರಕ್ರಿಯೆಯ ಸರಳೀಕರಣ, ಹೆಚ್ಚು ಜನಪ್ರಿಯತೆ ಪಡೆದ ಇ-ವೀಸಾ
ಕಳೆದ ಒಂದು ವರ್ಷದಲ್ಲಿ, ಎಂ.ಎಚ್.ಎ. ಭಾರತದಲ್ಲಿ ವೀಸಾ ಪ್ರಕ್ರಿಯೆಯನ್ನು ಸರಳೀಕರಿಸಲು ಸರಣಿ ಕ್ರಮಗಳನ್ನು ಕೈಗೊಂಡಿದೆ. ಕೆಲವು ಪ್ರಮುಖ ಕ್ರಮಗಳನ್ನು ಈ ಕೆಳಗೆ ವಿವರಿಸಲಾಗಿದೆ.:
ಎಲೆಕ್ಟಾನಿಕ್ ವೀಸಾ ಸೌಲಭ್ಯಈಗ ಬಹುತೇಕ ವಿಶ್ವದ ಎಲ್ಲ ರಾಷ್ಟ್ರಗಳನ್ನೂ ವ್ಯಾಪಿಸಿದೆ. 166 ರಾಷ್ಟ್ರಗಳ ವಿದೇಶೀ ಪ್ರಜೆಗಳು 26 ವಿಮಾನ ನಿಲ್ದಾಣಗಳು ಮತ್ತು 05 ಬಂದರುಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ವಲಸೆ ಕೌಂಟರ್ ಗೆ ಆಗಮಿಸುವ ತನಕ ವಿದೇಶಿ ವ್ಯಕ್ತಿ ಯಾವುದೇ ಭಾರತೀಯ ಅಧಿಕಾರಿಗಳೊಂದಿಗೆ ವ್ಯವಹರಿಸುವ ಅಗತ್ಯವಿಲ್ಲ. ವಲಸೆ ಶಾಖೆ (ಬಿಓಐ) ಸಾಮಾನ್ಯವಾಗಿ 24-48 ಗಂಟೆಗಳ ಒಳಗಾಗಿ ವಿದೇಶೀ ಪ್ರಜೆಗೆ ಇ-ವೀಸಾ ಮಂಜೂರು ಮಾಡಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಿದೆ. ಇ-ವೀಸಾದ ಜನಪ್ರಿಯತೆ ಮುಗಿಲೆತ್ತರ ಸಾಗಿದೆ. ಇ-ವೀಸಾ ಮೂಲಕ ಭಾರತಕ್ಕೆ ಭೇಟಿ ನೀಡಿದವರ ಸಂಖ್ಯೆ 2015ರಲ್ಲಿದ್ದ 5.17 ಲಕ್ಷದಿಂದ ಈ ವರ್ಷ ನವೆಂಬರ್ 30ರವೆಗೆ 21 ಲಕ್ಷಕ್ಕೆ ಹೆಚ್ಚಳವಾಗಿದೆ. ಇ-ವೀಸಾ ವ್ಯವಸ್ಥೆಯ ಮೂಲಕ ನೀಡಲಾದ ವೀಸಾ ಸಂಖ್ಯೆ ಒಟ್ಟು ನೀಡಲಾಗಿರುವ ವೀಸಾದ ಶೇ.40ರಷ್ಟಾಗಿದೆ ಮತ್ತು ಈ ಸಂಖ್ಯೆ ಶೀಘ್ರವೇ ಶೇ.50ರ ಗಡಿ ದಾಟಲಿದೆ ಎಂದು ನಿರೀಕ್ಷಿಸಲಾಗಿದ್ದು, ಇದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಕೇಂದ್ರ ಗೃಹ ಸಚಿವ ಶ್ರೀ ರಾಜನಾಥ ಸಿಂಗ್, ಏಪ್ರಿಲ್ 13ರಂದು, ವೆಬ್ ಆಧಾರಿತ ಆನ್ವಯಿಕ ಇ-ಪಿ.ಆರ್.ಆರ್.ಓ (ಇ- ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ)ಗೆ ಚಾಲನೆ ನೀಡಿದರು. ಇ-ಪಿ.ಆರ್.ಆರ್.ಓ. ಮಾಡ್ಯೂಲ್ ವಿದೇಶಿಗಳಿಗೆ 27 ವೀಸಾ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ. ಇದು ಅತ್ಯಂತ ಯಶಸ್ವಿ ಎಂದು ಸಾಬೀತಾಗಿದ್ದು, ವಿದೇಶಿಯರು ಎಫ್.ಆರ್.ಓ. ಕಚೇರಿಗಳಿಗೆ ಭೇಟಿ ನೀಡಿ, ತಮ್ಮ ವಾಸ್ತವ್ಯ ವಿಸ್ತರಣೆ, ವೀಸಾ ಸ್ಥಿತಿಯ ಬದಲಾವಣೆಗೆ ಇತ್ಯಾದಿ ಅಗತ್ಯ ಪೂರೈಸಿಕೊಳ್ಳಬಹುದಾಗಿದೆ.
ಪ್ರವಾಸೋದ್ಯಮದ ಹರಿವು ಮತ್ತು ಹೂಡಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಅಂಡಮಾನ್ ಮತ್ತು ನಿಕೋಬಾರ್ನ 30 ದ್ವೀಪಗಳನ್ನು ವಿದೇಶೀಯರ (ನಿರ್ಬಂಧಿತ ಪ್ರದೇಶ) ಆದೇಶ 1963ರ ಅಧಿಸೂಚನೆ ಅಡಿಯಲ್ಲಿನ ಆರ್.ಎ.ಪಿ. ಆಡಳಿತದಿಂದ ಕೈಬಿಡಲಾಗಿದೆ. ಆರ್.ಎ.ಪಿ. ಇಲ್ಲದೆ, ಒಂದೇ ಒಂದು ದಿನದ ಪ್ರವಾಸಕ್ಕಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತದಿಂದ ಅಧಿಸೂಚಿಸಲ್ಪಟ್ಟ 11 ವಾಸ್ತವ್ಯವಿಲ್ಲದ ದ್ವೀಪಗಳಿಗೂ ವಿದೇಶಿಗರಿಗೆ ಭೇಟಿ ನೀಡಲು ಅನುಮತಿಸಲಾಗಿದೆ. ಈ ದ್ವೀಪಗಳಿಗೆ ಭೇಟಿ ನೀಡುವ ವಿದೇಶಿಯರು ನೋಂದಣಿ ಮಾಡಬೇಕಾದ ಅವಶ್ಯಕತೆ ಇದೆ.
ಜೂನ್ 1ರಂದು ಕೇಂದ್ರ ಗೃಹ ಸಚಿವರು, ಎಫ್.ಸಿ.ಆರ್.ಎ. ಪಾವತಿಯ ಪರಿಣಾಮಕಾರಿ ನಿಗಾಕ್ಕಾಗಿ ಆನ್ ಲೈನ್ ಅನಾಲಿಟಿಕಲ್ ಟೂಲ್ ಗೆ ಚಾಲನೆ ನೀಡಿದರು.
ಎಂ.ಎಚ್.ಎ. ಕಾರ್ಯಕ್ರಮ ಅನುಮತಿ ಮತ್ತು ಹೂಡಿಕೆ ಅನುಮತಿಯನ್ನು ಆನ್ ಲೈನ್ ಪ್ರಕ್ರಿಯೆಯ ಮೂಲಕ ತ್ವರಿತಗೊಳಿಸಿದೆ
ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಮೇ 2ರಂದು ಭಾರತದಲ್ಲಿ ಆಯೋಜನೆ ಮಾಡುವ ಸಮಾವೇಶ/ವಿಚಾರಸಂಕಿರಣ/ಕಾರ್ಯಾಗಾರಗಳಿಗೆ ಭದ್ರತೆಯ ಅನುಮೋದನಾಗಿಗ ಆನ್ ಲೈನ್ ಕಾರ್ಯಕ್ರಮ ಅನುಮತಿ ವ್ಯವಸ್ಥೆ (https://conference.mha.gov.in) ಗೆ ಚಾಲನೆ ನೀಡಿದರು. ಇದು ಅಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಯಸುವ ವಿದೇಶಿ ಪ್ರಜೆಗಳು/ ಪ್ರತಿನಿಧಿಗಳಿಗೆ ಕಾನ್ಫರೆನ್ಸ್ ವೀಸಾ ನೀಡಲು ಇದು ಅವಕಾಶ ನೀಡಲಿದೆ.
ಸೆಪ್ಟೆಂಬರ್ 18ರಂದು ಭದ್ರತೆಯ ಅನುಮೋದನೆಗಾಗಿ ಅನುಮತಿ ನೀಡಲು ಕೇಂದ್ರ ಗೃಹ ಕಾರ್ಯದರ್ಶಿ ಆನ್ ಲೈನ್ ಇ- ಸಹಜ್ ಪೋರ್ಟಲ್ ಗೆ ಚಾಲನೆ ನೀಡಿದರು. ಎಂ.ಎಚ್.ಎ. ಒಂದು ವರ್ಷದಲ್ಲಿ ಸುಮಾರು 1100 ಭದ್ರತೆ ಅನುಮೋದನೆಯ ಪ್ರಕರಣಗಳನ್ನು ಇತ್ಯರ್ಥಮಾಡಿದೆ. ಇದಕ್ಕೆ ನೀಡಲಾಗಿರುವ ಕಾಲಮಿತಿ 90 ದಿನಗಳೇ ಆದರೂ, ಎಂ.ಎಚ್.ಎ. ಭದ್ರತೆಯ ಅನುಮೋದನೆ ಪ್ರಕರಣಗಳನ್ನು 60 ದಿನಗಳ (2018ರಲ್ಲಿ ಸರಾಸರಿ ಸಮಯ 53 ದಿನಗಳು)ಲ್ಲಿ ನಿರ್ಧರಿಸುವ ಪ್ರಯತ್ನ ಮಾಡಿದೆ, ಇದನ್ನು ಇನ್ನೂ ಕಡಿಮೆ ಮಾಡಲಾಗುತ್ತದೆ. 2016ರಲ್ಲಿ 209 ಪ್ರಕರಣಗಳು 6 ತಿಂಗಳುಗಳಿಗಿಂತಲೂ ಹಳೆಯದಾಗಿದ್ದವು,2017ರಲ್ಲಿ, ಇದು 154 ಪ್ರಕರಣಗಳಿಗೆ ಇಳಿಕೆಯಾಯಿತು, 2018ರಲ್ಲಿ ಇದು ಮತ್ತೂ ಇಳಿಕೆಯಾಗಿದ್ದು 47 ಪ್ರಕರಣವಾಗಿದೆ.
ಅಂತಾರಾಷ್ಟ್ರೀಯ ಸಹಕಾರ: ಭದ್ರತೆಯ ಸಹಕಾರ ಕುರಿತ ಪ್ರಥಮ ದ್ವಿಪಕ್ಷೀಯ ಭಾರತ-ಚೈನಾ ಒಪ್ಪಂದ
ಅಕ್ಟೋಬರ್ 22ರಂದು ದ್ವಿಪಕ್ಷೀಯ ಸಹಕಾರ ಸಹಕಾರ ಕುರಿತಂತೆ ದೆಹಲಿಯಲ್ಲಿ ಭಾರತ ಚೈನಾ ನಡುವೆ ಪ್ರಥಮ ಉನ್ನತ ಮಟ್ಟದ ಸಭೆ ನಡೆಯಿತು. ಕೇಂದ್ರ ಗೃಹ ಸಚಿವ ಶ್ರೀ ರಾಜನಾಥ ಸಿಂಗ್ ಮತ್ತು ಚೈನಾ ಪ್ರಜಾ ಗಣರಾಜ್ಯದ ಸಾರ್ವಜನಿಕ ಭದ್ರತೆ ಸಚಿವ ಮತ್ತು ರಾಜ್ಯ ಕೌನ್ಸಿಲರ್ ಶ್ರೀ ಜಾಹೋ ಕೇಝಿ ಪ್ರತಿನಿಧಿಗಳ ನಿಯೋಗದ ನೇತೃತ್ವ ವಹಿಸಿದ್ದರು. ಭಾರತದ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಚೈನಾದ ಸಾರ್ವಜನಿಕ ಭದ್ರತೆ ಸಚಿವಾಲಯದ ನಡುವೆ ಭದ್ರತೆ ಸಹಕಾರ ಕುರಿತ ಒಪ್ಪಂದಕ್ಕೆ ಇಬ್ಬರೂ ಸಚಿವರು ಅಂಕಿತ ಹಾಕಿದರು. ಈ ಒಪ್ಪಂದ ಭಯೋತ್ಪಾದನೆ, ಸಂಘಟಿತ ಅಪರಾಧಗಳು, ಔಷಧ ನಿಯಂತ್ರಣ ಮತ್ತು ಇತರ ಸಂಬಂಧಿತ ಪ್ರದೇಶಗಳಲ್ಲಿ ಚರ್ಚೆಗಳು ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ.
ಇದಕ್ಕೂ ಮುನ್ನ, ಗೃಹ ಸಚಿವರು, ಬಾಂಗ್ಲಾದೇಶದ ಸಹವರ್ತಿ ಶ್ರೀ ಅಸಾದುಜ್ಜಾಮನ್ ಖಾನ್ ಅವರೊಂದಿಗೆ ಢಾಕಾದಲ್ಲಿ ಜುಲೈ 15ರಂದು ಗೃಹ ಸಚಿವರುಗಳ ಮಟ್ಟದ ಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಮತ್ತು ವಿದ್ಯಾರ್ಥಿ ವೀಸಾಗಳಿಗೆ ಅವಧಿ ಹೆಚ್ಚಳ ಸೇರಿದಂತೆ ಎರಡು ದೇಶಗಳ ನಡುವಿನ ವೀಸಾ ಪ್ರಕ್ರಿಯೆಯನ್ನು ಮತ್ತಷ್ಟು ಉದಾರಗೊಳಿಸುವಿಕೆಗಾಗಿ ಹಿಂದಿನ ಆರ್.ಟಿ.ಎ. 2013 ರನ್ನು ತಿದ್ದುಪಡಿ ಮಾಡಿದ್ದ ಪರಿಷ್ಕೃತ ಪ್ರಯಾಣ ವ್ಯವಸ್ಥೆ 2018 (ಆರ್.ಟಿ.ಎ. 2018) ಕ್ಕೆ ಅಂಕಿತ ಹಾಕಿದರು. 3 ದಿನಗಳ ಭೇಟಿ ವೇಳೆ, ಶ್ರೀ ರಾಜನಾಥ್ ಸಿಂಗ್ ಬಾಂಗ್ಲಾ ದೇಶದ ಪ್ರಧಾನಮಂತ್ರಿ ಶ್ರೀಮತಿ ಶೇಖ್ ಹಸೀನಾ ಅವರನ್ನೂ ಭೇಟಿ ಮಾಡಿದರು.
ಭಾರತ ಮತ್ತು ಮ್ಯಾನ್ಮಾರ್ ನಡುವೆ ಅಕ್ಟೋಬರ್ 26ರಂದು 22ನೇ ರಾಷ್ಟ್ರೀಯ ಮಟ್ಟದ ಸಭೆ ದೆಹಲಿಯಲ್ಲಿ ನಡೆಯಿತು. ಭಾರತೀಯ ನಿಯೋಗದ ನೇತೃತ್ವವನ್ನು ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಮತ್ತು ಮ್ಯಾನ್ಮಾರ್ ನಿಯೋಗದ ನೇತೃತ್ವವನ್ನು ಗೃಹ ವ್ಯವಹಾರಗಳ ಸಚಿವಾಲಯದ ಉಪ ಸಚಿವ ಮೇಜರ್ ಜನರಲ್ ಔನಂಗ್ ಥು ವಹಿಸಿದ್ದರು. ಈ ಸಭೆಯ ವೇಳೆ, ಎರಡೂ ಕಡೆಯವರು ತಮ್ಮ ನೆಲಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿಧ್ವಂಸಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲು ಸಮ್ಮತಿಸಿದರು. ಎರಡೂ ರಾಷ್ಟ್ರಗಳು ಅಂತಾರಾಷ್ಟ್ರೀಯ ಗಡಿರೇಖೆ ಗುಂಟಾ ಭದ್ರತಾ ಸಹಕಾರವನ್ನು ಒದಗಿಸಲು ಮತ್ತು ಗಡಿಯಾಚೆ ವಾಣಿಜ್ಯ ಮತ್ತು ಜನರ ಸಂಚಾರಕ್ಕೆ ಅನುವು ಮಾಡಿಕೊಡಲು ಸಮ್ಮತಿಸಿದವು.
ಕೇಂದ್ರ ಗೃಹ ಸಚಿವರು, 2018ರ ಜೂನ್ 21-24ರವರೆಗೆ 4 ದಿನಗಳ ಮಂಗೋಲಿಯಾ ಭೇಟಿ ಕೈಗೊಂಡಿದ್ದರು. ಈ ಭೇಟಿಯ ವೇಳೆ, ಗೃಹ ಸಚಿವರು,ಮಂಗೋಲಿಯಾ ಪ್ರಧಾನಮಂತ್ರಿ ಅವರೊಂದಿಗೆ ಮಂಗೋಲಿಯಾದ ಮೊದಲ ಪೆಟ್ರೋಕೆಮಿಕಲ್ ಶುದ್ಧೀಕರಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಗೃಹ ಸಚಿವರು, ಮಂಗೋಲಿಯಾದ ಗಡಿ ಸಂರಕ್ಷಣೆಯ ಸಾಮಾನ್ಯ ಪ್ರಾಧಿಕಾರದ ಕೇಂದ್ರ ಕಚೇರಿ (ಜಿಎಬಿಪಿ)ಗೆ ಭೇಟಿ ನೀಡಿದ್ದರು ಮತ್ತು ಗಡಿ ನಿರ್ವಹಣೆಯನ್ನು ಹೆಚ್ಚು ಸಮರ್ಥಗೊಳಿಸಲು ಜಿಎಬಿಪಿಯ ಪ್ರಧಾನ ನಿಯಂತ್ರಣ ಕೇಂದ್ರಕ್ಕೆ ಉನ್ನತ ಸಾಮರ್ಥ್ಯದ ಸರ್ವರ್ ಒದಗಿಸುವ ಭಾರತ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.
ಕೇಂದ್ರ ಸಚಿವ ಸಂಪುಟ ಫೆಬ್ರವರಿ 7ರಂದು ಅಮೆರಿಕದ ಫೆಡರಲ್ ಕಾನೂನು ಜಾರಿ ತರಬೇತಿ ಕೇಂದ್ರ (ಎಫ್.ಎಲ್.ಇ.ಟಿ.ಸಿ.) ಮತ್ತು ಭಾರತದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಶಾಖೆ (ಬಿಪಿಆರ್ ಮತ್ತುಡಿ) ನಡುವೆ ಕಾನೂನು ಜಾರಿ ತರಬೇತಿಗಾಗಿ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಲು ಅನುಮೋದನೆ ನೀಡಿದರು.
ಮಾರ್ಚ್ 28ರಂದು, ಕೇಂದ್ರ ಸಂಪುಟ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಮತ್ತು ಉತ್ತರ ಐರ್ಲೆಂಡ್ ನಡುವೆ ಅಂತಾರಾಷ್ಟ್ರೀಯ ಅಪರಾಧ ತಡೆ ಮತ್ತು ಗಂಭೀರ ಸ್ವರೂಪದ ಸಂಘಟಿತ ಅಪರಾಧದ ನಿಭಾವಣೆಗಾಗಿ ಸಹಕಾರ ಮತ್ತು ಮಾಹಿತಿಯ ವಿನಿಮಯಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಅನುಮೋದನೆ ನೀಡಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅವರು ಮೇ 30ರಂದು ದೆಹಲಿಯಲ್ಲಿ ನಡೆದ ಭಾರತ ಮತ್ತು ಯು.ಕೆ. ನಡುವಿನ ಮೂರನೇ ಗೃಹ ವ್ಯವಹಾರಗಳ ಮಾತುಕತೆಯ ಸಹ ಅಧ್ಯಕ್ಷತೆ ವಹಿಸಿದ್ದರು. ಭಾರತ ಮತ್ತು ಯು.ಎಸ್.ಎ. ನಡುವೆ ತಾಯ್ನಾಡಿನ ಭದ್ರತೆ ಕುರಿತ ಹಿರಿಯ ಅಧಿಕಾರಿಗಳ ಮಾತುಕತೆ ಜುಲೈ 18ರಂದು ನಡೆಯಿತು.
ಭಾರತ ಮತ್ತು ಇಸ್ರೇಲ್ ನ ತಾಯ್ನಾಡು ಮತ್ತು ಸಾರ್ವಜನಿಕ ಭದ್ರತೆ ಕುರಿತ ಜಂಟಿ ಸ್ಟೇರಿಂಗ್ ಸಮಿತಿಯ ಎರಡು ದಿನಗಳ ಸಭೆ 2018ರ ಫೆಬ್ರವರಿ 27-28ರಂದು ನಡೆಯಿತು. ಗಡಿ ನಿರ್ವಹಣೆ ವಿಷಯಗಳ ಜೊತೆಗೆ ಪೊಲೀಸ್ ಪಡೆಗಳ ಸಾಮರ್ಥ್ಯ ವರ್ಧನೆ ಮತ್ತು ಆಧುನೀಕರಣದ ಕುರಿತು ಚರ್ಚಿಸಲಾಯಿತು.
ಮೊರಾಕ್ಕೋದ ನಿಯೋಗ ನವೆಂಬರ್ 12ರಂದು ಎಂ.ಎಚ್.ಎ.ಗೆ ಭೇಟಿ ನೀಡಿತ್ತು ಮತ್ತು ಭಾರತದ ಗೃಹ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಶ್ರೀ ಕಿರಣ್ ರಿಜಿಜು ನೇತೃತ್ವದ ಭಾರತೀಯ ತಂಡದೊಂದಿಗೆ ಅಪರಾಧಿಕ ವಿಚಾರಗಳಲ್ಲಿ ಪರಸ್ಪರ ಕಾನೂನು ನೆರವು ನೀಡುವ ಒಪ್ಪಂದಕ್ಕೆ ಅಂಗಿತ ಹಾಕಲಾಯಿತು. ಕೇಂದ್ರ ಸಚಿವ ಸಂಪುಟ ಒಪ್ಪಂದಕ್ಕೆನವೆಂಬರ್ 1ರಂದು ಅನುಮೋದನೆ ನೀಡಿತು.
ಮಾದಕ ದ್ರವ್ಯ, ಮಾನಸಿಕ ಕ್ಷೋಬೆ ತರುವ ವಸ್ತುಗಳು ಮತ್ತು ರಾಸಾಯನಿಕ ಪೂರ್ವಗಾಮಿಗಳು ಮತ್ತು ಸಂಬಂಧಿತ ಅಪರಾಧಗಳ ಬಳಕೆ ಅವುಗಳ ಅಕ್ರಮ ಸಾಗಾಟ ತಡೆ ಕುರಿತಂತೆ ಭಾರತ ಮತ್ತು ಫ್ರಾನ್ಸ್ ನಡುವಿನ ಒಪ್ಪಂದಕ್ಕೆ ಮಾರ್ಚ್ 7ರಂದು, ಕೇಂದ್ರ ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ.
ಕೇಂದ್ರ ಗೃಹ ಸಚಿವರು ನವದೆಹಲಿಯಲ್ಲಿ, ಮಾರ್ಚ್ 14ರಂದು 2 ದಿನಗಳ ಪೊಲೀಸ್ ವರಿಷ್ಠರ ಅಂತಾರಾಷ್ಟ್ರೀಯ ಸಂಘಟನೆ (ಐ.ಎ.ಸಿ.ಪಿ.)ಯ ಏಷ್ಯಾ ಪೆಸಿಫಿಕ್ ಪ್ರಾದೇಶಿಕ ಸಮಾವೇಶವನ್ನು ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಗೃಹ ಖಾತೆ ರಾಜ್ಯ ಸಚಿವ ಶ್ರೀ ಕಿರಣ್ ರಿಜಿಜು ಭಾಷಣ ಮಾಡಿದರು.
ಸೆಪ್ಟೆಂಬರ್ 6ರಂದು ಕೇಂದ್ರ ಗೃಹ ಸಚಿವರು, 3 ದಿನಗಳ ರಕ್ಷಣೆ ಮತ್ತು ತಾಯ್ನಾಡ ಭದ್ರತೆ ಎಕ್ಸ್ ಪೋ ಮತ್ತು ಸಮಾವೇಶ -2018ನ್ನು ನವದೆಹಲಿಯಲ್ಲಿ ಉದ್ಘಾಟಿಸಿದರು.
ಕೇಂದ್ರ ಮತ್ತು ರಾಜ್ಯಗಳ ಅನಿರ್ಬಂಧಿತ ಸಂಬಂಧ: ವಲಯ ಮಂಡಳಿಗಳ ನಿಯಮಿತ ಸಭೆ ಆಯೋಜನೆ
ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಹಕಾರ ಮತ್ತು ಒಕ್ಕೂಟದ ಉತ್ತಮ ವಾತಾವರಣ ಕಾಪಾಡಲು ಮತ್ತು ಉತ್ತೇಜಿಸುವ ಸಲುವಾಗಿ ವಲಯ ಮಂಡಳಿಗಳ ಮತ್ತು ಅಂತರ ರಾಜ್ಯ ಮಂಡಳಿಗಳ ಸಂಸ್ಥೆಗಳನ್ನು ಬಲಪಡಿಸುವುದು ಪ್ರಸಕ್ತ ಸರ್ಕಾರದ ಉದ್ದೇಶವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ 600ಕ್ಕೂ ಹೆಚ್ಚು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದ್ದು ಇದರ ಫಲವಾಗಿ 400 ಸಮಸ್ಯೆಗಳನ್ನು ಪರಿಹರಿಸಲಾಗಿದೆ.
ಕೇಂದ್ರ ಗೃಹ ಸಚಿವ ಶ್ರೀ ರಾಜನಾಥ್ ಸಿಂಗ್ ನೇತೃತ್ವದ ಅಂತರ ರಾಜ್ಯ ಮಂಡಳಿ ನಿಯೋಗ (ಐಎಸ್.ಸಿ) ಮೇ 25 ರಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಪುಂಚಿ ಆಯೋಗದ ಎಲ್ಲಾ 273 ಶಿಫಾರಸುಗಳ ಕುರಿತು ಗುರುತರ ಸವಾಲಿನ ಚರ್ಚೆಯನ್ನು ಪೂರ್ಣಗೊಳಿಸಿತು. ಈ ಮುನ್ನ ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 26ರಂದು ಅಹಮದಾಬಾದ್ ನಲ್ಲಿ ಪಶ್ಚಿಮ ವಲಯ ಮಂಡಳಿಯ 23ನೇ ಸಭೆ ನಡೆಯಿತು, ದಕ್ಷಿಣ ವಲಯ ಮಂಡಳಿಯ 28ನೇ ಸಭೆ ಸಹ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ಜರುಗಿತು. ಇಲ್ಲಿ ಚರ್ಚಿಸಲಾದ 27 ವಿಚಾರಗಳ ಪೈಕಿ, 22ನ್ನು ಈ ಸಭೆಯಲ್ಲಿ ಪರಿಹರಿಸಲಾಯಿತು. ಅಕ್ಟೋಬರ್ 1ರಂದು ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಕೋಲ್ಕತ್ತಾದಲ್ಲಿ ನಡೆದ ಪೂರ್ವ ವಲಯ ಮಂಡಳಿಯ 23ನೇ ಸಭೆಯಲ್ಲಿ 30 ವಿಷಯಗಳ ಬಗ್ಗೆ ಚರ್ಚಿಸಿ, 26ಕ್ಕೆ ಪರಿಹಾರ ಪಡೆಯಲಾಯಿತು.
ವಿಪತ್ತು ನಿರ್ವಹಣೆಗೆ ಕೇಂದ್ರದಿಂದ ಹೆಚ್ಚಿನ ನಿಧಿ: ಭಾರತ ಸರ್ಕಾರ ಎಸ್.ಡಿ.ಆರ್.ಎಫ್.ಗೆ ತನ್ನ ಕೊಡುಗೆಯನ್ನು ಶೇ.75ರಿಂದ ಶೇ.90ಕ್ಕೆ ಹೆಚ್ಚಿಸಿದೆ; 4 ಹೊಸ ಎನ್.ಡಿ.ಆರ್.ಎಫ್. ತುಕಡಿಗಳಿಗೆ ಅನುಮೋದನೆ
ಪ್ರಕೃತಿ ಅಥವಾ ಮಾನವ ನಿರ್ಮಿತ ವಿಪತ್ತುಗಳ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ಎಂ.ಎಚ್.ಎ.ಯ ಮತ್ತೊಂದು ಪ್ರಮುಖ ಜವಾಬ್ದಾರಿಯಾಗಿದೆ. ಸೆಪ್ಟೆಂಬರ್ 27ರಂದು ಭಾರತ ಸರ್ಕಾರ, ರಾಜ್ಯಗಳ ವಿಪತ್ತು ಸ್ಪಂದನ ನಿಧಿ (ಎಸ್.ಡಿ.ಆರ್.ಎಫ್.)ಗೆ ತನ್ನ ಕೊಡುಗೆಯನ್ನು ಶೇ.75ರಿಂದ ಶೇ.90ಕ್ಕೆ 2018ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರ ಶೇ.90ರ ಕೊಡುಗೆ ನೀಡಲಿದ್ದು, ಎಲ್ಲ ರಾಜ್ಯ ಸರ್ಕಾರಗಳೂ ಎಸ್.ಡಿ.ಆರ್.ಎಫ್.ಗೆ. ಶೇ.10 ಪಾಲು ನೀಡುತ್ತವೆ.
ಆಗಸ್ಟ್ 9ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆ (ಎನ್.ಡಿ.ಆರ್.ಎಫ್.)ನಲ್ಲಿ ಅಂದಾಜು 637 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಾಲ್ಕು ಹೆಚ್ಚುವರಿ ತುಕಡಿಗಳ ರಚನೆಗೆ ತನ್ನ ಅನುಮೋದನೆ ನೀಡಿದೆ. ಈ ನಾಲ್ಕು ತುಕಡಿಗಳನ್ನು ಪ್ರಾರಂಭದಲ್ಲಿ ಎರಡು ಐಟಿಬಿಪಿ ತುಕಡಿಗಳಾಗಿ ಮತ್ತು ಬಿ.ಎಸ್.ಎಫ್. ಮತ್ತು ಅಸ್ಸಾಂ ರೈಫೆಲ್ಸ್ ನಲ್ಲಿ ತಲಾ ಒಂದು ತುಕಡಿ ಹೆಚ್ಚಿಸಲಾಗುವುದು. ನಂತರ ಈ ಎಲ್ಲ ನಾಲ್ಕು ತುಕಡಿಗಳನ್ನು ಎನ್.ಡಿ.ಆರ್.ಎಫ್. ತುಕಡಿಗಳಾಗಿ ಪರಿವರ್ತಿಸಲಾಗುವುದು. ದುರ್ಬಲತೆ ಚಿತ್ರಣ ಆಧರಿಸಿ, ಈ ನಾಲ್ಕು ತುಕಡಿಗಳನ್ನು ಜೆ ಮತ್ತು ಕೆ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತದೆ. ಪ್ರಸ್ತುತ ಎನ್.ಡಿ.ಆರ್.ಎಫ್.ನಲ್ಲಿ 12 ತುಕಡಿಗಳಿದ್ದು, ತತ್ ಕ್ಷಣದ ಸ್ಪಂದನೆ ಒದಗಿಸಲು ಅವುಗಳನ್ನು ದೇಶಾದ್ಯಂತ ವ್ಯೂಹಾತ್ಮಕವಾಗಿ ನಿಯೋಜಿಸಲಾಗಿದೆ.
ಉಪ ರಾಷ್ಟ್ರಪತಿಯವರು ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆ (ಎನ್.ಐ.ಡಿ.ಎಂ.)ನ ದಕ್ಷಿಣ ಕ್ಯಾಂಪಸ್ ಕಟ್ಟಡಕ್ಕೆ ಮೇ 22ರಂದು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
(Release ID: 1557190)
Visitor Counter : 215