ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವರ್ಷಾಂತ್ಯದ ಅವಲೋಕನ : ಜೈವಿಕ ತಂತ್ರಜ್ಞಾನ ಇಲಾಖೆ

Posted On: 20 DEC 2018 4:25PM by PIB Bengaluru

ವರ್ಷಾಂತ್ಯದ ಅವಲೋಕನ : ಜೈವಿಕ ತಂತ್ರಜ್ಞಾನ ಇಲಾಖೆ

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಬರುವ ಜೈವಿಕ ತಂತ್ರಜ್ಞಾನ ಇಲಾಖೆ 2018ರಲ್ಲಿ ಜೈವಿಕ ತಂತ್ರಜ್ಞಾನಸಂಶೋಧನೆವಿನ್ಯಾಸದಲ್ಲಿ ಹೊಸಎತ್ತರಕ್ಕೆ ಏರುವ ದೂರದೃಷ್ಟಿಯೊಂದಿಗೆ ಅತ್ಯಂತ ಕ್ರಿಯಾಶೀಲವಾಗಿ ಚಟುವಟಿಕೆಯಿಂದ ಕಾರ್ಯನಿರ್ವಹಿಸಿದೆಅದು ಸಾಮಾಜಿಕ ನ್ಯಾಯವಿಶೇಷವಾಗಿಬಡಜನರಿಗೆ ಒದಗಿಸುವ ಜೊತೆಗೆ ಭವಿಷ್ಯದಲ್ಲಿ ಸಂಪತ್ತು ಸೃಷ್ಟಿ ಸಾಧನದ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆಇಲಾಖೆ  ಮಾಡಿರುವ ಸಾಧನೆಗಳಸ್ಥೂಲ ನೋಟ  ಕೆಳಗಿನಂತಿದೆ.

ನಾವು ಇದೀಗ ಇಲಾಖೆ ಕೈಗೊಂಡ ಕೆಲವು ಪ್ರಮುಖ ನೀತಿ ನಿರ್ಧಾರಗಳು ಮತ್ತು ಬೆಂಬಲಿಸಿದ ಕಾರ್ಯಕ್ರಮಗಳ ಪ್ರಮುಖಾಂಶಗಳನ್ನು ಗಮನಿಸೋಣ

ಕೇಂದ್ರ ಸಂಪುಟ ಡಿಎನ್ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯಿಸುವುದುನಿಯಂತ್ರಣ ಕಾಯ್ದೆ 2018ಕ್ಕೆ ಅನುಮೋದನೆ ನೀಡಿತುಈ ಕಾಯ್ದೆಯನ್ನು ಸಂತ್ರಸ್ತರುಅಪರಾಧಿಗಳುಶಂಕಿತರುವಿಚಾರಣಾಧೀನ ಕೈದಿಗಳುನಾಪತ್ತೆಯಾದವರುಅಪರಿಚಿತ ಮೃತರು  ಸೇರಿದಂತೆ ಕೆಲವು ವರ್ಗದ ವ್ಯಕ್ತಿಗಳ ಗುರುತು ಪತ್ತೆಚ್ಚಲು ಈ ಡಿಎನ್ಎ ತಂತ್ರಜ್ಞಾನ ಬಳಕೆ ಮತ್ತು ಅನ್ವಯಿಸುವುದನ್ನು ನಿಯಂತ್ರಣ ಹೊಂದುವ ಉದ್ದೇಶ ಹೊಂದಿದ್ದುಇದರಡಿ ಡಿಎನ್ಎ ನಿಯಂತ್ರಣ ಮಂಡಳಿ(ಡಿ ಆರ್ ಬಿಸ್ಥಾಪಿಸಲು ಅವಕಾಶವಿದೆ.  

•         ಕ್ಯಾನ್ಸರ್ ನಿಯಂತ್ರಣ ಮತ್ತು ರಕ್ಷಣಾ ವ್ಯವಸ್ಥೆ, ಕೈಗೆಟಕುವ ದರದಲ್ಲಿ ದೊರಕುವಂತಾಗಲು ಭಾರತ, ಬ್ರಿಟನ್ ನ ಕ್ಯಾನ್ಸರ್ ಸಂಶೋಧನಾ ಸಂಸ್ಥೆ(ಸಿ ಆರ್ ಯು ಕೆ) ಸಹಭಾಗಿತ್ವದಲ್ಲಿ ಭಾರತ – ಯುಕೆ ಕ್ಯಾನ್ಸರ್ ಸಂಶೋಧನಾ ಯೋಜನೆ ಆರಂಭಿಸಲಾಯಿತು. ಕ್ಯಾನ್ಸರ್ ಕಾಯಿಲೆ ವಿರುದ್ಧ ನಿಯಂತ್ರಣ ಹೊಂದಲು ಮಹತ್ವದ ಪ್ರಗತಿ ಸಾಧಿಸುವ ಉದ್ದೇಶವಿದೆ. ಇದಕ್ಕಾಗಿ ಸಿ ಆರ್ ಯು ಸಿ ಕೆ ಮತ್ತು  ಜೈವಿಕ ತಂತ್ರಜ್ಞಾನ ಇಲಾಖೆ ಎರಡೂ ಸೇರಿ5 ಮಿಲಿಯನ್ ಅಮೆರಿಕನ್ ಡಾಲರ್(ಭಾರತೀಯ ರೂಪಾಯಿ ಮೌಲ್ಯ 47 ಕೋಟಿ ರೂಪಾಯಿ) ಬಂಡವಾಳ ಹೂಡಿಕೆ ಮಾಡಲಿವೆ.

•         ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ಒಪ್ಪಂದದ 10ನೇ ವರ್ಷಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತುವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಶುಭ ಕೋರಿದರುಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿವೆಲ್ ಕಮ್ ಟ್ರಸ್ಟ್ ಸಹಭಾಗಿತ್ವದಲ್ಲಿ ಬಯೋಮೆಡಿಕಲ್ ಸಂಶೋಧನಾ ವಿಭಾಗದಲ್ಲಿ ಪೋಸ್ಟ್ ಡಾಕ್ಟೊರಲ್ ಮಟ್ಟದ ಮೂರು ಹಂತದ ಫೆಲೋಶಿಪ್ ಕಾರ್ಯಕ್ರಮವನ್ನು ಬೆಂಬಲಿಸುತ್ತಿದೆ.

•         ವೈದ್ಯಕೀಯ ಜೈವಿಕ ತಂತ್ರಜ್ಞಾನಕೃಷಿ ಜೈವಿಕ ತಂತ್ರಜ್ಞಾನ ಮತ್ತು ಕಂಪ್ಯುಟೇಶನ್ ಜೀವಶಾಸ್ತ್ರದ ಉಪಕರಣ ಹಾಗೂ ತಂತ್ರಗಳ ಬಗ್ಗೆ ಉನ್ನತ ಮಟ್ಟದ ತರಬೇತಿ ನೀಡುವ ಉದ್ದೇಶದಿಂದ 15 ಬಗೆಯ ಕೌಶಲ್ಯಾಭಿವೃದ್ಧಿ  ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್/ಡಿಪ್ಲೊಮಾ ಕೋರ್ಸ್ ಗಳನ್ನು ಆರಂಭಿಸಲಾಗಿದೆ.

•         ಜಿನೋಮ್ ಇಂಜಿನಿಯರಿಂಗ್ ಮತ್ತು ಎಡಿಟಿಂಗ್ ವಲಯದಲ್ಲಿ ಭಾರತ ಮತ್ತು ಅಮೆರಿಕ ಸಹಭಾಗಿತ್ವ ಸಾಧಿಸಿದ್ದುಅದರಡಿ ಉತ್ತಮ ಭಾರತೀಯ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳಿಗೆ ಅಮೆರಿಕದ ಪ್ರತಿಷ್ಠಿತ ವಿಶ್ವ ದರ್ಜೆಯ ಸಂಶೋಧನಾ ಕೇಂದ್ರಗಳಲ್ಲಿ ಇಂಟರ್ನ್ ಶಿಪ್ ಪಡೆಯಲುಸಾಗರೋತ್ತರ ಫೆಲೋಶಿಪ್ ಮತ್ತು ಪ್ರೊಫೆಸರ್ ಹುದ್ದೆಗಳ ಭೇಟಿ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸಿಕೊಟ್ಟಿದೆ.

•         ಆವಿಷ್ಕಾರ ಯೋಜನೆಯಡಿ ಮೊದಲ ಶುದ್ಧ ಇಂಧನ ಅಂತಾರಾಷ್ಟ್ರೀಯ ಸಂಪೋಷಣಾ ಕೇಂದ್ರ(ಇನ್ ಕ್ಯುಬೇಟರ್)ಅನ್ನು ಸ್ಥಾಪಿಸಲಾಗಿದೆ.ಐರೋಪ್ಯ ಒಕ್ಕೂಟದ 23 ರಾಷ್ಟ್ರಗಳ ನವೋದ್ಯಮಗಳು ಈ ಸಂಪೋಷಣಾ ಕೇಂದ್ರವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆಜೊತೆಗೆ ಈ ಸಂಪೋಷಣಾ ಕೇಂದ್ರದಿಂದ ಆರಂಭವಾಗುವ ನವೋದ್ಯಮಗಳು ಹಲವು ದೇಶಗಳೊಂದಿಗೆ ಸಹಭಾಗಿತ್ವ ಸಾಧಿಸಿಜಾಗತಿಕ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಲು ನೆರವಾಗುತ್ತವೆ.

•         ದ್ವಿತೀಯ ಕೃಷಿ ಔದ್ಯಮಿಕ ಸಂಪರ್ಕಜಾಲ(ಎಸ್ಎಇಎನ್)ಅನ್ನು 2018ರಲ್ಲಿ ಚಾಲನೆ ನೀಡಲಾಯಿತು. ಇದರ ನೇತೃತ್ವವನ್ನು ಪಂಜಾಬ್ ನ  ರಾಜ್ಯ ತಂತ್ರಜ್ಞಾನ ಮಂಡಳಿ(ಪಿ ಎಸ್ ಸಿ ಎಸ್ ಟಿ), ರಾಷ್ಟ್ರೀಯ ಕೃಷಿ ಆಹಾರ ಜೈವಿಕ ತಂತ್ರಜ್ಞಾನ ಕೇಂದ್ರ(ಎನ್ಎಬಿಐ), ಕೇಂದ್ರೀಯ ಆವಿಷ್ಕಾರ ಮತ್ತು ಅನ್ವಯಿಕ ಜೈವಿಕ ಸಂಸ್ಕರಣಾ ಕೇಂದ್ರ(ಸಿಐಎಬಿ) ಮತ್ತು ಬ್ರಿಯಾಕ್ಸ್ ಬಯೋನೆಸ್ಟ್ – ಪಂಜಾಬ್ ವಿಶ್ವವಿದ್ಯಾಲಯ(ಬಯೋನೆಸ್ಟ್ – ಪಿಯು) ಮತ್ತಿತರ ಸಂಸ್ಥೆಗಳು ವಹಿಸಿವೆ. ಕೃಷಿ ವಲಯದ ಎರಡನೇ ಹಂತದಲ್ಲಿರುವ ಉದ್ದಿಮೆಗಳಿಗೆ ನೆರವು ನೀಡುವುದು ಮತ್ತು ಹೊಸ ಉದ್ದಿಮೆಗಳನ್ನು ಬೆಂಬಲಿಸುವುದು ಈ ಯೋಜನೆಯ ಗುರಿಯಾಗಿದೆ.

·          2018 ರ ಅಕ್ಟೋಬರ್ ನಲ್ಲಿ ಆಂಟಿ ಮೈಕ್ರೋ ಬಿಯಲ್ ರೆಸಿಸ್ಟೆನ್ಸ್ –ಸೂಕ್ಷ್ಮ ಜೀವಿ ಪ್ರತಿರೋಧಕ (ಎಎಂಆರ್ಯೋಜನೆ ಆರಂಭಿಸಲಾಯಿತು.ಇದರಡಿ ಎಎಂಆರ್ ವಿರುದ್ಧ ಕಡಿಮೆ ದರದಲ್ಲಿ ಪರಿಣಾಮಕಾರಿ ಮತ್ತು ದೇಶೀಯ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಭಾರತದಲ್ಲಿ ಎಎಂಆರ್ ನ ವರ್ಗೀಕರಣಎಎಂಆರ್ ನಿಗದಿತ ರೋಗಕಾರಕ (ಸ್ಪೆಸಿಫಿಕ್ ಪಾತೋಜನ್) ಗಳ ಸ್ಥಾಪನೆ ಮತ್ತು ಅವುಗಳನ್ನು ಪತ್ತೆಹಚ್ಚಲು ಕಡಿಮೆ ದರದ ಮತ್ತು ಕ್ಷಿಪ್ರವಾಗಿ ಕಾರ್ಯನಿರ್ವಹಿಸುವ ತಪಾಸಣಾ ಕಿಟ್ ಗಳ ಅಭಿವೃದ್ಧಿ ಮತ್ತಿತರ ಉದ್ದೇಶವಿದೆ.

·         ತಾಂತ್ರಿಕ ಆವಿಷ್ಕಾರಗಳನ್ನು ಉತ್ತೇಜಿಸಲು ಆಕ್ಸಲರೇಟೆಡ್ ಟ್ರಾನ್ಸ್ ಲ್ಯಾಷನಲ್ ಗ್ರ್ಯಾಂಟ್ ಫಾರ್ ಕಮರ್ಷಿಲೈಜೇಶನ್(ಎಟಿಜಿಸಿಯೋಜನೆ ಆರಂಭಿಸಲಾಯಿತುಇದರಡಿ ವಿಶೇಷವಾಗಿ ಅಭಿವೃದ್ಧಿ ಗುರಿ ಹೊಂದಿರುವ ಮೂಲಭೂತ ಸಂಶೋಧನೆಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶವಿದೆ.

·         ಪುಣೆಯ ವೆಂಚರ್ ಕೇಂದ್ರದಲ್ಲಿ ಹೊಸ ಪ್ರಾದೇಶಿಕ ಕೇಂದ್ರ ಬೈರಾಕ್ಪ್ರಾದೇಶಿಕ ಜೈವಿಕ ಆವಿಷ್ಕಾರಿ ಕೇಂದ್ರ(ಬಿ ಆರ್ ಬಿ ಸಿಸ್ಥಾಪಿಲಾಯಿತು.ನವೋದ್ಯಮಗಳಿಗೆ ಮಾರ್ಗದರ್ಶನಸಂಪೋಷಣಾ ಕೇಂದ್ರಗಳ ನಿರ್ವಹಣಾಕಾರರಿಗೆ ತರಬೇತಿ ಸೇರಿದಂತೆ ಶ್ರೇಷ್ಠ ಗುಣಮಟ್ಟದ ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನಾಗಿ ಇದನ್ನು ರೂಪಿಸಲಾಗಿದೆಇದು ಜೀವ ವಿಜ್ಞಾನದಲ್ಲಿ ಉದ್ಯಮಶೀಲತೆ ಉತ್ತೇಜನಕ್ಕೂ ನೆರವು ನೀಡಲಿದೆ.

·         ಅಪರೂಪದ ಅಸಾಧಾರಣ ಭಾರತೀಯ ಜಾನುವಾರು ತಳಿಗಳನ್ನು ಉಳಿಸುವ ಉದ್ದೇಶದ ಜಾನುವಾರು ಜಿನೋಮ್ ಅಭಿವೃದ್ಧಿ ಕಾರ್ಯಕ್ರಮ ಆರಂಭಿಸಲಾಯಿತುಆರಂಭಿಕ ಹಂತದಲ್ಲಿ ಅಪರೂಪದ ಜಾನುವಾರುಗಳನ್ನು ಗುರುತಿಸುವುದು ಮತ್ತು ಭವಿಷ್ಯಕ್ಕಾಗಿ ಅವುಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ.

 

2018-19ನೇ ಸಾಲಿನಲ್ಲಿ ಸಾಧಿಸಿರುವ ಅಂಶಗಳ ಸಂಕ್ಷಿಪ್ತ ಪರಿಚಯ ಈ ಕೆಳಗಿನಂತಿದೆ

ಮಾನವ ಸಂಪನ್ಮೂಲ ಅಭಿವೃದ್ಧಿ/ಸಾಮರ್ಥ್ಯವೃದ್ಧಿ

·         15 ವಿಜ್ಞಾನಿಗಳನ್ನು ನ್ಯಾಷನಲ್ ಬಯೋಸೈನ್ಸ್ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಯಿತು. 9 ವಿಜ್ಞಾನಿಗಳಿಗೆ ಇನ್ನೋವೇಟೀವ್ ಯಂಗ್ ಬಯೋ ಟೆಕ್ನಾಲಜಿಸ್ಟ್ ಅವಾರ್ಡ್ಜೈವಿಕ ಉತ್ಪನ್ನಅಭಿವೃದ್ಧಿ ಮತ್ತು ವಾಣಿಜ್ಯೀಕರಣಕ್ಕಾಗಿ ಇಬ್ಬರು ವಿಜ್ಞಾನಿಗಳಿಗೆ ರಾಷ್ಟ್ರೀಯ ಮಹಿಳಾ ಜೈವಿಕ ತಂತ್ರಜ್ಞಾನ ನೆರವು(ಹಿರಿಯ ಹಾಗೂ ಕಿರಿಯಪ್ರಶಸ್ತಿಇಬ್ಬರು ಹೆಸರಾಂತ ವಿಜ್ಞಾನಿಗಳಿಗೆ ಜೈವಿಕ ತಂತ್ರಜ್ಞಾನ ಸಂಶೋಧನಾ ಪ್ರೊಫೆಸರ್ ಹುದ್ದೆ, 75 ಮಂದಿಗೆ ರಾಮಲಿಂಗಸ್ವಾಮೈರ್ ಪ್ರವೇಶ ಫೆಲೋಶಿಪ್, 160 ಸಂಶೋಧನಾ ಸಹಾಯಕರಿಗೆ ನೆರವು, 942 ಕಿರಿಯ ಸಂಶೋಧನಾ ಫೆಲೋಗಳಿಗೆ ಬೆಂಬಲಜೈವಿಕ ತಂತ್ರಜ್ಞಾನ ಫಿನಿಶಿಂಗ್ ಸ್ಕೂಲ್ ಕಾರ್ಯಕ್ರಮದಲ್ಲಿ 89 ವಿದ್ಯಾರ್ಥಿಗಳಿಗೆ ನೆರವು ನೀಡಲಾಯಿತು.

·         ಭಾರತ್ ಬೋಸ್ಟನ್ ಬಯೋಸೈನ್ಸ್ ಬಿಗಿನಿಂಗ್ – ಬಿ-4, ಎರಡನೇ ಹಂತದ ಎರಡು ವರ್ಷದ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದುಅದರಡಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ 16 ಮಂದಿ ಪೋಸ್ಟ್ ಡಾಕ್ಟೊರಲ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. 100 ಯುವ ವಿದ್ಯಾರ್ಥಿಗಳಿಗೆ ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಲಾಯಿತು.

ಉಪಕರಣಸಲಕರಣೆಮೇಕ್ ಇನ್ ಇಂಡಿಯಾಸ್ಟಾರ್ಟ್ ಅಪ್ ಇಂಡಿಯಾಜೈವಿಕ ಸಂಪೋಷಣಾ ಕೇಂದ್ರಗಳು(ಬಿರಾಕ್ ಸಹಯೋಗದಲ್ಲಿ)

·         ನವೋದ್ಯಮ ಮತ್ತು ಸಂಪೋಷಣಾ ಕೇಂದ್ರಗಳಿಗಾಗಿ ಮೊದಲ ಸಹಾಯ ಕೇಂದ್ರಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ಸಹಾಯಕ ಮಂಡಳಿ(ಬಿರಾಕ್ಅಭಿವೃದ್ಧಿಪಡಿಸಲಾಯಿತು.

·         ನವೋದ್ಯಮ ಉಪಕ್ರಮದಡಿ ಜೈವಿಕ ತಂತ್ರಜ್ಞಾನ ಇಲಾಖೆ ಪುಣೆಯಲ್ಲಿ ಬಯೋಕ್ಲಸ್ಟರ್ ಸ್ಥಾಪನೆಗೆ ಅನುಮೋದನೆ ನೀಡಿತುಅಲ್ಲದೆ ಬಿರಾಕ್ ತನ್ನ ಬಯೋನೆಸ್ಟ್ ಯೋಜನೆಯಡಿ 2018ರಲ್ಲಿ ನಾಲ್ಕು ಹೊಸ ಜೈವಿಕ ಸಂಪೋಷಣಾ ಕೇಂದ್ರಗಳಿಗೆ ನೆರವು ನೀಡಿತು.

·         ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವ ಸಲುವಾಗಿ ಬಿರಾಕ್ ಮತ್ತು ಕೆ ಐ ಎಚ್ ಟಿ(ಕಲಾಂ ಆರೋಗ್ಯ ತಂತ್ರಜ್ಞಾನ ಕೇಂದ್ರ)ಗಳು ಸಹಭಾಗಿತ್ವದಲ್ಲಿ ನವೋದ್ಯಮಉದ್ಯಮಶೀಲತೆಸಂಶೋಧನೆ ಶೈಕ್ಷಣಿಕ ವೃಂದ ಹಾಗೂ ಸಂಪೋಷಣಾ ಕೇಂದ್ರಗಳಿಗೆ ನೆರವು ನೀಡಲಿವೆಅಲ್ಲದೆ ವೈದ್ಯಕೀಯ ಉಪಕರಣಗಳ ಪರೀಕ್ಷೆ ಮತ್ತು ಗುಣಮಟ್ಟ ಪ್ರಮಾಣೀಕರಣಕ್ಕೆ ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳಿಗೆ ನೆರವು ಘೋಷಿಸಿದವು.


·         ಬಿರಾಕ್ ಬಯೋನೆಸ್ಟ್ ಯೋಜನೆ ಮೂಲಕ 2018ರಲ್ಲಿ ಹೆಚ್ಚುವರಿಯಾಗಿ 5 ಹೊಸ ಜೈವಿಕ ಸಂಪೋಷಣಾ ಕೇಂದ್ರಗಳ ಸ್ಥಾಪನೆಗೆ ನೆರವು ನೀಡಿತು.ಇದರಿಂದಾಗಿ ಸಂಪೋಷಣಾ ಕೇಂದ್ರಗಳ ಒಟ್ಟಾರೆ ವಿಸ್ತೀರ್ಣ 3,91,849 ಚದರ ಅಡಿಗೆ ಏರಿಕೆಯಾಯಿತು.

ಸ್ವಾಸ್ಥ ಭಾರತದಡಿ ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣೆ

·         ಜೈವಿಕ ತಂತ್ರಜ್ಞಾನ ಇಲಾಖೆಯ ಭಾರತ – ಅಮೆರಿಕ ಲಸಿಕೆ ಕ್ರಿಯಾ ಯೋಜನೆ(ವಿಎಪಿಮತ್ತು ಲಸಿಕೆ ಗ್ರ್ಯಾಂಡ್ ಚಾಲೆಂಜ್ ಕಾರ್ಯಕ್ರಮ(ವಿಜಿಸಿಪಿ ಹೆಚ್ಚಿನ ಅಂಕಗಳಿಸಿ ಸಾಧನೆ ಮಾಡಿವೆ.  ರೋಟೋ ವೈರಸ್ ಲಸಿಕೆ ಕಾರ್ಯಕ್ರಮ ಸಾಮೂಹಿಕ ಲಸಿಕಾ ಕಾರ್ಯಕ್ರಮದ ಭಾಗವಾಗಿದೆ ಮತ್ತು ಅದನ್ನು ಮಲೇರಿಯಾಡೆಂಘಿ ಮತ್ತಿತರ ಕಾಯಿಲೆಗಳ ವಿರುದ್ಧ ಲಸಿಕೆಯನ್ನಾಗಿ ಬಳಸಲಾಗುತ್ತಿದೆವಿಶ್ವದ ಪ್ರತಿ ಆರು ಮಕ್ಕಳಲ್ಲಿ ಒಂದು ಮಗು ಭಾರತದಿಂದ ತಯಾರಾದ ಲಸಿಕೆಯನ್ನು ಪಡೆಯುತ್ತಿದೆ.

·         ಫಾಲ್ಸಿಪರಂಮಲೇರಿಯಾ ಲಸಿಕೆಟಾಕ್ಸಿಕಾಲಜಿ (ಜೈವಕ್-2) ಮತ್ತು ವಿವಾಕ್ಸ್ ಮಲೇರಿಯಾ ಲಸಿಕೆ ಒಂದನೇ ಹಂತ ಪೂರ್ಣಗೊಳಿಸಾಗಿದೆ.(ಜೈವಾಕ್-1)

·         ಒಡಿಶಾದ ನಾಲ್ಕು ಜಿಲ್ಲೆಗಳಾದ ಕೋರ್ದ್ರಾಸಂಬಾಲ್ ಪುರ್ಕೋರಾಪತ್ (ಆಶೋತ್ತರ ಜಿಲ್ಲೆ),  ಮತ್ತು ಬಾಲ್ಸೋರ್ ಗಳಲ್ಲಿ ಹಂತ ಹಂತವಾಗಿ ರಕ್ತಹೀನತೆ ಮತ್ತು ತಲ್ಸೇಮಿಯಾ ನಿಯಂತ್ರಣಕ್ಕೆ ಸಮಗ್ರ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

·         ಜೈವಿಕ ವಿನ್ಯಾಸ ಕಾರ್ಯಕ್ರಮದಡಿ ಎರಡು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ ಅವುಗಳೆಂದರೆ ಇಂಟ್ರಾ ವಸೆಯುಸ್ಡಿವೈಸ್’(ಓಝೆಡ್ ವೈಎನ್-ಡಿಮತ್ತು ಚೆಸ್ಟ್ ಟ್ಯೂಬ್ ಫಿಕ್ಸೇಟರ್ ಅಂಡ್ ಸೀಲಿಂಗ್ ಡಿವೈಸ್’(ಫಲೇರಾಜಿಒಎಚ್ಇವುಗಳಿಗೆ ನವೋದ್ಯಮ ಕಂಪನಿಗಳಾದ ಬೆಂಗಳೂರಿನ ಮೆಸರ್ಸ್ ಆರ್ಕ್ಯೂಪ್ ಲೈಫ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮುಂಬೈನ ಮೆಸರ್ಸ್ ಯುನಿನೊ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಗಳಿಗೆ ಲೈಸೆನ್ಸ್ ನೀಡಲಾಗಿದೆ.

·         ನವದೆಹಲಿಯ ಏಮ್ಸ್ ಮತ್ತು ಫರಿದಾಬಾದ್ ನ ಟಿ ಎಚ್ ಎಸ್ ಟಿ ಐ ಜಂಟಿಯಾಗಿ ಟಿಬಿ(ಕ್ಷಯ ರೋಗ) ಪತ್ತೆಹಚ್ಚುವ ಶೇಕಡ ನೂರಷ್ಟು ಸೂಕ್ಷ್ಮ ಹಾಗೂ ಶೇಕಡ 91ರಷ್ಟು ಖಚಿತತೆ ನೀಡುವ ಪರೀಕ್ಷೆಯನ್ನು ನಡೆಸಿವೆ.

·         ಬುದ್ಧಿಮಾಂದ್ಯತೆ ವಿಜ್ಞಾನ ಕಾರ್ಯಕ್ರಮಪ್ರಸ್ತುತತೆ/ಅಪಾಯ/ಬುದ್ಧಿಮಾಂದ್ಯತೆ ವಿಶ್ಲೇಷಣೆ ಮತ್ತು ಆನಂತರದ ಮೂಲ ಸಂಶೋಧನೆ’ ಕುರಿತ ಶೀರ್ಷಿಕೆಯ ಸಮಗ್ರ ಅಧ್ಯಯನವನ್ನು ಆರಂಭಿಸಲಾಯಿತುಅದರಡಿ  ಖಚಿತ ಮಾಹಿತಿಜೈವಿಕ ಗುರುತುಗಳು ಅಪಾಯ ಮತ್ತು ನಿಯಂತ್ರಣ ಅಂಶಗಳ ಬಗ್ಗೆ ವಿಶ್ವಾಸಾರ್ಹ ದತ್ತಾಂಶ ಒದಗಿಸುವ ಗುರಿ ಹೊಂದಲಾಗಿದೆ.

·         ವಿಟಮಿನ್ ಡಿ ಕೊರತೆ(ವಿಡಿಡಿಇದು ಜಾಗತಿಕ ಮಟ್ಟದಲ್ಲಿ ಇದ್ದುಕಳೆದ ಎರಡು ದಶಕಗಳಿಂದೀಚೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ ಅದು ಭಾರತದಲ್ಲಿ ವ್ಯಾಪಕವಾಗಿ ಹರಡಬಹುದು ಎಂದು ಹೇಳಲಾಗುತ್ತಿದೆಆ ಹಿನ್ನೆಲೆಯಲ್ಲಿಭಾರತದಲ್ಲಿ ವಿಟಮಿನ್ ಡಿ ಕೊರತೆಸಾರ್ವಜನಿಕ ಆರೋಗ್ಯದ ಮಹತ್ವ ಮತ್ತು ಹಸ್ತಕ್ಷೇಪ’. ಪ್ರಸ್ತಾವವನ್ನು ಪ್ರಕಟಿಸಲಾಯಿತುಇಲಾಖೆ ಸಾರ್ವಜನಿಕ ಆರೋಗ್ಯ ಮಹತ್ವದ ವಿಡಿಡಿ ಸಮಸ್ಯೆ ನೀಗಿಸಲು ಮತ್ತು ಸಂಶೋಧನೆ ಬೆಂಬಲಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ.

 

ಕೃಷಿಯಲ್ಲಿ ರೈತರ ಆದಾಯ ದುಪ್ಪಟ್ಟುಗೊಳಿಸುವುದು ಮತ್ತು ಆಹಾರ ಭದ್ರತೆ

·         ಹೊಸ ಭತ್ತದ ತಳಿ ಉನ್ನತ್’ ಪಿಬಿಡಬ್ಲೂ343 ಅನ್ನು ಲೂಧಿಯಾನಾದ ಪಿಎಯು ಅಭಿವೃದ್ಧಿಗೊಳಿಸಿದ್ದುಇದು ರೋಗನಿರೋಧಕವಾಗಿರುತ್ತದೆಇದು ಮೆಗಾತಳಿ ಪಿಬಿಡಬ್ಲೂ343ಯ ಸುಧಾರಿತ ತಳಿಯಾಗಿದ್ದುಸಾಮಾನ್ಯ ಈ ಭತ್ತದ ಪೈರು ನೂರು ಸೆಂಟಿಮೀಟರ್ ಉದ್ದವಿರುತ್ತದೆ ಮತ್ತು 155 ದಿನಗಳಲ್ಲೇ ಅದು ಫಲ ನೀಡುತ್ತದೆ ಮತ್ತು ಪ್ರತಿ ಎಕರೆಗೆ ಸರಾಸರಿ 23.2 ಕ್ವಿಂಟಾಲ್ ಇಳುವರಿ ಬರುತ್ತದೆ.

·         ಇದಲ್ಲದೆ ಕೀಟಾಣುಗಳ ಬಾಧೆ ನಿಗ್ರಹಿಸಬಲ್ಲ ಬಾಸುಮತಿ ಅಕ್ಕಿಯ ಎರಡು ತಳಿಗಳಾದ ಪುಸಾ ಬಾಸುಮತಿ 1728 ಮತ್ತು ಪುಸಾ ಬಾಸುಮತಿ 1718 ಅಭಿವೃದ್ಧಿಪಡಿಸಲಾಗಿದ್ದುಅವುಗಳನ್ನು ಪರೀಕ್ಷೆಯ ನಂತರ ಕೇಂದ್ರೀಯ  ತಳಿ ಬಿಡುಗಡೆ ಸಮಿತಿ ಬಿಡುಗಡೆ ಮಾಡಿತ್ತುಇದರಲ್ಲಿ ಪುಸಾ ಬಾಸುಮತಿ 1728, ಪುಸಾ ಬಾಸುಮತಿ 1401 ಬದಲಾಗಿ ಅಭಿವೃದ್ಧಿಪಡಿಸಲಾಗಿದ್ದುಅದೇ ರೀತಿ ಪುಸಾ ಬಾಸುಮತಿ 1718, ಪುಸಾ ಬಾಸುಮತಿ 1121 ಬದಲಾಗಿ ಅಭಿವೃದ್ಧಿಪಡಿಸಲಾಗಿದೆಇವರೆಡು ಪ್ರಸ್ತುತ1.40 ಮಿಲಿಯನ್ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆಯಲಾಗುತ್ತದೆಈ ಎರಡು ತಳಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿರುವುದರಿಂದ  ಮುಂದಿನ ದಿನಗಳಲ್ಲಿ ಅವುಗಳ ಬೆಳೆ ಬೆಳೆಯುವ ಪ್ರದೇಶ ಹೆಚ್ಚಾಗಲಿದೆ.

·         ಜೈವಿಕ ತಂತ್ರಜ್ಞಾನ ಇಲಾಖೆ ಡಿಬಿಟಿ-ಪಿಜಿಜಿಎಫ್ ಪ್ಲಾಂಟ್ ಜಿನೋಟೈಪಿಂಗ್ ಮತ್ತು ಜಿನೋಮಿಕ್ಸ್ ಫೆಸಿಲಿಟಿ’(ಪಿಜಿಜಿಎಫ್)ಅನ್ನು ನವದೆಹಲಿಯ ಎನ್ ಐ ಪಿ ಜಿ ಆರ್ ನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗಿದೆಈ ರಾಷ್ಟ್ರೀಯ ಸೌಕರ್ಯದಲ್ಲಿ ಏಕಗವಾಕ್ಷಿ ಪದ್ಧತಿ ಇದ್ದುಆಧುನಿಕ ಜಿನೋಮಿಕ್ಸ್ ತಂತ್ರಜ್ಞಾನ ಸೇವೆಗಳನ್ನು ಒದಗಿಸಲಾಗುತ್ತಿದ್ದುಇದು ಭಾರತೀಯ ಬೀಜ ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆಅಲ್ಲದೆ ಈ ಸೌಕರ್ಯದಿಂದಾಗಿ ಜಿನೋಟೈಪಿಂಗ್ ಸೇವೆಗಳಲ್ಲಿ ಮುಂಚೂಣಿಯಲ್ಲಿರುವುದಲ್ಲದೆಸಲಹಾ ಸೌಕರ್ಯವಿರುವುದರಿಂದ ಅದು ಭಾರತದ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜಾಗತಿಕ ಮಟ್ಟದಲ್ಲಿ ಮಾದರಿಯಾಗಿ ಕೆಲಸ ಮಾಡುತ್ತದೆ.

ಪ್ರಾಣಿ ಜೈವಿಕ ತಂತ್ರಜ್ಞಾನ

•         ಗೋವಿನ ಕ್ಷಯರೋಗ – ಟ್ಯೂಬರ್ ಕಿಲೋಸಿಸ್(ಬಿಟಿಬಿಕಾರ್ಯಕ್ರಮವನ್ನು  ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಆರಂಭಿಸಲಾಯಿತುಇದರಲ್ಲಿ ಬಿಟಿಬಿ ಮೇಲೆ ನಿಗಾ ಇಡುವುದುಅದರ ಪ್ರಭುತ್ವ ಬಿಸಿಜಿ ಲಸಿಕೆ ಮೂಲಕ ಬಿಟಿಬಿ ನಿಯಂತ್ರಣ ಕಾರ್ಯಕ್ರಮ ಯುವ ವಿಜ್ಞಾನಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಯಿತು.

•         ದೇಶಾದ್ಯಂತ ಸಾಕು ನಾಯಿಗಳ ಆರೋಗ್ಯ ಕಾರ್ಯಕ್ರಮ(ಕ್ಯಾನೈನ್ ಹೆಲ್ತ್)ವನ್ನು ಆರಂಭಿಸಲಾಯಿತುಅದರಲ್ಲಿ ಪ್ರಮುಖವಾಗಿ  ನಾಯಿಗಳ ಆರೋಗ್ಯಪೌಷ್ಠಿಕಾಂಶ ಮತ್ತು ಥೆರಪಿ ಮತ್ತಿತರ ಅಂಶಗಳ ಬಗ್ಗೆ ಒತ್ತು ನೀಡಲಾಗಿತ್ತುನಾಯಿಗಳಿಗೆ ಹರಡುತ್ತಿದ್ದ ಸೋಂಕು ನಿಯಂತ್ರಿಸುವುದುನಾಯಿಗಳ ರಕ್ಷಣಾ ವ್ಯವಸ್ಥೆಯನ್ನು ಹಾಗೂ ಪಶು ವೈದ್ಯಕೀಯ ಸೇವೆಗಳನ್ನು ಒದಗಿಸಲಾಗಿದೆ.

 

ಶುದ್ಧ ಇಂಧನ ಮತ್ತು ಜೈವಿಕ ಸಂಪನ್ಮೂಲ ಅಭಿವೃದ್ಧಿ

•         ಗೌರವಾನ್ವಿತ ಸಚಿವರಾದ ಡಾಹರ್ಷವರ್ಧನ್ ಅವರು, 2018ರ ಸೆಪ್ಟೆಂಬರ್ 18ರಂದು ಡಿಬಿಟಿ-ಐಸಿಟಿ ಇಂಧನ ಜೈವಿಕ ವಿಜ್ಞಾನಗಳ ಕೇಂದ್ರವನ್ನು ಮುಂಬೈನಲ್ಲಿ ಸ್ಥಾಪಿಸುವುದಾಗಿ ಪ್ರಕಟಿಸಿದರು  ಈ ಹೊಸ ಯೋಜನೆಯಡಿ ಮುಂದಿನ ತಲೆಮಾರಿಗೆ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ನೀಡುವ ಮೂರು ಬಗೆಯ ನವೀನ ತಂತ್ರಜ್ಞಾನಗಳಿಗೆ ವೇದಿಕೆ ಒದಗಿಸಲಾಯಿತು. 1 ಎಂ ಎಲ್ ಡಿ ಸಾಮರ್ಥ್ಯದ ಕೊಳಚೆನೀರು ಶುದ್ಧೀಕರಣ ಘಟಕದ ಸ್ಥಾಪನೆಯಿಂದ ಮುಂದಿನ ತಲೆಮಾರಿನ ಸಂಸ್ಕರಣಾ ತಂತ್ರಜ್ಞಾನವನ್ನು ಸಮಗ್ರ ರೀತಿಯಲ್ಲಿ ಪ್ರದರ್ಶಿಸಲು ಸಾಧ್ಯವಾಯಿತು.

•         ಸುಂದರಬನ ಕಾಡುಗಳಲ್ಲಿನ ಉಷ್ಣವಲಯದ ಜನವಸತಿಗಳಿಗಾಗಿ ಬಯೋ ರೆಸ್ಟೋರೇಷನ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಯಿತುಉಷ್ಣವಲಯದಲ್ಲಿ ವಾಸಿಸುತ್ತಿರುವ ಜನರ ಸ್ಥಿತಿಗತಿ ಬಗ್ಗೆ ಅರ್ಥಮಾಡಿಕೊಂಡು ಅವರ ಮೇಲಾಗುತ್ತಿದ್ದ ಒತ್ತಡದ ಅಂಶಗಳನ್ನು ಆಧರಿಸಿ ಅವರಿಗೆ ನೆರವು ನೀಡಲಾಯಿತು.

•         ಇಂಪಾಲದ ಐ ಬಿ ಎಸ್ ಡಿಯಲ್ಲಿ ಮೈಕ್ರೋಬಯಲ್ ರೆಪೊಸಿಟರಿ ಸೆಂಟರ್(ಎಂ ಆರ್ ಸಿ)ಅನ್ನು ಸ್ಥಾಪಿಸಲಾಯಿತುಇದರ ಉದ್ದೇಶ ಭಾರತದ ಈಶಾನ್ಯ ಭಾಗದ ಅಪರೂಪದ  ಜೀವವೈವಿಧ್ಯ ತಾಣಗಳಲ್ಲಿರುವ ಉತ್ಕೃಷ್ಟ ಸೂಕ್ಷ್ಮಾಣು ಸಂಪನ್ಮೂಲಗಳ ಪೂರೈಕೆ ಮತ್ತು ನಿರ್ವಹಣೆಸಂರಕ್ಷಣೆ ಹಾಗೂ ಅವುಗಳನ್ನು ಕಾಯ್ದುಕೊಳ್ಳುವ ನೋಡಲ್ ಕೇಂದ್ರವಾಗಿ ಕಾರ್ಯನಿರ್ವಹಿಸುವುದಾಗಿದೆ.

•         ವಿಜ್ಞಾನ ತಂತ್ರಜ್ಞಾನಭೂವಿಜ್ಞಾನಪರಿಸರಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಗೌರವಾನ್ವಿತ ಡಾಹರ್ಷವರ್ಧನ್ ಅವರ ಸಮಕ್ಷಮದಲ್ಲಿ 2018ರ ಆಗಸ್ಟ್ 30ರಂದು ಅಂತಾರಾಷ್ಟ್ರೀಯ ಅಣು ಇಂಧನ ಏಜೆನ್ಸಿ(ಐಎಇಹಾಗೂ ಶುದ್ಧ ಇಂಧನ ಪರಿವರ್ತನೆಗಾಗಿ ಆವಿಷ್ಕಾರಗಳನ್ನು ಉತ್ತೇಜಿಸುವ ಒಡಂಬಡಿಕೆಗೆ ಸಹಿ ಹಾಕಲಾಯಿತು.

 

ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮ

·         ಭಾರತ ಸರ್ಕಾರದ ಆಶೋತ್ತರ ಜಿಲ್ಲಾ ಕಾರ್ಯಕ್ರಮಕ್ಕೆ ಅನುಕೂಲ ಮಾಡಿಕೊಡಲು ಇಲಾಖೆ ಹೊಸ ಕಾರ್ಯಕ್ರಮ ಗ್ರಾಮೀಣ ಜೈವಿಕ ಸಂಪನ್ಮೂಲ ಕೇಂದ್ರ’ ಕಾರ್ಯಕ್ರಮ ಆರಂಭಿಸಲಾಯಿತುಮೊದಲನೇ ಹಂತದಲ್ಲಿ ಆರೋಗ್ಯ ಮತ್ತು ಪೌಷ್ಠಿಕಾಂಶಕೃಷಿ ಮತ್ತು ಅದರ ಸಂಬಂಧಿ ವಲಯಗಳಲ್ಲಿ ಜೈವಿಕ ತಂತ್ರಜ್ಞಾನ ಉಪಕರಣ ಮತ್ತು ಕಾರ್ಯತಂತ್ರಗಳನ್ನು ಬಳಸಿಕೊಂಡುನಿಗದಿತ ಸಮಸ್ಯೆಗಳನ್ನು ಎದುರಿಸಲು ಪ್ರಸ್ತಾವಿತ ಕೇಂದ್ರಗಳಿಗೆ ನೆರವು ನೀಡಲಾಯಿತುಆ ಮೂಲಕ ಈ ಆಶೋತ್ತರ ಜಿಲ್ಲೆಗಳನ್ನು ಮುಖ್ಯವಾಹಿನಿಗೆ ತರುವ ಪ್ರಕ್ರಿಯೆ ನಡೆಸಲಾಯಿತು.

 

ಅಂತಾರಾಷ್ಟ್ರೀಯ ಸಹಭಾಗಿತ್ವ

•         ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯಕ್ರಮ ಸಹಕಾರ(ಪಿಒಸಿ)ಗೆ ಸ್ವೀಡನ್ ನ ಸ್ವೀಡಿಷ್ ಸರ್ಕಾರಿ ಆವಿಷ್ಕಾರ ವ್ಯವಸ್ಥೆಗಳ ಏಜೆನ್ಸಿ(ವಿನ್ನೋವಜೊತೆ ಒಪ್ಪಂದಕ್ಕೆ ಸಹಿ ಹಾಕಿತುಇದರಡಿ ಸಹಕಾರ ಸಾಧಿಸುವ ವಿಷಯದ ಶಿಷ್ಟಾಚಾರದಡಿ ಕೇವಲ ಆದೇಶಕ್ಕೆ  ಸೀಮಿತವಾಗಿರಲಿಲ್ಲಜೈವಿಕ ಆಧಾರಿತ ಆರ್ಥಿಕತೆಜೈವಿಕ ಉತ್ಪನ್ನಗಳುಆರೋಗ್ಯ ಮತ್ತು ಜೀವವಿಜ್ಞಾನಗಳು ಸೇರಿದಂತೆ ಜೈವಿಕ ವೈದ್ಯಕೀಯ ಉಪಕರಣಗಳುನವೋದ್ಯಮಗಳುಸಂಪೋಷಣಾ ಕೇಂದ್ರಗಳುಪ್ರಯೋಗಾಲಯಗಳು ಮತ್ತು ಬಯೋಕ್ಲಸ್ಟರ್ ಗಳನ್ನು ಹೊಂದುವುದು ಸೇರಿದೆ.

•         ಹೊರೈಜಾನ್ 2020: ಜೈವಿಕ ತಂತ್ರಜ್ಞಾನ ಇಲಾಖೆ ಹೊರೈಜಾನ್ 2020(ಅತಿದೊಡ್ಡ ಇಯು ಸಂಶೋಧನಾ ಮತ್ತು ಅನ್ವೇಷಣಾ ಕಾರ್ಯಕ್ರಮ) ಪ್ರಸ್ತಾಪಕ್ಕೆ ಜಂಟಿ ಕರೆ ನೀಡಿತುಇದರ ಗುರಿ ನಮ್ಮ ಸಮಾಜ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಿಗೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಜೊತೆಗೂಡಿ ಪರಿಹಾರಗಳನ್ನು ಕಂಡುಕೊಳ್ಳುವ ಜೊತೆಗೆ  ಜ್ಞಾನ ವಿನಿಮಯಪರಿಣಿತಿ ಸಾಧಿಸುವ ಉದ್ದೇಶವಿದೆ.

•         ಭಾರತ ಮತ್ತು ಕೊರಿಯಾ ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಿಕ ವಿಷಯದಲ್ಲಿ ಸಹಭಾಗಿತ್ವ ಸಾಧಿಸಿದವುಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಕೊರಿಯಾ ಗಣರಾಜ್ಯ ಸರ್ಕಾರದ ವಿಜ್ಞಾನ ಮತ್ತು ಐಸಿಟಿ ಸಚಿವಾಲಯ ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಿಕತೆ ವಲಯಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಜುಲೈ 9, 2018ರಂದು ಒಪ್ಪಂದಕ್ಕೆ ಸಹಿ ಹಾಕಿದವು.

•         ಭಾರತ ಮತ್ತು ಜಪಾನ್ ಸಹಭಾಗಿತ್ವಡಿ ಬಿ ಟಿಎ ಐ ಎಸ್ ಟಿ ಅಂತಾರಾಷ್ಟ್ರೀಯ ಪ್ರಯೋಗಾಲಯ(ಡೈ ಲ್ಯಾಬ್)ಅನ್ನು ವಿಸ್ತರಿಸುವ ಡೈ ಸೆಂಟರ್ ಹೆಸರಿನ ಸಮಗ್ರ ಸಂಶೋಧನಾ ಕೇಂದ್ರವನ್ನು ಜಪಾನ್ ನ ಸುಕುಬಾದಲ್ಲಿ ಅಧಿಕೃತವಾಗಿ ಆರಂಭಿಸಲಾಯಿತುಅದರ ಸೋದರ ಸಂಸ್ಥೆಯಾದ ಡೈಲ್ಯಾಬ್ಅನ್ನು ಒಸಾಕ ಕೇಂದ್ರ(ದಕ್ಷಿಣ ಜಪಾನ್)ನಲ್ಲಿ ಉದ್ಘಾಟಿಸಲಾಯಿತು.

•         ಆವಿಷ್ಕಾರ ಸಹಭಾಗಿತ್ವಕ್ಕೆ ಅತ್ಯಂತ ಪ್ರಮುಖ ಸಂಗತಿ ಎಂಬುದನ್ನು ಮನಗಂಡಿರುವ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ಇಲಾಖೆಇನ್ನೋವೇಟಿಯರ್ ಹೋಟಿಸ್ ಸ್ಕೇಕ್ಸೆಸ ಬಿಸಿನೆಸ್ ಫಿನ್ ಲ್ಯಾಂಡ್(ಬಿಸಿನೆಸ್ ಫಿನ್ ಲ್ಯಾಂಡ್)ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಯಿತುಉಭಯ ದೇಶಗಳ ಸಮಾನ ಆಸಕ್ತಿ ಆಧರಿಸಿ ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಾಯಕ ಮಂಡಳೀ(ಬಿರಾಕ್), ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ)ಯ ಸಾರ್ವಜನಿಕ ವಲಯದ ಉದ್ಯಮದ ಮೂಲಕ ಮಹತ್ವಾಕಾಂಕ್ಷೆಯ ಉದ್ಯಮದ ನೇತೃತ್ವದಲ್ಲಿ ಆವಿಷ್ಕಾರಿ ಹಾಗೂ ಪರಿವರ್ತನಾ ಯೋಜನೆಗಳನ್ನು ಜಾರಿಗೊಳಿಸಲಾಯಿತು.

•         ಮಹಿಳಾ ರೈತರ ತರಬೇತಿಗೆ ಸಂಬಂಧಿಸಿದಂತೆಭಾರತ ಮತ್ತು ಫಿಲಿಫೈನ್ಸ್ ಸಹಭಾಗಿತ್ವಏಳು ರಾಜ್ಯಗಳ 37 ಮಹಿಳಾ ರೈತರು ರೈತ ಮಹಿಳೆಯರಿಗಾಗಿ ಅತ್ಯಾಧುನಿಕ ಭತ್ತದ ಉತ್ಪಾದನೆ’ ಕಾರ್ಯಕ್ರಮದಡಿ ನಡೆದ ತರಬೇತಿಯಲ್ಲಿ ಭಾಗವಹಿಸಿದ್ದರುನಾಲ್ವರು ಮಹಿಳೆಯರು ಆಶೋತ್ತರ ಜಿಲ್ಲೆಗಳಾದ ಕರ್ನಾಟಕದ(ರಾಯಚೂರು) ಮತ್ತು ಅಸ್ಸಾಂನ(ದಾರಂಗ್ಜಿಲ್ಲೆಗಳ ಮಹಿಳೆಯರಿದ್ದರುಎರಡನೇ ಹಂತದ ಕಾರ್ಯಕ್ರಮದಲ್ಲಿ ಮಹಿಳೆಯರೂ ಸೇರಿ 35 ರೈತರು ಫಿಲಿಫೈನ್ಸ್ ನ ಲಾಸ್ ಬನೋಸ್ ನಲ್ಲಿ ಅತ್ಯಾಧುನಿಕ ತರಬೇತಿ ಪಡೆಯಲಿದ್ದಾರೆ.

•         ಜೈವಿಕ ತಂತ್ರಜ್ಞಾನ ಇಲಾಖೆ ಐರೋಪ್ಯಒಕ್ಕೂಟ(ಇಯುಜೊತೆ ಸಹಭಾಗಿತ್ವ ಪ್ರಕಟಿಸದ್ದುಎರಡೂ ಜಂಟಿಯಾಗಿ 2018ರ ಜುಲೈ 26ರಂದು ಜಗತ್ತಿನಾದ್ಯಂತ ಎಲ್ಲ ಜನರನ್ನು ರಕ್ಷಿಸುವ ಮುಂದಿನ ತಲೆಮಾರಿನ ಲಸಿಕೆಅಭಿವೃದ್ಧಿಪಡಿಸುವುದಾಗಿ ಘೋಷಿಸಿದವುಎರಡೂ ದೇಶಗಳು ಐರೋಪ್ಯ ಆಯೋಗ(ಇಸಿಮೂಲಕ ಇಯು ಫಂಡಿಂಗ್ ಕಾರ್ಯಕ್ರಮದಲ್ಲಿ ಸಂಶೋಧನಾ ಮತ್ತು ಆವಿಷ್ಕಾರಿ ಕಾರ್ಯಕ್ರಮಗಳನ್ನು ಹೊರೈಜಾನ್ 2020 ಹೆಸರಿನಲ್ಲಿ ಕೈಗೊಂಡಿವೆಇದಕ್ಕೆ ಡಿಬಿಟಿ ಸಮಾನ ಆರ್ಥಿಕ ನೆರವು 15 ಮಿಲಿಯನ್ ಯೂರೋಗಳನ್ನು ನೀಡುವ ಬದ್ಧತೆ ತೋರಿದೆ.

 

ಸ್ವಾಯತ್ತ ಸಂಸ್ಥೆಗಳು

ಜೈವಿಕ ತಂತ್ರಜ್ಞಾನ ಇಲಾಖೆಯಡಿ 16 ಸ್ವಾಯತ್ತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆಈ ಸಂಸ್ಥೆಗಳುಕೃಷಿ ಜೈವಿಕ ತಂತ್ರಜ್ಞಾನಪ್ರಾಣಿ ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯವೈದ್ಯಕೀಯ ಜೈವಿಕ ತಂತ್ರಜ್ಞಾನಶುದ್ಧ ಇಂಧನಜೈವಿಕ ಸಂಪನ್ಮೂಲ ಅಭಿವೃದ್ಧಿ ಮತ್ತಿತರ ಕುರಿತಾದ ರಾಷ್ಟ್ರೀಯ ಯೋಜನೆಗಳಿಗೆ ಪೂರಕವಾಗಿ ಮೂಲ ಸಂಶೋಧನೆ ಮತ್ತು ಆವಿಷ್ಕಾರ ಕಾರ್ಯಕ್ರಮಗಳನ್ನು ಕೈಗೊಂಡಿವೆಈ ಸಂಸ್ಥೆಗಳು ಕಡ್ಡಾಯವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯದಲ್ಲಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿವೆ ಈ ವರ್ಷ ಈ ನಿಟ್ಟಿನಲ್ಲಿ ಮಾಡಿರುವ ಸಾಧನೆಗಳ ವಿವರ ಈ ಕೆಳಗಿನಂತಿವೆ.

 

·         ಹೈದರಾಬಾದ್ ನ ನಿಜಾಮ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎನ್ಐಎಂಎಸ್)ನ ವೈದ್ಯಕೀಯ ವಂಶವಾಹಿ(ಜನಟಿಕ್ಸ್ಇಲಾಖೆ ಹೈದರಾಬಾದ್ ನ ಸಿ ಡಿ ಎಫ್ ಡಿ(ಸೆಂಟರ್ ಫಾರ್ ಡಿಎನ್ ಫಿಂಗರ್ ಪ್ರಿಂಟಿಂಗ್ ಅಂಡ್ ಡಯೋಗ್ನೆಸ್ಟಿಕ್ಸ್ಜೊತೆ ಒಡಂಬಡಿಕೆ ಮಾಡಿಕೊಂಡುವಂಶವಾಹಿ ನ್ಯೂನತೆಗಳಿರುವ ರೋಗಿಗಳಿಗೆ ಸೇವೆ ಒದಗಿಸುವ ಜೊತೆಗೆ ತರಬೇತಿ ಮತ್ತು ಸಂಶೋಧನಾ ಕೆಲಸಗಳಲ್ಲೂ ತೊಡಗಿವೆಅಲ್ಲದೆನಿಜಾಮ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಿ ಡಿ ಎಫ್ ಡಿ ಜೊತೆ ಸೇರಿ ವೈದ್ಯಕೀಯ ವಂಶವಾಹಿ ವಿಭಾಗದಲ್ಲಿ ಫೆಲೋಶಿಪ್ ಗಳನ್ನು ನೀಡುತ್ತಿದೆ ಇಬ್ಬರು ವಿದ್ಯಾರ್ಥಿಗಳು ಈ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಐವರು ವಿದ್ಯಾರ್ಥಿಗಳು ಪ್ರಸ್ತುತ ಈ ಕೋರ್ಸ್ ಗೆ ಪ್ರವೇಶ ಪಡೆದಿದ್ದಾರೆಸಿ ಡಿ ಎಫ್ ಡಿ ವೈರಾಣುಗಳ- ಬ್ಯಾಕ್ಟೀರಿಯಲ್ ಲೀಫ್ ಬ್ಲೈಟ್(ಡಿ ಎಲ್ ಬಿಭತ್ತಕ್ಕೆ ಬರುವ ಗಂಭೀರ ಕಾಯಿಲೆ ನಿಯಂತ್ರಣಕ್ಕೆ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಿದೆಈ ಜೈವಿಕ ನಿಯಂತ್ರಣ ಏಜೆಂಟ್ ಅನ್ನು ನೇರವಾಗಿ ಎಲೆಗಳ ಮೇಲೆ ಸಿಂಪಡಿಸಬಹುದಾಗಿದೆಸಿ ಡಿ ಎಫ್ ಡಿ 64 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ ಮತ್ತು ಪಿ ಎಚ್ ಡಿ ಹಾಗೂ 6 ಪೋಸ್ಟ್ ಡಾಕ್ಟರ್ ಗಳಿಗೆ ಬೆಂಬಲ ನೀಡಿದೆ.   

·         ಭುನವೇಶ್ವರ ಜೀವ ವಿಜ್ಞಾನ ಕೇಂದ್ರ (ಐಎಲ್ ಸಿಟ್ರಾನ್ ಸ್ಕ್ರಿಪ್ ಟೋಮ್ ಮೂಲಕ ಹಲವು ಟ್ರಾನ್ಸ್ ಕ್ರಿಪ್ಶನ್ ಅಂಶಗಳನ್ನು ಗುರುತಿಸಿಬರದ ಒತ್ತಡಗಳನ್ನು ನಿಭಾಯಿಸುವಂತಹ ಹಲವು ತಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆಐಎಲ್ಎಸ್27 ಬಗೆಯ ಉಪಯುಕ್ತ ಸಸಿಗಳನ್ನು ಅಭಿವೃದ್ಧಿಪಡಿಸಿದ್ದುಇದರಿಂದ ಒತ್ತಡಗಳ ಸಂದರ್ಭದಲ್ಲಿಯೂ ಕೃಷಿ ಉತ್ಪಾದನೆಗೆ ಉತ್ತೇಜನ ಸಿಗಲಿದೆಕುಡಿಯುವ ನೀರಿನಲ್ಲಿನ ಆರ್ಸೆನಿಕ್ ಅಂಶ ಪತ್ತೆಹಚ್ಚಲು ಬಯೋಸೆನ್ಸಾರ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.ಐಎಲ್ಎಸ್ ಎರಡು ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಿದೆಎರಡು ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದೆಎರಡು ಪೇಟೆಂಟ್ ಗಳನ್ನು ಪಡೆದುಕೊಂಡಿದೆ, 55 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ ಮತ್ತು 30 ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ನೆರವು ನೀಡಿದೆ

·         ಬೆಂಗಳೂರಿನ ಸ್ಟೆಮ್ ಸೆಲ್ ವಿಜ್ಞಾನ ಮತ್ತು ರಿಜನರೇಟಿವ್ ಮೆಡಿಸನ್ (ಇನ್ ಸ್ಟೆಮ್ಕೇಂದ್ರದಲ್ಲಿ ರಾಷ್ಟ್ರೀಯ ಕ್ರಯೋ ಇಮ್ ಸೌಕರ್ಯವನ್ನು ಕಾರ್ಯಾಚರಣೆಗೊಳಿಸಲಾಯಿತುಈ ಸೌಕರ್ಯದಲ್ಲಿ 300 ಕೆವಿ ಸಾಮರ್ಥ್ಯದ ಟ್ರಾನ್ಸ್ ಮಿಷನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್(ಟಿಇಎಂಹೊಂದಿದ್ದುಟೋಮೋಗ್ರಫಿಯಲ್ಲಿ ಜೀವಾಣುಗಳು ಹಾಗೂ ಮತ್ತಿತರ ಜೀವಕೋಶಗಳಿಗೆ ಸಂಬಂಧಿಸಿದಂತೆ ಪರಿಹಾರಗಳನ್ನು ಕಂಡುಹಿಡಿಯಬಹುದಾಗಿದೆಇನ್ ಸ್ಟೆಮ್ ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದೆ, 26ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ ಮತ್ತು 60 ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ನೆರವು ನೀಡಿದೆ.

National CryoEM Facility in Institute for Stem Cell Science & Regenerative Medicine (inStem), Bangalore

•         ಇನ್ ಸ್ಟೆಮ್ ನಲ್ಲಿ ಇತ್ತೀಚೆಗೆ ಸೆಂಟರ್ ಫಾರ್ ಕೆಮಿಕಲ್ ಬಯಾಲಜಿ ಮತ್ತು ಥೆರಪೆಟಿಕ್ಸ್ ಸ್ಥಾಪಿಸಲಾಯಿತುಇದು ಮೊದಲ ಹಂತವನ್ನು ಪೂರ್ಣಗೊಳಿಸಿದ್ದುಬ್ರಕ್ಟೋಪಿನ್ ಅನ್ನು ಅಭಿವೃದ್ಧಿಗೊಳಿಸಿದೆ.

•         ದೆಹಲಿಯ ಅಂತಾರಾಷ್ಟ್ರೀಯ ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನ ಕೇಂದ್ರ(ಐಸಿಜಿಇಬಿಬೆಳೆಯ ಮೇಲೆ ಯಾವುದೇ ವಿದೇಶಿ ವಂಶವಾಹಿಯನ್ನು ಪರಿಚಯಿಸದೇ ಗ್ಲೈಫೋಸೇಟ್ ಮತ್ತು ಸಲ್ಫೋನೈಲುರಿಯಾ ಬಳಸಿ ಎರಡು ಬಗೆಯ ಕಾರ್ಯತಂತ್ರವನ್ನು ಅಭಿವೃದ್ಧಿಗೊಳಿಸಿದೆಐಸಿಜಿಇಬಿ ಡೆಂಘಿ ಪತ್ತೆ ತಂತ್ರಜ್ಞಾನವನ್ನು ಭಾರತದ ಕಂಪನಿಯೊಂದಕ್ಕೆ ವರ್ಗಾವಣೆ ಮಾಡಿದೆ ಮತ್ತು ಅದು ಯಶಸ್ವಿಯಾಗಿ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆಅಲ್ಲದೆಐಸಿಜಿಇಬಿ ಎರಡು ಪ್ರಕ್ರಿಯೆಗಳನ್ನು ಅಭಿವೃದ್ಧಿಗೊಳಿಸಿದ್ದುಎರಡು ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದೆಒಂದು ಅಂತಾರಾಷ್ಟ್ರೀಯ ಪೇಟೆಂಟ್ ಪಡೆದುಕೊಂಡಿದೆನೂರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ ಮತ್ತು ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ನೆರವು ನೀಡಿದೆ.

•         ಐಸಿಜಿಇಬಿ ಹೆಚ್ಚಿನ ಇಳುವರಿ ಬರುವ ಭತ್ತದ ತಳಿಯನ್ನು ಅಭಿವೃದ್ಧಿಪಡಿಸಿದೆಅದರಡಿ ನಿಗದಿತ ಕೀಟಬಾಧೆ ಇಲ್ಲದಂತೆ ಮಾಡಬಹುದಾಗಿದ್ದು, ‘ಒಂದು ಪೈರಿನಲ್ಲಿ ಹೆಚ್ಚಿನ ಧಾನ್ಯ’ ಉದ್ದೇಶದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆಅಲ್ಲದೆ ಬಯೋಟಿಕ್ ಒತ್ತಡ ತಡೆಯಬಹುದಾದ ಮತ್ತೊಂದು ಭತ್ತದ ತಳಿಯನ್ನೂ ಸಹ ಅಭಿವೃದ್ಧಿಪಡಿಸಲಾಗಿದೆಇದು ಯಾವುದೇ ಒತ್ತಡದ ಸ್ಥಿತಿಯಲ್ಲಿಯೂ ಕನಿಷ್ಠ ಇಳುವರಿ ಬಂದೇ ಬರುತ್ತದೆ.

•         ಫರಿದಾಬಾದ್ ನ ಪ್ರಾದೇಶಿಕ ಜೈವಿಕ ತಂತ್ರಜ್ಞಾನ ಕೇಂದ್(ಆರ್ ಸಿ ಬಿ ಜೈವಿಕ ತಂತ್ರಜ್ಞಾಣಶಿಕ್ಷಣತರಬೇತಿ ಮತ್ತು ಸಂಶೋಧನೆಗೆ ವೇದಿಕೆಯನ್ನು ಒದಗಿಸಿತುಬಹು ಶಿಸ್ತೀಯ ವ್ಯವಸ್ಥೆಯಲ್ಲಿ ಜೈವಿಕ ಮಾಹಿತಿ ಕ್ಷೇತ್ರದಲ್ಲಿ ಪಿ ಎಚ್ ಡಿ ಕಾರ್ಯಕ್ರಮಗಳನ್ನು ಆರಂಭಿಸಿತು ಅತ್ಯಾಧುನಿಕ ತಂತ್ರಜ್ಞಾನ ಕೇಂದ್ರವನ್ನೂ ಸಹ ಕಾರ್ಯಾಚರಣೆಗೊಳಿಸಿತುಆರ್ ಸಿ ಬಿಫ್ರಾನ್ಸ್ ನ  ಯೂರೋಪಿಯನ್ ಸೈಕೋರ್ಟಾನ್ರ ರೇಡಿಯೇಷನ್  ಫೆಸಿಲಿಟಿ(ಇ ಎಸ್ ಆರ್ ಎಫ್ಜೊತೆ ಸಹಯೋಗ ಸಾಧಿಸಿ, 20 ಸಂಶೋಧಕರಿಗೆ ತರಬೇತಿ ನೀಡಿದೆಆರ್ ಸಿ ಬಿ ಎರಡು ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದ್ದು, 28 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ ಮತ್ತು ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದೆ.

•         ಮೊಹಾಲಿಯ ರಾಷ್ಟ್ರೀಯ ಕೃಷಿ-ಆಹಾರ ಜೈವಿಕ ತಂತ್ರಜ್ಞಾನ ಕೇಂದ್ರ(ಎನ್ ಎ ಬಿ ಐ), ಬಾಳೆಹಣ್ಣಿನಲ್ಲಿ ಕ್ರಿಸ್ಫರ್ ಆಧಾರಿತ ಜಿನೋಮ್ ಎಡಿಟಿಂಗ್ ಯಶಸ್ವಿಯಾಗಿ ಮಾಡಬಹುದು ಎಂಬುದನ್ನು ಸಾಬೀತುಪಡಿಸಿದೆಈ ತಂತ್ರಜ್ಞಾನವನ್ನು ಬಾಳೆಹಣ್ಣಿನಂತೆ  ಭತ್ತಅಕ್ಕಿ ಮತ್ತು ಲೈಥರ್ರಸ್  ಬೆಳೆಗಳಿಗೂ ಅನ್ವಯಿಸಬಹುದಾಗಿದೆನಬಿ ತರಕಾರಿ ಮತ್ತು ಹಣ್ಣುಗಳು ಹಾಳಾಗದಂತೆ ಅದರ ತಾಜಾತನ ಕಾಪಾಡಿಬಳಕೆ ಅವಧಿ ಹೆಚ್ಚಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆಈ ತಂತ್ರಜ್ಞಾನ ಎರಡು ಬಗೆಯ ಪ್ರಯೋಜನಗಳನ್ನು ಒಳಗೊಂಡಿದೆಮೊದಲಿಗೆ ಇದು ಕೃಷಿ ತ್ಯಾಜ್ಯವನ್ನು ಬಳಕೆ ಮಾಡಿಕೊಳ್ಳಲಿದ್ದುಉತ್ಪನ್ನಗಳಿಗೆ ಯಾವುದೇ ಕೀಟಗಳು ತಗುಲದಂತೆ ನೋಡಿಕೊಳ್ಳುತ್ತದೆನಬಿ ಎರಡು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು,ವಾಣಿಜ್ಯ ಬಳಕೆಗೆ ಒಂದನ್ನು ನೀಡಲಾಗಿದ್ದುಮತ್ತೊಂದು ತಂತ್ರಜ್ಞಾನವನ್ನು ವರ್ಗಾವಣೆ ಮಾಡಲಾಗಿದೆಎರಡು ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಲಾಗಿದೆ, 26 ಸಂಶೋಧನಾ ಲೇಖನಗಳನ್ನು ಪ್ರಕಟಿಸಲಾಗಿದೆ ಮತ್ತು ಪಿ ಎಚ್ ಡಿ ಮತ್ತು ಪೋಸ್ಟ್ ಡಾಕ್ಟೊರಲ್ ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ.

ಬೆಳೆ ಕಟಾವಿನ ನಂತರ ಆಗುವ ನಷ್ಟ ತಡೆಗೆ ಎಡಿಬಲ್ ಕೋಟಿಂಗ್ ವಸ್ತು ಬಳಕೆಕೋಟ್ ಮಾಡದಿರುವ ಸೇಬುಗಳ ಚಿತ್ರಣ(ಮತ್ತು ಶೇ..1ರಷ್ಟು ಡಬ್ಲ್ಯೂಪಿ-ಎಸ್ಎಒಪಿ(ಡಬ್ಲ್ಯೂಪಿ:ವೀಟ್ ಸ್ಟ್ರಾ ಪಾಲಿಸಚರೈಡ್ಎಸ್ಎಒಪಿಸ್ಟೆರೇಕ್ ಆಸಿಡ್  ಓಟ್ ಬ್ರಾನ್ ಪಾಲಿಸಚರೈಡ್ ಈಸ್ಟರ್ಸ್ಕೋಟ್ ಮಾಡಿರುವ ಚಿತ್ರಣ . (ಬಿ) 30 ರಿಂದ 45 ದಿನಗಳ ಕಾಲ 22 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಸಂಗ್ರಹಿಸಿಡಬಹುದು

·         ರಾಷ್ಟ್ರೀಯ ಜೀವಕಣ ವಿಜ್ಞಾನ ಕೇಂದ್ರ(ಎನ್ ಸಿ ಸಿ ಎಸ್ಹಳೆಯ ಧಾನ್ಯಗಳಿಂದ ಪಡೆದ ವಯಸ್ಸಾದ ಜೀವಕಣಗಳಿಗೆ ಪುನರುಜ್ಜೀವನ ನೀಡುವ ನವೀನ ಕಾರ್ಯತಂತ್ರವನ್ನು ಗುರುತಿಸಿದೆಇದರಿಂದ ಜೀವಕಣಗಳ ಕಸಿ ಮಾಡುವುದು ಸುಧಾರಣೆಯಾಗಲಿದ್ದುಇದರಿಂದ ಲುಕೇಮಿಯಾಲಮ್ ಫೋಮಾ ಮತ್ತು ಅಪ್ಲಾಸ್ಟಿಕ್ ಅನಿಮಿಯ ಮತ್ತಿತರ ನ್ಯೂನತೆಗಳಿಗೆ ಎಸ್ ಸಿ ಟಿ ಆಧಾರಿತ ಥೆರಪಿಗಳನ್ನು ನೀಡಬಹುದಾಗಿದೆಪ್ರಾಣಿಗಳ ಜೀವಕೋಶ ಸಂಸ್ಕರಣೆಯಲ್ಲಿ ರಾಷ್ಟ್ರೀಯ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿರುವ ಎನ್ ಸಿ ಸಿ ಎಸ್ದೇಶಾದ್ಯಂತ ಸಂಶೋಧಕರಿಗೆ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ 8086 ಜೀವಕೋಶಗಳನ್ನು ಪೂರೈಕೆ ಮಾಡಿದೆಎನ್ ಸಿ ಸಿ ಎಸ್ 51 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ, 8 ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದೆ, 8 ಪೇಟೆಂಟ್ ಗಳನ್ನು ಪಡೆದುಕೊಂಡಿದೆ ಮತ್ತು 26 ಪಿ ಎಚ್ ಡಿ ಗಳಿಗೆ ನೆರವು ನೀಡಿದೆ.

·         ಸೆಂಟರ್ ಆಫ್ ಇನ್ನೋವೇಟಿವ್ ಅಂಡ್ ಅಪ್ಲೈಡ್ ಬಯೋ ಪ್ರೊಸೆಸಿಂಗ್(ಸಿಐಎಬಿಸಿಟ್ರೋನಿಲಾ ಆಯಿಲ್ ನ ರೋಜ್ ಆಕ್ಸೈಡ್ ಮೌಲ್ಯ ವೃದ್ಧಿಸುವ ಪ್ರೋಸೆಸ್ ಅನ್ನು ಅಭಿವೃದ್ಧಿಪಡಿಸಿದೆಗ್ಲೂಕೋಸ್ ನಿಂದ ಫ್ರೂಟ್ರೋಸ್ ಗೆ ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆಸಿಐಎಬಿ ಅಪರೂಪದ ಸಕ್ಕರೆ ಮತ್ತು ಪಾನಿಯ ಆಧಾರಿತ ಎನ್ ಜೈಮ್ ನ ಎರಡು ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಿದೆಇದು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, 7 ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದೆ ಮತ್ತು 21 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ.

·         ಹೈದರಾಬಾದ್ ನ ರಾಷ್ಟ್ರೀಯ ಪ್ರಾಣಿ ಜೈವಿಕ ತಂತ್ರಜ್ಞಾನ ಕೇಂದ್ರ(ಎನ್ಐಎಬಿಸಿರೆನ ಮೂಲಕ ಬ್ರುಸೆಲ್ಲಾ ದ್ವಿಗುಣಗೊಳಿಸುವುದನ್ನು ತಡೆಯಲು ಮತ್ತು ಪ್ರೊಟೀನ್ ಗಳನ್ನು ಗುರುತಿಸಿದೆಎರಡು ರೋಗ ನಿರೋಧಕ ಪ್ರೋಟೀನ್ ಆಂಟಿಜನ್ಸ್(ಬಿಎಂ-5 ಅಂಡ್ ಬಿಎಂ-7) ಬಳಕೆ ಮಾಡಲಾಗುತ್ತಿದ್ದುಅವುಗಳನ್ನು ಎನ್ಐಎಬಿ ಎಲಿಸಾ ಆಧಾರಿತ ಡಯಾಗ್ನೆಸ್ಟಿಕ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆಎನ್ಐಎಬಿ 12 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, 29, ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದೆ.

·         ಮಿಲನ್ ಕಾರ್ಯಕ್ರಮದಡಿ(ಎನ್ಐಎಬಿ ವಿಜ್ಞಾನಿಗಳೊಂದಿಗೆ ಭಾರತೀಯ ಜಾನುವಾರು ಸಾಕುವ ರೈತರು ಹಾಗೂ ಕೃಷಿಕರೊಂದಿಗೆ ಸಭೆಎನ್ಐಎಬಿಈಶಾನ್ಯ ಭಾಗದ ರಾಜ್ಯಗಳು ಸೇರಿ ಒಟ್ಟು 18 ರಾಜ್ಯಗಳಲ್ಲಿ ಎನ್ಐಎಬಿ ವಿಜ್ಞಾನಿಗಳು,ಜ್ವರದ ಸೋಂಕಿನಿಂದಾಗಿಪ್ರೋಸಿನ್ ರಿಪ್ರಾಡೆಕ್ಟೀವ್ ಮತ್ತು ರೆಸಿಪ್ರೋಟರಿ ಸಿಂಡ್ರೋಮ್ ವೈರಸ್(ಪಿ ಆರ್ ಆರ್ ಎಸ್ಹಾಗೂ ಹಂದಿಗಳು ಸಾಯುವುದನ್ನು ತಡೆಯಲು ಮತ್ತು ಮೇಕೆ ಸೇರಿದಂತೆ ಜಾನುವಾರುಗಳು ಎದುರಿಸುವ ಸಮಸ್ಯೆ ಮತ್ತು ಅವುಗಳ ಸಾವು ತಡೆಯುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲಾಗುತ್ತಿದೆ.

·         ದೆಹಲಿಯ ರಾಷ್ಟ್ರೀಯ ಪ್ಲಾಂಟ್ ಜಿನೋಮ್ ಸಂಶೋಧನಾ ಕೇಂದ್ರ ಭತ್ತದ ಪೈರಿನ ಒಳಗಡೆ ಸೇರಿಸಿಬ್ಯಾಕ್ಟೀರಿಯಾ ಎದುರಿಸಬಹುದಾದ ನವೀನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆಅದು ಹಾಳಾಗುವುದನ್ನು ತಡೆಯುವ ಜೊತೆಗೆ ಭತ್ತದ ಬೆಳೆಗೆ ತಗುಲುವ ಕೀಟಾಣುಗಳನ್ನು ನಿಯಂತ್ರಿಸುತ್ತದೆಅಲ್ಲದೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ನವೀನ ಪ್ರೋಟೀನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆಎನ್ ಐ ಪಿ ಜಿ ಆರ್ ಅಧಿಕ ಇಳುವರಿ ನೀಡುವ ಕಡಲೆ ತಳಿ ಅಭಿವೃದ್ಧಿಪಡಿಸಿದ್ದುಇದರಲ್ಲಿ ಮೂಲಕ್ಕಿಂತ ಹೆಚ್ಚಿನ ಪ್ರೊಟೀನ್ ಅಂಶಗಳು ಇರುತ್ತವೆಎನ್ ಐ ಪಿ ಜಿ ಆರ್ ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದೆ. 81 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ, 134 ಪಿ ಎಚ್ ಡಿ ಮತ್ತು 66 ಪೋಸ್ಟ್ ಡಾಕ್ಟೋರಲ್ ವಿದ್ಯಾರ್ಥಿಗಳಿಗೆ ನೆರವು ನೀಡಿದೆ

·          ಇಂಪಾಲದ ಜೈವಿಕ ಸಂಪನ್ಮೂಲ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರ(ಐ ಬಿ ಎಸ್ ಡಿಮಣಿಪುರದ ಗ್ರಾಮೀಣ ಪ್ರದೇಶಗಳಲ್ಲಿ  ಸೀತಾಳೆ ಗಡ್ಡೆ(ಆರ್ಕಿಡ್)ಯ ಬೆಳೆ ಘಟಕಗಳನ್ನು ಸ್ಥಾಪಿಸಿದ್ದುಅವುಗಳ ಮೂಲಕ ನಿರುದ್ಯೋಗಿ ಯುವಕರು ಮತ್ತು ರೈತರಿಗೆ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತಿದೆಇಲ್ಲಿಯವರೆಗೆ ಆರ್ಕಿಡ್ ಜೈವಿಕ ಉದ್ಯಮಶೀಲತಾ ಕಾರ್ಯಕ್ರಮದಡಿ ರೈತರು ಮತ್ತು ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲಾಗಿದೆಐ ಬಿ ಎಸ್ ಡಿ 46 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ.

·         ಈಶಾನ್ಯ ಭಾಗದ ಮೈಕ್ರೋಬಯಲ್ – ಸೂಕ್ಷ್ಮ ಜೀವಿಗಳ ಕೇಂದ್ರವಾಗಿರುವ ಐ ಬಿ ಎಸ್ ಡಿಒಟ್ಟಾರೆ ಇಲ್ಲಿಯವರೆಗೆ 27,466 ಸೂಕ್ಷ್ಮಾಣುಗಳನ್ನು ಸಂಗ್ರಹಿಸಿದೆಇವುಗಳಲ್ಲಿ ಹೊಸ ಜಲಮೂಲಗಳುಸಾಂಪ್ರದಾಯಿಕ ಆಹಾರಗುಹೆನೀರಿನ ಬುಗ್ಗೆಗಳುಕಡಿಮೆ ತಾಪಮಾನದ ಬೆಟ್ಟಗಳುಅರಣ್ಯ ಪ್ರದೇಶಸಸ್ಯ ಪ್ರಬೇಧಗಳು ಸೇರಿವೆಐ ಬಿ ಎಸ್ ಡಿ ಒಟ್ಟಾರೆ 15 ಸಾವಿರ ಸಂಸ್ಕರಣೆಗಳನ್ನು ನಡೆಸಿದೆ.

·         ನವದೆಹಲಿಯ ರಾಷ್ಟ್ರೀಯ ಇಮ್ಯುನಾಲಜಿ ಪ್ರತಿರಕ್ಷಕಾ ಕೇಂದ್ರಹೆಚ್ ಐ ವಿ ಕಣಗಳು ಜೀವಕೋಶದೊಳಗೆ ಹೆಚ್ಚಾಗುವುದನ್ನು ತಡೆಯುವ ಹೊಸ ಜೀವಕಣಗಳನ್ನು ಗುರುತಿಸಿದೆಈ ನವೀನ ಡಿಎನ್ಎ – ಸ್ಟ್ರೆಪ್ಟೋ ಕೋಕಸ್ ಫಿನೋಮೋನಿಯಾ ವೈರಾಣುಗಳ ಉಳಿವಿಗೆ ಅತ್ಯಂತ ಮಹತ್ವದ್ದಾಗಿದೆಪ್ರಸ್ತುತ ಡೆಂಟ್ರಿಕ್ ಜೀವಕಣ ಆಧಾರಿತ ಲಸಿಕೆ ಎಸ್ ಪಿ ಎ ಜಿ-9 ಗೆ ಎರಡನೇ ಹಂತದ ಪ್ರಯೋಗಾಲಯದ ಪರೀಕ್ಷೆಗಳು ನಡೆಯುತ್ತಿವೆಇದು ಕುತ್ತಿಗೆ ( ಸರ್ವೈಕಲ್ )ಕ್ಯಾನ್ಸರ್ ರೋಗಿಗಳಿಗೆ ನೆರವಾಗಲಿದ್ದುಚೆನ್ನೈನ ಕ್ಯಾನ್ಸರ್ ಕೇಂದ್ರದ ಸಹಯೋಗದಲ್ಲಿ ಮಾಡಲಾಗುತ್ತಿದೆಎನ್ ಐ ಐ ಇನ್ಸುಲಿನ್ ಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಉದ್ಯಮಕ್ಕೆ ತಂತ್ರಜ್ಞಾನವನ್ನು ವರ್ಗಾವಣೆ ಮಾಡಿದೆಇದು 10 ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದ್ದು, 94 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ.

·         ಫರಿದಾಬಾದ್ ನ ಟ್ರಾನ್ಸಲಾಷನಲ್ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ(ಟಿ ಎಚ್ ಎಸ್ ಟಿ ಐಬಯೋನೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಎನ್ ಸಿ ಸಿ ಎಸ್ ನೊಂದಿಗೆ ಎಚ್ ಐ ವಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಪದ್ಧತಿಯನ್ನು ಅಭಿವೃದ್ಧಿಪಡಿಸಿದೆಅಲ್ಲದೆ ಕ್ಷಯರೋಗ ತಪಾಸಣೆ ಆಧಾರಿತ ವ್ಯವಸ್ಥೆಯನ್ನೂ ಸಹ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಈ ಟಿ ಎಚ್ ಎಸ್ ಟಿ ಐ ಸಂಸ್ಥೆ 11 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದುಒಂದು ತಂತ್ರಜ್ಞಾನವನ್ನು ವರ್ಗಾವಣೆ ಮಾಡಿದೆ, 11 ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿಒಂದು ಪೇಟೆಂಟ್ ಪಡೆದಿದೆ. 35 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ ಮತ್ತು ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ನೆರವು ನೀಡಿದೆ.

·         ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್(ಎನ್ ಬಿ ಆರ್ ಸಿನ್ಯೂರಾನ್ ಗಳನ್ನೊಳಗೊಂಡ ರಿಸೆಪ್ಟರ್ ಗಳನ್ನು ಗುರುತಿಸಿದೆಇವು ಜೀವಕಣಗಳಿಗೆ ಜಪಾನೀಸ್ ಎನ್ ಸೆಪ್ಟಾಲಿಸ್ ವೈರಸ್ ಪ್ರವೇಶಕ್ಕೆ ನೆರವು ನೀಡುತ್ತದೆ ಮೆದುಳಿಗೆ ಸೋಂಕು ಹರಡುವುದನ್ನು ನಿಯಂತ್ರಿಸುವ ವ್ಯವಸ್ಥೆಯಿದ್ದುಇದು ಮೆದುಳು ಸಂಬಂಧಿ ನ್ಯೂನತೆಗಳ ಜೊತೆ  ಸಂಬಂಧ ಹೊಂದಿದೆಎನ್ ಬಿ ಆರ್ ಸಿ 24 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದುಓರ್ವ ಎಂಎಸ್ಸಿ ಹಾಗೂ ಐವರು ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ನೆರವು ನೀಡಿದೆ.

·         ತಿರುವನಂತಪುರದ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರ(ಆರ್ ಜಿ ಸಿ ಬಿಕುತ್ತಿಗೆ ಕ್ಯಾನ್ಸರ್ ನಿಯಂತ್ರಿಸಲು ಮೂರು ಬಾರಿ ಲಸಿಕೆ ಹಾಕುವ ಬದಲು ಒಂದೇ ಬಾರಿ ಎಚ್ ಪಿ ವಿ ಲಸಿಕೆ ಹಾಕುವುದರ ಬಗ್ಗೆ ಪ್ರಕಟಿಸಿತ್ತುಎರಡನೆಯ ಬಗೆಯ ಮಧುಮೇಹ ಹೊಂದಿರುವ ರೋಗಿಗಳಿಗೆ ಎದುರಾಗುವ ರೋಗಗಳ ತಡೆಯ ಪಾತ್ರದ ಬಗ್ಗೆ ತಿಳಿಸಿದೆಭಾರತೀಯ ಸಾಂಪ್ರದಾಯಿಕ ಆಯುರ್ವೇದ ಪದ್ಧತಿಯಲ್ಲಿ ಇರುವ ಅಮಲಾಕಿರಾಸಾಯನಾ ಪದ್ಧತಿಯಿಂದಾಗಿ ಹೃದಯ ಸಂಬಂಧಿ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸುವ ವಿಧಾನಗಳ ಪ್ರಾತ್ಯಕ್ಷಿಕೆ ನೀಡಲಾಯಿತುಆರ್ ಜಿ ಸಿ ಬಿ ಐದು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆಒಂದು ತಂತ್ರಜ್ಞಾನವನ್ನು ಉದ್ಯಮಕ್ಕೆ ವರ್ಗಾಯಿಸಿದೆ, 8 ಪೇಟೆಂಟ್ ಗಳಿಗೆ ಅರ್ಜಿ ಸಲ್ಲಿಸಿದೆಒಂದು ಪೇಟೆಂಟ್ ಪಡೆದುಕೊಂಡಿದೆ, 89 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದೆ ಮತ್ತು 12 ಪಿ ಎಚ್ ಡಿ ಹಾಗೂ 27 ಪೋಸ್ಟ್ ಡಾಕ್ಟೊರಲ್ ವಿದ್ಯಾರ್ಥಿಗಳಿಗೆ ನೆರವು ನೀಡಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನಭೂ ವಿಜ್ಞಾನಗಳ ಸಚಿವ ಗೌರವಾನ್ವಿತ ಡಾಹರ್ಷವರ್ಧನ್ ಅವರು 2ನೇ ಬಾರಿಗೆ ಆರ್ ಜಿ ಸಿ ಬಿಗೆ ಭೇಟಿ ಕಝಕೋಟಂನ ಕಿನಾರ ಫಿಲಂ ಮತ್ತು ವಿಡಿಯೋ ಪಾರ್ಕ್ ನಲ್ಲಿ ಆರ್ ಜಿ ಸಿ ಬಿಯ  ಜೈವಿಕ ಅನ್ವೇಷಣಾ ಕೇಂದ್ರ(ಬಿಐಸಿ)ಯ ಮೊದಲ ಹಂತ ಲೋಕಾರ್ಪಣೆ

·         ಆರ್ ಜಿ ಸಿ ಬಿ ಯ ಬಯೋನೆಸ್ಟ್ ಸೌಕರ್ಯವನ್ನು ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರ ಮತ್ತು ಕೇರಳ ಸರ್ಕಾರದ ನವೋದ್ಯಮ ಯೋಜನೆಯಡಿ ನಿರ್ವಹಣೆ ಮಾಡಲಾಗುತ್ತಿದ್ದುಸಂಶೋಧನೆ ಮತ್ತು ಅಭಿವೃದ್ಧಿ ಕೈಗೊಳ್ಳಲು ಎಲ್ಲ ಬಗೆಯ ಆಧುನಿಕ ಸೌಕರ್ಯ ಹೊಂದಿರುವ ಇದುಯುವ ಉದ್ದಿಮೆದಾರರಿಗೆ ಸಂಪೋಷಣಾ ಕೇಂದ್ರದ ಸೌಕರ್ಯವನ್ನು ಒದಗಿಸುತ್ತಿದೆಬಯೋನೆಸ್ಟ್ ಹೊಸದಾಗಿ ಅಭಿವೃದ್ಧಿಗೊಳ್ಳುತ್ತಿರುವ ಬಯೋಟೆಕ್ ಮತ್ತು ಫಾರ್ಮಾ ಕಂಪನಿಗಳಿಗೆ ಕಾರ್ಯಸಾಧುವಾದ ನೆರವನ್ನು ಒದಗಿಸಲಿದೆಜೊತೆಗೆ ಹೊಸ ಸ್ಥಳೀಯ ಉದ್ದಿಮೆದಾರರಿಗೆ ನೆರವು ನೀಡಿಅವರಿಗೆ ಆರಂಭಿಕ ಹಂತದಲ್ಲಿ ಉತ್ತೇಜನಕ್ಕೆ ಅಗತ್ಯ ಕನಿಷ್ಠ ಆರ್ಥಿಕ ಸೌಕರ್ಯವನ್ನು ಒದಗಿಸುತ್ತದೆ.

·         ರಾಷ್ಟ್ರೀಯ ಬಯೋಮೆಡಿಕಲ್ ಜಿನೋಮಿಕ್ಸ್ ಕೇಂದ್ರ(ಎನ್ ಐ ಬಿ ಎಂ ಜಿಬಯೋ ಸ್ಟ್ಯಾಟಿಸ್ ಸ್ಟಿಕ್ಸ್ ಮತ್ತು ಬಯೋ ಇನ್ಫರ್ ಮ್ಯಾಟಿಕ್ಸ್ ವಿಷಯಗಳಲ್ಲಿ ಡಾಕ್ಟರಲ್ ಕಾರ್ಯಕ್ರಮವನ್ನು ಜೈವಿಕ ತಂತ್ರಜ್ಞಾನ ಪ್ರಾದೇಶಿಕ ಕೇಂದ್ರ(ಆರ್ ಸಿ ಬಿ)ಮತ್ತು ಗ್ಲಾಕ್ಸೋ ಸ್ಮಿತ್ ಕ್ಲೈನ್ ಪ್ರೈವೇಟ್ ಲಿಮಿಟೆಡ್(ಜಿ ಎಸ್ ಕೆಜೊತೆ ಜಂಟಿಯಾಗಿ ಆರಂಭಿಸಿದೆಎನ್ ಐ ಬಿ ಎಂ ಜಿ ಕೋಲ್ಕತ್ತಾದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾದ ಎಸ್ ಎಸ್ ಕೆ ಎಂ ನಲ್ಲಿ ಘಟಕವನ್ನು ಆರಂಭಿಸುವ ಮೂಲಕ ಜಿನೋಮಿಕ್ ಪ್ರಯೋಗಾಲಯ ಮತ್ತು ಪರೀಕ್ಷೆಗಳನ್ನು ವೈದ್ಯರ ಬಳಿಗೆ ಕೊಂಡೊಯ್ದಿದೆಇದರಿಂದಾಗಿ ನಾನಾ ಬಗೆಯ ನ್ಯೂನತೆಗಳಿಂದ ಬಳಲುತ್ತಿರುವ ಸುಮಾರು 800 ರೋಗಿಗಳಿಗೆ ಅನುಕೂಲವಾಗಿದೆಎನ್ ಐ ಬಿ ಎಂ ಜಿ 20 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದುಇಬ್ಬರು ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ನೆರವು ನೀಡಿದೆ.

·         ಎನ್ ಐ ಬಿ ಎಂ ಜಿ ಅಂತಾರಾಷ್ಟ್ರೀಯ ಕ್ಯಾನ್ಸರ್ ಜಿನೊಮ್ ಕನ್ ಸ್ಟೋರಿಯಮ್ ಭಾರತೀಯ ಯೋಜನೆ ಮೂಲಕ ಬಾಯಿ ಕ್ಯಾನ್ಸರ್ ಗೆ ಕಾರಣವಾಗುವ ಹತ್ತು ಬಗೆಯ ವಂಶವಾಹಿ ಡಿಎನ್ಎ ವ್ಯತ್ಯಾಸಗಳನ್ನು ಗುರುತಿಸಿದೆಕುತ್ತಿಗೆ ಕ್ಯಾನ್ಸರ್ ಗೆ ಕಾರಣವಾಗುವ ಸೋಂಕನ್ನು ಎದುರಿಸುವ ಕಾರ್ಯವಿಧಾನವನ್ನು ಪತ್ತೆಹಚ್ಚಲಾಗಿದೆವಂಶವಾಹಿ ಆಧಾರಿತ ಕಾರ್ಯತಂತ್ರದ ಮೂಲಕ ಸಾಧ್ಯವಾದ ಔಷಧವನ್ನು ನೀಡಲಾಗುವುದು.

·         ಎನ್ ಐ ಬಿ ಎಂ ಜಿ – ಕಲ್ಯಾಣಿ ಸಿಸ್ಟಮ್ಸ್ ಮೆಡಿಕಲ್ ಕ್ಲಸ್ಟರ್ ನಲ್ಲಿ ಆರು ಪ್ರಮುಖ ಸಂಸ್ಥೆಗಳನ್ನು ಒಳಗೊಂಡಿದೆಇವುಗಳಲ್ಲಿ ಕ್ಲಿನಿಕಲ್ ಮತ್ತು ಮೂಲ ವಿಜ್ಞಾನ ಸಂಸ್ಥೆಗಳಿದ್ದುವೈದ್ಯರು ಹಾಗೂ ಮೂಲವಿಜ್ಞಾನಿಗಳು ಮತ್ತು ಜೈವಿಕ ತಂತ್ರಜ್ಞಾನದ ನಡುವೆ  ರೋಗಗಳನ್ನು ಆಳವಾಗಿ ಅಧ್ಯಯನ ನಡೆಸಿಅವುಗಳಿಗೆ ಚಿಕಿತ್ಸೆ ಮತ್ತು ನಿರ್ವಹಣೆಗೆ ಜೈವಿಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ನೆರವಾಗುತ್ತದೆ ಈ ಕ್ಲಸ್ಟರ್ ನಲ್ಲಿ ಎರಡು ಬಗೆಯ ಸಾಮಾನ್ಯ ಕಾಯಿಲೆಗಳಾದ(ಭಾರತೀಯ ಮಹಿಳೆಯರಲ್ಲಿ ಸಾಮಾನ್ಯವಾಗಿ ಕುತ್ತಿಗೆ ಕ್ಯಾನ್ಸರ್ ಮತ್ತು ಒಸಡುಕಪಾಲ ಬಾಯಿ ಕ್ಯಾನ್ಸರ್ ಅತ್ಯಂತ ಪ್ರಮುಖವಾಗಿದೆಇವುಗಳಿಗೆ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಲಾಗಿದ್ದುಅದಕ್ಕಾಗಿ ಕ್ಲಿನಿಕಲ್ ನಿರ್ವಹಣೆ ಮತ್ತು ಜೀವಶಾಸ್ತ್ರ ವ್ಯವಸ್ಥೆಗಳನ್ನು ಪರಿಣಿತರ ನೆರವಿನಿಂದ ಅಭಿವೃದ್ಧಿಪಡಿಸಲಾಗುತ್ತಿದೆಇದರಲ್ಲಿ ಸಾಧಿಸಿರುವ ಒಂದು ಪ್ರಮುಖ ಅಂಶವೆಂದರೆಟಿಪಿ53 ಜೀವಕೋಶ ದ್ವಿಗುಣಗೊಳ್ಳುವುದನ್ನು ತಡೆಯುವ ಪೆಪ್ಟೈಡ್ ವಿನ್ಯಾಸಗೊಳಿಸುವುದು.


 ಈ ವರ್ಷ ಜೈವಿಕ ತಂತ್ರಜ್ಞಾನ ಇಲಾಖೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದುಆಧುನಿಕ ಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನದ ಹಲವು ಸಂಶೋಧನಾ ಕಾರ್ಯಕ್ರಮಗಳನ್ನು ಬೆಂಬಲಿಸಿದೆಜೊತೆಗೆ ಸಂಶೋಧನಾ ವಲಯದಲ್ಲಿ ಸಾಮರ್ಥ್ಯವೃದ್ಧಿ,ಉತ್ತಮ ಮೂಲಸೌಕರ್ಯ ಅಭಿವೃದ್ಧಿಹೊಸ ಸಹಭಾಗಿತ್ವ ಹೊಂದುವುದು ಮತ್ತು ಹಾಲಿ ಇರುವ ಸಹಭಾಗಿತ್ವ ಪೋಷಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಯಶಸ್ವಿಯಾಗಿ ಮಾಡಲಾಗಿದೆ.

***


(Release ID: 1557113) Visitor Counter : 447


Read this release in: Tamil , English