ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ವರ್ಷಾಂತ್ಯದ ಪರಾಮರ್ಶೆ-2018 ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

Posted On: 13 DEC 2018 2:43PM by PIB Bengaluru

ವರ್ಷಾಂತ್ಯದ ಪರಾಮರ್ಶೆ-2018
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರತಿಯೊಬ್ಬ ಕೆಲಸಗಾರರಿಗೂ ಉದ್ಯೋಗ ಭದ್ರತೆವೇತನ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಬದ್ಧವಾಗಿದೆಪ್ರತಿಯೊಬ್ಬ ಕೆಲಸಗಾರನಿಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವಮೂಲಕ ಉದ್ಯೋಗದ ಸಾಧ್ಯತೆಗಳು ಹಾಗೂ ಗುಣಮಟ್ಟವನ್ನು ಹೆಚ್ಚಿಸಿಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸುವಿಕೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತರುವುದರ ಜೊತೆಯಲ್ಲಿ ಸಚಿವಾಲಯವು  ವರ್ಷದಲ್ಲಿ ಪ್ರಮುಖಉಪಕ್ರಮಗಳನ್ನು ಕೈಗೊಂಡಿದೆ.

1.      ಕಾರ್ಮಿಕ ಕಲ್ಯಾಣದಲ್ಲಿ ಪ್ರಮುಖ ಸಾಧನೆಗಳು

ಕಾರ್ಮಿಕ ಸಂಹಿತೆಗಳು (LABOUR CODES): ಎರಡನೇ ರಾಷ್ಟ್ರೀಯ ಕಾರ್ಮಿಕ ಆಯೋಗದ ಶಿಫಾರಸ್ಸುಗಳಿಗನುಗುಣವಾಗಿ ಸಚಿವಾಲಯವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೂಪಿಸಲು ಹೆಜ್ಜೆ ಇಟ್ಟಿದೆ. (1) ವೇತನಗಳು (2) ಕೈಗಾರಿಕಾ ಸಂಬಂಧಗಳು(3) ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮತ್ತು (4) ವೃತ್ತಿ ಸುರಕ್ಷತೆಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳನ್ನು ಕುರಿತ ಅಸ್ತಿತ್ವದಲ್ಲಿರುವ ಕೇಂದ್ರೀಯ ಕಾರ್ಮಿಕ ಕಾನೂನುಗಳ ನಿಬಂಧನೆಗಳನ್ನು ಸಂಯೋಜಿಸುವುದುಸರಳೀಕರಣಗೊಳಿಸುವುದು ಮತ್ತು ತರ್ಕಬದ್ಧಗೊಳಿಸುವುದು.

ವೇತನಗಳ ವಿಧೇಯಕ ಕುರಿತ ಸಂಹಿತೆ: ವೇತನಗಳ ವಿಧೇಯಕ 2017 ಕರಡು ಸಂಹಿತೆ 10.08.2017 ರಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿದೆಸಂಸತ್ತಿನ ಕಾರ್ಮಿಕ ಸ್ಥಾಯಿ ಸಮಿತಿಯು ಇದರ ಪರಿಶೀಲನೆ ನಡೆಸುತ್ತಿದೆಸ್ಥಾಯಿ ಸಮಿತಿಯವರದಿಯನ್ನು ನಿರೀಕ್ಷಿಸಲಾಗುತ್ತಿದೆ.

ಕೈಗಾರಿಕಾ ಸಂಬಂಧಗಳನ್ನು ಕುರಿತ ಸಂಹಿತೆ: ಉದ್ದೇಶಿತಕಾರ್ಮಿಕ ಸಂಹಿತೆ ಕೈಗಾರಿಕಾ ಸಂಬಂಧಗಳ ವಿಧೇಯಕ, 2018ನ್ನು ಸಂಸತ್ತಿನಲ್ಲಿ ಮಂಡಿಸಲು ಸಚಿವ ಸಂಪುಟದ ಕರಡು ಟಿಪ್ಪಣಿ ಹಾಗೂ ಕಾರ್ಮಿಕ ಸಂಹಿತೆ ಕೈಗಾರಿಕಾ ಸಂಬಂಧಗಳವಿಧೇಯಕ, 2018ನ್ನು 08.02.2018ರಲ್ಲಿ ಅಂತರ್ ಸಚಿವಾಲಯ ಸಮಾಲೋಚನೆಗಾಗಿ ಸಲಹೆಸೂಚನೆಗಳನ್ನು ಪಡೆಯಲು ವಿತರಿಸಲಾಯಿತುಸಚಿವಾಲಯಗಳು ಹಾಗೂ ಇಲಾಖೆಗಳಿಂದ ಬಂದ ಸಲಹೆಗಳನ್ನು ಪರಿಶೀಲಿಸಿ ಕೈಗಾರಿಕಾ ಸಂಬಂಧಗಳಕರಡು ಸಂಹಿತೆಯನ್ನು ಸೂಕ್ತವಾಗಿ ಬದಲಾಯಿಸಲಾಯಿತುಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ಇಲಾಖೆಯ ಪರಿಶೀಲನೆಯ ನಂತರ ಸಚಿವ ಸಂಪುಟದ ಟಿಪ್ಪಣಿ ಮತ್ತು ಕೈಗಾರಿಕಾ ಸಂಬಂಧಗಳ ವಿಧೇಯಕದ ಸಂಹಿತೆಯನ್ನು05.11.2018ರಂದು ಸಂಪುಟ ಕಾರ್ಯಾಲಯಕ್ಕೆ ಪರಿಗಣನೆಗಾಗಿ ಕಳುಹಿಸಲಾಗಿದೆ.

ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಸಂಹಿತೆ: ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಸಂಹಿತೆಯ ಬಗ್ಗೆ ಪ್ರಾಥಮಿಕ ಕರಡೊಂದನ್ನು 16.03.2017 ರಂದು ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರಕಟಿಸಿ ಸಾರ್ವಜನಿಕರು ಹಾಗೂ ಪಾಲುದಾರರಿಂದ ಸಲಹೆಗಳನ್ನುಆಹ್ವಾನಿಸಲಾಯಿತುವಿವಿಧ ಪಾಲುದಾರರಿಂದ ಬಂದ ಸಲಹೆಗಳನ್ನು ಪರಿಗಣಿಸಿ ಪರಿಷ್ಕø ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕರಡು ಸಂಹಿತೆ 2018ನ್ನು, 01.03.2018 ರಂದು ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರಕಟಿಸಿ ಸಾರ್ವಜನಿಕರು ಹಾಗೂಪಾಲುದಾರರಿಂದ ಸಲಹೆಸೂಚನೆಗಳನ್ನು ಆಹ್ವಾನಿಸಲಾಯಿತುಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ವಿಧೇಯಕ, 2018 ಸಂಹಿತೆಯ ಬಗ್ಗೆ ತ್ರಿಪಕ್ಷೀಯ ಸಮಾಲೋಚನಾ ಸಭೆಯು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರ (ಸ್ವತಂತ್ರ ನಿರ್ವಹಣೆ)ಅಧ್ಯಕ್ಷತೆಯಲ್ಲಿ 27.11.2018 ರಂದು ನಡೆಯಿತುಕೇಂದ್ರೀಯ ಕಾರ್ಮಿಕ ಸಂಘಟನೆಗಳುಉದ್ಯೋಗದಾತ ಸಂಘಟನೆಗಳು ಮತ್ತು ರಾಜ್ಯ ಕೇಂದ್ರಾಡಳಿತ ಸರ್ಕಾರಗಳು ಸಭೆಯಲ್ಲಿ ಭಾಗವಹಿಸಿದ್ದವುಸಂಪುಟ ಸಭೆಗಾಗಿ ಕರಡು ಟಿಪ್ಪಣಿ ಮತ್ತುಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ವಿಧೇಯಕ 2018 ಸಂಹಿತೆಯನ್ನು ಅಂತರ್ ಸಚಿವಾಲಯ ಸಮಾಲೋಚನೆಗಾಗಿ ವಿತರಿಸಲಾಗಿದೆ.

ವೃತ್ತಿ ಸುರಕ್ಷತೆಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳು: ವೃತ್ತಿ ಸುರಕ್ಷತೆಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳು ಕುರಿತ ಸಂಹಿತೆಯ ಪ್ರಾಥಮಿಕ ಕರಡನ್ನು ಸಿದ್ಧಪಡಿಸಿ ಸಾರ್ವಜನಿಕರು ಹಾಗೂ ಪಾಲುದಾರರಿಂದ ಸಲಹೆಸೂಚನೆಗಳಿಗಾಗಿ23.03.2018ರಂದು ಸಚಿವಾಲಯದ ವೆಬ್ಸೈಟ್ನಲ್ಲಿ ಪ್ರಕಟಿಸಲಾಯಿತು. 22.11.2018 ರಂದು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರ (ಸ್ವತಂತ್ರ ನಿರ್ವಹಣೆಅಧ್ಯಕ್ಷತೆಯಲ್ಲಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳುಉದ್ಯೋಗದಾತಸಂಘಟನೆಗಳು ಮತ್ತು ರಾಜ್ಯ ಕೇಂದ್ರಾಡಳಿತ ಸರ್ಕಾರಗಳೊಂದಿಗೆ ವೃತ್ತಿ ಸುರಕ್ಷತೆಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳು ವಿಧೇಯಕ, 2018 ಕರಡು ಕುರಿತು ತ್ರಿಪಕ್ಷೀಯ ಸಮಾಲೋಚನಾ ಸಭೆ ನಡೆಸಲಾಯಿತುಸಂಪುಟ ಸಭೆಯ ಕರಡು ಟಿಪ್ಪಣಿಮತ್ತು ವೃತ್ತಿ ಸುರಕ್ಷತೆಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳು ವಿಧೇಯಕ, 2018 ಕರಡನ್ನು ಅಂತರ್ ಸಚಿವಾಲಯ ಸಮಾಲೋಚನೆಗಾಗಿ ಇತ್ತೀಚೆಗೆ ವಿತರಿಸಲಾಗಿದೆ.

ಶ್ರಮ್ ಸುವಿಧಾ ಪೋರ್ಟಲ್ಕಾರ್ಮಿಕ ಕಾನೂನುಗಳ ಜಾರಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಮತ್ತು ಸಂಕೀರ್ಣತೆಯನ್ನು ಸರಳಗೊಳಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು “ಶ್ರಮ್ ಸುವಿಧಾ ಪೋರ್ಟಲ್” ಎಂಬಏಕೀಕೃತ ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಿದೆಶ್ರಮ್ ಸುವಿಧಾ ಪೋರ್ಟಲ್ನಲ್ಲಿ ಸಿಗುವ ಸೌಲಭ್ಯಗಳು ಹೀಗಿವೆ:

1. ಅಪಾಯದ ಮಾನದಂಡಗಳನ್ನು ಆಧರಿಸಿ ಗಣಕೀಕೃತ ವ್ಯವಸ್ಥೆಯ ಮೂಲಕ ಪಾರದರ್ಶಕ ಕಾರ್ಮಿಕ ತಪಾಸಣಾ ಯೋಜನೆ ಮತ್ತು ತಪಾಸಣಾ ವರದಿಗಳನ್ನು ಕಾರ್ಮಿಕ ನಿರೀಕ್ಷಕರು 72 ಗಂಟೆಯೊಳಗೆ ಅಪ್ಲೋಡ್ ಮಾಡುವುದುವರದಿಗಳನ್ನುಅಪ್ಲೋಡ್ ಮಾಡುವ ಸಮಯವನ್ನು 05.11.2018 ರಿಂದ 48 ಗಂಟೆಗಳಿಗೆ ಕಡಿತಗೊಳಿಸಲಾಗಿದೆ.

2. ಇಸಿಐಸಿ ಮತ್ತು ಇಪಿಎಫ್ ಗಳಿಗೆ ಸಾಮಾನ್ಯ ನೋಂದಣಿ

3. ಇಸಿಐಸಿ ಮತ್ತು ಇಪಿಎಫ್ ಗಳಿಗೆ ಸಾಮಾನ್ಯ ಇಸಿಆರ್

4. 8 ಕೇಂದ್ರೀಯ ಕಾನೂನುಗಳಿಗೆ ಏಕೈಕ ವಾರ್ಷಿಕ ಆನ್ಲೈನ್ ರಿಟರ್ನ್ ಸಲ್ಲಿಕೆ ಮತ್ತು ಗಣಿ ಕಾಯ್ದೆ, 1952  ಅಡಿಯಲ್ಲಿ 3 ರಿಟರ್ನ್ಗಳು.

5. ಗುತ್ತಿಗೆ ಕಾರ್ಮಿಕ ನಿಯಂತ್ರಣ ಮತ್ತು ನಿಷೇಧ ಕಾಯ್ದೆ, 1970 ಮತ್ತು ಅಂತರ್ ರಾಜ್ಯ ವಲಸೆ ಕೆಲಸಗಾರರ (ಉದ್ಯೋಗ ಮತ್ತು ಸ್ಥಿತಿಗತಿಗಳ ಸೇವಾ ನಿಯಂತ್ರಣಕಾಯ್ದೆ, 1979  ಅಡಿಯಲ್ಲಿ ಆನ್ಲೈನ್ ಲೈಸೆನ್ಸ್ ನೀಡಿಕೆ ಮತ್ತು ಜಾರಿ ಸಂಘಟನೆಗಳಿಗೆಕಾರ್ಮಿಕ ತಪಾಸಣಾ ಯೋಜನೆ.

6. ಗುತ್ತಿಗೆ ಕಾರ್ಮಿಕ ನಿಯಂತ್ರಣ ಮತ್ತು ನಿಷೇಧ ಕಾಯ್ದೆ, 1970 ಅಂತರ್ ರಾಜ್ಯ ವಲಸೆ ಕೆಲಸಗಾರರ (ಉದ್ಯೋಗ ಮತ್ತು ಸ್ಥಿತಿಗತಿಗಳ ಸೇವಾ ನಿಯಂತ್ರಣಕಾಯ್ದೆ, 1979 ಮತ್ತು ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರ (ಉದ್ಯೋಗ ಮತ್ತುಸ್ಥಿತಿಗತಿಗಳ ಸೇವಾ ನಿಯಂತ್ರಣಕಾಯ್ದೆ, 1996  ಮೂರು ಕಾಯ್ದೆಗಳ ಅಡಿಯಲ್ಲಿ ಮುಖ್ಯ ಕಾರ್ಮಿಕ ಆಯುಕ್ತರು (ಕೇಂದ್ರೀಯಇವರಿಂದ ಆನ್ಲೈನ್ ನೋಂದಣಿ.

ಹೆರಿಗೆ ಸೌಲಭ್ಯ (ತಿದ್ದುಪಡಿಕಾಯ್ದೆ, 2017: 2017 ಏಪ್ರಿಲ್ 1 ರಿಂದ ಜಾರಿಯಾಗಿರುವ  ಕಾಯ್ದೆಯಿಂದಾಗಿ ಸಂಬಳ ಸಹಿತ ಹೆರಿಗೆ ರಜೆಯು 12 ವಾರಗಳಿಂದ 26 ವಾರಗಳಿಗೆ ಏರಿಕೆಯಾಗಿದೆ. 18 ಲಕ್ಷ ಮಹಿಳಾ ಉದ್ಯೋಗಿಗಳು ಇದರ ಪ್ರಯೋಜನಪಡೆದಿದ್ದಾರೆಇತ್ತೀಚೆಗೆ ಸರ್ಕಾರವು ಉದ್ಯೋಗದಾತರನ್ನು ಹುರಿದುಂಬಿಸಲು 7 ವಾರಗಳ ಸಂಬಳವನ್ನು ತಾನೇ ಭರಿಸುವ ಪ್ರಸ್ತಾವ ಮಾಡಿದೆ ನೀತಿಯನ್ನು ಸೂಕ್ತ ವೇದಿಕೆಯ ಅನುಮೋದನೆಯ ನಂತರ ಅಂತಿಮಗೊಳಿಸಲಾಗುವುದು.

ಗ್ರಾಚ್ಯುಟಿ  ಪಾವತಿ (ತಿದ್ದುಪಡಿಮಸೂದೆ, 2018 ನ್ನು ಲೋಕಸಭೆಯು 2018 ಮಾರ್ಚ್ 15 ರಂದು ಹಾಗೂ ರಾಜ್ಯಸಭೆಯು 2018 ಮಾರ್ಚ್ 22 ರಂದು ಅಂಗೀಕರಿಸಿ, 2018 ಮಾರ್ಚ್ 29 ರಿಂದ ಜಾರಿಯಾಗಿದೆ ಕಾಯ್ದೆಯಿಂದಾಗಿ ಗ್ರಾಚ್ಯುಟಿಯಗರಿಷ್ಠ ಮೊತ್ತ 10 ಲಕ್ಷ ರೂಪಾಯಿಗಳಿಂದ 20 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.

ಹಡಗು ಮರುಬಳಕೆ ಉದ್ಯಮಕ್ಕಾಗಿ ಒಡಂಬಡಿಕೆ: ಫ್ಯಾಕ್ಟರಿ ಅಡ್ವೈಸ್ ಸರ್ವೀಸ್ ಮತ್ತು ಲೇಬರ್ ಇನ್ಸ್ಟಿಸ್ಟ್ಯೂಟ್ಗಳ ಮಹಾ ನಿರ್ದೇಶಕರು ಮತ್ತು ಗುಜರಾತ್ ಮ್ಯಾರಿಟೈಮ್ ಬೋರ್ಡ್ ನಡುವೆ 11.07.2018 ರಂದು ಅಲಾಂಗ್ನಲ್ಲಿ ಒಡಂಡಿಕೆಗೆ ಸಹಿಮಾಡಲಾಯಿತು ಒಡಂಬಡಿಕೆಯು ಹಡಗು ಮರುಬಳಕೆ ಉದ್ಯಮದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರಲಿದ್ದು ಕೆಲಸಗಾರರು ಮತ್ತು ಮೇಲ್ವಿಚಾರಕರ ಸುರಕ್ಷತೆ ಮತ್ತು ಆರೋಗ್ಯ ಸುಧಾರಣೆಗೆ ನೆರವಾಗಲಿದೆಅಲಾಂಗ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಇವರು ಕೆಲಸ ಮಾಡುತ್ತಿದ್ದಾರೆ.

ಸಾಮಾಜಿಕ ಮತ್ತು ಕಾರ್ಮಿಕ ಕೇತ್ರದಲ್ಲಿ ಆಂತಾರಾಷ್ಟ್ರೀಯ ಸಹಕಾರಕ್ಕಾಗಿ ಒಡಂಬಡಿಕೆ:

ಸಾಮಾಜಿಕ ಮತ್ತು ಕಾರ್ಮಿಕ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ ಬ್ರೆಜಿಲ್ರಷ್ಯಾಭಾರತಚೀನಾದಕ್ಷಿಣ ಆಫ್ರಿಕಾ ನಡುವೆ ತಿಳುವಳಿಕೆಯ ಒಡಂಬಡಿಕೆಗೆ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. 2018 ಆಗಸ್ಟ್ 3 ರಂದು ಬ್ರಿಕ್ಸ್ರಾಷ್ಟ್ರಗಳ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಯಲ್ಲಿ (LEM ಒಡಂಬಡಿಕೆಗೆ ಸಹಿ ಹಾಕಲಾಯಿತು.

 ಒಡಂಬಡಿಕೆಯು ಹೊಸ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಒಟ್ಟಂದದ ಬೆಳವಣಿಗೆ ಹಾಗೂ ಸಮೃದ್ಧಿ ಹಂಚಿಕೆಯ ಸಾಮಾನ್ಯ ಉದ್ದೇಶದೊದಿಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರಸಹಯೋಗ ವ್ಯವಸ್ಥೆಯನ್ನು ಒದಗಿಸುತ್ತದೆಕಾರ್ಮಿಕ ಮತ್ತುಉದ್ಯೋಗಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ಧ್ವನಿಗಳ ಬಗ್ಗೆ ಸದಸ್ಯ ರಾಷ್ಟ್ರಗಳು ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಜಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನೆರವಾಗುತ್ತದೆಕಾರ್ಮಿಕ ಮತ್ತು ಉದ್ಯೋಗ ಕೇತ್ರದಲ್ಲಿ ತರಬೇತಿ ಹಾಗೂಶಿಕ್ಷಣಕ್ಕಾಗಿ ಭಾರತ ಮತ್ತು ಇಟಲಿ ನಡುವೆ ಮತ್ತೊಂದು ತಿಳುವಳಿಕೆಯ ಒಡಂಬಡಿಕೆಗೆ ಸಹಿ ಮಾಡಲಾಗಿದೆ.

ಕೆಲಸಗಾರರ ಶಿಕ್ಷಣ ಯೋಜನೆ: ದತ್ತೋಪಂತ್ ಥೇಂಗಡಿ ಕೆಲಸಗಾರರ ಶಿಕ್ಷಣ ಮತ್ತು ಅಭಿವೃದ್ಧಿ ರಾಷ್ಟ್ರೀಯ ಮಂಡಳಿಯು ಸಂಘಟಿತ ವಲಯದ ಕಾರ್ಮಿಕರಿಗೆ 899 ತರಬೇತಿ ಕಾರ್ಯಕ್ರಮಗಳುಅಸಂಘಟಿತ ವಲಯದ ಕಾರ್ಮಿಕರಿಗೆ 2733 ತರಬೇತಿಕಾರ್ಯಕ್ರಮಗಳು ಮತ್ತು ಎಂಜಿನರೇಗಾ ಸೇರಿದಂತೆ ಗ್ರಾಮೀಣ ಕಾರ್ಮಿಕರಿಗೆ 670 ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಸಾರ್ವಜನಿಕ ಕುಂದುಕೊರತೆಗಳ ಪರಿಹಾರ: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ 01.01.2018 ರಿಂದ 30.11.2018 ರವರೆಗೆ 33,680 ದೂರುಗಳು ಬಂದಿವೆಇವುಗಳಲ್ಲಿ 32,837 ದೂರುಗಳನ್ನು ಕೇಂದ್ರೀಯ ಸಾರ್ವಜನಿಕ ಕುಂದುಕೊರತೆಗಳಪರಿಹಾರ ಮತ್ತು ಮೇಲ್ವಿಚಾರಣೆ ವ್ಯವಸ್ಥೆ (CPGRMS) ಮೂಲಕ ಪರಿಹರಿಸಲಾಗಿದೆ.

ಗಣಿ ಕಾರ್ಮಿಕರ ಸುರಕ್ಷತೆ ಹೆಚ್ಚಳಕ್ಕೆ ಕ್ರಮ:

• 1952  ಗಣಿ ಕಾಯ್ದೆ ಪ್ರಕಾರ ಅನುಮತಿಗಳುರಿಯಾಯ್ತಿಗಳುವಿನಾಯ್ತಿಗಳು ಮತ್ತು ಅನುಮೋದನೆಗಳನ್ನು ಆಫ್ಲೈನ್ ಅರ್ಜಿಗಳನ್ನು ಪಾಲುದಾರರು ಸಲ್ಲಿಸಿದ ಬಳಿಕ ನೀಡಲಾಗುತ್ತಿತ್ತುಡಿಜಿಟಲ್ ಇಂಡಿಯಾ ಉಪಕ್ರಮದಿಂದಾಗಿ “ಅನುಮೋದನೆವ್ಯವಸ್ಥೆ”, “ಅನುಮತಿ/ರಿಯಾಯ್ತಿ/ವಿನಾಯ್ತಿ ವ್ಯವಸ್ಥೆ” ಮತ್ತು “ರಾಷ್ಟ್ರೀಯ ಸುರಕ್ಷಾ ಪ್ರಶಸ್ತಿ(ಗಣಿಗಳು)” ಎಂಬ ಮೂರು ದತ್ತಾಂಶ ಕೋಶ (ಸಾಫ್ಟ್ವೇರ್ ಮಾಡ್ಯೂಲ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. “ಅಪಘಾತಗಳು ಮತ್ತು ಅಂಕಿಅಂಶಗಳ ವ್ಯವಸ್ಥೆ” ಮತ್ತುಖಾತೆಗಳು ಮತ್ತು ಬಜೆಟ್ ವ್ಯವಸ್ಥೆ” ಎಂಬ ಇನ್ನೆರಡು ಸಾಫ್ಟ್ವೇರ್ಗಳನ್ನು ಡಿಜಿಟಲ್ ಡಿಜಿಎಂಎಸ್ ಭಾಗವಾಗಿ ಅಭಿವೃದ್ಧಿಪಡಿಸಲಾಗಿದೆಇವುಗಳು ಪರೀಕ್ಷಾ ಹಂತದಲ್ಲಿವೆ ದತ್ತಾಂಶ ಕೋಶಗಳು ಕೆಲಸ ಕಾರ್ಯಗಳಲ್ಲಿ ಹೆಚ್ಚು ಪಾರದರ್ಶಕತೆ ಮತ್ತುಹೊಣೆಗಾರಿಕೆಯನ್ನು ತರಲಿವೆ.

• ಕಲ್ಲಿದ್ದಲು ಗಣಿಗಳಿಗಾಗಿ ಅಪಾಯ ಆಧಾರಿತ ತಪಾಸಣಾ ವ್ಯವಸ್ಥೆಯ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆಎನ್ಐಸಿ ಅಭಿವೃದ್ಧಿಪಡಿಸಿರುವ ಸಾಫ್ಟ್ವೇರ್ನ್ನು ಶ್ರಮ್ ಸುವಿಧಾ ಪೋರ್ಟಲ್ನಲ್ಲಿ ಅಳವಡಿಸಿಕೊಳ್ಳಲಾಗಿದೆಲೋಹಯುಕ್ತ ಗಣಿಗಳ ಅಪಾಯಆಧರಿಸಿದ ತಪಾಸಣಾ ವ್ಯವಸ್ಥೆಯು ಪ್ರಗತಿಯಲ್ಲಿದ್ದು 2018-19 ಅವಧಿಯಲ್ಲಿ ಅಭಿವೃದ್ಧಿಗೊಳ್ಳಬೇಕುಎಲ್ಲ ವರ್ಗದ ಗಣಿಗಳ ನಿಜವಾದ ಅಪಾಯದ ಶ್ರೇಣಿಗಳಿಗನುಗುಣವಾಗಿ ಶ್ರಮ್ ಸುವಿಧಾ ಪೋರ್ಟಲ್ ಮೂಲಕ ತಪಾಸಣೆಯ ಕಾರ್ಯನಿಯೋಜನೆಗಳನ್ನು ಆನ್ಲೈನ್ನಲ್ಲಿ ನಿಗದಿಗೊಳಿಸಲಾಗುವುದು.

• ಗಣಿ ಸುರಕ್ಷತಾ ನಿರ್ದೆಶನಾಲಯವು 110 ಗಣಿಗಳಲ್ಲಿ ಅಪಾಯದ ಅಂದಾಜು ಅಧ್ಯಯನ ಮತ್ತು ಸುರಕ್ಷತಾ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿದೆ ವ್ಯವಸ್ಥೆಯು ಸುರಕ್ಷತಾ ನಿರ್ವಹಣೆಯಲ್ಲಿ ಹೆಚ್ಚು ಸಕ್ರಿಯ ವ್ಯವಸ್ಥೆಯಾಗಿದೆ.

• ನಾಗಪುರದ ಗಣಿ ಕಾರ್ಮಿಕರ ರಾಷ್ಟ್ರೀಯ ಆರೋಗ್ಯ ಸಂಸ್ಥೆಯೊಂದಿಗೆ ಜಂಟಿ ಯೋಜನೆಯಲ್ಲಿ  ಕಲ್ಲು ಗಣಿಗಳಲ್ಲಿ ಧೂಳು ಸಂಬಂಧಿ ರೋಗ ಮತ್ತು ಸುಸ್ಥಿರ ತಡೆಗಟ್ಟುವ ಯೋಜನೆಯ ಬಹುಕೇಂದ್ರಿತ ಅಧ್ಯಯನ ನಡೆಸಲಾಯಿತುತೆಲಂಗಾಣದ ನಲ್ಗೊಂಡಾಜಿಲ್ಲೆರಾಜಸ್ತಾನದ ಕರೂಲಿಧೋಲ್ಪುರಜೋಧ್ಪುರನಗೌರ್ ಮತ್ತು ಭರತ್ಪುರ ಜಿಲ್ಲೆಗಳುಮಧ್ಯಪ್ರದೇಶದ ವಿದಿಶಾ ಮತ್ತು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕೇತ್ರ ಅಧ್ಯಯನಗಳನ್ನು ನಡೆಸಲಾಯಿತು. 2,539ಕಾರ್ಮಿಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ಇವರಲ್ಲಿ 136 ಮಂದಿ ಸಿಲಿಕೋಸಿಸ್ ಬಾಧಿತರನ್ನು ಗುರುತಿಸಲಾಯಿತು.

• ವಿವಿಧ ರಾಜ್ಯಗಳ ಹಲವಾರು ವಲಯಗಳಲ್ಲಿ ಅಸಂಘಟಿತ ಕ್ಷೇತ್ರದ ಕಲ್ಲು ಗಣಿಗಳಲ್ಲಿ ಕೆಲಸ ಮಾಡುವ 9,863 ಜನರ ಆರೋಗ್ಯ ಸಮೀಕ್ಷೆಯನ್ನು ಆಯಾ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ನಡೆಸಲಾಯಿತುಇವರಲ್ಲಿ 211 ಮಂದಿ ಸಿಲಿಕೋಸಿಸ್ಬಾಧಿತರನ್ನು ಗುರುತಿಸಲಾಯಿತು.

ನಿಶ್ಚಿತ ಅವಧಿ ಉದ್ಯೋಗ:

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕೈಗಾರಿಕಾ ಉದ್ಯೋಗ (ಸ್ಟ್ಯಾಂಡಿಂಗ್ ಆರ್ಡರ್ಸ್ಕಾಯ್ದೆ, 1946ಕ್ಕೆ ‘ನಿಶ್ಚಿತ ಅವಧಿ ಉದ್ಯೋಗಿಗಳು’ ವರ್ಗವನ್ನು ಸೇರಿಸಿ 16.03.2018ರಂದು ಹೊರಡಿಸಿದ ಅಧಿಸೂಚನೆ ಸಂಖ್ಯೆ ಜಿಎಸ್ಆರ್. 235()ಯಲ್ಲಿ ನಿಯಮಗಳನ್ನು ರೂಪಿಸಲಾಯಿತುನಿಶ್ಚಿತ ಅವಧಿ ಉದ್ಯೋಗದ ಉದ್ದೇಶವುಒಂದೆಡೆ ಉದ್ಯೋಗದಾತರು ಜಾಗತೀಕರಣಹೊಸ ಆಚರಣೆಗಳು ಮತ್ತು ವ್ಯವಹಾರದ ಇನ್ನಿತರ ಸವಾಲುಗಳನ್ನು ಎದುರಿಸಲು ಸೂಕ್ತ ಅವಕಾಶವನ್ನುಒದಗಿಸಿದರೆಇನ್ನೊಂದೆಡೆನಿಶ್ಚಿತ ಅವಧಿ ಉದ್ಯೋಗಿಗಳಿಗೆ ಸಾಮಾನ್ಯ ಉದ್ಯೋಗಿಗಳಂತೆ ಕಾನೂನುಬದ್ಧ ಸೌಲಭ್ಯಗಳನ್ನು ಯಥೋಚಿತವಾಗಿ ನೀಡುತ್ತದೆಯಾವುದೇ ಮಧ್ಯವರ್ತಿಗಳಿಲ್ಲದೇ ಉದ್ಯೋಗದಾತರೇ ಗುತ್ತಿಗೆ ರೂಪದಲ್ಲಿ ನಿಶ್ಚಿತ ಅವಧಿಗೆಉದ್ಯೋಗಿಗಳನ್ನು ನೇಮಿಸಿಕೊಳ್ಳುವುದರಿಂದ ಗುತ್ತಿಗೆ ಕಾರ್ಮಿಕರ ಶೋಷಣೆಯೂ ಗಣನೀಯವಾಗಿ ಇಳಿಮುಖವಾಗುತ್ತದೆ.

2. ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆ (EPFO) ಪ್ರಮುಖ ಕ್ರಮಗಳು:

• ಸದಸ್ಯರು ನಾಮ ನಿರ್ದೇಶನ (ನಮೂನೆ 2) ಸಲ್ಲಿಸಲು ಯೂನಿಫೈಡ್ ಪೋರ್ಟಲ್ ಸದಸ್ಯರ ಇಂಟರ್ಫೇಸ್ನಲ್ಲಿ ಆನ್ಲೈನ್ ಕ್ರ್ರಿಯಾತ್ಮಕತೆಯನ್ನು 2018 ಫೆಬ್ರವರಿಯಲ್ಲಿ ಒದಗಿಸಲಾಯಿತುಆನ್ಲೈನ್ ನಾಮ ನಿರ್ದೇಶನದಲ್ಲಿ ಸದಸ್ಯರು ಸಲ್ಲಿಸಿದನಾಮ ನಿರ್ದೇಶನವನ್ನು ದೃಢೀಕರಿಸಲು ಆಧಾರ್ -ಸಹಿಯನ್ನು ಬಳಸಲಾಗುತ್ತದೆಇದರಿಂದಾಗಿ ನಾಮನಿರ್ದೇಶನಕ್ಕೆ ಉದ್ಯೋಗದಾತರ ಒಪ್ಪಿಗೆ ಬೇಕಾಗುವುದಿಲ್ಲ. 10.10.2018 ರವರೆಗೆ 26,885 ಆನ್ಲೈನ್ -ನಾಮ ನಿರ್ದೇಶನಗಳನ್ನುಅನುಮೋದಿಸಲಾಗಿದೆ.

• ಮಾರ್ಚ್ 2018 ರಲ್ಲಿ ಪಿಂಚಣಿದಾರರ ಪೋರ್ಟಲ್ನ್ನು ಆರಂಭಿಸಲಾಯಿತುಇದರಲ್ಲಿ ಎಲ್ಲ ಇಪಿಎಫ್ Pಈಔ ಪಿಂಚಣಿದಾರರುಪಿಂಚಣಿ ಸಂಬಂಧಿತ ಮಾಹಿತಿಯನ್ನು ಪಡೆಯಬಹುದಾಗಿದೆಪಿಂಚಣಿ ಪಾವತಿ ಆದೇಶ ಸಂಖ್ಯೆಪಿಂಚಣಿದಾರರ ಪಾವತಿಆದೇಶ ವಿವರಗಳುಪಿಂಚಣಿದಾರರ ಪಾಸ್ಬುಕ್ ಮಾಹಿತಿ ಮತ್ತು ಪಿಂಚಣಿ ಜಮಾ ಆದ ದಿನಾಂಕ ಮತ್ತು ಜೀವನ್ ಪ್ರಮಾಣ್ ಡಿಜಿಟಲ್ ಜೀವಿತ ಪ್ರಮಾಣಪತ್ರ ಮಾಹಿತಿ ಸೇರಿದಂತೆ ಪಿಂಚಣಿದಾರರ ಜೀವಿತ ಪ್ರಮಾಣ ಪತ್ರ ಸಲ್ಲಿಕೆ ಮೊದಲಾದಸೌಲಭ್ಯಗಳನ್ನು ಇದರಲ್ಲಿ ಪಡೆಯಬಹುದು.

• ಸಂಸ್ಥೆಯ ನೋಂದಣಿಯ ಸಮಯದಲ್ಲಿ ಅದರ ಮಾಲೀಕರು ಡಿಜಿಟಲ್ ಸಹಿ ಇರುವ ಪಾನ್ ಕಾರ್ಡ್ನ್ನು ಅಪ್ಲೋಡ್ ಮಾಡಬೇಕಾಗುತ್ತದೆನೋಂದಣಿ ಸಮಯದಲ್ಲಿ ಪಾನ್ ಕಾರ್ಡ್ ಸ್ಕ್ಯಾನ್ ಪ್ರತಿಯನ್ನು ಸಲ್ಲಿಸುವುದನ್ನು ತೆಗೆದುಹಾಕಲು  ವ್ಯವಸ್ಥೆಮಾಡಲಾಗಿದೆಪಾನ್ ಸಂಖ್ಯೆಯ ವಿವರಗಳನ್ನು ನೇರವಾಗಿ ಆದಾಯ ತೆರಿಗೆ ಇಲಾಖೆಯಿಂದಲೇ ಪರಾಮರ್ಶಿಸಲು ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. 10.10.2018 ರವರೆಗೆ 80,706 ಉದ್ಯೋಗದಾತರು  ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.

• ವ್ಯವಹಾರವನ್ನು ಸುಲಭಗೊಳಿಸಲು ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಮತ್ತು ವಿವಿಧ ನಿಬಂಧನೆ ಕಾಯ್ದೆಯಡಿಯಲ್ಲಿ ತಡವಾಗಿ ಪಾವತಿಗಳ ನಷ್ಟದ ಪಾವತಿಯ ಅಂದಾಜಿನ ಸೆಕ್ಷನ್ 14 ಬಿ ಮತ್ತು ಬಡ್ಡಿಯ 7ಕ್ಯೂ ಸೆಕ್ಷನ್ ಕಾರ್ಯನಿರ್ವಹಣೆಗೆ ಆನ್ಲೈನ್ವ್ಯವಸ್ಥೆ ಆರಂಭಿಸಲಾಗಿದೆಇದಕ್ಕೂ ಮೊದಲು ಸೆಕ್ಷನ್ಗಳ ಅಡಿಯಲ್ಲಿ ಪಾವತಿಗಳಿಗಾಗಿ ಉದ್ಯೋಗದಾತರಿಗೆ ನೋಟೀಸ್ಗಳನ್ನು ನೀಡಲಾಗುತ್ತಿತ್ತುಹೊಸ ಕಾರ್ಯ ವಿಧಾನದಿಂದಾಗಿ ಉದ್ಯೋಗದಾತರು ಕ್ಷೇತ್ರದ ಇಪಿಎಫ್ Pಈಔ ಕಚೇರಿಗಳಿಗೆಭೇಟಿ ನೀಡದೇ ತಡವಾಗಿರುವ ಪಾವತಿಗಳ ಪ್ರಕರಣಗಳನ್ನು ತಕ್ಷಣದ ಪಾವತಿಗಾಗಿ ತಾವೇ ಆಯ್ಕೆ ಮಾಡಿಕೊಂಡರೆ ಪಾವತಿಗಾಗಿ ಬಾಕಿಯ ಚಲನ್ಗಳು ಕಾಣಿಸಿಕೊಳ್ಳುತ್ತವೆ.

• ಉದ್ಯೋಗದಾತರ ಅನುಕೂಲಕ್ಕಾಗಿ ನಮೂನೆ 5  ಮುದ್ರಿತ ಪ್ರತಿಯನ್ನು ಸಲ್ಲಿಸುವುದರ ಬದಲು ಉದ್ಯೋಗದಾತರ ಡಿಜಿಟಲ್ ಸಹಿಯಿರುವ ನಮೂನೆ 5 ಯನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು. 10.10.2018 ರವರೆಗೆ 5,873 ಉದ್ಯೋಗದಾತರು ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.

 ಪ್ರಧಾನಮಂತ್ರಿ ರೋಜ್ಗಾರ್ ಪ್ರೋತ್ಸಾಹನ್ ಯೋಜನಾ  (PMRPY) ಅಡಿಯಲ್ಲಿ ಏಪ್ರಿಲ್ 1, 2018ರಿಂದ ಮೂರು ವರ್ಷಗಳವರೆಗೆ ಹೊಸ ಉದ್ಯೋಗಿಗಳು ಹಾಗೂ ಪ್ರಸ್ತುತ ಇರುವ ಉದ್ಯೋಗಿಗಳಿಗೆ ಮೂರು ವರ್ಷಗಳಲ್ಲಿ ಉಳಿದ ಅವಧಿಯವರೆಗೆಉದ್ಯೋಗದಾತರ ಕೊಡುಗೆಯನ್ನು () ಭಾರತ ಸರ್ಕಾರವು ಸಂಪೂರ್ಣವಾಗಿ ಭರಿಸಲಿದೆಏಪ್ರಿಲ್ 1, 2018ಕ್ಕೂ ಮೊದಲು ಪಿಎಂಆರ್ಪಿವೈ ಅಡಿಯಲ್ಲಿ ಉದ್ಯೋಗದಾತರ ಒಟ್ಟು ಕೊಡುಗೆ (ವೇತನದ ಶೇ.12) ಯಲ್ಲಿ   ಸರ್ಕಾರವು ಇಪಿಎಸ್ ಪಾಲು(ವೇತನದ ಶೇ.8.33)ಮಾತ್ರ ಭರಿಸುತ್ತಿತ್ತು.

• ಉದ್ಯೋಗದಾತರು ವಿಶೇಷವಾಗಿ ಗುತ್ತಿಗೆದಾರರುಉದ್ಯೋಗಿಗೆ ಆತನ ಸಂಪೂರ್ಣ ಕೆಲಸದ ಅವಧಿಗೆ ಪ್ರಾವಿಡೆಂಟ್ ಫಂಡ್ ಕೊಡುಗೆಯನ್ನು ಪಾವತಿಸಲು ಮತ್ತು ಅವಾಸ್ತವಿಕವಾದ ಕಡಿಮೆ ವೇತನ ನೀಡದಿರುವುದನ್ನು ಖಾತ್ರಿಪಡಿಸಿಕೊಳ್ಳಲುವಿಷಯಗಳ ಬಗ್ಗೆ ಮೇಲ್ವಿಚಾರಣೆ ನಡೆಸಲು ವೇತನ ವಿಶ್ಲೇಷಣಾ ವರದಿ ಎಂಬ ಸಾಧನವನ್ನು ಕೇಂದ್ರೀಯ ವಿಶ್ಲೇಷಣೆ ಮತ್ತು ಗುಪ್ತದಳ ಘಟಕದ ಡ್ಯಾಷ್ಬೋರ್ಡ್ನಲ್ಲಿ ಅಳವಡಿಸಲಾಗಿದೆಇದರಿಂದ ಕ್ಷೇತ್ರ ಕಾರ್ಯಕರ್ತರು ತಮ್ಮ ವಿಭಾಗ/ವಲಯಗಳಲ್ಲಿಬರುವ ಸಂಸ್ಥೆಗಳ ವೇತನ ವಿಶ್ಲೇಷಣೆಗಳನ್ನು ಅಗತ್ಯವೆನಿಸಿದಾಗ ನೋಡಿಉದ್ಯೋಗದಾತರು ಮಾಸಿಕ ಸಲ್ಲಿಕೆಯಲ್ಲಿ (ಇಸಿಆರ್ನೀಡಿರುವ ವಿವರಗಳ ಪರಿಶೀಲನೆಯು ಪ್ರತಿ ಉದ್ಯೋಗಿಯ ಬಗ್ಗೆ ನೀಡಿರುವ ವರದಿ ಸರಿಯಾಗಿದೆ ಮತ್ತು ಅಂಗೀಕಾರವಾಗಿದೆಎಂದು ಖಚಿತಪಡಿಸಿಕೊಳ್ಳಬಹುದು.

• ಇಪಿಎಫ್ ಯೋಜನೆ 1952 ಕ್ಕೆ ಪಾವತಿಸುವ ಆಡಳಿತಾತ್ಮಕ ಶುಲ್ಕವನ್ನು ಶೇಕಡಾ 0.65 ರಿಂದ ಶೇಕಡಾ 0.50 ಗೆ ಇಳಿಸಲಾಗಿದೆಕಾರ್ಯ ನಿರ್ವಹಿಸದ ಸಂಸ್ಥೆಗಳಿಗೆ 75 ರೂಪಾಯಿಗಳು ಮತ್ತು ಇತರ ಸಂಸ್ಥೆಗಳಿಗೆ 500 ರೂಪಾಯಿಗಳ ಕನಿಷ್ಠ ಮಾಸಿಕಮೊತ್ತ ನಿಗದಿಪಡಿಸಲಾಗಿದೆ.

• ತಪ್ಪಾದ ಆಧಾರ್ ಸಂಖ್ಯೆಗಳನ್ನು ನೀಡಿದ ಕಾರಣಕ್ಕಾಗಿ ಡಿಜಿಟಲ್ ಜೀವಿತ ಪ್ರಮಾಣಪತ್ರಗಳು (DLCತಿರಸ್ಕøತವಾಗುತ್ತಿರುವುದನ್ನು ಸರಿಪಡಿಸಲು ಕಾರ್ಯವಿಧಾನವೊಂದನ್ನು ಪರಿಚಯಿಸಲಾಗಿದೆ ವಿಧಾನವು ಪಿಂಚಣಿದಾರರ ದೂರುಗಳನ್ನುಕಡಿಮೆಮಾಡಿ ಅವರಿಗೆ ನಿರಾತಂಕವಾದ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

• ತಪ್ಪಾದ ಪ್ರಕ್ರಿಯೆಯ ಅಂತರ್ ಕಚೇರಿ ವರ್ಗಾವಣೆಯ ಕ್ಲೇಮುಗಳನ್ನು ತಿರಸ್ಕರಿಸಿಸರಿಯಾದ ವಿವರಗಳೊಂದಿಗೆ ಕ್ಲೇಮುಗಳನ್ನು ಮತ್ತೆ ಪ್ರಕ್ರಿಯೆಗೊಳಿಸುವ ಹೊಸ ಕಾರ್ಯವಿಧಾನವೊಂದನ್ನು 05.10.2018 ರಿಂದ ಆರಂಭಿಸಲಾಗಿದೆಕ್ಲೇಮುಗಳ ಸುಗಮಪ್ರಕ್ರಿಯೆ ಹಾಗೂ ಪಾವತಿ ಮತ್ತು ಚಂದಾದಾರರಿಗೆ ಉತ್ತಮ ಸೇವೆಗಳ ಖಾತ್ರಿ ಇದರಿಂದ ಸಾಧ್ಯವಾಗುತ್ತದೆ.

• ಇಪಿಎಫ್ ಪ್ರಸ್ತುತ 190 ಉದ್ಯಮಗಳನ್ನು (ಇಪಿಎಫ್ ಕಾಯ್ದೆಯ ಷೆಡ್ಯೂಲ್ 1 ರಲ್ಲಿ ಉಲ್ಲೇಖಿಸಿರುವಂತೆಒಳಗೊಂಡಿದ್ದು, 11.3 ಲಕ್ಷಕ್ಕೂ ಹೆಚ್ಚು ಸಂಸ್ಥೆಗಳ 20 ಕೋಟಿಗೂ ಮೀರಿ ಖಾತೆಗಳಿವೆ.

• ಇಪಿಎಫ್ಒದ 63.2 ಲಕ್ಷ ಪಿಂಚಣಿದಾರರಲ್ಲಿ ಅಕ್ಟೋಬರ್ 29, 2018 ರವರೆಗೆ 55.3 ಲಕ್ಷ ಮಂದಿಯ ಜೀವನ್ ಪ್ರಮಾಣಪತ್ರಗಳನ್ನು ಸ್ವೀಕರಿಸಲಾಗಿದ್ದು ಇವುಗಳಲ್ಲಿ 49.4 ಲಕ್ಷ ಪ್ರಮಾಣಪತ್ರಗಳು ಅನುಮೋದನೆಯಾಗಿವೆ.

• 11.10.2018 ರವರೆಗೆ ಆಧಾರ್ ಆಧರಿತ ಯುಎಎನ್ನಿಂದ ಕ್ರಿಯಾತ್ಮಕಗೊಳಿಸಿದ ಸದಸ್ಯರಿಂದ ಆನ್ಲೈನ್ನಲ್ಲಿ 47,50,315 (ನಮೂನೆ 19, 10ಸಿ ಮತ್ತು 31) ಕ್ಲೇಮುಗಳು ಬಂದಿದ್ದುಇವುಗಳಲ್ಲಿ 34,24,063 ಕ್ಲೇಮುಗಳು ಇತ್ಯರ್ಥವಾಗಿವೆ.

• 10.10.2018 ರವರೆಗೆ 23,75,369 ಸದಸ್ಯರು ತಮ್ಮ ಯುಎಎನ್ನ್ನು ಆಧಾರ್ಗೆ ಜೋಡಿಸುವ ಸ್ಥಿತಿಯನ್ನು ಪತ್ತೆ ಹಚ್ಚಲು ‘ಟ್ರ್ಯಾಕ್ ಯುಎಎನ್ ಫಂಕ್ಷನಾಲಿಟಿಯನ್ನು ಬಳಸಿದ್ದಾರೆ.

• 11.10.2018 ರವರೆಗೆ 2,92,970 ಆಧಾರ್ ಆಧರಿತ -ಸಹಿಗಳನ್ನು ಉದ್ಯೋಗದಾತರು ಬಳಸಿದ್ದಾರೆ-ಸಹಿಯು ಬಳಕೆದಾರ ಸ್ನೇಹಿಯಾದ ಆನ್ಲೈನ್ ಎಲೆಕ್ಟ್ರಾನಿಕ್ ಸಹಿ ಸೇವೆಯಾಗಿದೆಈಗಾಗಲೇ ನೋಂದಣಿಯಾಗಿರುವ ಸಂಸ್ಥೆಯು ಏಕೀಕೃತಪೋರ್ಟಲ್ನಲ್ಲಿ ಆಧಾರ್ ಸಂಖ್ಯೆಯನ್ನು ಒದಗಿಸುವ ಮೂಲಕ -ಸಹಿಗಳನ್ನು ಸೃಷ್ಟಿಸಿದಾಖಲೆಗಳ ಸಹಿಗೆ ಬಳಸಿಕೊಳ್ಳಬಹುದು.

• 11.10.2018 ರವರೆಗೆ ಉಮಂಗ್ ಆಪ್ ಮೂಲಕ 1,52,272 ಕ್ಲೇಮುಗಳನ್ನು ಸಲ್ಲಿಸಲಾಗಿದೆ.

3. ಇಎಸ್ಐಸಿ (ESIC ಪ್ರಮುಖ ಕ್ರಮಗಳು

ಡಿಸ್ಪೆನ್ಸರಿ ಹಾಗೂ ಶಾಖಾ ಕಚೇರಿ (DCBO): ಇಎಸ್ಐಸಿಯು ತನ್ನ ಸೇವೆಗಳ ವಿತರಣಾ ವ್ಯವಸ್ಥೆಯನ್ನು ಬಲಗೊಳಿಸಲುಪ್ರಾಥಮಿಕ ವೈದ್ಯಕೀಯ ಸೇವೆಗಳು ಮತ್ತು ನಗದು ಸೌಲಭ್ಯಗಳ ವಿತರಣೆಯನ್ನು ಒದಗಿಸಲು ದೇಶಾದ್ಯಂತ ಕನಿಷ್ಠ ಜಿಲ್ಲೆಗೊಂದರಂತೆಡಿಸ್ಪೆನ್ಸರಿ ಹಾಗೂ ಶಾಖಾ ಕಚೇರಿಯನ್ನು ಹಂತಹಂತವಾಗಿ ಸ್ಥಾಪಿಸುತ್ತಿದೆ.

ಮಾರ್ಪಡಿಸಿದ ಉದ್ಯೋಗದಾತರ ಬಳಕೆಯ ಡಿಸ್ಪೆನ್ಸರಿ: ಇಸಿಐಸಿಯ ಪ್ರಾಥಮಿಕ ಆರೋಗ್ಯ ಸೇವೆಗಳ ವಿಸ್ತರಣೆಯಲ್ಲಿ ಪಾಲುದಾರರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವ ಉದ್ದೇಶದಿಂದ ಮಾರ್ಪಡಿಸಿದ ಉದ್ಯೋಗದಾತರ ಬಳಕೆಯ ಡಿಸ್ಪೆನ್ಸರಿಗಳನ್ನುಪ್ರಾಯೋಗಿಕವಾಗಿ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆವಿಮಾದಾರರು ವಾಸಿಸುವ ಪ್ರದೇಶಗಳ ಕಡೆಗೆ ಹೆಚ್ಚಿನ ಪಾಶಸ್ತ್ಯ ನೀಡಿ ಡಿಸ್ಪೆನ್ಸರಿ ಸ್ಥಾಪನೆಗೆ ಸೂಕ್ತ ಸ್ಥಳಗಳನ್ನು ಬಾಡಿಗೆಗೆ ಪಡೆಯಲಾಗುವುದುಇಸಿಐಸಿಯು ಪೀಠೋಪಕರಣಗಳು,ಉಪಕರಣಗಳು ಮತ್ತು ಔಷಧಗಳನ್ನು ಒದಗಿಸಲಿದೆಉದ್ಯೋಗದಾತರು ಮಾನವ ಶಕ್ತಿಯನ್ನು ನೇಮಿಸಿ ಡಿಸ್ಪೆನ್ಸರಿಯ ಮೇಲ್ವಿಚಾರಣೆ ನಡೆಸಲಿದ್ದಾರೆ.

ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನಾ: ಭಾರತದಲ್ಲಿ ಬದಲಾಗುತ್ತಿರುವ ಉದ್ಯೋಗದ ಮಾದರಿ ಮತ್ತು ದೀರ್ಘಾವಧಿ ಉದ್ಯೋಗದಿಂದ ಗುತ್ತಿಗೆಯ ರೂಪದ ಕಡಿಮೆ ಅವಧಿ ಉದ್ಯೋಗದ ಪ್ರಸಕ್ತ ಸನ್ನಿವೇಶವನ್ನು ಪರಿಗಣಿಸಿ ಇಎಸ್ ಸಂಸ್ಥೆಯು ‘ಅಟಲ್ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನಾ’ ಎಂಬ ಯೋಜನೆಯನ್ನು ಎಂಪ್ಲಾಯೀಸ್ ಸ್ಟೇಟ್ ಇನ್ಸೂರೆನ್ಸ್ ಕಾಯ್ದೆ-1948 ಅಡಿಯಲ್ಲಿ ಬರುವ ವಿಮಾದಾರರಿಗಾಗಿ ಮಂಜೂರು ಮಾಡಿದೆ ಯೋಜನೆಯು ವಿಮಾದಾರರ ನಿರುದ್ಯೋಗದ ಅವಧಿ ಅಥವಾ ಹೊಸಉದ್ಯೋಗದ ಹುಡುಕಾಟದ ಅವಧಿಯಲ್ಲಿ ಪರಿಹಾರವನ್ನು ನಗದು ರೂಪದಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿಸಲಾಗುವುದು.

ಮಾರ್ಪಡಿಸಿದ ವಿಮಾ ವೈದ್ಯರ ಯೋಜನೆ-2018: ವಿಮಾ ವೈದ್ಯರ ಯೋಜನೆಯನ್ನು ಆಕರ್ಷಕವಾಗಿಸಲುಇಎಸ್ ಸಂಸ್ಥೆಯು ಮಾರ್ಪಡಿಸಿದ ವಿಮಾ ವೈದ್ಯರ ಯೋಜನೆ, 2018ಕ್ಕೆ ತಾತ್ವಿಕ ಅನುಮೋದನೆ ನೀಡಿದೆ ಯೋಜನೆಯು ಅಗತ್ಯಕ್ಕೆ ತಕ್ಕಂತೆಈಗಿರುವ ಪ್ರದೇಶಗಳಲ್ಲಿ ಅಥವಾ ಹೊಸ ಪ್ರದೇಶಗಳಲ್ಲಿ ವಿಸ್ತಾರಗೊಳ್ಳಬಹುದುಇಎಸ್ ತನ್ನ ವೈದ್ಯಕೀಯ ಸೌಲಭ್ಯಗಳು ಇಲ್ಲದ ಅಥವಾ ಹೊಸದಾಗಿ ಅನುಷ್ಠಾನಗೊಳ್ಳುವ ಪ್ರದೇಶಗಳಲ್ಲಿ ಪ್ರಾಥಮಿಕ ವೈದ್ಯಕೀಯ ಸೇವೆಗಳನ್ನು ವಿಮಾ ವೈದ್ಯರೊಂದಿಗೆಸೇರಿ ಒದಗಿಸಲಿದೆಇದಕ್ಕೂ ಮೊದಲು ಸಾಮಾನ್ಯವಾಗಿ ವಿಮಾ ವೈದ್ಯಕೀಯ ಯೋಜನೆಯ ನಿರ್ದೇಶಕರು ನೇಮಿಸಿದ ವಿಮಾ ವೈದ್ಯರಿಗೆ ಒಬ್ಬ ವಿಮೆದಾರನಿಗೆ ಒಂದು ವರ್ಷದ ಸಮಾಲೋಚನೆಪ್ರಯೋಗಾಲಯ ತನಿಖೆ ಮತ್ತು ಔಧಗಳ ವೆಚ್ಚಕ್ಕಾಗಿ 500ರೂಪಾಯಿಗಳನ್ನು ನೀಡಲಾಗುತ್ತಿತ್ತು.

ಮಾರ್ಪಡಿಸಿದ ಯೋಜನೆಯಡಿಯಲ್ಲಿ ವಿಮಾ ವೈದ್ಯರು ಔಷಧಿಗಳ ಪಟ್ಟಿಯಂತೆ (ರಾಷ್ಟ್ರೀಯ ಅಗತ್ಯ ಔಷಧಿಗಳು ಹಾಗೂ ಮೂಲಭೂತ ತನಿಖೆಗಳ ಪಟ್ಟಿಯಲ್ಲಿರುವಂತೆಔಷಧಿಗಳನ್ನು ಆರೋಗ್ಯ ಪಾಸ್ಬುಕ್ನಲ್ಲಿ ತಮ್ಮ ಸಹಿಯೊಂದಿಗೆ ಸೂಚಿಸಿಇದನ್ನುಆಪ್ಗೆ ಅಪ್ಲೋಡ್ ಮಾಡುತ್ತಾರೆ.

ಬಿಇದರೊಂದಿಗೆ ಮೊಬೈಲ್ ಆಪ್ನಲ್ಲಿ ವಿಮಾ ವೈದ್ಯರು 7 ದಿನಗಳವರೆಗೆ ಗರಿಷ್ಠ ಒಂದು ವರ್ಷದಲ್ಲಿ 30 ದಿನಗಳವರೆಗೆ ಅನಾರೋಗ್ಯ ಸವಲತ್ತಿಗಾಗಿ ಶಿಫಾರಸ್ಸು ಮಾಡಬಹುದುಇಂತಹ ಶಿಫಾರಸ್ಸು ವೈದ್ಯಕೀಯ ರೆಫರಿ/ಡಿಸಿಬಿಒ ವೈದ್ಯರ ಪರಿಶೀಲನೆಯನಂತರ ಸವಲತ್ತು ವಿಮಾದಾರನ ಬ್ಯಾಂಕ್ ಖಾತೆಗೆ ಪಾವತಿಯಾಗುತ್ತದೆ.

UMANG- ಚಿಂತೆಯಿಂದ ಮುಕ್ತಿ ” ಮೊಬೈಲ್ ಆಪ್

ವಿಮಾದಾರ ಕೇಂದ್ರಿತ ಮಾಹಿತಿ ಸೇವೆಗಳು ಈಗ UMANG (Unified mobile application for new age governance) ಮೂಲಕ ಆರಂಭಿಸಿರುವ ‘ಇಎಸ್ಐಸಿ- ಚಿಂತೆಯಿಂದ ಮುಕ್ತಿ’ ಮೊಬೈಲ್ ಆಪ್ನಲ್ಲಿ ಲಭ್ಯವಿವೆಇಎಸ್ಐಸಿಯಲ್ಲಿ ತಮ್ಮಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡ ವಿಮಾದಾರರು ಗೂಗಲ್ ಪ್ಲೇ ಸ್ಟೋರ್ನಲ್ಲಿ ಉಚಿತವಾಗಿ ಆಪ್ ಡೌನ್ಲೋಡ್ ಮಾಡಿಕೊಂಡು ಸ್ಮಾರ್ಟ್ಫೋನ್ಟ್ಯಾಬ್ಲೆಟ್ ಮತ್ತು ಡೆಸ್ಕ್ಟಾಪ್ಗಳ ಮೂಲಕವೂ ವಿವಿಧ ಮಾಹಿತಿಗಳನ್ನುಪಡೆದುಕೊಳ್ಳಬಹುದುಸರಳವಾದ ಮೊಬೈಲ್ ಆಧಾರಿತ ಪ್ರಮಾಣೀಕರಣ ವ್ಯವಸ್ಥೆಯಿಂದ ವಿಮಾದಾರರುವೈಯಕ್ತಿಕ ಹಾಗೂ ಕುಟುಂಬದ ವಿವರಗಳುಕೊಡುಗೆಯ ವಿವರಗಳುವಿಮೆ ಮತು ಅರ್ಹತೆಯ ವಿವರಗಳುಅರ್ಹ ಸೌಲಭ್ಯಗಳ ಮಾಹಿತಿಕ್ಲೇಮ್ಸ್ಥಿತಿತನಗೆ ಸಂಬಂಧಿಸಿದ ಡಿಸ್ಪೆನ್ಸರಿ ಮತ್ತು ಶಾಖಾ ಕಚೇರಿ ಹೀಗೆ ಹಲವು ಮಾಹಿತಿಗಳನ್ನು ಪಡೆಯಬಹುದು ಆಪ್ ಮೂಲಕ ಅವರು ಸೇವೆಗಳನ್ನು ಪಡೆಯಬಹುದು ಹಾಗೂ ಪ್ರತಿಕ್ರಿಯೆ ನೀಡಬಹುದುಇದರೊಂದಿಗೆ ಇಎಸ್ ಯೋಜನೆಯ ವಿವಿಧಸೌಲಭ್ಯಗಳನ್ನು ಕುರಿತ ನಾಲೆಡ್ಜ್ ಬ್ಯಾಂಕ್ ಕೂಡ ಇದೆ ಆಪ್ ಹಿಂದಿಇಂಗ್ಲಿಷ್ ಸೇರಿದಂತೆ 13 ವಿವಿಧ ಭಾರತೀಯ ಭಾಷೆಗಳಲ್ಲಿ ದೊರೆಯುವಂತೆ ಮಾಡಲಾಗುವುದು.

ಇಎಸ್ ಯೋಜನೆಯ ಸಾಮಾಜಿಕ ಭದ್ರತಾ ಜಾಲದ ವ್ಯಾಪ್ತಿಯ ವಿಸ್ತರಣೆ (ಇಎಸ್ಐಸಿ2.0 ಅಡಿಯಲ್ಲಿ)

• ಎರಡನೇ ತಲೆಮಾರಿನ ಇಎಸ್ಐಸಿ ಸುಧಾರಣೆಗಳ ಪ್ರಕಾರಇಎಸ್ ಸಂಸ್ಥೆಯು ಇಎಸ್ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲು ತೀರ್ಮಾನಿಸಿದೆಅದರಂತೆಇಎಸ್ ಯೋಜನೆಯು ಈಗಾಗಲೇ ದೇಶದ 325 ಜಿಲ್ಲೆಗಳಲ್ಲಿ ಸಂಪೂರ್ಣವಾಗಿಮತ್ತು 178 ಜಿಲ್ಲೆ ಗಳಲ್ಲಿ ಭಾಗಶಃ ಜಾರಿಯಾಗಿದೆ.

• ಇಎಸ್ ಯೋಜನೆಯ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಇಡೀ ದೇಶಕ್ಕೆ ವಿಸ್ತರಿಸುವ ಅಂಗವಾಗಿ ಅರುಣಾಚಲ ಪ್ರದೇಶ ಮತು ಲಕ್ಷದ್ವೀಪ ಹೊರತುಪಡಿಸಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಸೂಚಿತವಾಗಿದೆಇಎಸ್ಯೋಜನೆ ಈಗ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿದೆ.

• ಇಎಸ್ ಯೋಜನೆಯಡಿ 31.03.2018 ರವರಗೆ ವಿಮಾದಾರರ ಸಂಖ್ಯೆ 3.43 ಕೋಟಿಗೆ ಏರಿಕೆಯಾಗಿದೆಯೋಜನೆಯಡಿ ಬರುವ ಫಲಾನುಭವಿಗಳ ಸಂಖ್ಯೆ 13.32 ಕೋಟಿಗೆ ಏರಿದೆ.

• ವರ್ಷಾಂತ್ಯದ ವೇಳೆಗೆ 10.34 ಲಕ್ಷಕ್ಕೂ ಅಧಿಕ ಕೈಗಾರಿಕೆಗಳು ಹಾಗೂ ಸಂಸ್ಥೆಗಳು ಇದರ ವ್ಯಾಪ್ತಿಯಲ್ಲಿವೆ.

4. ಉದ್ಯೋಗ ಸೃಷ್ಟಿಗೆ ಕೈಗೊಳ್ಳಲಾದ ಮಹತ್ವದ ಕ್ರಮಗಳು:

1. ರಾಷ್ಟ್ರೀಯ ವೃತ್ತಿ ಸೇವೆ (ಎನ್ಸಿಎಸ್): ರಾಷ್ಟ್ರೀಯ ವೃತ್ತಿ ಸೇವೆ ಯೋಜನೆಯು ಉದ್ಯೋಗದಾತರುತರಬೇತುದಾರರು ಮತ್ತು ನಿರುದ್ಯೋಗಿಗಳನ್ನು ಒಂದೇ ವೇದಿಕೆಯಲ್ಲಿ ತರುತ್ತದೆ. 30.11.2018 ರವರೆಗೆ 98,350 ಸಕ್ರಿಯ ಉದ್ಯೋಗಾಕಾಂಕ್ಷಿಗಳುಮತ್ತು 9,822 ಸಕ್ರಿಯ ಉದ್ಯೋಗದಾತರು ಪೋರ್ಟಲ್ನಲ್ಲಿದ್ದಾರೆಉದ್ಯೋಗಾಕಾಂಕ್ಷಿಗಳು ಅಂಚೆ ಕಚೇರಿಗಳ ಮೂಲಕ ನೋಂದಣಿ ಮಾಡಿಕೊಳ್ಳಲು ಅನುವಾಗುವಂತೆ ಎನ್ಸಿಎಸ್ಅಂಚೆ ಇಲಾಖೆಯೊಂದಿಗೆ ಕೈ ಜೋಡಿಸಿದೆಯುವಜನರಿಗೆ ಲಭ್ಯವಿರುವಉದ್ಯೋಗಾವಕಾಶಗಳನ್ನು ವೃದ್ಧಿಸಲು ಪ್ರಮುಖ ಪೋರ್ಟಲ್ಗಳುಪ್ರಖ್ಯಾತ ಉದ್ಯೋಗ ಸಂಘಟನೆಗಳು ಮತ್ತು ಸಂಸ್ಥೆಗಳೊಂದಿಗೆ ತಿಳುವಳಿಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆಖಾಲಿ ಯಿರುವ ಸರ್ಕಾರಿ ಉದ್ಯೋಗಗಳನ್ನು ಎನ್ಸಿಎಸ್ ಪೋರ್ಟಲ್ನಲ್ಲಿಪ್ರಕಟಿಸುವುದನ್ನು ಇತ್ತೀಚೆಗೆ ಭಾರತ ಸರ್ಕಾರ ಕಡ್ಡಾಯ ಮಾಡಿದೆ.

ಎನ್ಸಿಎಸ್ಉದ್ಯೋಗ ಸಂಬಂಧಿತ ಹಲವಾರು ಸೇವೆಗಳಾದ ಉದ್ಯೋಗ ಹೊಂದಾಣಿಕೆವೃತ್ತಿ ಸಮಾಲೋಚನೆಕೌಶಲ್ಯಾಭಿವೃದ್ಧಿಅಪ್ರೆಂಟಿಸ್ಶಿಪ್ಇಂಟರ್ನ್ಶಿಪ್ಗಳ ಬಗ್ಗೆ ಮಾಹಿತಿ ಮೊದಲಾದವುಗಳನ್ನು ಒದಗಿಸುತ್ತದೆಎನ್ಸಿಎಸ್ , 52ವಲಯಗಳಲ್ಲಿ 3600ಕ್ಕೂ ಹೆಚ್ಚಿನ ವೃತ್ತಿಗಳ ಬಗ್ಗೆ ಶ್ರೀಮಂತವಾದ ಸಂಗ್ರಹವು ದೊರೆಯುವಂತೆ ಮಾಡಿದೆಎನ್ಸಿಎಸ್ ಪೋರ್ಟಲ್ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳು ಮುಖಾಮುಖಿಯಾಗುವ ಉದ್ಯೋಗ ಮೇಳಗಳನ್ನು ನಡೆಸಲೂಸಹಕರಿಸುತ್ತದೆ.

2. ಮಾದರಿ ವೃತ್ತಿ ಕೇಂದ್ರಗಳು: ರಾಜ್ಯಗಳು ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ 107 ಮಾದರಿ ವೃತ್ತಿ ಕೇಂದ್ರಗಳನ್ನು ಸ್ಥಾಪಿಸಿಕಾರ್ಯಾರಂಭ ಮಾಡಲಾಗಿದೆ ಕೇಂದ್ರಗಳು ವಿವಿಧ ಸೇವೆಗಳನ್ನು ಒದಗಿಸಲು ಬೇಕಾದ ಅಗತ್ಯಮೂಲಸೌಕರ್ಯಗಳನ್ನು ಹೊಂದಿದ್ದುರಾಜ್ಯಗಳು ಇಂತಹ ಕೇಂದ್ರಗಳನ್ನು ಇತರ ಸ್ಥಳಗಳಲ್ಲಿ ಪುನರಾವರ್ತಿಬಹುದುಇದರೊಂದಿಗೆ ಎಲ್ಲ 1.5 ಲಕ್ಷಕ್ಕು ಹೆಚ್ಚಿನ ಸಾಮಾನ್ಯ ಸೇವಾ ಕೇಂದ್ರಗಳು ಎನ್ಸಿಎಸ್ನ್ನು ದೂರದ ಸ್ಥಳಗಳಿಗೂ ತಲುಪುವಂತೆ ಮಾಡುವಕಾರ್ಯತಂತ್ರದ ಪಾಲುದಾರಾಗಿವೆ.

3. ತ್ರೈಮಾಸಿಕ ಉದ್ಯೋಗ ಸಮೀಕ್ಷೆಗಳು (ನೂತನ ಸರಣಿ):

• ಕಾರ್ಮಿಕ ಬ್ಯೂರೋ ತ್ರೈಮಾಸಿಕ ಉದ್ಯೋಗ ಸಮೀಕ್ಷೆಗಳನ್ನು (ನೂತನ ಸರಣಿಆರಂಭಿಸಿದೆಹಿಂದಿನ ತ್ರೈಮಾಸಿಕಗಳಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ  ಕೃಷಿಯೇತರ ಕೈಗಾರಿಕಾ ಆರ್ಥಿಕತೆಯ 8 ಪ್ರಮುಖವಲಯಗಳಾದ ಉತ್ಪಾದನೆನಿರ್ಮಾಣವ್ಯಾಪಾರಸಾರಿಗೆಶಿಕ್ಷಣಆರೋಗ್ಯವಸತಿ ಹಾಗೂ ಉಪಾಹಾರ ಗೃಹಗಳು ಮತ್ತು ಐಟಿ/ಬಿಪಿಒಗಳಲ್ಲಿ ಉದ್ಯೋಗದ ಸ್ಥಿತಿಗತಿಗಳಲ್ಲಿ ಆದ ಬದಲಾವಣೆಯನ್ನು ಅಳೆಯುವುದು ಇದರ ಮುಖ್ಯ ಉದ್ದೇಶ.

• ಇದುವರೆಗೆ ತ್ರೈಮಾಸಿಕ ಉದ್ಯೋಗ ಸಮೀಕ್ಷೆಗೆ ಸಂಬಂಧಿಸಿದಂತೆ ಏಳು ವರದಿಗಳನ್ನು ಬಿಡುಗಡೆ ಮಾಡಲಾಗಿದೆ.

4.         ವೃತ್ತಿ ವೇತನ ಸಮೀಕ್ಷೆ (ಒಡಬ್ಲೂಎಸ್):

•          ಪ್ಲಾಂಟೇಷನ್ಗಣಿಗಾರಿಕೆಉತ್ಪಾದನೆ ಮತ್ತು ಸೇವಾ ವಲಯದ ಕೈಗಾರಿಕೆಗಳಲ್ಲಿನ ವಿಭಿನ್ನ ವೃತ್ತಿಗಳ ವೇತನ ಗಳಿಕೆಯ ಬಗ್ಗೆ ಅಂತರ್ ಉದ್ಯಮ ಮತ್ತು ಆಂತರಿಕ ಉದ್ಯಮಗಳಲ್ಲಿನ ವೈಜ್ಞಾನಿಕ ಅಧ್ಯಯನಕ್ಕಾಗಿ ಕಾರ್ಮಿಕ ಬ್ಯೂರೋ ಆಗಿಂದಾಗ್ಗೆವೃತ್ತಿ ವೇತನ ಸಮೀಕ್ಷೆಗಳನ್ನು ನಡೆಸುತ್ತಿದೆ.

•          ವೃತ್ತಿ ವೇತನ ಸಮೀಕ್ಷೆಯ ಅಡಿಯಲ್ಲಿ 56 ಉದ್ಯಮಗಳನ್ನು ಒಳಗೊಂಡ 7 ನೇ ಸುತ್ತಿನ ಕ್ಷೇತ್ರ ಕಾರ್ಯ ಮುಕ್ತಾಯವಾಗಿದೆಇದುವರೆಗೆ ಗಣಿಗಾರಿಕೆಪ್ಲಾಂಟೇಷನ್ ವಲಯದ ಉದ್ಯಮಗಳುಐದು ಜವಳಿ ಉದ್ಯಮಗಳು ಮತ್ತು ಜವಳಿ ಗಾರ್ಮೆಂಟ್ಸ್ಉದ್ಯಮಗಳ ಕುರಿತ 7 ನೇ ಸುತ್ತಿನ ವೃತ್ತಿ ವೇತನ ಸಮೀಕ್ಷೆಯ 4 ವರದಿಗಳು ಬಿಡುಗಡೆಯಾಗಿವೆ.

 

5.         ಪ್ರದೇಶ ಚೌಕಟ್ಟು ಸಮೀಕ್ಷೆ:

•          ತ್ರೈಮಾಸಿಕ ಉದ್ಯೋಗ ಸಮೀಕ್ಷೆಯ ಅವಧಿಫಲಿತಾಂಶಗಳು ಮತ್ತು ವ್ಯಾಪ್ತಿಯ ಕಾರಣಗಳಿದಾಗಿ ಇದರ ಮಹತ್ವವನ್ನರಿತ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವುಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 10ಕ್ಕಿಂತ ಕಡಿಮೆಕೆಲಸಗಾರರನ್ನು ಹೊಂದಿರುವ ಉದ್ಯಮಗಳ ಪ್ರದೇಶ ಚೌಕಟ್ಟು ಸಮೀಕೆ ನಡೆಸಲು ತೀರ್ಮಾನಿಸಿದೆಸಮೀಕ್ಷೆಯ ಅಂಶಗಳು ಆರ್ಥಿಕತೆಯ ಕೃಷಿಯೇತರ ವಲಯದ ಉದ್ಯೋಗಗಳ ಗತಿಯನ್ನು ಪ್ರತಿಫಲಿಸುತ್ತವೆ.

•          ಪ್ರದೇಶ ಚೌಕಟ್ಟು ಸಮೀಕ್ಷೆ ನಡೆಸಲು ಪ್ರಾಥಮಿಕ ಕಾರ್ಯಗಳು ಮುಗಿದಿವೆಒಡಿಸ್ಸಾದಲ್ಲಿ ಪ್ರಾಯೋಗಿಕ ಸಮೀಕ್ಷೆಯು ಮುಗಿದಿದ್ದುಹರ್ಯಾಣ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾಯೋಗಿಕ ಸಮೀಕ್ಷೆ ನಡೆಯುತ್ತಿದೆ.

6.         ಪ್ರದಾನಮಂತ್ರಿ ಮುದ್ರಾ ಯೋಜನೆ ಕುರಿತ ಸಮೀಕ್ಷೆ:

•          ಪ್ರಧಾನಮಂತ್ರಿ ಮುದ್ರಾ ಯೋಜನೆ (PMMYಅಡಿಯಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳನ್ನು ಅಂದಾಜು ಮಾಡಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸಮೀಕ್ಷೆ ನಡೆಸಲು ಕಾರ್ಮಿಕ ಬ್ಯೂರೋಗೆ ವಹಿಸಿದೆ.

•          ಪಿಎಂಎಂವೈ ಸಮೀಕ್ಷೆಯ ಬಗೆಗಿನ ತಾಂತ್ರಿಕ ವಿವರಗಳನ್ನು ಅಂತಿಮಗೊಳಿಸಿದ ನಂತರಸಮೀಕ್ಷೆಯ ಪ್ರಾಥಮಿಕ ಕೆಲಸಗಳು ಮುಕ್ತಾಯವಾಗಿವೆ ಮತ್ತು 2018 ಏಪ್ರಿಲ್ನಲ್ಲಿ ಕೇತ್ರ ಕಾರ್ಯ ಆರಂಭಿಸಲಾಯಿತು. 2018 ನವೆಂಬರ್ 30 ರಂದುಪಿಎಂಎಂವೈ ಸಮೀಕ್ಷೆಯ ಕ್ಷೇತ್ರ ಕಾರ್ಯ ಮುಗಿದಿದ್ದುದತ್ತಾಂಶಗಳನ್ನು ಜೋಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

 


(Release ID: 1556976) Visitor Counter : 214


Read this release in: Tamil , English , Bengali