ಬಾಹ್ಯಾಕಾಶ ವಿಭಾಗ

ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಗಳಿಗೆ ಬಳಕೆ ಮಾಡುವ ಕುರಿತಂತೆ ಭಾರತ ಮತ್ತು ಮೊರಾಕೊ ನಡುವಿನ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನ 

Posted On: 06 DEC 2018 9:27PM by PIB Bengaluru

ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಗಳಿಗೆ ಬಳಕೆ ಮಾಡುವ ಕುರಿತಂತೆ ಭಾರತ ಮತ್ತು ಮೊರಾಕೊ ನಡುವಿನ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಗಳಿಗೆ ಬಳಕೆ ಮಾಡುವ ಕುರಿತಂತೆ ಭಾರತ ಮತ್ತು ಮೊರಾಕೊ ನಡುವಿನ ಸಹಕಾರ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಈ ಒಪ್ಪಂದಕ್ಕೆ 2018ರ ಸೆಪ್ಟೆಂಬರ್ 25ರಂದು ನವದೆಹಲಿಯಲ್ಲಿ ಸಹಿ ಹಾಕಲಾಗಿತ್ತು.

 

 

ಪ್ರಮುಖಾಂಶ:-

•       ಈ ಒಪ್ಪಂದದಿಂದಾಗಿ ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ಭೂಮಿಯ ದೂರಸಂವೇದಿ ತಂತ್ರಜ್ಞಾನ ಮತ್ತು ಅದರ ಬಳಕೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ವಿಷಯಗಳಲ್ಲಿ ಸಹಕಾರ ಸಂಬಂಧ ಹೊಂದಲು ಸಾಧ್ಯವಾಗಲಿದೆ. ಜೊತೆಗೆ ಸಂವಹನ ಉಪಗ್ರಹ ಆಧಾರಿತ ನೌಕಾ ಸಂಚಾರ, ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಅನ್ವೇಷಣೆ, ಗಗನನೌಕೆಗಳ ಬಳಕೆ, ಬಾಹ್ಯಾಕಾಶ ವ್ಯವಸ್ಥೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಅನ್ವಯಿಸುವ ವಿಷಯಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.

•       ಈ ಒಡಂಬಡಿಕೆಯಿಂದಾಗಿ ಜಂಟಿ ಕಾರ್ಯಕಾರಿ ಸಮಿತಿ ರಚಿಸಲಾಗುವುದು, ಅದಕ್ಕೆ ಡಿಒಎಸ್ – ಬಾಹ್ಯಾಕಾಶ ಇಲಾಖೆ, ಇಸ್ರೋ ಮತ್ತು ರಾಯಲ್ ಸೆಂಟರ್ ಫಾರ್ ರಿಮೋಟ್ ಫೆನ್ಸಿಂಗ್(ಪಿ ಆರ್ ಟಿ ಎಸ್) ಮತ್ತು ರಾಯಲ್ ಸೆಂಟರ್ ಫಾರ್ ಸ್ಪೇಸ್ ರಿಸರ್ಚ್ ಅಂಡ್ ಸ್ಟಡೀಸ್ – ಬಾಹ್ಯಾಕಾಶ ಸಂಶೋಧನೆ ಮತ್ತು ಅಧ್ಯಯನಗಳ ಕೇಂದ್ರ(ಸಿ ಆರ್ ಇ ಆರ್ ಎಸ್)ಗಳಿಂದ ಸದಸ್ಯರುಗಳನ್ನು ಸೇರಿಸಿಕೊಳ್ಳಲಾಗುವುದು. ಸಮಿತಿ, ಒಪ್ಪಂದದ ಅನುಷ್ಠಾನದ ವಿಧಾನಗಳು ಮತ್ತು ಕಾಲಮಿತಿ ಸೇರಿದಂತೆ ಸಮಗ್ರ ಕ್ರಿಯಾಯೋಜನೆ ರೂಪಿಸಲಿದೆ.

 

 

ಹಿನ್ನೆಲೆ:

        ಮೊರಾಕೊ 1990ರ ಆರಂಭದಲ್ಲಿ ಬಾಹ್ಯಾಕಾಶ ವಲಯದಲ್ಲಿ ಭಾರತದೊಂದಿಗೆ ಸಹಕಾರ ಸಾಧಿಸುವ ಆಸಕ್ತಿ ವ್ಯಕ್ತಪಡಿಸಿತ್ತು. ಇಸ್ರೋ ಮತ್ತು ಸೆಂಟರ್ ರಾಯಲ್ ಡೇ ಟೆಲಿ ಡಿಟೆಕ್ಷನ್ ಸ್ಪೇಷಿಯಲ್(ಸಿ ಆರ್ ಟಿ ಎಸ್) ನಡುವೆ ಒಪ್ಪಂದದ ಕರಡು ವಿನಿಮಯ ಮಾಡಿಕೊಳ್ಳಲಾಗಿತ್ತು ಮತ್ತು 1998ರಲ್ಲಿ ಬಾಹ್ಯಾಕಾಶ ಸಹಕಾರ ಕುರಿತಂತೆ ಉಭಯ ದೇಶಗಳು ಪರಸ್ಪರ ಒಪ್ಪಿ, ತಿಳುವಳಿಕೆ ಪತ್ರವನ್ನು ಆಖೈರುಗೊಳಿಸಿದ್ದವು. ಆದರೆ ಮೊರಾಕೊ ರಾಷ್ಟ್ರದ ಕಡೆಯಿಂದ ಬರಬೇಕಾಗಿದ್ದ ಗಣ್ಯರ ಭಾರತ ಭೇಟಿ ರದ್ದಾಗಿದ್ದರಿಂದ ಆ ಒಪ್ಪಂದ ಕೈಗೂಡಲಿಲ್ಲ. ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒಪ್ಪಂದಕ್ಕೆ ಸಹಿ ಹಾಕಿಸಲು ನಡೆಸಿದ ಪ್ರಯತ್ನಗಳು ಸಹ ಫಲ ನೀಡಲಿಲ್ಲ.

        ಮೊರಾಕೊದಲ್ಲಿನ ಭಾರತೀಯ ರಾಯಭಾರಿ ಪರಿಷ್ಕೃತ ಒಪ್ಪಂದದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಮಾಲೋಚನೆ ನಡೆಸಿ, ಅದನ್ನು ಇಸ್ರೋ ಜೊತೆ ಹಂಚಿಕೊಂಡಿದ್ದರು. ಅಂತರ ಸರ್ಕಾರದ ಒಪ್ಪಂದದ ಈ ಕರಡಿಗೆ ಇಸ್ರೋ ಒಪ್ಪಿಗೆ ಸೂಚಿಸಿ, ಮೊರಾಕೊದ ರಕ್ಷಣಾ ಆಡಳಿತ ಉಸ್ತುವಾರಿ ಹೊತ್ತಿರುವ ಸಚಿವರೊಂದಿಗೆ 2018ರ ಸೆಪ್ಟೆಂಬರ್ 25ರಂದು ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವಿರುವುದಾಗಿ ಹೇಳಿತ್ತು.

 

 



(Release ID: 1555148) Visitor Counter : 69


Read this release in: English , Tamil